-
ನಿಮ್ಮ ಕುಟುಂಬವನ್ನು ನಾಶಕಾರಕ ಪ್ರಭಾವಗಳಿಂದ ಸಂರಕ್ಷಿಸಿರಿಕುಟುಂಬ ಸಂತೋಷದ ರಹಸ್ಯ
-
-
19. ಮನೋರಂಜನೆಯು ಕುಟುಂಬಗಳಿಗೆ ಪಾಪಭರಿತವಾಗಿಲ್ಲ ಎಂಬುದನ್ನು ಯಾವ ಬೈಬಲ್ ಉದಾಹರಣೆಗಳು ತೋರಿಸುತ್ತವೆ?
19 ಮನೋರಂಜನೆಯನ್ನು ಬೈಬಲು ಖಂಡಿಸುತ್ತದೊ? ನಿಶ್ಚಯವಾಗಿಯೂ ಇಲ್ಲ! “ನಗುವ ಸಮಯ . . . ಕುಣಿದಾಡುವ ಸಮಯ”ಗಳಿವೆಯೆಂದು ಬೈಬಲು ಹೇಳುತ್ತದೆ.b (ಪ್ರಸಂಗಿ 3:4) ಪುರಾತನ ಇಸ್ರಾಯೇಲಿನಲ್ಲಿ ದೇವರ ಜನರು ಸಂಗೀತ ಮತ್ತು ಕುಣಿತದಲ್ಲಿ, ಆಟ ಮತ್ತು ಒಗಟುಗಳಲ್ಲಿ ಸಂತೋಷಿಸಿದರು. ಯೇಸು ಕ್ರಿಸ್ತನು ಒಂದು ದೊಡ್ಡ ವಿವಾಹದ ಔತಣದಲ್ಲಿ ಮತ್ತು ಮತ್ತಾಯ ಲೇವಿಯು ಅವನಿಗಾಗಿ ಮಾಡಿಸಿದ “ಒಂದು ದೊಡ್ಡ ಔತಣ”ದಲ್ಲಿ ಹಾಜರಿದ್ದನು. (ಲೂಕ 5:29; ಯೋಹಾನ 2:1, 2) ಯೇಸುವು ಉತ್ಸಾಹಕ್ಕೆ ಭಂಗತರುವವನಾಗಿರಲಿಲ್ಲವೆಂಬುದು ಸ್ಪಷ್ಟ. ನಗೆ ಮತ್ತು ಹಾಸ್ಯಗಳು ನಿಮ್ಮ ಮನೆವಾರ್ತೆಯಲ್ಲಿ ಪಾಪಗಳಾಗಿ ಎಂದಿಗೂ ವೀಕ್ಷಿಸಲ್ಪಡದಿರುವಂತಾಗಲಿ!
-
-
ನಿಮ್ಮ ಕುಟುಂಬವನ್ನು ನಾಶಕಾರಕ ಪ್ರಭಾವಗಳಿಂದ ಸಂರಕ್ಷಿಸಿರಿಕುಟುಂಬ ಸಂತೋಷದ ರಹಸ್ಯ
-
-
b “ನಗುವ” ಎಂದು ಇಲ್ಲಿ ಭಾಷಾಂತರಿಸಲಾಗಿರುವ ಹೀಬ್ರು ಪದವನ್ನು, ಬೇರೆ ರೂಪಗಳಲ್ಲಿ, “ಆಡುವ,” “ವಿನೋದಪಡಿಸುವ,” “ಆಚರಿಸುವ,” ಅಥವಾ “ಹಾಸ್ಯವಾಡುವ” ಎಂದೂ ಭಾಷಾಂತರಿಸಸಾಧ್ಯವಿದೆ.
-