ಸಮಗ್ರತೆಯನ್ನು ಕಾಪಾಡಿಕೊಳ್ಳುವ ಜನಾಂಗ
“ಬಾಗಿಲುಗಳನ್ನು ತೆರೆಯಿರಿ! ಧರ್ಮಸತ್ಯಗಳನ್ನು ಕೈಕೊಳ್ಳುವ ಜನಾಂಗವು ಪ್ರವೇಶಿಸಲಿ!”—ಯೆಶಾಯ 26:2.
1. “ನೀತಿವಂತ ಜನಾಂಗ”ದ ಕುರಿತಾದ ಯೆಶಾಯನ ಹೇಳಿಕೆಯು ಆಶ್ಚರ್ಯಕರವಾಗಿರಬಹುದೇಕೆ?
ಇಂದು, ಎಲ್ಲ ರೀತಿಯ ರಾಷ್ಟ್ರಗಳಿವೆ. ಕೆಲವು ಪ್ರಜಾಪ್ರಭುತ್ವಗಳಾಗಿವೆ, ಕೆಲವು ನಿರಂಕುಶ ಪ್ರಭುತ್ವಗಳಾಗಿವೆ. ಕೆಲವು ಶ್ರೀಮಂತ ರಾಷ್ಟ್ರಗಳು, ಕೆಲವು ಬಡ ರಾಷ್ಟ್ರಗಳು. ಅವುಗಳಿಗೆ ಒಂದು ವಿಷಯದಲ್ಲಿ ಸಮಾನ ಪಾಲು ಇದೆ: ಎಲ್ಲವು ಸೈತಾನನು ದೇವರಾಗಿರುವ ಲೋಕದ ಭಾಗವಾಗಿವೆ. (2 ಕೊರಿಂಥ 4:4) ಇದರ ನೋಟದಲ್ಲಿ, ಯೆಶಾಯನ ಮಾತುಗಳು ಕೆಲವರಿಗೆ ಅವನು ಹೀಗೆ ಹೇಳುವಾಗ ಆಶ್ಚರ್ಯಕರವಾಗಿರಬಹುದು: “ಬಾಗಿಲುಗಳನ್ನು ತೆರೆಯಿರಿ! ಧರ್ಮಸತ್ಯಗಳನ್ನು ಕೈಕೊಳ್ಳುವ (ನೀತಿವಂತ, NW) ಜನಾಂಗವು ಪ್ರವೇಶಿಸಲಿ!” (ಯೆಶಾಯ 26:2) ನೀತಿವಂತ ಜನಾಂಗವೊ? ಹೌದು, ನೀತಿವಂತ ಜನಾಂಗವೊಂದಿದೆ ಯಾಕೆಂದರೆ ಪ್ರವಾದನೆಯು ನಮ್ಮ ದಿನದಲ್ಲಿ ಅದರ ಅಸ್ತಿತ್ವವನ್ನು ಸೂಚಿಸುತ್ತದೆ. ಅಸಾಮಾನ್ಯವಾದ ಈ ಜನಾಂಗವನ್ನು ಹೇಗೆ ಗುರುತಿಸಸಾಧ್ಯವಿದೆ?
2. “ನೀತಿವಂತ ಜನಾಂಗವು” ಏನಾಗಿದೆ? ನಮಗೆ ಹೇಗೆ ತಿಳಿದಿದೆ?
2 ಯೆಶಾಯ 26:2ರ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನ ತರ್ಜುಮೆಯಲ್ಲಿ, ಜನಾಂಗವು “ನಂಬಿಗಸ್ತ ನಡತೆಯನ್ನು ಕಾಪಾಡಿಕೊಳ್ಳು” ವುದಾಗಿ ಹೇಳಲಾಗಿದೆ. “ಸತ್ಯಗಳನ್ನು ಕಾಪಾಡಿಕೊಳ್ಳುವ ನೀತಿವಂತ ಜನಾಂಗವು,” ಎಂದು ಕಿಂಗ್ ಜೇಮ್ಸ್ ವರ್ಷನ್ (ಅಂಚು) ವಚನವನ್ನು ತರ್ಜುಮೆ ಮಾಡುತ್ತದೆ. ಎರಡೂ ಸೂಕ್ತವಾದ ವರ್ಣನೆಗಳಾಗಿವೆ. ವಾಸ್ತವವಾಗಿ, ನೀತಿವಂತ ಜನಾಂಗವನ್ನು ಗುರುತಿಸುವುದು ಸರಳವಾಗಿದೆ ಯಾಕೆಂದರೆ ಭೂಮಿಯ ಮೇಲೆ ರಾಜನಾದ ಕ್ರಿಸ್ತನಿಗೆ ಅಧೀನವಾಗಿರುವ ಏಕೈಕ ಜನಾಂಗವು ಅದಾಗಿದೆ, ಆದಕಾರಣ ಅದು ಸೈತಾನನ ಲೋಕದ ಭಾಗವಾಗಿರುವುದಿಲ್ಲ. (ಯೋಹಾನ 17:16) ಹೇಳಿದಂಥ ಸ್ಥಿತಿಯಲ್ಲಿ, ಅದರ ಸದಸ್ಯರು ‘ಜನಾಂಗಗಳ ಮಧ್ಯೆ ತಮ್ಮ ನಡತೆಯನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದಕ್ಕೆ’ ಪ್ರಸಿದ್ಧರಾಗಿದ್ದಾರೆ. ದೇವರನ್ನು ಮಹಿಮೆಪಡಿಸುವ ಜೀವನ ಶೈಲಿಯನ್ನು ಅವರು ಅನುಸರಿಸುತ್ತಾರೆ. (1 ಪೇತ್ರ 2:12) ಅಷ್ಟೇ ಅಲ್ಲದೆ, ಲೋಕದಲ್ಲಿ ಎಲ್ಲೇ ಇರಲಿ, ಅವರು ‘ಜೀವಸ್ವರೂಪನಾದ ದೇವರ, ಸತ್ಯಕ್ಕೆ ಸ್ತಂಭವೂ ಆಧಾರವೂ ಆದ ಸಭೆ’ ಯಾಗಿದ್ದಾರೆ. (1 ತಿಮೊಥೆಯ 3:15) ಸತ್ಯವನ್ನು ಬೆಂಬಲಿಸುತ್ತಾ, ಕ್ರೈಸ್ತಪ್ರಪಂಚದ ಮೂಲಕ ಕಲಿಸಲಾದ ವಿಧರ್ಮಿ ತತ್ವಜ್ಞಾನಗಳನ್ನು ಅವರು ತಿರಸ್ಕರಿಸುತ್ತಾರೆ, ಮತ್ತು ಅವರು ವಾಕ್ಯಕ್ಕೆ—ದೇವರ ವಾಕ್ಯವಾದ ಬೈಬಲಿಗೆ—ಸೇರಿರುವ “ಪಾರಮಾರ್ಥಿಕವಾದ ಶುದ್ಧ ಹಾಲನ್ನು” ಸಮರ್ಥಿಸುತ್ತಾರೆ. (1 ಪೇತ್ರ 2:2) ಇನ್ನೂ ಹೆಚ್ಚಾಗಿ, ಅವರು ಹುರುಪಿನಿಂದ ರಾಜ್ಯದ ಸುವಾರ್ತೆಯನ್ನು “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಸಾರುತ್ತಾರೆ. (ಕೊಲೊಸ್ಸೆ 1:23) ಈ ಜನಾಂಗವು “ದೇವರ ಇಸ್ರಾಯೇಲಿನ” ಉಳಿದವರಿಂದ, ಅಭಿಷಿಕ್ತ ಕ್ರೈಸ್ತರ ಸಭೆಯಿಂದ ರಚಿತವಾಗಿದೆ ಎಂಬುದರಲ್ಲಿ ಯಾವ ಸಂದೇಹವಾದರೂ ಇರಬಲ್ಲದೊ? ಖಂಡಿತವಾಗಿಯೂ ಇಲ್ಲ!—ಗಲಾತ್ಯ 6:16.
ಜನಾಂಗವು ಜನಿಸುತ್ತದೆ
3. “ನೀತಿವಂತ ಜನಾಂಗವು” ಜನಿಸಿದ ವಿಧವನ್ನು ವರ್ಣಿಸಿರಿ.
3 “ನೀತಿವಂತ ಜನಾಂಗವು” ಯಾವಾಗ ಜನಿಸಿತು? ಅದರ ಆರಂಭವನ್ನು ಯೆಶಾಯನ ಪುಸ್ತಕದಲ್ಲಿ ಪ್ರವಾದಿಸಲಾಯಿತು. ಯೆಶಾಯ 66:7, 8 ರಲ್ಲಿ ನಾವು ಓದುವುದು: “ಬೇನೆ ತಿನ್ನುವದರೊಳಗೆ ಹೆರಿಗೆಯಾಯಿತು, ಪ್ರಸವವೇದನೆ ಇನ್ನು ಕಾಣದಿರುವಲ್ಲಿ ಗಂಡನ್ನು ಹಡೆದಳು. . . . ಚೀಯೋನೆಂಬಾಕೆಯು ಬೇನೆತಿಂದು ತನಗಾಗಿ ಮಕ್ಕಳನ್ನು ಹಡೆದಿದ್ದಾಳೆ.” ಅತ್ಯಂತ ಅಸಾಧಾರಣವಾಗಿ, ದೇವರ ಸ್ವರ್ಗೀಯ ಸಂಸ್ಥೆಯಾದ ಚೀಯೋನ್, ಆಕೆ ಹೆರಿಗೆಯ ಬೇನೆಯನ್ನು ಅನುಭವಿಸುವ ಮೊದಲೇ “ಗಂಡನ್ನು” ಹೆರಬೇಕಿತ್ತು. 1914 ರಲ್ಲಿ ಮೆಸ್ಸೀಯನ ರಾಜ್ಯವು ಪರಲೋಕಗಳಲ್ಲಿ ಸ್ಥಾಪಿತವಾಯಿತು. (ಪ್ರಕಟನೆ 12:5) ಅದಾದನಂತರ, ಪ್ರಥಮ ಲೋಕ ಯುದ್ಧವು ಹೆಚ್ಚು ಹೆಚ್ಚು ರಾಷ್ಟ್ರಗಳನ್ನು ಒಳಗೂಡಿಸಿತು, ಮತ್ತು ಅಭಿಷಿಕ್ತ ಕ್ರೈಸ್ತರು ತೀವ್ರವಾದ ಸಂಕಟ ಮತ್ತು ಹಿಂಸೆಯನ್ನು ಅನುಭವಿಸಿದರು. ಅಂತಿಮವಾಗಿ, ಇಸವಿ 1919 ರಲ್ಲಿ, ಭೂಮಿಯ ಮೇಲೆ ಆತ್ಮಿಕ ಜನಾಂಗವನ್ನು, “ಗಂಡು ಮಗು” ವನ್ನು ಉತ್ಪಾದಿಸಲಾಯಿತು. ಹೀಗೆ ಚೀಯೋನ್ ‘ಆಕೆಯ ಮಕ್ಕಳಿಗೆ’—ಹೊಸ “ನೀತಿವಂತ ಜನಾಂಗ”ದ ಅಭಿಷಿಕ್ತ ಸದಸ್ಯರಿಗೆ—‘ಜನ್ಮ ನೀಡಿದಳು’ ಮತ್ತು ಇವರು ಸತತವಾಗಿ ವಿಸ್ತರಿಸುವ ಸಾಕ್ಷಿಕಾರ್ಯಕ್ಕಾಗಿ ಸಂಘಟಿಸಲ್ಪಟ್ಟರು.—ಮತ್ತಾಯ 24:3, 7, 8, 14; 1 ಪೇತ್ರ 2:9.
4. ಸಮಗ್ರತೆಯನ್ನು ಕಾಪಾಡಿಕೊಳ್ಳಲು ದೇವರ ನೀತಿವಂತ ಜನಾಂಗವು ಹೋರಾಡಬೇಕಾಗಿದೆ ಏಕೆ?
4 ಅದರ ಪ್ರಾರಂಭದಿಂದ ಈ ಜನಾಂಗವು ಅದರ ಸಮಗ್ರತೆಯ ತೀವ್ರವಾದ ಪರೀಕ್ಷೆಗಳನ್ನು ಎದುರಿಸಿದೆ. ಯಾಕೆ? ಸ್ವರ್ಗೀಯ ರಾಜ್ಯವು ಜನಿಸಿದಾಗ, ಸೈತಾನನು ಮತ್ತು ಅವನ ದೆವ್ವಗಳು ಪರಲೋಕದಿಂದ ಭೂಮಿಗೆ ದೊಬ್ಬಲ್ಪಟ್ಟರು. ಗಟ್ಟಿಯಾದ ಧ್ವನಿಯೊಂದು ಹೀಗೆ ಘೋಷಿಸಿತು: “ಈಗ ಜಯವೂ ಶಕ್ತಿಯೂ ರಾಜ್ಯವೂ ನಮ್ಮ ದೇವರಿಗೆ ಉಂಟಾಯಿತು; ಆತನು ಅಭಿಷೇಕಿಸಿದವನ ಅಧಿಕಾರವು ಈಗ ಸ್ಥಾಪಿತವಾಯಿತು; ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರುಗಾರನು ದೊಬ್ಬಲ್ಪಟ್ಟಿದ್ದಾನೆ. ಅವರು ಪ್ರಾಣದ ಮೇಲಣ ಪ್ರೀತಿಯನ್ನು ತೊರೆದು ಮರಣಕ್ಕೆ ಹಿಂತೆಗೆಯದೆ ಯಜ್ಞದ ಕುರಿಯಾದಾತನ ರಕ್ತದ ಬಲದಿಂದಲೂ ತಮ್ಮ ವಾಕ್ಯದ ಬಲದಿಂದಲೂ ಅವನನ್ನು ಜಯಿಸಿದರು.” ಪರಿಸ್ಥಿತಿಗಳ ಈ ಬದಲಾವಣೆಗೆ ಸೈತಾನನು ಮಹಾ ಕೋಪದಿಂದ ಪ್ರತಿಕ್ರಿಯಿಸಿದನು ಮತ್ತು “[ಸ್ತ್ರೀಯ] ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿರುವವರ ಮೇಲೆ ಯುದ್ಧಮಾಡುವದಕ್ಕೆ ಹೊರಟ”ನು. ಸೈತಾನನ ದಾಳಿಗಳನ್ನು ಎದುರಿಸುತ್ತಾ, ಅಭಿಷಿಕ್ತ ಕ್ರೈಸ್ತರು ದೃಢವಾಗಿ ನಿಂತರು. ಪ್ರಸ್ತುತ ಸಮಯದ ತನಕ, ದೇವರ ನೀತಿವಂತ ಜನಾಂಗದ ಹುರುಪುಳ್ಳ ಸದಸ್ಯರು ಯೇಸುವಿನ ಪ್ರಾಯಶ್ಚಿತಗ್ತೊಳಿಸುವ ರಕ್ತದಲ್ಲಿ ನಂಬಿಕೆಯನ್ನಿಡುತ್ತಾರೆ ಮತ್ತು ‘ಮರಣದ ಎದುರಿನಲ್ಲಿಯೂ’ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮೂಲಕ ಮಹಾ ದೂರುಗಾರನಿಗೋಸ್ಕರ ಯೆಹೋವನಿಗೆ ಉತ್ತರವನ್ನು ಕೊಡಲು ಮುಂದುವರಿಯುತ್ತಾರೆ.—ಪ್ರಕಟನೆ 12:1, 5, 9-12, 17; ಜ್ಞಾನೋಕ್ತಿ 27:11.
5. ಆಧುನಿಕ ದಿನದ ಸಾಕ್ಷಿಗಳ ಯಾವ ಉತ್ತಮ ಮನೋಭಾವವು ಸಮಗ್ರತೆಯನ್ನು ಕಾಪಾಡುವಂತೆ ಅವರಿಗೆ ಸಹಾಯ ಮಾಡಿದೆ?
5 1919 ರಲ್ಲಿ, ದೇವರ ರಾಜ್ಯದ ಆಧುನಿಕ ದಿನದ ಸಾಕ್ಷಿಯು ಆರಂಭಗೊಂಡಾಗ, ಬೈಬಲ್ ವಿದ್ಯಾರ್ಥಿಗಳು—ಹಾಗೆಂದು ಯೆಹೋವನ ಸಾಕ್ಷಿಗಳು ಆಗ ಕರೆಯಲ್ಪಟ್ಟರು—ಸಂಖ್ಯೆಯಲ್ಲಿ ಅಲ್ಪರಾಗಿದ್ದರು ಆದರೆ ನಂಬಿಕೆಯಲ್ಲಿ ಪ್ರಬಲರಾಗಿದ್ದರು. ಯಾವ ಪಟ್ಟಣವು ‘ರಕ್ಷಣೆಯನ್ನು ಕೋಟೆಯನ್ನಾಗಿಯೂ ಹೊರಪೌಳಿಯನ್ನಾಗಿಯೂ ಹೊಂದಿತ್ತೊ, ಆ ಬಲವಾದ ಪಟ್ಟಣದ’ ಮೂಲ ಸದಸ್ಯರು ಅವರಾದರು. ಅವರ ಭರವಸೆಯು ‘ಶಾಶ್ವತವಾಗಿ ಆಶ್ರಯಗಿರಿಯಾಗಿದ್ದ ಯಾಹುಯೆಹೋವ’ ನಲ್ಲಿತ್ತು. (ಯೆಶಾಯ 26:1, 3, 4) ಪೂರ್ವ ಕಾಲದ ಮೋಶೆಯಂತೆ, ಅವರು ಘೋಷಿಸಿದ್ದು: “ಯೆಹೋವನ ನಾಮಮಹತ್ವವನ್ನು ಪ್ರಕಟಿಸುವೆನು; ನಮ್ಮ ದೇವರನ್ನು ಮಹಾಮಹಿಮೆಯುಳ್ಳವನೆಂದು ಕೊಂಡಾಡಿರಿ. ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.”—ಧರ್ಮೋಪದೇಶಕಾಂಡ 32:3, 4.
6. ಯಾವ ವಿಧದಲ್ಲಿ ಯೆಹೋವನು ತನ್ನ ಜನರನ್ನು ಈ ಕಡೇ ದಿನಗಳಲ್ಲಿ ಆಶೀರ್ವದಿಸಿದ್ದಾನೆ?
6 ಆ ಸಮಯದಿಂದ, ಪ್ರಥಮವಾಗಿ 1,44,000 ಅಭಿಷಿಕ್ತ ಕ್ರೈಸ್ತರ ಉಳಿಕೆಯವರು ಒಟ್ಟುಗೂಡಿಸಲ್ಪಟ್ಟಂತೆ ಮತ್ತು “ಬೇರೆ ಕುರಿ” ಗಳ ಒಂದು ಮಹಾ ಸಮೂಹದವರು ಈಗ ಯೆಹೋವನ ರಾಜ್ಯದ ಉದ್ದೇಶಗಳನ್ನು ಘೋಷಿಸುವುದರಲ್ಲಿ ಜೊತೆಗೂಡುವಂತೆ, ದೇವರ ರಾಜ್ಯದ ಏರ್ಪಾಡಿನ ಬಾಗಿಲುಗಳು ಅಗಲವಾಗಿ ತೆರೆದುಕೊಂಡಿವೆ. (ಯೋಹಾನ 10:16) ಹೀಗೆ, “ಯೆಹೋವನೇ, ನಿನ್ನ ಜನವನ್ನು ಹೆಚ್ಚಿಸಿದ್ದೀ, ಹೌದು, ನಿನ್ನ ಪ್ರಜೆಯನ್ನು ವೃದ್ಧಿಗೊಳಿಸಿದ್ದೀ; ನೀನು ದೇಶದ ಮೇರೆಗಳನ್ನೆಲ್ಲಾ ವಿಸ್ತರಿಸಿ ಮಹಿಮೆಗೊಂಡಿದ್ದೀ,” ಎಂದು ಉಲ್ಲಾಸಕರವಾಗಿ ಘೋಷಿಸಸಾಧ್ಯವಿದೆ. (ಯೆಶಾಯ 26:15) ಇಂದು ನಾವು ಲೋಕದ ಕ್ಷೇತ್ರವನ್ನು ಅವಲೋಕಿಸುವಾಗ, ಆ ಮಾತುಗಳು ಎಷ್ಟು ಸತ್ಯವಾಗಿವೆ! ಪವಿತ್ರಾತ್ಮನ ಶಕಿಯ್ತಿಂದ, ಬರಲಿರುವ ಕ್ರಿಸ್ತನ ರಾಜ್ಯದ ಕುರಿತಾದ ಸಾಕ್ಷಿಯು “ಭೂಲೋಕದ ಕಟ್ಟಕಡೆಯ ವರೆಗೂ” ನೀಡಲ್ಪಟ್ಟಿದೆ. (ಅ. ಕೃತ್ಯಗಳು 1:8) ಪುಟಗಳು 12 ರಿಂದ 15ರ ವರೆಗೆ ಕಾಣಿಸಿಕೊಳ್ಳುವ ಲೋಕವ್ಯಾಪಕವಾದ ಯೆಹೋವನ ಸಾಕ್ಷಿಗಳ 1994ರ ಸೇವಾ ವರ್ಷದ ವರದಿಯಿಂದ, ಆ ವಿಸ್ತರಣದ ವ್ಯಾಪ್ತಿಯನ್ನು ಅಳೆಯಬಹುದು.
ಪ್ರಚಾರಕರ ಒಂದು ಹೊಸ ಉಚ್ಚಾಂಕ
7, 8. (ಎ) ದೇವರ ಜನರು ‘ತಮ್ಮ ಗುಡಾರದ ಹಗ್ಗಳನ್ನು ಲಂಬಿಸಿದ್ದಾರೆ’ ಎಂಬುದಕ್ಕೆ ಯಾವ ಪ್ರಮಾಣವಿದೆ? (ಬಿ) 1994ರ ಸೇವಾ ವರ್ಷದ ವರದಿಯನ್ನು ನೋಡುತ್ತಾ, ‘ತಮ್ಮ ಗಡಿಗಳನ್ನು ವಿಸ್ತರಿಸುತ್ತಿರುವ’ ಎದ್ದುಕಾಣುವ ಯಾವ ಕ್ಷೇತ್ರಗಳನ್ನು ನೀವು ನೋಡುತ್ತೀರಿ?
7 ಈ ವರದಿಯ ಕೆಲವು ಅತ್ಯುಜಲ್ವ ಭಾಗಗಳನ್ನು ಪರಿಗಣಿಸಿರಿ. ಕ್ಷೇತ್ರದಲ್ಲಿನ ರಾಜ್ಯ ಪ್ರಚಾರಕರ ಉಚ್ಚಾಂಕವು 49,14,094ನ್ನು ತಲಪಿತು! ‘ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಆಗಿರುವ ಮತ್ತು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರುವ ಮಹಾ ಸಮೂಹದ’ ಸತತವಾದ ಒಟ್ಟುಗೂಡಿಸುವಿಕೆಯನ್ನು ಗಮನಿಸುವುದು ಎಷ್ಟು ರೋಮಾಂಚಕಾರಿಯಾಗಿದೆ! ಹೌದು, ಇವರು ಕೂಡ ಸಮಗ್ರತೆಯನ್ನು ಕಾಪಾಡಿಕೊಳ್ಳುವವರಾಗಿ ಪರಿಣಮಿಸಿದ್ದಾರೆ. ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನಿಡುವುದರಿಂದ ನೀತಿವಂತರೆಂದು ಪರಿಗಣಿಸಲ್ಪಡುತ್ತಾ, ಅವರು “ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.”—ಪ್ರಕಟನೆ 7:9, 14.
8 ವಿಶೇಷವಾಗಿ 1919 ರಿಂದ, ಯೆಹೋವನ ಸಂಸ್ಥೆಗೆ ಈ ಆಜ್ಞೆಯು ಕೊಡಲ್ಪಟ್ಟಿದೆ: “ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು, ನಿನ್ನ ನಿವಾಸದ ಪರದೆಗಳು ಹರಡಲಿ, ಸಂಕೋಚಪಡಬೇಡ; ನಿನ್ನ ಹಗ್ಗಗಳನ್ನು ಉದಮ್ದಾಡಿ ಗೂಟಗಳನ್ನು ಬಲಪಡಿಸು.” (ಯೆಶಾಯ 54:2) ಪ್ರತಿಕ್ರಿಯೆಯಲ್ಲಿ, ಸಾರುವ ಕೆಲಸವು ಅಲಾಸ್ಕದ ಗಡಿಯಲ್ಲಿರುವ ಹಿಮಮಯ ಯೂಕಾನ್ನಲ್ಲಿಯೂ ಕಡಮೆಯಾಗದೆ ಮುಂದುವರಿಯುತ್ತದೆ. ಅಲ್ಲಿ ಕೆಲವೊಮ್ಮೆ ವಾರಗಟ್ಟಲೆ 45 ಯಾ 50 ಸೆಲ್ಸಿಯಸ್ಕ್ಕಿಂತ ಕೆಳಗೆ ಕುಸಿಯಬಲ್ಲ ತಾಪಮಾನಗಳನ್ನು ತಾಳಿಕೊಳ್ಳುವ ಪಯನೀಯರರ ಒಂದು ಸಮರ್ಥ ಗುಂಪು ಇದೆ. ಇತ್ತೀಚೆಗಿನ ವರ್ಷಗಳಲ್ಲಿ ಗುಂಪುಗಳು ಹೆಚ್ಚಿನ ವೇಗದಲ್ಲಿ ಯೆಹೋವನ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಜನಾಂಗಕ್ಕೆ ಒಟ್ಟುಗೂಡುತ್ತಿವೆ. ಇವರನ್ನು ಕ್ರೈಸ್ತಪ್ರಪಂಚದ ಹೊರಗಿನ ಏಷಿಯನ್ ದೇಶಗಳಿಂದ, ಪೂರ್ವ ಕಮ್ಯೂನಿಸ್ಟ್ ಪ್ರಬಲ ಸ್ಥಾನಗಳಿಂದ, ಅನೇಕ ಆಫ್ರಿಕನ್ ದೇಶಗಳಿಂದ, ಮತ್ತು ಇಟಲಿ, ಸ್ಪೆಯಿನ್, ಪೋರ್ಚುಗಲ್, ಮತ್ತು ದಕ್ಷಿಣ ಅಮೆರಿಕದಂತಹ ಕ್ಯಾತೊಲಿಕ್ ಕ್ಷೇತ್ರಗಳಿಂದ ಬರಮಾಡಿಕೊಳ್ಳಲು, ಬಾಗಿಲುಗಳನ್ನು ಇನ್ನಷ್ಟು ಅಗಲವಾಗಿ ತೆರೆಯಲಾಗಿವೆ. ಸ್ಥಾನಾಂತರಗೊಂಡ ವ್ಯಕ್ತಿಗಳು ಇನ್ನೊಂದು ಕ್ಷೇತ್ರವನ್ನು ತೆರೆದಿದ್ದಾರೆ. ಉದಾಹರಣೆಗೆ ಇಂಗ್ಲೆಂಡ್ನಲ್ಲಿ, ಸಾಕ್ಷಿಗಳು 13 ವಿದೇಶೀ ಭಾಷೆಗಳ ಕುಲಸಂಬಂಧವಾದ ಗುಂಪುಗಳ ಅಗತ್ಯಗಳ ಕಾಳಜಿವಹಿಸುತ್ತಿದ್ದಾರೆ.
“ಇದನ್ನು ಮಾಡುತ್ತಾ ಹೋಗಿರಿ”
9. (ಎ) 1994ರ ಜ್ಞಾಪಕ ದಿನದ ಹಾಜರಿಯು ಏನನ್ನು ಸೂಚಿಸುತ್ತದೆ? (ಬಿ) ಜ್ಞಾಪಕ ದಿನದ ಅಸಾಧಾರಣವಾದ ಉನ್ನತ ಹಾಜರಿಗಳಿದ್ದ ಕೆಲವು ದೇಶಗಳಾವುವು?
9 ವಾರ್ಷಿಕ ವರದಿಯ ಇನ್ನೊಂದು ಅತ್ಯುಜಲ್ವ ಅಂಶವು ಜ್ಞಾಪಕದ ಹಾಜರಿಯಾಗಿದೆ. ಅವನು ಮರಣ ಹೊಂದುವ ಸ್ವಲ್ಪ ಮುಂಚೆ, ತನ್ನ ಮರಣವನ್ನು ಸ್ಮರಿಸುವ ಜ್ಞಾಪಕವನ್ನು ಯೇಸು ಸ್ಥಾಪಿಸಿದನು ಮತ್ತು ತನ್ನ ಹಿಂಬಾಲಕರಿಗೆ, “ನನ್ನ ಜ್ಞಾಪಕಾರ್ಥವಾಗಿ ಇದನ್ನು ಮಾಡುತ್ತಾ ಹೋಗಿರಿ,” ಎಂದು ಹೇಳಿದನು. (1 ಕೊರಿಂಥ 11:24, NW) 1994 ರಲ್ಲಿ 1,22,88,917 ವ್ಯಕ್ತಿಗಳು—ಸಕ್ರಿಯ ಪ್ರಚಾರಕರ ಸಂಖ್ಯೆಯ ಇಮ್ಮಡಿಗಿಂತ ಹೆಚ್ಚಿನವರು—ಆ ಆಜೆಗ್ಞೆ, ಭಾಗಿಗಳೋಪಾದಿ ಯಾ ವೀಕ್ಷಕರೋಪಾದಿ ವಿಧೇಯರಾಗಲು ಒಟ್ಟಾಗಿ ಸೇರಿದ್ದನ್ನು ನೋಡುವುದು ರೋಮಾಂಚಕಾರಿಯಾಗಿತ್ತು. ಕೆಲವು ದೇಶಗಳಲ್ಲಿ ಪ್ರಚಾರಕರಿಗೆ ಮತ್ತು ಜ್ಞಾಪಕಕ್ಕೆ ಹಾಜರಾಗಿದ್ದವರ ಮಧ್ಯೆ ಪ್ರಮಾಣವು ಇನ್ನೂ ಹೆಚ್ಚಾಗಿತ್ತು. ಎಸ್ಟೋನಿಯ, ಲ್ಯಾಟಿಯ್ವ, ಮತ್ತು ಲಿತುಏನಿಯದಲ್ಲಿರುವ 4,049 ಪ್ರಚಾರಕರು, ಜ್ಞಾಪಕಕ್ಕೆ 12,876 ಜನರು ಹಾಜರಾದದ್ದಕ್ಕೆ ಹರ್ಷಿಸಿದರು. ಇದು ಪ್ರಚಾರಕರ ಸಂಖ್ಯೆಗಿಂತ ಮೂರು ಬಾರಿ ಹೆಚ್ಚಾಗಿತ್ತು. ಮತ್ತು ಬೆನಿನ್ನಲ್ಲಿ, ಜ್ಞಾಪಕಕ್ಕೆ ಹಾಜರಾದ 16,786 ಜನರು, ಪ್ರಚಾರಕರ ಸಂಖ್ಯೆಯನ್ನು ಸುಮಾರು ಐದು ಬಾರಿ ಪ್ರತಿನಿಧಿಸಿದರು. ಸುಮಾರು 45 ಪ್ರಚಾರಕರಿರುವ ಒಂದು ಸಭೆಯಲ್ಲಿ 831 ವ್ಯಕ್ತಿಗಳು ಹಾಜರಿದ್ದರು!
10. (ಎ) ಜ್ಞಾಪಕ ದಿನದ ಉನ್ನತವಾದ ಹಾಜರಿಯು ನಮ್ಮ ಮೇಲೆ ಯಾವ ಜವಾಬ್ದಾರಿಯನ್ನು ಇರಿಸುತ್ತದೆ? (ಬಿ) ಜ್ಞಾಪಕದ ದಿನವನ್ನು ಹಾಜರಾದ ಒಬ್ಬ ವ್ಯಕ್ತಿಯು ಹೆಚ್ಚಿನ ಸಹಾಯವನ್ನು ಪಡೆದಾಗ ಏನು ಸಂಭವಿಸಬಲ್ಲದೆಂದು ವಿವರಿಸಿರಿ.
10 ಆ ಶುಭ ಸಂದರ್ಭದಂದು ಆಸಕ್ತಿಯುಳ್ಳ ಇಷ್ಟೊಂದು ವ್ಯಕ್ತಿಗಳು ತಮ್ಮನ್ನು ಸೇರಿದರೆಂಬ ವಿಷಯಕ್ಕಾಗಿ ಯೆಹೋವನ ಸಾಕ್ಷಿಗಳು ಸಂತೋಷಿಸುತ್ತಾರೆ. ಸತ್ಯದ ತಮ್ಮ ತಿಳಿವಳಿಕೆಯಲ್ಲಿ ಮತ್ತು ಪ್ರೀತಿಯಲ್ಲಿ ಇನ್ನೂ ಹೆಚ್ಚಿನ ಪ್ರಗತಿಯನ್ನು ಮಾಡುವಂತೆ ಇವರಿಗೆ ಸಹಾಯ ನೀಡಲು ಈಗ ಅವರು ಬಯಸುತ್ತಾರೆ. ಕೆಲವರು ರಷ್ಯಾದಲ್ಲಿರುವ ಆಲ್ಆ ಪ್ರತಿಕ್ರಿಯಿಸಿದ ರೀತಿಯಲ್ಲಿ ಪ್ರತಿಕ್ರಿಯಿಸಬಹುದು. ಆಲ್ಆ ಒಬ್ಬ ವಿಶೇಷ ಪಯನೀಯರ್ ಸಹೋದರಿಯೊಂದಿಗೆ ಅಭ್ಯಾಸಮಾಡುತ್ತಿದ್ದಳು ಆದರೆ ಕಡಮೆ ಪ್ರಗತಿಯನ್ನು ಮಾಡಿದುದರಿಂದ ಅಭ್ಯಾಸವನ್ನು ನಿಲ್ಲಿಸಲಾಯಿತು. ಆದರೂ, ಜ್ಞಾಪಕವನ್ನು ಹಾಜರಾಗಲಿಕ್ಕಾಗಿದ್ದ ಒಂದು ಆಮಂತ್ರಣವನ್ನು ಆಲ್ಆ ಸ್ವೀಕರಿಸಿದಳು. ಬಹಳಷ್ಟು ಮಹತ್ವವನ್ನು ಹೊಂದಿದ್ದ ಆ ಕೂಟವು, ಆಕೆಯ ಮೇಲೆ ಆಳವಾದ ಪ್ರಭಾವವನ್ನು ಬೀರಿತು. ಮನೆಗೆ ಹಿಂದಿರುಗಿದ ಬಳಿಕ ತನ್ನ ಎಲ್ಲ ವಿಗ್ರಹಗಳನ್ನು ಎಸೆದುಬಿಟ್ಟಳು ಮತ್ತು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿದಳು. ಆಕೆ ಜ್ಞಾಪಕಾಚಾರಣೆಯನ್ನು ಹೇಗೆ ಆನಂದಿಸಿದ್ದಳೆಂದು ನೋಡಲು ಎರಡು ದಿನಗಳ ತರುವಾಯ ಪಯನೀಯರ್ ಸಹೋದರಿಯು ಆಲ್ಆಳನ್ನು ಭೇಟಿಯಾದಳು. ಒಂದು ಫಲಕಾರಿ ಚರ್ಚೆಯು ಪರಿಣಮಿಸಿತು. ಆಲ್ಆಳ ಅಭ್ಯಾಸವನ್ನು ಪುನಃಆರಂಭಿಸಲಾಯಿತು. ಬೇಗನೆ ಆಕೆ ಸಾಕ್ಷಿಕಾರ್ಯದಲ್ಲಿ ಭಾಗವಹಿಸುತ್ತಿದ್ದಳು. ಜ್ಞಾಪಕವನ್ನು ಹಾಜರಾಗುವವರನ್ನು ಪುನಃ ಭೇಟಿಯಾಗುವುದರ ಮೌಲ್ಯವನ್ನು ಈ ಅನುಭವವು ತೋರಿಸುತ್ತದೆ. ಅನೇಕರು ಆಲ್ಆಳಂತೆ ಬಹುಶಃ ಪ್ರತಿಕ್ರಿಯಿಸುವರು.
“ಸಭೆಯಾಗಿ ಕೂಡಿಕೊಳ್ಳುವದನ್ನು . . . ಬಿಡ” ದಿರುವುದು
11-13. (ಎ) ಯಾವುದು ನೀತಿವಂತ ಜನಾಂಗದ ನಂಬಿಗಸ್ತ ನಡತೆಯ ಭಾಗವಾಗಿದೆ? (ಬಿ) ಸತ್ಯ ಕ್ರೈಸ್ತರು ಕೂಟಗಳಿಗೆ ಹಾಜರಾಗುವುದು ಅಗತ್ಯವೇಕೆ?
11 ಯೆಹೋವನ ಸಾಕ್ಷಿಗಳ ಕ್ಯಾಲೆಂಡರ್ನಲ್ಲಿ ಜ್ಞಾಪಕ ದಿನವು ಅತ್ಯಂತ ಪ್ರಾಮುಖ್ಯವಾದ ಕೂಟವಾಗಿದೆಯಾದರೂ, ಅದು ಖಂಡಿತವಾಗಿಯೂ ಏಕಮಾತ್ರ ಕೂಟವಾಗಿರುವುದಿಲ್ಲ. ಅಪೊಸ್ತಲ ಪೌಲನ ಮಾತುಗಳಿಗೆ ವಿಧೇಯತೆ ತೋರಿಸುತ್ತಾ, ಯೆಹೋವನ ಸಾಕ್ಷಿಗಳು ಪ್ರತಿ ವಾರ ಒಟ್ಟಾಗಿ ಸೇರಿಬರುತ್ತಾರೆ: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.” (ಇಬ್ರಿಯ 10:24, 25) ಅದರ ನಂಬಿಗಸ್ತ ನಡತೆಯಿಂದ ಗುರುತಿಸಲ್ಪಡುವ ಯೆಹೋವನ ನೀತಿವಂತ ಜನಾಂಗದೊಂದಿಗೆ ಅವರು ಸೇರಿದ್ದಾರೆ. ನಂಬಿಗಸ್ತ ನಡತೆಯು ನಂಬಿಗಸ್ತಿಕೆಯಿಂದ ಕೂಟಗಳನ್ನು ಹಾಜರಾಗುವುದನ್ನು ಒಳಗೊಳ್ಳುತ್ತದೆ.
12 ಇದು ಫಿಲಿಪ್ಪೀನ್ಸ್ನಲ್ಲಿ ಉತ್ತಮವಾಗಿ ಅರ್ಥಮಾಡಿಕೊಳ್ಳಲಾಗಿದೆಯೆಂದು ಸ್ಪಷ್ಟವಾಗಿಗುತ್ತದೆ. ಅಲ್ಲಿ ಆದಿತ್ಯವಾರದ ಕೂಟಗಳ ಸರಾಸರಿ ದೇಶವ್ಯಾಪಕ ಹಾಜರಿಯು ಪ್ರಚಾರಕರ ಸಂಖ್ಯೆಯ 125 ಪ್ರತಿಶತವಾಗಿದೆ. ಅದು ಆರ್ಜೆಂಟೀನದಲ್ಲಿರುವ ಸಾಕ್ಷಿಗಳ ಮತ್ತು ಆಸಕ್ತ ಜನರ ಒಂದು ಗುಂಪಿನಿಂದ ಸಹ ಉತ್ತಮವಾಗಿ ಅರ್ಥಮಾಡಿಕೊಳ್ಳಲಾಗಿದೆ. ಅವರು ರಾಜ್ಯ ಸಭಾಗೃಹದಿಂದ ಸುಮಾರು 20 ಕಿಲೋಮೀಟರುಗಳ ಅಂತರದಲ್ಲಿ ಜೀವಿಸುತ್ತಾರೆ. ಆದರೂ, ಸರ್ಕಿಟ್ ಮೇಲ್ವಿಚಾರಕನು ವರದಿಸುವುದೇನೆಂದರೆ, ಕಾಯಿಲೆಯ ವಿದ್ಯಮಾನಗಳನ್ನು ಹೊರತುಪಡಿಸಿ, ಅವರಲ್ಲಿ ಒಬ್ಬರೂ ಕೂಟಗಳನ್ನು ಎಂದೂ ತಪ್ಪಿಸುವುದಿಲ್ಲ. ಅವರು ಕುದುರೆಯ ಮೇಲೆ ಯಾ ಹಗುರಗಾಡಿಯಲ್ಲಿ ನಾಲ್ಕು ಗಂಟೆಗಳ ಕಾಲ ಪ್ರಯಾಣಿಸುತ್ತಾರೆ, ಮತ್ತು ಚಳಿಗಾಲದಲ್ಲಿ ರಾತ್ರಿಯ ಕತ್ತಲೆಯಲ್ಲಿ ಅವರು ಮನೆಗೆ ಹಿಂದೆ ಪ್ರಯಾಣ ಬೆಳೆಸುತ್ತಾರೆ.
13 ಈ ವ್ಯವಸ್ಥೆಯ ಅಂತ್ಯವು ಸಮೀಪಿಸಿದಂತೆ, ಜೀವನವು ಕಷ್ಟಕರವಾಗುತ್ತದೆ, ಸಮಸ್ಯೆಗಳು ಹೆಚ್ಚಾಗುತ್ತವೆ, ಮತ್ತು ಕೂಟಗಳನ್ನು ಕ್ರಮವಾಗಿ ಹಾಜರಾಗುವುದು ಒಂದು ಪಂಥಾಹ್ವಾನಕ್ಕಿಂತ ಹೆಚ್ಚಾಗಿರಬಹುದು. ಆದರೆ ಅಂತಹ ಪರಿಸ್ಥಿತಿಗಳಲ್ಲಿ, ನಮಗೆ ಇಂತಹ ಒಟ್ಟುಗೂಡುವಿಕೆಗಳಲ್ಲಿ ಮಾತ್ರ ಕಂಡುಕೊಳ್ಳಸಾಧ್ಯವಿರುವ ಆತ್ಮಿಕ ಆಹಾರ ಮತ್ತು ಆದರಣೀಯ ಸಾಹಚರ್ಯದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿರುತ್ತದೆ.
“ಅದನ್ನು ಜರೂರಿನಿಂದ ಮಾಡುತ್ತಿರು”
14. ತಮ್ಮ ಶುಶ್ರೂಷೆಯ ಕುರಿತು ಯೆಹೋವನ ಸಾಕ್ಷಿಗಳಿಗೆ ಜರೂರಿನ ಪ್ರಜ್ಞೆಯಿದೆ ಏಕೆ, ಮತ್ತು ಯಾವ ಫಲಿತಾಂಶಗಳು ಇದನ್ನು ಪ್ರದರ್ಶಿಸುತ್ತವೆ?
14 ಕಳೆದ ವರ್ಷ, ಇಟಲಿಯಲ್ಲಿರುವ ಕ್ಯಾತೊಲಿಕ್ ಚರ್ಚ್ ಯೆಹೋವನ ಸಾಕ್ಷಿಗಳ ಕೆಲಸವನ್ನು “ಘೋರವಾದ ಮತಾಂತರಗೊಳಿಸುವಿಕೆ” ಎಂಬುದಾಗಿ ಸೂಚಿಸಿ ಮಾತಾಡಿತು. ನಿಜವಾಗಿಯಾದರೊ, ಸಾಕ್ಷಿಗಳು ಮಾಡುವಂತಹ ವಿಷಯದ ಕುರಿತು ಘೋರವಾದದ್ದು ಯಾವುದೂ ಆಗಿರುವುದಿಲ್ಲ. ಬದಲಿಗೆ, ಅವರ ಶುಶ್ರೂಷೆಯು ತಮ್ಮ ನೆರೆಯವರಿಗಾಗಿರುವ ಆಳವಾದ ಪ್ರೀತಿಯ ಒಂದು ಅಭಿವ್ಯಕ್ತಿಯಾಗಿದೆ. ಪೌಲನ ಮಾತುಗಳಿಗೆ ಅದು ವಿಧೇಯತೆಯ ಪ್ರಮಾಣವು ಸಹ ಆಗಿದೆ: “ವಾಕ್ಯವನ್ನು ಸಾರು, ಅನುಕೂಲ ಕಾಲದಲ್ಲಿ, ತೊಂದರೆಯ ಕಾಲದಲ್ಲಿ ಅದನ್ನು ಜರೂರಿನಿಂದ ಮಾಡುತ್ತಿರು.” (2 ತಿಮೊಥೆಯ 4:2, NW) 1994 ರಲ್ಲಿ ತಮ್ಮ ನೆರೆಯವರಿಗೆ ಸಾರುತ್ತಾ, ಪುನರ್ಭೇಟಿಗಳನ್ನು ಮಾಡುತ್ತಾ, ಮತ್ತು ಪ್ರತಿವಾರ 47,01,357 ಬೈಬಲ್ ಅಧ್ಯಯನಗಳನ್ನು ನಡೆಸುತ್ತಾ, 1,09,60,65,354 ತಾಸುಗಳ ಮೊತ್ತವನ್ನು ವ್ಯಯಿಸಿದ್ದರಲ್ಲಿ ಕಾಣುವಂತೆ, ತಮ್ಮ ಶುಶ್ರೂಷೆಯಲ್ಲಿ ಹುರುಪುಳ್ಳವರಾಗಿರುವಂತೆ ಜರೂರಿಯ ಪ್ರಜ್ಞೆಯು ಯೆಹೋವನ ಸಾಕ್ಷಿಗಳನ್ನು ಪ್ರೇರೇಪಿಸುತ್ತದೆ. ಅನೇಕರು ಪಯನೀಯರ್ ಸೇವೆಯಲ್ಲಿ ಭಾಗವಹಿಸಲು ಶಕ್ತರಾದರು, ಇದು ಪಯನೀಯರ್ ಆತ್ಮವು ಸಜೀವವಾಗಿದೆ ಮತ್ತು ಸಕ್ರಿಯವಾಗಿದೆ ಎಂಬುದನ್ನು ತೋರಿಸುತ್ತದೆ. ಲೋಕವ್ಯಾಪಕವಾಗಿ 6,36,202 ಪಯನೀಯರರ ಸರಾಸರಿಯು ಇದನ್ನು ರುಜುಪಡಿಸುತ್ತದೆ.
15, 16. (ಎ) ಯೌವನಸ್ಥರು ಮತ್ತು ವೃದ್ಧರು—ಇಬ್ಬರೂ—ಪಯನೀಯರ್ ಆತ್ಮವನ್ನು ಹೇಗೆ ಪ್ರದರ್ಶಿಸಿದ್ದಾರೆ? (ಬಿ) 1994ರ ಸೇವಾ ವರ್ಷದ ವರದಿಯಲ್ಲಿ ವೈಯಕ್ತಿಕ ದೇಶಗಳನ್ನು ನೋಡುತ್ತಾ, ಪಯನೀಯರರ ಎದ್ದುಕಾಣುವ ಸಂಖ್ಯೆಗಳನ್ನು ನೀವು ಎಲ್ಲಿ ನೋಡುತ್ತೀರಿ?
15 ಆ ಪಯನೀಯರರಲ್ಲಿ ಅನೇಕರು ಹದಿವಯಸ್ಕರಿದ್ದಾರೆ. ಅಮೆರಿಕದಲ್ಲಿ ಕೆಲವರು ಸಹಪಾಠಿಗಳನ್ನು ತಮ್ಮ ಪ್ರಧಾನ ಟೆರಿಟೊರಿಯನ್ನಾಗಿಟ್ಟುಕೊಳ್ಳುತ್ತಾ, ಪ್ರೌಢ ಶಾಲೆಯಲ್ಲಿರುವಾಗ ಕ್ರಮದ ಪಯನೀಯರರಾಗಿ ಈಗ ಸೇವೆ ಮಾಡುತ್ತಿದ್ದಾರೆ. ಆ ದೇಶದಲ್ಲಿ ಅನೇಕ ಶಾಲೆಗಳನ್ನು ವ್ಯಾಪಿಸಿರುವ ಅಮಲೌಷಧಗಳು, ಅನೈತಿಕತೆ, ಮತ್ತು ಹಿಂಸೆಯಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಬಹಳ ಅತ್ಯುತ್ತಮ ಮಾರ್ಗವು ಪಯನೀಯರ್ ಸೇವೆಯಾಗಿದೆ ಎಂದು ಈ ಯುವ ಜನರು ಕಂಡುಕೊಂಡಿದ್ದಾರೆ. ಇತರ ಅನೇಕ ಯುವ ಜನರು, ಶಾಲೆಯನ್ನು ಮುಗಿಸಿದ ಬಳಿಕ ಪಯನೀಯರ್ ಸೇವೆಯನ್ನು ತಮ್ಮ ಗುರಿಯನ್ನಾಗಿ ಇಟ್ಟುಕೊಂಡಿದ್ದಾರೆ. ಯುಕ್ರೇನ್ನಲ್ಲಿರುವ ಈರೀನಾ ಪದವೀಧರ ಶಿಕ್ಷಣದ ತರುವಾಯ ಪಯನೀಯರ್ ಸೇವೆಗಾಗಿ ತನ್ನನ್ನು ಸಿದ್ಧವಾಗಿರಿಸಿಕೊಳ್ಳಲು, ತನ್ನ ಪ್ರೌಢ ಶಾಲೆಯ ವರ್ಷಗಳ ಉದ್ದಕ್ಕೂ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಿದಳು. ಶಾಲೆಯನ್ನು ಮುಗಿಸಿದ ತರುವಾಯ, ಆಕೆಯ ಕುಟುಂಬದವರು ತಮ್ಮನ್ನು ಕ್ರಮದ ಪಯನೀಯರ್ ಕೆಲಸದಲ್ಲಿ ಪ್ರತಿನಿಧಿಸಲು ಆಕೆಗೆ ಸಾಧ್ಯವಾಗುವಂತೆ ಆಕೆಯ ಹಣಕಾಸಿನ ಅಗತ್ಯಗಳೊಂದಿಗೆ ಸಹಾಯಮಾಡಲು ಸಿದ್ಧರಾದರು. ಆರ್ಥಿಕವಾಗಿ, ಯುಕ್ರೇನ್ನಲ್ಲಿ ವಿಷಯಗಳು ಸರಳವಾಗಿರುವುದಿಲ್ಲ. ಆದರೆ ಈರೀನಾ ಹೇಳುವುದು: “ಕೇವಲ ನನಗೆ ಮಾತ್ರ ಅಲ್ಲ, ನಾನು ಸಾರುವಂತಹವರಿಗೂ ಜೀವದ ಅರ್ಥದಲ್ಲಿರುವ ಒಂದು ಕೆಲಸವನ್ನು ನಾನು ಮಾಡುತ್ತಾ ಇದ್ದೇನೆಂದು ನನಗೆ ಗೊತ್ತಿದೆ.” ಬಹಳಷ್ಟು ಯುವ ಜನರು ಇಂದು ಈರೀನಾಳಂತೆ ಯೋಚಿಸುವುದನ್ನು ನೋಡುವುದು ನಿಜವಾಗಿಯೂ ಒಂದು ಹರ್ಷವಾಗಿದೆ. ‘ತಮ್ಮ ಯೌವನದ ದಿನಗಳಲ್ಲಿ ತಮ್ಮ ಮಹಾ ಸೃಷ್ಟಿಕರ್ತನನ್ನು ಸ್ಮರಿಸುವ’ ಇನ್ಯಾವ ಉತ್ತಮ ಮಾರ್ಗವು ಅವರಿಗಿದೆ?—ಪ್ರಸಂಗಿ 12:1.
16 ಪಯನೀಯರರಲ್ಲಿ ಹೆಚ್ಚಿನವರು ವೃದ್ಧರಾಗಿದ್ದಾರೆ. ಎರಡನೆಯ ಲೋಕ ಯುದ್ಧದ ಸಮಯದಲ್ಲಿ ತನ್ನ ತಂದೆ ಮತ್ತು ಸಹೋದರನು ಯುದ್ಧದಲ್ಲಿ ಹೋರಾಡಿದಾಗ ಕೊಲ್ಲಲ್ಪಟ್ಟರೆಂದೂ, ಮತ್ತು ಆಕೆಯ ತಾಯಿ ಮತ್ತು ಸಹೋದರಿಯು ಒಂದು ಗೆಟ್ಟೊ ವಾಸಸ್ಥಳದಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟರೆಂದೂ ಒಬ್ಬಾಕೆ ವರದಿಸುತ್ತಾಳೆ. ತದನಂತರ ಆಕೆ ತನ್ನ ಮಗನನ್ನು ಕಳೆದುಕೊಂಡಳು. ಈಗ ಆಕೆಯ ಇಳಿವಯಸ್ಸಿನಲ್ಲಿ ಮತ್ತು ನ್ಯೂನ ಆರೋಗ್ಯವನ್ನು ಅನುಭವಿಸುತ್ತಿರುವಾಗ, ಯೆಹೋವನು ಆಕೆಗೆ ಕ್ರೈಸ್ತ ಸಭೆಯಲ್ಲಿ, ಆಕೆ ಕಳೆದುಕೊಂಡ ಕುಟುಂಬಕ್ಕಿಂತಲೂ ಹೆಚ್ಚು ದೊಡ್ಡದಾದ ಕುಟುಂಬವನ್ನು ಒದಗಿಸಿದ್ದಾನೆ. ಮತ್ತು ಒಬ್ಬ ಕ್ರಮದ ಪಯನೀಯರಳೋಪಾದಿ ಇತರರಿಗೆ ಸಹಾಯ ಮಾಡುವುದರಲ್ಲಿ ಆಕೆ ಆನಂದವನ್ನು ಕಂಡುಕೊಳ್ಳುತ್ತಾಳೆ.
17, 18. ನಮ್ಮಲ್ಲಿ ಪ್ರತಿಯೊಬ್ಬರು, ಪಯನೀಯರರಾಗಿರಲಿ ಇಲ್ಲದಿರಲಿ, ಪಯನೀಯರ್ ಆತ್ಮವನ್ನು ಹೇಗೆ ತೋರಿಸಸಾಧ್ಯವಿದೆ?
17 ನಿಶ್ಚಯವಾಗಿಯೂ, ಪ್ರತಿಯೊಬ್ಬರೂ ಪಯನೀಯರರಾಗಲು ಸಾಧ್ಯವಿಲ್ಲ. ಯೆಹೋವನು ನಮ್ಮ ಸಂಪೂರ್ಣ ದಶಾಂಶವನ್ನು, ನಾವು ಅರ್ಪಿಸಬಲ್ಲ ಅತ್ಯುತ್ತಮವಾದದ್ದನ್ನು—ನಮ್ಮ ಪ್ರತ್ಯೇಕ ವಿದ್ಯಮಾನದಲ್ಲಿ ಇದು ಏನೇ ಆಗಿರಲಿ—ಸ್ವೀಕರಿಸಲು ಸಂತೋಷಿಸುತ್ತಾನೆ. (ಮಲಾಕಿ 3:10) ಖಂಡಿತವಾಗಿಯೂ ನಾವೆಲ್ಲರೂ ಹುರುಪುಳ್ಳ ಈ ಪಯನೀಯರರ ಆತ್ಮವನ್ನು ಬೆಳೆಸಿಕೊಳ್ಳಬಲ್ಲೆವು ಮತ್ತು ಸುವಾರ್ತೆಯ ಸಾರುವಿಕೆಯನ್ನು ಮುಂದುವರಿಸಲು ನಮ್ಮ ಪರಿಸ್ಥಿತಿಗಳು ಅನುಮತಿಸುವುದನ್ನು ಮಾಡಬಲ್ಲೆವು.
18 ಉದಾಹರಣೆಗೆ, ಆಸ್ಟ್ರೇಲಿಯದಲ್ಲಿ, ಎಪ್ರಿಲ್ 16 ರಸ್ತೆಯ ಸಾಕ್ಷಿಕಾರ್ಯಕ್ಕಾಗಿ ವಿಶೇಷವಾದ ದಿನವಾಗಿ ಗೊತ್ತುಪಡಿಸಲಾಯಿತು. ಆ ತಿಂಗಳಿಗಾಗಿ 58,780ರ ಹೊಸ ಪ್ರಚಾರಕ ಉಚ್ಚಾಂಕದಿಂದ ವ್ಯಕ್ತವಾದಂತೆ, ಅದು ಪ್ರಚಾರಕರಿಂದ ಮತ್ತು ಪಯನೀಯರರಿಂದ—ಒಂದೇ ರೀತಿಯಲ್ಲಿ—ಚೆನ್ನಾಗಿ ಬೆಂಬಲಿಸಲ್ಪಟ್ಟಿತು. ಇನ್ನೂ ಹೆಚ್ಚಾಗಿ, ಅದೇ ತಿಂಗಳಿನಲ್ಲಿ ಕಳೆದ ವರ್ಷಕ್ಕಿಂತ 90,000 ಅಧಿಕ ಪತ್ರಿಕೆಗಳು ಹಂಚಲ್ಪಟ್ಟಿದ್ದವು. ಆ ವಿಶೇಷ ದಿನದಂದು, ಒಬ್ಬ ಸಹೋದರಿಯು ಒಬ್ಬ ಪುರುಷನಿಗೆ ಪತ್ರಿಕೆಗಳನ್ನು ನೀಡಿದಳು, ಮತ್ತು ಆಸಕ್ತಿಯನ್ನು ಅನುಸರಿಸಲು ಅವನ ಹೆಸರು ಮತ್ತು ವಿಳಾಸವನ್ನು ಬರೆದುಕೊಳ್ಳುವಾಗ, ಅವರು ಸಂಬಂಧಿಗಳೆಂದು ಆಕೆ ಕಂಡುಹಿಡಿದಳು! ಆ ಮನುಷ್ಯನು ಪ್ರಚಾರಕಳ ದೊಡ್ಡಮ್ಮನ ಮಗನಾಗಿದ್ದನು. ಅವರು ಒಬ್ಬರನ್ನೊಬ್ಬರು 30 ವರ್ಷಗಳ ವರೆಗೆ ನೋಡಿರಲಿಲ್ಲ. ಅದು ನಿಜವಾಗಿಯೂ ಕೆಲವು ಬಹಳ ಆನಂದಕರ ಪುನರ್ಭೇಟಿಗಳನ್ನು ಉಂಟುಮಾಡಿತು!
ಅಂತ್ಯದ ವರೆಗೆ ಸಮಗ್ರತೆಯನ್ನು ಕಾಪಾಡಿಕೊಳ್ಳಿ
19. ಯೆಹೋವನ ನೀತಿವಂತ ಜನಾಂಗವು ಅಂತ್ಯದ ವರೆಗೆ ಸಮಗ್ರತೆಯನ್ನು ಕಾಪಾಡುವುದು ಜರೂರಿನದ್ದು ಏಕೆ?
19 ಸೈತಾನನ ಲೋಕವು ಅದರ ಕೊನೆಯ ಹಂತದೊಳಗೆ ಪ್ರವೇಶಿಸಿದಂತೆ ದೇವರ ನೀತಿವಂತ ಜನಾಂಗದಲ್ಲಿರುವವರೆಲ್ಲರೂ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ಜರೂರಾಗಿದೆ. ಬೇಗನೆ, ಯೆಹೋವನ ಪವಿತ್ರ ಜನಾಂಗವು ಈ ಕರೆಯನ್ನು ಕೇಳುವುದು: “ನನ್ನ ಜನರೇ, ಬನ್ನಿರಿ, ನಿಮ್ಮ ನಿಮ್ಮ ಕೋಣೆಗಳಲ್ಲಿ ಸೇರಿ ಬಾಗಿಲು ಮುಚ್ಚಿಕೊಳ್ಳಿರಿ; ದೈವರೋಷವು ತೀರುವ ತನಕ ಒಂದು ಕ್ಷಣ ಅವಿತುಕೊಳ್ಳಿರಿ.” ರಕ್ತಾಪರಾಧವುಳ್ಳ ಈ ಲೋಕವು ಖಂಡಿತವಾಗಿ ದೈವಿಕ ನ್ಯಾಯತೀರ್ಪನ್ನು ಎದುರಿಸುವುದು. “ಇಗೋ, ಯೆಹೋವನು ಭೂನಿವಾಸಿಗಳಿಗೆ ಅವರ ಪಾಪಫಲವನ್ನು ತಿನ್ನಿಸಬೇಕೆಂದು ತನ್ನ ಸ್ಥಳದಿಂದ ಹೊರಡುತ್ತಾನೆ; ಭೂಮಿಯು ತನ್ನಲ್ಲಿ ಇಂಗಿದ್ದ ರಕ್ತವನ್ನು ವ್ಯಕ್ತಿಗೊಳಿಸುವದು, ತನ್ನ ನಿವಾಸಿಗಳಲ್ಲಿ ಹತರಾಗಿದವ್ದರನ್ನು ಇನ್ನು ಮರೆಮಾಜದು.” (ಯೆಶಾಯ 26:20, 21) ಯೆಹೋವನ ನೀತಿವಂತ ಜನಾಂಗದೊಂದಿಗೆ ಜೊತೆಸೇರಿರುವ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಕ್ರೈಸ್ತರೋಪಾದಿ, ನಮ್ಮಲ್ಲಿ ಪ್ರತಿಯೊಬ್ಬರು ದೃಢವಾಗಿ ನಿಲ್ಲುವಂತಾಗಲಿ. ಆಗ ಕ್ರಿಸ್ತನ ರಾಜ್ಯದ ಐಹಿಕ ಅಥವಾ ಸ್ವರ್ಗೀಯ ಕ್ಷೇತ್ರದಲ್ಲಿ ಅನಂತಕಾಲದ ಜೀವಿತವನ್ನು ಪಡೆಯಲು ನಾವು ಹರ್ಷಿಸುವೆವು.
ನಿಮಗೆ ನೆನಪಿದೆಯೆ?
▫ “ನೀತಿವಂತ ಜನಾಂಗ”ವು ಯಾವಾಗ ಜನಿಸಿತು?
▫ ಈ ಕಡೇ ದಿನಗಳಲ್ಲಿ ದೇವರ ಜನರಿಗೆ ತಾಳ್ಮೆಯ ಅಗತ್ಯವಿದೆ ಏಕೆ?
▫ 1994ರ ಸೇವಾ ವರ್ಷದ ವರದಿಯಲ್ಲಿ ನೋಡಲಾದಂತೆ, ಪ್ರಚಾರಕರ ಉನ್ನತ ಸಂಖ್ಯೆಯಿಂದ ಮತ್ತು ಶುಶ್ರೂಷೆಯಲ್ಲಿ ವ್ಯಯಿಸಲಾದ ತಾಸುಗಳಿಂದ ಏನು ಪ್ರದರ್ಶಿಸಲ್ಪಡುತ್ತದೆ?
▫ ಈ ಲೋಕದ ಅಂತ್ಯವು ಸಮೀಪಿಸಿದಂತೆ ಕೂಟಗಳಲ್ಲಿ ಹಾಜರಿಯು ಅಷ್ಟು ಪ್ರಾಮುಖ್ಯವಾಗಿದೆ ಏಕೆ?
▫ ದೇವರ ನೀತಿವಂತ ಜನಾಂಗದೊಂದಿಗೆ ಜೊತೆಸೇರಿರುವ ಎಲ್ಲರು ಸಮಗ್ರತೆಯನ್ನು ಏಕೆ ಕಾಪಾಡಬೇಕು?
[ಪುಟ 12-15ರಲ್ಲಿರುವಚಿತ್ರ]
ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ 1994 ನೆಯ ಸೇವಾ ವರ್ಷದ ವರದಿ
(See volume)
[ಪುಟ 18 ರಲ್ಲಿರುವ ಚಿತ್ರ]
ಯೆಹೋವನ ನೀತಿವಂತ ಜನಾಂಗದಲ್ಲಿ ಸಮಗ್ರತೆಯನ್ನು ಕಾಪಾಡಿಕೊಳ್ಳುವವರು ಪರಿಪೂರ್ಣತೆಯಲ್ಲಿ ಅನಂತಕಾಲದ ಜೀವವನ್ನು ಪಡೆಯುವರು