ಬೈಬಲಿನಲ್ಲಿರುವ ರತ್ನಗಳು | ಯೆಶಾಯ 11-16
ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು
ಈ ಪ್ರವಾದನೆಯು ಇಸ್ರಾಯೇಲ್ಯರಿಗೆ ಹೇಗೆ ಅನ್ವಯಿಸಿತು
ಇಸ್ರಾಯೇಲ್ಯರು ಬಾಬೆಲಿನ ಬಂಧಿವಾಸದಿಂದ ಯೆರೂಸಲೇಮಿಗೆ ಹಿಂದಿರುಗಿ ಬರುವಾಗ ದಾರಿಯಲ್ಲಾಗಲಿ, ಪುನಸ್ಥಾಪನೆಯಾದ ತಮ್ಮ ಪಟ್ಟಣದಲ್ಲಾಗಲಿ ಕಾಡುಮೃಗಗಳಿಗೆ ಅಥವಾ ಕಾಡುಮೃಗಗಳಂಥ ಮನುಷ್ಯರಿಗೆ ಭಯಪಡುವ ಅಗತ್ಯವೇ ಇರಲಿಲ್ಲ.—ಎಜ್ರ 8:21, 22
ಈ ಪ್ರವಾದನೆ ನಮ್ಮ ದಿನಗಳಿಗೆ ಹೇಗೆ ಅನ್ವಯಿಸುತ್ತದೆ
ಯೆಹೋವನ ಜ್ಞಾನವು ಜನರ ವ್ಯಕ್ತಿತ್ವಗಳನ್ನು ಬದಲಾಯಿಸಿದೆ. ಈ ಹಿಂದೆ ಮೃಗಗಳಂತಿದ್ದ ಜನ ಈಗ ಶಾಂತಿಯಿಂದ ನಡೆದುಕೊಳ್ಳುತ್ತಿದ್ದಾರೆ. ದೇವರ ಜ್ಞಾನ ಇಂದು ಭೌಗೋಳಿಕವಾಗಿ ಆಧ್ಯಾತ್ಮಿಕ ಪರದೈಸನ್ನು ಸೃಷ್ಟಿಸಿದೆ
ಈ ಪ್ರವಾದನೆ ಮುಂದಿನ ದಿನಗಳಲ್ಲಿ ಹೇಗೆ ನೆರವೇರಲಿದೆ
ದೇವರ ಉದ್ದೇಶದಂತೆ ಇಡೀ ಭೂಮಿಯು ಭದ್ರತೆಯ, ಶಾಂತಿಯ ಪರದೈಸಾಗಿ ಬದಲಾಗಲಿದೆ. ಮಾನವರಾಗಲಿ, ಪ್ರಾಣಿಗಳಾಗಲಿ ಅಂತೂ ಯಾವ ಜೀವಿಯೇ ಆಗಲಿ ಏನೂ ಹಾನಿ ಮಾಡಲ್ಲ
ಪೌಲನು ದೇವರ ಜ್ಞಾನದಿಂದ ಬದಲಾದ
ಫರಿಸಾಯನಾಗಿದ್ದ ಸೌಲನು ಮೃಗದಂತೆ ವರ್ತಿಸಿದನು.—1ತಿಮೊ 1:13
ನಿಷ್ಕೃಷ್ಟ ಜ್ಞಾನ ಅವನ ವ್ಯಕ್ತಿತ್ವವನ್ನೇ ಬದಲಾಯಿಸಿತು.—ಕೊಲೊ 3:8-10