“ದೇವರ ವಾಕ್ಯವು ಸಜೇವವಗಾದ್ದು ಬಲವನ್ನು ಪ್ರಯೋಗಿಸುತದ್ತ”
1, 2. (ಎ)ಕ್ರೈಸ್ತರಾಗುವವರ ಜೀವನದಲ್ಲಿ ಯಾವುದು ಬದಲಾವಣೆಗಳನ್ನು ಮಾಡುತ್ತದೆ? (ಬಿ) ಬೈಬಲು ಒಬ್ಬನನ್ನು ಎಷ್ಟು ಆಳವಾಗಿ ಪ್ರಭಾವಿಸ ಬಲ್ಲದು?
ಅಪೊಸ್ತಲ ಪೌಲನು ರೋಮಿನಲ್ಲಿದ್ದ ಕ್ರೈಸ್ತ ಸಭೆಗೆ ಸಾ.ಶ. ಒಂದನೇ ಶತಮಾನದ ಮಧ್ಯಭಾಗದಲ್ಲಿ ಒಂದು ಪತ್ರ ಬರೆದನು. ಅದರಲ್ಲಿ ಅವನು, ಕ್ರೈಸ್ತರು ಬದಲಾವಣೆ ಹೊಂದಲು ಅವರಿಗಿದ್ದ ಆವಶ್ಯಕತೆಗಳನ್ನು ಎತ್ತಿ ತೋರಿಸಿದನು. ಅವನಂದದ್ದು: “ಈ ವಿಷಯ ವ್ಯವಸ್ಥೆಯಂತೆ ರೂಪಿಸಲ್ಪಡುವದನ್ನು ಬಿಟ್ಟು ಬಿಟ್ಟು ಉತ್ತಮವೂ ಸ್ವೀಕಾರ ಯೋಗ್ಯವೂ ಪರಿಪೂರ್ಣವೂ ಆದ ದೇವರ ಚಿತ್ತವೇನೆಂದು ನೀವೇ ದೃಢ ಪಡಿಸಿ ಕೊಳ್ಳುವಂತೆ ಮನಸ್ಸನ್ನು ನವೀಕರಿಸುವದರ ಮೂಲಕ ನಿಮ್ಮನ್ನು ರೂಪಾಂತರಿಸಿಕೊಳ್ಳಿರಿ.” (ರೋಮಾಪುರ 12:2, NW) ಹಾಗಾದರೆ ಯೇಸುವಿನ ಹಿಂಬಾಲಕರ ಯೋಚನಾ ವಿಧವನ್ನೇ ಬದಲಾಯಿಸಿ ಅವರನ್ನು ರೂಪಾಂತರಿಸುವುದು ಯಾವುದು? ಮೂಲವಾಗಿ ಹೇಳುವುದಾದರೆ, ಅದು ದೇವರ ವಾಕ್ಯವಾದ ಬೈಬಲಿನ ಶಕ್ತಿಯೇ.
2. ಬೈಬಲು ನಮ್ಮನ್ನು ಎಷ್ಟು ಆಳವಾಗಿ ಪ್ರಭಾವಿಸಬಲ್ಲದೆಂದು ತೋರಿಸುತ್ತಾ ಪೌಲನು ಬರೆದದ್ದು: “ದೇವರ ವಾಕ್ಯವು ಸಜೀವವಾಗಿದ್ದು ಬಲವನ್ನು ಪ್ರಯೋಗಿಸುತ್ತದೆ. ಮತ್ತು ಅದು ಯಾವ ಇಬ್ಬಾಯಿ ಕತ್ತಿಗಿಂತಲೂ ಹರಿತವಾಗಿದ್ದು ಆತ್ಮ ಮತ್ತು ಪ್ರಾಣವನ್ನು, ಕೀಲು ಮತ್ತು ಮಜ್ಜೆಯನ್ನು ವಿಭಾಗಿಸುವಷ್ಟೂ ಒಳಹೋಗುತ್ತದೆ. ಮತ್ತು ಅದು ಹೃದಯದ ಆಲೋಚನೆ ಮತ್ತು ಇಂಗಿತಗಳನ್ನು ವಿವೇಚಿಸಶಕ್ತವಾಗಿದೆ.” (ಇಬ್ರಿಯ 4:12, NW) ಹೌದು, ಜನರನ್ನು ಬದಲಾಯಿಸಬಲ್ಲ ಬೈಬಲಿನ ಈ ಅಸಾಮಾನ್ಯ ಶಕ್ತಿಯು ಅದು ಕೇವಲ ಮಾನವ ವಾಕ್ಯವಾಗಿರುವದಕ್ಕಿಂತಲೂ ಹೆಚ್ಚಿನದೆಂಬದಕ್ಕೆ ರುಜುವಾತಾಗಿದೆ.
3, 4. ಕ್ರೈಸ್ತರ ವ್ಯಕ್ತಿತ್ವಗಳು ಎಷ್ಟರ ಮಟ್ಟಿಗೆ ಬದಲಾವಣೆ ಹೊಂದುತ್ತವೆ?
3. ರೋಮಾಪುರ 12:2 ರಲ್ಲಿ ಇರುವ “ರೂಪಾಂತರಿಸುವುದು” ಎಂಬ ಪದವು ಮೆಟಮಾರ್ಫೋ ಎಂಬ ಗ್ರೀಕ್ ಪದದಿಂದ ಭಾಷಾಂತರಿಸಲ್ಪಟ್ಟಿದೆ. ಕಂಬಳಿ ಹುಳ ಹೇಗೆ ಪತಂಗವಾಗಿ ರೂಪಾಂತರ ಹೊಂದುತ್ತದೋ ಹಾಗೆ ಇದು ಪೂರ್ತಿ ಪರಿವರ್ತನೆಯನ್ನು ಸೂಚಿಸುತ್ತದೆ. ಇದು ಎಷ್ಟು ಪರಿಪೂರ್ಣವೆಂದರೆ ಅದು ವ್ಯಕ್ತಿತ್ವದ ಬದಲಾವಣೆ ಎಂದು ಬೈಬಲು ಹೇಳುತ್ತದೆ. ಇನ್ನೊಂದು ಬೈಬಲ್ ವಚನದಲ್ಲಿ ನಾವು ಓದುವುದು: “ಹಳೆಯ ವ್ಯಕ್ತಿತ್ವವನ್ನು ಅದರ ನಡೆವಳಿಕೆಗಳೊಂದಿಗೆ ತೆಗೆದುಹಾಕಿ, ಯಾವುದು ಸೃಪ್ಟಿಸಿದಾತನ ಬಿಂಬದಂತೆ ಸೂಕ್ಷ್ಮ ಪರಿಜ್ಞಾನದ ಮೂಲಕ ನೂತನವಾಗಿ ಮಾಡಲ್ಪಡುತ್ತಿದೆಯೋ ಆ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಿರಿ.”—ಕೊಲೊಸ್ಸೆ 3:9, 10, NW.
4. ಕೊರಿಂಥ ಸಭೆಗೆ ಬರೆಯುವಾಗ ಪೌಲನು ಒಂದನೆಯ ಶತಮಾನದಲ್ಲಿ ನಡೆದ ವ್ಯಕ್ತಿತ್ವ ಬದಲಾವಣೆಯ ವೈಶಾಲ್ಯವನ್ನು ತೋರಿಸಿದನು. ಅವನಂದದ್ದು: “ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು ಕಳ್ಳರು ಲೋಭಿಗಳು ಕುಡುಕರು ಬೈಯುವವರು ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ. ನಿಮ್ಮಲ್ಲಿ ಕೆಲವರು ಅಂಥವರಾಗಿದಿರ್ದಿ. . . . ಆದರೂ ತೊಳೆದುಕೊಂಡಿರಿ.” (1 ಕೊರಿಂಥ 6:9-11) ಹೌದು, ದುರಾಚಾರಿಗಳು, ಕಲಹಪ್ರಿಯರು, ಕಳ್ಳರು ಮತ್ತು ಕುಡುಕರು ಆದರ್ಶರೂಪದ ಕ್ರೈಸ್ತರಾಗಿ ರೂಪಾಂತರಗೊಂಡಿದ್ದರು.
ಇಂದು ವ್ಯಕ್ತಿತ್ವ ಪರಿವರ್ತನೆಗಳು
5, 6. ಒಬ್ಬ ಯುವಕನ ವ್ಯಕ್ತಿತ್ವ ಬೈಬಲಿನ ಶಕಿಯ್ತಿಂದ ಪೂರ್ತಿ ಪರಿವರ್ತನೆಯಾದದ್ದು ಹೇಗೆ?
5. ಇದೇ ರೀತಿಯ ವ್ಯಕ್ತಿತ್ವ ಬದಲಾವಣೆಗಳು ಇಂದು ಸಹ ಕಂಡುಬರುತ್ತವೆ. ದೃಷ್ಟಾಂತಕ್ಕೆ, ದಕ್ಷಿಣ ಅಮೆರಿಕದ ಒಬ್ಬ ಚಿಕ್ಕ ಹುಡುಗನು ಒಂಭತ್ತನೆಯ ವಯಸ್ಸಿನಲ್ಲಿ ಅನಾಥನಾದನು. ಹೆತ್ತವರ ಮಾರ್ಗದಶನವಿಲ್ಲದೆ ಬೆಳೆದ ಅವನಲ್ಲಿ ಕಠಿಣ ವ್ಯಕ್ತಿತ್ವ ಸಮಸ್ಯೆಗಳು ಬೆಳೆದು ಬಂದವು. ಅವನು ಹೇಳುವುದು: “18 ವಯಸ್ಸಿನೊಳಗೆ ನಾನು ಪೂರ್ತಿಯಾಗಿ ಅಮಲೌಷಧಿ ಚಟಕ್ಕೆ ಒಳಗಾಗಿ ಆ ಚಟವನ್ನು ಮುಂದುವರಿಸುವದಕ್ಕಾಗಿ ಕಳ್ಳತನ ಮಾಡಿ ಸೆರೆಮನೆಗೆ ಹೋಗಿದ್ದೆ.” ಆದರೆ ಅವನ ಅತ್ತೆ ಯೆಹೋವನ ಸಾಕ್ಷಿ ಆಗಿದುದ್ದರಿಂದ ಕ್ರಮೇಣ ಅವನಿಗೆ ಸಹಾಯ ಮಾಡಶಕ್ತಳಾದಳು.
6. ಆ ಯುವಕನು ಹೇಳುವದು: “ನನ್ನ ಅತ್ತೆ ನನ್ನೊಂದಿಗೆ ಬೈಬಲ್ ಅಧ್ಯಯನ ಪ್ರಾರಂಭಿಸಿದರು ಮತ್ತು ಏಳು ತಿಂಗಳ ಬಳಿಕ ನನಗೆ ಈ ಚಟವನ್ನು ಮುರಿಯ ಸಾಧ್ಯವಾಯಿತು.” ಇವನು ತನ್ನ ಹಿಂದಿನ ಒಡನಾಡಿಗಳನ್ನು ಸಹ ಬಿಟ್ಟು ಬಿಟ್ಟು ಯೆಹೋವನ ಸಾಕ್ಷಿಗಳ ಮಧ್ಯೆ ಹೊಸ ಮಿತ್ರರನ್ನು ಕಂಡುಕೊಂಡನು. ಅವನು ಮುಂದುವರಿಸುವುದು: “ಈ ಹೊಸ ಮಿತ್ರರು ನನ್ನ ನಿಯತಕ್ರಮದ ಬೈಬಲ್ ಅಧ್ಯಯನದೊಂದಿಗೆ ನಾನು ಪ್ರಗತಿಹೊಂದುವಂತೆ ಮತ್ತು ಕೊನೆಗೆ ದೇವರನ್ನು ಸೇವಿಸಲು ನಾನು ಸಮರ್ಪಿಸಿಕೊಳ್ಳುವಂತೆ ಸಾಧ್ಯಮಾಡಿದರು.” ಹೌದು, ಈ ಮಾಜಿ ಮಾದಕ ವ್ಯಸನಿ ಮತ್ತು ಈಗ ಕ್ರಿಯಾಶೀಲನಾದ ಶುದ್ಧಜೀವನ ನಡಿಸುವ ಕ್ರೈಸ್ತನು. ಹಾಗಾದರೆ ಈ ವಿಪರೀತ ವ್ಯಕ್ತಿತ್ವ ಬದಲಾವಣೆ ಹೇಗಾಯಿತು? ಬೈಬಲಿನ ಶಕ್ತಿಯ ಮೂಲಕವೇ.
7, 8. ಬೈಬಲಿನ ಸಹಾಯದಿಂದ ಒಂದು ಕಷ್ಟಕರವಾದ ವ್ಯಕ್ತಿತ್ವ ಸಮಸ್ಯೆಯು ಹೇಗೆ ಪರಿಹರಿಸಲ್ಪಟ್ಟಿತ್ತೆಂದು ವರ್ಣಿಸಿರಿ.
7. ಇನ್ನೊಂದು ದೃಷ್ಟಾಂತ ದಕ್ಷಿಣ ಯುರೋಪಿನಿಂದ ಬರುತ್ತದೆ. ಅಲ್ಲಿ ಒಬ್ಬ ಯುವಕನು ಕಷ್ಟಕರವಾದ ವ್ಯಕ್ತಿತ್ವ ಸಮಸ್ಯೆಯುಳ್ಳವನಾಗಿ ಬೆಳೆದನು. ಅವನು ಹಿಂಸಾತ್ಮಕವಾದ ಸಿಡುಕು ಸ್ವಭಾವದವನಾಗಿದ್ದನು. ಸದಾ ಜಗಳಗಳಲ್ಲಿ ಸಿಕ್ಕಿ ಕೊಳ್ಳುತ್ತಿದ್ದನು. ಒಂದು ಕುಟುಂಬ ವಾಗ್ವಾದದಲ್ಲಿ ಅವನು ತನ್ನ ತಂದೆಯನ್ನು ಹೊಡೆದು ನೆಲಕ್ಕುರುಳಿಸಿದ್ದನು! ಆದರೆ ಕೊನೆಗೆ ಅವನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನ ನಡಿಸಿ, ರೋಮಾಪುರ ಪುಸ್ತಕದಲ್ಲಿ “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡ ಬೇಡಿರಿ. . . . ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ. ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವುದನ್ನು ದೇವರಿಗೆ ಬಿಡಿರಿ” ಎಂಬ ದೇವರಾಜ್ಞೆಯನ್ನು ಗಮನಿಸಿದನು.—ರೋಮಾಪುರ 12:17-19.
8. ಈ ವಚನಗಳು ಅವನ ಬಲಹೀನತೆ ಎಷ್ಟು ಕೆಟ್ಟದ್ದೆಂದು ಅವನು ಗ್ರಹಿಸುವಂತೆ ಸಹಾಯ ಮಾಡಿದವು. ಬೈಬಲಿನ ಹೆಚ್ಚಿನ ಜ್ಞಾನವು ಅವನ ಮನಸ್ಸಾಕ್ಷಿಯನ್ನು ಶುದ್ಧೀಕರಿಸಿತು. ಇದು ತಕ್ಷಣ ರೇಗುವ ಸ್ವಭಾವವನ್ನು ಅವನು ಅಂಕೆಯಲಿಡ್ಲುವಂತೆ ಸಹಾಯ ನೀಡಿತು. ಒಮ್ಮೆ, ಅಧ್ಯಯನದಲ್ಲಿ ಅವನು ಸ್ವಲ್ಪ ಪ್ರಗತಿ ಹೊಂದಿದ್ದಾಗ ಒಬ್ಬ ಅಪರಿಚಿತನು ಅವನನ್ನು ನಿಂದಿಸಿದನು. ಆಗ ತನಗೆ ಸುಪರಿಚಿತವಾಗಿದ್ದ ಕೋಪ ಮೇಲೇರಿ ಬರುವ ಅನುಭವ ಈ ಯುವಕನಿಗಾಯಿತು. ಒಡನೆ ಇನ್ನೊಂದು ಅನಿಸಿಕೆ ಅಂದರೆ ನಾಚಿಕೆ ಅವನಿಗಾಯಿತು, ಮತ್ತು ಇದು ರೇಗನ್ನು ನಿಲ್ಲಿಸಿತು. ಅವನು ಆತ್ಮದ ಪ್ರಮುಖ ಫಲಗಳಲ್ಲಿ ಒಂದಾದ ಆತ್ಮ ನಿಯಂತ್ರಣವನ್ನು ಬೆಳೆಸಿದ್ದನು. (ಗಲಾತ್ಯ 5:22, 23) ದೇವರ ವಾಕ್ಯದ ಶಕ್ತಿಯ ಫಲವಾಗಿ ಈಗ ಅವನ ವ್ಯಕ್ತಿತ್ವ ಭಿನ್ನವಾಗಿದೆ.
9. ಪೌಲನಿಗನುಸಾರವಾಗಿ, ನಮ್ಮ ವ್ಯಕ್ತಿತ್ವವು ಯಾವ ಸಾಧನದ ಮೂಲಕ ಬದಲಾವಣೆ ಹೊಂದುತ್ತದೆ?
9. ಆದರೆ ಬೈಬಲು ಇಂಥ ಬಲಾಢ್ಯ ಪರಿಣಾಮವನ್ನು ಹೇಗೆ ಉತ್ಪಾದಿಸುತ್ತದೆ? ಪೌಲನು ಕೊಲೊಸ್ಸೆ 3:10ರಲ್ಲಿ, ನಮ್ಮ ವ್ಯಕ್ತಿತ್ವಗಳು ಸೂಕ್ಷ್ಮ ಪರಿಜ್ಞಾನದ ಮೂಲಕ ಬದಲಾವಣೆ ಹೊಂದುತ್ತದೆಂದು ಹೇಳಿದನು. ಮತ್ತು ಈ ಜ್ಞಾನ ಬೈಬಲಿನಲ್ಲಿದೆ. ಆದರೆ ಜ್ಞಾನ ಜನರನ್ನು ಬದಲಾಯಿಸುವುದು ಹೇಗೆ?
ಸೂಕ್ಷ್ಮ ಜ್ಞಾನದ ಪಾತ್ರ
10, 11. (ಎ)ನಾವು ಬೈಬಲನ್ನು ಅಭ್ಯಸಿಸುವಾಗ, ಅಪೇಕ್ಷಣೀಯ ಮತ್ತು ಅನಪೇಕ್ಷಣೀಯ ವ್ಯಕ್ತಿತ್ವ ಲಕ್ಷಣಗಳ ಕುರಿತು ಏನು ಕಲಿಯುತ್ತೇವೆ? (ಬಿ) ನಮ್ಮ ವ್ಯಕ್ತಿತ್ವವನ್ನು ಬದಲಾಯಿಸಲು ಜ್ಞಾನವಲ್ಲದೆ ಇನ್ನೇನು ಬೇಕು?
10. ಒಂದನೆಯದಾಗಿ, ಬೈಬಲು, ಕಳಚಿ ಹಾಕಬೇಕಾದ ಅನಪೇಕ್ಷಣೀಯ ವ್ಯಕ್ತಿತ್ವ ಲಕ್ಷಣಗಳನ್ನು ಗುರುತಿಸುತ್ತದೆ. ಇವುಗಳಲ್ಲಿ “ಹೆಮ್ಮೆಯ ಕಣ್ಣು, ಸುಳ್ಳಿನ ನಾಲಿಗೆ, ನಿರ್ದೋಷ ರಕ್ತವನ್ನು ಸುರಿಸುವ ಕೈ, ದುರಾಲೋಚನೆಗಳನ್ನು ಕಲ್ಪಿಸುವ ಹೃದಯ, ಕೇಡು ಮಾಡಲು ತರ್ವೆ ಪಡುವ ಕಾಲು, ಅಸತ್ಯವಾಡುವ ಸುಳ್ಳು ಸಾಕ್ಷಿ, ಒಡಹುಟ್ಟಿದವರಲ್ಲಿ ಜಗಳವನ್ನು ಬಿತ್ತುವವನು” ಇವೇ ಮೊದಲಾದವುಗಳು ಸೇರಿವೆ. (ಜ್ಞಾನೋಕ್ತಿ 6:16-19) ಎರಡನೆಯದಾಗಿ ಬೈಬಲು, ನಾವು ಬೆಳೆಸ ಬೇಕಾದ ಅಪೇಕ್ಷಣೀಯ ಗುಣಗಳನ್ನು, “ಪ್ರೀತಿ ಸಂತೋಷ ಸಮಾಧಾನ ದೀರ್ಘ ಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ” ಮುಂತಾದವುಗಳನ್ನು ವರ್ಣಿಸುತ್ತದೆ.—ಗಲಾತ್ಯ 5:22, 23.
11. ಇಂಥ ಸೂಕ್ಷ್ಮ ಜ್ಞಾನವು, ಒಬ್ಬ ಯಥಾರ್ಥವಂತನು ತನ್ನನ್ನು ಪರೀಕ್ಷಿಸಿಕೊಂಡು ಯಾವ ವ್ಯಕ್ತಿತ್ವ ಗುಣಗಳನ್ನು ತಾನು ಬೆಳೆಸಬೇಕು ಮತ್ತು ಯಾವದನ್ನು ಕಿತ್ತೊಗೆಯಲು ಕೆಲಸ ನಡಿಸಬೇಕು ಎಂದು ನೋಡುವಂತೆ ಸಹಾಯ ಮಾಡುತ್ತದೆ. (ಯಾಕೋಬ 1:25) ಆದರೂ ಇದೊಂದು ಆರಂಭವೇ. ಜ್ಞಾನ ಮಾತ್ರವಲ್ಲ ಪ್ರೇರಕ ಶಕ್ತಿಯೂ ಅಂದರೆ ಪರಿವರ್ತನೆಯನ್ನು ಬಯಸುವಂತೆ ಮಾಡುವ ಶಕ್ತಿಯೂ ಅವಶ್ಯವಾಗಿದೆ. ಇಲಿಯ್ಲೂ ಅವನಿಗೆ ಬೈಬಲಿನ ನಿಷ್ಕ್ರಷ್ಟ ಜ್ಞಾನ ಅಗತ್ಯ.
ಸಜ್ಜನನಾಗಿರಲು ಪ್ರೇರಣೆ
12. ದೇವರ ವ್ಯಕ್ತಿತ್ವದ ಜ್ಞಾನ, ನಾವು ಪರಿವರ್ತನೆ ಹೊಂದುವಂತೆ ಹೇಗೆ ಸಹಾಯ ಮಾಡುತ್ತದೆ?
12. ಅಪೇಕ್ಷಣೀಯ ನೂತನ ವ್ಯಕ್ತಿತ್ವ ಅದನ್ನು “ಸೃಷ್ಟಿದಾತನ ಬಿಂಬದಂತೆ” ರೂಪಿಸಲ್ಪಡುತ್ತದೆಂದು ಪೌಲನು ಹೇಳಿದನು. (ಕೊಲೊಸ್ಸೆಯವರಿಗೆ 3:10) ಹೀಗೆ ಕ್ರಿಸ್ತೀಯ ವ್ಯಕ್ತಿತ್ವ ದೇವರ ಸ್ವಂತ ವ್ಯಕ್ತಿತ್ವದ ಹೋಲಿಕೆ ಇರತಕ್ಕದ್ದು. (ಎಫೆಸದವರಿಗೆ 5:1) ದೇವರ ವ್ಯಕ್ತಿತ್ವವು ಬೈಬಲಿನ ಮೂಲಕ ನಮಗೆ ಪ್ರಕಟಿಸಲ್ಪಡುತ್ತದೆ. ಅಲ್ಲಿ ಮಾನವ ಸಂತತಿಯೊಂದಿಗೆ ಆತನ ವ್ಯವಹಾರವನ್ನು ನಾವು ನೋಡಿ, ಪ್ರೀತಿ, ದಯೆ, ಕರುಣೆ, ಒಳ್ಳೇತನ ಮತ್ತು ನೀತಿಗಳೇ ಮೊದಲಾದ ಆತನ ಶ್ರೇಷ್ಠ ಗುಣಗಳನ್ನು ನಾವು ಗಮನಿಸುತ್ತೇವೆ. ಇಂಥ ಜ್ಞಾನ ಒಬ್ಬ ಸಹೃದಯಿಯನ್ನು ಅವನು ದೇವರನ್ನು ಪ್ರೀತಿಸುವಂತೆ ಮತ್ತು ದೇವರು ಮೆಚ್ಚುವ ವ್ಯಕ್ತಿಯಾಗ ಬಯಸುವಂತೆ ಪ್ರೇರಿಸುತ್ತದೆ. (ಮತ್ತಾಯ 22:37) ಪ್ರೀತಿಸುವ ಮಕ್ಕಳಾದ ನಾವು ನಮ್ಮ ಸ್ವರ್ಗೀಯ ಪಿತನನ್ನು ಮೆಚ್ಚಿಸ ಬಯಸುವದರಿಂದ ನಮ್ಮ ಬಲಹೀನವಾದ ಅಪೂರ್ಣ ಸ್ಥಿತಿಯಲ್ಲಿ ಸಾಧ್ಯವಾಗುವಷ್ಟು ಆತನನ್ನು ಅನುಕರಿಸ ಪ್ರಯತ್ನಿಸುತ್ತೇವೆ.—ಎಫೆಸ 5:1.
13. ‘ನೀತಿಯನ್ನು ಪ್ರೀತಿಸಿ ನಿಯಮರಾಹಿತ್ಯವನ್ನು ದ್ವೇಷಿಸುವಂತೆ’ ಯಾವ ಜ್ಞಾನ ನಮಗೆ ಕಲಿಸುತ್ತದೆ?
13. ನಮ್ಮ ಪ್ರಚೋದನೆಯು, ಒಳ್ಳೆಯ ಮತ್ತು ಕೆಟ್ಟ ವ್ಯಕ್ತಿತ್ವದ ಲಕ್ಷಣಗಳು ಎಲ್ಲಿಗೆ ನಡಿಸುತ್ತವೆಂದು ಬೈಬಲು ನೀಡುವ ಜ್ಞಾನದ ಮೂಲಕ ಬಲಗೊಳ್ಳುತ್ತದೆ. (ಕೀರ್ತನೆ 14:1-5; 15:1-5; 18:20, 24) ದಿವ್ಯಭಕ್ತಿ ಮತ್ತು ನೀತಿಪ್ರೀತಿಯ ಕಾರಣ ದಾವೀದನು ಆಶೀರ್ವದಿಸಲ್ಪಟ್ಟನೆಂದೂ ಆತ್ಮ ನಿಯಂತ್ರಣ ಕಳ ಕೊಂಡಾಗ ಕಷ್ಟವನ್ನು ಅನುಭವಿಸಿದನೆಂದೂ ನಾವು ಕಲಿಯುತ್ತೇವೆ. ವೃದ್ಧಾಪ್ಯದಲ್ಲಿ ಸೊಲೊಮೋನನ ಉತ್ತಮ ಗುಣಗಳು ಭ್ರಷ್ಟವಾದಾಗ ಒಂದು ಶೋಚನೀಯ ಫಲಿತಾಂಶವನ್ನು ನಾವು ನೋಡುತ್ತೇವೆ. ಯೋಷೀಯ ಮತ್ತು ಹಿಜ್ಕೀಯರ ಪ್ರಾಮಾಣಿಕತೆಯ ಫಲವಾಗಿ ಬಂದ ಆಶೀರ್ವಾದಗಳಿಗೆ ವ್ಯತಿರಿಕ್ತವಾಗಿ ಆಹಾಬನ ಬಲಹೀನತೆ ಮತ್ತು ಮನಸ್ಸೆಯ ಹಟಮಾರಿತನದ ಧರ್ಮಭ್ರಷ್ಟತೆಯ ಫಲಿತಾಂಶವಾಗಿ ಬಂದ ವಿಪತ್ಕಾರಕ ಫಲವು ತೋರಿಸಲ್ಪಡುತ್ತದೆ. (ಗಲಾತ್ಯ 6:7) ಹೀಗೆ, ನಾವು ‘ನೀತಿಯನ್ನು ಪ್ರೀತಿಸಿ ನಿಯಮರಾಹಿತ್ಯವನ್ನು ದ್ವೇಷಿಸಲು’ ಕಲಿಯುತ್ತೇವೆ.—ಇಬ್ರಿಯರಿಗೆ 1:9; ಕೀರ್ತನೆ 45:7; 97:10.
14. ಜಗತ್ತಿಗೆ ಮತ್ತು ಅದರಲ್ಲಿರುವ ವ್ಯಕ್ತಿಗಳಿಗೆ ಯೆಹೋವನ ಉದ್ದೇಶಗಳೇನು?
14. ಈ ಪ್ರೇರಕ ಶಕ್ತಿಯು ದೇವರ ಉದ್ದೇಶಗಳ ಸೂಕ್ಷ್ಮ ಜ್ಞಾನದ ಮೂಲಕ ಇನ್ನೂ ಹೆಚ್ಚು ಬಲಹೊಂದುತ್ತದೆ. ಇಂಥ ಜ್ಞಾನವು ನಮ್ಮ ‘ಮನಸ್ಸನ್ನು ಚೋದಿಸುವ ಶಕ್ತಿಯನ್ನು’ ನಮ್ಮ ಆಲೋಚನೆ ಮತ್ತು ಕ್ರಿಯೆಯನ್ನು ಪ್ರಚೋದಿಸುವ ಶಕ್ತಿಯನ್ನು ಬದಲಾಯಿಸಲು ಸಹಾಯ ಮಾಡುತ್ತದೆ. (ಎಫೆಸದವರಿಗೆ 4:23, 24) ನಾವು ಬೈಬಲನ್ನು ಅಭ್ಯಾಸಿಸುವಾಗ ದೇವರು ದುಷ್ಟತ್ವವನ್ನು ಸದಾ ಕಾಲ ಸಹಿಸಿ ಕೊಳ್ಳನೆಂದು ತಿಳಿಯುತ್ತೇವೆ. ಶೀಘ್ರವೇ, ಆತನು ಈ ಅನೀತಿಯ ಜಗತ್ತನ್ನು ನಾಶಗೊಳಿಸಿ ‘ನೀತಿ ವಾಸವಾಗಿರುವ ನೂತನಾಕಾಶ ಮತ್ತು ಭೂಮಂಡಲವನ್ನು’ ಸ್ಥಾಪಿಸುವನು. (2 ಪೇತ್ರ 3:8-10, 13) ಈ ಹೊಸ ಜಗತ್ತಿನಲ್ಲಿ ಯಾರು ವಾಸಿಸುವರು? “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿ ಇರುವರು; ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.”—ಜ್ಞಾನೋಕ್ತಿ 2:21, 22.
15. ಯೆಹೋವನ ಉದ್ದೇಶಗಳ ಕುರಿತು ಬೈಬಲು ಹೇಳುವುದನ್ನು ನಾವು ನಿಜವಾಗಿ ನಂಬುವವರಾದರೆ, ವ್ಯಕ್ತಿಗಳಾದ ನಮ್ಮ ಮೇಲೆ ಅದು ಹೇಗೆ ಪರಿಣಾಮ ಬೀರುವುದು?
15. ನಾವು ನಿಜವಾಗಿಯೂ ಈ ವಾಗ್ದಾನವನ್ನು ನಂಬುವಲ್ಲಿ ನಮ್ಮ ಪೂರಾ ಯೋಚನಾ ವಿಧವೇ ಪ್ರಭಾವಿತವಾಗುವುದು. ದುಷ್ಟತನದ ನಾಶದ ಕುರಿತು ಪ್ರವಾದಿಸಿದ ಬಳಿಕ ಅಪೊಸ್ತಲ ಪೇತ್ರನು ಹೇಳುವುದು: “ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದರಿಂದ ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ.” (2 ಪೇತ್ರ 3:11, 12) ಯಥಾರ್ಥವಂತರ ಮಧ್ಯೆ ಇರಲು ನಮಗಿರುವ ಬಲವಾದ ಬಯಕೆಯ ಮೂಲಕ ನಮ್ಮ ವ್ಯಕ್ತಿತ್ವಗಳು ರೂಪಿಸಲ್ಪಡಬೇಕು. ದುಷ್ಟರು ನಾಶವಾಗುವಾಗ ಉಳಿಯುವವರು ಇವರೇ.
16. ಹೊಸಲೋಕದಲ್ಲಿ ಯಾವ ವಿಧದ ವ್ಯಕ್ತಿಗಳಿಗೆ ಸ್ಥಳವಿಲ್ಲ, ಮತ್ತು ಈ ಜ್ಞಾನ ನಮ್ಮ ಮೇಲೆ ಹೇಗೆ ಪರಿಣಾಮ ಬೀರಬೇಕು?
16. ಪ್ರಕಟನೆ ಪುಸ್ತಕವು ಯಥಾರ್ಥವಂತರಿಗೆ, ಲೋಕಾಂತ್ಯದ ಬಳಿಕ, “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿ ಬಿಡುವನು. ಇನ್ನು ಮರಣವಿರುವದಿಲ್ಲ; ಇನ್ನು ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು” ಎಂಬ ವಾಗ್ದಾನವನ್ನು ನೀಡುತ್ತದೆ. ಆದರೆ ಆ ಬಳಿಕ ಅದು, “ಹೇಡಿಗಳು, ನಂಬಿಕೆಯಿಲ್ಲದವರು, ಅಸಹ್ಯವಾದದರಲ್ಲಿ ಸೇರಿರುವವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹ ಆರಾಧಕರು, ಎಲ್ಲಾ ಸುಳ್ಳುಗಾರರು” ತಳ್ಳಿಹಾಕಲ್ಪಡುವರೆಂದೂ ಎಚ್ಚರಿಕೆ ನೀಡುತ್ತದೆ. (ಪ್ರಕಟನೆ 21:4, 8) ದೇವರು ನೂತನ ಲೋಕದಲ್ಲಿ ಅನುಮತಿಸದ ಅನಪೇಕ್ಷಣೀಯ ಗುಣಗಳನ್ನು ತಪ್ಪಿಸುವುದು ಎಷ್ಟು ವಿವೇಕಪೂರ್ಣ!
ಹೊರಗಿನಿಂದ ಸಹಾಯ
17. ನಾವು ಯಾವ ವಿಧದ ಸಹಾಯವನ್ನು ಹುಡುಕಬೇಕೆಂದು ಬೈಬಲು ಬುದ್ಧಿ ಹೇಳುತ್ತದೆ?
17. ಆದರೂ, ಮಾನವರು ಬಲಹೀನರು ಮತ್ತು ಸಾಮಾನ್ಯವಾಗಿ, ಅವರು ಬದಲಾವಣೆ ಹೊಂದಬೇಕಾದರೆ ಸಮಾಚಾರ ಪ್ರಚೋದನೆಗಿಂತಲೂ ಹೆಚ್ಚಾದ ಯಾವುದೋ ಒಂದು ಬೇಕು. ಅವರಿಗೆ ವೈಯಕ್ತಿಕ ಸಹಾಯ ಅಗತ್ಯ. ಮತ್ತು ನಾವಿದನ್ನು ಎಲ್ಲಿ ಪಡೆಯಬಹುದೆಂದು ಬೈಬಲ್ ತೋರಿಸುತ್ತದೆ. ಉದಾಹರಣೆಗೆ ಅದು ಹೇಳುವದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು. ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋಕ್ತಿ 13:20) ಇದೇ ರೀತಿ, ನಾವು ಬೆಳೆಸಲು ಬಯಸುವ ಗುಣಗಳನ್ನು ಪ್ರದರ್ಶಿಸುವವರೊಂದಿಗೆ ಒಡನಾಟ ಮಾಡುವಲ್ಲಿ ನಾವೂ ಅವರಂತೆ ಆಗಲು ತುಂಬಾ ಸಹಾಯ ದೊರೆಯುವದು.—ಆದಿಕಾಂಡ 6:9; ಜ್ಞಾನೋಕ್ತಿ 2:20; 1 ಕೊರಿಂಥ 15:33.
18, 19. ದೇವರಾತ್ಮಕ್ಕೆ ನಮ್ಮ ಮನಸ್ಸು ಮತ್ತು ಹೃದಯವನ್ನು ತೆರೆದಿಡಲು ನಾವೇನು ಮಾಡುವುದು ಅವಶ್ಯ?
18. ಇದಲ್ಲದೆ, ಯೆಹೋವನು ತಾನೇ ಪವಿತ್ರಾತ್ಮದ ಮೂಲಕ, ಅಂದರೆ ಆದಿಕಾಲಗಳಲ್ಲಿ ಅದ್ಭುತಗಳನ್ನು ಮಾಡಲು ಯಾವ ಆತ್ಮವನ್ನು ಉಪಯೋಗಿಸಿದನೋ ಅದೇ ಆತ್ಮದ ಮೂಲಕ ಸಹಾಯವನ್ನು ಒದಗಿಸುತ್ತಾನೆ. ಹೌದು, ಅತ್ಯಪೇಕಿತ್ಷ ಗುಣಗಳಾದ, “ಪ್ರೀತಿ, ಸಂತೋಷ, ಸಮಾಧಾನ, ದೀರ್ಘ ಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಶಮೆದಮೆ” ಗಳನ್ನು “ದೇವರಾತ್ಮನಿಂದ ಉಂಟಾಗುವ ಫಲ” ವೆಂದು ಕರೆಯಲಾಗಿದೆ. (ಗಲಾತ್ಯ 5:22, 23) ನಾವು ಪವಿತ್ರಾತ್ಮದ ಸಹಾಯವನ್ನು ಹೇಗೆ ಪಡೆಯುತ್ತೇವೆ? ಬೈಬಲು ಪವಿತ್ರಾತ್ಮದಿಂದ ಪ್ರೇರಿಸಲ್ಪಟ್ಟಿರುವದರಿಂದ, ಅದನ್ನು ಓದುವಾಗ ಮತ್ತು ಅದರ ವಿಷಯ ಇತರರೊಂದಿಗೆ ಮಾತಾಡುವಾಗ ನಾವು ಆತ್ಮದ ಪ್ರೇರಿಸುವ ಬಲಕ್ಕೆ ನಮ್ಮ ಮನಸ್ಸು ಮತ್ತು ಹೃದಯವನ್ನು ತೆರೆಯುತ್ತೇವೆ. (2 ತಿಮೊಥಿ 3:16) ವಾಸ್ತವವಾಗಿ, ನಾವು ನಮ್ಮ ನಿರೀಕ್ಷೆಯ ಕುರಿತು ಇತರರಿಗೆ ಮಾತಾಡುವಾಗ ಆ ಆತ್ಮದ ನೇರವಾದ ಕಾರ್ಯನಡಿಸುವಿಕೆಯನ್ನು ಅನುಭವಿಸೇವು ಎಂದು ಯೇಸು ವಚನ ಕೊಟ್ಟನು.—ಮತ್ತಾಯ 10:18-20.
19. ಇದಲ್ಲದೆ, “ಬೇಸರಗೊಳ್ಳದೆ ಪ್ರಾರ್ಥನೆಮಾಡಿರಿ” ಎಂದು ಬೈಬಲು ಆಜ್ಞಾಪಿಸುತ್ತದೆ. (ರೋಮಾಪುರ 12:12) ಪ್ರಾರ್ಥನೆಯ ಮೂಲಕ ನಾವು ಯೆಹೋವನನ್ನು ಸಂಬೋಧಿಸಿ, ಸ್ತುತಿಸಿ, ಆತನಿಗೆ ಉಪಕಾರ ಹೇಳಿ ಸಹಾಯವನ್ನು ಕೇಳಿಕೊಳ್ಳುತ್ತೇವೆ. ಅನಪೇಕ್ಷಣೀಯ ವ್ಯಕ್ತಿತ್ವದ ಲಕ್ಷಣಗಳನ್ನು, ಅಂದರೆ ರೇಗುವ ಸ್ವಭಾವ, ಹಟಮಾರಿತನ, ಅಸಹನೆ ಅಥವಾ ಹೆಮ್ಮೆ ಮುಂತಾದವುಗಳನ್ನು ಜಯಿಸಲು ನಾವು ಸಹಾಯಕ್ಕಾಗಿ ಪ್ರಾರ್ಥಿಸುವಲ್ಲಿ, ಆ ಪ್ರಾರ್ಥನಾನುಸಾರ ನಾವು ಮಾಡುವ ಯಾವ ಪ್ರಯತ್ನವನ್ನೂ ದೇವರಾತ್ಮವು ಬೆಂಬಲಿಸುವುದು.—ಯೋಹಾನ 14:13, 14; ಯಾಕೋಬ 1:5; 1 ಯೋಹಾನ 5:14.
20. ಹೊಸ ವ್ಯಕ್ತಿತ್ವವನ್ನು ಧರಿಸಲು ಕ್ರೈಸ್ತರು ಕಾರ್ಯ ನಡಿಸುತ್ತಾ ಮುಂದರಿಯಬೇಕು ಏಕೆ?
20. ಪೌಲನು, “ಮನಸ್ಸನ್ನು ನವೀಕರಿಸುವುದರ ಮೂಲಕ ನಿಮ್ಮನ್ನು ರೂಪಾಂತರಗೊಳ್ಳಿರಿ” ಎಂದು ಬರೆದಾಗ ಅವನು ಬರೆದದ್ದು ದೀಕ್ಷಾಸ್ನಾತ ಅಭಿಷಿಕ್ತ ಕ್ರೈಸ್ತ ಸಭೆಗೆ. (ರೋಮಾಪುರ 1:7; 12:2) ಮತ್ತು ಮೂಲ ಗ್ರೀಕಿನಲ್ಲಿ, ಮುಂದುವರಿಯುತ್ತಿರುವ ಕ್ರಿಯೆಯನ್ನು ಸೂಚಿಸುವ ಕ್ರಿಯಾಪದದ ಒಂದು ರೂಪವನ್ನು ಅವನು ಉಪಯೋಗಿಸಿದನು. ಇದು, ಬೈಬಲಿನ ಸೂಕ್ಷ್ಮ ಜ್ಞಾನದಿಂದ ನಡೆಯುವ ರೂಪಾಂತರವು ಪ್ರಗತಿಪರ ಎಂದು ಸೂಚಿಸುತ್ತದೆ. ನಾವು ಇಂದು, ಪೌಲನ ದಿನಗಳ ಕ್ರೈಸ್ತರಂತೆಯೇ, ಭ್ರಷ್ಟ ಮಾಡುವ ಪ್ರಭಾವಗಳಿಂದ ತುಂಬಿದ ಲೋಕದಿಂದಸುತ್ತಲ್ಪಟ್ಟಿದ್ದೇವೆ. ಮತ್ತು ನಾವು ಅವರಂತೆಯೇ ಅಪೂರ್ಣರು, ಕೆಟ್ಟದ್ದನ್ನು ಮಾಡುವ ಪ್ರವೃತ್ತಿಯುಳ್ಳವರು. (ಆದಿಕಾಂಡ 8:21) ಆದುದರಿಂದ, ಅವರು ಮಾಡಿದಂತೆಯೇ ನಾವು ಸಹಾ ಸ್ವಾರ್ಥದ ಹಳೇ ವ್ಯಕ್ತಿತ್ವವನ್ನು ಹೋಗಲಾಡಿಸುವ ಮತ್ತು ನೂತನ ವ್ಯಕ್ತಿತ್ವವನ್ನು ಧರಿಸುವ ವಿಷಯದಲ್ಲಿ ಕೆಲಸ ನಡಿಸುತ್ತಾ ಮುಂದುವರಿಯ ಬೇಕು. ಆದಿ ಕ್ರೈಸ್ತರು ಇದರಲ್ಲಿ ಎಷ್ಟರ ಮಟ್ಟಿಗೆ ಸಾಫಲ್ಯ ಪಡೆದರೆಂದರೆ ಅವರ ಸುತ್ತಮುತ್ತಲ ಜಗತ್ತಿನಿಂದ ತೀರಾ ವಿಭಿನ್ನವಾಗಿ ಕಾಣಿಸಿ ಕೊಂಡರು. ಇಂದಿನ ಕ್ರೈಸ್ತರೂ ಹೀಗೆಯೇ.
“ಯೆಹೋವನಿಂದ ಶಿಕ್ಷಿತರಾದ” ಜನರು
21. ಈ ಕೊನೆಯ ದಿನಗಳಲ್ಲಿ ದೇವಜನರಲ್ಲಿ ನೆರವೇರುವ ಕೆಲವು ಪ್ರವಾದನೆಗಳಾವುವು?
21. ವಾಸ್ತವವಾಗಿ, ದೇವರಾತ್ಮವು ಇಂದು ವ್ಯಕ್ತಿಪರವಾಗಿ ಮಾತ್ರವಲ್ಲ, ಲಕ್ಷಾಂತರ ಮಂದಿ ಸೇರಿರುವ ಒಂದು ಇಡೀ ಕ್ರೈಸ್ತ ಸಂಘಟನೆಯ ಮೇಲೆ ಕಾರ್ಯ ನಡಿಸುತ್ತದೆ. ಈ ಸಭೆಯ ಮೇಲೆ ಯೆಶಾಯನ ಪ್ರವಾದನಾ ಮಾತುಗಳು ನೆರವೇರುತ್ತವೆ: “ಬಹು ಜನಾಂಗದವರು—ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು. ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು.” (ಯೆಶಾಯ 2:3) ಯೆಶಾಯನ ಇನ್ನೊಂದು ಪ್ರವಾದನೆಯೂ ಅವರಲ್ಲಿ ನೆರವೇರಿಯದೆ: “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವದು.” (ಯೆಶಾಯ 54:13) ಯೆಹೋವನಿಂದ ಶಿಕ್ಷಿತರಾಗುವ ಕಾರಣ ಶಾಂತಿಯನ್ನನುಭವಿಸುವ ಇವರ್ಯಾರು?
22. (ಎ)ಇಂದು ಯಾರು ಯೆಹೋವನಿಂದ ಶಿಕ್ಷಿತರಾಗುತ್ತಿದ್ದಾರೆ? (ಬಿ) ಯೆಹೋವನ ಸಾಕ್ಷಿಗಳು ಪ್ರತ್ಯೇಕರೆಂದು ಹೊರಗಿನವರು ಗುರುತಿಸುತ್ತಾರೆಂಬದಕ್ಕೆ ಉದಾಹರಣೆಗಳನ್ನು ಕೊಡಿರಿ.
22. ನ್ಯೂ ಹೇವನ್ ರಿಜಿಸ್ಟರ್ ಎಂಬ ಉತ್ತರ ಅಮೆರಿಕದ ಒಂದು ಪತ್ರಿಕೆಗೆ ಬರೆಯಲ್ಪಟ್ಟಿದ್ದ ಒಂದು ಪುಸ್ತಕದ ಅಂಶವನ್ನು ಗಮನಿಸಿರಿ: “ನನಗೆ ಅವರು ಮಾಡಿರುವಂತೆ ಅವರು ನಿಮ್ಮನ್ನು ತಮ್ಮ ಮತ ಪರಿವರ್ತನೆಯ ಕಾರ್ಯದಿಂದ ರೇಗಿಸಿರಬಹುದು ಅಥವಾ ಕೆರಳಿಸಿರಬಹುದು. ಆದರೆ ಅವರ ಅರ್ಪಣಾ ಮನಸ್ಸು, ಹಿತಕರಭಾವ, ಮಾನವ ನಡತೆಯ ಎದ್ದು ಕಾಣುವ ಮಾದರಿ ಮತ್ತು ಆರೋಗ್ಯಕರ ಜೀವನವನ್ನು ನೀವು ಪ್ರಶಂಸಿಸಲೇಬೇಕು.” ಈ ಲೇಖಕನು ಯಾರ ಕುರಿತು ಮಾತಾಡಿದನು? ಆರ್ಜೆಂಟೀನಾದ ಬ್ಯೂಎನೊಸ್ ಐರಿಸ್ನ ಹೆರಾಲ್ಡ್ ಪತ್ರಿಕೆ ಚರ್ಚಿಸಿದ ಗುಂಪನ್ನೇ. ಅದು ಹೇಳಿದ್ದು: “ಯೆಹೋವನ ಸಾಕ್ಷಿಗಳು ವರ್ಷಗಳಿಂದ ತಾವು ಕಷ್ಟ ಪಟ್ಟು ಕೆಲಸ ಮಾಡುವವರು ಎಂದೂ, ಗಂಭೀರ ಮನಸ್ಸಿನವರು ಎಂದೂ, ಮಿತವ್ಯಯಿಗಳು ಎಂದೂ, ದೇವರ ಭಯವುಳ್ಳ ಪೌರರು ಎಂದೂ ತೋರಿಸಿ ಕೊಟ್ಟಿದ್ದಾರೆ.” ಇದೇ ರೀತಿಯಾಗಿ, ಇಟೆಲಿಯ ಲಾ ಸ್ಟಾಂಪಾ ಪತ್ರಿಕೆ ಹೇಳಿದ್ದು: , ಅವರು ತೆರಿಗೆ ಕೊಡುವುದರಲ್ಲಿ ವಂಚಿಸುವುದಿಲ್ಲ ಅಥವಾ ಸ್ವಂತ ಲಾಭಕ್ಕಾಗಿ ಅನಾನುಕೂಲವಾಗಿರುವ ನಿಯಮಗಳಿಂದ ತಪ್ಪಿಸಿ ಕೊಳ್ಳುವದಿಲ್ಲ. ನೆರೆಯವನ ಪ್ರೀತಿ, ಅಧಿಕಾರ ನಿರಾಕರಣೆ, ಅಹಿಂಸೆ ಮತ್ತು ವ್ಯಕ್ತಿಪರ ಪ್ರಾಮಾಣಿಕತೆಯ ನೈತಿಕ ಆದರ್ಶಗಳು . . . ಅವರ ‘ದೈನಂದಿನ’ ಜೀವನಕ್ರಮವನ್ನು ಪ್ರವೇಶಿಸುತ್ತವೆ.”
23. ಯೆಹೋವನ ಸಾಕ್ಷಿಗಳು ಸಂಘಟನೆಯಾಗಿ ಭಿನ್ನರೆಂದು ಕಂಡು ಬರುವುದೇಕೆ?
23. ಯೆಹೋವನ ಸಾಕ್ಷಿಗಳು ಒಂದು ಗುಂಪಾಗಿ, ಆದಿ ಕ್ರೈಸ್ತರಂತೆ ವಿಭಿನ್ನರಾಗಿ ನಿಂತಿರುವುದೇಕೆ? ಅನೇಕ ಸಂಗತಿಗಳಲ್ಲಿ ಅವರು ಇತರ ಜನರಿಗೆ ಹೋಲುತ್ತಾರೆ. ಅವರು ಇತರರಂತೆ, ಮಾನವ ಅಪೂರ್ಣತೆಯಿಂದ ಹುಟ್ಟಿದ್ದಾರೆ. ಅವರಿಗೆ ಇತರರಿಗಿರುವ ಆರ್ಥಿಕ ಸಮಸ್ಯೆಗಳು ಮತ್ತು ಮೂಲಾವಶ್ಯಕತೆಗಳಿವೆ. ಆದರೂ ಲೋಕವ್ಯಾಪಕ ಸಭೆಯೋಪಾದಿ ಅವರು, ದೇವರ ವಾಕ್ಯ ತಮ್ಮ ಜೀವನದ ಮೇಲೆ ಬಲ ಪ್ರಯೋಗಿಸುವಂತೆ ಬಿಡುತ್ತಾರೆ. ಇದರ ಫಲವಾಗಿ ಅಸ್ತಿತ್ವದಲ್ಲಿ ಇರುವ ನೈಜ ಕ್ರೈಸ್ತರ ಅಂತರಾಷ್ಟ್ರೀಯ ಭ್ರಾತೃತ್ವವು ಬೈಬಲು ದೇವರ ಪ್ರೇರಿತ ವಾಕ್ಯವೆಂಬದಕ್ಕೆ ಬಲಾಢ್ಯವಾದ ಪುರಾವೆಯಾಗಿದೆ.—ಕೀರ್ತನೆ 133:1.
ಬೈಬಲು ಪ್ರೇರಿತವಾದದ್ದು
24. ಇನ್ನೂ ಅನೇಕ ಜನರ ಕುರಿತು ನಮ್ಮ ಪ್ರಾರ್ಥನೆ ಏನು?
24. ಈ ಎರಡು ಲೇಖನಗಳಲ್ಲಿ ಬೈಬಲು ಮನುಷ್ಯನದ್ದಲ್ಲ, ದೇವರ ವಾಕ್ಯವೆಂದು ತೋರಿಸಲು ಕೇವಲ ಎರಡು ಪ್ರಮಾಣ ಸರಣಿಗಳನ್ನು ಚರ್ಚಿಸಿದ್ದೇವೆ. ಬೈಬಲಿನ ಅಸಾದೃಶ್ಯ ವಿವೇಕವನ್ನು ಮತ್ತು ಜನರನ್ನು ಪರಿವರ್ತಿಸಲು ಅದಕ್ಕಿರುವ ಶಕ್ತಿಯನ್ನು ಅವರು ಪರಿಗಣಿಸಲಿ ಇಲ್ಲದಿರಲಿ, ಯಥಾರ್ಥವಂತರಾದ ಜನರು ಅದನ್ನು ದೇವರಿಂದ ಪ್ರೇರಿತವಾದದ್ದೆಂದು ಗ್ರಹಿಸಲು ತಪ್ಪರು. ಈ ಸತ್ಯವನ್ನು ಇನ್ನು ಅನೇಕರು ತಿಳಿಯಲಿ ಎಂಬದು ಕ್ರೈಸ್ತರಾಗಿರುವ ನಮ್ಮ ಪ್ರಾರ್ಥನೆ. ಆಗ ಅವರೂ ಕೀರ್ತನೆಗಾರನ ಈ ಹರ್ಷಕರವಾದ ಮಾತುಗಳನ್ನು ಪ್ರತಿಧ್ವನಿಸುವರು: “ಯೆಹೋವನೇ, ನೋಡು, ನಿನ್ನ ನೇಮಗಳು ನನಗೆ ಎಷ್ಟೋ ಪ್ರಿಯವಾಗಿವೆ; ನಿನ್ನ ಕೃಪಾನುಸಾರವಾಗಿ ನನ್ನನ್ನು ಚೈತನ್ಯಗೊಳಿಸು. ನಿನ್ನ ವಾಕ್ಯದ ಸಾರಾಂಶವು ಸತ್ಯವೇ. ನಿನ್ನ ನೀತಿವಿಧಿಗಳೆಲ್ಲಾ ಯುಗಯುಗಾಂತರಕ್ಕೂ ಇರುವವು.”—ಕೀರ್ತನೆ 119:159, 160. (w90 4/1)
ನಿಮಗೆ ನೆನಪಿದೆಯೇ?
◻ ಬೈಬಲು ನಿಜಕ್ರೈಸ್ತರ ಮೇಲೆ ಯಾವ ಪರಿಣಾಮ ಬೀರುತ್ತದೆ?
◻ ನಮ್ಮನ್ನು ರೂಪಾಂತರಿಸಲು ಸೂಕ್ಷ್ಮ ಜ್ಞಾನ ಹೇಗೆ ಸಹಾಯ ಮಾಡುತ್ತದೆ?
◻ ಉತ್ತಮ ಗುಣಗಳನ್ನು ಬೆಳೆಸಲು, ಕೆಟ್ಟವುಗಳನ್ನು ಹೋಗಲಾಡಿಸಲು ಬೇಕಾಗುವ ಪ್ರಚೋದನೆಗೆ ಬೈಬಲು ಹೇಗೆ ಸಹಾಯ ಮಾಡುತ್ತದೆ?
◻ ದಿವ್ಯಗುಣಗಳನ್ನು ಬೆಳೆಸಲು ಯಾವ ಸಹಾಯ ದೊರೆಯುತ್ತದೆ?
◻ ಬೈಬಲು ಪ್ರೇರಿತವೆಂಬದಕ್ಕೆ ಯಾವ ರುಜುವಾತು ಯೆಹೋವನ ಜನರಲ್ಲಿ ಕಾಣಸಿಗುತ್ತದೆ?
[ಪುಟ 25 ರಲ್ಲಿರುವ ಚಿತ್ರ]
ವೃದ್ಧಾಪ್ಯದಲ್ಲಿ ಸೊಲೊಮೋನನ ಅಪನಂಬಿಗಸ್ತಿಕೆಯ ದುಃಖಕರ ಪರಿಣಾಮವು ನಾವು ನೀತಿಯನ್ನು ಪ್ರೀತಿಸಿ ನಿಯಮರಾಹಿತ್ಯವನ್ನು ದ್ವೇಷಿಸುವಂತೆ ನಮ್ಮನ್ನು ಪ್ರೇರಿಸಬೇಕು
[ಪುಟ 27 ರಲ್ಲಿರುವ ಚಿತ್ರ]
ನಾವು ಸಹಾಯಕ್ಕಾಗಿ ಯೆಹೋವನನ್ನು ಕೇಳಿಕೊಳ್ಳುವಲ್ಲಿ, ಕೆಟ್ಟ ಗುಣಗಳನ್ನು ಹೋಗಲಾಡಿಸಲು ನಾವು ಮಾಡುವ ಪ್ರಯತ್ನಗಳನ್ನು ಆತನ ಆತ್ಮವು ಬೆಂಬಲಿಸುವುದು