ಬೈಬಲಿನಲ್ಲಿರುವ ರತ್ನಗಳು | ಯೆಶಾಯ 1-5
‘ಬನ್ನಿರಿ, ಯೆಹೋವನ ಪರ್ವತಕ್ಕೆ ಹೋಗೋಣ’
“ಅಂತ್ಯಕಾಲದಲ್ಲಿ” |
ನಾವು ಜೀವಿಸುತ್ತಿರುವ ಈ ಕಾಲ |
“ಯೆಹೋವನ ಮಂದಿರದ ಬೆಟ್ಟ” |
ಯೆಹೋವನ ಉನ್ನತಮಟ್ಟದ ಸತ್ಯಾರಾಧನೆ |
“ಸಕಲದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು” |
ಐಕ್ಯತೆಯಿಂದ ಸತ್ಯಾರಾಧನೆಯನ್ನು ಮಾಡಲು ಸೇರಿ ಬರುವವರು |
“ಬನ್ನಿರಿ, ಯೆಹೋವನ ಪರ್ವತಕ್ಕೆ ಹೋಗೋಣ” |
ಸತ್ಯಾರಾಧಕರು ತಮ್ಮೊಂದಿಗೆ ಸೇರಲು ಬೇರೆಯವರನ್ನು ಕರೆಯುತ್ತಾರೆ |
“ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು” |
ತನ್ನ ವಾಕ್ಯದ ಮೂಲಕ ಯೆಹೋವನು ನಮಗೆ ಬೋಧಿಸುತ್ತಾನೆ ಮತ್ತು ಆತನ ಮಾರ್ಗದಲ್ಲಿ ನಡೆಯಲು ಸಹಾಯ ಮಾಡುತ್ತಾನೆ |
“ಯುದ್ಧಾಭ್ಯಾಸವು ನಡೆಯುವುದೇ ಇಲ್ಲ” |
ಯುದ್ಧದ ಆಯುಧಗಳನ್ನು ವ್ಯವಸಾಯದ ಉಪಕರಣಗಳನ್ನಾಗಿ ಬದಲಾಯಿಸುವುದನ್ನು ಯೆಶಾಯ ವರ್ಣಿಸಿದ್ದಾನೆ. ಹೀಗೆ ದೇವಜನರು ಶಾಂತಿಯಿಂದ ಇರುತ್ತಾರೆಂದು ತೋರಿಸಿದ್ದಾನೆ. ಯೆಶಾಯನ ದಿನಗಳಲ್ಲಿ ಈ ಉಪಕರಣಗಳನ್ನು ಹೇಗೆ ಉಪಯೋಗಿಸುತ್ತಿದ್ದರು? |
“ಕತ್ತಿಗಳನ್ನು ಗುಳಗಳನ್ನಾಗಿ” |
1 ಗುಳ ನೆಲದ ಮೇಲ್ಮೈಯನ್ನು ಅಗೆಯುವ ಉಪಕರಣವಾಗಿತ್ತು. ಕೆಲವನ್ನು ಲೋಹದಿಂದ ಮಾಡುತ್ತಿದ್ದರು.—1ಸಮು 13:20 |
“ಬರ್ಜಿಗಳನ್ನು ಕುಡುಗೋಲುಗಳನ್ನಾಗಿ” |
2 ಕುಡುಗೋಲು ಎನ್ನುವುದು ಅರ್ಧ ಗೋಳಾಕಾರದ ಲೋಹದ ಕತ್ತಿ. ಇದಕ್ಕೊಂದು ಹಿಡಿ ಇರುತ್ತಿತ್ತು. ದ್ರಾಕ್ಷಾಗಿಡಗಳನ್ನು ಕತ್ತರಿಸಲು ಇವುಗಳನ್ನು ಉಪಯೋಗಿಸುತ್ತಿದ್ದರು.—ಯೆಶಾ 18:5 |