ಹರ್ಷಧ್ವನಿಗೈಯಲು ನಮಗೆ ಕಾರಣವಿದೆ
“ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿಹೋಗುವವು.”—ಯೆಶಾಯ 35:10.
1. ಇಂದು ಯಾರಿಗೆ ಹರ್ಷಿಸಲು ವಿಶೇಷ ಕಾರಣವಿದೆ?
ಈಗಿನ ದಿನಗಳಲ್ಲಿ ಕೊಂಚವೇ ಮಂದಿ ನಿಜ ಹರ್ಷವನ್ನು ಹೊಂದಿದ್ದಾರೆಂಬುದನ್ನು ನೀವು ಅವಲೋಕಿಸಿದ್ದಿರಬಹುದು. ಆದರೂ, ಸತ್ಯ ಕ್ರೈಸ್ತರೋಪಾದಿ, ಯೆಹೋವನ ಸಾಕ್ಷಿಗಳಿಗೆ ಹರ್ಷವಿದೆ. ಮತ್ತು ಅದೇ ಹರ್ಷವನ್ನು ಪಡೆಯುವ ಪ್ರತೀಕ್ಷೆಯು, ಸಾಕ್ಷಿಗಳೊಂದಿಗೆ ಸಹವಸಿಸುವ, ಇನ್ನೂ ಅಸ್ನಾತರಾದ ಹೆಚ್ಚಿನ ಲಕ್ಷಾಂತರ ಜನ—ಆಬಾಲವೃದ್ಧ—ರಿಗೆ ಸುಲಭವಾಗಿ ಲಭ್ಯವಿದೆ. ಈ ಮಾತುಗಳನ್ನು ನೀವು ಈ ಪತ್ರಿಕೆಯಲ್ಲಿ ಈಗ ಓದುತ್ತಿರುವ ಸಂಗತಿಯು, ಈ ಹರ್ಷವು ಈಗಾಗಲೇ ನಿಮ್ಮದಾಗಿದೆ ಅಥವಾ ನಿಮ್ಮ ಹಿಡಿತದೊಳಗಿದೆ ಎಂಬುದನ್ನು ಸೂಚಿಸುತ್ತದೆ.
2. ಒಬ್ಬ ಕ್ರೈಸ್ತನ ಹರ್ಷವು ಹೆಚ್ಚಿನ ಜನರ ಸಾಮಾನ್ಯ ಸ್ಥಿತಿಯೊಂದಿಗೆ ಹೇಗೆ ಭಿನ್ನವಾಗಿದೆ?
2 ತಮ್ಮ ಜೀವಿತಗಳಲ್ಲಿ ಯಾವುದೋ ವಿಷಯದ ಕೊರತೆಯಿದೆ ಎಂಬ ಅರಿವು ಹೆಚ್ಚಿನ ಜನರಿಗಿದೆ. ನಿಮ್ಮ ಕುರಿತಾಗಿ ಏನು? ನಿಶ್ಚಯವಾಗಿ, ನೀವು ಉಪಯೋಗಿಸಸಾಧ್ಯವಿರುವ ಪ್ರತಿಯೊಂದು ಪ್ರಾಪಂಚಿಕ ವಸ್ತುವನ್ನು, ಇಂದಿನ ಐಶ್ವರ್ಯವಂತರೂ ಶಕ್ತಿಶಾಲಿ ಜನರೂ ಹೊಂದಿರಬಹುದಾದ ಎಲ್ಲವನ್ನು ಖಂಡಿತವಾಗಿ ನೀವು ಹೊಂದದೆ ಇರಬಹುದು. ಮತ್ತು ಉತ್ತಮ ಆರೋಗ್ಯ ಹಾಗೂ ದೇಹಶಕ್ತಿಯ ವಿಷಯದಲ್ಲಿ ಹೆಚ್ಚನ್ನು ಹೊಂದಲು ನೀವು ಬಯಸಬಹುದು. ಆದರೂ, ಹರ್ಷದ ಸಂಬಂಧದಲ್ಲಿ ಭೂಮಿಯ ಕೋಟ್ಯಂತರ ಜನರಿಗಿಂತ ನೀವು ಐಶ್ವರ್ಯವಂತರೂ ಆರೋಗ್ಯವಂತರೂ ಆಗಿದ್ದೀರೆಂಬುದನ್ನು ಯಾವ ವಿರೋಧೋಕ್ತಿಗಳ ಭಯವಿಲ್ಲದೆ ಹೇಳಸಾಧ್ಯವಿದೆ. ಅದು ಹೇಗೆ?
3. ಯಾವ ಅರ್ಥಭರಿತ ಮಾತುಗಳು ನಮ್ಮ ಗಮನಕ್ಕೆ ಯೋಗ್ಯವಾಗಿವೆ, ಮತ್ತು ಏಕೆ?
3 ಯೇಸುವಿನ ಮಾತುಗಳನ್ನು ಜ್ಞಾಪಿಸಿಕೊಳ್ಳಿರಿ: “ನನ್ನಲ್ಲಿರುವ ಹರ್ಷವು ನಿಮ್ಮಲ್ಲಿಯೂ ಇರಬೇಕೆಂತಲೂ ನಿಮ್ಮ ಹರ್ಷವು ಸಂಪೂರ್ಣವಾಗಲಿ ಎಂತಲೂ ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ.” (ಯೋಹಾನ 15:11, NW) “ನಿಮ್ಮ ಹರ್ಷವು ಸಂಪೂರ್ಣವಾಗಲಿ.” ಎಂತಹ ಒಂದು ವರ್ಣನೆ! ಕ್ರೈಸ್ತ ಜೀವನ ರೀತಿಯ ಆಳವಾದ ಅಧ್ಯಯನವು, ನಮ್ಮ ಹರ್ಷವು ಸಂಪೂರ್ಣವಾಗಿ ಮಾಡಲ್ಪಡಲಿಕ್ಕಾಗಿರುವ ಅನೇಕ ಕಾರಣಗಳನ್ನು ಪ್ರಕಟಿಸುವುದು. ಆದರೆ ಈಗ, ಯೆಶಾಯ 35:10ರಲ್ಲಿರುವ ಅರ್ಥಪೂರ್ಣ ಮಾತುಗಳನ್ನು ಗಮನಿಸಿರಿ. ಇವು ಅರ್ಥಪೂರ್ಣವಾಗಿವೆ ಏಕೆಂದರೆ ಅವು ಇಂದು ನಮಗೆ ತುಂಬ ಸಂಬಂಧಪಟ್ಟವುಗಳಾಗಿವೆ. ನಾವು ಓದುವುದು: “ಯೆಹೋವನು ವಿಮೋಚಿಸಿದವರು ಹಿಂದಿರುಗಿ ಶಾಶ್ವತಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು; ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿಹೋಗುವವು.”
4. ಯೆಶಾಯ 35:10ರಲ್ಲಿ ಯಾವ ಬಗೆಯ ಹರ್ಷವು ಉಲ್ಲೇಖಿಸಲ್ಪಟ್ಟಿದೆ, ಮತ್ತು ನಾವು ಇದಕ್ಕೆ ಗಮನಕೊಡಬೇಕು ಏಕೆ?
4 “ಶಾಶ್ವತಸಂತೋಷ.” “ಶಾಶ್ವತ” ಎಂಬ ವಾಕ್ಸರಣಿಯು, ಯೆಶಾಯನು ಹೀಬ್ರುವಿನಲ್ಲಿ ಬರೆದುದರ ನಿಷ್ಕೃಷ್ಟ ತರ್ಜುಮೆಯಾಗಿದೆ. ಆದರೆ, ಇತರ ಶಾಸ್ತ್ರವಚನಗಳ ಮೂಲಕ ತೋರಿಸಲ್ಪಟ್ಟಿರುವಂತೆ, ಈ ವಚನದಲ್ಲಿರುವ ಅರ್ಥವು “ಯುಗಯುಗಾಂತರ”ವಾಗಿದೆ. (ಕೀರ್ತನೆ 45:6; 90:2; ಯೆಶಾಯ 40:28) ಆದುದರಿಂದ ಸಂತೋಷಪಡುವಿಕೆಯು, ಅದಕ್ಕೆ ಅನುಮತಿ ನೀಡುವ—ಹೌದು, ಅನಂತಕಾಲದ ಸಂತೋಷಪಡುವಿಕೆಯನ್ನು ಸಮರ್ಥಿಸುವ ಪರಿಸ್ಥಿತಿಗಳಲ್ಲಿ ಅಂತ್ಯರಹಿತವಾಗಿರುವುದು. ಅದು ಆನಂದಕರವಾಗಿ ಧ್ವನಿಸುವುದಿಲ್ಲವೊ? ಆದರೂ, ಬಹುಶಃ ಆ ವಚನವು ಒಂದು ಸೈದ್ಧಾಂತಿಕ ಸನ್ನಿವೇಶದ ಮೇಲಿನ ಒಂದು ಹೇಳಿಕೆಯೋಪಾದಿ ನಿಮ್ಮನ್ನು ಪ್ರಭಾವಿಸುತ್ತದೆ: ‘ನನ್ನ ಅನುದಿನದ ಸಮಸ್ಯೆಗಳು ಮತ್ತು ಚಿಂತೆಗಳು ನನ್ನನ್ನು ಒಳಗೊಳ್ಳುವಷ್ಟರ ಮಟ್ಟಿಗೆ ಅದು ನನ್ನನ್ನು ವಾಸ್ತವವಾಗಿ ಒಳಗೊಳ್ಳುವುದಿಲ್ಲ,’ ಎಂಬ ಅನಿಸಿಕೆ ನಿಮಗಾಗುವಂತೆ ಮಾಡಬಹುದು. ಆದರೆ ನಿಜತ್ವಗಳು ವಿರುದ್ಧವಾದದ್ದನ್ನು ರುಜುಪಡಿಸುತ್ತವೆ. ಯೆಶಾಯ 35:10ರಲ್ಲಿರುವ ಪ್ರವಾದನಾತ್ಮಕ ವಾಗ್ದಾನವು ಇಂದು ನಿಮಗಾಗಿ ಅರ್ಥವನ್ನು ಪಡೆದಿದೆ. ಹೇಗೆಂದು ಕಂಡುಹಿಡಿಯಲು, ಪೂರ್ವಾಪರದಲ್ಲಿನ ಪ್ರತಿಯೊಂದು ಭಾಗವನ್ನು ಗಮನಿಸುತ್ತಾ, ಈ ಸೊಗಸಾದ ಅಧ್ಯಾಯ, ಯೆಶಾಯ 35ನ್ನು ನಾವು ಪರೀಕ್ಷಿಸೋಣ. ನಾವು ಏನನ್ನು ಕಂಡುಕೊಳ್ಳುತ್ತೇವೊ ಅದನ್ನು ನೀವು ಆನಂದಿಸುವಿರಿ ಎಂಬ ಆಶ್ವಾಸನೆ ನಿಮಗಿರಲಿ.
ಸಂತೋಷಪಡಬೇಕಾಗಿದ್ದ ಜನರು
5. ಯಾವ ಪ್ರವಾದನಾತ್ಮಕ ಸನ್ನಿವೇಶದಲ್ಲಿ ಯೆಶಾಯ 35ನೆಯ ಅಧ್ಯಾಯದಲ್ಲಿರುವ ಪ್ರವಾದನೆಯು ಕಂಡುಕೊಳ್ಳಲ್ಪಟ್ಟಿದೆ?
5 ಒಂದು ಸಹಾಯದೋಪಾದಿ, ನಾವು ಹಿನ್ನೆಲೆಯನ್ನು, ಈ ಆಕರ್ಷಕ ಪ್ರವಾದನೆಗಾಗಿರುವ ಐತಿಹಾಸಿಕ ಸನ್ನಿವೇಶದ ಕಡೆಗೆ ನೋಡೋಣ. ಹೀಬ್ರು ಪ್ರವಾದಿಯಾದ ಯೆಶಾಯನು ಅದನ್ನು ಸರಿಸುಮಾರಾಗಿ ಸಾ.ಶ.ಪೂ. 732ರ ಸಮಯದಲ್ಲಿ ಬರೆದನು. ಅದು ಬಾಬೆಲಿನ ಸೇನೆಗಳು ಯೆರೂಸಲೇಮನ್ನು ನಾಶಮಾಡುವ ಅನೇಕ ದಶಕಗಳ ಮುಂಚೆಯಾಗಿತ್ತು. ಯೆಶಾಯ 34:1, 2 ಸೂಚಿಸುವಂತೆ, ಯೆಶಾಯ 34:6ರಲ್ಲಿ ಉಲ್ಲೇಖಿಸಲಾದ ಎದೋಮ್ನಂತಹ ರಾಷ್ಟ್ರಗಳ ಮೇಲೆ ಆತನು ಮುಯ್ಯಿಯನ್ನು ವ್ಯಕ್ತಪಡಿಸಲಿದ್ದನೆಂದು ದೇವರು ಮುಂತಿಳಿಸಿದ್ದನು. ಅದನ್ನು ಮಾಡಲು ಆತನು ಪ್ರಾಚೀನ ಬಾಬೆಲಿನವರನ್ನು ಉಪಯೋಗಿಸಿದನೆಂಬುದು ವ್ಯಕ್ತ. ತದ್ರೀತಿಯಲ್ಲಿ, ಯೆಹೂದ್ಯರು ಅವಿಶ್ವಾಸಿಗಳಾಗಿದ್ದ ಕಾರಣ, ಬಾಬೆಲಿನವರು ಯೆಹೂದವನ್ನು ನಿರ್ಜನಗೊಳಿಸುವಂತೆ ದೇವರು ಬಿಟ್ಟನು. ಪರಿಣಾಮವೇನು? ದೇವರ ಜನರು ಬಂದಿವಾಸದೊಳಗೆ ಒಯ್ಯಲ್ಪಟ್ಟರು ಮತ್ತು ಅವರ ಸ್ವದೇಶವು 70 ವರ್ಷಗಳ ಕಾಲ ನಿರ್ಜನವಾಗಿತ್ತು.—2 ಪೂರ್ವಕಾಲವೃತ್ತಾಂತ 36:15-21.
6. ಎದೋಮ್ಯರ ಮತ್ತು ಯೆಹೂದ್ಯರ ಮೇಲೆ ಬರಲಿದ್ದ ವಿಷಯದ ನಡುವೆ ಯಾವ ವ್ಯತ್ಯಾಸವಿದೆ?
6 ಹಾಗಿದ್ದರೂ, ಎದೋಮ್ಯರ ಮತ್ತು ಯೆಹೂದಿಗಳ ನಡುವೆ ಒಂದು ಗಮನಾರ್ಹವಾದ ವ್ಯತ್ಯಾಸವಿದೆ. ಎದೋಮ್ಯರ ಮೇಲಿನ ದೈವಿಕ ಪ್ರತೀಕಾರವು ಎಂದಿಗೂ ಕೊನೆಗೊಳ್ಳದಿರುವಂತಹದ್ದಾಗಿತ್ತು; ಕೊನೆಗೆ ಒಂದು ಜನಾಂಗದೋಪಾದಿ ಅವರು ಕಣ್ಮರೆಯಾದರು. ಹೌದು, ಪೆಟ್ರಾದ ಜಗದ್ವಿಖ್ಯಾತ ಅವಶಿಷ್ಟಗಳಂತಹ, ಎದೋಮ್ಯರು ಜೀವಿಸುತ್ತಿದ್ದ ಕ್ಷೇತ್ರದಲ್ಲಿನ ಬರಿದಾದ ಭಗ್ನಾವಶೇಷಗಳನ್ನು ನೀವು ಇನ್ನೂ ಸಂದರ್ಶಿಸಸಾಧ್ಯವಿದೆ. ಆದರೆ ಇಂದು, ‘ಎದೋಮ್ಯರು’ ಎಂಬುದಾಗಿ ಗುರುತಿಸಲ್ಪಡಸಾಧ್ಯವಿರುವ ರಾಷ್ಟ್ರವಾಗಲಿ ಜನಾಂಗವಾಗಲಿ ಅಲ್ಲಿರುವುದಿಲ್ಲ. ಇನ್ನೊಂದು ಕಡೆಯಲ್ಲಿ, ದೇಶವನ್ನು ಅನಂತಕಾಲಕ್ಕೆ ಹರ್ಷರಹಿತವಾಗಿ ಬಿಡುತ್ತಾ, ಬಾಬೆಲಿನವರಿಂದ ಗೈಯಲ್ಪಟ್ಟ ಯೆಹೂದದ ನಿರ್ಜನತೆಯು ಸದಾಕಾಲ ಬಾಳಲಿಕ್ಕಿತ್ತೋ?
7. ಬಾಬೆಲಿನಲ್ಲಿ ಸೆರೆವಾಸಿಗಳಾಗಿದ್ದ ಯೆಹೂದ್ಯರು ಯೆಶಾಯ 35ನೆಯ ಅಧ್ಯಾಯಕ್ಕೆ ಹೇಗೆ ಪ್ರತಿಕ್ರಿಯಿಸಿದ್ದಿರಬಹುದು?
7 ಇಲ್ಲಿ, ಯೆಶಾಯ 35ನೆಯ ಅಧ್ಯಾಯದಲ್ಲಿರುವ ಅದ್ಭುತ ಪ್ರವಾದನೆಗೆ ಉತ್ತೇಜನಕಾರಿ ಮಹತ್ವವಿದೆ. ಅದನ್ನು ಒಂದು ಪುನಸ್ಸ್ಥಾಪನಾ ಪ್ರವಾದನೆಯೆಂದು ಕರೆಯಬಹುದು, ಏಕೆಂದರೆ ಸಾ.ಶ.ಪೂ. 537ರಲ್ಲಿ ಯೆಹೂದ್ಯರು ತಮ್ಮ ಸ್ವದೇಶಕ್ಕೆ ಹಿಂದಿರುಗಿದಾಗ, ಅದು ತನ್ನ ಪ್ರಥಮ ನೆರವೇರಿಕೆಯನ್ನು ಕಂಡಿತು. ಬಾಬೆಲಿನಲ್ಲಿ ಸೆರೆವಾಸಿಗಳಾಗಿದ್ದ ಇಸ್ರಾಯೇಲ್ಯರಿಗೆ ತಮ್ಮ ಸ್ವದೇಶಕ್ಕೆ ಹಿಂದಿರುಗುವ ಸ್ವಾತಂತ್ರ್ಯ ಅನುಗ್ರಹಿಸಲ್ಪಟ್ಟಿತು. (ಎಜ್ರ 1:1-11) ಆದರೂ, ಅದು ಸಂಭವಿಸಿದ ವರೆಗೆ, ಈ ದೈವಿಕ ಪ್ರವಾದನೆಯನ್ನು ಪರಿಗಣಿಸಿದ, ಬಾಬೆಲಿನಲ್ಲಿ ಬಂದಿವಾಸಿಗಳಾಗಿದ್ದ ಯೆಹೂದ್ಯರು, ತಮ್ಮ ರಾಷ್ಟ್ರೀಯ ಸ್ವದೇಶವಾದ ಯೂದಾಯಕ್ಕೆ ಹಿಂದಿರುಗಿದಾಗ, ಅಲ್ಲಿ ತಾವು ಯಾವ ರೀತಿಯ ಪರಿಸ್ಥಿತಿಗಳನ್ನು ಕಂಡುಕೊಳ್ಳುವೆವೆಂದು ಕುತೂಹಲಪಟ್ಟಿದ್ದಿರಬಹುದು. ಮತ್ತು ತಾವೇ ಯಾವ ಪರಿಸ್ಥಿತಿಯಲ್ಲಿರಲಿದ್ದರು? ಉತ್ತರಗಳು, ಹರ್ಷಧ್ವನಿಗೈಯಲು ನಮಗೆ ನಿಜವಾಗಿಯೂ ಕಾರಣವಿದೆ ಎಂಬ ವಿಷಯಕ್ಕೆ ನೇರವಾಗಿ ಸಂಬಂಧಿಸಿವೆ. ನಾವು ನೋಡೋಣ.
8. ಬಾಬೆಲಿನಿಂದ ಹಿಂದಿರುಗಿದ ಮೇಲೆ ಯೆಹೂದ್ಯರು ಯಾವ ಪರಿಸ್ಥಿತಿಗಳನ್ನು ಕಂಡುಕೊಳ್ಳಲಿದ್ದರು? (ಹೋಲಿಸಿ ಯೆಹೆಜ್ಕೇಲ 19:3-6; ಹೋಶೇಯ 13:8.)
8 ತಾವು ತಮ್ಮ ಸ್ವದೇಶಕ್ಕೆ ಹಿಂದಿರುಗಸಾಧ್ಯವಿದೆ ಎಂದು ಯೆಹೂದ್ಯರು ಕೇಳಿದಾಗಲೂ, ಸನ್ನಿವೇಶವು ಖಂಡಿತವಾಗಿಯೂ ಅವರಿಗೆ ಆಶಾಜನಕವಾಗಿ ತೋರಿರದು. ಅವರ ದೇಶವು ಒಂದು ಇಡೀ ಜೀವಾವಧಿಗೆ, ಏಳು ದಶಕಗಳ ವರೆಗೆ ನಿರ್ಜನವಾಗಿತ್ತು. ದೇಶಕ್ಕೆ ಏನು ಸಂಭವಿಸಿತ್ತು? ವ್ಯವಸಾಯ ಮಾಡಲ್ಪಟ್ಟ ಯಾವುದೇ ಹೊಲಗಳು, ದ್ರಾಕ್ಷಿ ತೋಟಗಳು ಅಥವಾ ಹಣ್ಣು ತೋಟಗಳು ಪಾಳುನೆಲವಾಗಿದ್ದಿರಬಹುದು. ನೀರಾವರಿ ಉದ್ಯಾನವನಗಳು ಅಥವಾ ಬಯಲುಗಳು ಒಣ ಬಂಜರುನೆಲ ಅಥವಾ ಮರಳುಗಾಡಾಗಿ ಅವನತಿ ಹೊಂದಿದ್ದಿರಬಹುದು. (ಯೆಶಾಯ 24:1, 4; 33:9; ಯೆಹೆಜ್ಕೇಲ 6:14) ತುಂಬಿರುವ ಕಾಡು ಪ್ರಾಣಿಗಳ ಕುರಿತೂ ಯೋಚಿಸಿರಿ. ಇವು, ಸಿಂಹಗಳು ಮತ್ತು ಚಿರತೆಗಳಂತಹ ಮಾಂಸಾಹಾರಿ ಪ್ರಾಣಿಗಳನ್ನು ಒಳಗೂಡಿಸುವವು. (1 ಅರಸುಗಳು 13:24-28; 2 ಅರಸುಗಳು 17:25, 26; ಪರಮ ಗೀತ 4:8) ಪುರುಷ, ಸ್ತ್ರೀ, ಅಥವಾ ಮಗುವನ್ನು ಘಾಸಿಗೊಳಿಸುವ ಸಾಮರ್ಥ್ಯವಿದ್ದ ಕರಡಿಗಳನ್ನು ಅವರು ಲಕ್ಷಿಸದಿರಸಾಧ್ಯವಿರಲಿಲ್ಲ. (1 ಸಮುವೇಲ 17:34-37; 2 ಅರಸುಗಳು 2:24; ಜ್ಞಾನೋಕ್ತಿ 17:12) ಮತ್ತು ಮಂಡಲದ ಹಾವುಗಳು ಮತ್ತು ಇತರ ವಿಷಭರಿತ ಹಾವುಗಳು ಅಥವಾ ಚೇಳುಗಳ ಉಲ್ಲೇಖವು ಅನಾವಶ್ಯಕ. (ಆದಿಕಾಂಡ 49:17; ಧರ್ಮೋಪದೇಶಕಾಂಡ 32:33; ಯೋಬ 20:16; ಕೀರ್ತನೆ 58:4; 140:3; ಲೂಕ 10:19) ಸಾ.ಶ.ಪೂ. 537ರಲ್ಲಿ ಬಾಬೆಲಿನಿಂದ ಹಿಂದಿರುಗುತ್ತಿದ್ದ ಯೆಹೂದ್ಯರೊಂದಿಗೆ ನೀವು ಇರುತ್ತಿದ್ದರೆ, ಇಂತಹ ಒಂದು ಕ್ಷೇತ್ರದಲ್ಲಿ ನಡೆದಾಡಲು ನೀವು ಬಹುಶಃ ಹಿಂಜರಿಯುತ್ತಿದ್ದಿರಿ. ಅವರು ಆಗಮಿಸಿದಾಗ ಅದು ಪ್ರಮೋದವನವಾಗಿರಲಿಲ್ಲ.
9. ಯಾವ ಕಾರಣಕ್ಕಾಗಿ ಹಿಂದಿರುಗುವವರಿಗೆ ನಿರೀಕ್ಷೆ ಮತ್ತು ಭರವಸೆಗಾಗಿ ಆಧಾರವಿತ್ತು?
9 ಆದರೂ, ಸ್ವತಃ ಯೆಹೋವನು ತನ್ನ ಆರಾಧಕರನ್ನು ಮನೆಗೆ ನಡೆಸಿದ್ದನು ಮತ್ತು ಒಂದು ನಿರ್ಜನ ಸನ್ನಿವೇಶವನ್ನು ವಿಪರ್ಯಸ್ತ ಮಾಡುವ ಸಾಮರ್ಥ್ಯ ಆತನಿಗಿದೆ. ಸೃಷ್ಟಿಕರ್ತನ ವಿಷಯವಾಗಿ ನೀವು ಅದನ್ನು ನಂಬುವುದಿಲ್ಲವೊ? (ಯೋಬ 42:2; ಯೆರೆಮೀಯ 32:17, 21, 27, 37, 41) ಆದುದರಿಂದ ಹಿಂದಿರುಗುತ್ತಿದ್ದ ಯೆಹೂದ್ಯರಿಗಾಗಿ ಮತ್ತು ಅವರ ದೇಶಕ್ಕಾಗಿ ಆತನು ಏನನ್ನು ಮಾಡಲಿದ್ದನು—ಆತನು ಏನನ್ನು ಮಾಡಿದನು? ಆಧುನಿಕ ಸಮಯಗಳಲ್ಲಿರುವ ದೇವರ ಜನರಿಗಾಗಿ ಮತ್ತು ನಿಮ್ಮ ಸನ್ನಿವೇಶದ—ಸದ್ಯದ ಮತ್ತು ಭವಿಷ್ಯತ್ತಿನ—ಮೇಲೆ ಇದು ಯಾವ ಪ್ರಭಾವವನ್ನು ಹೊಂದಿದೆ? ಹಿಂದೆ ಆ ಸಮಯದಲ್ಲಿ ಏನು ಸಂಭವಿಸಿತ್ತೆಂಬುದನ್ನು ನಾವು ಪ್ರಥಮವಾಗಿ ನೋಡೋಣ.
ಬದಲಾದ ಸನ್ನಿವೇಶದ ವಿಷಯದಲ್ಲಿ ಹರ್ಷಭರಿತರು
10. ಯೆಶಾಯ 35:1, 2 ಯಾವ ಬದಲಾವಣೆಯನ್ನು ಮುಂತಿಳಿಸಿತು?
10 ಆ ಕರಾಳ ದೇಶಕ್ಕೆ ಯೆಹೂದ್ಯರು ಹಿಂದಿರುಗುವಂತೆ ಕೋರೆಷನು ಅನುಮತಿಸಿದಾಗ ಏನು ಸಂಭವಿಸಲಿಕ್ಕಿತ್ತು? ಯೆಶಾಯ 35:1, 2ರಲ್ಲಿರುವ ರೋಮಾಂಚಕಾರಿ ಪ್ರವಾದನೆಯನ್ನು ಓದಿರಿ: “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು. ಅದು ಸಮೃದ್ಧಿಯಾಗಿ ಹೂಬಿಟ್ಟು ಉತ್ಸಾಹಧ್ವನಿಮಾಡುವಷ್ಟು ಉಲ್ಲಾಸಿಸುವದು [“ಹರ್ಷ,” NW]; ಲೆಬನೋನಿನ ಮಹಿಮೆಯೂ ಕರ್ಮೆಲಿನ ಮತ್ತು ಶಾರೋನಿನ ವೈಭವವೂ ಅದಕ್ಕೆ ದೊರೆಯುವವು; ಇವೆಲ್ಲಾ ಯೆಹೋವನ ಮಹಿಮೆಯನ್ನೂ ನಮ್ಮ ದೇವರ ವೈಭವವನ್ನು ಕಾಣುವವು.”
11. ದೇಶದ ಯಾವ ಜ್ಞಾನವನ್ನು ಯೆಶಾಯನು ಉಪಯೋಗಿಸಿದನು?
11 ಬೈಬಲ್ ಸಮಯಗಳಲ್ಲಿ, ಲೆಬನೋನ್, ಕರ್ಮೆಲ್ ಮತ್ತು ಶಾರೋನ್ ಹಸುರಾದ ಸೌಂದರ್ಯಕ್ಕಾಗಿ ಹೆಸರುವಾಸಿಯಾಗಿದ್ದವು. (1 ಪೂರ್ವಕಾಲವೃತ್ತಾಂತ 5:16; 27:29; 2 ಪೂರ್ವಕಾಲವೃತ್ತಾಂತ 26:10; ಪರಮ ಗೀತ 2:1; 4:15; ಹೋಶೇಯ 14:5-7) ದೇವರ ಸಹಾಯದಿಂದ ರೂಪಾಂತರಗೊಂಡ ಆ ದೇಶವು ಹೇಗಿರುವುದೆಂದು ವರ್ಣಿಸಲು ಯೆಶಾಯನು ಆ ಉದಾಹರಣೆಗಳನ್ನು ಉಪಯೋಗಿಸಿದನು. ಆದರೆ ಇದು ಕೇವಲ ಮಣ್ಣಿನ ಮೇಲಾಗುವ ಪರಿಣಾಮವಾಗಿರಲಿತ್ತೊ? ಖಂಡಿತವಾಗಿಯೂ ಇಲ್ಲ!
12. ಯೆಶಾಯ 35ನೆಯ ಅಧ್ಯಾಯದಲ್ಲಿರುವ ಪ್ರವಾದನೆಯು ಜನರ ಮೇಲೆ ಕೇಂದ್ರೀಕರಿಸುತ್ತದೆ ಎಂದು ನಾವು ಏಕೆ ಹೇಳಸಾಧ್ಯವಿದೆ?
12 ದೇಶವು “ಉತ್ಸಾಹಧ್ವನಿಮಾಡುವಷ್ಟು ಹರ್ಷಿಸುವದು” ಎಂಬುದಾಗಿ ಯೆಶಾಯ 35:2 ಹೇಳುತ್ತದೆ. ಮಣ್ಣು ಮತ್ತು ಸಸ್ಯಗಳು ಅಕ್ಷರಾರ್ಥಕವಾಗಿ “ಉತ್ಸಾಹಧ್ವನಿ” ಮಾಡಲಿಲ್ಲವೆಂಬುದು ನಮಗೆ ತಿಳಿದಿದೆ. ಆದರೂ, ಫಲಶಕ್ತಿಯುಳ್ಳದ್ದೂ ಉತ್ಪನ್ನಕಾರಕವೂ ಆಗಿ ಪರಿಣಮಿಸಲಿಕ್ಕಾದ ಅವುಗಳ ರೂಪಾಂತರವು, ಆ ರೀತಿಯಾಗಿ ಜನರು ಭಾವಿಸುವಂತೆ ಮಾಡಸಾಧ್ಯವಿತ್ತು. (ಯಾಜಕಕಾಂಡ 23:37-40; ಧರ್ಮೋಪದೇಶಕಾಂಡ 16:15; ಕೀರ್ತನೆ 126:5, 6; ಯೆಶಾಯ 16:10; ಯೆರೆಮೀಯ 25:30; 48:33) ಸ್ವತಃ ದೇಶದಲ್ಲಿನ ಅಕ್ಷರಾರ್ಥಕ ಬದಲಾವಣೆಗಳು ಜನರಲ್ಲಿನ ಬದಲಾವಣೆಗಳಿಗೆ ಅನುರೂಪವಾಗಿರುವವು, ಏಕೆಂದರೆ ಜನರು ಈ ಪ್ರವಾದನೆಯ ಕೇಂದ್ರಬಿಂದುವಾಗಿದ್ದಾರೆ. ಆದಕಾರಣ, ಯೆಶಾಯನ ಮಾತುಗಳು ಪ್ರಧಾನವಾಗಿ ಹಿಂದಿರುಗುವ ಯೆಹೂದ್ಯರಲ್ಲಿನ ಬದಲಾವಣೆಗಳ ಮೇಲೆ, ವಿಶೇಷವಾಗಿ ಅವರ ಹರ್ಷದ ಮೇಲೆ ಕೇಂದ್ರೀಕರಿಸುತ್ತವೆಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಕಾರಣವಿದೆ.
13, 14. ಯೆಶಾಯ 35:3, 4 ಜನರಲ್ಲಿ ಯಾವ ಬದಲಾವಣೆಯನ್ನು ಮುಂತಿಳಿಸಿದವು?
13 ಅಂತೆಯೇ, ಬಾಬೆಲಿನಿಂದ ಯೆಹೂದ್ಯರ ಬಿಡುಗಡೆ ಮತ್ತು ಹಿಂದಿರುಗುವಿಕೆಯ ನಂತರ ಅದು ನೆರವೇರಿಕೆಯನ್ನು ಹೇಗೆ ಪಡೆಯಿತೆಂಬುದನ್ನು ನೋಡಲು, ಈ ಹುರಿದುಂಬಿಸುವ ಪ್ರವಾದನೆಯ ಹೆಚ್ಚಿನ ವಿಷಯವನ್ನು ನಾವು ಪರೀಕ್ಷಿಸೋಣ. ವಚನಗಳು 3 ಮತ್ತು 4ರಲ್ಲಿ, ಹಿಂದಿರುಗಿದವರಲ್ಲಿನ ಇತರ ಬದಲಾವಣೆಗಳ ಕುರಿತು ಯೆಶಾಯನು ಮಾತಾಡುತ್ತಾನೆ: “ಜೋಲುಬಿದ್ದ ಕೈಗಳನ್ನೂ ನಡುಗುವ ಮೊಣ ಕಾಲುಗಳನ್ನೂ ಬಲಗೊಳಿಸಿರಿ. ಭಯಭ್ರಾಂತಹೃದಯರಿಗೆ—ಬಲಗೊಳ್ಳಿರಿ, ಹೆದರಬೇಡಿರಿ; ಇಗೋ, ನಿಮ್ಮ ದೇವರು ಮುಯ್ಯಿತೀರಿಸುವದಕ್ಕೂ ದೈವಿಕ ಪ್ರತಿಫಲವನ್ನು ಕೊಡುವದಕ್ಕೂ ಬರುವನು; ತಾನೇ ಬಂದು ನಿಮ್ಮನ್ನು ರಕ್ಷಿಸುವನು ಎಂದು ಹೇಳಿರಿ.”
14 ನೆಲದ ನಿರ್ಜನ ಪರಿಸ್ಥಿತಿಯನ್ನು ವಿಪರ್ಯಸ್ತಗೊಳಿಸಸಾಧ್ಯವಿದ್ದ ನಮ್ಮ ದೇವರು ತನ್ನ ಆರಾಧಕರಲ್ಲಿ ಇಷ್ಟೊಂದು ಆಸಕ್ತನಾಗಿದ್ದಾನೆಂದು ಯೋಚಿಸುವುದು ಬಲವರ್ಧಕವಾಗಿಲ್ಲವೊ? ಬಂದಿವಾಸಿಗಳಾಗಿದ್ದ ಯೆಹೂದ್ಯರು ಬಲಹೀನರೆಂದು ಭಾವಿಸುವಂತೆ, ನಿರುತ್ಸಾಹಗೊಳ್ಳುವಂತೆ, ಅಥವಾ ಭವಿಷ್ಯತ್ತಿನ ಕುರಿತು ಕಳವಳಗೊಳ್ಳುವಂತೆ ಆತನು ಬಯಸಲಿಲ್ಲ. (ಇಬ್ರಿಯ 12:12) ಆ ಯೆಹೂದಿ ಬಂದಿವಾಸಿಗಳ ಪರಿಸ್ಥಿತಿಯ ಕುರಿತು ಯೋಚಿಸಿರಿ. ತಮ್ಮ ಭವಿಷ್ಯತ್ತಿನ ಕುರಿತು ದೇವರ ಪ್ರವಾದನೆಗಳಿಂದ ಅವರು ಪಡೆಯಸಾಧ್ಯವಿದ್ದ ನಿರೀಕ್ಷೆಯ ಹೊರತು, ಆಶಾವಾದಿಗಳಾಗಿರುವುದು ಅವರಿಗೆ ಕಷ್ಟಕರವಾಗಿದ್ದಿರಬಹುದು. ಚಲಿಸಲು ಮತ್ತು ಯೆಹೋವನನ್ನು ಸೇವಿಸುವುದರಲ್ಲಿ ಸಕ್ರಿಯರಾಗಿರಲು ಮುಕ್ತರಾಗಿರದೆ, ಅವರು ಒಂದು ಕತ್ತಲೆಗವಿಯಲ್ಲಿ ಇದ್ದಹಾಗಿತ್ತು. ಮುಂದೆ ಬೆಳಕೇ ಇಲ್ಲದಂತೆ ಅವರಿಗೆ ತೋರಿದ್ದಿರಬಹುದು.—ಧರ್ಮೋಪದೇಶಕಾಂಡ 28:29; ಯೆಶಾಯ 59:10.
15, 16. (ಎ) ಯೆಹೋವನು ಹಿಂದಿರುಗಿದವರಿಗಾಗಿ ಏನು ಮಾಡಿದನೆಂದು ನಾವು ಮುಕ್ತಾಯಗೊಳಿಸಬಹುದು? (ಬಿ) ಅದ್ಭುತಕರವಾದ ಶಾರೀರಿಕ ವಾಸಿಮಾಡುವಿಕೆಗಳನ್ನು ಹಿಂದಿರುಗಿದವರು ಏಕೆ ನಿರೀಕ್ಷಿಸದೆ ಇದ್ದಿರಬಹುದು, ಆದರೆ ಯೆಶಾಯ 35:5, 6ಕ್ಕೆ ಹೊಂದಿಕೆಯಲ್ಲಿ ದೇವರು ಏನು ಮಾಡಿದನು?
15 ಆದರೆ, ಮನೆಗೆ ಹಿಂದಿರುಗುವಂತೆ ಕೋರೆಷನು ಅವರನ್ನು ಬಿಡುಗಡೆಗೊಳಿಸುವಂತೆ ಯೆಹೋವನು ಮಾಡಿದಾಗ, ಅದು ಹೇಗೆ ಬದಲಾಯಿತು! ದೇವರು ಅಲ್ಲಿ ಹಿಂದಿರುಗುತ್ತಿದ್ದ ಯೆಹೂದ್ಯರ ಯಾವುದೇ ಕುರುಡು ಕಣ್ಣುಗಳನ್ನು ಅದ್ಭುತಕರವಾಗಿ ತೆರೆದ, ಯಾವುದೇ ಕಿವುಡರ ಕಿವಿಗಳನ್ನು ತೆರೆದ, ಅಥವಾ ಶಕ್ತಿಗುಂದಿದ ಇಲ್ಲವೆ ಕಳೆದುಕೊಂಡಿರುವ ಯಾವುದೇ ಅಂಗಗಳನ್ನು ವಾಸಿಮಾಡಿದನೆಂಬ ಬೈಬಲಿನ ಪ್ರಮಾಣವು ಇರುವುದಿಲ್ಲ. ಹಾಗಿದ್ದರೂ, ಬಹಳಷ್ಟು ಮಹೋನ್ನತವಾದ ಯಾವುದನ್ನೊ ಆತನು ನಿಜವಾಗಿಯೂ ಮಾಡಿದನು. ತಮ್ಮ ಪ್ರಿಯ ದೇಶದ ಬೆಳಕು ಮತ್ತು ಸ್ವಾತಂತ್ರ್ಯಕ್ಕೆ ಆತನು ಅವರನ್ನು ಪುನಸ್ಸ್ಥಾಪಿಸಿದನು.
16 ಇಂತಹ ಅದ್ಭುತಕರ ಶಾರೀರಿಕ ವಾಸಿಮಾಡುವಿಕೆಗಳನ್ನು ಯೆಹೋವನು ಮಾಡುವಂತೆ ಹಿಂದಿರುಗಿದವರು ನಿರೀಕ್ಷಿಸಿದರೆಂಬ ಯಾವ ಸೂಚನೆಯೂ ಇರುವುದಿಲ್ಲ. ದೇವರು ಇಸಾಕ, ಸಂಸೋನ, ಅಥವಾ ಏಲಿಯರೊಂದಿಗೆ ಹಾಗೆ ಮಾಡಿರಲಿಲ್ಲವೆಂಬುದನ್ನು ಅವರು ಗ್ರಹಿಸಿದ್ದಿರಬೇಕು. (ಆದಿಕಾಂಡ 27:1; ನ್ಯಾಯಸ್ಥಾಪಕರು 16:21, 26-30; 1 ಸಮುವೇಲ 3:2-8; 4:15) ಆದರೆ ಸಾಂಕೇತಿಕವಾಗಿ ತಮ್ಮ ಪರಿಸ್ಥಿತಿಯ ಒಂದು ದೈವಿಕ ವಿಪರ್ಯಸ್ತವನ್ನು ಅವರು ನಿರೀಕ್ಷಿಸಿದ್ದಲ್ಲಿ, ಅವರು ನಿರುತ್ಸಾಹಗೊಳ್ಳಲಿಲ್ಲ. ಖಂಡಿತವಾಗಿಯೂ ಒಂದು ಸಾಂಕೇತಿಕವಾದ ಅರ್ಥದಲ್ಲಿ, ವಚನಗಳು 5 ಮತ್ತು 6 ನಿಜವಾದ ನೆರವೇರಿಕೆಯನ್ನು ಕಂಡುಕೊಂಡವು. ಯೆಶಾಯನು ನಿಷ್ಕೃಷ್ಟವಾಗಿ ಮುಂತಿಳಿಸಿದ್ದು: “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.”
ದೇಶವನ್ನು ಒಂದು ಪ್ರಮೋದವನದಂತೆ ಮಾಡುವುದು
17. ಯಾವ ಭೌತಿಕ ಬದಲಾವಣೆಗಳನ್ನು ಯೆಹೋವನು ಸ್ಪಷ್ಟವಾಗಿ ತಂದನು?
17 ಯೆಶಾಯನು ವರ್ಣಿಸಲು ಮುಂದುವರಿದಂತಹ ಪರಿಸ್ಥಿತಿಗಳ ವಿಷಯದಲ್ಲಿ ಹರ್ಷಧ್ವನಿಗೈಯಲು, ಹಿಂದಿರುಗಿದ ಆ ಜನರಿಗೆ ಖಂಡಿತವಾಗಿಯೂ ಕಾರಣವಿದ್ದಿತು: “ಅರಣ್ಯದಲ್ಲಿ ಒರತೆಗಳು ಒಡೆಯುವವು, ಒಣನೆಲದಲ್ಲಿ ನದಿಗಳು ಹುಟ್ಟಿ ಹರಿಯುವವು. ಬೆಂಗಾಡು ಸರೋವರವಾಗುವದು; ಒಣನೆಲದಲ್ಲಿ ಬುಗ್ಗೆಗಳುಕ್ಕುವವು; ನರಿಗಳು ಮಲಗುತ್ತಿದ್ದ ಹಕ್ಕೆಯು ಆಪುಜಂಬುಗಳ ಪ್ರದೇಶವಾಗುವದು.” (ಯೆಶಾಯ 35:6ಬಿ, 7) ಇಂದು ಆ ಇಡೀ ಇಸ್ರಾಯೇಲಿನ ಸುತ್ತಲೂ ನಾವು ಅದನ್ನು ನೋಡದೆ ಇರಬಹುದಾದರೂ, ಯೂದಾಯವಾಗಿದ್ದ ಆ ಕ್ಷೇತ್ರವು ಒಮ್ಮೆ “ಒಂದು ಹುಲ್ಲುಗಾವಲಿನ ಪ್ರಮೋದವನ”ವಾಗಿತ್ತೆಂದು ಪ್ರಮಾಣವು ಸೂಚಿಸುತ್ತದೆ.a
18. ಹಿಂದಿರುಗಿದ ಯೆಹೂದ್ಯರು ದೇವರ ಆಶೀರ್ವಾದಗಳಿಗೆ ಹೇಗೆ ಪ್ರತಿಕ್ರಿಯಿಸಿದ್ದಿರಬಹುದು?
18 ಹರ್ಷದ ಕಾರಣಗಳ ವಿಷಯದಲ್ಲಾದರೊ, ವಾಗ್ದತ್ತ ದೇಶಕ್ಕೆ ಹಿಂದಿರುಗಿದಾಗ ಯೆಹೂದಿ ಉಳಿಕೆಯವರಿಗೆ ಹೇಗನಿಸಿದ್ದಿರಬೇಕೆಂಬುದನ್ನು ಯೋಚಿಸಿರಿ! ನರಿಗಳು ಮತ್ತು ಅಂತಹ ಇತರ ಪ್ರಾಣಿಗಳಿಂದ ತುಂಬಿದ್ದ ಪಾಳುನೆಲವನ್ನು ತೆಗೆದುಕೊಂಡು ಅದನ್ನು ರೂಪಾಂತರಗೊಳಿಸುವ ಅವಕಾಶ ಅವರಿಗಿತ್ತು. ವಿಶೇಷವಾಗಿ ದೇವರು ನಿಮ್ಮ ಪ್ರಯತ್ನಗಳನ್ನು ಆಶೀರ್ವದಿಸುತ್ತಿದ್ದಾನೆಂದು ನಿಮಗೆ ತಿಳಿದಿದ್ದರೆ, ಇಂತಹ ಪುನಸ್ಸ್ಥಾಪನಾ ಕೆಲಸವನ್ನು ಮಾಡುವುದರಲ್ಲಿ ನೀವು ಹರ್ಷವನ್ನು ಕಂಡುಕೊಂಡಿರಲಾರಿರೊ?
19. ಯಾವ ಅರ್ಥದಲ್ಲಿ ಬಾಬೆಲಿನ ಸೆರೆವಾಸದಿಂದ ಹಿಂದಿರುಗುವಿಕೆಯು ಸಾಪೇಕ್ಷಕವಾಗಿತ್ತು?
19 ಹಾಗಿದ್ದರೂ, ಬಾಬೆಲಿನಲ್ಲಿದ್ದ ಎಲ್ಲ ಯೆಹೂದಿ ಬಂದಿವಾಸಿಗಳು, ಆ ಹರ್ಷಕರ ರೂಪಾಂತರದಲ್ಲಿ ಭಾಗವಹಿಸಲು ಹಿಂದಿರುಗಸಾಧ್ಯವಿತ್ತು ಅಥವಾ ಹಿಂದಿರುಗಿದರೆಂದಲ್ಲ. ದೇವರು ಮಟ್ಟಗಳನ್ನು ಸ್ಥಾಪಿಸಿದನು. ಬಾಬೆಲಿನ ವಿಧರ್ಮಿ ಧಾರ್ಮಿಕ ಆಚರಣೆಗಳಿಂದ ಕಳಂಕಿತರಾದ ಯಾವನಿಗೂ ಹಿಂದಿರುಗುವ ಹಕ್ಕಿರಲಿಲ್ಲ. (ದಾನಿಯೇಲ 5:1, 4, 22, 23; ಯೆಶಾಯ 52:11) ಮೂರ್ಖತನದಿಂದ ಒಂದು ಅವಿವೇಕದ ಮಾರ್ಗಕ್ಕೆ ಅರ್ಪಿಸಿಕೊಂಡ ಯಾವುದೇ ವ್ಯಕ್ತಿಯು ಹಿಂದಿರುಗಸಾಧ್ಯವಿರಲಿಲ್ಲ. ಅಂತಹ ಎಲ್ಲ ವ್ಯಕ್ತಿಗಳು ಅನರ್ಹರಾಗಿದ್ದರು. ಇನ್ನೊಂದು ಕಡೆಯಲ್ಲಿ, ದೇವರ ಮಟ್ಟಗಳನ್ನು ಪೂರೈಸಿದವರು, ಯಾರನ್ನು ಒಂದು ಸಂಬಂಧಸೂಚಕ ಅರ್ಥದಲ್ಲಿ ಆತನು ಪವಿತ್ರರೆಂದು ವೀಕ್ಷಿಸಿದನೊ, ಅಂತಹವರು ಯೂದಾಯಕ್ಕೆ ಹಿಂದಿರುಗಸಾಧ್ಯವಿತ್ತು. ಅವರು ಪರಿಶುದ್ಧ ಮಾರ್ಗದಲ್ಲೊ ಎಂಬಂತೆ ಸಂಚರಿಸಸಾಧ್ಯವಿತ್ತು. ಅದನ್ನು ಯೆಶಾಯನು ವಚನ 8ರಲ್ಲಿ ಸ್ಪಷ್ಟಪಡಿಸಿದನು: “ಅಲ್ಲಿ ರಾಜಮಾರ್ಗವಿರುವದು, ಹೌದು [ಹೋಗಿಬರುವ] ದಾರಿ; ಅದು ಪರಿಶುದ್ಧ ಮಾರ್ಗ ಎನಿಸಿಕೊಳ್ಳುವದು; ಯಾವ ಅಶುದ್ಧನೂ ಅಲ್ಲಿ ನಡೆಯನು, ಅದು ದೇವಜನರಿಗಾಗಿಯೇ ಇರುವದು, ಅಲ್ಲಿ ಹೋಗುವ ಮೂಢನೂ ದಾರಿತಪ್ಪನು.”
20. ಯೆಹೂದ್ಯರು ಹಿಂದಿರುಗಿದಂತೆ ಯಾವುದರ ವಿಷಯವಾಗಿ ಭಯಪಡುವ ಅಗತ್ಯ ಅವರಿಗಿರಲಿಲ್ಲ, ಇದು ಯಾವುದರಲ್ಲಿ ಫಲಿಸಿತು?
20 ಹಿಂದಿರುಗುತ್ತಿದ್ದ ಯೆಹೂದ್ಯರು ಪಶುಸದೃಶ ಮನುಷ್ಯರಿಂದ ಅಥವಾ ಲೂಟಿ ಮಾಡುವವರಿಂದ ಯಾವ ಆಕ್ರಮಣದ ಕುರಿತೂ ಭಯಪಡುವ ಅಗತ್ಯವಿರಲಿಲ್ಲ. ಏಕೆ? ಏಕೆಂದರೆ ತನ್ನ ಪುನರ್ಕೊಳ್ಳಲ್ಪಟ್ಟ ಜನರ ಮಾರ್ಗದಲ್ಲಿ ಯೆಹೋವನು ಅಂತಹದನ್ನು ಅನುಮತಿಸಲಾರನು. ಆದುದರಿಂದ ಅವರು ಹರ್ಷಭರಿತ ಆಶಾವಾದಿತ್ವದೊಂದಿಗೆ—ಸಂತೋಷಕರ ಪ್ರತೀಕ್ಷೆಗಳೊಂದಿಗೆ—ಸಂಚರಿಸಸಾಧ್ಯವಿತ್ತು. ಈ ಪ್ರವಾದನೆಯನ್ನು ಮುಕ್ತಾಯಗೊಳಿಸುವುದರಲ್ಲಿ ಯೆಶಾಯನು ಅದನ್ನು ಹೇಗೆ ವರ್ಣಿಸಿದನೆಂಬುದನ್ನು ಗಮನಿಸಿರಿ: “ಸಿಂಹವು ಅಲ್ಲಿರದು, ಕ್ರೂರಜಂತು ಅಲ್ಲಿ ಸೇರದು, ಕಾಣುವದೇ ಇಲ್ಲ; ಬಿಡುಗಡೆಯಾದವರೇ ಅಲ್ಲಿ ನಡೆಯುವರು; ಯೆಹೋವನು ವಿಮೋಚಿಸಿದವರು ಹಿಂದಿರುಗಿ ಶಾಶ್ವತಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು; ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿಹೋಗುವವು.”—ಯೆಶಾಯ 35:9, 10.
21. ಈಗಾಗಲೇ ಸಂಭವಿಸಿರುವ ಯೆಶಾಯ 35ನೆಯ ಅಧ್ಯಾಯದ ನೆರವೇರಿಕೆಯನ್ನು ನಾವು ಹೇಗೆ ಪರಿಗಣಿಸಬೇಕು?
21 ಎಂತಹ ಒಂದು ಪ್ರವಾದನಾತ್ಮಕ ಚಿತ್ರವು ಇಲ್ಲಿ ನಮಗಿದೆ! ನಾವಾದರೊ, ಇದನ್ನು ಕೇವಲ ಗತಿಸಿದ ಇತಿಹಾಸದೊಂದಿಗೆ ವ್ಯವಹರಿಸುವ ವಿಷಯವಾಗಿ, ನಮ್ಮ ಸನ್ನಿವೇಶ ಅಥವಾ ನಮ್ಮ ಭವಿಷ್ಯತ್ತಿನೊಂದಿಗೆ ಯಾವ ಸಂಬಂಧವನ್ನೂ ಹೊಂದಿರದ ಒಂದು ಸುಂದರವಾದ ಕಥೆಯೊ ಎಂಬಂತೆ ವೀಕ್ಷಿಸಬಾರದು. ನಿಜತ್ವವು ಏನೆಂದರೆ, ಈ ಪ್ರವಾದನೆಯು ಇಂದು ದೇವರ ಜನರ ಮಧ್ಯದಲ್ಲಿ ವಿಸ್ಮಯಕರವಾದೊಂದು ನೆರವೇರಿಕೆಯನ್ನು ಕಂಡುಕೊಳ್ಳುತ್ತದೆ, ಆದುದರಿಂದ ಅದು ನಿಜವಾಗಿಯೂ ನಮ್ಮಲ್ಲಿ ಪ್ರತಿಯೊಬ್ಬರನ್ನು ಒಳಗೊಳ್ಳುತ್ತದೆ. ಹರ್ಷಧ್ವನಿಗೈಯಲು ಅದು ನಮಗೆ ಸಕಾರಣವನ್ನು ಒದಗಿಸುತ್ತದೆ. ಈಗ ಮತ್ತು ಭವಿಷ್ಯತ್ತಿನಲ್ಲಿ ನಿಮ್ಮ ಜೀವಿತವನ್ನು ಒಳಗೊಳ್ಳುವ ಈ ಅಂಶಗಳು ಮುಂದಿನ ಲೇಖನದಲ್ಲಿ ನಿರೂಪಿಸಲ್ಪಟ್ಟಿವೆ.
[ಪಾದಟಿಪ್ಪಣಿ]
a ಪ್ರಾಂತದ ತನ್ನ ಅಧ್ಯಯನದಿಂದ, ಕೃಷಿತಜ್ಞರಾದ ವಾಲ್ಟರ್ ಸಿ. ಲಾಡರ್ಮಿಲ್ಕ್ (ಯು.ಎನ್. ಆಹಾರ ಮತ್ತು ವ್ಯವಸಾಯ ಸಂಘಟನೆಯನ್ನು ಪ್ರತಿನಿಧಿಸುತ್ತಾ) ಕೊನೆಗೊಳಿಸಿದ್ದು: “ಈ ದೇಶವು ಒಮ್ಮೆ ಒಂದು ಹುಲ್ಲುಗಾವಲಿನ ಪ್ರಮೋದವನವಾಗಿತ್ತು.” “ರೋಮನ್ ಸಮಯಗಳಂದಿನಿಂದ” ಅಲ್ಲಿನ ಹವಾಮಾನವು ಮಹತ್ತರವಾಗಿ ಮಾರ್ಪಟ್ಟಿಲ್ಲವೆಂದೂ ಅವರು ಸೂಚಿಸಿದರು, ಮತ್ತು ಒಮ್ಮೆ ಅಭಿವೃದ್ಧಿ ಹೊಂದುತ್ತಿದ್ದ ದೇಶವನ್ನು ಸ್ಥಾನಪಲ್ಲಟಗೊಳಿಸಿದ ‘ಮರುಳುಗಾಡು’ ನಿಸರ್ಗದ ಕೆಲಸವಲ್ಲ, ಮನುಷ್ಯನ ಕೆಲಸವಾಗಿತ್ತು.”
ನೀವು ಜ್ಞಾಪಿಸಿಕೊಳ್ಳಬಲ್ಲಿರೊ?
◻ ಯೆಶಾಯ 35ನೆಯ ಅಧ್ಯಾಯವು ತನ್ನ ಪ್ರಥಮ ನೆರವೇರಿಕೆಯನ್ನು ಯಾವಾಗ ಕಂಡಿತು?
◻ ಪ್ರವಾದನೆಯ ಆರಂಭಿಕ ನೆರವೇರಿಕೆಯು ಯಾವ ಪ್ರಭಾವವನ್ನು ಉತ್ಪಾದಿಸಲಿತ್ತು?
◻ ಯೆಶಾಯ 35:5, 6ನ್ನು ಯೆಹೋವನು ಹೇಗೆ ನೆರವೇರಿಸಿದನು?
◻ ಹಿಂದಿರುಗಿದ ಯೆಹೂದ್ಯರು ದೇಶದಲ್ಲಿ ಮತ್ತು ತಮ್ಮ ಸನ್ನಿವೇಶದಲ್ಲಿ ಯಾವ ಬದಲಾವಣೆಗಳನ್ನು ಅನುಭವಿಸಿದರು?
[ಪುಟ 9 ರಲ್ಲಿರುವ ಚಿತ್ರ]
ಒಂದು ಸಮಯದಲ್ಲಿ ಎದೋಮ್ಯರು ಜೀವಿಸಿದ್ದ ಕ್ಷೇತ್ರದಲ್ಲಿನ ಪೆಟ್ರದ ಭಗ್ನಾವಶೇಷಗಳು
[ಕೃಪೆ]
Garo Nalbandian
[ಪುಟ 10 ರಲ್ಲಿರುವ ಚಿತ್ರಗಳು]
ಯೆಹೂದ್ಯರು ಪರದೇಶವಾಸದಲ್ಲಿದ್ದಾಗ, ಕರಡಿಗಳು ಮತ್ತು ಸಿಂಹಗಳಂತಹ ಕ್ರೂರ ಪಶುಗಳಿಂದ ಆಕ್ರಮಿಸಲ್ಪಟ್ಟು, ಯೂದಾಯದ ಹೆಚ್ಚಿನ ಭಾಗವು ಒಂದು ಮರುಭೂಮಿಯಂತಿತ್ತು
[ಕೃಪೆ]
Garo Nalbandian
Bear and Lion: Safari-Zoo of Ramat-Gan, Tel Aviv