ಪಾಠ 44
ಎಲ್ಲಾ ಆಚರಣೆಗಳು ದೇವರಿಗೆ ಇಷ್ಟ ಆಗುತ್ತಾ?
ನಾವು ಜೀವನದಲ್ಲಿ ಖುಷಿಯಾಗಿರಬೇಕು, ವಿಶೇಷ ಕಾರ್ಯಕ್ರಮಗಳಲ್ಲಿ ಸಂಭ್ರಮದಿಂದ ಇರಬೇಕು ಅಂತ ದೇವರು ಇಷ್ಟಪಡುತ್ತಾನೆ. ಆದರೆ ಎಲ್ಲಾ ಆಚರಣೆಗಳು ದೇವರಿಗೆ ಇಷ್ಟ ಆಗುತ್ತಾ? ಆಚರಣೆಗಳ ವಿಷಯಗಳಲ್ಲಿ ಯೆಹೋವನಿಗೆ ಇಷ್ಟ ಆಗುವ ತರ ನಡೆದುಕೊಳ್ಳೋದು ಹೇಗೆ?
1. ಅನೇಕ ಆಚರಣೆಗಳನ್ನು ಯೆಹೋವನು ಇಷ್ಟಪಡದಿರಲು ಕಾರಣವೇನು?
ಈಗಿರುವ ಅನೇಕ ಆಚರಣೆಗಳು ಬೈಬಲಿಗೆ ವಿರುದ್ಧವಾದ ಬೋಧನೆಗಳಿಂದ ಮತ್ತು ತಪ್ಪಾದ ಆಚಾರ, ಸಂಪ್ರದಾಯಗಳಿಂದ ಹುಟ್ಟಿಕೊಂಡಿದೆ. ಇಂಥ ಆಚರಣೆಗಳು ದೇವರಿಗೆ ಇಷ್ಟವಾಗದ ಧರ್ಮಗಳಿಂದ ಬಂದಿರಬಹುದು. ಕೆಲವು ಆಚರಣೆಗಳು ಮಾಟಮಂತ್ರದಿಂದ ಅಥವಾ ಆತ್ಮ ಅಮರ ಅನ್ನೋ ನಂಬಿಕೆಯಿಂದ ಹುಟ್ಟಿಕೊಂಡಿರಬಹುದು. ಇನ್ನೂ ಕೆಲವು ಆಚರಣೆಗಳು ಮೂಢನಂಬಿಕೆಗಳಿಂದ, ವಿಧಿ (ಹಣೆಬರಹ) ಅಥವಾ ಅದೃಷ್ಟದ ಬಗ್ಗೆ ಇರುವ ನಂಬಿಕೆಗಳಿಂದ ಬಂದಿರಬಹುದು. (ಯೆಶಾಯ 65:11) ಆದರೆ ಯೆಹೋವ ದೇವರು ತನ್ನ ಆರಾಧಕರಿಗೆ ಈ ಎಚ್ಚರಿಕೆಯನ್ನ ಕೊಟ್ಟಿದ್ದಾನೆ: “ನೀವು ಅವ್ರಿಂದ ಬೇರೆಯಾಗಿ. ಅಶುದ್ಧವಾಗಿದ್ದನ್ನ ಇನ್ನು ಮುಟ್ಟಬೇಡಿ.”—2 ಕೊರಿಂಥ 6:17.a
2. ಮಾನವರಿಗೆ ಅತಿಯಾದ ಗೌರವವನ್ನ ತೋರಿಸುವ ಆಚರಣೆಗಳ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ?
‘ಏನೂ ಅಲ್ಲದ ಮನುಷ್ಯನ ಮೇಲೆ ನಂಬಿಕೆ ಇಡೋದರ’ ಅಪಾಯದ ಬಗ್ಗೆ ಯೆಹೋವನು ಎಚ್ಚರಿಸಿದ್ದಾನೆ. (ಯೆರೆಮೀಯ 17:5 ಓದಿ.) ಅಧಿಕಾರಿಗಳನ್ನ, ಸೈನಿಕರನ್ನ ಗೌರವಿಸೋಕೆ ಕೆಲವು ಆಚರಣೆಗಳನ್ನ ಮಾಡಲಾಗುತ್ತೆ. ಕೆಲವರು ಸ್ವಾತಂತ್ರ್ಯ ದಿನವನ್ನ ಆಚರಿಸ್ತಾರೆ ಅಥವಾ ರಾಷ್ಟ್ರೀಯ ಚಿಹ್ನೆಗಳಿಗೆ ಭಕ್ತಿ ತೋರಿಸ್ತಾರೆ. (1 ಯೋಹಾನ 5:21) ಕೆಲವರು ರಾಜಕೀಯಕ್ಕೆ ಅಥವಾ ಸಾಮಾಜಿಕ ಸಂಘಟನೆಗಳಿಗೆ ಸಂಬಂಧಪಟ್ಟ ಆಚರಣೆಗಳನ್ನ ಮಾಡ್ತಾರೆ. ನೀವೇ ಯೋಚಿಸಿ, ಯೆಹೋವ ದೇವರ ಉದ್ದೇಶಕ್ಕೆ ಅಥವಾ ನಿಯಮಗಳಿಗೆ ವಿರುದ್ಧವಾಗಿ ವ್ಯಕ್ತಿಗೆ ಅಥವಾ ಸಂಘಟನೆಗೆ ಅತಿಯಾದ ಗೌರವವನ್ನ ಕೊಟ್ಟರೆ ಯೆಹೋವನಿಗೆ ಹೇಗನಿಸುತ್ತೆ?
3. ಆಚರಣೆಗಳ ಸಮಯದಲ್ಲಿ ಜನರು ಯಾವ ರೀತಿಯಲ್ಲಿ ನಡೆದುಕೊಳ್ಳೋದು ದೇವರಿಗೆ ಇಷ್ಟ ಆಗಲ್ಲ?
“ಕಂಠಪೂರ್ತಿ ಕುಡಿಯೋದು, ಕುಡಿದು ಕುಪ್ಪಳಿಸೋದು, ಕುಡಿಯೋದ್ರಲ್ಲಿ ಪೈಪೋಟಿ” ಮಾಡೋದನ್ನ ಬೈಬಲ್ ಖಂಡಿಸುತ್ತೆ. (1 ಪೇತ್ರ 4:3) ಕೆಲವು ಆಚರಣೆಗಳಲ್ಲಿ ಜನರು ಸ್ವನಿಯಂತ್ರಣ ಇಲ್ಲದೆ ನಡೆದುಕೊಳ್ಳುತ್ತಾರೆ, ಅನೈತಿಕವಾಗಿ ವರ್ತಿಸುತ್ತಾರೆ. ಆದರೆ ನಾವು ಯೆಹೋವನ ಫ್ರೆಂಡ್ ಆಗಬೇಕಂದ್ರೆ ಇಂಥ ಕೆಟ್ಟ ವಿಷಯಗಳನ್ನ ಮಾಡಬಾರದು.
ಹೆಚ್ಚನ್ನ ತಿಳಿಯೋಣ
ಆಚರಣೆಗಳ ವಿಷಯದಲ್ಲಿ ಸರಿಯಾದ ತೀರ್ಮಾನಗಳನ್ನ ಮಾಡಿ ಯೆಹೋವನನ್ನು ಹೇಗೆ ಮೆಚ್ಚಿಸಬಹುದು ಅಂತ ಕಲಿಯಿರಿ.
4. ಯೆಹೋವನಿಗೆ ಇಷ್ಟವಾಗದ ಆಚರಣೆಗಳನ್ನ ಮಾಡಬೇಡಿ
ಎಫೆಸ 5:10 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಒಂದು ಆಚರಣೆಯನ್ನ ಮಾಡಬೇಕಾ ಬೇಡ್ವಾ ಅಂತ ತೀರ್ಮಾನ ಮಾಡುವಾಗ ಯಾವ ವಿಷಯವನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು?
ನೀವಿರೋ ಜಾಗದಲ್ಲಿ ಯಾವೆಲ್ಲಾ ಆಚರಣೆಗಳನ್ನ ಮಾಡ್ತಾರೆ?
ಆ ಆಚರಣೆಗಳು ಯೆಹೋವನಿಗೆ ಇಷ್ಟ ಆಗುತ್ತೆ ಅಂತ ನಿಮಗೆ ಅನಿಸುತ್ತಾ?
ಉದಾಹರಣೆಗೆ, ಹುಟ್ಟು ಹಬ್ಬದ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ ಅಂತ ನೀವು ಯಾವತ್ತಾದ್ರೂ ಯೋಚಿಸಿದ್ದೀರಾ? ಯೆಹೋವನ ಆರಾಧಕರು ಹುಟ್ಟಿದ ದಿನವನ್ನ ಆಚರಿಸಿದ್ದರ ಬಗ್ಗೆ ಬೈಬಲಿನಲ್ಲಿ ಎಲ್ಲೂ ಇಲ್ಲ. ಆದರೆ ಯೆಹೋವ ದೇವರನ್ನ ಆರಾಧಿಸದ ಇಬ್ಬರು ವ್ಯಕ್ತಿಗಳು ಹುಟ್ಟಿದ ದಿನವನ್ನ ಆಚರಿಸಿದ ಬಗ್ಗೆ ಇದೆ. ಆದಿಕಾಂಡ 40:20-22 ಮತ್ತು ಮತ್ತಾಯ 14:6-10 ಓದಿ. ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಈ ಎರಡೂ ಹುಟ್ಟು ಹಬ್ಬಗಳಲ್ಲಿ ಏನು ನಡೆಯಿತು?
ಈ ಘಟನೆಗಳಿಂದ ಹುಟ್ಟು ಹಬ್ಬದ ಬಗ್ಗೆ ಯೆಹೋವ ದೇವರಿಗೆ ಹೇಗನಿಸುತ್ತೆ ಅಂತ ನೀವು ತಿಳಿದುಕೊಂಡ್ರಿ?
ಹುಟ್ಟು ಹಬ್ಬ ಅಥವಾ ಬೈಬಲ್ ನಿಯಮಗಳಿಗೆ ವಿರುದ್ಧವಾಗಿರುವ ಬೇರೆ ಆಚರಣೆಗಳನ್ನ ನಾವು ಮಾಡಲ್ಲ. ಆದರೆ ನೀವು ಹೀಗೆ ಯೋಚಿಸಬಹುದು: ‘ನಾನು ಅದಕ್ಕೆ ಬೇರೆ ಯಾವುದೇ ರೀತಿಯಲ್ಲಿ ಬೆಂಬಲ ಕೊಟ್ಟರೂ ತಪ್ಪಾ? ಅದರಿಂದ ಯೆಹೋವನಿಗೆ ಬೇಜಾರಾಗುತ್ತಾ?’ ವಿಮೋಚನಕಾಂಡ 32:1-8 ಓದಿ. ನಂತರ ವಿಡಿಯೋ ನೋಡಿ ನಂತರ ಪ್ರಶ್ನೆಗಳನ್ನ ಚರ್ಚಿಸಿ:
ಯೆಹೋವ ದೇವರಿಗೆ ಯಾವುದು ಇಷ್ಟ ಅಂತ ತಿಳಿದುಕೊಳ್ಳೋದು ಯಾಕೆ ತುಂಬ ಮುಖ್ಯ?
ಅದನ್ನ ಹೇಗೆ ತಿಳಿದುಕೊಳ್ಳಬಹುದು?
ಒಂದು ಆಚರಣೆ ದೇವರಿಗೆ ಇಷ್ಟ ಆಗುತ್ತಾ ಇಲ್ವಾ ಅಂತ ತಿಳಿಯಲು . . .
ಆ ಆಚರಣೆ ಬೈಬಲ್ ನಿಯಮಗಳಿಗೆ ವಿರುದ್ಧವಾಗಿದೆಯಾ? ಅದನ್ನ ಕಂಡುಹಿಡಿಯೋಕೆ ಅದು ಹೇಗೆ ಹುಟ್ಟಿಕೊಂಡಿದೆ ಅಂತ ಸಂಶೋಧನೆ ಮಾಡಿ.
ಅದು ಮನುಷ್ಯರಿಗೆ, ಸಂಘಟನೆಗಳಿಗೆ ಅಥವಾ ರಾಷ್ಟ್ರೀಯ ಚಿಹ್ನೆಗಳಿಗೆ ಅತಿಯಾದ ಗೌರವವನ್ನ ಕೊಡುತ್ತಾ? ನಾವು ಎಲ್ಲದಕ್ಕಿಂತ ಹೆಚ್ಚಾಗಿ ಯೆಹೋವನಿಗೆ ಗೌರವವನ್ನ ಕೊಡುತ್ತೇವೆ. ಅಷ್ಟೇ ಅಲ್ಲ, ಈ ಭೂಮಿಯಲ್ಲಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ತರಲು ಆತನಿಗೆ ಮಾತ್ರ ಸಾಧ್ಯ ಅಂತ ನಂಬುತ್ತೇವೆ.
ಆ ಆಚರಣೆಯಲ್ಲಿರುವ ಆಚಾರವಿಚಾರ, ಪದ್ಧತಿಗಳು ಬೈಬಲ್ ನಿಯಮಕ್ಕೆ ವಿರುದ್ಧವಾಗಿದೆಯಾ? ನಾವು ನಡೆನುಡಿಯಲ್ಲಿ ಶುದ್ಧರಾಗಿರಬೇಕು.
5. ನಿಮ್ಮ ನಂಬಿಕೆಗಳನ್ನ ಗೌರವಿಸೋಕೆ ಬೇರೆಯವರಿಗೆ ಸಹಾಯ ಮಾಡಿ
ಯೆಹೋವ ದೇವರಿಗೆ ಇಷ್ಟವಾಗದಂಥ ಒಂದು ಆಚರಣೆಯಲ್ಲಿ ಭಾಗವಹಿಸುವಂತೆ ನಿಮ್ಮನ್ನ ಬೇರೆಯವರು ಒತ್ತಾಯ ಮಾಡಿದಾಗ ಅದನ್ನ ಎದುರಿಸೋಕೆ ಕಷ್ಟವಾಗುತ್ತೆ. ಅದರ ಬಗ್ಗೆ ನಿಮ್ಮ ತೀರ್ಮಾನ ಏನು ಅಂತ ಜಾಣ್ಮೆಯಿಂದ ಮತ್ತು ತಾಳ್ಮೆಯಿಂದ ವಿವರಿಸಿ. ಇದನ್ನ ಹೇಗೆ ಮಾಡೋದು ಅಂತ ತಿಳಿದುಕೊಳ್ಳಲು ವಿಡಿಯೋ ನೋಡಿ.
ಮತ್ತಾಯ 7:12 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಸತ್ಯದಲ್ಲಿಲ್ಲದ ನಿಮ್ಮ ಕುಟುಂಬದವರಿಗೆ ಒಂದು ಆಚರಣೆಯನ್ನ ಮಾಡಬಾರದು ಅಂತ ನೀವು ಹೇಳಬಹುದಾ? ಈ ವಚನದಿಂದ ನೀವೇನು ಕಲಿತ್ರಿ?
ನಿಮ್ಮ ಕುಟುಂಬದ ಜೊತೆ ಒಂದು ಆಚರಣೆಯನ್ನ ಮಾಡದೇ ಇದ್ದರೂ ನೀವು ಅವರನ್ನ ಪ್ರೀತಿಸುತ್ತೀರ ಮತ್ತು ಅವರ ಬಗ್ಗೆ ಕಾಳಜಿವಹಿಸುತ್ತೀರ ಅಂತ ಹೇಗೆ ತೋರಿಸುತ್ತೀರಾ?
6. ನಾವು ಖುಷಿಖುಷಿಯಾಗಿ ಇರಬೇಕು ಅಂತ ಯೆಹೋವನು ಬಯಸುತ್ತಾನೆ
ನಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆ ನಾವು ಸಂತೋಷವಾಗಿ ಸಮಯ ಕಳೆಯಬೇಕು ಅನ್ನೋದು ಯೆಹೋವ ದೇವರ ಇಷ್ಟ. ಪ್ರಸಂಗಿ 8:15 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಈ ವಚನದಿಂದ ಯೆಹೋವ ದೇವರ ಬಗ್ಗೆ ಏನು ಗೊತ್ತಾಗುತ್ತೆ?
ಯೆಹೋವನ ಜನರು ಒಟ್ಟಿಗೆ ಸೇರಿ ಖುಷಿಖುಷಿಯಾಗಿ ಸಮಯ ಕಳೆಯಬೇಕು ಅಂತ ಆತನು ಇಷ್ಟಪಡುತ್ತಾನೆ. ಅಂತರಾಷ್ಟ್ರೀಯ ಅಧಿವೇಶನಗಳಲ್ಲಿ ಇದು ಹೇಗೆ ನಿಜವಾಗಿದೆ ಅಂತ ತಿಳಿಯಲು ಈ ವಿಡಿಯೋ ನೋಡಿ.
ಗಲಾತ್ಯ 6:10 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ನಾವು ಆಚರಣೆಗಳ ಸಮಯದಲ್ಲಿ ಮಾತ್ರ ಬೇರೆಯವರಿಗೆ ‘ಒಳ್ಳೇದು ಮಾಡಕ್ಕೆ’ ಆಗುತ್ತೆ ಅಂತನಾ?
ಒಂದು ಆಚರಣೆಯ ಸಮಯದಲ್ಲಿ ಗಿಫ್ಟ್ ಕೊಡಬೇಕಲ್ಲಾ ಅಂತ ಒತ್ತಾಯದಿಂದ ಕೊಟ್ಟರೆ ಚೆನ್ನಾಗಿರುತ್ತಾ ಅಥವಾ ನಿಮಗೆ ಇಷ್ಟವಾದಾಗೆಲ್ಲಾ ಸಂತೋಷದಿಂದ ಕೊಟ್ಟರೆ ಚೆನ್ನಾಗಿರುತ್ತಾ?
ಅನೇಕ ಯೆಹೋವನ ಸಾಕ್ಷಿಗಳು ತಮ್ಮ ಮಕ್ಕಳನ್ನ ಖುಷಿಪಡಿಸಲಿಕ್ಕಾಗಿ ಕೆಲವೊಮ್ಮೆ ವಿಶೇಷ ಸಂದರ್ಭಗಳನ್ನ ಏರ್ಪಡಿಸ್ತಾರೆ ಮತ್ತು ಉಡುಗೊರೆಗಳನ್ನ ಕೊಡುತ್ತಾರೆ. ಒಂದುವೇಳೆ ನಿಮಗೆ ಮಕ್ಕಳಿದ್ರೆ ನೀವು ಏನೆಲ್ಲಾ ಮಾಡಬಹುದು?
ಕೆಲವರು ಹೀಗಂತಾರೆ: “ಆಚರಣೆಗಳು ಎಲ್ಲಿಂದ ಬಂದವು ಅನ್ನೋದು ಮುಖ್ಯ ಅಲ್ಲ, ಅದು ಕುಟುಂಬದವರ ಮತ್ತು ಸ್ನೇಹಿತರ ಜೊತೆ ಖುಷಿಯಾಗಿರೋಕೆ ಒಂದು ಒಳ್ಳೇ ಅವಕಾಶ ಅಷ್ಟೇ.”
ನಿಮಗೇನು ಅನಿಸುತ್ತೆ?
ನಾವೇನು ಕಲಿತ್ವಿ
ನಾವು ಕುಟುಂಬ ಮತ್ತು ಸ್ನೇಹಿತರ ಜೊತೆ ಖುಷಿಯಾಗಿ ಸಮಯ ಕಳೆಯಬೇಕು ಆದರೆ ಆತನಿಗೆ ಇಷ್ಟವಾಗದ ಆಚರಣೆಗಳನ್ನ ನಾವು ಮಾಡಬಾರದು ಅಂತ ಯೆಹೋವ ಬಯಸುತ್ತಾನೆ.
ನೆನಪಿದೆಯಾ
ಒಂದು ಆಚರಣೆ ಯೆಹೋವ ದೇವರಿಗೆ ಇಷ್ಟನಾ ಇಲ್ವಾ ಅಂತ ತಿಳಿಯಲು ಯಾವ ಪ್ರಶ್ನೆಗಳನ್ನ ಕೇಳಿಕೊಳ್ಳಬೇಕು?
ಒಂದು ಆಚರಣೆಯನ್ನ ನಾವು ಯಾಕೆ ಮಾಡಲ್ಲ ಅಂತ ನಮ್ಮ ಆಪ್ತರಿಗೆ ಹೇಗೆ ಅರ್ಥಮಾಡಿಸಬಹುದು?
ನಾವೆಲ್ಲರೂ ಖುಷಿಯಾಗಿ ಇರಬೇಕು ಅನ್ನೋದು ಯೆಹೋವನ ಆಸೆ ಅಂತ ನಮಗೆ ಹೇಗೆ ಗೊತ್ತು?
ಇದನ್ನೂ ನೋಡಿ
ಕ್ರೈಸ್ತರು ಮಾಡಬಾರದ ಕೆಲವು ಆಚರಣೆಗಳು ಯಾವುವು ಅಂತ ತಿಳಿಯಿರಿ.
“ಯೆಹೋವನ ಸಾಕ್ಷಿಗಳು ಕೆಲವು ಹಬ್ಬಗಳನ್ನು ಯಾಕೆ ಮಾಡಲ್ಲ?” (jw.org ಲೇಖನ)
ಹುಟ್ಟು ಹಬ್ಬ ಮಾಡೋದು ಯೆಹೋವ ದೇವರಿಗೆ ಯಾಕೆ ಇಷ್ಟ ಆಗಲ್ಲ ಅಂತ ತಿಳಿಯಲು ನಾಲ್ಕು ಕಾರಣಗಳನ್ನ ನೋಡಿ.
ಮಕ್ಕಳು ಹಬ್ಬಗಳನ್ನ ಮಾಡದೆ ಹೇಗೆ ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡಿದ್ದಾರೆ ಅಂತ ನೋಡಿ.
ಲಕ್ಷಾಂತರ ಕ್ರೈಸ್ತರು ಕ್ರಿಸ್ಮಸ್ ಆಚರಿಸಲ್ಲ ಅನ್ನೋ ನಿರ್ಧಾರ ಮಾಡಿದ್ದಾರೆ. ಅವರಿಗೆ ತಮ್ಮ ನಿರ್ಧಾರದ ಬಗ್ಗೆ ಹೇಗನಿಸುತ್ತೆ?