ಯೆಶಾಯ
65 “ನನ್ನ ಬಗ್ಗೆ ಯಾರು ವಿಚಾರಿಸಲಿಲ್ವೋ ಅವ್ರಿಗೆ ನಾನು ಸಿಕ್ಕಿದೆ,
ನನ್ನನ್ನ ಯಾರು ಹುಡುಕಲಿಲ್ವೋ ಅವ್ರಿಗೆ ನಾನು ಕಾಣಿಸ್ಕೊಂಡೆ.+
ನನ್ನ ಹೆಸ್ರನ್ನ ಎತ್ತಿ ಕೂಗದ ಜನಾಂಗಕ್ಕೆ ‘ನಾನು ಇಲ್ಲಿದ್ದೀನಿ, ನಾನು ಇಲ್ಲಿದ್ದೀನಿ!’ ಅಂತ ಹೇಳಿದೆ.+
ತಮ್ಮ ಸ್ವಂತ ಆಲೋಚನೆಗಳನ್ನೇ ಹಿಂಬಾಲಿಸ್ತಾ+
ಕೆಟ್ಟ ಮಾರ್ಗಗಳಲ್ಲಿ ನಡಿತಿರೋ ಜನ್ರಿಗಾಗಿ+ ದಿನವಿಡೀ ನಾನು ನನ್ನ ಕೈಗಳನ್ನ ಚಾಚ್ಕೊಂಡೇ ಇದ್ದೆ.
3 ನನ್ನನ್ನ ಬಹಿರಂಗವಾಗಿ ಅವಮಾನಿಸೋ ಜನ,+
ತೋಟಗಳಲ್ಲಿ ಬಲಿಗಳನ್ನ ಅರ್ಪಿಸಿ,+ ಇಟ್ಟಿಗೆಗಳ ಮೇಲೆ ಬಲಿಯ ಹೊಗೆ ಏರೋ ತರ ಮಾಡ್ತಾರೆ.
5 ‘ನೀನು ಅಲ್ಲೇ ಇರು, ನನ್ನ ಹತ್ರ ಬರಬೇಡ,
ಯಾಕಂದ್ರೆ ನಾನು ನಿನಗಿಂತ ಪವಿತ್ರ’ ಅಂತ ಅವರು ಹೇಳ್ತಾರೆ.
ಅವರು ನನ್ನ ಮೂಗಿಂದ ಹೊಗೆ ಬರೋ ತರ ಮಾಡ್ತಾರೆ,
ದಿನವಿಡೀ ಉರಿತಿರೋ ಬೆಂಕಿ ತರ ಅವರು ನನಗೆ ಕೋಪ ಎಬ್ಬಿಸ್ತಾ ಇದ್ದಾರೆ.
6 ಇಗೋ! ಇದನ್ನೆಲ್ಲ ನನ್ನ ಮುಂದೆನೇ ಬರೆಯಲಾಯ್ತು,
ನಾನು ಸುಮ್ಮನಿರಲ್ಲ,
ಅವ್ರಿಗೆ ತಕ್ಕ ಶಿಕ್ಷೆ ವಿಧಿಸ್ತೀನಿ,+
ಹೌದು, ಅವ್ರಿಗೆ ಸಂಪೂರ್ಣವಾಗಿ ಸೇಡು ತೀರಿಸ್ತೀನಿ.
7 ಅವ್ರ ತಪ್ಪಿಗಾಗಿ, ಅವ್ರ ಪೂರ್ವಜರ ತಪ್ಪಿಗಾಗಿ ನಾನು ಹೀಗೆ ಮಾಡ್ತೀನಿ.+
ಅವರು ಪರ್ವತಗಳ ಮೇಲೆ ಬಲಿಯನ್ನ ಅರ್ಪಿಸಿ ಅದ್ರ ಹೊಗೆ ಮೇಲೇರೋ ತರ ಮಾಡಿದ್ರು,
ಬೆಟ್ಟಗಳ ಮೇಲೆ ನನ್ನನ್ನ ನಿಂದಿಸಿದ್ರು,+
ಹಾಗಾಗಿ ನಾನು ಮೊದಲು ಅವ್ರಿಗೆ ಸಲ್ಲಬೇಕಾದ ಕೂಲಿಯನ್ನ ಪೂರ್ಣವಾಗಿ ಸಲ್ಲಿಸ್ತೀನಿ”* ಅಂತ ಯೆಹೋವ ಹೇಳ್ತಿದ್ದಾನೆ.
8 ಯೆಹೋವ ಹೀಗೆ ಹೇಳ್ತಿದ್ದಾನೆ
“ಒಂದು ದ್ರಾಕ್ಷಿಯ ಗೊಂಚಲಲ್ಲಿ ಹೊಸ ದ್ರಾಕ್ಷಾರಸ ಕಂಡುಬಂದ್ರೆ
ಜನ, ‘ಆ ಗೊಂಚಲನ್ನ ಹಾಳು ಮಾಡಬೇಡ, ಅದ್ರಲ್ಲಿ ಇನ್ನೂ ಸ್ವಲ್ಪ ಒಳ್ಳೇದಿದೆ’ ಅಂತ ಹೇಳ್ತಾರಲ್ವಾ?
ನನ್ನ ಸೇವಕರ ವಿಷ್ಯದಲ್ಲೂ ನಾನು ಹೀಗೇ ಮಾಡ್ತೀನಿ,
ನಾನು ಅವ್ರಲ್ಲಿ ಎಲ್ರನ್ನ ನಾಶಮಾಡಲ್ಲ.+
9 ನಾನು ಯಾಕೋಬನಿಂದ ಒಂದು ಸಂತತಿ ಬರೋ ತರ ಮಾಡ್ತೀನಿ,
ಯೆಹೂದ ವಂಶದಿಂದ ಬರುವವನು ನನ್ನ ಬೆಟ್ಟಗಳನ್ನ ಆಸ್ತಿಯಾಗಿ ಪಡಿತಾನೆ.+
ನಾನು ಆರಿಸ್ಕೊಳ್ಳುವವರು ನನ್ನ ದೇಶವನ್ನ ವಶ ಮಾಡ್ಕೊತಾರೆ,
ನನ್ನ ಸೇವಕರು ಅಲ್ಲಿ ವಾಸಿಸ್ತಾರೆ.+
10 ನನ್ನನ್ನ ಹುಡುಕುವವರ ಕುರಿಗಳು ಶಾರೋನಲ್ಲಿ+ ಮೇಯ್ತವೆ,
ಅವ್ರ ದನಕರುಗಳು ಆಕೋರಿನ ಕಣಿವೆಯಲ್ಲಿ+ ವಿಶ್ರಾಂತಿ ಪಡ್ಕೊಳ್ತವೆ.
11 ಆದ್ರೆ ನೀವು ಯೆಹೋವನನ್ನ ತೊರೆದಿರೋ ಜನ,+
ನನ್ನ ಪವಿತ್ರ ಬೆಟ್ಟವನ್ನ ಮರೆತುಹೋಗಿರೋ ಜನ,+
ನೀವು ಅದೃಷ್ಟ ದೇವರಿಗೆ ಮೇಜನ್ನ ಸಿದ್ಧಪಡಿಸ್ತೀರ,
ವಿಧಿ ದೇವರಿಗೆ ಮಿಶ್ರಿತ ದ್ರಾಕ್ಷಾಮದ್ಯವನ್ನ ಲೋಟಗಳಲ್ಲಿ ತುಂಬ್ತೀರ.
12 ಹಾಗಾಗಿ ನಾನು ನಿಮ್ಮನ್ನ ಕತ್ತಿಗೆ ಒಪ್ಪಿಸ್ತೀನಿ,+
ಕಡಿಯುವವನ ಮುಂದೆ ನೀವೆಲ್ಲ ನಿಮ್ಮ ತಲೆ ಬಾಗಿಸ್ತೀರ,+
ಯಾಕಂದ್ರೆ ನಾನು ಕರೆದಾಗ ನೀವು ಉತ್ರ ಕೊಡಲಿಲ್ಲ.
ನಾನು ಮಾತಾಡಿದಾಗ ನೀವು ಕಿವಿಗೊಡಲಿಲ್ಲ,+
ನನ್ನ ದೃಷ್ಟಿಯಲ್ಲಿ ಕೆಟ್ಟದ್ದಾಗಿರೋದನ್ನೇ ನೀವು ಮಾಡ್ತಾ ಹೋದ್ರಿ.
ನನಗೆ ಇಷ್ಟವಿಲ್ಲದ್ದನ್ನೇ ಆರಿಸ್ಕೊಂಡ್ರಿ.”+
ಇಗೋ! ನನ್ನ ಸೇವಕರು ಕುಡಿತಾರೆ,+ ನಿಮಗೆ ಬಾಯಾರಿಕೆ ಆಗುತ್ತೆ.
ಇಗೋ! ನನ್ನ ಸೇವಕರು ಸಂಭ್ರಮಿಸ್ತಾರೆ,+ ನಿಮಗೆ ಅವಮಾನ ಆಗುತ್ತೆ.+
14 ನನ್ನ ಸೇವಕರ ಮನಸ್ಸಲ್ಲಿ ಸಂತೋಷ ಇರೋದ್ರಿಂದ ಅವರು ಹರ್ಷಧ್ವನಿಗೈತಾರೆ.
ಆದ್ರೆ ನಿಮ್ಮ ಹೃದಯದಲ್ಲಿ ದುಃಖ ಇರೋದ್ರಿಂದ ನೀವು ಜೋರಾಗಿ ಅಳ್ತೀರ
ಮುರಿದ ಮನಸ್ಸಿಂದಾಗಿ ರೋದಿಸ್ತೀರ.
15 ನಿಮ್ಮ ಹಿಂದೆ ಎಂಥ ಹೆಸ್ರನ್ನ ಬಿಟ್ಟುಹೋಗ್ತೀರ ಅಂದ್ರೆ ನಾನು ಆರಿಸ್ಕೊಂಡಿರೋ ಜನ ಅದನ್ನ ಒಂದು ಶಾಪದ ಹಾಗೆ ಉಪಯೋಗಿಸ್ತಾರೆ,
ವಿಶ್ವದ ರಾಜನಾದ ಯೆಹೋವ ನಿಮ್ಮಲ್ಲಿ ಪ್ರತಿಯೊಬ್ಬರನ್ನ ಸಾಯಿಸ್ತಾನೆ,
16 ಹಾಗಾಗಿ ಭೂಮಿ ಮೇಲೆ ಯಾರೆಲ್ಲ ತಮಗಾಗಿ ಆಶೀರ್ವಾದವನ್ನ ಬೇಡ್ಕೊಳ್ತಾರೋ
ಅವರು ಸತ್ಯ ದೇವರಿಂದ* ಆಶೀರ್ವಾದ ಪಡಿತಾರೆ,
ಭೂಮಿ ಮೇಲೆ ಯಾರೆಲ್ಲ ಆಣೆ ಮಾಡ್ತಾರೋ
17 ಹಾಗಾಗಿ ಇಗೋ! ನಾನು ಹೊಸ ಆಕಾಶವನ್ನ, ಹೊಸ ಭೂಮಿಯನ್ನ ಸೃಷ್ಟಿ ಮಾಡಲಿದ್ದೀನಿ,+
ಆಗ ಹಳೇ ಸಂಗತಿಗಳು ನೆನಪಿಗೆ ಬರಲ್ಲ,
ಅವುಗಳನ್ನ ಯಾರೂ ಕನಸುಮನಸ್ಸಲ್ಲೂ ಜ್ಞಾಪಿಸಿಕೊಳ್ಳಲ್ಲ.+
18 ಆದ್ದರಿಂದ ನಾನು ಯಾವುದನ್ನ ಸೃಷ್ಟಿಸಲಿದ್ದೀನೋ ಅದ್ರಲ್ಲಿ ಉಲ್ಲಾಸಿಸಿ, ಸದಾಕಾಲಕ್ಕೂ ಹರ್ಷಿಸಿ.
ಇಗೋ! ನಾನು ಯೆರೂಸಲೇಮಿಂದ ನಿಮಗೆ ಸಂತೋಷ ಸಿಗೋ ತರ ಮಾಡ್ತೀನಿ,
ಅದ್ರ ಜನ್ರಿಂದ ಅತ್ಯಾನಂದ ಸಿಗೋ ತರ ಮಾಡ್ತೀನಿ.+
ಇನ್ನು ಮುಂದೆ ಆ ಪಟ್ಟಣದಲ್ಲಿ ಅಳೋ ಶಬ್ದವಾಗಲಿ ಕಷ್ಟದಿಂದ ಗೋಳಾಡೋ ಶಬ್ದವಾಗಲಿ ಕೇಳಿಬರಲ್ಲ.”+
20 “ಹುಟ್ಟಿ ಕೆಲವೇ ದಿನಗಳಲ್ಲಿ ಸಾಯೋ ಎಳೆಮಗುವಾಗಲಿ,
ಆಯಸ್ಸು ಮುಗಿಯದೆ ಸಾಯೋ ಮುದುಕನಾಗಲಿ ಅಲ್ಲಿ ಇರಲ್ಲ.
ಯಾಕಂದ್ರೆ ನೂರರ ಪ್ರಾಯದಲ್ಲಿ ಸಾಯೋ ವ್ಯಕ್ತಿನ ಸಹ ಬಾಲಕನ ತರ ಪರಿಗಣಿಸಲಾಗುತ್ತೆ,
ಪಾಪ ಮಾಡಿದವನು ನೂರು ವರ್ಷ ಪ್ರಾಯದವನಾಗಿದ್ರೂ ಶಾಪಕ್ಕೆ ಗುರಿಯಾಗ್ತಾನೆ.*
22 ಅವರು ಕಟ್ಟಿದ ಮನೆಯಲ್ಲಿ ಬೇರೆಯವರು ಬಂದು ಇರಲ್ಲ,
ಅವರು ಮಾಡಿದ ತೋಟದ ಫಲವನ್ನ ಬೇರೆಯವರು ಬಂದು ಕಿತ್ಕೊಳ್ಳಲ್ಲ.
ಯಾಕಂದ್ರೆ ನನ್ನ ಜನ್ರ ಆಯಸ್ಸು ಮರದ ಆಯಸ್ಸಿನ ತರ ಇರುತ್ತೆ.+
ನಾನು ಆರಿಸ್ಕೊಂಡಿರೋ ಜನ್ರು ಚೆನ್ನಾಗಿ ದುಡಿದು ಖುಷಿಖುಷಿಯಾಗಿ ಇರ್ತಾರೆ.
24 ಅವರು ಬೇಡ್ಕೊಳ್ಳೋದಕ್ಕಿಂತ ಮುಂಚೆನೇ ನಾನು ಅವ್ರಿಗೆ ಉತ್ರ ಕೊಡ್ತಿನಿ,
ಅವರು ಮಾತಾಡ್ತಿರೋವಾಗಲೇ ನಾನು ಅದನ್ನ ಕೇಳಿಸ್ಕೊಳ್ತಿನಿ.
ನನ್ನ ಪವಿತ್ರ ಬೆಟ್ಟದಲ್ಲೆಲ್ಲ ಅವು ಯಾರಿಗೂ ಹಾನಿಮಾಡಲ್ಲ, ಅವು ಯಾವುದನ್ನೂ ನಾಶಮಾಡಲ್ಲ”+ ಅಂತ ಯೆಹೋವ ಹೇಳ್ತಿದ್ದಾನೆ.