-
ಸಭೆಯಲ್ಲಿ ಶಾಂತಿ ಮತ್ತು ಪವಿತ್ರತೆ ಕಾಪಾಡಿಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
-
-
14 ಇಂಥ ಸಮಸ್ಯೆಗಳನ್ನು ಬಗೆಹರಿಸಲು ಯೇಸು ಒಂದು ವಿಧಾನವನ್ನು ಹಂತಹಂತವಾಗಿ ತಿಳಿಸಿದ್ದಾನೆ. ಅದು ಹೀಗಿದೆ: “ನಿನ್ನ ಸಹೋದರನು ಪಾಪಮಾಡಿದರೆ, [1] ನೀನು ಮತ್ತು ಅವನು ಮಾತ್ರ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. ಅವನು ನಿನ್ನ ಮಾತಿಗೆ ಕಿವಿಗೊಟ್ಟರೆ ನೀನು ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ. ಆದರೆ ಅವನು ನಿನ್ನ ಮಾತಿಗೆ ಕಿವಿಗೊಡದಿದ್ದರೆ, [2] ಇಬ್ಬರು ಅಥವಾ ಮೂವರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ವಿಷಯವು ಸ್ಥಾಪಿಸಲ್ಪಡಲಿಕ್ಕಾಗಿ ನಿನ್ನೊಂದಿಗೆ ಇನ್ನೂ ಒಬ್ಬನನ್ನು ಅಥವಾ ಇಬ್ಬರನ್ನು ಕರೆದುಕೊಂಡು ಹೋಗು. ಅವನು ಅವರ ಮಾತಿಗೆ ಕಿವಿಗೊಡದೆ ಹೋದರೆ [3] ಸಭೆಗೆ ತಿಳಿಸು. ಅವನು ಸಭೆಯ ಮಾತಿಗೂ ಕಿವಿಗೊಡದೆ ಹೋದರೆ, ಅವನು ನಿನಗೆ ಅನ್ಯಜನಾಂಗದವನಂತೆಯೂ ತೆರಿಗೆ ವಸೂಲಿಮಾಡುವವನಂತೆಯೂ ಇರಲಿ.”—ಮತ್ತಾ. 18:15-17.
-
-
ಸಭೆಯಲ್ಲಿ ಶಾಂತಿ ಮತ್ತು ಪವಿತ್ರತೆ ಕಾಪಾಡಿಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
-
-
19 ಈ ಎರಡೂ ಹೆಜ್ಜೆಗಳನ್ನು ತೆಗೆದುಕೊಂಡ ಮೇಲೂ ಸಮಸ್ಯೆ ಬಗೆಹರಿಯಲಿಲ್ಲ ಮತ್ತು ಅದನ್ನು ಬಿಟ್ಟುಬಿಡಲು ನಿಮಗೂ ಆಗುತ್ತಿಲ್ಲವಾದರೆ ಏನು ಮಾಡಬೇಕು? ಯೇಸು ಹೇಳಿದಂತೆ “ಸಭೆಗೆ” ಅಂದರೆ ಸಭೆಯ ಹಿರಿಯರಿಗೆ ಆ ವಿಷಯ ತಿಳಿಸಿ. ಸಭೆಯ ಶಾಂತಿ, ಪವಿತ್ರತೆಯನ್ನು ಕಾಪಾಡುವುದೇ ಹಿರಿಯರ ಉದ್ದೇಶ ಎನ್ನುವುದನ್ನು ಮರೆಯಬೇಡಿ. ವಿಷಯವನ್ನು ತಿಳಿಸಿದ ಮೇಲೆ ಅದನ್ನು ಸಂಪೂರ್ಣವಾಗಿ ಅವರಿಗೆ ಬಿಟ್ಟುಬಿಡಿ, ಯೆಹೋವನಲ್ಲಿ ಭರವಸೆಯಿಡಿ. ತಪ್ಪುಮಾಡಿದವನ ನಡತೆಯಿಂದಾಗಿ ನೀವು ಯೆಹೋವನಿಂದ ದೂರಹೋಗಬೇಡಿ, ಆತನ ಸೇವೆಯಲ್ಲಿ ಸಂತೋಷ ಕಳಕೊಳ್ಳಬೇಡಿ.—ಕೀರ್ತ. 119:165.
20 ಹಿರಿಯರು ವಿಷಯವನ್ನು ಪೂರ್ಣವಾಗಿ ಪರಿಶೀಲಿಸುತ್ತಾರೆ. ಆ ಸಹೋದರನು ನಿಮ್ಮ ವಿರುದ್ಧ ಗಂಭೀರ ತಪ್ಪು ಮಾಡಿದ್ದು ನಿಜವೆಂದು ತಿಳಿದುಬಂದರೆ ಮತ್ತು ಅವನು ಪಶ್ಚಾತ್ತಾಪಪಡದಿದ್ದರೆ, ತಪ್ಪನ್ನು ಸರಿಪಡಿಸಲು ತಕ್ಕಮಟ್ಟಿಗೆ ಹೆಜ್ಜೆಗಳನ್ನು ತಕ್ಕೊಳ್ಳಲು ಒಪ್ಪದಿದ್ದರೆ ಹಿರಿಯರ ಒಂದು ಸಮಿತಿಯು ಅವನನ್ನು ಸಭೆಯಿಂದ ಬಹಿಷ್ಕರಿಸುವ ನಿರ್ಧಾರ ಮಾಡಬೇಕಾಗಬಹುದು. ಹೀಗೆ ಅವರು ಸಭೆಯನ್ನು ಸಂರಕ್ಷಿಸುತ್ತಾರೆ ಮತ್ತು ಶುದ್ಧವಾಗಿಡುತ್ತಾರೆ.—ಮತ್ತಾ. 18:17.
-