ಮತ್ತಾಯ
18 ಇದಾದ ಮೇಲೆ ಶಿಷ್ಯರು ಯೇಸು ಹತ್ರ ಬಂದು “ಸ್ವರ್ಗದಲ್ಲಿ ದೇವರೇ ರಾಜ. ಭವಿಷ್ಯದಲ್ಲಿ ಬೇರೆಯವರು ಆತನ ಜೊತೆ ಇರ್ತಾರಲ್ವಾ, ಅದ್ರಲ್ಲಿ ದೊಡ್ಡವರು ಯಾರು?” ಅಂತ ಕೇಳಿದ್ರು.+ 2 ಆಗ ಯೇಸು ಒಂದು ಚಿಕ್ಕ ಮಗುನ ಹತ್ರ ಕರೆದು ಅವ್ರ ಮಧ್ಯ ನಿಲ್ಲಿಸಿ 3 “ನಾನು ನಿಜ ಹೇಳ್ತೀನಿ, ದೇವರ ಆಳ್ವಿಕೆಯಲ್ಲಿ ಇರಬೇಕಾದ್ರೆ ನೀವು ಮನಸ್ಸನ್ನ ಪೂರ್ತಿಯಾಗಿ ಬದಲಾಯಿಸ್ಕೊಂಡು ಚಿಕ್ಕ ಮಕ್ಕಳ ತರ ಬದಲಾಗಬೇಕು.+ 4 ಯಾರು ಈ ಚಿಕ್ಕ ಮಗು ತರ ದೀನತೆ ತೋರಿಸ್ತಾರೋ ಅವ್ರೇ ಎಲ್ರಿಗಿಂತ ದೊಡ್ಡವರು.+ 5 ನನ್ನ ಮೇಲಿನ ಗೌರವದಿಂದ* ಇಂಥ ಒಂದು ಚಿಕ್ಕ ಮಗುನ ಸ್ವೀಕರಿಸಿದ್ರೆ ನನ್ನನ್ನೂ ಸ್ವೀಕರಿಸ್ತಾರೆ. 6 ಆದ್ರೆ ನನ್ನ ಮೇಲೆ ನಂಬಿಕೆಯಿಡೋ ಈ ದೀನ ಜನ್ರಲ್ಲಿ* ಒಬ್ಬನನ್ನ ನಂಬಿಕೆ ಕಳ್ಕೊಳ್ಳೋ ತರ ಯಾರಾದ್ರೂ ಮಾಡಿದ್ರೆ* ಅವನ ಕುತ್ತಿಗೆಗೆ ದೊಡ್ಡ ಬೀಸೋ ಕಲ್ಲನ್ನ* ಕಟ್ಟಿ ಸಮುದ್ರಕ್ಕೆ ತಳ್ಳೋದೇ ಒಳ್ಳೇದು.+
7 ಜನ್ರು ಪಾಪ ಮಾಡೋಕೆ ಕಾರಣ ಆಗಿರೋ ಲೋಕದ ಗತಿ ಏನು ಹೇಳಲಿ. ನಂಬಿಕೆಯ ದಾರಿಯಲ್ಲಿ ಎಡವಿಸೋ ಕಲ್ಲುಗಳು ಬರೋದು ಸಾಮಾನ್ಯ. ಆದ್ರೆ ಆ ಕಲ್ಲನ್ನ ಯಾರು ಹಾಕ್ತಾರೋ ಅವ್ರ ಗತಿ ಏನು ಹೇಳಲಿ! 8 ನಿನ್ನ ಕೈಯಾಗಲಿ ಕಾಲಾಗಲಿ ನಿನ್ನಿಂದ ಪಾಪ ಮಾಡಿಸ್ತಾ ಇರೋದಾದ್ರೆ ಅದನ್ನ ಕತ್ತರಿಸಿ ಬಿಸಾಡು.+ ಎರಡು ಕೈಕಾಲು ಇಟ್ಕೊಂಡು ಸಂಪೂರ್ಣ ನಾಶ ಆಗೋದಕ್ಕಿಂತ ಕೈಕಾಲು ಇಲ್ಲದೆ ಜೀವ ಪಡೆಯೋದೇ ಒಳ್ಳೇದು.+ 9 ಅದೇ ತರ ನಿನ್ನ ಕಣ್ಣು ನಿನ್ನಿಂದ ಪಾಪ ಮಾಡಿಸ್ತಾ ಇರೋದಾದ್ರೆ ಅದನ್ನ ಕಿತ್ತು ಬಿಸಾಡು. ಎರಡು ಕಣ್ಣು ಇಟ್ಕೊಂಡು ಸಂಪೂರ್ಣ ನಾಶ* ಆಗೋದಕ್ಕಿಂತ ಒಂದೇ ಕಣ್ಣು ಇಟ್ಕೊಂಡು ಜೀವ ಪಡೆಯೋದೇ ಒಳ್ಳೇದು.+ 10 ಈ ದೀನ ಜನ್ರಲ್ಲಿ* ಜನ್ರಲ್ಲಿ ಒಬ್ಬರನ್ನೂ ಕೀಳಾಗಿ ನೋಡಬೇಡಿ. ಯಾಕಂದ್ರೆ ನಾನು ನಿಮಗೆ ಹೇಳ್ತೀನಿ, ಇವ್ರನ್ನ ನೋಡ್ಕೊಳ್ಳೋ ಸ್ವರ್ಗದ ದೂತರು ಯಾವಾಗ್ಲೂ ನನ್ನ ಅಪ್ಪನ ಮುಂದೆನೇ* ಇರ್ತಾರೆ.+ 11 *——
12 ನಿಮಗೇನು ಅನ್ಸುತ್ತೆ? ಒಬ್ಬ ಮನುಷ್ಯನ ಹತ್ರ 100 ಕುರಿ ಇರುತ್ತೆ. ಅದ್ರಲ್ಲಿ ಒಂದು ಕುರಿ ದಾರಿತಪ್ಪಿದ್ರೆ+ ಅವನು ಉಳಿದಿರೋ 99 ಕುರಿನಾ ಬೆಟ್ಟದಲ್ಲೇ ಬಿಟ್ಟು ತಪ್ಪಿಹೋಗಿರೋ ಆ ಒಂದು ಕುರಿನ ಹುಡ್ಕೊಂಡು ಹೋಗಲ್ವಾ?+ 13 ಆ ಕುರಿ ಸಿಕ್ಕಾಗ, ಉಳಿದಿರೋ 99 ಕುರಿಗಿಂತ ಆ ಒಂದು ಕುರಿ ಅವನಿಗೆ ಹೆಚ್ಚು ಖುಷಿ ಕೊಡುತ್ತೆ ಅಂತ ನಾನು ನಿಮಗೆ ನಿಜ ಹೇಳ್ತೀನಿ. 14 ಅದೇ ತರ ಈ ದೀನ ಜನ್ರಲ್ಲಿ* ಒಬ್ಬನೂ ನಾಶ ಆಗೋದು ಸ್ವರ್ಗದಲ್ಲಿರೋ ನನ್ನ* ಅಪ್ಪನಿಗೆ ಇಷ್ಟ ಇಲ್ಲ.+
15 ನಿನ್ನ ಸಹೋದರ ಪಾಪಮಾಡಿದ್ರೆ ನೀವಿಬ್ರೇ ಇರುವಾಗ ಆ ತಪ್ಪನ್ನ ಅವನಿಗೆ ಹೋಗಿ ಹೇಳು.*+ ಅವನು ನಿನ್ನ ಮಾತು ಕೇಳಿದ್ರೆ ಸರಿ ದಾರಿಗೆ ಬರೋಕೆ ಸಹಾಯ ಆಗುತ್ತೆ.*+ 16 ಆದ್ರೆ ಅವನು ನಿನ್ನ ಮಾತು ಕೇಳದಿದ್ರೆ ನಿನ್ನ ಜೊತೆ ಒಬ್ರನ್ನ ಇಲ್ಲಾ ಇಬ್ರನ್ನ ಕರ್ಕೊಂಡು ಹೋಗು. ಯಾಕಂದ್ರೆ ಏನೇ ವಿಷ್ಯ ಸಾಬೀತು ಆಗಬೇಕಂದ್ರೆ ಇಬ್ರು ಅಥವಾ ಮೂರು ಸಾಕ್ಷಿಗಳು ಇರಬೇಕು.+ 17 ಅವನು ಅವ್ರ ಮಾತನ್ನ ಕೇಳದೆ ಹೋದ್ರೆ ಸಭೆಗೆ ಹೇಳು. ಅವನು ಸಭೆಯ ಮಾತನ್ನೂ ಕೇಳದಿದ್ರೆ ನೀನು ಲೋಕದ ಜನ್ರ + ಜೊತೆ, ತೆರಿಗೆ ವಸೂಲಿ ಮಾಡುವವರ+ ಜೊತೆ ಹೇಗೆ ಸಹವಾಸ ಮಾಡಲ್ವೋ ಅದೇ ತರ ಅವನ ಜೊತೆನೂ ಸಹವಾಸ ಮಾಡಬೇಡ.
18 ನಿಮಗೆ ನಿಜ ಹೇಳ್ತೀನಿ, ನೀವು ಭೂಮಿಯಲ್ಲಿ ತೆರೆದ್ರೆ ಸ್ವರ್ಗದಲ್ಲಿ ಈಗಾಗಲೇ ತೆರೆದಿರುತ್ತೆ. ನೀವು ಭೂಮಿಯಲ್ಲಿ ಮುಚ್ಚಿದ್ರೆ ಸ್ವರ್ಗದಲ್ಲಿ ಈಗಾಗಲೇ ಮುಚ್ಚಿರುತ್ತೆ. 19 ನಾನು ನಿಮಗೆ ಮತ್ತೆ ಹೇಳ್ತೀನಿ, ಒಂದು ಪ್ರಾಮುಖ್ಯ ವಿಷ್ಯದ ಬಗ್ಗೆ ಭೂಮಿ ಮೇಲೆ ನಿಮ್ಮಲ್ಲಿ ಯಾರಾದ್ರೂ ಇಬ್ರು ಪ್ರಾರ್ಥಿಸಿದ್ರೆ ಸ್ವರ್ಗದಲ್ಲಿರೋ ನನ್ನ ಅಪ್ಪ ಅವ್ರಿಗೋಸ್ಕರ ಅದನ್ನ ಮಾಡ್ತಾನೆ.+ 20 ಯಾಕಂದ್ರೆ ನನ್ನ ಹೆಸ್ರಲ್ಲಿ ಇಬ್ರು ಅಥವಾ ಮೂವರು ಎಲ್ಲಿ ಸೇರಿಬರ್ತಾರೋ+ ಅಲ್ಲಿ ಅವ್ರ ಮಧ್ಯ ನಾನು ಇರ್ತಿನಿ” ಅಂದನು.
21 ಆಗ ಪೇತ್ರ ಯೇಸು ಹತ್ರ ಬಂದು “ಸ್ವಾಮಿ, ನನ್ನ ಸಹೋದರ ನನ್ನ ವಿರುದ್ಧ ಪಾಪಮಾಡಿದ್ರೆ ಎಷ್ಟು ಸಾರಿ ಕ್ಷಮಿಸಬೇಕು? ಏಳು ಸಾರಿ ಅಲ್ವಾ?” ಅಂತ ಕೇಳಿದ. 22 ಯೇಸು “ಏಳು ಸಾರಿ ಅಲ್ಲ, 77 ಸಾರಿ ಕ್ಷಮಿಸಬೇಕು” ಅಂದನು.+
23 “ದೇವರ ಆಳ್ವಿಕೆಯನ್ನ ಒಬ್ಬ ರಾಜನಿಗೆ ಹೋಲಿಸಬಹುದು. ಅವನು ತನ್ನ ಹತ್ರ ಸಾಲ ತಗೊಂಡಿದ್ದ ಸೇವಕರಿಗೆ ಸಾಲ ತೀರಿಸಿ ಅಂತ ಹೇಳಿದ. 24 ಆಗ 6 ಕೋಟಿ ದಿನಾರು* ಸಾಲ ಮಾಡಿದ್ದ ಒಬ್ಬ ಸೇವಕನನ್ನ ಅವನ ಹತ್ರ ಕರ್ಕೊಂಡು ಬಂದ್ರು. 25 ಸಾಲ ತೀರಿಸೋಕೆ ಅವನ ಹತ್ರ ಏನೂ ಇರ್ಲಿಲ್ಲ. ಅದಕ್ಕೆ ರಾಜ ಅವನಿಗೆ ‘ನಿನ್ನನ್ನ, ನಿನ್ನ ಹೆಂಡತಿ ಮಕ್ಕಳನ್ನ, ನಿನ್ನ ಹತ್ರ ಇರೋದನ್ನೆಲ್ಲ ಮಾರಿ ನನ್ನ ಸಾಲ ತೀರಿಸು’ ಅಂತ ಅಪ್ಪಣೆ ಕೊಟ್ಟ.+ 26 ಆಗ ಆ ಸೇವಕ ಅಡ್ಡಬಿದ್ದು ‘ರಾಜನೇ, ನನಗೆ ಸಮಯ ಕೊಡು. ಎಲ್ಲ ಸಾಲ ತೀರಿಸ್ತೀನಿ’ ಅಂತ ಬೇಡ್ಕೊಂಡ. 27 ಆಗ ರಾಜ ಕನಿಕರಪಟ್ಟು ಅವನನ್ನ ಬಿಟ್ಟುಬಿಟ್ಟ. ಅವನ ಸಾಲ ಮನ್ನಾ ಮಾಡಿದ.+ 28 ಆದ್ರೆ ಆ ಸೇವಕ ಹೋಗಿ ಅವನ ಹತ್ರ 100 ದಿನಾರು ಸಾಲ ತಗೊಂಡಿದ್ದ ಇನ್ನೊಬ್ಬ ಸೇವಕನಿಗಾಗಿ ಹುಡುಕಿದ. ಅವನು ಸಿಕ್ಕಾಗ ಅವನ ಕುತ್ತಿಗೆ ಹಿಸುಕ್ತಾ ‘ನನ್ನ ಸಾಲ ತೀರಿಸು’ ಅಂದ. 29 ಆ ಸಾಲಗಾರ ಅಡ್ಡಬಿದ್ದು ‘ಸಮಯ ಕೊಡು. ನಿನ್ನ ಸಾಲ ತೀರಿಸ್ತೀನಿ’ ಅಂತ ಬೇಡ್ಕೊಂಡ. 30 ಆದ್ರೆ ಇವನು ಜಗ್ಗಲಿಲ್ಲ. ಸಾಲ ತೀರಿಸೋ ತನಕ ಅವನನ್ನ ಜೈಲಿಗೆ ಹಾಕಿಸಿದ. 31 ಇದನ್ನ ನೋಡಿ ಬೇರೆ ಸೇವಕರಿಗೆ ತುಂಬ ದುಃಖ ಆಯ್ತು. ಅವರು ಹೋಗಿ ರಾಜನಿಗೆ ಎಲ್ಲ ಹೇಳಿದ್ರು. 32 ಆಗ ರಾಜ ಆ ಸೇವಕನನ್ನ ಕರೆಸಿ ‘ದುಷ್ಟ, ನೀನು ಬೇಡ್ಕೊಂಡಾಗ ನಾನು ನಿನ್ನ ಸಾಲವನ್ನೆಲ್ಲ ಮನ್ನಾ ಮಾಡಿದೆ ತಾನೇ? 33 ನಾನು ನಿನಗೆ ದಯೆ ತೋರಿಸಿದ ಹಾಗೆ ನೀನೂ ಆ ಸೇವಕನಿಗೆ ದಯೆ ತೋರಿಸಬೇಕಿತ್ತಲ್ವಾ?’ ಅಂದ.+ 34 ರಾಜನಿಗೆ ತುಂಬ ಕೋಪ ಬಂದು ‘ಇವನು ಸಾಲವನ್ನೆಲ್ಲ ತೀರಿಸೋ ತನಕ ಜೈಲಲ್ಲಿ ಕೊಳಿಲಿ’ ಅಂತ ಹೇಳಿ ಕಾವಲುಗಾರರಿಗೆ ಒಪ್ಪಿಸಿಬಿಟ್ಟ. 35 ಅದೇ ತರ ನೀವು ನಿಮ್ಮ ಸಹೋದರನನ್ನ ಮನಸಾರೆ ಕ್ಷಮಿಸದಿದ್ರೆ ಸ್ವರ್ಗದಲ್ಲಿರೋ ನನ್ನ ಅಪ್ಪ ಸಹ ನಿಮ್ಮನ್ನ ಕ್ಷಮಿಸಲ್ಲ” ಅಂದನು.+