ಎಚ್ಚರವಾಗಿರಲು ಒಂದು ಸಮಯ
“ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು. . . . ಆದರೆ ಕಡೇವರೆಗೂ ತಾಳುವವನು ರಕ್ಷಣೆಹೊಂದುವನು.”—ಮಾರ್ಕ 13:10, 13.
1. ನಾವು ತಾಳಿಕೊಳ್ಳಬೇಕು ಮತ್ತು ಧೈರ್ಯದಿಂದಿರಬೇಕು ಏಕೆ?
ನಂಬಿಕೆಯಿಲ್ಲದ ಮೂರ್ಖ ಸಂತತಿಯ ನಡುವೆ ನಾವು ತಾಳಿಕೊಳ್ಳಬೇಕು ನಿಶ್ಚಯ! 1914ರಿಂದ, ಯೇಸುವಿನ ದಿನಗಳಲ್ಲಿದ್ದಂತೆಯೇ, ಮಾನವರ ಒಂದು ಸಂತತಿಯು ಭ್ರಷ್ಟವಾಗಿದೆ. ಮತ್ತು ಇಂದು ಭ್ರಷ್ಟಾಚಾರವು ಜಗದ್ವ್ಯಾಪಕ ಪ್ರಮಾಣದಲ್ಲಿ ನಡೆಯುತ್ತದೆ. ಈ “ಕಡೇ ದಿವಸಗಳಲ್ಲಿ,” ಅಪೊಸ್ತಲ ಪೌಲನಿಂದ ವರ್ಣಿಸಲ್ಪಟ್ಟ “ವ್ಯವಹರಿಸಲು ಕಷ್ಟವಾದ ಕಠಿನಕಾಲಗಳು” ಮಾನವ ಕುಲವನ್ನು ಬಾಧಿಸುತ್ತಿವೆ. ‘ದುಷ್ಟರೂ ವಂಚಕರೂ ಕೆಟ್ಟತನದಿಂದ ಇನ್ನೂ ಹೆಚ್ಚಾದ ಕೆಟ್ಟತನಕ್ಕೆ ಮುಂದುವರಿಯುತ್ತಾ ಇದ್ದಾರೆ.’ “ಲೋಕವೆಲ್ಲವು” ಪಿಶಾಚನಾದ ಸೈತಾನನೆಂಬ “ಕೆಡುಕನ ವಶದಲ್ಲಿ ಬಿದಿದ್ದೆ,” ಎಂಬುದು ಅತಿ ಸ್ಪಷ್ಟ, ಅವನೀಗ ಭೂಮಿಯನ್ನು ಧ್ವಂಸಗೊಳಿಸುವ ತನ್ನ ಅಂತಿಮ ಪ್ರಯತ್ನಕ್ಕೆ ಇಳಿದಿದ್ದಾನೆ. ಆದರೆ ಧೈರ್ಯವಾಗಿರ್ರಿ! ನೀತಿ ಪ್ರಿಯರೆಲ್ಲರಿಗೆ ಶಾಶ್ವತ ಉಪಶಮನವನ್ನು ತರುವ ಒಂದು “ಮಹಾ ಸಂಕಟ”ವು ಬೇಗನೆ ಬರುತ್ತಲಿದೆ.—2 ತಿಮೊಥೆಯ 3:1-5, 13, NW; 1 ಯೋಹಾನ 5:19; ಪ್ರಕಟನೆ 7:14.
2. 1914ರಲ್ಲಿ ಪ್ರವಾದನೆಯು ಹೇಗೆ ನೆರವೇರಿತು?
2 ಸಂತೋಷಕರವಾಗಿ, ಮಾನವ ಕುಲದ ಪೀಡಕ ಶತ್ರುಗಳನ್ನು ತೆಗೆದುಹಾಕುವ ಸಿದ್ಧತೆಯಲ್ಲಿ, ಯೆಹೋವನು ಈಗ ಕರ್ತನಾದ ಯೇಸು ಕ್ರಿಸ್ತನನ್ನು ಪರಲೋಕದಲ್ಲಿ ಸಿಂಹಾಸನಕ್ಕೇರಿಸಿದ್ದಾನೆ. (ಪ್ರಕಟನೆ 11:15) ಮೆಸ್ಸೀಯನ ಮೊದಲನೆಯ ಆಗಮನದ ಸಮಯದಲ್ಲಿ ನಡೆದಂತೆಯೇ, ಈ ಶತಮಾನದಲ್ಲೂ, ದಾನಿಯೇಲನಿಂದ ಬರೆಯಲ್ಪಟ್ಟ ಒಂದು ಗಮನಾರ್ಹ ಪ್ರವಾದನೆಯು ನೆರವೇರಿಕೆಯನ್ನು ಪಡೆದಿದೆ. ದಾನಿಯೇಲ 4:16, 17, 32 (NW)ರಲ್ಲಿ, ಭೂಮಿಯ ಮೇಲಣ ನ್ಯಾಯಬದ್ಧ ರಾಜತ್ವವನ್ನು “ಏಳುಕಾಲಗಳ” ಒಂದು ಕಾಲಾವಧಿಯ ತನಕ ತಡೆದಿಡುವುದರ ಕುರಿತು ನಮಗೆ ಹೇಳಲ್ಪಟ್ಟಿದೆ. ಅವುಗಳ ದೊಡ್ಡ ನೆರವೇರಿಕೆಯಲ್ಲಿ, ಈ ಏಳು ಕಾಲಗಳು, ಪ್ರತಿಯೊಂದರಲ್ಲಿ 360 ‘ದಿನಗಳು’ ಇರುವ ಏಳು ಬೈಬಲ್ ವರ್ಷಗಳಾಗುತ್ತವೆ ಅಥವಾ ಮೊತ್ತದಲ್ಲಿ 2,520 ವರ್ಷಗಳಾಗುತ್ತವೆ.a ಬಾಬೆಲು ಇಸ್ರಾಯೇಲ್ ರಾಜ್ಯವನ್ನು ಕಾಲಕೆಳಗೆ ತುಳಿದಾಡಲು ಪ್ರಾರಂಭಿಸಿದ ಸಾ.ಶ.ಪೂ. 607ರಿಂದ ಅದು ಮೊದಲುಗೊಂಡು, ಯೇಸು ಮಾನವ ಕುಲದ ನ್ಯಾಯಬದ್ಧ ಅರಸನಾಗಿ ಪರಲೋಕದಲ್ಲಿ ಸಿಂಹಾಸನಾರೂಢನಾದ ವರ್ಷವಾದ ಸಾ.ಶ. 1914ರ ತನಕ ಅವು ಮುಂಬರಿದವು. ಆಗ “ಅನ್ಯದೇಶದವರ ಸಮಯಗಳು” ಅಂತ್ಯಗೊಂಡವು. (ಲೂಕ 21:24) ಆದರೆ ರಾಷ್ಟ್ರಗಳು ಮೆಸ್ಸೀಯ ಸಂಬಂಧವಾದ ರಾಜ್ಯದ ಒಳಬರುವಿಕೆಗೆ ಮಣಿಯಲು ನಿರಾಕರಿಸಿದವು.—ಕೀರ್ತನೆ 2:1-6, 10-12; 110:1, 2.
3, 4. (ಎ) ಒಂದನೆಯ ಶತಮಾನದ ಘಟನೆಗಳ ಯಾವ ಹೋಲಿಕೆಯನ್ನು ನಮ್ಮ ಕಾಲದವುಗಳಿಗೆ ಮಾಡಬಹುದು? (ಬಿ) ಯಾವ ಸಂಬಂಧಿತ ಪ್ರಶ್ನೆಗಳನ್ನು ಕೇಳಬಹುದು?
3 ವರ್ಷಗಳ 70ನೆಯ ವಾರ (ಸಾ.ಶ. 29-36) ಗೋಚರಿಸಿದಾಗ, ಮತ್ತು ಪುನಃ 1914ನೆಯ ವರ್ಷವು ಹತ್ತಿರವಾದಂತೆ, ದೈವಭಕ್ತರಾದ ಜನರು ಮೆಸ್ಸೀಯನ ಆಗಮನಕ್ಕಾಗಿ ನಿರೀಕ್ಷಿಸಿದ್ದರು. ಮತ್ತು ಆತನು ಖಂಡಿತವಾಗಿಯೂ ಆಗಮಿಸಿದನು! ಆದರೂ ಪ್ರತಿಯೊಂದು ವಿದ್ಯಮಾನದಲ್ಲಿ ಅವನ ಆಗಮನದ ವಿಧಾನವು ನಿರೀಕ್ಷಣೆಗಿಂತ ಬೇರೆಯಾಗಿತ್ತು. ಪ್ರತಿಯೊಂದು ವಿದ್ಯಮಾನದಲ್ಲಿ ಸಹ, ಒಂದು ತುಲನಾತ್ಮಕ ಕಾಲಾವಧಿಯ ಅನಂತರ, ಒಂದು ಕೆಟ್ಟ “ಸಂತತಿ”ಯು ಕೊನೆಗೆ ಒಂದು ದೈವಿಕ ರಾಜಾಜ್ಞೆಯಿಂದಾಗಿ ಸಂಹಾರವನ್ನು ಅನುಭವಿಸುತ್ತದೆ.—ಮತ್ತಾಯ 24:34.
4 ನಮ್ಮ ಹಿಂದಿನ ಲೇಖನದಲ್ಲಿ, ಯೇಸುವಿನ ಮರಣಕ್ಕಾಗಿ ಹಟತೊಟ್ಟ ಕೆಟ್ಟ ಯೆಹೂದಿ ಜನಾಂಗವು ಹೇಗೆ ಕೊನೆಗೊಂಡಿತೆಂಬುದನ್ನು ನಾವು ಗಮನಿಸಿದೆವು. ಹಾಗಾದರೆ, ಈಗಲೂ ಆತನನ್ನು ವಿರೋಧಿಸುವ ಅಥವಾ ದುರ್ಲಕ್ಷಿಸುವ ಮಾನವ ಕುಲದ ಈ ಧ್ವಂಸಕಾರಕ ಸಂತತಿಯ ಕುರಿತೇನು? ಈ ನಂಬಿಕೆಯಿಲ್ಲದಂಥ ಸಂತತಿಯ ಮೇಲೆ ತೀರ್ಪು ಯಾವಾಗ ನಿರ್ವಹಿಸಲ್ಪಡುವುದು?
“ಎಚ್ಚರವಾಗಿರಿ”!
5. (ಎ) ಯಾವ ಒಳ್ಳೇ ಕಾರಣಕ್ಕಾಗಿ ಯೆಹೋವನ ‘ದಿನ ಮತ್ತು ಗಳಿಗೆಯ’ ಕುರಿತು ನಮಗೆ ತಿಳಿಯುವ ಅಗತ್ಯವಿಲ್ಲ? (ಬಿ) ಮಾರ್ಕನಿಗನುಸಾರವಾಗಿ, ಯಾವ ಸ್ವಸ್ಥ ಸೂಚನೆಯಿಂದ ಯೇಸು ತನ್ನ ಪ್ರವಾದನೆಯನ್ನು ಮುಗಿಸಿದನು?
5 “ಮಹಾ ಸಂಕಟ”ದ ಸಮಯಕ್ಕೆ ನಡಿಸುವ ಘಟನಾವಳಿಗಳನ್ನು ಮುಂತಿಳಿಸಿದ ಬಳಿಕ, ಯೇಸು ಕೂಡಿಸಿದ್ದು: “ಇದಲ್ಲದೆ ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.” (ಮತ್ತಾಯ 24:3-36; ಮಾರ್ಕ 13:3-32) ಘಟನೆಗಳು ಸಂಭವಿಸುವ ಆ ಸರಿಯಾದ ಸಮಯವನ್ನು ನಮಗೆ ತಿಳಿಯುವ ಅಗತ್ಯವಿಲ್ಲ. ಬದಲಾಗಿ, ಎಚ್ಚರವಾಗಿರುವುದು, ದೃಢವಾದ ನಂಬಿಕೆಯನ್ನು ಬೆಳೆಸಿಕೊಳ್ಳುವುದು, ಮತ್ತು ಯೆಹೋವನ ಸೇವೆಯಲ್ಲಿ ಕಾರ್ಯಮಗ್ನರಾಗಿರುವುದರ ಮೇಲೆ ನಮ್ಮ ಕೇಂದ್ರಬಿಂದುವಿರಬೇಕು—ಒಂದು ತಾರೀಖನ್ನು ಲೆಕ್ಕಮಾಡುವ ಮೇಲಲ್ಲ. ಯೇಸು ತನ್ನ ಮಹಾ ಪ್ರವಾದನೆಯನ್ನು ಹೀಗನ್ನುವ ಮೂಲಕ ಕೊನೆಗೊಳಿಸಿದನು: “ಆ ಕಾಲವು ಯಾವಾಗ ಬರುವದೋ ನಿಮಗೆ ಗೊತ್ತಿಲ್ಲವಾದ್ದರಿಂದ ನೋಡಿಕೊಳ್ಳಿರಿ, ಜಾಗರೂಕರಾಗಿರಿ. . . . ಎಚ್ಚರವಾಗಿರಿ; . . . ನಾನು ನಿಮಗೆ ಹೇಳಿದ್ದನ್ನು ಎಲ್ಲರಿಗೂ ಹೇಳುತ್ತೇನೆ. ಎಚ್ಚರವಾಗಿರಿ.” (ಮಾರ್ಕ 13:33-37) ಇಂದಿನ ಜಗತ್ತಿನಲ್ಲಿ ಗಂಡಾಂತರವು ಕತ್ತಲೆಯಲ್ಲಿ ಗುಪ್ತವಾಗಿ ಹೊಂಚುಹಾಕುತ್ತಿದೆ. ನಾವು ಎಚ್ಚರವಾಗಿರಲೇಬೇಕು!—ರೋಮಾಪುರ 13:11-13.
6. (ಎ) ನಮ್ಮ ನಂಬಿಕೆಯನ್ನು ಯಾವುದರ ಮೇಲೆ ದೃಢವಾಗಿಡಬೇಕು? (ಬಿ) ನಾವು ಹೇಗೆ ‘ನಮ್ಮ ದಿನಗಳನ್ನು ಎಣಿಸಿ’ಕೊಳ್ಳಬಹುದು? (ಸಿ) “ಸಂತತಿ”ಯಿಂದ ಯೇಸು ಮೂಲಭೂತವಾಗಿ ಏನನ್ನು ಅರ್ಥೈಸುತ್ತಾನೆ?
6 ದುಷ್ಟ ವ್ಯವಸ್ಥೆಯ ಈ ಕಡೇ ದಿನಗಳ ಕುರಿತ ಪ್ರೇರಿತ ಪ್ರವಾದನೆಗಳಿಗೆ ನಾವು ಲಕ್ಷ್ಯಕೊಡಬೇಕು ಮಾತ್ರವಲ್ಲ ನಮ್ಮ ನಂಬಿಕೆಯನ್ನು ಮುಖ್ಯವಾಗಿ ಕ್ರಿಸ್ತ ಯೇಸುವಿನ ಅಮೂಲ್ಯವಾದ ಯಜ್ಞದ ಮೇಲೆ ಮತ್ತು ಅದರಲ್ಲಿ ಆಧಾರಿಸಿರುವ ದೇವರ ಆಶ್ಚರ್ಯಕರ ವಾಗ್ದಾನಗಳ ಮೇಲೆ ದೃಢವಾಗಿರಿಸಬೇಕು. (ಇಬ್ರಿಯ 6:17-19; 9:14; 1 ಪೇತ್ರ 1:18, 19; 2 ಪೇತ್ರ 1:16-19) ಈ ದುಷ್ಟ ವ್ಯವಸ್ಥೆಯ ಅಂತ್ಯವನ್ನು ಕಾಣುವ ಆತುರದಿಂದ, ಯೆಹೋವನ ಜನರು ಕೆಲವೊಮ್ಮೆ “ಮಹಾ ಸಂಕಟ”ವು ಯಾವಾಗ ಹೊಡೆಯುವುದೆಂಬ ಸಮಯದ ಕುರಿತು ಊಹಾಪೋಹಗಳನ್ನು ಮಾಡಿದ್ದಾರೆ, 1914ರಿಂದ ಒಂದು ಸಂತತಿಯ ಆಯುಷ್ಯವೆಷ್ಟು ಎಂಬ ಎಣಿಕೆಗಳನ್ನು ಸಹ ಇದಕ್ಕೆ ಜೋಡಿಸಿ ನೋಡಿದ್ದಾರೆ. ಆದರೂ, ನಾವು “ಜ್ಞಾನದ ಹೃದಯವನ್ನು ಪಡಕೊಳ್ಳು”ವುದು, ಒಂದು ಸಂತತಿಯಲ್ಲಿ ಎಷ್ಟು ವರ್ಷಗಳು ಅಥವಾ ದಿನಗಳು ಸಂಯೋಜಿತವಾಗಿವೆಯೆಂದು ಊಹಾಪೋಹಗಳನ್ನು ಮಾಡುವ ಮೂಲಕವಲ್ಲ, ಬದಲಾಗಿ ಯೆಹೋವನಿಗೆ ಹರ್ಷಭರಿತ ಸುತ್ತಿಯನ್ನು ತರುವುದರಲ್ಲಿ ನಾವು ಹೇಗೆ ‘ನಮ್ಮ ದಿನಗಳನ್ನು ಎಣಿಸು’ತ್ತೇವೆಂದು ಯೋಚಿಸುವ ಮೂಲಕವೇ. (ಕೀರ್ತನೆ 90:12) ಸಮಯವನ್ನು ಲೆಕ್ಕಿಸಲು ಒಂದು ನಿಯಮವನ್ನು ಒದಗಿಸುವ ಬದಲಿಗೆ, ಯೇಸುವಿನಿಂದ ಬಳಸಲ್ಪಟ್ಟಂತೆ “ಸಂತತಿ” ಎಂಬ ಪರಿಭಾಷೆಯು, ಮುಖ್ಯವಾಗಿ ಅವರನ್ನು ಗುರುತಿಸುವ ಗುಣಲಕ್ಷಣಗಳಿರುವ ಒಂದು ನಿರ್ದಿಷ್ಟ ಐತಿಹಾಸಿಕ ಕಾಲಾವಧಿಯ ಸಮಕಾಲೀನ ಜನರಿಗೆ ನಿರ್ದೇಶಿಸುತ್ತದೆ.b
7. “1914ರ ಸಂತತಿಯ” ಕುರಿತು ಇತಿಹಾಸದ ಒಬ್ಬ ಪ್ರೊಫೆಸರರು ಏನು ಬರೆಯುತ್ತಾರೆ ಮತ್ತು ಇದು ಯೇಸುವಿನ ಪ್ರವಾದನೆಯೊಂದಿಗೆ ಹೇಗೆ ಹೊಂದಿಕೆಯಲ್ಲಿದೆ?
7 ಮೇಲಿನ ವಿಷಯಕ್ಕೆ ಹೊಂದಿಕೆಯಾಗಿ, ಇತಿಹಾಸದ ಪ್ರೊಫೆಸರ್ ರಾಬರ್ಟ್ ವಾಲ್, 1914ರ ಸಂತತಿ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಬರೆದದ್ದು: “ಒಂದು ಐತಿಹಾಸಿಕ ಸಂತತಿಯು ಅದರ ಕಾಲಗಣನೆಯ ತಾರೀಖುಗಳಿಂದ ವಿವರಿಸಲ್ಪಡುವುದಿಲ್ಲ . . . ಅದು ತಾರೀಖುಗಳ ಒಂದು ಕ್ಷೇತ್ರವಲ್ಲ.” ಆದರೆ ಅವರು ತಿಳಿಸಿದ್ದೇನಂದರೆ lನೆಯ ಲೋಕ ಯುದ್ಧವು “ಭೂತಕಾಲದೊಂದಿಗಿನ ಸಂಬಂಧವನ್ನು ಒಂದು ಕಂಗೆಡಿಸುವ ರೀತಿಯಲ್ಲಿ ಕಡಿದುಹಾಕಿತು.” ಅವರು ಮತ್ತೂ ಅಂದದ್ದು: “ಯಾರು ಯುದ್ಧವನ್ನು ಪಾರಾದರೋ ಅವರು, ಆಗಸ್ಟ್ 1914ರಂದು ಒಂದು ಲೋಕವು ಅಂತ್ಯಗೊಂಡು ಇನ್ನೊಂದು ಲೋಕವು ಆರಂಭಿಸಿತು ಎಂಬ ನಂಬಿಕೆಯನ್ನು ತಮ್ಮಿಂದ ಎಂದೂ ತೊಲಗಿಸಲಾರದೆ ಹೋದರು.” ಅದೆಷ್ಟು ಸತ್ಯ! ಈ ಹೇಳಿಕೆಯು ವಿಷಯದ ಕ್ಲಿಷ್ಟಾಂಶದ ಮೇಲೆ ಕೇಂದ್ರೀಕರಿಸುತ್ತದೆ. ಮಾನವ ಕುಲದ ಈ “ಸಂತತಿ”ಯು 1914ರಿಂದ ಎದೆಗುಂದಿಸುವ ಬದಲಾವಣೆಗಳನ್ನು ಅನುಭವಿಸಿದೆ. ಕೋಟ್ಯಂತರ ಜನರ ರಕ್ತವು ಭೂಮಿಯನ್ನು ತೋಯಿಸಿದ್ದನ್ನು ಅದು ಕಂಡಿದೆ. ಹೋರಾಟ, ಕಗ್ಗೊಲೆ, ಭಯವಾದ, ಪಾತಕ, ಮತ್ತು ನಿಯಮರಾಹಿತ್ಯವು ಲೋಕವ್ಯಾಪಕವಾಗಿ ಹೊರಸೂಸಿರುತ್ತದೆ. ಕ್ಷಾಮ, ರೋಗ, ಮತ್ತು ಅನೈತಿಕತೆಯು ನಮ್ಮ ಭೂಗೋಳವನ್ನೇ ಬೆನ್ನಟ್ಟಿದೆ. ಯೇಸು ಮುಂತಿಳಿಸಿದ್ದು: “ಹಾಗೆಯೇ ನೀವು [ಆತನ ಶಿಷ್ಯರು] ಸಹ ಇವುಗಳಾಗುವದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವದೆ ಎಂದು ತಿಳುಕೊಳ್ಳಿರಿ. ಎಲ್ಲಾ ಆಗುವ ತನಕ ಈ ಸಂತತಿಯು ಅಳಿದುಹೋಗುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”—ಲೂಕ 21:31, 32.
8. ಎಚ್ಚರವಾಗಿರುವುದರ ಅಗತ್ಯವನ್ನು ಯೆಹೋವನ ಪ್ರವಾದಿಗಳು ಹೇಗೆ ಒತ್ತಿಹೇಳುತ್ತಾರೆ?
8 ಹೌದು, ಮೆಸ್ಸೀಯ ಸಂಬಂಧಿತ ರಾಜ್ಯದ ಪೂರ್ಣ ವಿಜಯವು ಸಮೀಪವಾಗಿದೆ! ಹೀಗಿರಲಾಗಿ, ತಾರೀಖುಗಳಿಗಾಗಿ ನೋಡುವ ಮೂಲಕ ಅಥವಾ ಒಂದು “ಸಂತತಿ”ಯ ಅಕ್ಷರಶಃ ಆಯುಷ್ಯದ ಕುರಿತು ಊಹಾಪೋಹಗಳನ್ನು ಮಾಡುವ ಮೂಲಕ ಏನಾದರೂ ಲಭ್ಯವಾಗಲಿದೆಯೇ? ನಿಶ್ಚಯವಾಗಿಯೂ ಇಲ್ಲ! ಹಬಕ್ಕೂಕ 2:3 (NW) ಸ್ಪಷ್ಟವಾಗಿಗಿ ಹೇಳುವುದು: “ದರ್ಶನವು . . . ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ ತರ್ವೆಪಡುತ್ತದೆ, ಮೋಸಮಾಡದು; ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು, ತಾಮಸವಾಗದು.” ಯೆಹೋವನ ಲೆಕ್ಕ ತೀರಿಸುವ ದಿನವು ಎಂದಿಗಿಂತಲೂ ಹೆಚ್ಚು ಒತ್ತಾಗಿ ಧಾವಿಸುತ್ತಿದೆ.—ಯೆರೆಮೀಯ 25:31-33; ಮಲಾಕಿಯ 4:1.
9. 1914ರಿಂದ ಯಾವ ವಿಕಸನಗಳು ಸಮಯವು ಸ್ವಲ್ಪವಿದೆಯೆಂದು ತೋರಿಸುತ್ತವೆ?
9 ಕ್ರಿಸ್ತನ ರಾಜ್ಯದ ಆಳಿಕೆಯು 1914ರಲ್ಲಿ ಆರಂಭಿಸಿದಾಗ, ಸೈತಾನನು ಭೂಮಿಯ ಮೇಲೆ ದೊಬ್ಬಲ್ಪಟ್ಟನು. ಇದು ‘ಭೂಮಿಗೆ ದುರ್ಗತಿಯ’ ಅರ್ಥದಲ್ಲಿತ್ತು, ಯಾಕೆಂದರೆ “ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.” (ಓರೆಅಕ್ಷರಗಳು ನಮ್ಮವು.) (ಪ್ರಕಟನೆ 12:12) ಸೈತಾನನ ಆಡಳಿತದ ಸಾವಿರಾರು ವರ್ಷಗಳಿಗೆ ಹೋಲಿಸುವಾಗ, ಆ ಸಮಯವು ಸ್ವಲ್ಪವೇ ಸರಿ. ರಾಜ್ಯವು ಹತ್ತಿರವಾಗಿದೆ, ಅಂತೆಯೇ ಈ ಕೆಟ್ಟ ಸಂತತಿಯ ಮೇಲೆ ನ್ಯಾಯತೀರ್ಪನ್ನು ನಿರ್ವಹಿಸುವುದಕ್ಕಾಗಿ ಯೆಹೋವನ ದಿನ ಮತ್ತು ಗಳಿಗೆಯೂ ಹತ್ತಿರವಾಗಿದೆ!—ಜ್ಞಾನೋಕ್ತಿ 3:25; 10:24, 25.
ಅಳಿದುಹೋಗುವ ಆ “ಸಂತತಿ”
10. “ಈ ಸಂತತಿಯು” ನೋಹನ ದಿವಸಗಳಂತಹದ್ದಾಗಿದೆ ಹೇಗೆ?
10 ಮತ್ತಾಯ 24:34, 35ರ ಯೇಸುವಿನ ಹೇಳಿಕೆಯನ್ನು ನಾವು ಹೆಚ್ಚು ಒತ್ತಾಗಿ ಪರೀಕ್ಷಿಸೋಣ: “ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದುಹೋಗುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.” (ಓರೆಅಕ್ಷರಗಳು ನಮ್ಮವು.) ಯೇಸುವಿನ ಹಿಂಬಾಲಿಸುವ ಮಾತುಗಳು ‘ಆ ದಿನವೂ ಗಳಿಗೆಯೂ ಯಾರಿಗೂ ತಿಳಿಯದು’ ಎಂದು ತೋರಿಸುತ್ತವೆ. ಎಷ್ಟೋ ಹೆಚ್ಚು ಪ್ರಾಮುಖ್ಯವಾಗಿ, ಈ ಸಂತತಿಯಲ್ಲಿ ನಮ್ಮ ಸುತ್ತಮುತ್ತಲಿರುವ ಪಾಶಗಳನ್ನು ನಾವು ವರ್ಜಿಸಲೇಬೇಕೆಂದು ಆತನು ತೋರಿಸುತ್ತಾನೆ. ಹೀಗೆ ಯೇಸು ಕೂಡಿಸುವುದು: “ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯೂ [“ಸಾನ್ನಿಧ್ಯ,” NW] ಇರುವದು. ಹೇಗಂದರೆ ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದು ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೆ ಇದರ್ದಲ್ಲಾ. ಅದರಂತೆ ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿಯೂ ಇರುವದು.” (ಮತ್ತಾಯ 24:36-39) ಯೇಸುವು ಇಲ್ಲಿ ತನ್ನ ದಿನದ ಸಂತತಿಯನ್ನು ನೋಹನ ದಿನದ ಸಂತತಿಗೆ ಹೋಲಿಸಿದನು.—ಆದಿಕಾಂಡ 6:5, 9; ಪಾದಟಿಪ್ಪಣಿ, NW.
11. ಮತ್ತಾಯ ಮತ್ತು ಲೂಕನು ವರದಿ ಮಾಡಿದಂತೆ, ‘ಸಂತತಿಗಳ’ ಯಾವ ಹೋಲಿಕೆಯನ್ನು ಯೇಸು ಮಾಡಿದನು?
11 ಯೇಸು ‘ಸಂತತಿಗಳ’ ಈ ಹೋಲಿಕೆ ಮಾಡುವುದನ್ನು ಅಪೊಸ್ತಲರು ಕೇಳುವುದು ಇದು ಮೊದಲನೆಯ ಬಾರಿಯಲ್ಲ, ಯಾಕೆಂದರೆ ಕೆಲವು ದಿನಗಳ ಮುಂಚೆ ಆತನು ತನ್ನ ಕುರಿತು ಹೀಗಂದಿದ್ದನು: “ಹಾಗೆಯೇ ಮನುಷ್ಯಕುಮಾರನು . . . ಬಹು ಕಷ್ಟಗಳನ್ನನುಭವಿಸಿ ಈಗಿನ ಕಾಲದ ಜನರಿಂದ [“ಈ ಸಂತತಿಯಿಂದ,” NW] ನಿರಾಕರಿಸಲ್ಪಡಬೇಕು. ನೋಹನ ದಿವಸಗಳಲ್ಲಿ ನಡೆದ ಹಾಗೆಯೇ ಮನುಷ್ಯಕುಮಾರನ ದಿವಸಗಳಲ್ಲಿಯೂ ನಡೆಯುವದು.” (ಓರೆಅಕ್ಷರಗಳು ನಮ್ಮವು.) (ಲೂಕ 17:24-26) ಹೀಗೆ, ಮತ್ತಾಯ 24ನೆಯ ಅಧ್ಯಾಯ ಮತ್ತು ಲೂಕ 17ನೆಯ ಅಧ್ಯಾಯವು ಒಂದೇ ರೀತಿಯ ಹೋಲಿಕೆಯನ್ನು ಮಾಡುತ್ತವೆ. ನೋಹನ ದಿವಸಗಳಲ್ಲಿ “ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದ” ಮತ್ತು ಜಲಪ್ರಳಯದಲ್ಲಿ ನಾಶವಾದ “ಭೂನಿವಾಸಿಗಳೆಲ್ಲರೂ” “ಈ ಸಂತತಿ”ಯೇ ಆಗಿತ್ತು. ಯೇಸುವಿನ ದಿನಗಳಲ್ಲಿ “ಈ ಸಂತತಿ,”ಯು ಯೇಸುವನ್ನು ತಿರಸ್ಕರಿಸುತ್ತಿದ್ದ ಧರ್ಮಭ್ರಷ್ಟ ಯೆಹೂದಿ ಜನರಾಗಿದ್ದರು.—ಆದಿಕಾಂಡ 6:11, 12; 7:1.
12, 13. (ಎ) ಅಳಿದುಹೋಗಲೇ ಬೇಕಾದ ಇಂದಿನ “ಈ ಸಂತತಿ”ಯು ಯಾವುದು? (ಬಿ) ಯೆಹೋವನ ಜನರು ಇಂದು ಈ “ವಕ್ರಬುದ್ಧಿಯುಳ್ಳ ಮೂರ್ಖಜಾತಿ”ಯೊಂದಿಗೆ ಹೇಗೆ ನಿಭಾಯಿಸುತ್ತಾರೆ?
12 ಆದುದರಿಂದ, ಇಂದು ಯೇಸುವಿನ ಪ್ರವಾದನೆಯ ಕೊನೆಯ ನೆರವೇರಿಕೆಯಲ್ಲಿ, “ಈ ಸಂತತಿ”ಯು, ಕ್ರಿಸ್ತನ ಸಾನ್ನಿಧ್ಯದ ಸೂಚನೆಯನ್ನು ಕಾಣುವ ಆದರೆ ತಮ್ಮ ಮಾರ್ಗಗಳನ್ನು ಸರಿಪಡಿಸಿಕೊಳ್ಳಲು ತಪ್ಪುವ ಭೂಜನರಿಗೆ ಸೂಚಿಸುತ್ತದೆ ಎಂಬುದು ವ್ಯಕ್ತ. ಇದಕ್ಕೆ ವೈದೃಶ್ಯದಲ್ಲಿ, ಯೇಸುವಿನ ಶಿಷ್ಯರಾದ ನಾವೂ “ಈ ಸಂತತಿಯ” ಜೀವನ ಶೈಲಿಯಿಂದ ರೂಪಿಸಲ್ಪಡಲು ನಿರಾಕರಿಸುತ್ತೇವೆ. ಈ ಲೋಕದಲ್ಲಿ ಇರುವುದಾದರೂ, ನಾವು ಅದರ ಯಾವ ಭಾಗವೂ ಆಗಿರಬಾರದು ಯಾಕೆಂದರೆ “ನೆರವೇರುವ [“ನೇಮಿತ,” NW] ಸಮಯವು ಸಮೀಪವಾಗಿದೆ.” (ಪ್ರಕಟನೆ 1:3; ಯೋಹಾನ 17:16) ಅಪೊಸ್ತಲ ಪೌಲನು ನಮಗೆ ಬುದ್ಧಿ ಹೇಳುವುದು: “ಗುಣುಗುಟ್ಟದೆಯೂ ವಿವಾದವಿಲ್ಲದೆಯೂ ಎಲ್ಲವನ್ನು ಮಾಡಿರಿ. ಹೀಗೆ ನೀವು ನಿರ್ದೋಷಿಗಳೂ ವಕ್ರಬುದ್ಧಿಯುಳ್ಳ ಮೂರ್ಖಜಾತಿಯ ಮಧ್ಯದಲ್ಲಿ ದೇವರ ನಿಷ್ಕಳಂಕರಾದ ಮಕ್ಕಳಾಗಿರುವಿರಿ. ಇವರೊಳಗೆ . . . ಹೊಳೆಯುವ ಜ್ಯೋತಿರ್ಮಂಡಲಗಳಂತೆ ಕಾಣಿಸುವವರಾಗಿದ್ದೀರಲ್ಲಾ.”—ಫಿಲಿಪ್ಪಿ 2:14, 15; ಕೊಲೊಸ್ಸೆ 3:5-10; 1 ಯೋಹಾನ 2:15-17.
13 ನಾವು ‘ಜ್ಯೋತಿರ್ಮಂಡಲಗಳಂತೆ ಹೊಳೆಯುವುದರಲ್ಲಿ’ ಶುದ್ಧ ಕ್ರೈಸ್ತ ವ್ಯಕ್ತಿತ್ವವನ್ನು ಪ್ರದರ್ಶಿಸುವುದು ಮಾತ್ರವಲ್ಲ, ಎಲ್ಲದಕ್ಕಿಂತ ಹೆಚ್ಚಾಗಿ, ಯೇಸುವಿನ ಪ್ರವಾದನಾ ನಿಯೋಗವನ್ನು ನೆರವೇರಿಸುವುದೂ ಸೇರಿರುತ್ತದೆ: “ಪರಲೋಕರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ಆ ಅಂತ್ಯವು ಯಾವಾಗ ಬರುವುದೆಂದು ಯಾವ ಮಾನವನೂ ಹೇಳಶಕ್ತನಲ್ಲ, ಆದರೆ “ಭೂಲೋಕದ ಕಟ್ಟಕಡೆಯ ವರೆಗೂ,” ದೇವರು ಸಾಕೆಂದು ಭಾವಿಸುವ ತನಕ ಒಮ್ಮೆ ಸಾಕ್ಷಿಯು ಕೊಡಲ್ಪಟ್ಟಾಗ, ದುಷ್ಟ ಜನರ “ಈ ಸಂತತಿ”ಯ ಅಂತ್ಯವು ಬರುವುದೆಂದು ನಮಗೆ ತಿಳಿದದೆ.—ಅ. ಕೃತ್ಯಗಳು 1:8.
‘ಆ ದಿನವೂ ಗಳಿಗೆಯೂ’
14. “ಕಾಲಗಳನ್ನೂ ಗಳಿಗೆಗಳನ್ನೂ” ಕುರಿತು ಯೇಸು ಮತ್ತು ಪೌಲನು, ಇಬ್ಬರೂ ಯಾವ ಬುದ್ಧಿವಾದವನ್ನು ಕೊಟ್ಟರು, ಮತ್ತು ನಾವು ಹೇಗೆ ಪ್ರತಿಕ್ರಿಯಿಸಬೇಕು?
14 ಯೆಹೋವನು ಉದ್ದೇಶಿಸುವ ಮಟ್ಟಿಗೆ ಭೌಗೋಲಿಕ ಸಾಕ್ಷಿಕಾರ್ಯವು ನಿರ್ವಹಿಸಲ್ಪಡುವಾಗ, ಅದು ಈ ಲೋಕದ ವ್ಯವಸ್ಥೆಯನ್ನು ತೆಗೆದುಹಾಕುವ ಆತನ ‘ದಿನವೂ ಗಳಿಗೆಯೂ’ ಆಗಿರುವುದು. ಆ ತಾರೀಖನ್ನು ನಮಗೆ ಮುಂದಾಗಿ ತಿಳಿಯುವ ಅಗತ್ಯವಿಲ್ಲ. ಹೀಗೆ, ಯೇಸುವಿನ ಮಾದರಿಯನ್ನು ಅನುಸರಿಸುತ್ತಾ, ಅಪೊಸ್ತಲ ಪೌಲನು ಬುದ್ಧಿ ಹೇಳಿದ್ದು: “ಸಹೋದರರೇ, ಈ ಸಂಗತಿಗಳು ನಡೆಯಬೇಕಾದ ಕಾಲಗಳನ್ನೂ ಗಳಿಗೆಗಳನ್ನೂ ಕುರಿತು ನಿಮಗೆ ಬರೆಯುವದು ಅವಶ್ಯವಿಲ್ಲ. ರಾತ್ರಿಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ [“ಯೆಹೋವನ,” NW] ದಿನವು ಬರುವದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ. ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.” ಪೌಲನ ಕೇಂದ್ರಬಿಂದುವನ್ನು ಗಮನಿಸಿರಿ: ‘ಜನರು ಹೇಳುತ್ತಿರುವಾಗಲೇ . . . ಅದು ಬರುವದು.’ ಹೌದು, “ಸಮಾಧಾನವಾಗಿಯೂ ನಿರ್ಭಯವಾಗಿಯೂ” ಇರುವ ಮಾತುಕತೆ ಆಗುವಾಗ, ಅದು ಅತ್ಯಲ್ಪವಾಗಿ ನಿರೀಕ್ಷಿಸಲ್ಪಡುವಾಗ, ದೇವರ ತೀರ್ಪು ಫಕ್ಕನೆ ನಿರ್ವಹಿಸಲ್ಪಡುವುದು. ಪೌಲನ ಸಲಹೆಯು ಎಷ್ಟು ಸೂಕ್ತವಾಗಿದೆ: “ಆದಕಾರಣ ನಾವು ಇತರರಂತೆ ನಿದ್ದೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿರೋಣ.”—1 ಥೆಸಲೊನೀಕ 5:1-3, 6; 7-11 ವಚನಗಳನ್ನು ಸಹ ನೋಡಿ; ಅ. ಕೃತ್ಯಗಳು 1:7.
15, 16. (ಎ) ಅರ್ಮಗೆದೋನ್ ನಾವು ನಂಬಿರಬಹುದಾದುದಕ್ಕಿಂತಲೂ ಹೆಚ್ಚು ದೂರವಿದೆಯೆಂದು ನಾವೇಕೆ ಎಣಿಸಬಾರದು? (ಬಿ) ಯೆಹೋವನ ಪರಮಾಧಿಕಾರವು ಭವಿಷ್ಯದಲ್ಲಿ ಬೇಗನೆ ಹೇಗೆ ಘನತೆಗೇರಿಸಲ್ಪಡಬೇಕು?
15 “ಈ ಸಂತತಿ”ಯ ಕುರಿತು ನಮ್ಮ ಹೆಚ್ಚು ನಿಷ್ಕೃಷ್ಟವಾದ ದೃಷ್ಟಿಕೋನದ ಅರ್ಥವು, ಅರ್ಮಗೆದೋನ್ ನಾವು ನೆನಸಿದುದ್ದಕ್ಕಿಂತಲೂ ಹೆಚ್ಚು ದೂರದಲ್ಲಿದೆ ಎಂದೋ? ಅಲ್ಲವೇ ಅಲ್ಲ! ‘ದಿನವೂ ಗಳಿಗೆಯೂ’ ನಮಗೆ ಯಾವ ಸಮಯದಲ್ಲೂ ತಿಳಿದಿರಲಿಲ್ಲವಾದರೂ, ಯೆಹೋವನಿಗೆ ಅದು ಯಾವಾಗಲೂ ತಿಳಿದೇ ಇದೆ, ಮತ್ತು ಆತನು ಬದಲಾಗುವವನಲ್ಲ. (ಮಲಾಕಿಯ 3:6) ಈ ಲೋಕವು ತನ್ನ ಅಂತಿಮ ವಿನಾಶದೆಡೆಗೆ ಹೆಚ್ಚೆಚ್ಚಾಗಿ ಕುಸಿಯುತ್ತಾ ಇದೆಯೆಂಬುದು ಸ್ಫುಟ. ಎಚ್ಚರವಾಗಿರುವ ಅಗತ್ಯವು ಎಂದಿಗಿಂತಲೂ ಹೆಚ್ಚು ಸಂದುಕಟ್ಟಿನದ್ದಾಗಿದೆ. “ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು” ಯೆಹೋವನು ನಮಗೆ ಪ್ರಕಟಪಡಿಸಿದ್ದಾನೆ, ಮತ್ತು ಜರೂರಿಯ ಪೂರ್ಣ ಅರುಹುಳ್ಳವರಾಗಿ ನಾವು ಪ್ರತಿಕ್ರಿಯೆಯನ್ನು ತೋರಿಸಬೇಕು.—ಪ್ರಕಟನೆ 1:1; 11:18; 16:14, 16.
16 ಸಮಯವು ಹತ್ತಿರವಾದಂತೆ, ಎಚ್ಚರವುಳ್ಳವರಾಗಿರಿ, ಯಾಕೆಂದರೆ ಸೈತಾನನ ಸಕಲ ವ್ಯವಸ್ಥೆಯ ಮೇಲೆ ಯೆಹೋವನು ಬೇಗನೆ ವಿಪತ್ತನ್ನು ಬರಮಾಡಲಿದ್ದಾನೆ! (ಯೆರೆಮೀಯ 25:29-31) ಯೆಹೋವನು ಅನ್ನುವುದು: “ಹೀಗೆ ನಾನು ನನ್ನ ಮಹಿಮೆಯನ್ನು ತೋರ್ಪಡಿಸಿ ನನ್ನ ಗೌರವವನ್ನು ಕಾಪಾಡಿಕೊಂಡು ಬಹು ಜನಾಂಗಗಳು ನಾನೇ ಯೆಹೋವನು ಎಂದು ತಿಳಿದುಕೊಳ್ಳುವಂತೆ ಅವುಗಳ ಕಣ್ಣೆದುರಿಗೆ ವ್ಯಕ್ತನಾಗುವೆನು.” (ಯೆಹೆಜ್ಕೇಲ 38:23) ಆ ನಿರ್ಣಾಯಕ “ಯೆಹೋವನ ದಿನವು” ಸಮೀಪವಾಗುತ್ತಿದೆ!—ಯೋವೇಲ 1:15; 2:1, 2; ಆಮೋಸ 5:18-20; ಚೆಫನ್ಯ 2:2, 3.
ನೀತಿಯ ‘‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’’
17, 18. (ಎ) ಯೇಸು ಮತ್ತು ಪೇತ್ರನಿಗೆ ಅನುಸಾರವಾಗಿ, “ಈ ಸಂತತಿಯು” ಹೇಗೆ ಅಳಿದುಹೋಗುತ್ತದೆ? (ಬಿ) ದಿವ್ಯಭಕ್ತಿಯ ನಡವಳಿಕೆ ಮತ್ತು ಕ್ರಿಯೆಗಳ ವಿಷಯದಲ್ಲಿ ನಾವು ಎಚ್ಚರದಿಂದಿರಬೇಕು ಏಕೆ?
17 ‘ಸಂಭವಿಸಬೇಕಾಗಿರುವ ಈ ಎಲ್ಲ ವಿಷಯಗಳ’ ಕುರಿತು ಯೇಸು ಅಂದದ್ದು: “ಭೂಮ್ಯಾಕಾಶಗಳು ಅಳಿದುಹೋಗುವವು, ಅದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.” (ಮತ್ತಾಯ 24:34, 35) “ಭೂಮ್ಯಾಕಾಶಗಳು” ಅಂದರೆ, “ಈ ಸಂತತಿ”ಯ—ಅಧಿಪತಿಗಳು ಮತ್ತು ಪ್ರಜೆಗಳು—ಎಂಬರ್ಥದಲ್ಲಿ ಯೇಸು ನುಡಿದಿರುವುದು ಸಂಭಾವ್ಯ. “ಬೆಂಕಿಯ ಮೂಲಕ ನಾಶವಾಗುವದಕ್ಕೆ . . . ಮತ್ತು ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನಕ್ಕಾಗಿ” ಇಡಲ್ಪಟ್ಟ “ಈಗಿರುವ ಭೂಮ್ಯಾಕಾಶ”ಗಳಿಗೆ ಸೂಚಿಸುವಾಗ ಅಪೊಸ್ತಲ ಪೇತ್ರನು ಸಮಾನ ಶಬ್ದಗಳನ್ನು ಉಪಯೋಗಿಸಿದ್ದಾನೆ. ಆಮೇಲೆ “ಕರ್ತನ [“ಯೆಹೋವನ,” NW] ದಿನವು ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ [ಸರಕಾರೀ] ಆಕಾಶಮಂಡಲವು,” ದುಷ್ಟ ಮಾನವ ಸಮಾಜವಾದ “ಭೂಮಿ” ಮತ್ತು ಅದರ ಪಾಪಮಯ ಕೃತ್ಯಗಳೊಂದಿಗೆ “ಇಲ್ಲದೆ ಹೋಗುವದು” ಹೇಗೆಂದು ಅವನು ವಿವರಿಸುತ್ತಾನೆ. “ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ; ಆ ದಿನದಲ್ಲಿ ಆಕಾಶಮಂಡಲವು ಬೆಂಕಿ ಹತ್ತಿ ಲಯವಾಗಿ ಹೋಗುವದು, ಸೂರ್ಯ ಚಂದ್ರ ನಕ್ಷತ್ರಗಳು ಉರಿದು ಕರಗಿ ಹೋಗುವವು,” ಎಂದು ಅಪೊಸ್ತಲನು ಬಳಿಕ ನಮಗೆ ಪ್ರಬೋಧಿಸುತ್ತಾನೆ. ಹಿಂಬಾಲಿಸುವುದೇನು? ‘ನೀತಿಯು ವಾಸವಾಗಿರುವ ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’ಕ್ಕೆ ಪೇತ್ರನು ನಮ್ಮ ಗಮನವನ್ನು ತಿರುಗಿಸುತ್ತಾನೆ.—2 ಪೇತ್ರ 3:7, 10-13.c
18 ಆ “ನೂತನಾಕಾಶಮಂಡಲ” ಅಂದರೆ, ಕ್ರಿಸ್ತ ಯೇಸುವಿನ ಮತ್ತು ಆತನ ಜೊತೆ ಅರಸರ ರಾಜ್ಯಾಳಿಕೆಯು, ನೀತಿಯುಳ್ಳ ಮಾನವ ಕುಲದ “ನೂತನಭೂಮಂಡಲ” ಸಮಾಜಕ್ಕೆ ಆಶೀರ್ವಾದಗಳನ್ನು ಸುರಿಸುವುದು. ಆ ಸಮಾಜದ ಒಬ್ಬ ಭಾವೀ ಸದಸ್ಯರು ನೀವೊ? ಹಾಗಿದ್ದರೆ, ಕಾದಿರುವ ಮಹಾ ಭವಿಷ್ಯತ್ತಿನ ಕುರಿತು ಉಲ್ಲಾಸಪಡಲು ನಿಮಗೆ ಸಕಾರಣವಿದೆ!—ಯೆಶಾಯ 65:17-19; ಪ್ರಕಟನೆ 21:1-5.
19. ಯಾವ ಮಹಾ ಸುಯೋಗದಲ್ಲಿ ನಾವೀಗ ಆನಂದಿಸಬಹುದು?
19 ಹೌದು, ಒಂದು ನೀತಿಯ ಮಾನವ ಕುಲದ “ಸಂತತಿಯು” ಈಗಲೂ ಒಟ್ಟುಗೂಡಿಸಲ್ಪಡುತ್ತಿದೆ. ಇಂದು ಅಭಿಷಿಕ್ತ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು,” ಕೀರ್ತನೆ 78:1, 4ರ ಮಾತುಗಳ ಹೊಂದಿಕೆಯಲ್ಲಿ ದೈವಿಕ ಶಿಕ್ಷಣವನ್ನು ಒದಗಿಸುತ್ತಾ ಇದೆ: “ನನ್ನ ಜನರೇ, ನನ್ನ ಉಪದೇಶಕ್ಕೆ ಕಿವಿಗೊಡಿರಿ; ನನ್ನ ನುಡಿಗಳನ್ನು ಲಾಲಿಸಿರಿ. . . . ಯೆಹೋವನ ಘನತೆಯನ್ನೂ ಆತನ ಪರಾಕ್ರಮವನ್ನೂ ಅದ್ಭುತಕೃತ್ಯಗಳನ್ನೂ ಮುಂದಣ ಸಂತತಿಯವರಿಗೆ ವಿವರಿಸುವೆವು.” (ಮತ್ತಾಯ 24:45-47) ಈ ವರ್ಷದ ಎಪ್ರಿಲ್ 14ರಂದು, 75,500ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ ಮತ್ತು ಸುಮಾರು 230 ದೇಶಗಳಲ್ಲಿ, 1,20,00,000ಕ್ಕಿಂತಲೂ ಹೆಚ್ಚು ಜನರು ಲೋಕದಾದ್ಯಂತ ಕ್ರಿಸ್ತನ ಮರಣದ ಸ್ಮಾರಕಕ್ಕೆ ಹಾಜರಾದರು. ಅವರಲ್ಲಿ ನೀವೂ ಇದ್ದಿರೋ? ನೀವು ಕ್ರಿಸ್ತ ಯೇಸುವಿನಲ್ಲಿ ನಿಮ್ಮ ನಂಬಿಕೆಯನ್ನು ಇಟ್ಟವರಾಗಿ ‘ರಕ್ಷಣೆಗಾಗಿ ಕರ್ತನ [“ಯೆಹೋವನ,” NW] ನಾಮವನ್ನು ಹೇಳಿಕೊಳ್ಳು’ವಂತಾಗಲಿ.—ರೋಮಾಪುರ 10:10-13.
20. “ಸಮಯವು ಸಂಕೋಚ”ವಾಗಿರುವುದರಿಂದ ನಾವು ಹೇಗೆ ಎಚ್ಚರವಾಗಿ ಉಳಿಯಬೇಕು, ಮತ್ತು ಯಾವ ಪ್ರತೀಕ್ಷೆಯ ನೋಟದಲ್ಲಿ?
20 “ಸಮಯವು ಸಂಕೋಚ”ವಾಗಿದೆ ಎಂದನು ಅಪೊಸ್ತಲ ಪೌಲನು. ಆದುದರಿಂದ ಮಾನವ ಕುಲದ ಒಂದು ಕೆಟ್ಟ ಸಂತತಿಯಿಂದ ಹೊರಿಸಲ್ಪಟ್ಟ ಸಂಕಟಗಳನ್ನೂ ದ್ವೇಷಗಳನ್ನೂ ನಾವು ತಾಳಿಕೊಳ್ಳುವಾಗ, ಸದಾ ಎಚ್ಚರವಾಗಿದುಕ್ದೊಂಡು ಯೆಹೋವನ ಕಾರ್ಯದಲ್ಲಿ ಮಗ್ನರಾಗಿರುವ ಸಮಯವು ಇದಾಗಿದೆ. (1 ಕೊರಿಂಥ 7:29; ಮತ್ತಾಯ 10:22; 24:13, 14) “ಈ ಸಂತತಿಯ” ಮೇಲೆ ಬರಲಿವೆಯೆಂದು ಬೈಬಲು ಮುಂತಿಳಿಸಿರುವ ಎಲ್ಲ ಸಂಗತಿಗಳನ್ನು ಅವಲೋಕಿಸುತ್ತಾ, ನಾವು ಎಚ್ಚರವಾಗಿರೋಣ. (ಲೂಕ 21:31-33) ಈ ಸಂಗತಿಗಳನ್ನು ಪಾರಾಗುವ ಮೂಲಕ ಮತ್ತು ಮನುಷ್ಯಕುಮಾರನ ಮುಂದೆ ದೈವಿಕ ಅನುಗ್ರಹದೊಂದಿಗೆ ನಿಂತುಕೊಳ್ಳುವ ಮೂಲಕ, ಕಟ್ಟಕಡೆಗೆ ಅನಂತ ಜೀವನದ ಕೊಡುಗೆಯನ್ನು ನಾವು ಪಡೆದುಕೊಳ್ಳಬಹುದು.
[ಅಧ್ಯಯನ ಪ್ರಶ್ನೆಗಳು]
a “ಏಳುಕಾಲಗಳ” ಕುರಿತ ಸವಿಸ್ತಾರ ಮಾಹಿತಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯ ಇವರಿಂದ ಪ್ರಕಾಶಿತವಾದ “ನಿನ್ನ ರಾಜ್ಯವು ಬರಲಿ” ಎಂಬ ಪುಸ್ತಕದ 128-40, 186-91 ಪುಟಗಳನ್ನು ನೋಡಿ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್ ಇವರಿಂದ ಪ್ರಕಾಶಿತವಾದ ಶಾಸ್ತ್ರಗಳ ಒಳನೋಟ (ಇಂಗ್ಲಿಷ್), ಸಂಪುಟ 1, ಪುಟ 918ನ್ನು ನೋಡಿ.
c ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್., ಇವರಿಂದ ಪ್ರಕಾಶಿಸಲ್ಪಟ್ಟ ಅವರ್ ಇನ್ಕಮಿಂಗ್ ವರ್ಲ್ಡ್ ಗವರ್ನ್ಮೆಂಟ್—ಗಾಡ್ಸ್ ಕಿಂಗ್ಡಂ ಪುಸ್ತಕದ 152-6 ಮತ್ತು 180-1 ಪುಟಗಳನ್ನು ಸಹ ನೋಡಿ.
ಪುನರ್ವಿಮರ್ಶೆಯಲ್ಲಿ ಪ್ರಶ್ನೆಗಳು:
◻ ದಾನಿಯೇಲ 4:32ರ ನೆರವೇರಿಕೆಯನ್ನು ಗಮನಿಸಿರಲಾಗಿ, ನಾವು ಈಗ ಹೇಗೆ “ಎಚ್ಚರವಾಗಿರ”ಬೇಕು?
◻ ಮತ್ತಾಯ ಮತ್ತು ಲೂಕನ ಸುವಾರ್ತೆಗಳು “ಈ ಸಂತತಿ”ಯನ್ನು ಹೇಗೆ ಗುರುತಿಸುತ್ತವೆ?
◻ “ಆ ದಿನವನ್ನೂ ಗಳಿಗೆಯನ್ನೂ” ಎದುರುನೋಡುವಾಗ, ನಾವು ಏನನ್ನು ಅವಲೋಕಿಸುತ್ತೇವೆ, ಮತ್ತು ನಾವು ಹೇಗೆ ಪ್ರತಿಕ್ರಿಯಿಸಬೇಕು?
◻ ನೀತಿಯ “ನೂತನಾಕಾಶಮಂಡಲ ಮತ್ತು ನೂತನಭೂಮಂಡಲ”ದ ಪ್ರತೀಕ್ಷೆಯು ಏನನ್ನು ಮಾಡುವಂತೆ ನಮ್ಮನ್ನು ಪ್ರೋತ್ಸಾಹಿಸಬೇಕು?
[ಪುಟ 17 ರಲ್ಲಿರುವ ಚಿತ್ರಗಳು]
ಈ ಹಿಂಸಾತ್ಮಕ, ದುಷ್ಟ ಸಂತತಿಯು ಗತಿಸಿಹೋಗುವಾಗ ಕಷ್ಟಾನುಭವಿಸುವ ಮಾನವ ಕುಲವು ಬಿಡುಗಡೆಯನ್ನು ಕಂಡುಕೊಳ್ಳುವುದು
[ಕೃಪೆ]
Alexandra Boulat/Sipa Press
[ಕೃಪೆ]
Left and below: Luc Delahaye/Sipa Press
[ಪುಟ 18 ರಲ್ಲಿರುವ ಚಿತ್ರ]
ಮಹಿಮಾಭರಿತ “ನೂತನಾಕಾಶಮಂಡಲ ಮತ್ತು ನೂತನಭೂಮಂಡಲ”ವು ಮಾನವ ಜಾತಿಯ ಎಲ್ಲ ಕುಲಗಳಿಗೆ ತೀರ ಸಮೀಪವಾಗಿದೆ