ಭೂವ್ಯಾಪಕ ನೀರುಗಳಲ್ಲಿ ಮನುಷ್ಯರನ್ನು ಹಿಡಿಯುವುದು
“ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇ ಬೇಕೆಂಬ ನಿರ್ಬಂಧ ನನಗುಂಟು. ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ!”—1 ಕೊರಿಂಥ 9:16.
1, 2. (ಎ) 1 ಕೊರಿಂಥ 9:16 ರಲ್ಲಿ ಸೂಚಿಸಲ್ಪಟ್ಟ ಪಂಥಾಹ್ವಾನವನ್ನು ನಿಜವಾಗಿಯೂ ಯಾರು ಸಂಧಿಸಿದ್ದಾರೆ, ಮತ್ತು ನೀವು ಹಾಗೆ ಉತ್ತರಿಸುವುದೇಕೆ? (ಬಿ) ಯಾವ ಜವಾಬ್ದಾರಿಕೆಯನ್ನು ಯೆಹೋವನ ಸಾಕ್ಷಿಗಳು ಸ್ವೀಕರಿಸಿದ್ದಾರೆ?
ಪೌಲನು ಹೇಳಿದ ಮೇಲಿನ ಮಾತುಗಳಲ್ಲಿ ನೀಡಲ್ಪಟ್ಟಿರುವ ಪಂಥಾಹ್ವಾನವನ್ನು ಈ 20 ನೆಯ ಶತಮಾನದಲ್ಲಿ ನಿಜವಾಗಿ ಯಾರು ಸಂಧಿಸಿದ್ದಾರೆ? “ಆತ್ಮಿಕ ಅಗತ್ಯತೆಯ ಪ್ರಜ್ಞೆಯುಳ್ಳ” ಪುರುಷರು ಮತ್ತು ಸ್ತ್ರೀಯರಿಗಾಗಿ ಬಲೆಹಾಕಲು ಲಕ್ಷಾಂತರ ಸಂಖ್ಯೆಯಲ್ಲಿ ಲೋಕದೊಳಗೆ ಹೊರಟು ಹೋಗಿರುವವರು ಯಾರು? (ಮತ್ತಾಯ 5:3, NW) ಸೆರೆಮನೆವಾಸ ಮತ್ತು ಮರಣದ ಕೇಡಿಗೂ ತಲೆಗೊಟ್ಟ ಅವರು ಯಾರು, ಮತ್ತು ಮತ್ತಾಯ 24:14 ರ ಕ್ರಿಸ್ತನ ಆಜ್ಞೆಯನ್ನು ನೆರವೇರಿಸುತ್ತಿರುವ ಕಾರಣ ಅನೇಕ ದೇಶಗಳಲ್ಲಿ ಅಂತಹದನ್ನು ಅನುಭವಿಸುತ್ತಿರುವ ಅವರ್ಯಾರು?
2 ದಾಖಲೆಯು ಉತ್ತರಿಸುವುದು: ಯೆಹೋವನ ಸಾಕ್ಷಿಗಳು. ಕಳೆದ ಒಂದು ವರ್ಷದಲ್ಲಿಯೇ ನಾಲ್ವತ್ತು ಲಕ್ಷಕ್ಕಿಂತಲೂ ಹೆಚ್ಚು ಸಾಕ್ಷಿಗಳು 211 ದೇಶಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಮತ್ತು 200 ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಮನೆಯಿಂದ ಮನೆಗೆ ‘ಸುವಾರ್ತೆಯನ್ನು ಸಾರುತ್ತಾ’ ಹೋದರು. ಇವರು ಕೇವಲ ಒಂದು ತರಬೇತು ಹೊಂದಿದ ಮಿಶನೆರಿಗಳ ಆಯ್ದ ಗುಂಪಲ್ಲ. ಅಲ್ಲ, ಯೆಹೋವನ ಸಾಕ್ಷಿಗಳಲ್ಲಿ ಎಲ್ಲರಿಗೆ ಮನೆಯಿಂದ ಮನೆಗೆ ಸಾರುವ ಮತ್ತು ಪ್ರತಿಯೊಂದು ಯುಕ್ತ ಸಂದರ್ಭದಲ್ಲಿ ಸಾರುವ ಮತ್ತು ಕಲಿಸುವ ಜವಾಬ್ದಾರಿಕೆಯ ಅನಿಸಿಕೆ ಇದೆ. ಇತರರೊಂದಿಗೆ ತಮ್ಮ ನಂಬಿಕೆಗಳನ್ನು ಹಂಚುವ ಅಗತ್ಯವಿದೆ ಎಂದವರು ಭಾವಿಸುವುದೇಕೆ? ಏಕೆಂದರೆ ಜ್ಞಾನವು ಜವಾಬ್ದಾರಿಕೆಯನ್ನು ತರುತ್ತದೆ ಎಂಬದನ್ನು ಅವರು ಮನಗಾಣುತ್ತಾರೆ.—ಯೆಹೆಜ್ಕೇಲ 33:8, 9; ರೋಮಾಪುರ 10:14, 15; 1 ಕೊರಿಂಥ 9:16, 17.
ಮನುಷ್ಯರನ್ನು ಹಿಡಿಯುವುದು, ಒಂದು ಭೂವ್ಯಾಪಕ ಪಂಥಾಹ್ವಾನ
3. ಮೀನು ಹಿಡಿಯುವ ಕೆಲಸವು ಎಷ್ಟು ವಿಸ್ತಾರ್ಯವಾಗಿರಬೇಕು?
3 ಈ ಮಹಾ ಮೀನು ಹಿಡಿಯುವ ಕೆಲಸವು ಒಂದು ನಿರ್ದಿಷ್ಟ ಹೊಳೆಗೆ ಅಥವಾ ಕೊಳಕ್ಕೆ ಅಥವಾ ಒಂದು ಸಾಗರಕ್ಕೆ ಸಹ ಪರಿಮಿತಿಗೊಂಡಿರುವುದಿಲ್ಲ. ಇಲ್ಲ, ಯೇಸು ಆಜ್ಞಾಪಿಸಿರುವ ಪ್ರಕಾರ, ಅದು “ಎಲ್ಲಾ ಜನಾಂಗಗಳಲ್ಲಿ” ನಡಿಸಲ್ಪಡಬೇಕು. (ಮಾರ್ಕ 13:10) ತನ್ನ ತಂದೆಯ ಬಳಿಗೆ ಏರಿಹೋಗುವ ಮುಂಚೆ, ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.”—ಮತ್ತಾಯ 28:19, 20.
4. (ಎ) ಯೇಸುವಿನ ಆರಂಭದ ಯೆಹೂದಿ ಶಿಷ್ಯರನ್ನು ಯಾವುದು ಆಚ್ಚರಿಗೊಳಿಸಿದ್ದಿರಬೇಕು? (ಬಿ) ಯೆಹೋವನ ಸಾಕ್ಷಿಗಳು ತಮ್ಮ ಸಾರುವ ಕಾರ್ಯದ ವಿಸ್ತಾರವನ್ನು ಹೇಗೆ ವೀಕ್ಷಿಸುತ್ತಾರೆ?
4 ಯೇಸುವಿನ ಯೆಹೂದಿ ಹಿಂಬಾಲಕರಿಗೆ ಅದೊಂದು ಅಚ್ಚರಿಯ ನಿಯೋಗವಾಗಿ ಕಂಡಿರಬೇಕು. ಅವರೀಗ ಎಲ್ಲಾ ಜನಾಂಗಗಳಲ್ಲಿರುವ “ಅಶುದ್ಧರಾದ” ಅನ್ಯರ ಬಳಿಗೆ ಹೋಗಬೇಕು ಮತ್ತು ಅವರಿಗೆ ಕಲಿಸಬೇಕು ಎಂದು ಯೇಸು ತನ್ನ ಯೆಹೂದಿ ಶಿಷ್ಯರಿಗೆ ಹೇಳುತ್ತಿದ್ದನು. ಆ ನೇಮಕದ ಧಕ್ಕೆಯನ್ನು ಹೀರಿಕೊಳ್ಳಲು ಮತ್ತು ಅದರ ಮೇಲೆ ಕಾರ್ಯನಡಿಸಲು ಅವರಿಗೆ ಕೆಲವು ಹೊಂದಾಣಿಕೆಗಳನ್ನು ಮಾಡಬೇಕಾಗಿತ್ತು. (ಅ.ಕೃತ್ಯಗಳು 10:9-35) ಅನ್ಯಮಾರ್ಗವು ಇರಲಿಲ್ಲ. “ಹೊಲವು ಲೋಕ” ಎಂಬದಾಗಿ ಒಂದು ಸಾಮ್ಯದಲ್ಲಿ ಯೇಸು ಅವರಿಗೆ ಹೇಳಿದ್ದನು. ಆದುದರಿಂದ, ಯೆಹೋವನ ಸಾಕ್ಷಿಗಳು ಇಂದು ಇಡೀ ಲೋಕವನ್ನು ತಮ್ಮ ಮೀನು ಹಿಡಿಯುವ ಹಕ್ಕಿನ ಸ್ಥಳವಾಗಿ ನೋಡುತ್ತಾರೆ. ದೇವರಿಂದ ಕೊಡಲ್ಪಟ್ಟ ಅವರ ನಿಯೋಗವನ್ನು ನಿರ್ಬಂಧಗೊಳಿಸುವ “12 ಕಿಲೊಮೀಟರ್ ಸೀಮಿತವಾಗಲಿ” ಅಥವಾ “ನಾಡಿನ ಆಡಳಿತಕ್ಕೆ ಸೇರಿರುವ ಜಲಪ್ರದೇಶವಾಗಲಿ” ಅಲ್ಲಿರುವುದಿಲ್ಲ. ಎಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಅಸ್ತಿತ್ವದಲ್ಲಿಲ್ಲವೋ ಅಲ್ಲಿ ಕೆಲವೊಮ್ಮೆ ವಿವೇಚನೆಯ ಅಗತ್ಯವಿದೆ. ಆದರೂ, ಜರೂರಿಯ ಭಾವದಿಂದ ಅವರು ಮೀನು ಹಿಡಿಯುವಿಕೆಯನ್ನು ನಡಿಸುತ್ತಾರೆ. ಅದೇಕೆ? ಏಕೆಂದರೆ ಲೋಕ ಘಟನೆಗಳು ಮತ್ತು ಬೈಬಲ್ ಪ್ರವಾದನೆಯ ನೆರವೇರಿಕೆಯು, ನಾವು ಭೂವ್ಯಾಪಕ ಮೀನು ಹಿಡಿಯುವಿಕೆಯ ಕೆಲಸದ ಕೊನೆಯ ಭಾಗದಲ್ಲಿದ್ದೇವೆಂದು ಸೂಚಿಸುತ್ತವೆ.—ಮತ್ತಾಯ 13:38; ಲೂಕ 21:28-33.
ಭೂವ್ಯಾಪಕ ಮೀನು ಹಿಡಿಯುವ ಕೆಲಸದಲ್ಲಿ ಪ್ರಗತಿ
5. ಭೂವ್ಯಾಪಕ ಮೀನು ಹಿಡಿಯುವ ಕೆಲಸಕ್ಕೆ ಯಾವ ರೀತಿಯ ಜನರು ಪ್ರತಿಕ್ರಿಯೆ ತೋರಿಸುತ್ತಿದ್ದಾರೆ?
5 ಹೆಚ್ಚಿನ ಅಭಿಷಿಕ್ತ ರಾಜ್ಯ ಬಾಧ್ಯಸ್ಥರು ಜನಾಂಗಗಳಿಂದ 1935 ಕ್ಕೆ ಮುಂಚೆ “ಹಿಡಿಯಲ್ಪಟ್ಟಿದ್ದರು,” ಹೀಗೆ ಅವರ ಪೂರ್ಣ ಸಂಖ್ಯೆಯು ಮೂಲತಃ ಪೂರ್ಣಗೊಂಡಿರುತ್ತದೆ. ಆದುದರಿಂದ, ವಿಶೇಷವಾಗಿ 1935 ರಿಂದ, ಯಾರನ್ನು “ಭೂಮಿಯನ್ನು ಬಾಧ್ಯವಾಗಿ ಹೊಂದುವ” “ದೀನರು” ಎಂದು ವರ್ಣಿಸಬಹುದೋ ಆ ನಮ್ರ ಜನರಿಗಾಗಿ ಯೆಹೋವನ ಸಾಕ್ಷಿಗಳು ಹುಡುಕುತ್ತಿದ್ದಾರೆ. (ಕೀರ್ತನೆ 37:11, 29) ಇವರು, “ನಡೆಯುವ ಸಮಸ್ತ ಅಸಹ್ಯ ಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ” ಜನರಾಗಿದ್ದಾರೆ. “ಮಹಾ ಸಂಕಟವು” ಸೈತಾನನ ನೀಚ ಹಾಗೂ ಭ್ರಷ್ಟ ವಿಷಯಗಳ ವ್ಯವಸ್ಥೆಯನ್ನು ಹೊಡೆಯುವ ಮುಂಚೆ ಮತ್ತು ಕೊನೆಯ ನಾಶನವಾದ “ಬೆಂಕೀಕೊಂಡಕ್ಕೆ” ಅವನ ಆರಾಧಕರನ್ನು ನೇಮಿಸುವ ಮುಂಚೆ, ದೇವರ ರಾಜ್ಯದ ಆಡಳಿತದ ಪಕ್ಷದಲ್ಲಿ ಅವರು ಕ್ರಿಯೆಗೈಯುತ್ತಾ ಇದ್ದಾರೆ.—ಯೆಹೆಜ್ಕೇಲ 9:4; ಮತ್ತಾಯ 13:47-50; 24:21.
6, 7. (ಎ) ಸಾರುವ ಕಾರ್ಯದ ಸಂಬಂಧದಲ್ಲಿ 1943 ರಲ್ಲಿ ಯಾವ ಹೆಜ್ಜೆಗಳು ತಕ್ಕೊಳ್ಳಲ್ಪಟ್ಟವು? (ಬಿ) ಯಾವ ಫಲಿತಾಂಶಗಳು ದೊರೆತವು?
6 ಭೂವ್ಯಾಪಕ ಮೀನು ಹಿಡಿಯುವ ಕೆಲಸವು ಈ ತನಕ ಸಾಫಲ್ಯವನ್ನು ಪಡೆದಿರುತ್ತದೋ? ನಿಜತ್ವಗಳು ತಾನೇ ಅವನ್ನು ತಿಳಿಸಲಿ. ಹಿಂದೆ 1943 ರಲ್ಲಿ, ಲೋಕ ಯುದ್ಧ II ಇನ್ನೂ ಉಕ್ಕೇರುತ್ತಿದ್ದಾಗಲೂ, ಬ್ರೂಕ್ಲಿನ್, ನ್ಯೂ ಯಾರ್ಕ್ನ ಯೆಹೋವನ ಸಾಕ್ಷಿಗಳ ಲೋಕ ಕೇಂದ್ರಾಲಯದಲ್ಲಿದ್ದ ನಂಬಿಗಸ್ತ ಅಭಿಷಿಕ್ತ ಸಹೋದರರು, ಒಂದು ವಿಸ್ತಾರವಾದ ಭೂವ್ಯಾಪಕ ಮೀನು ಹಿಡಿಯುವ ಕೆಲಸವು ನಡಿಸಲ್ಪಡಲೇಬೇಕೆಂಬದನ್ನು ಮುನ್ನೋಡಿದರು. ಆದುದರಿಂದ, ಯಾವ ಹೆಜ್ಜೆಗಳು ತಕ್ಕೊಳ್ಳಲ್ಪಟ್ಟವು?a—ಪ್ರಕಟನೆ 12:16, 17.
7 ವಾಚ್ಟವರ್ ಸೊಸೈಟಿಯು ಗಿಲ್ಯಾದ್ (ಹಿಬ್ರೂ, “ಸಾಕ್ಷಿ ಕುಪ್ಪೆ”; ಆದಿಕಾಂಡ 31:47, 48) ಎಂದು ಕರೆಯಲ್ಪಟ್ಟ ಒಂದು ಮಿಶನೆರಿ ಶಾಲೆಯನ್ನು 1943 ರಲ್ಲಿ ಸ್ಥಾಪಿಸಿತು. ಇದು ಪ್ರತಿ ಆರು ತಿಂಗಳಲ್ಲಿ ಭೂಸುತ್ತಲೂ ಸಾಂಕೇತಿಕ ಬೆಸ್ತರಾಗಿ ಭೂವ್ಯಾಪಕವಾಗಿ ಕಳುಹಿಸಲ್ಪಡ ಶಕ್ತರಾಗುವಂಥ ನೂರು ಮಂದಿ ಮಿಶನೆರಿಗಳನ್ನು ತರಬೇತು ಮಾಡಲು ಪ್ರಾರಂಭಿಸಿತು. ಆಗ ಕೇವಲ 1,26,329 ಸಾಕ್ಷಿಗಳು 54 ದೇಶಗಳಲ್ಲಿ ಮನುಷ್ಯರನ್ನು ಹಿಡಿಯುವುದರಲ್ಲಿ ಕ್ರಿಯಾಶೀಲರಾಗಿದ್ದರು. ಹತ್ತು ವರ್ಷಗಳೊಳಗೆ ಆ ಸಂಖ್ಯೆಗಳು 143 ದೇಶಗಳಲ್ಲಿ 5,19,982 ಕ್ಕೆ ಕಾರ್ಯತಃ ಏರಿದವು! ನಿಶ್ಚಯವಾಗಿ ಗಿಲ್ಯಾದ್ ಶಾಲೆಯು, ಪರದೇಶದ ಸಂಸ್ಕೃತಿಗಳಿಗೆ ಹೋಗಲು ಮತ್ತು ಹೊಸ ಮೀನು ಹಿಡಿಯುವ ನೀರುಗಳಿಗೆ ತಮ್ಮನ್ನು ಒಗ್ಗಿಸಿಕೊಳ್ಳಲು ಸಿದ್ಧಮನಸ್ಕರಾಗಿದ್ದ ಧೀರ ಬೆಸ್ತರಾದ ಪುರುಷರು ಮತ್ತು ಸ್ತ್ರೀಯರನ್ನು ಉತ್ಪಾದಿಸುತ್ತಿತ್ತು. ಫಲಿತಾಂಶವಾಗಿ, ಸಾವಿರಾರು ಮಂದಿ ಪ್ರಾಮಾಣಿಕ ಹೃದಯದ ಜನರು ಪ್ರತಿಕ್ರಿಯೆ ತೋರಿಸಿದರು. ಆ ಮಿಶನೆರಿಗಳು ಮತ್ತು ಅವರ ಸಂಗಡ ಕೆಲಸ ಮಾಡಿದ ಸ್ಥಳೀಕ ಸಾಕ್ಷಿಗಳು, ಈಗ ಸಂಭವಿಸುತ್ತಿರುವ ಆಶ್ಚರ್ಯಕರ ಅಭಿವೃದ್ಧಿಗಾಗಿ ಒಂದು ತಳಪಾಯವನ್ನು ಹಾಕಿದರು.
8, 9. (ಎ) ಮಹತ್ತಾದ ಮಿಶನೆರಿ ಕಾರ್ಯದ ಯಾವ ಉದಾಹರಣೆಗಳನ್ನು ತಿಳಿಸಬಹುದು? (ಬಿ) ಮಿಶನೆರಿಗಳು ತಮ್ಮ ಹೊಲಗಳಲ್ಲಿ ಮಹತ್ತಾದ ಬೆಳವಣಿಗೆಯನ್ನು ಹೇಗೆ ಕಂಡಿದ್ದಾರೆ? (ಯೆಹೋವನ ಸಾಕ್ಷಿಗಳ 1992 ರ ವರ್ಷಪುಸ್ತಕ ಸಹ ನೋಡಿರಿ.)
8 ಆ ಆರಂಭದ ಗಿಲ್ಯಾದ್ ಕ್ಲಾಸುಗಳ ಅನೇಕ ನಂಬಿಗಸ್ತ ಹಳಬರು, ಈಗ 70 ಅಥವಾ 80 ವರ್ಷಗಳಿಗಿಂತಲೂ ಹೆಚ್ಚು ವಯಸ್ಸಿನವರಾದಾಗ್ಯೂ, ತಮ್ಮ ವಿದೇಶದ ನೇಮಕಗಳಲ್ಲಿ ಇನ್ನೂ ಕೆಲಸ ಮಾಡುತ್ತಿದ್ದಾರೆ. ಇಂಥ ಅನೇಕರನ್ನು ಮಾದರಿಯಾಗಿ ನಿರೂಪಿಸುವ ಒಂದು ಉದಾಹರಣೆಯು, 1950 ರಲ್ಲಿ 15 ನೆಯ ಗಿಲ್ಯಾದ್ ಕ್ಲಾಸ್ನಿಂದ ಪದವೀಧರರಾದ ಮತ್ತು ಬ್ರೆಸೀಲ್ನಲ್ಲಿ ಇನ್ನೂ ಸೇವೆ ಮಾಡುತ್ತಿರುವ ಎರಿಕ್ ಬ್ರಿಟ್ಟನ್ ಮತ್ತು ಅವನ ಪತ್ನಿ ಕ್ರಿಸ್ಟೀನರದ್ದಾಗಿದೆ. ಬ್ರೆಸೀಲ್ನಲ್ಲಿ ಅವರು ಸೇವೆ ಮಾಡಲು ಹೋದಾಗ, ಆ ದೇಶದಲ್ಲಿ 3,000 ಕ್ಕೂ ಕಡಿಮೆ ಸಾಕ್ಷಿಗಳಿದ್ದರು. ಈಗ ಅಲ್ಲಿ 3,00,000 ಕ್ಕಿಂತಲೂ ಹೆಚ್ಚು ಇದ್ದಾರೆ! ನಿಶ್ಚಯವಾಗಿಯೂ, ಮೀನು ಹಿಡಿಯುವ ಕೆಲಸವು ಫಲಕಾರಿಯಾಗಿದ್ದ ಕಾರಣ ಬ್ರೇಸಿಲ್ನಲ್ಲಿ ‘ಚಿಕ್ಕವನಿಂದ ಒಂದು ಬಲವಾದ ಜನಾಂಗವು’ ಆಗಿರುತ್ತದೆ.—ಯೆಶಾಯ 60:22.
9 ಮತ್ತು ಆಫ್ರಿಕದ ಮಿಶನೆರಿಗಳ ಕುರಿತು ನಾವೇನು ಹೇಳಬಲ್ಲೆವು? ಹೆಚ್ಚಿನವರು ಒಂದು ತೀರಾ ಬೇರೆಯಾದ ಸಂಸ್ಕೃತಿಗೆ ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ ಮತ್ತು ಆಫ್ರಿಕದ ಜನರನ್ನು ಪ್ರೀತಿಸಲು ತೊಡಗಿರುತ್ತಾರೆ. ಇದರ ಒಂದು ನಮೂನೆಯು ಸದ್ಯ ದಕ್ಷಿಣ ಆಫ್ರಿಕದಲ್ಲಿ ಸೇವೆ ಮಾಡುತ್ತಿರುವ ಸಹೋದರರಾದ ಜಾನ್ ಮತ್ತು ಎರಿಕ್ ಕುಕ್ ಮತ್ತು ಅವರ ಪತ್ನಿಯರಾದ ಕ್ಯಾಥ್ಲಿನ್ ಮತ್ತು ಮರ್ಟ್ಲ್ ಎಂಬವರು. ಜಾನ್ ಮತ್ತು ಎರಿಕ್ 1947 ರಲ್ಲಿ ಎಂಟನೆಯ ಕ್ಲಾಸ್ನಿಂದ ಪದವೀಧರರಾಗಿದ್ದರು. ಅವರು ತಮ್ಮೊಳಗೆ ಅಂಗೋಲ, ಸಿಂಬಾಬ್ವೆ, ಮುಸಾಂಬಿಕ್ ಮತ್ತು ದಕ್ಷಿಣ ಆಫ್ರಿಕದಲ್ಲಿ ಸೇವೆ ಮಾಡಿರುತ್ತಾರೆ. ಕೆಲವು ಮಿಶನೆರಿಗಳು ಆಫ್ರಿಕದಲ್ಲಿ ರೋಗದ ಕಾರಣದಿಂದಾಗಿ ಮತ್ತು ಇತರರು ಯುದ್ಧ ಮತ್ತು ಹಿಂಸೆಯಿಂದಾಗಿ ಸತ್ತರು. ಆ್ಯಲನ್ ಬ್ಯಾಟಿ ಮತ್ತು ಆರ್ಥರ್ ಲಾಸನ್ ಮುಂತಾದವರು ಲೈಬೀರಿಯದಲ್ಲಿ ಇತ್ತೀಚೆಗೆ ನಡೆದ ಒಳಯುದ್ಧದ ಸಮಯದಲ್ಲಿ ಸತ್ತರು. ಆದರೂ, ಆಫ್ರಿಕನ್ ನೀರುಗಳು ಅತ್ಯಂತ ಫಲದಾಯಕವಾಗಿ ರುಜುವಾಗಿವೆ. ಆ ವಿಸ್ತಾರವಾದ ಭೂಖಂಡದಲ್ಲೆಲ್ಲೂ ಈಗ 4,00,000 ಸಾಕ್ಷಿಗಳು ಹರಡಿರುತ್ತಾರೆ.
ಎಲ್ಲರಿಗೆ ಒಂದು ಪಾಲಿದೆ
10. ಏಕೆ ಮತ್ತು ಯಾವ ರೀತಿಯಲ್ಲಿ ಪಯನೀಯರರು ಒಂದು ಪ್ರಶಂಸನೀಯ ಕೆಲಸವನ್ನು ಮಾಡುತ್ತಿದ್ದಾರೆ?
10 ಆದರೂ, ವಿದೇಶಿ ಮಿಶನೆರಿಗಳು ಕೆಲವು ಸಾವಿರ ಸಂಖ್ಯೆಗೇರಿದಾಗ, ಸ್ಥಳೀಕ ಪ್ರಚಾರಕರು ಮತ್ತು ಪಯನೀಯರರುb ಲಕ್ಷಾಂತರದಲ್ಲಿ ವೃದ್ಧಿಯಾಗಿದ್ದಾರೆ. ಭೂಮಿಯಲ್ಲೆಲ್ಲೂ ಅವರು ಸಾರುವ ಕಾರ್ಯದ ಬಹುಭಾಗವನ್ನು ಮಾಡುತ್ತಿದ್ದಾರೆ. ಪಯನೀಯರರ ಮತ್ತು ಸಂಚಾರ ಶುಶ್ರೂಷಕರ ಸಂಖ್ಯೆಯಲ್ಲಿ 5,50,000 ಕ್ಕಿಂತಲೂ ಹೆಚ್ಚು ಸರಾಸರಿಯು 1991 ರಲ್ಲಿ ದೊರಕಿತ್ತು. ಈ ಎಲ್ಲಾ ನಂಬಿಗಸ್ತ ಸಾಕ್ಷಿಗಳು ಪ್ರತಿ ತಿಂಗಳು ಸಾರುವುದರಲ್ಲಿ ಹೇಗಾದರೂ ಸರಾಸರಿ 60 ರಿಂದ 140 ತಾಸುಗಳನ್ನು ಹಾಕುತ್ತಾ, ಮೀನು ಹಿಡಿಯುವ ಮಹಾ ಕಾರ್ಯದಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡುವುದನ್ನು ನಾವು ಯೋಚಿಸುವಾಗ ಅದೆಂಥ ಮನತಟ್ಟುವ ಅಂಕಿಯಾಗಿರುತ್ತದೆ. ಅನೇಕರು ಇದನ್ನು ಮಹಾ ವೈಯಕ್ತಿಕ ತ್ಯಾಗ ಮತ್ತು ಖರ್ಚಿನಿಂದ ಮಾಡುತ್ತಿದ್ದಾರೆ. ಆದರೆ ಏಕೆ? ಏಕೆಂದರೆ ಅವರು ತಮ್ಮ ದೇವರಾದ ಯೆಹೋವನನ್ನು ತಮ್ಮೆಲ್ಲಾ ಹೃದಯ, ಮನಸ್ಸು, ಆತ್ಮ ಮತ್ತು ಶಕಿಯ್ತಿಂದ ಪ್ರೀತಿಸುತ್ತಾರೆ ಮತ್ತು ತಮ್ಮ ನೆರೆಯವರನ್ನು ತಮ್ಮ ಹಾಗೆ ಪ್ರೀತಿಸುತ್ತಾರೆ.—ಮತ್ತಾಯ 22:37-39.
11. ಯೆಹೋವನ ಆತ್ಮವು ಆತನ ಜನರ ನಡುವೆ ಕಾರ್ಯನಡಿಸುತ್ತದೆ ಎಂಬದಕ್ಕೆ ಯಾವ ನಿಶ್ಚಿತ ರುಜುವಾತು ಇದೆ?
11 ಪೂರ್ಣ ಸಮಯದ ಸೇವೆಯಲ್ಲಿ ಇಲ್ಲದ ಆದರೂ ತಮ್ಮ ಪರಿಸ್ಥಿತಿಗಳಿಗನುಸಾರ ಯೆಹೋವನ ಸೇವೆಯಲ್ಲಿ ಸಂಪೂರ್ಣವಾಗಿ 100 ಪ್ರತಿಶತವನ್ನು ಕೊಡುವ ಇತರ ಮೂವತ್ತೈದು ಲಕ್ಷಕ್ಕಿಂತಲೂ ಹೆಚ್ಚು ಜನರ ಕುರಿತು ನಾವೇನು ಹೇಳಬಹುದು? ಅವರಲ್ಲಿ ಕೆಲವರು ಪತ್ನಿಯರು, ಚಿಕ್ಕ ಮಕ್ಕಳಿರುವ ತಾಯಂದಿರು ಸಹ ಇದ್ದಾರೆ, ಆದರೂ ಭೂವ್ಯಾಪಕ ಮೀನು ಹಿಡಿಯುವ ಕೆಲಸಕ್ಕೆ ತಮ್ಮ ಬೆಲೆಯುಳ್ಳ ಸಮಯದಲ್ಲಿ ಕೆಲವನ್ನು ಅವರು ಮೀಸಲಾಗಿಡುತ್ತಾರೆ. ಅನೇಕರು ಪೂರ್ಣ ಸಮಯದ ಐಹಿಕ ಉದ್ಯೋಗವನ್ನು ನಡಿಸುತ್ತಿರುವ ಗಂಡಂದಿರು ಅಥವಾ ತಂದೆಯಂದಿರು ಆಗಿರುತ್ತಾರೆ. ಆದರೂ ಅಪರಿಚಿತರಿಗೆ ಸತ್ಯವನ್ನು ಕಲಿಸಲಿಕ್ಕಾಗಿ ವಾರಾಂತ್ಯಗಳಲ್ಲಿ ಮತ್ತು ಸಾಯಂಕಾಲಗಳಲ್ಲಿ ಅವರು ಸಮಯವನ್ನು ಬದಿಗಿಡುತ್ತಾರೆ. ಅಲ್ಲದೆ, ಸಾರುವ ಕೆಲಸದಲ್ಲಿ ಭಾಗವಹಿಸುವ ಮತ್ತು ತಮ್ಮ ನಡವಳಿಕೆಯ ಮೂಲಕ ಸತ್ಯವನ್ನು ಶಿಫಾರಸು ಮಾಡುವ ಅವಿವಾಹಿತ ಪುರುಷರ ಮತ್ತು ಸ್ತ್ರೀಯರ ಹಾಗೂ ಯುವ ಜನರ ಒಂದು ಮಹಾ ಸಮೂಹವೂ ಇದೆ. ದೇವರ ರಾಜ್ಯದಾಳಿಕೆಯ ಸುವಾರ್ತೆಯನ್ನು ಪ್ರತಿ ತಿಂಗಳು ಸಾರುತ್ತಿರುವ ನಾಲ್ವತ್ತು ಲಕ್ಷಕ್ಕಿಂತಲೂ ಹೆಚ್ಚು ವೇತನರಹಿತ ಸ್ವಯಂಸೇವಕರು ಬೇರೆ ಯಾವ ಧಾರ್ಮಿಕ ಗುಂಪಿನಲ್ಲಿದ್ದಾರೆ? ನಿಶ್ಚಯವಾಗಿಯೂ ಇದು ಯೆಹೋವನಾತ್ಮದ ಕಾರ್ಯನಡಿಸುವಿಕೆಗೆ ಸಾಕ್ಷ್ಯವಾಗಿದೆ!—ಕೀರ್ತನೆ 68:11; ಅ.ಕೃತ್ಯಗಳು 2:16-18; ಜೆಕರ್ಯ 4:6 ಹೋಲಿಸಿರಿ.
ಬೆಳವಣಿಗೆಗೆ ನೆರವಾಗುವ ವಿಷಯಗಳು
12. ಏಕೆ ಮತ್ತು ಯಾವ ಸಂಖ್ಯೆಗಳಲ್ಲಿ ಜನರು ಸತ್ಯಕ್ಕೆ ಪ್ರತಿಕ್ರಿಯೆ ತೋರಿಸುತ್ತಿದ್ದಾರೆ?
12 ಈ ವಿಸ್ತಾರವಾದ ಸಾರುವ ಕಾರ್ಯವು ಪ್ರತಿ ವರ್ಷ ಗಮನಾರ್ಹವಾದ ಫಲಿತಾಂಶಗಳನ್ನು ತರುತ್ತಾ ಇದೆ. ನೀರಿನಲ್ಲಿ ಪೂರ್ಣ ಮುಳುಗುವಿಕೆಯ ಮೂಲಕ 1991ರಲ್ಲಿ 3,00,000 ಕ್ಕಿಂತಲೂ ಹೆಚ್ಚು ಹೊಸ ಸಾಕ್ಷಿಗಳು ದೀಕ್ಷಾಸ್ನಾನವನ್ನು ಪಡೆದರು. ಇದು ಪ್ರತಿಯೊಂದರಲ್ಲಿ 100 ಸಾಕ್ಷಿಗಳಿರುವ 3,000 ಕ್ಕಿಂತಲೂ ಹೆಚ್ಚು ಸಭೆಗಳಿಗೆ ಸರಿಸಮಾನವಾಗಿದೆ. ಇದೆಲ್ಲವೂ ಕಾರ್ಯಸಿದ್ಧಿಯಾದದ್ದು ಹೇಗೆ? ಯೇಸು ಏನು ಹೇಳಿದ್ದನೋ ಅದನ್ನು ನಾವು ಜ್ಞಾಪಿಸಿಕೊಳ್ಳೋಣ: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾನು. . . . ಅವರೆಲ್ಲರು ದೇವರಿಂದ [ಯೆಹೋವನಿಂದ, NW] ಶಿಕ್ಷಿತರಾಗಿರುವರು ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದದೆ; ತಂದೆಯಿಂದ ಕೇಳಿ ಕಲಿತವರೆಲ್ಲರು ನನ್ನ ಬಳಿಗೆ ಬರುತ್ತಾರೆ.” ಆದುದರಿಂದ, ಭೂವ್ಯಾಪಕ ಮೀನು ಹಿಡಿಯುವಿಕೆಗೆ ಒಬ್ಬನು ಪ್ರತಿಕ್ರಿಯೆ ತೋರಿಸುವುದು ಕೇವಲ ಮಾನವ ಪ್ರಯತ್ನದಿಂದಾಗಿ ಅಲ್ಲ. ಯೆಹೋವನು ಹೃದಯ ಸ್ಥಿತಿಯನ್ನು ಪರಿಶೋಧಿಸುತ್ತಾನೆ ಮತ್ತು ಆ ಅರ್ಹರಾದ ಜನರನ್ನು ತನ್ನ ಕಡೆಗೆ ಎಳೆಯುತ್ತಾನೆ.—ಯೋಹಾನ 6:44, 45; ಮತ್ತಾಯ 10:11-13; ಅ.ಕೃತ್ಯಗಳು 13:48.
13, 14. ಯಾವ ಉತ್ತಮ ಮನೋಭಾವವನ್ನು ಅನೇಕ ಸಾಕ್ಷಿಗಳು ತೋರಿಸಿದ್ದಾರೆ?
13 ಯೆಹೋವನು ಜನರನ್ನು ತನ್ನ ಬಳಿಗೆ ಎಳೆಯಲು ಉಪಯೋಗಿಸುವ ಮಾನವ ಬೆಸ್ತರಾದರೋ, ಕಾರ್ಯ ನಿರ್ವಾಹಕರು ಆಗಿರುತ್ತಾರೆ. ಆದ್ದರಿಂದ ಎಲ್ಲಿ ಅವರು ಮೀನು ಹಿಡಿಯುತ್ತಾರೋ ಆ ಕ್ಷೇತ್ರದ ಮತ್ತು ಜನರ ಕಡೆಗೆ ಅವರ ಮನೋಭಾವವು ಮಹತ್ವವುಳ್ಳದ್ದಾಗಿದೆ. ಅಧಿಕ ಸಂಖ್ಯಾತರು ಗಲಾತ್ಯದವರಿಗೆ ಪೌಲನ ಮಾತುಗಳನ್ನು ಹೃದಯಕ್ಕೆ ತಕ್ಕೊಂಡಿರುವುದನ್ನು ಕಾಣುವುದು ಅದೆಷ್ಟು ಉತ್ತೇಜನೀಯವು: “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.”—ಗಲಾತ್ಯ 6:9.
14 ಲೋಕ ವಿಕಸನಗಳನ್ನು ನಿಕಟವಾಗಿ ಗಮನಿಸುತ್ತಾ, ಅನೇಕ ನಂಬಿಗಸ್ತ ಸಾಕ್ಷಿಗಳು ದಶಮಾನಗಳಿಂದ ಸಾರುತ್ತಾ ಇದ್ದಾರೆ. ಅವರು ನಾಸೀಸಮ್ ಫ್ಯಾಸಿಸ್ಮ್ ಮತ್ತು ಇತರ ಸರ್ವಾಧಿಪತ್ಯದ ವ್ಯವಸ್ಥೆಗಳ ಏಳಿಕೆ ಮತ್ತು ಬೀಳಿಕ್ವೆಯನ್ನು ಕಂಡಿದ್ದಾರೆ. 1914 ರಿಂದ ನಡೆದಿರುವ ಅನೇಕ ಯುದ್ಧಗಳನ್ನು ಕೆಲವರು ಕಣ್ಣಾರೆ ನೋಡಿದ್ದಾರೆ. ಲೋಕ ಧುರೀಣರು ತಮ್ಮ ನಿರೀಕ್ಷೆಗಳನ್ನು ಜನಾಂಗ ಸಂಘದಲ್ಲಿ ಮತ್ತು ಅನಂತರ ಸಂಯುಕ್ತ ರಾಷ್ಟ್ರ ಸಂಘದಲ್ಲಿ ಬಂಧಿಸಿರುವುದನ್ನು ಅವರು ಕಂಡಿದ್ದಾರೆ. ಅನೇಕ ದೇಶಗಳಲ್ಲಿ ಯೆಹೋವನ ಕಾರ್ಯವು ನಿಷೇಧಿಸಲ್ಪಟ್ಟದ್ದನ್ನು ಮತ್ತು ತದನಂತರ ಶಾಸನಬದ್ಧವಾಗುವುದನ್ನು ಅವರು ಕಂಡಿರುತ್ತಾರೆ. ಇವೆಲ್ಲವುಗಳ ಮಧ್ಯೆಯೂ ಯೆಹೋವನ ಸಾಕ್ಷಿಗಳು ಯಾವುದು ಒಳ್ಳೇದೋ ಅದನ್ನು, ಮನುಷ್ಯರನ್ನು ಹಿಡಿಯುವ ಬೆಸ್ತರ ಕೆಲಸವನ್ನು ಸಹ, ಬಿಡದೆ ಮಾಡುತ್ತಿದ್ದಾರೆ. ಸಮಗ್ರತೆಯ ಎಂಥ ಒಂದು ಮಹತ್ತಾದ ದಾಖಲೆಯು!—ಮತ್ತಾಯ 24:13.
15. (ಎ) ನಮ್ಮ ಲೋಕವ್ಯಾಪಕ ಕ್ಷೇತ್ರದ ಅಗತ್ಯತೆಗಳಿಗೆ ನಮ್ಮನ್ನು ಒಗ್ಗಿಸಿಕೊಳ್ಳುವುದರಲ್ಲಿ ನಮಗೆ ಯಾವ ಸಹಾಯವು ದೊರಕಿದೆ? (ಬಿ) ಪ್ರಕಾಶನಗಳು ನಿಮ್ಮ ನೇಮಕದಲ್ಲಿ ಹೇಗೆ ಸಹಾಯ ಮಾಡಿವೆ?
15 ಈ ವಿಶ್ವವ್ಯಾಪಕ ಬೆಳವಣಿಗೆಗೆ ನೆರವಾಗಿರುವ ಬೇರೆ ವಿಷಯಗಳು ಸಹ ಇವೆ. ಕ್ಷೇತ್ರದ ಅಗತ್ಯತೆಗಳ ಕಡೆಗೆ ಮನುಷ್ಯರನ್ನು ಹಿಡಿಯುವ ಬೆಸ್ತರ ಮಣನೀಯ ಮನೋಭಾವವು ಅದರಲ್ಲಿ ಒಂದಾಗಿದೆ. ವಿವಿಧ ಸಂಸ್ಕೃತಿಗಳ, ಧರ್ಮಗಳ ಮತ್ತು ಭಾಷೆಗಳ ಜನತೆಯ ವಲಸೆಹೋಗುವಿಕೆಯಿಂದಾಗಿ, ಯೆಹೋವನ ಸಾಕ್ಷಿಗಳು ಈ ವೈವಿಧ್ಯ ದೃಷ್ಟಿಕೋನಗಳ ತಮ್ಮ ತಿಳುವಳಿಕೆಯನ್ನು ಸ್ಥೂಲಗೊಳಿಸಿದ್ದಾರೆ. ಮತ್ತು ವಿಶ್ವವ್ಯಾಪಕ ಸಭೆಯು 200 ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಬೈಬಲ್ಗಳನ್ನು ಮತ್ತು ಬೈಬಲ್ ಸಾಹಿತ್ಯವನ್ನು ತಯಾರಿಸುವ ಮೂಲಕ ಇದಕ್ಕೆ ನೆರವಾಗಿದೆ. ದ ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ ಆಫ್ ದಿ ಹೋಲಿ ಸ್ಕ್ರಿಪ್ಚರ್ಸ್, ಇಡೀ ಅಥವಾ ಅಂಶಿಕವಾಗಿ, ಚೆಕ್ ಮತ್ತು ಸ್ಲೋವಾಕ್ ಸಹ ಸೇರಿ ಈಗ 13 ಭಾಷೆಗಳಲ್ಲಿ ದೊರೆಯುತ್ತದೆ. ಭೂಮಿಯಲ್ಲಿ ಸದಾ ಜೀವನವನ್ನು ಆನಂದಿಸಿರಿ! ಬ್ರೋಷರ್ ಅಲ್ಪೇನಿಯನ್ನಿಂದ ಹಿಡಿದು ಜೂಲೂ ತನಕದ 198 ಭಾಷೆಗಳಲ್ಲಿ ಈಗ ದೊರೆಯುತ್ತಿದ್ದು 7 ಕೋಟಿ 20 ಲಕ್ಷ ಪ್ರತಿಗಳು ಮುದ್ರಿಸಲ್ಪಟ್ಟಿವೆ. ದ ಗ್ರೇಟೆಸ್ಟ್ ಮ್ಯಾನ್ ಹೂ ಎವರ್ ಲಿವ್ಡ್ ಈವಾಗಲೇ 69 ಭಾಷೆಗಳಲ್ಲಿ ದೊರಕುತ್ತದೆ. 29 ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟ ಮ್ಯಾನ್ಕೈಂಡ್ಸ್ ಸರ್ಚ್ ಫಾರ್ ಗಾಡ್, ಲೋಕದ ಪ್ರಧಾನ ಧಾರ್ಮಿಕ ವ್ಯವಸ್ಥೆಗಳ ಮೂಲ ಮತ್ತು ನಂಬಿಕೆಗಳ ಕುರಿತ ಒಳನೋಟವನ್ನು ಕೊಡುತ್ತದೆ ಮತ್ತು ಭೂವ್ಯಾಪಕ ಮೀನು ಹಿಡಿಯುವಿಕೆಯಲ್ಲಿ ಒಂದು ಅಸದೃಶ ಸಹಾಯಕವಾಗಿ ರುಜುವಾಗುತ್ತಿದೆ.
16. ಬೇರೆ ದೇಶಗಳ ಅಗತ್ಯತೆಗಳಿಗೆ ಕೆಲವರು ಹೇಗೆ ಪ್ರತಿಕ್ರಿಯೆ ತೋರಿಸಿದ್ದಾರೆ?
16 ಭೂವ್ಯಾಪಕ ಮೀನು ಹಿಡಿಯುವ ಕೆಲಸವನ್ನು ವೃದ್ಧಿಗೊಳಿಸಲು ಬೇರೇನು ನೆರವಾಗಿದೆ? ಸಾವಿರಾರು ಜನರು ‘ಮಕೆದೋನ್ಯದ ಕರೆಗೆ’ ಪ್ರತಿಕ್ರಿಯೆ ತೋರಿಸಲು ಸಿದ್ಧಮನಸ್ಕರಾಗಿರುವುದೇ. ದೇವರು ಕರೆದಾಗ, ಪೌಲನು ಏಷ್ಯಾ ಮೈನರ್ನಿಂದ ಯೂರೋಪಿನ ಮಕೆದೋನ್ಯಕ್ಕೆ ಹೋಗಲು ಹೇಗೆ ಸಿದ್ಧ ಮನಸ್ಸನ್ನು ತೋರಿಸಿದ್ದನೋ ಹಾಗೆ, ಸಾವಿರಾರು ಮಂದಿ ಸಾಕ್ಷಿಗಳು ರಾಜ್ಯದ ಸಾರುವವರಿಗಾಗಿ ಹಾಗೂ ಹಿರಿಯರಿಗೆ ಮತ್ತು ಶುಶ್ರೂಷೆ ಸೇವಕರಿಗಾಗಿ ಎಲ್ಲಿ ಹೆಚ್ಚಿನ ಅಗತ್ಯವಿದೆಯೇ ಆ ದೇಶಗಳಿಗೆ ಮತ್ತು ಕ್ಷೇತ್ರಗಳಿಗೆ ಸ್ಥಳಾಂತರ ಮಾಡಿದ್ದಾರೆ. ತಮ್ಮ ಸ್ಥಳೀಕ ನೀರುಗಳಲ್ಲಿ ಚೆನ್ನಾಗಿ ಮೀನು ಹಿಡಿಯುವಿಕೆಯಾಗಿದೆ ಎಂದು ಕಂಡುಕೊಂಡು, ಎಲ್ಲಿ ಕೆಲವೇ ದೋಣಿಗಳೂ ಬಹಳಷ್ಟು ಮೀನೂ ಇವೆಯೋ ಆ ನೀರುಗಳಿಗೆ ಹೊರಟು ಹೋಗಿರುವ ಅಕ್ಷರಾರ್ಥ ಬೆಸ್ತರಂತೆ ಇವರು ಇದ್ದಾರೆ.—ಅ.ಕೃತ್ಯಗಳು 16:9-12; ಲೂಕ 5:4-10.
17. ‘ಮಕೆದೋನ್ಯದ ಕರೆಗೆ’ ಪ್ರತಿಕ್ರಿಯೆ ತೋರಿಸಿದವರ ಯಾವ ಉದಾಹರಣೆಗಳು ನಮಗಿವೆ?
17 ಇತ್ತೀಚೆಗಿನ ಗಿಲ್ಯಾದ್ ಮಿಶನೆರಿ ಶಾಲೆಯ ಕ್ಲಾಸುಗಳು, ಇಂಗ್ಲಿಷ್ ಕಲಿತುಕೊಂಡು ಮತ್ತು ಅನಂತರ ತಮ್ಮನ್ನು ಇತರ ದೇಶಗಳಲ್ಲಿ ಮತ್ತು ಸಂಸ್ಕೃತಿಗಳಲ್ಲಿ ಸೇವೆಗಾಗಿ ನೀಡಿಕೊಂಡ ಹಲವಾರು ಯೂರೋಪಿಯನ್ ದೇಶಗಳಿಂದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡವು. ತದ್ರೀತಿ, ಮಿನಿಸ್ಟೀರಿಯಲ್ ಟ್ರೈನಿಂಗ್ ಸ್ಕೂಲ್ ಮೂಲಕ ಅನೇಕ ಅವಿವಾಹಿತ ಸಹೋದರರಿಗೆ ಎರಡು ತಿಂಗಳ ತೀವ್ರ ತರಬೇತನ್ನು ಕೊಡಲಾಗುತ್ತದೆ ಮತ್ತು ಅನಂತರ ಸಭೆಗಳನ್ನು ಮತ್ತು ಸರ್ಕಿಟುಗಳನ್ನು ಬಲಪಡಿಸುವುದಕ್ಕಾಗಿ ಅವರನ್ನು ಬೇರೆ ದೇಶಗಳಿಗೆ ಕಳುಹಿಸಲಾಗುತ್ತದೆ. ಇತರ ಅಸದೃಶ ಮೀನು ಹಿಡಿಯುವ ಸ್ಥಳಗಳು ಪೂರ್ವ ಯೂರೋಪಿನಲ್ಲಿ ಮತ್ತು ಹಿಂದಣ ಸೋವಿಯೆಟ್ ಗಣರಾಜ್ಯಗಳಲ್ಲಿ ಈಗ ತೆರೆಯಲ್ಪಡುತ್ತಿರುವ ಕ್ಷೇತ್ರಗಳಾಗಿವೆ.—ರೋಮಾಪುರ 15:20, 21 ಹೋಲಿಸಿರಿ.
18. (ಎ) ಪಯನೀಯರರು ಸಾಮಾನ್ಯವಾಗಿ ಪರಿಣಾಮಕಾರಿ ಶುಶ್ರೂಷಕರಾಗಿದ್ದಾರೆ ಏಕೆ? (ಬಿ) ಅವರು ಸಭೆಯಲ್ಲಿ ಇತರರಿಗೆ ಹೇಗೆ ಸಹಾಯ ಮಾಡಶಕ್ತರು?
18 ಲೋಕವ್ಯಾಪಕ ಮೀನು ಹಿಡಿಯುವಿಕೆಯ ಕೆಲಸದಲ್ಲಿ ಇನ್ನೊಂದು ಸಹಾಯಕವು, ಕ್ರಮದ ಪಯನೀಯರರು ಹಾಜರಾಗುವ ಪಯನೀಯರ್ ಸರ್ವಿಸ್ ಸ್ಕೂಲ್ ಆಗಿರುತ್ತದೆ. ಪ್ರತ್ಯೇಕವಾಗಿ ಪಯನೀಯರರಿಗಾಗಿ ತಯಾರಿಸಲಾದ ಷೈನಿಂಗ್ ಆ್ಯಸ್ ಇಲ್ಯೂಮಿನೇಟರ್ಸ್ ಇನ್ ದ ವರ್ಲ್ಡ್ ಪ್ರಕಾಶನದ ಎರಡು ವಾರಗಳ ತೀವ್ರ ಆವರಿಸುವಿಕೆಯ ಮೂಲಕ ಅವರು ತಮ್ಮ ಶುಶ್ರೂಷಕ ಸಾಮರ್ಥ್ಯಗಳನ್ನು—“ಪ್ರೀತಿಯ ಮಾರ್ಗವನ್ನು ಬೆನ್ನಟ್ಟುವುದು,” “ಯೇಸುವನ್ನು ಮಾದರಿಯಾಗಿ ಹಿಂಬಾಲಿಸು,” ಮತ್ತು “ಕಲಿಸುವ ಕಲೆಯನ್ನು ವಿಕಸಿಸುವುದು” ಮುಂತಾದ ವಿಷಯಗಳನ್ನು ಚರ್ಚಿಸುವ ಮೂಲಕ ಪ್ರಗತಿಗೊಳಿಸುತ್ತಾರೆ. ಈ ಮಹಾ ಮೀನು ಹಿಡಿಯುವಿಕೆಯ ಕೆಲಸದಲ್ಲಿ ಅನೇಕರನ್ನು ತರಬೇತು ಮಾಡಲು ಶಕ್ತರಾದ ಈ ನುರಿತ ಮನೆಯಿಂದ ಮನೆಯ ಬೆಸ್ತ ತಂಡಗಳು ಇರುವುದಕ್ಕಾಗಿ ಸಭೆಗಳೆಲ್ಲವೂ ಎಷ್ಟು ಕೃತಜ್ಞವಾಗಿರುತ್ತವೆ!—ಮತ್ತಾಯ 5:14-16; ಫಿಲಿಪ್ಪಿ 2:15; 2 ತಿಮೊಥೆಯ 2:1, 2.
ನಾವು ಪ್ರಗತಿ ಮಾಡಬಲ್ಲೆವೋ?
19. ಅಪೊಸ್ತಲ ಪೌಲನಂತೆ, ನಾವು ನಮ್ಮ ಶುಶ್ರೂಷೆಯಲ್ಲಿ ಹೇಗೆ ಪ್ರಗತಿ ಮಾಡಬಲ್ಲೆವು?
19 ಪೌಲನಂತೆ ನಾವು ಒಂದು ಸಕಾರಾತ್ಮಕವಾದ, ಪ್ರಗತಿಯುಕ್ತ ಮುನ್ನಡೆಯ ಭಾವವುಳ್ಳವರಾಗಲು ಬಯಸಬೇಕು. (ಫಿಲಿಪ್ಪಿ 3:13, 14) ಅವನು ಎಲ್ಲಾ ತರದ ಜನರಿಗೆ ಮತ್ತು ಪರಿಸ್ಥಿತಿಗಳಿಗೆ ಒಗ್ಗಿಸಿಕೊಂಡನು. ಎರಡು ಕಡೆಯವರೂ ಒಪ್ಪುವ ಒಂದು ಸಾಮಾನ್ಯ ತಳಪಾಯವನ್ನು ಕಂಡುಹಿಡಿಯುವುದು ಹೇಗೆ ಮತ್ತು ಸ್ಥಳೀಕ ಮನೋಭಾವನೆಗಳು ಮತ್ತು ಸಂಸ್ಕೃತಿಯ ಆಧಾರದ ಮೇಲೆ ವಿವೇಚನೆ ಮಾಡುವುದು ಹೇಗೆ ಎಂದು ಅವನಿಗೆ ತಿಳಿದಿತ್ತು. ರಾಜ್ಯದ ಸಂದೇಶದೆಡೆಗೆ ಒಬ್ಬ ಮನೆಯವನ ಪ್ರತಿಕ್ರಿಯೆಗಳಿಗೆ ಎಚ್ಚರದಿಂದಿರುವ ಮೂಲಕ ಮತ್ತು ನಮ್ಮ ಪ್ರಸಂಗವನ್ನು ಅವನ ಅಗತ್ಯತೆಗಳಿಗೆ ಹೊಂದಿಸಿಕೊಳ್ಳುವ ಮೂಲಕ ನಾವು ಬೈಬಲ್ ಅಧ್ಯಯನಗಳನ್ನು ಪ್ರಾರಂಭಿಸಬಲ್ಲೆವು. ವಿವಿಧ ರೀತಿಯ ಬೈಬಲ್ ಅಧ್ಯಯನ ಸಹಾಯಕಗಳು ನಮಗಿರಲಾಗಿ, ವ್ಯಕ್ತಿಯ ಹೊರನೋಟಕ್ಕೆ ಒಪ್ಪುವ ಒಂದನ್ನು ನಾವು ನೀಡಬಲ್ಲೆವು. ಫಲದಾಯಕ ಮೀನು ಹಿಡಿಯುವಿಕೆಯಲ್ಲಿ ನಮ್ಮ ಮಣನೀಯತೆ ಮತ್ತು ಜಾಗೃತಿಯು ಸಹ ಮಹತ್ವದ ವಿಷಯಗಳಾಗಿವೆ.—ಅ.ಕೃತ್ಯಗಳು 17:1-4, 22-28, 34; 1 ಕೊರಿಂಥ 9:19-23.
20. (ಎ) ನಮ್ಮ ಮೀನು ಹಿಡಿಯುವ ಕೆಲಸವು ಈಗ ಅಷ್ಟು ಮಹತ್ವವುಳ್ಳದೇಕ್ದೆ? (ಬಿ) ಈಗ ನಮ್ಮ ವೈಯಕ್ತಿಕ ಜವಾಬ್ದಾರಿಕೆ ಏನು?
20 ಈ ಅಸದೃಶ ಭೂವ್ಯಾಪಕ ಮೀನು ಹಿಡಿಯುವಿಕೆಯ ಕೆಲಸವು ಇಂದು ಅಷ್ಟು ಮಹತ್ವವುಳ್ಳದೇಕ್ದೆ? ಏಕೆಂದರೆ ಸೈತಾನನ ಲೋಕ ವ್ಯವಸ್ಥೆಯ ಒಂದು ವಿಪತ್ಕಾರಕ ಪರಮಾವಧಿಗೆ ಮುನ್ನಡೆಯುತ್ತಲಿದೆ ಎಂಬದು, ಸಂಭವಿಸಿರುವ ಮತ್ತು ಸಂಭವಿಸುತ್ತಾ ಇರುವ ಘಟನೆಗಳಲ್ಲಿ ಪ್ರತಿಬಿಂಬಿಸಲ್ಪಟ್ಟ ಬೈಬಲ್ ಪ್ರವಾದನೆಗಳಿಂದ ಸ್ಪಷ್ಟವಾಗಿಗಿ ತೋರಿಬರುತ್ತದೆ. ಆದುದರಿಂದ, ಯೆಹೋವನ ಸಾಕ್ಷಿಗಳಾದ ನಾವು ಏನನ್ನು ಮಾಡುತ್ತಿರಬೇಕು? ಭೂವ್ಯಾಪಕ ನೀರುಗಳ ನಮ್ಮ ಭಾಗದಲ್ಲಿ ನಾವು ನಮ್ಮ ಮೀನು ಹಿಡಿಯುವ ಚಟುವಟಿಕೆಯಲ್ಲಿ ಉದ್ಯೋಗಶೀಲರಾಗಿ ಮತ್ತು ಹುರುಪುಳ್ಳವರಾಗಿ ಇರುವ ನಮ್ಮ ಜವಾಬ್ದಾರಿಕೆಯನ್ನು ಈ ಪತ್ರಿಕೆಯ ಮೂರು ಅಧ್ಯಯನ ಲೇಖನಗಳು ಎತ್ತಿಹೇಳಿವೆ. ಯೆಹೋವನು ನಮ್ಮ ದಕ್ಷತೆಯ ಮೀನು ಹಿಡಿಯುವ ಕೆಲಸವನ್ನು ಮರೆಯಲಾರನು ಎಂಬ ಬೈಬಲಿನ ದೃಢ ಆಶ್ವಾಸನೆಯು ನಮಗಿದೆ. ಪೌಲನು ಹೇಳಿದ್ದು: “ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಧನಲ್ಲ. ನೀವು ಉಪಚಾರ ಮಾಡುವದರಲ್ಲಿ ಯಾವ ಆಸಕ್ತಿಯನ್ನು ತೋರಿಸಿದ್ದೀರೋ ನಿಮ್ಮ ನಿರೀಕ್ಷೆ ದೃಢಮಾಡಿಕೊಂಡು ಕಡೇ ತನಕ ಹಿಡಿಯುವದರಲ್ಲಿಯೂ ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು [ಉದ್ಯೋಗಶೀಲತೆಯನ್ನು, NW] ತೋರಿಸಬೇಕೆಂದು ಅಪೇಕ್ಷಿಸುತ್ತೇವೆ.”—ಇಬ್ರಿಯ 6:10-12.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್ ಪ್ರಕಾಶಿತ, ರೆವೆಲೇಷನ್—ಇಟ್ಸ್ ಗ್ರಾಂಡ್ ಕ್ಲೈಮಾಕ್ಸ್ ಎಟ್ ಹ್ಯಾಂಡ್!, ಪುಟ 185 ಮತ್ತು 186 ನ್ನು ಸಹ ನೋಡಿರಿ.
b “ಪಯನೀಯರ ಪ್ರಚಾರಕ . . . ಯೆಹೋವನ ಸಾಕ್ಷಿಗಳ ಒಬ್ಬ ಪೂರ್ಣ ಸಮಯದ ಕೆಲಸಗಾರ.”—ವೆಬ್ಸ್ಟರ್ಸ್ ಥರ್ಡ್ ನ್ಯೂ ಇಂಟರ್ನೇಷನಲ್ ಡಿಕ್ಷನರಿ.
ನಿಮಗೆ ನೆನಪಿದೆಯೇ?
▫ ಯೆಹೋವನ ಸಾಕ್ಷಿಗಳು ಇಡೀ ಲೋಕವನ್ನು ತಮ್ಮ ಮೀನು ಹಿಡಿಯುವ ಕೆಲಸದ ಸ್ಥಳವಾಗಿ ವೀಕ್ಷಿಸುವುದೇಕೆ?
▫ ಗಿಲ್ಯಾದ್ ಮಿಶನೆರಿ ಶಾಲೆಯು ಮೀನು ಹಿಡಿಯುವ ಕೆಲಸಕ್ಕೆ ಯಾವ ಆಶೀರ್ವಾದ ತಂದಿದೆ?
▫ ಯೆಹೋವನ ಸಾಕ್ಷಿಗಳ ಸಾಫಲ್ಯಕ್ಕೆ ನೆರವಾದ ಕೆಲವು ವಿಷಯಗಳು ಯಾವುವು?
▫ ನಾವು ನಮ್ಮ ಕ್ರೈಸ್ತ ಶುಶ್ರೂಷೆಯಲ್ಲಿ ವೈಯಕ್ತಿಕವಾಗಿ ಹೇಗೆ ಪ್ರಗತಿ ಮಾಡಬಲ್ಲೆವು?
[ಪುಟ 24 ರಲ್ಲಿರುವ ಚಿತ್ರ]
ಅಂತರ್ರಾಷ್ಟ್ರೀಯ ಮೀನು ಹಿಡಿಯುವಿಕೆಯ ಫಲಿತಾಂಶಗಳು
ವರ್ಷ ದೇಶಗಳು ಸಾಕ್ಷಿಗಳು
1939 61 71,509
1943 54 1,26,329
1953 143 5,19,982
1973 208 17,58,429
1983 205 26,52,323
1991 211 42,78,820
[ಪುಟ 25 ರಲ್ಲಿರುವ ಚಿತ್ರ]
ಗಲಿಲಾಯದ ಬೆಸ್ತರ ನಡುವೆ ಸಾಕ್ಷಿ ಕಾರ್ಯವು ಇನ್ನೂ ನಡಿಸಲ್ಪಡುತ್ತಿದೆ