ವಿವಾಹ ಬಂಧಗಳನ್ನು ಬಲಗೊಳಿಸುವ ವಿಧ
“ಒಬ್ಬನು ಯಾವದಾದರೂ ಕಾರಣದಿಂದ ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮವೂ” ಎಂದು ಮಹಾ ಬೋಧಕನಾದ ಯೇಸು ಕ್ರಿಸ್ತನನ್ನು ಸಿಕ್ಕಿಸಿಹಾಕಲು ಪ್ರಯತ್ನಿಸುತ್ತಿದ್ದ ಫರಿಸಾಯರು ಕೇಳಿದರು. ಅವನು ಅವರಿಗೆ ಮೊದಲ ಮಾನವ ವಿವಾಹಕ್ಕೆ ಸೂಚಿಸುವುದರ ಮೂಲಕ ಉತ್ತರ ಕೊಟ್ಟನು ಮತ್ತು ಆ ವಿಷಯದ ಮೇಲೆ ಒಂದು ಮಟ್ಟವನ್ನು ಇಟ್ಟನು: “ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.”
ಮೋಶೆಯು “ತ್ಯಾಗಪತ್ರ”ದ ಕೊಡುವಿಕೆಯನ್ನು ನಿಯಮಿಸುವ ಮೂಲಕ ವಿವಾಹ ವಿಚ್ಛೇದನಕ್ಕೆ ಒದಗಿಸುವಿಕೆಗಳನ್ನು ಮಾಡಿದನೆಂದು ಫರಿಸಾಯರು ವಿವಾದಿಸಿದರು. ಯೇಸು ಅವರಿಗೆ ಉತ್ತರಿಸಿದ್ದು: “ಮೋಶೆಯು ನಿಮ್ಮ ಮೊಂಡತನವನ್ನು ನೋಡಿ ನಿಮ್ಮ ಹೆಂಡರನ್ನು ಬಿಟ್ಟುಬಿಡುವದಕ್ಕೆ ಅಪ್ಪಣೆಕೊಟ್ಟನು; ಆದರೆ ಆದಿಯಿಂದಲೇ ಹಾಗೆ ಇರಲಿಲ್ಲ. ಮತ್ತು ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗುತ್ತಾನೆಂದು ನಿಮಗೆ ಹೇಳುತ್ತೇನೆ ಅಂದನು.”—ಮತ್ತಾಯ 19:3-9.
ಮೂಲತಃ, ಮದುವೆಯು ಶಾಶ್ವತ ಬಂಧವಾಗಿರಲಿಕ್ಕಿತ್ತು. ನಿತ್ಯ ಜೀವದ ನೋಟದಲ್ಲಿ ಪರಿಪೂರ್ಣ ಮಾನವರಾಗಿ ಅವರು ನಿರ್ಮಿಸಲ್ಪಟ್ಟ ಕಾರಣ, ಮರಣವು ಕೂಡ ಮೊದಲ ವಿವಾಹಿತ ಜೋಡಿಯನ್ನು ಅಗಲಿಸತ್ತಿರಲಿಲ್ಲ. ಆದಾಗ್ಯೂ, ಅವರು ಪಾಪಗೈದರು. ಅವರ ಪಾಪವು ಮಾನವ ವಿವಾಹವನ್ನು ಕೆಡಿಸಿತು. ವೈರಿಯಾದಂತಹ ಮರಣವು ವಿವಾಹ ದಂಪತಿಗಳನ್ನು ಬೇರ್ಪಡಿಸಲಾರಂಭಿಸಿತು. ನಾವು ಬೈಬಲ್ನಲ್ಲಿ ಓದುವಂತೆ, ಮರಣವು ವಿವಾಹದ ಅಂತ್ಯವೆಂದು ದೇವರು ವೀಕ್ಷಿಸುತ್ತಾನೆ: “ಮುತ್ತೈದೆಯು ತನ್ನ ಗಂಡನು ಜೀವದಿಂದಿರುವ ತನಕ ಅವನಿಗೆ ಬದ್ಧಳಾಗಿದ್ದಾಳೆ; ಗಂಡನು ಸತ್ತಿದ್ದರೆ ಆಕೆಯು ಬೇಕಾದವನನ್ನು ಮದುವೆಮಾಡಿಕೊಳ್ಳುವದಕ್ಕೆ ಸ್ವತಂತ್ರಳಾಗಿದ್ದಾಳೆ. ಆದರೆ ಈ ಕಾರ್ಯವು ಕರ್ತನ ಶಿಷ್ಯರಿಗೆ ತಕ್ಕಂತೆ ನಡೆಯಲಿ.” (1 ಕೊರಿಂಥ 7:39) ಯಾವುದೋ ಜೀವಾನಂತರದೊಳಗೆ ಮದುವೆಯ ಬಂಧವು ಮುಂದುವರಿಯುತ್ತದೆಂಬ ನಂಬಿಕೆಯಲ್ಲಿ ಒಬ್ಬಾಕೆ ಹೆಂಡತಿಯನ್ನು ಅವಳ ಗಂಡನ ಮರಣದ ಸಮಯದಲ್ಲಿ ತನ್ನನ್ನು ಸುಟ್ಟುಕೊಂಡು ಸಾಯುವಂತೆ ಪ್ರೇರಿಸಲ್ಪಡುವ ಯಾ ಒತ್ತಾಯಿಸಲ್ಪಡುವ, ಸತಿಯಂಥ ಧಾರ್ಮಿಕ ಅಭಿಪ್ರಾಯಗಳಿಗಿಂತ ಇದು ಅತಿ ಭಿನ್ನವಾಗಿದೆ.
ಮೋಶೆಯ ನಿಯಮದ ಒದಗಿಸುವಿಕೆ
ಮೋಶೆಯ ನಿಯಮವು ಕೊಡಲ್ಪಡುವಷ್ಟರೊಳಗೆ, ವಿವಾಹ ಸಂಬಂಧಗಳೆಷ್ಟು ಅವನತಿಗಿಳಿದಿದವ್ದೆಂದರೆ, ಯೆಹೋವನು ಇಸ್ರಾಯೇಲ್ಯರ ಮೊಂಡತನವನ್ನು ಮನಸ್ಸಿಗೆ ತಂದು ವಿವಾಹ ವಿಚ್ಛೇದಕ್ಕಾಗಿ ಒದಗಿಸುವಿಕೆಯನ್ನು ಮಾಡಿದನು. (ಧರ್ಮೋಪದೇಶಕಾಂಡ 24:1) ಅವರ ನೆರೆಯವರನ್ನು ಅವರಂತೆಯೇ ಪ್ರೀತಿಸಬೇಕೆಂಬ ಆತನ ಆಜ್ಞೆಯ ಮೂಲಕ ವ್ಯಕ್ತವಾಗುವಂತೆ, ಸಣ್ಣ ಪುಟ್ಟ ತಪ್ಪುಗಳ ಕಾರಣ ತಮ್ಮ ಹೆಂಡತಿಯರಿಗೆ ವಿಚ್ಛೇದ ಕೊಡುವ ಈ ನಿಯಮವನ್ನು ಇಸ್ರಾಯೇಲ್ಯರು ದುರುಪಯೋಗಪಡಿಸಿಕೊಳ್ಳುವುದು ದೇವರ ಉದ್ದೇಶವಾಗಿರಲಿಲ್ಲ. (ಯಾಜಕಕಾಂಡ 19:18) ವಿವಾಹ ವಿಚ್ಛೇದ ಪತ್ರವನ್ನು ಕೊಡುವುದು ಕೂಡ ಒಂದು ತಡೆಯಂತಿತ್ತು ಯಾಕಂದರೆ, ತ್ಯಾಗಪತ್ರವನ್ನು ಬರೆಯುವ ಕಾರ್ಯಗತಿಯ ಅಂಗವಾಗಿ, ವಿವಾಹ ವಿಚ್ಛೇದವನ್ನು ಬಯಸುವ ಗಂಡನು, ಸಮಾಧಾನ ಮಾಡಲು ಪ್ರಯತ್ನಿಸಬಹುದಾಗಿದ್ದ, ತಕ್ಕ ಅಧಿಕಾರಯುಕ್ತ ಪುರುಷರನ್ನು ವಿಚಾರಿಸಬೇಕಾಗಿತ್ತು. ಇಲ್ಲ, “ಯಾವದಾದರೂ ಒಂದು ಕಾರಣದಿಂದ” ಒಬ್ಬನ ಪತ್ನಿಗೆ ವಿವಾಹ ವಿಚ್ಛೇದವನ್ನೀಯುವ ಯಾವುದೇ ಅಧಿಕಾರವನ್ನು ಸ್ಥಾಪಿಸಲು ಈ ನಿಯಮವನ್ನು ದೇವರು ಕೊಟ್ಟಿರಲಿಲ್ಲ.—ಮತ್ತಾಯ 19:3.
ಹೇಗೂ, ಇಸ್ರಾಯೇಲ್ಯರು ಕಟ್ಟಕಡೆಗೆ ಆ ನಿಯಮದ ಸಾಮಾನ್ಯ ಉದ್ದೇಶ ಮತ್ತು ನೈಜ ಅರ್ಥವನ್ನು ದುರ್ಲಕ್ಷಿಸಿದರು ಮತ್ತು ಅವರ ವಿಚಿತ್ರಭಾವನೆಗಳಿಗೆ ತಕ್ಕ ಯಾವುದೇ ಆಧಾರದ ಮೇಲೆ ವಿವಾಹ ವಿಚ್ಛೇದವನ್ನು ಪಡೆಯಲು ಈ ವಾಕ್ಯಾಂಶವನ್ನು ಸ್ವಪ್ರಯೇಜನಕ್ಕಾಗಿ ಉಪಯೋಗಿಸಿದರು. ಸಾ.ಶ.ಪೂ. ಐದನೇ ಶತಮಾನದಷ್ಟರಲ್ಲಿ, ಎಲ್ಲಾ ಕಾರಣಗಳಿಗಾಗಿ ಅವರಿಗೆ ವಿವಾಹ ವಿಚ್ಛೇದವನ್ನು ಕೊಡುತ್ತಾ, ಅವರ ಯೌವನದ ಪತ್ನಿಯರೊಂದಿಗೆ ಅವರು ವಿಶ್ವಾಸಘಾತುಕತೆಯಿಂದ ವ್ಯವಹರಿಸುತ್ತಿದ್ದರು. ಆತನು ವಿವಾಹ ವಿಚ್ಛೇದವನ್ನು ಹೇಸುತ್ತಾನೆಂದು ಯೆಹೋವನು ಅವರಿಗೆ ದೃಢವಾಗಿ ಸಾರಿದನು. (ಮಲಾಕಿಯ 2:14-16) ಆತನ ದಿನಗಳಲ್ಲಿ ಇಸ್ರಾಯೇಲ್ಯರು ಇದನ್ನು ಆಚರಿಸುತ್ತಿದ್ದುದ್ದಾಗಿ, ಈ ಹಿನ್ನೆಲೆಯ ವಿರುದ್ಧ ಯೇಸುವು ವಿವಾಹ ವಿಚ್ಛೇದವನ್ನು ಖಂಡಿಸಿದನು.
ವಿವಾಹ ವಿಚ್ಛೇದಕ್ಕೆ ಒಂದೇ ನ್ಯಾಯಸಮ್ಮತ ಆಧಾರ
ಆದಾಗ್ಯೂ, ವಿವಾಹ ವಿಚ್ಛೇದಕ್ಕೆ ಒಂದು ನ್ಯಾಯಸಮ್ಮತ ಆಧಾರವನ್ನು ಯೇಸು ತಿಳಿಸಿದ್ದನು: ಹಾದರ. (ಮತ್ತಾಯ 5:31, 32; 19:8, 9) ಇಲ್ಲಿ ಭಾಷಾಂತರಿಸಲಾದ “ಹಾದರ”ವು ಶಾಸ್ತ್ರೀಯ ವಿವಾಹದ ಹೊರಗಿನ ಎಲ್ಲ ತರಹದ ಕಾನೂನು ಬಾಹಿರ ಲೈಂಗಿಕ—ಸಮಾನ ಲಿಂಗದ ಯಾ ವಿರುದ್ಧ ಲಿಂಗದ ಯಾರೊಂದಿಗೆಯೆ ಆಗಲಿ ಯಾ ಒಂದು ಪಶುವಿನೊಂದಿಗೆ—ಸಂಭೋಗವನ್ನು ಒಳಗೊಳ್ಳುತ್ತದೆ.
ಹಾಗಿರುವಲಿಯ್ಲೂ, ಅಪನಂಬಿಗಸ್ತ ಜೋಡಿಗಳಿಂದ ವಿವಾಹ ವಿಚ್ಛೇದವನ್ನು ಪಡೆಯಲು ಯೇಸುವು ಶಿಫಾರಸ್ಸು ಮಾಡುತ್ತಿರಲಿಲ್ಲ. ಒಳಗೂಡಿರುವ ಪರಿಣಾಮಗಳನ್ನು ತೂಗಿ ನೋಡಿದ ಮೇಲೆ ಅವನು ಯಾ ಅವಳು ಒಂದು ವಿವಾಹ ವಿಚ್ಛೇದವನ್ನು ಅಪೇಕ್ಷಿಸುತ್ತಾರೊ ಎಂದು ನಿರ್ಧರಿಸುವುದು ನಿರಪರಾಧಿ ಸಂಗಾತಿಗೆ ಬಿಡಲ್ಪಟ್ಟದ್ದಾಗಿದೆ. ಈ ಶಾಸ್ತ್ರವಚನದ ಆಧಾರದ ಮೇಲೆ ವಿವಾಹ ವಿಚ್ಛೇದವನ್ನು ಅವಲೋಕಿಸುವ ಪತ್ನಿಯರು, ಅವಳ ಪಾಪಕ್ಕಾಗಿ ಮೊದಲ ಹೆಂಗಸಿಗೆ ತೀರ್ಪನ್ನಿತ್ತಾಗಿನ ದೇವರ ಹೇಳಿಕೆಯನ್ನು ಕೂಡ ಪರಿಗಣಿಸಬಯಸಬಹುದು. ಮರಣ ದಂಡನೆಗೆ ಕೂಡಿಸಿ, ದೇವರು ಹವ್ವಳಿಗೆ ನಿರ್ದಿಷ್ಟವಾಗಿ ಅಂದದ್ದು: “ಗಂಡನ ಮೇಲೆ ನಿನಗೆ ಆಶೆಯಿರುವದು [ಅತಿಕಾಂಕ್ಷೆ NW]; ಅವನು ನಿನಗೆ ಒಡೆಯನಾಗುವನು.” (ಆದಿಕಾಂಡ 3:16) ಸಿ. ಎಫ್. ಕೀಲ್ ಮತ್ತು ಎಫ್. ಡೆಲಿಟ್ಸ್ರಿಂದ ಕಮೆಂಟರಿ ಆನ್ ದಿ ಓಲ್ಡ್ ಟೆಸ್ಟಮೆಂಟ್, ಈ “ಅತಿಕಾಂಕ್ಷೆ”ಯು “ಬಹುತೇಕ ರೋಗವೋ ಎಂಬಂತಹ ಬಯಕೆ” ಎಂದು ವಿವರಿಸುತ್ತದೆ. ಈ ಅತಿಕಾಂಕೆಯ್ಷು ಪ್ರತಿ ಪತ್ನಿಯಲ್ಲಿ ಅಷ್ಟು ಬಲವಾಗಿರಲಿಕ್ಕಿಲ್ಲ ಎಂದು ಒಪ್ಪಿಕೊಂಡರೂ, ಒಬ್ಬಾಕೆ ನಿರಪರಾಧಿ ಪತ್ನಿಯು ವಿವಾಹ ವಿಚ್ಛೇದವನ್ನು ಗಮನಿಸುವಾಗ, ಹವ್ವಳಿಂದ ಸ್ತ್ರೀಯರು ಅನುವಂಶಿಕವಾಗಿ ಪಡೆದ ಭಾವನಾತ್ಮಕ ಆವಶ್ಯಕತೆಗಳನ್ನು ಗಮನದೊಳಗೆ ತೆಗೆದುಕೊಳ್ಳುವಲ್ಲಿ ಅವಳು ವಿವೇಕಿಯಾಗುವಳು. ಆದಾಗ್ಯೂ, ಅಪರಾಧಿ ಸಂಗಾತಿಯ ಪಾಲಿನ ವಿವಾಹದ ಹೊರಗಿನ ಲೈಂಗಿಕತೆಯು ನಿರಪರಾಧಿ ಸಂಗಾತಿಗೆ ರತಿರವಾನಿತ ರೋಗ—ಏಯ್ಡ್ಸ್ ಸೇರಿಸಿ—ಗಳು ಸೋಂಕುವಂತೆ ನಡಿಸಬಲ್ಲದಾದುದರಿಂದ, ಯೇಸುವಿನ ಮೂಲಕ ವಿವರಿಸಲಾದಂತೆ ಕೆಲವರು ವಿವಾಹ ವಿಚ್ಛೇದವನ್ನು ಆಶ್ರಯಿಸಲು ನಿರ್ಧರಿಸಿದ್ದಾರೆ.
ಕುಟುಂಬ ಸಮಸ್ಯೆಗಳ ಬೀಜಗಳು ಬಿತ್ತಲ್ಪಟ್ಟದ್ದು
ಜನರ ಮೊಂಡತನವು ದೇವರ ವಿರುದ್ಧ ಗೈದ ಮೊದಲ ಮಾನವ ದಂಪತಿಗಳ ಪಾಪದಲ್ಲಿ ಅದರ ಮೂಲವನ್ನು ಕಂಡುಕೊಳ್ಳುತ್ತದೆ. (ರೋಮಾಪುರ 5:12) ಮೊದಲ ಮಾನವ ಜೋಡಿ ಅವರ ಸ್ವರ್ಗೀಯ ತಂದೆಯ ವಿರುದ್ಧ ಪಾಪಗೈದಾಗ ಕುಟುಂಬ ಕಲಹದ ಬೀಜಗಳು ಬಿತ್ತಲಾದುವು. ಅದು ಹೇಗೆ? ಮೊದಲ ಸ್ತ್ರೀಯಾದ ಹವ್ವಳು , ನಿಷೇಧಿಸಿದ ಮರದಿಂದ ತಿನ್ನಲು ಸರ್ಪನ ಮೂಲಕ ಶೋಧಿತಳಾದಾಗ, ಅವಳು ಮುಂದೊತ್ತಿ ಹೋದಳು ಮತ್ತು ಹಣ್ಣನ್ನು ತಿಂದಳು. ಆ ಗುರುತರವಾದ ನಿರ್ಧಾರವನ್ನು ಮಾಡಿಯಾದ ಅನಂತರವೇ ಅವಳು ಆ ಸರ್ಪವು ಅವಳಿಗೆ ಏನಂದಿತು ಎಂಬುದರ ಕುರಿತು ಗಂಡನೊಂದಿಗೆ ಮಾತಾಡಿದಳು. (ಆದಿಕಾಂಡ 3:6) ಹೌದು, ಅವಳು ತನ್ನ ಗಂಡನನ್ನು ವಿಚಾರಿಸದೇ ಕ್ರಿಯೆಗೈದಿದ್ದಳು. ಇಲ್ಲಿ ಇಂದಿನ ಅನೇಕ ಕುಟುಂಬಗಳ ಮೂಲಕ ಎದುರಿಸಲ್ಪಡುವ ಸಮಸ್ಯೆಗಳ ಪ್ರಥಮರೂಪವಿದೆ—ಹೃದಯ ಬಿಚ್ಚಿ ಮಾಡುವ ಸಂಸರ್ಗದ ಕೊರತೆ.
ಅನಂತರ, ಅವರ ಪಾಪದ ಪರಿಣಾಮಗಳನ್ನು ಎದುರಿಸುವಾಗ, ಆದಾಮ ಮತ್ತು ಹವ್ವರಿಬ್ಬರೂ ಅನೇಕ ದಂಪತಿಗಳು ಇಂದು ಬಳಸುವ—ಅಂದರೆ, ತೊಂದರೆಯಲ್ಲಿರುವಾಗ—ಇತರರನ್ನು ದೂರುವಂಥ, ಯುಕ್ತಿಯನ್ನೇ ಅವಲಂಬಿಸಿದರು. ಮೊದಲ ಮಾನವನಾದ ಆದಾಮನು, ತಾನೇನನ್ನು ಮಾಡಿದ್ದನೋ ಅದಕ್ಕಾಗಿ ಅವನ ಹೆಂಡತಿ ಮತ್ತು ಯೆಹೋವನನ್ನು ದೂರಿ ಹೀಗನ್ನುತ್ತಾನೆ: “ನನ್ನ ಜೊತೆಯಲ್ಲಿರುವದಕ್ಕೆ ನೀನು ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆನು.” ಸ್ತ್ರೀಯು ಪ್ರತ್ಯುತ್ತರ ಕೊಟ್ಟದ್ದು: “ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು.”—ಆದಿಕಾಂಡ 3:12, 13.
ಆದಾಮ ಮತ್ತು ಹವ್ವರ ಮೇಲೆ ಯೆಹೋವನ ತೀರ್ಪಿನ ವಿಧಿಸುವಿಕೆಯು ತೊಂದರೆಗಳಲ್ಲಿ ವಿಕಸಿಸಲಿರುವ ಇನ್ನೊಂದು ಅಂಶವನ್ನೂ ಮುನ್ಸೂಚಿಸುತ್ತದೆ. ಆಕೆಯ ಗಂಡನೊಂದಿಗೆ ಅವಳ ಸಂಬಂಧದ ವಿಷಯದಲ್ಲಿ, ಯೆಹೋವನು ಹವ್ವಳಿಗೆ ಅಂದದ್ದು: “ಅವನು ನಿನ್ನನ್ನು ಆಳುವನು.” (NW) ನಮ್ಮ ಮೊದಲನೇ ಲೇಖನದಲ್ಲಿ ತಿಳಿಸಲಾದ ಈಸಾವೊನಂತೆ ಇಂದು ಅನೇಕ ಗಂಡಂದಿರು, ಅವರ ಹೆಂಡತಿಯರ ಭಾವನೆಗಳಿಗೆ ಪರಿಗಣನೆ ಇಲ್ಲದೆ ನಿಷ್ಠುರ ವಿಧಾನದಲ್ಲಿ ಅವರ ಹೆಂಡತಿಯರನ್ನು ಆಳುತ್ತಾರೆ. ಆದರೂ, ಅನೇಕ ಹೆಂಡತಿಯರು ಅವರ ಗಂಡಂದಿರ ಗಮನಕ್ಕಾಗಿ ಇನ್ನೂ ಅತಿಕಾಂಕ್ಷೆಯನ್ನು ಹೊಂದಿರುತ್ತಾರೆ. ಆ ಅತಿಕಾಂಕೆಯ್ಷು ತೃಪ್ತಿಯಾಗದ, ಹೆಂಡತಿಯರು ಆ ಗಮನಕ್ಕಾಗಿ ತಗಾದೆ ಮಾಡಬಹುದು ಮತ್ತು ಸ್ವಾರ್ಥದಿಂದ ವರ್ತಿಸಬಹುದು. ಅನೇಕ ಗಂಡಂದಿರು ಆಳುವವರಾಗಿರುವುದರಿಂದ ಮತ್ತು ಅನೇಕ ಹೆಂಡತಿಯರು ಗಂಡನ ಗಮನಕ್ಕಾಗಿ ಅತಿಕಾಂಕ್ಷೆಯಳ್ಳವರಾಗಿರುವುದರಿಂದ, ಸ್ವಾರ್ಥಕ್ಕೆ ಮೇಲುಗೈಯಾಗುತ್ತದೆ, ಮತ್ತು ಸಮಾಧಾನವು ಹಾರಿ ಹೋಗುತ್ತದೆ. “ಇಂದಿನ ವಿವಾಹ ವಿಚ್ಛೇದಗಳನ್ನು ವಿಶೇಷ್ಲಿಸುವ ವಿಧ,” ಎಂಬ ಹೆಸರಿನ ಒಂದು ಪೇಪರಿನಲ್ಲಿ, ಶೂನ್ಸ್ಕೆ ಸರಿಜಾವ ಹೇಳಿದ್ದು: “‘ಒಬ್ಬನ ಸ್ವಂತ ರೀತಿ’ಯ ಅಂದರೆ ಒಬ್ಬನ ಸ್ವಂತ ಅಭಿರುಚಿಗಳಿಗೆ ಆದ್ಯತೆಯನ್ನು ಕೊಡುವಿಕೆಯ ವಿವಾದದ ಮೂಲದಲ್ಲಿರುವ ಪ್ರವೃತ್ತಿಯನ್ನು ನಾವು ಕಡೆಗಣಿಸುವುದಾದರೆ, ಫಕ್ಕನೆ ಇಂದಿನ ವಿವಾಹ ವಿಚ್ಛೇದಗಳನ್ನು ವಿಶೇಷ್ಲಿಸಲು ಅಕಸ್ಮಾತ್ತಾಗಿ ಅಸಾಧ್ಯವಾಗಿ ಪರಿಣಮಿಸುವುದು.”
ಆದಾಗ್ಯೂ, ಯೆಹೋವನು ಆತನ ವಾಕ್ಯದಲ್ಲಿ, ವಿಧೇಯ ವಿವಾಹಿತ ದಂಪತಿಗಳು ಅವರ ಅಪರಿಪೂರ್ಣ ಸ್ಥಿತಿಯಲ್ಲಿಯೂ ತಕ್ಕಮಟ್ಟಿನ ವೈವಾಹಿಕ ಸಂತೋಷದಲ್ಲಿ ಆನಂದಿಸುವಂತೆ ಮಾರ್ಗದರ್ಶನಗಳನ್ನು ಒದಗಿಸಿರುತ್ತಾನೆ. ಈಸಾವೊ ದೇವರ ಮಾರ್ಗದರ್ಶನಗಳನ್ನು ಅನುಸರಿಸಿದನು ಮತ್ತು ಅವನು ಈಗ ಒಂದು ಸಂತೋಷದ ಕುಟುಂಬ ಜೀವಿತದಲ್ಲಿ ಆನಂದಿಸುತ್ತಿದ್ದಾನೆ. ಬೈಬಲ್ ಸೂತ್ರಗಳು ವಿವಾಹ ಬಂಧವನ್ನು ಬಲಗೊಳಿಸಲು ಜನರಿಗೆ ಸಹಾಯ ಮಾಡುವ ವಿಧವನ್ನು ನಾವು ನೋಡೋಣ.
ವಿಷಯಗಳನ್ನು ಮಾತಾಡಿ ನಿವಾರಿಸಿರಿ
ಅನೇಕ ವಿವಾಹಗಳಲ್ಲಿ, ಸಂಸರ್ಗದ ಕೊರತೆ, ಇತರರನ್ನು ದೂರುವ ಪ್ರವೃತ್ತಿ, ಮತ್ತು ಸ್ವಾರ್ಥ ಮನೋಭಾವಗಳು ಗಂಡ ಮತ್ತು ಹೆಂಡತಿಗೆ ಒಬ್ಬರು ಇನ್ನೊಬ್ಬರ ಭಾವೋದ್ರೇಕಗಳನ್ನು ಅರಿಯಲು ಕಷ್ಟಕರವಾಗಿ ಮಾಡುತ್ತದೆ. “ಭಾವನೆಗಳನ್ನು ಹಂಚಿಕೊಳ್ಳುವುದು ಆಪತ್ತೆಗೆ ಪೂರ್ವಭಾವಿಯಾಗಿರುವುದರಿಂದ, ಆಪತ್ತೆಗೆ ಸಂಪೂರ್ಣಗೊಳಿಸುವ ಭರವಸೆ ಅವಶ್ಯ. ಮತ್ತು ಇಂದು ಭರವಸೆಯು ವಿರಳವಾಗಿದೆ,” ಎಂದು ಸಂಶೋಧಕಿ ಕ್ಯಾರಿಲ್ ಎಸ್. ಏವೆರಿ ಹೇಳುತ್ತಾರೆ. ಆಂತರ್ಯದ ಭಾವನೆಗಳನ್ನು ಹಂಚಿಕೊಳ್ಳುವ ಒಂದು ಕೂಡುಹಾಕುವಿಕೆಯೂ ಅಂಥ ಭರವಸೆಯನ್ನು ಕಟ್ಟುತ್ತದೆ. ಇದಕ್ಕೆ ಗಂಡ ಮತ್ತು ಹೆಂಡತಿಯ ನಡುವೆ ಬಿಚ್ಚು ಹೃದಯದ ಸಂಸರ್ಗವು ಅಗತ್ಯ.
ಆಪ್ತ ಆಲೋಚನೆಗಳ ಸಹಭಾಗಿತ್ವವನ್ನು ಉತ್ತೇಜಿಸಲು ಜ್ಞಾನೋಕ್ತಿಯು ಒಂದು ದೃಷ್ಟಾಂತವನ್ನು ಬಳಸುತ್ತಾ, ಹೇಳುವುದು: “ಮನುಷ್ಯನ ಹೃದಯ ಸಂಕಲ್ಪವು ಆಳವಾದ [ಬಾವಿಯ] ನೀರು ಆದರೆ ವಿವೇಕಿಯು ಅದನ್ನು ಸೇದಬಲ್ಲನು.” (ಜ್ಞಾನೋಕ್ತಿ 20:5) ವಿವಾಹಿತ ಸಂಗಾತಿಗಳು ವಿವೇಚಿಸುವವರಾಗಿರಬೇಕು ಮತ್ತು ಅವರ ಗಂಡ ಯಾ ಹೆಂಡತಿಯ ಹೃದಯಗಳಲ್ಲಿ ಆಳದಲ್ಲಿರುವ ಆಲೋಚನೆಗಳನ್ನು ಹೊರತರಬೇಕು. ನಿಮ್ಮ ಸಂಗಾತಿಯು ಕ್ಷೋಭೆಗೊಂಡಿರುವರೆಂದು ಊಹಿಸಿರಿ. “ನನ್ನ ದಿನವೂ ಪ್ರಯಾಸಕರವಾಗಿತ್ತು,” ಎಂದು ಪ್ರತಿಕ್ರಿಯಿಸುವ ಬದಲು, ದಯಾಪರತೆಯಿಂದ: “ನಿನ್ನ ದಿನವು ಪ್ರಯಾಸದ್ದಾಗಿತ್ತೊ? ಏನಾಯಿತು?” ಎಂದು ಯಾಕೆ ಕೇಳಬಾರದು? ನಿಮ್ಮ ಗಂಡ ಯಾ ಹೆಂಡತಿಯನ್ನು ಆಲಿಸಲು ಸಮಯ ಮತ್ತು ಪ್ರಯತ್ನವು ಬೇಕಾದೀತು, ಆದರೆ ಸಮಯವನ್ನು ಆ ವಿಧಾನದಲ್ಲಿ ಕಳೆಯುವುದು, ನಿಮ್ಮ ಸಂಗಾತಿಯನ್ನು ಅಸಡ್ಡೆ ಮಾಡುವುದಕ್ಕಿಂತ ಮತ್ತು ಅನಂತರ ಸ್ಫೋಟಗೊಳ್ಳುವ ಬಲವಾದ ಭಾವೊದ್ರೇಕಗಳೊಂದಿಗೆ ವ್ಯವಹರಿಸುವುದಕ್ಕಿಂತ ಸಾಮಾನ್ಯವಾಗಿ ಹೆಚ್ಚು ಆನಂದಕರ, ಸಂತೃಪ್ತಿಕರ ಮತ್ತು ಸಮಯವನ್ನು ಉಳಿಸುವುದಾಗಿರುವುದು.
ಭರವಸೆಯನ್ನು ಗಳಿಸಲು, ಪ್ರತಿಯೊಬ್ಬರು ಪ್ರಾಮಾಣಿಕರಾಗಿರಬೇಕು ಮತ್ತು ಇನ್ನೊಬ್ಬ ಸಂಗಾತಿಯು ಅರ್ಥಮಾಡಬಹುದಾದ ವಿಧಾನದಲ್ಲಿ ಭಾವನೆಗಳನ್ನು ತಿಳಿಯಪಡಿಸಲು ಪ್ರಯತ್ನ ಮಾಡಬೇಕು. ದೇವರ ವಾಕ್ಯವು ಪ್ರೇರೇಪಿಸುವುದು, “ಸತ್ಯವನ್ನೇ ಆಡಿರಿ,” “ಯಾಕಂದರೆ ನಾವು ಒಬ್ಬರಿಗೊಬ್ಬರು ಅಂಗಗಳಾಗಿದ್ದೇವಲ್ಲಾ.” (ಎಫೆಸ 4:25) ಸತ್ಯವನ್ನಾಡಲು ವಿವೇಚನೆಯ ಅಗತ್ಯವಿದೆ. ಒಬ್ಬಾಕೆ ಹೆಂಡತಿ, ತಾನು ಆಲೈಸಲ್ಪಡುತ್ತಿಲ್ಲವೆಂದು ಭಾವಿಸುತ್ತಾಳೆಂದು ಊಹಿಸೋಣ. ಅವಳು ಮಾತಾಡುವ ಮುಂಚೆ, ಈ ಜ್ಞಾನೋಕ್ತಿಯನ್ನು ಅವಳು ಗಮನಿಸಬೇಕು: “ತನ್ನ ಮಾತುಗಳನ್ನು ತಡೆದು ಹಿಡಿಯುವ ಯಾವನೂ ಜ್ಞಾನವುಳ್ಳವನು, ಮತ್ತು ವಿವೇಚನೆಯ ಪುರುಷನು ಪ್ರಕೃತಿಯಲ್ಲಿ ಶಾಂತನು.” (ಜ್ಞಾನೋಕ್ತಿ 17:27, NW) “ನೀನೆಂದೂ ನನ್ನನ್ನು ಆಲೈಸುವುದಿಲ್ಲ!” ಎಂದು ಅವಳ ಗಂಡನನ್ನು ಆಪಾದಿಸುವುದಕ್ಕಿಂತ, ಅವಳೊಳಗೆ ವ್ಯರ್ಥತೆ ಮತ್ತು ಆಶಾಭಂಗವು ಬೆಳೆಯುವ ಮುಂಚೆ ಶಾಂತತೆಯಿಂದ ಆಕೆಯ ಭಾವನೆಗಳನ್ನು ತಿಳಿಯಪಡಿಸುವುದು ಹೆಚ್ಚು ಉತ್ತಮವಾಗಿರುವುದು. “ನೀವು ಕಾರ್ಯಮಗ್ನನಾಗಿದ್ದೀರಿ ಎಂದು ನನಗೆ ತಿಳಿದದೆ, ಆದರೆ ನಿಮ್ಮೊಂದಿಗೆ ಸ್ವಲ್ಪ ಹೆಚ್ಚು ಸಮಯ ಇರುವುದು ನನ್ನನ್ನು ಹೆಚ್ಚು ಸಂತೋಷಿತಳನ್ನಾಗಿ ಮಾಡುವುದು,” ಎಂಬಂತಹದೇನಾದರೂ ಹೇಳುವ ಮೂಲಕ ಪ್ರಾಯಶಃ ಅವಳು ತನಗನಿಸುವ ಭಾವನೆಗಳನ್ನು ವ್ಯಕ್ತಪಡಿಸಬಲ್ಲಳು.
ನಿಜಕ್ಕೂ, “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು.” (ಜ್ಞಾನೋಕ್ತಿ 15:22) ನಿಮ್ಮ ಸಂಗಾತಿ ನಿಮ್ಮನ್ನು ಪ್ರೀತಿಸುತ್ತಾಳೆ, ಆದರೆ ನಿಮ್ಮ ಮನಸ್ಸನ್ನು ಅವಳು ಓದಬಲ್ಲಳೆಂದು ಇದರ ಅರ್ಥವಲ್ಲ. ನಿಮ್ಮ ಅನಿಸಿಕೆಯನ್ನು ಜಾಣ್ಮೆಯಿಂದ ನಿಮ್ಮ ಸಂಗಾತಿಗೆ ತಿಳಿಯಪಡಿಸಬೇಕು. ಒಬ್ಬ ಕ್ರೈಸ್ತ ವಿವಾಹಿತ ದಂಪತಿಗಳಂತೆ, “ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿ”ಕೊಳ್ಳುವಂತೆ ಪ್ರೀತಿಪೂರ್ವಕ ಹೊಂದಾಣಿಕೆಯನ್ನು ಮಾಡಲು, ಇದು ನಿಮಗೆ ಸಹಾಯಕಾರಿಯಾಗುವುದು.—ಎಫೆಸ 4:2, 3.
ಉದಾಹರಣೆಗಾಗಿ, ಜೂಜಾಡಲು ಕಡ್ಡಾಯ ಆಶೆಯೊಂದಿಗಿನ ಪತ್ನೀದಾಸ ಗಂಡನಾದ ಕಾಜುವೊನನ್ನು ತಕೊಳ್ಳಿರಿ. ಅನೇಕ ನೂರಾರು ಸಾವಿರ ಡಾಲರುಗಳಷ್ಟು ಸಾಲಗಳಲ್ಲಿ ತಾನಾಗಿಯೆ ಹೂತುಹೋಗಿರುವುದನ್ನು ಅವನು ಕಂಡುಕೊಂಡನು. ತನ್ನ ಕಡಗಳನ್ನು ತೀರಿಸಲು ಹಣ ಸಾಲ ಮಾಡುತ್ತಾ, ಅವನು ಆ ಕೆಸರಿನಲ್ಲಿ ಇನ್ನೂ ಆಳಕ್ಕೆ ಇಳಿದನು. ಅನಂತರ ಅವನು ಬೈಬಲ್ ಅಧ್ಯಯನವನ್ನು ಆರಂಭಿಸಿದನು ಮತ್ತು ಕೊನೆಗೆ ಅವನ ಸಮಸ್ಯೆಗಳ ಕುರಿತು ತನ್ನ ಹೆಂಡತಿಗೆ ಹೇಳಲು ಧೈರ್ಯವನ್ನು ಕಂಡುಕೊಂಡನು. ಅವನು ಅವಳ ಆಪಾದನೆಗಳನ್ನು ಎದುರಿಸಲು ತಯಾರಾಗಿದ್ದನು. ಹೇಗೂ, ಹೆಚ್ಚು ಸಮಯದಿಂದ ಬೈಬಲ್ ಅಧ್ಯಯನವನ್ನು ಪಡಕೊಳ್ಳುತ್ತಿದ್ದ, ಅವನ ಹೆಂಡತಿಯು: “ಸಾಲಗಳನ್ನು ಹೇಗೆ ತೀರಿಸುವುದು ಎಂದು ನಾವೀಗ ಲೆಕ್ಕಿಸಲು ಪ್ರಯತ್ನಿಸೋಣ” ಎಂದು ಶಾಂತವಾಗಿ ಉತ್ತರಿಸಿದಾಗ ಅವನಿಗೆ ಆಶ್ಚರ್ಯವಾಯಿತು.
ಮಾರನೇ ದಿನದಿಂದಾರಂಭಿಸಿ, ಅವರು ಸಾಲಕೊಟ್ಟವರನ್ನು ಭೇಟಿಯಾದರು ಮತ್ತು ತಮ್ಮ ಮನೆಯನ್ನು ಮಾರಿಯೂ, ಸಾಲಗಳನ್ನು ತೀರಿಸಲು ಆರಂಭಿಸಿದರು. ಸಾಲಗಳನ್ನು ಮುಗಿಸಲು ಸಾಧಾರಣ ಒಂದು ವರ್ಷವೇ ಹಿಡಿಯಿತು. ಅವನ ಹೆಂಡತಿ, ಕಿಮೀಯನ್ನು ಬದಲಾಯಿಸಿದ್ದು ಯಾವುದು? ಅವಳನ್ನುವುದು: “ಫಿಲಿಪ್ಪಿ ಅಧ್ಯಾಯ 4, ವಚನಗಳು 6 ಮತ್ತು 7 ರಲ್ಲಿ ಕಂಡುಬರುವ ಮಾತುಗಳು ಕಾರ್ಯತಃ ನಿಜವಾಗಿವೆ. ‘ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವ ಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.’” ಅವಳು ಇನ್ನೂ ಹೇಳಿದ್ದು: “ಕಷ್ಟಗಳದ್ದಾಗ್ಯೂ ನಾನು ಎಷ್ಟೊಂದು ಉಲ್ಲಾಸಿತಳಾಗಿದ್ದದ್ದನ್ನು ನೋಡಿ ನನ್ನ ಒಬ್ಬ ಸ್ನೇಹಿತೆ ಆಶ್ಚರ್ಯಗೊಂಡು, ನನ್ನೊಂದಿಗೆ ಬೈಬಲ್ ಅಧ್ಯಯನವನ್ನು ಆರಂಭಿಸಿದಳು.” ಕಾಚುವೊ ಮತ್ತು ಅವನ ಹೆಂಡತಿಯು ತದನಂತರ ದೀಕ್ಷಾಸ್ನಾನ ಪಡೆದರು ಮತ್ತು ಈಗ ಸಂತೋಷದ ಕುಟುಂಬ ಜೀವಿತದಲ್ಲಿ ಆನಂದಿಸುತ್ತಿದ್ದಾರೆ.
ಸತ್ಯವನ್ನಾಡುವುದರ ಮೂಲಕ ಒಬ್ಬರಿಗೊಬ್ಬರು ಭರವಸೆಯನ್ನಿಡುವುದಕ್ಕೆ ಕೂಡಿಸಿ, ಮೇಲಿನ ಅನುಭವಗಳನ್ನು ಪಡೆದ ಗಂಡಂದಿರು ಮತ್ತು ಹೆಂಡತಿಯರು ಅವರ ವೈವಾಹಿಕ ಸಮಸ್ಯೆಗಳನ್ನು ಬಗೆಹರಿಸಲು ದಂಪತಿಗಳಿಗೆ ಸಹಾಯ ಮಾಡುವ ಯಾವುದನ್ನೋ ಮಾಡಿದರು. ವಿವಾಹದೇರ್ಪಾಡಿನ ಉಗಮನಾದ ಯೆಹೋವ ದೇವರೊಂದಿಗೆ ಅವರು ಸಂಸರ್ಗ ಮಾಡಿದರು. ದಂಪತಿಗಳು ಒತ್ತಡಗಳನ್ನೂ ಮತ್ತು ಕಷ್ಟಗಳನ್ನೂ ಎದುರಿಸುತ್ತಿದ್ದಾಗ್ಯೂ, ದೇವರ ಸೂತ್ರಗಳನ್ನು ಅನ್ವಯಿಸಲು ಅವರು ಉತ್ತಮವಾದುದನ್ನು ಮಾಡುವಲ್ಲಿ ಮತ್ತು ಉಳಿದುದನ್ನು ಆತನ ಕೈಯುಲ್ಲಿ ಬಿಡುವುದಾದರೆ ಎಲ್ಲಾ ಗೃಹಿಕೆಗಳನ್ನು ಮೀರುವ ದೇವರ ಶಾಂತಿಯೊಂದಿಗೆ ಆತನು ಅವರನ್ನು ಆಶೀರ್ವದಿಸುವನು. ಒಟ್ಟಾಗಿ ಪ್ರಾರ್ಥಿಸುವುದು ವಿಶೇಷವಾಗಿ ಸಹಾಯಕಾರಿಯಾಗಿದೆ. ಗಂಡನು ಮುಂದಾಳುತ್ವವನ್ನು ವಹಿಸಿ ಅವನು ಮತ್ತು ಅವನ ಹೆಂಡತಿ ಎದುರಿಸುತ್ತಿರುವ ಯಾವುದೇ ಸಮಸ್ಯೆಯ ಮೇಲೆ ದೇವರ ಮಾರ್ಗದರ್ಶನವನ್ನು ಮತ್ತು ನಿರ್ದೇಶನವನ್ನು ಹುಡುಕುತ್ತಾ ಆತನ ಮುಂದೆ ‘ತನ್ನ ಹೃದಯವನ್ನು ಹೊಯ್ಯಬೇಕು.’ (ಕೀರ್ತನೆ 62:8) ಅಂಥ ಪ್ರಾರ್ಥನೆಗಳನ್ನು ಯೆಹೋವ ದೇವರು ಖಂಡಿತವಾಗಿಯೂ ಆಲಿಸುವನು.
ಹೌದು, ವಿವಾಹದ ಬಂಧವನ್ನು ಬಲಗೊಳಿಸಲು ಸಾಧ್ಯವಿದೆ. ಈಗ ಪ್ರಕ್ಷುಬ್ಧ ಸಮಾಜದಲ್ಲಿ ನಮ್ಮೆಲ್ಲಾ ಅಪರಿಪೂರ್ಣತೆಗಳೊಂದಿಗೆ ಜೀವಿಸುತ್ತಿರುವಾಗಲೂ, ವಿವಾಹಿತ ದಂಪತಿಗಳು ಅವರ ಸಂಬಂಧದಲ್ಲಿ ಗಣನೀಯ ಆನಂದವನ್ನು ಕಂಡುಕೊಳ್ಳಬಲ್ಲರು. ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಮೂಲಕ ಪ್ರಕಾಶಿತ ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಎಂಬ ಪುಸ್ತಕದಲ್ಲಿ, ನೀವು ಹೆಚ್ಚಿನ ವ್ಯಾವಹಾರಿಕ ಸಲಹೆಗಳನ್ನು ಮತ್ತು ದೈವಿಕ ಸೂಚನೆಗಳನ್ನು ಕಂಡುಕೊಳ್ಳಬಲ್ಲಿರಿ. ಅದಲ್ಲದೆ, ಬೈಬಲ್ ಸೂತ್ರಗಳನ್ನು ಅನ್ವಯಿಸಲು ಶ್ರದ್ಧಾಪೂರ್ವಕವಾಗಿ ಕೆಲಸ ಮಾಡುವ ದಂಪತಿಗಳಿಗೆ ದೇವರ ಸೃಷ್ಟಿಯ ಬೇಗನೆ ಬರಲಿರುವ ಹೊಸ ಲೋಕದಲ್ಲಿ ಪ್ರೀತಿಯ ಬಂಧದಲ್ಲಿ ಒಟ್ಟಾಗಿ ಕಟ್ಟಲ್ಪಡುವ ನಿರೀಕ್ಷೆಯಿದೆ.