ಪಾಠ 17
ಯೇಸು ಯಾವ ರೀತಿಯ ವ್ಯಕ್ತಿ?
ಯೇಸು ಭೂಮಿಯಲ್ಲಿದ್ದಾಗ ಹೇಳಿದ ಮಾತುಗಳಿಂದ ಮತ್ತು ಮಾಡಿದ ಕೆಲಸಗಳಿಂದ ಆತನ ಗುಣಗಳ ಬಗ್ಗೆ ನಾವು ಕಲಿಯುತ್ತೇವೆ. ಇದರಿಂದ ನಾವು ಆತನಿಗೆ ಮತ್ತು ಆತನ ತಂದೆಯಾದ ಯೆಹೋವನಿಗೆ ಹೆಚ್ಚು ಆಪ್ತರಾಗುತ್ತೇವೆ. ಯೇಸುವಿನಲ್ಲಿರುವ ಕೆಲವು ಒಳ್ಳೇ ಗುಣಗಳು ಯಾವುದು? ಅವುಗಳನ್ನ ನಮ್ಮ ಜೀವನದಲ್ಲಿ ಹೇಗೆ ತೋರಿಸಬಹುದು?
1. ಯೇಸು ಯಾವ ರೀತಿಯಲ್ಲಿ ತನ್ನ ತಂದೆ ಯೆಹೋವನ ತರ ಇದ್ದಾನೆ?
ಯೇಸು ಕೋಟ್ಯಾನುಕೋಟಿ ವರ್ಷ ಸ್ವರ್ಗದಲ್ಲಿ ಇದ್ದನು. ಆ ಸಮಯದಲ್ಲಿ ತನ್ನ ಪ್ರೀತಿಯ ತಂದೆ ಮಾಡುವುದನ್ನೆಲ್ಲ ನೋಡುತ್ತಾ, ಆತನಿಂದ ಕಲಿಯುತ್ತಾ ಇದ್ದನು. ಹಾಗಾಗಿ ಯೇಸುವಿನ ಭಾವನೆ, ಅನಿಸಿಕೆ, ನಡೆದುಕೊಳ್ಳುವ ರೀತಿ ಯೆಹೋವ ದೇವರ ತರಾನೇ ಇದೆ. (ಯೋಹಾನ 5:19 ಓದಿ.) ಯೇಸು ಯೆಹೋವ ದೇವರನ್ನ ಎಷ್ಟು ಚೆನ್ನಾಗಿ ಅನುಕರಿಸಿದನು ಅಂದ್ರೆ “ನನ್ನನ್ನ ನೋಡಿದವನು ನನ್ನ ಅಪ್ಪನನ್ನೂ ನೋಡಿದ್ದಾನೆ” ಅಂತ ಹೇಳಿದನು. (ಯೋಹಾನ 14:9) ನೀವು ಯೇಸುವಿನ ಗುಣಗಳ ಬಗ್ಗೆ ಎಷ್ಟು ಹೆಚ್ಚು ಕಲಿಯುತ್ತೀರೋ ಅಷ್ಟು ಹೆಚ್ಚು ಯೆಹೋವ ದೇವರ ಬಗ್ಗೆ ಕಲಿಯುತ್ತೀರ. ಉದಾಹರಣೆಗೆ, ಯೇಸು ಜನರಿಗೆ ತೋರಿಸಿದ ಪ್ರೀತಿಯಿಂದ ಯೆಹೋವ ದೇವರು ನಿಮ್ಮನ್ನ ಎಷ್ಟು ಪ್ರೀತಿಸುತ್ತಾನೆ ಅಂತ ಕಲಿಯಬಹುದು.
2. ಯೇಸು ಯೆಹೋವನನ್ನು ಪ್ರೀತಿಸ್ತಾನೆ ಅಂತ ಹೇಗೆ ತೋರಿಸಿ ಕೊಟ್ಟಿದ್ದಾನೆ?
“ನಾನು ನನ್ನ ಅಪ್ಪನನ್ನ ಎಷ್ಟು ಪ್ರೀತಿಸ್ತೀನಿ ಅಂತ ಲೋಕ ತಿಳ್ಕೊಳ್ಳೋಕೆ ಅಪ್ಪ ನನಗೆ ಹೇಳಿದ ತರಾನೇ ಮಾಡ್ತಾ ಇದ್ದೀನಿ” ಅಂತ ಯೇಸು ಹೇಳಿದನು. (ಯೋಹಾನ 14:31) ಯೇಸು ಭೂಮಿಯಲ್ಲಿದ್ದಾಗ ಎಷ್ಟೇ ಕಷ್ಟ ಆದ್ರೂ ತನ್ನ ತಂದೆಯ ಮಾತನ್ನ ಕೇಳಿದನು. ಹೀಗೆ ತಂದೆ ಮೇಲೆ ಎಷ್ಟು ಪ್ರೀತಿ ಇದೆ ಅಂತ ತೋರಿಸಿಕೊಟ್ಟನು. ಅಷ್ಟೇ ಅಲ್ಲ ಯೇಸು ಯಾವಾಗಲೂ ತನ್ನ ತಂದೆ ಬಗ್ಗೆ ಮಾತಾಡೋಕೆ ಇಷ್ಟಪಟ್ಟನು. ತನ್ನ ತಂದೆ ಜೊತೆ ಸ್ನೇಹ ಬೆಳೆಸಿಕೊಳ್ಳೋಕೆ ಬೇರೆಯವರಿಗೆ ಸಹಾಯ ಮಾಡಿದನು.—ಯೋಹಾನ 14:23.
3. ಯೇಸು ಜನರನ್ನ ಪ್ರೀತಿಸುತ್ತಾನೆ ಅಂತ ಹೇಗೆ ತೋರಿಸಿಕೊಟ್ಟನು?
ಯೇಸುಗೆ ‘ಮನುಷ್ಯರಂದ್ರೆ ಪಂಚಪ್ರಾಣ’ ಅಂತ ಬೈಬಲ್ ಹೇಳುತ್ತೆ. (ಜ್ಞಾನೋಕ್ತಿ 8:31) ಜನರನ್ನ ಪ್ರೋತ್ಸಾಹಿಸುವ ಮೂಲಕ ಮತ್ತು ಅವರಿಗೆ ಸಹಾಯ ಮಾಡೋ ಮೂಲಕ ಅವರನ್ನ ಪ್ರೀತಿಸುತ್ತಾನೆ ಅಂತ ತೋರಿಸಿಕೊಟ್ಟನು. ಅಷ್ಟೇ ಅಲ್ಲ, ಆತನು ಮಾಡಿದ ಅದ್ಭುತಗಳು ಆತನಿಗೆ ಶಕ್ತಿ ಮಾತ್ರ ಅಲ್ಲ ಕನಿಕರ ಕೂಡ ಇದೆ ಅಂತ ತೋರಿಸುತ್ತೆ. (ಮಾರ್ಕ 1:40-42) ಆತನು ಜನರಿಗೆ ಭೇದಭಾವ ಮಾಡಲಿಲ್ಲ ಬದಲಿಗೆ ಅವರೊಂದಿಗೆ ಪ್ರೀತಿಯಿಂದ ನಡೆದುಕೊಂಡನು. ಜನರಿಗೆ ಸಾಂತ್ವನ ಮತ್ತು ನಿರೀಕ್ಷೆಯ ಮಾತುಗಳನ್ನ ಹೇಳಿದನು. ಯೇಸು ಎಲ್ಲಾ ಜನರನ್ನ ಪ್ರೀತಿಸಿದ್ದರಿಂದ ಅವರಿಗಾಗಿ ಕಷ್ಟಪಟ್ಟನು ಮತ್ತು ತನ್ನ ಜೀವವನ್ನೇ ಕೊಟ್ಟನು. ಅದರಲ್ಲೂ ತನ್ನ ಮಾತನ್ನ ಕೇಳಿ ಅದರ ಪ್ರಕಾರ ನಡೆಯುವವರನ್ನ ಇನ್ನೂ ಹೆಚ್ಚು ಪ್ರೀತಿಸುತ್ತಾನೆ.—ಯೋಹಾನ 15:13, 14 ಓದಿ.
ಹೆಚ್ಚನ್ನ ತಿಳಿಯೋಣ
ಯೇಸುವಿನ ಗುಣಗಳ ಬಗ್ಗೆ ಹೆಚ್ಚನ್ನ ಕಲಿಯಿರಿ. ಆತನ ಪ್ರೀತಿ ಮತ್ತು ಉದಾರತೆಯನ್ನ ಹೇಗೆ ಅನುಕರಿಸಬಹುದು ಅಂತಾನೂ ತಿಳಿಯಿರಿ.
4. ಯೇಸು ತನ್ನ ತಂದೆ ಯೆಹೋವನನ್ನು ಪ್ರೀತಿಸುತ್ತಾನೆ
ದೇವರ ಮೇಲಿನ ಪ್ರೀತಿಯನ್ನ ಹೇಗೆ ತೋರಿಸೋದು ಅಂತ ಯೇಸುವಿನ ಮಾದರಿಯಿಂದ ಕಲಿಯಬಹುದು. ಲೂಕ 6:12 ಮತ್ತು ಯೋಹಾನ 15:10; 17:26 ಓದಿ. ಪ್ರತಿಯೊಂದು ವಚನವನ್ನು ಓದಿದ ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಯೇಸು ತರ ನಾವು ದೇವರನ್ನ ಪ್ರೀತಿಸುತ್ತೇವೆ ಅಂತ ಹೇಗೆ ತೋರಿಸಬಹುದು?
5. ಯೇಸು ಅಗತ್ಯದಲ್ಲಿರುವವರಿಗೆ ಸಹಾಯ ಮಾಡುತ್ತಾನೆ
ಯೇಸು ತನ್ನ ಅಗತ್ಯಕ್ಕಿಂತ ಜನರ ಅಗತ್ಯಗಳಿಗೆ ಪ್ರಾಮುಖ್ಯತೆ ಕೊಟ್ಟನು. ಸುಸ್ತಾದಾಗಲೂ ಆತನು ತನ್ನ ಸಮಯ ಮತ್ತು ಶಕ್ತಿಯನ್ನ ಬೇರೆಯವರಿಗೆ ಸಹಾಯಮಾಡಲಿಕ್ಕಾಗಿ ಉಪಯೋಗಿಸಿದನು. ಮಾರ್ಕ 6:30-44 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
6. ಯೇಸು ತುಂಬ ಉದಾರಿ
ಯೇಸು ಹತ್ರ ಹೆಚ್ಚೇನು ಇಲ್ಲದಿದ್ರೂ ಉದಾರತೆ ತೋರಿಸಿದನು. ನಾವು ಸಹ ಅದೇ ತರ ಉದಾರತೆ ತೋರಿಸಬೇಕು ಅಂತ ಹೇಳಿದನು. ಅಪೊಸ್ತಲರ ಕಾರ್ಯ 20:35 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಯೇಸುವಿನ ಮಾತಿನ ಪ್ರಕಾರ ನಾವು ಹೇಗೆ ಖುಷಿಯಾಗಿರಬಹುದು?
ವಿಡಿಯೋ ನೋಡಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ನಮ್ಮ ಹತ್ತಿರ ಹೆಚ್ಚೇನು ಇಲ್ಲದಿದ್ರೂ ನಾವು ಹೇಗೆಲ್ಲಾ ಬೇರೆಯವರಿಗೆ ಕೊಡಬಹುದು?
ನಿಮಗೆ ಗೊತ್ತಿತ್ತಾ?
ನಾವು ಯೇಸುವಿನ ಮೂಲಕ ಯೆಹೋವ ದೇವರಿಗೆ ಪ್ರಾರ್ಥಿಸಬೇಕು ಅಂತ ಬೈಬಲ್ ಕಲಿಸುತ್ತೆ. (ಯೋಹಾನ 16:23, 24 ಓದಿ.) ನಾವು ಹೀಗೆ ಮಾಡುವಾಗ, ಯೆಹೋವ ದೇವರ ಸ್ನೇಹಿತರಾಗಲು ಯೇಸು ಮಾಡಿದ ಎಲ್ಲಾ ಸಹಾಯಕ್ಕಾಗಿ ನಾವು ಕೃತಜ್ಞರಾಗಿದ್ದೇವೆ ಅಂತ ತೋರಿಸ್ತೇವೆ.
ಕೆಲವರು ಹೀಗಂತಾರೆ: “ನಮ್ಮ ಕಷ್ಟಗಳ ಬಗ್ಗೆ ದೇವರಿಗೆ ಒಂಚೂರೂ ಚಿಂತೆ ಇಲ್ಲ.”
ಯೆಹೋವ ದೇವರ ಗುಣಗಳನ್ನೇ ಯೇಸು ತೋರಿಸುತ್ತಿದ್ದನು ಅಂತ ನಾವು ಕಲಿತ್ವಿ. ಹಾಗಾದ್ರೆ ಯೇಸು ನಡೆದುಕೊಂಡ ರೀತಿಯಿಂದ ಯೆಹೋವ ದೇವರ ಬಗ್ಗೆ ಏನು ಕಲಿಯಬಹುದು?
ನಾವೇನು ಕಲಿತ್ವಿ
ಯೆಹೋವ ದೇವರನ್ನ ಮತ್ತು ಜನರನ್ನ ಯೇಸು ಪ್ರೀತಿಸುತ್ತಾನೆ. ಯೇಸು ತನ್ನ ತಂದೆ ತರಾನೇ ಇದ್ದಾನೆ, ಹಾಗಾಗಿ ಆತನ ಬಗ್ಗೆ ಎಷ್ಟು ಹೆಚ್ಚು ಕಲಿಯುತ್ತೇವೊ ಅಷ್ಟು ಹೆಚ್ಚು ಯೆಹೋವ ದೇವರ ಬಗ್ಗೆ ಕಲಿಯಬಹುದು.
ನೆನಪಿದೆಯಾ
ನಾವು ಯೇಸು ತರ ಯೆಹೋವನನ್ನು ಹೇಗೆ ಪ್ರೀತಿಸಬಹುದು?
ನಾವು ಯೇಸು ತರ ಜನರನ್ನ ಹೇಗೆ ಪ್ರೀತಿಸಬಹುದು?
ಯೇಸುವಿನ ಗುಣಗಳಲ್ಲಿ ನಿಮಗೆ ಯಾವುದು ತುಂಬ ಇಷ್ಟ ಆಯ್ತು?
ಇದನ್ನೂ ನೋಡಿ
ಯೇಸುವಿನಿಂದ ನಾವು ಕಲಿಯಬಹುದಾದ ಕೆಲವು ಗುಣಗಳ ಬಗ್ಗೆ ತಿಳಿಯಿರಿ.
ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುವುದು ಯಾಕೆ ಪ್ರಾಮುಖ್ಯ ಅಂತ ತಿಳಿಯಿರಿ.
“ಯೇಸುವಿನ ಹೆಸರಿನಲ್ಲಿ ಯಾಕೆ ಪ್ರಾರ್ಥಿಸಬೇಕು?” (ಕಾವಲಿನಬುರುಜು ಲೇಖನ)
ಯೇಸು ನೋಡೋಕೆ ಹೇಗಿದ್ದನು ಅಂತ ಬೈಬಲ್ ತಿಳಿಸುತ್ತಾ?
ಯೇಸು ಸ್ತ್ರೀಯರೊಂದಿಗೆ ನಡೆದುಕೊಂಡ ರೀತಿಯಿಂದ ನಾವು ಏನು ಕಲಿಯಬಹುದು?
“ಎಲ್ಲರೂ ಸ್ತ್ರೀಯರನ್ನ ಗೌರವಿಸಬೇಕು ಅಂತ ದೇವರು ಬಯಸ್ತಾನೆ” (ಕಾವಲಿನಬುರುಜು ಲೇಖನ)