ನೀವು ಕ್ಷಮಿಸುವವರಾಗಿದ್ದೀರೊ?
ಬಿಲ್ ಮತ್ತು ಅವನ 16 ವರ್ಷ ವಯಸ್ಸಿನ ಮಗಳು, ಲೀಸಾಗೆ, ಹೊಂದಿಕೆಯುಳ್ಳವರಾಗಿ ಮುಂದುವರಿಯುವುದು ಕಠಿನವಾಗಿತ್ತು. ಅವರ ನಡುವಿನ ಅಲ್ಪ ವ್ಯತ್ಯಾಸಗಳು ಅನೇಕ ವೇಳೆ ಕೂಗಾಟದ ಪಂದ್ಯಗಳಾಗಿ ಬೆಳೆಯುತ್ತಿದ್ದವು. ಕೊನೆಯದಾಗಿ, ಉದ್ವೇಗವು ಲೀಸಾ ಮನೆಯನ್ನು ಬಿಟ್ಟು ಹೋಗುವಂತೆ ಹೇಳಲ್ಪಡುವ ಮಟ್ಟಿಗೆ ಹೆಚ್ಚಾಯಿತು.a
ಸ್ವಲ್ಪ ಸಮಯಾನಂತರ, ತಾನು ತಪ್ಪು ಮಾಡಿದ್ದೇನೆಂದು ಲೀಸಾ ಗ್ರಹಿಸಿದಳು ಮತ್ತು ಆಕೆಯ ತಂದೆಯ ಕ್ಷಮೆಯನ್ನು ಯಾಚಿಸಿದಳು. ಆದರೆ ಲೀಸಾಳ ಹಿಂದಿನ ತಪ್ಪುಗಳನ್ನು ಮನ್ನಿಸುವ ಬದಲಿಗೆ, ಆಕೆಯ ಉದ್ರೇಕಗೊಂಡ ತಂದೆಯು ಶಾಂತಿಯನ್ನು ಸ್ಥಾಪಿಸುವ ಆಕೆಯ ಪ್ರಯತ್ನಗಳನ್ನು ತಿರಸ್ಕರಿಸಿದನು. ಊಹಿಸಿರಿ! ತನ್ನ ಸ್ವಂತ ಮಗಳಿಗೆ ಕರುಣೆಯನ್ನು ತೋರಲು ಅವನು ಸಿದ್ಧನಾಗಿರಲಿಲ್ಲ!
ಶತಮಾನಗಳ ಹಿಂದೆ ಒಬ್ಬ ನಿರ್ದೋಷಿ ಮನುಷ್ಯನು ತಾನು ಮಾಡದ ಅಪರಾಧಕ್ಕಾಗಿ ಸಾಯುವಂತೆ ಖಂಡಿಸಲ್ಪಟ್ಟನು. ಸಾಕ್ಷಿಗಳು ಸುಳ್ಳು ಪ್ರಮಾಣವನ್ನು ನೀಡಿದರು, ಮತ್ತು ರಾಜಕೀಯ ಅಧಿಕಾರಿಗಳು ತಮ್ಮ ತಲೆಗಳನ್ನು ತಿರುಗಿಸಿ, ನ್ಯಾಯವನ್ನು ನಿರ್ವಹಿಸಲು ಉದ್ದೇಶಪೂರ್ವಕವಾಗಿ ತಿರಸ್ಕರಿಸಿದರು. ಆ ನಿರ್ದೋಷಿ ಮನುಷ್ಯನು ಯೇಸು ಕ್ರಿಸ್ತನಾಗಿದ್ದನು. ಅವನು ಸಾಯುವ ಕೊಂಚ ಸಮಯದ ಮೊದಲು, ಅವನು ಪ್ರಾರ್ಥನಾಪೂರ್ವಕವಾಗಿ ದೇವರನ್ನು ಕೇಳಿದ್ದು: “ತಂದೆಯೇ, ಅವರಿಗೆ ಕ್ಷಮಿಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು.”—ಲೂಕ 23:34.
ಯೇಸು ಮುಕ್ತವಾಗಿ ತನ್ನ ಹೃದಯದಿಂದ ಕ್ಷಮಿಸಿದನು, ಮತ್ತು ಈ ವಿಷಯದಲ್ಲಿ ಅವನ ಹಿಂಬಾಲಕರು ಅವನನ್ನು ಅನುಕರಿಸುವಂತೆ ಪ್ರೇರೇಪಿಸಲ್ಪಟ್ಟರು. (ಎಫೆಸ 4:32) ಹಾಗಿದ್ದರೂ, ಬಿಲ್ನಂತೆ, ಅನೇಕರು ಕ್ಷಮಿಸಲು ನಿರ್ದಯತೆಯಿಂದ ಮನಸ್ಸಿಲ್ಲದವರಾಗಿರುತ್ತಾರೆ. ಈ ಸಂಬಂಧದಲ್ಲಿ ನೀವು ಯಾವ ಅರ್ಹತೆಗಳನ್ನು ಹೊಂದಿದ್ದೀರಿ? ಇತರರು ನಿಮ್ಮ ವಿರುದ್ಧ ಪಾಪ ಮಾಡುವಾಗ ಅವರನ್ನು ನೀವು ಕ್ಷಮಿಸಲು ಸಿದ್ಧರಾಗಿದ್ದೀರೊ? ಮತ್ತು ಗಂಭೀರ ಪಾಪಗಳ ಕುರಿತೇನು? ಇವು ಕೂಡ ಕ್ಷಮಿಸಲ್ಪಡಬೇಕೊ?
ಕ್ಷಮಾಪಣೆ—ಒಂದು ಸವಾಲು
ಕ್ಷಮಾಪಣೆಯನ್ನು ನೀಡುವುದು ಯಾವಾಗಲೂ ಸುಲಭವಲ್ಲ. ಮತ್ತು ಈ ಕಠಿನ ಸಮಯಗಳಲ್ಲಿ, ಮಾನವ ಸಂಬಂಧಗಳು ಹಿಂದೆಂದೂ ಇರದಷ್ಟು ಹೆಚ್ಚು ಸಮಸ್ಯಾತ್ಮಕವಾಗಿವೆ. ಕುಟುಂಬ ಜೀವಿತವು ವಿಶೇಷವಾಗಿ ಒತ್ತಡಗಳಿಂದ ಮತ್ತು ಬಿಗುಪುಗಳಿಂದ ತುಂಬಿದೆ. “ಕಡೇ ದಿವಸಗಳಲ್ಲಿ” ಇಂತಹ ಪರಿಸ್ಥಿತಿಗಳು ಇರುವವೆಂದು ಕ್ರೈಸ್ತ ಅಪೊಸ್ತಲ ಪೌಲನು ಬಹಳ ಹಿಂದೆಯೇ ಹೇಳಿದನು. ಅವನಂದದ್ದು: “ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ . . . ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ . . . ಆಗಿರುವರು.”—2 ತಿಮೊಥೆಯ 3:1-4.
ಹಾಗಾದರೆ ಇತರರನ್ನು ಕ್ಷಮಿಸಲಿರುವ ನಮ್ಮ ಸಾಮರ್ಥ್ಯವನ್ನು ಪರೀಕ್ಷಿಸುವ ಒತ್ತಡಗಳನ್ನು ನಾವೆಲ್ಲರೂ ಅನಿವಾರ್ಯವಾಗಿ ಎದುರಿಸುತ್ತೇವೆ. ಇನ್ನೂ ಹೆಚ್ಚಾಗಿ, ನಾವು ಆಂತರಿಕ ಶಕ್ತಿಗಳ ವಿರುದ್ಧ ಸಹ ಹೋರಾಡುತ್ತೇವೆ. ಪೌಲನು ಪ್ರಲಾಪಿಸಿದ್ದು: “ನಾನು ಮೆಚ್ಚುವ ಒಳ್ಳೇ ಕಾರ್ಯವನ್ನು ಮಾಡದೆ ಮೆಚ್ಚದಿರುವ ಕೆಟ್ಟ ಕಾರ್ಯವನ್ನೇ ಮಾಡುವವನಾಗಿದ್ದೇನೆ. ಮಾಡಬಾರದೆನ್ನುವ ಕೆಲಸವನ್ನು ನಾನು ಮಾಡಿದರೆ ಅದನ್ನು ಮಾಡಿದವನು ಇನ್ನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡಿತು.” (ರೋಮಾಪುರ 7:19, 20) ಫಲಸ್ವರೂಪವಾಗಿ, ನಮ್ಮಲ್ಲಿ ಅನೇಕರು ನಾವು ಬಯಸುವಷ್ಟು ಕ್ಷಮಿಸುವವರಾಗಿರುವುದಿಲ್ಲ. ಎಷ್ಟೆಂದರೂ, ಪಿತ್ರಾರ್ಜಿತವಾಗಿ ಪಡೆದ ಅಸಂಪೂರ್ಣತೆ ಮತ್ತು ಪಾಪವು ನಮ್ಮೆಲ್ಲರ ಮೇಲೆ ಶಕ್ತಿಶಾಲಿಯಾದ ಪ್ರಭಾವವನ್ನು ಬೀರುತ್ತಾ, ಕೆಲವೊಮ್ಮೆ ಜೊತೆ ಮಾನವರಿಗಾಗಿ ಇರುವ ಕನಿಕರದಿಂದ ನಮ್ಮನ್ನು ವಂಚಿತರನ್ನಾಗಿ ಮಾಡುತ್ತದೆ.
ಸಣ್ಣ ತಪ್ಪಿಗಾಗಿ ಇನ್ನೊಬ್ಬರನ್ನು ಕ್ಷಮಿಸುವಂತೆ ಉತ್ತೇಜಿಸಲ್ಪಟ್ಟಾಗ, ಒಬ್ಬಾಕೆ ಸ್ತ್ರೀಯು ಹೀಗೆ ಪ್ರತಿಕ್ರಿಯಿಸಿದಳು: “ಕ್ಷಮಿಸಲು ತೆಗೆದುಕೊಳ್ಳಲ್ಪಡುವ ಪ್ರಯತ್ನದಷ್ಟು ಬೆಲೆ ಯಾವನಿಗೂ ಇಲ್ಲ.” ತೋರ್ಕೆಯಲ್ಲಿ, ಅಂತಹ ಒಂದು ಹೇಳಿಕೆಯು ನೀರಸವಾಗಿ, ಗಡುಸಾಗಿ, ನಿಷ್ಠುರವಾಗಿಯೂ ತೋರಬಹುದು. ಆದರೆ ಆಳವಾಗಿ ನೋಡುವುದಾದರೆ, ಸ್ವಾರ್ಥವಾಗಿರುವ, ಚಿಂತಿಸದ, ಮತ್ತು ದ್ವೇಷಿಸುವ ಲೋಕವೆಂದು ವೀಕ್ಷಿಸುವ ಒಂದು ಲೋಕವನ್ನು ಜನರು ಎದುರಿಸುವಾಗ ಅನೇಕರಿಗೆ ಅನಿಸುವ ಆಶಾಭಂಗವನ್ನು ಅದು ಪ್ರಕಟಿಸುತ್ತದೆ. ಒಬ್ಬ ಮನುಷ್ಯನು ಅಂದದ್ದು: “ಜನರನ್ನು ನೀವು ಕ್ಷಮಿಸುವಾಗ ಅವರು ನಿಮ್ಮಿಂದ ಸ್ವಪ್ರಯೇಜನ ಪಡೆದುಕೊಳ್ಳುತ್ತಾರೆ. ಅದು ಕಾಲೊರಸನ್ನು ಮೆಟ್ಟುವಂತಿದೆ.”
ಹಾಗಾದರೆ, ಈ ಕಡೇ ದಿವಸಗಳಲ್ಲಿ ಕ್ಷಮಾಪಣೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು ಕಠಿನವಾಗಿದೆ ಎಂಬ ವಿಷಯದಲ್ಲಿ ಆಶ್ಚರ್ಯವೇನೂ ಇರುವುದಿಲ್ಲ. ಆದರೂ, ದಯಾಪರವಾಗಿ ಕ್ಷಮಿಸುವಂತೆ ಬೈಬಲ್ ನಮ್ಮನ್ನು ಉತ್ತೇಜಿಸುತ್ತದೆ. (ಹೋಲಿಸಿ 2 ಕೊರಿಂಥ 2:7.) ನಾವು ಕ್ಷಮಿಸುವವರಾಗಿರಬೇಕು ಏಕೆ?
[ಅಧ್ಯಯನ ಪ್ರಶ್ನೆಗಳು]
a ಹೆಸರುಗಳು ಬದಲಾಯಿಸಲ್ಪಟ್ಟಿವೆ.