ವಾಗ್ದಾನ್ ದೇಶದಿಂದ ದೃಶ್ಯಗಳು
“ಅಯ್ಯೋ! ನಿನಗೆ, ಖೊರಾಜಿನ್!—ಯಾಕೆ?
ದೇವರು ನಿಮಗೆ ಅಯ್ಯೋ ಎಂದು ದುರ್ಗತಿ ಹೇಳಲು ನೀವು ಖಂಡಿತವಾಗಿಯೂ ಬಯಸಲಾರಿರಿ ಅಲ್ಲವೇ? ಹಾಗಾದರೆ, ದೇವರ ಮಾಗನೂ ನ್ಯಾಯಾಧಿಪತಿಯೂ ಆದಾತನು ಗಲಿಲಾಯದ ಮೂರು ನಗರಗಳ ಯೆಹೂದ್ಯರಿಗೆ ಹೀಗಾದಾಗ ಅವರಿಗೆ ಹೇಗಾಗಿರಬಹುದೆಂಬದನ್ನು ಸ್ವಲ್ಪ ಯೋಚಿಸಿ:
“ಅಯ್ಯೋ ನಿನಗೆ, ಖೊರಾಜಿನ್! ಅಯ್ಯೋ ನಿನಗೆ, ಬೆತ್ಸಾಯಿದ! ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳ ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣೀತಟ್ಟು ಹೊದ್ದಿಕೊಂಡು ಬೂದಿಯಲ್ಲಿ [ಕೂತುಕೊಂಡು] ಪಶ್ಚಾತ್ತಾಪ ಪಡುತ್ತಿದ್ದರು. ಆದರೆ ನ್ಯಾಯ ವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ತೂರ್ ಸೀದೋನ್ ಪಟ್ಟಣಗಳ ಗತಿಯು ಮೇಲಾಗಿರುವುದು. ಮತ್ತು ನೀನು ಕಪೆರ್ನೌಮೇ,. . . . ಪಾತಾಳಕ್ಕೆ ನೀನು ಇಳಿಯುವಿ.”—ಮತ್ತಾಯ 11:21-23.
ಮೇಲಿನ ದೃಶ್ಯವು ಆ ನಗರಗಳಲ್ಲಿ ಒಂದಕ್ಕೆ—ಖೊರಾಜಿನ್ ಗೆ ಬೆಳಕು ಬೀರುತ್ತದೆ. ಈ ಚಿತ್ರವು ಯೆಹೋವನ ಸಾಕ್ಷಿಗಳ 1989ರ ಕ್ಯಾಲೆಂಡರ್ ನ ಜುಲೇ/ಅಗೋಸ್ತ್ ನಲ್ಲಿಯೂ ಇದೆ. ಯೆಹೋವನ ಸಾಕ್ಷಿಗಳ ಅಗೋಸ್ತ್ ಬೈಬಲ್ ವಾಚನದಲ್ಲಿ ಮತ್ತಾಯ 11:21-23 ರ ಯೇಸುವಿನ ಮಾತುಗಳು ಆಸಕ್ತಭರಿತವಾಗಿಯೇ ಇವೆ. ಹಾಗಾದರೆ ಖೊರಾಜಿನ್ ನ ಕುರಿತು ನಾವೇನನ್ನು ತಿಳಿಯಬಹುದು?
ಒಳ್ಳೇದು, ಪ್ರಾಚೀನ ಖೊರಾಜಿನ್ ಎಲ್ಲಿದೆಯೆಂದು ಗಮನಿಸಿರಿ. ಈ ಚಿತ್ರದ ಮುನ್ನೆಲೆಯಲ್ಲಿ ನೀವದರ ಅವಶೇಷಗಳನ್ನು ನೋಡಬಲ್ಲಿರಿ. ಅದರ ನಂತರ ಗಲಿಲಾಯ ಸಮುದ್ರದ ಉತ್ತರ ಕಿನಾರೆಯಲ್ಲಿರುವ ಮರಗಳನ್ನು ನೋಡಿರಿ. ಅಲ್ಲಿ ತಾನೇ ಕಪೆರ್ನೌಮ್ ಎರಡು ಮೈಲು ದೂರದಲ್ಲಿತ್ತು. ಈ ವೈಮಾನಿಕ ಚಿತ್ರದ ವಿವೇಚನೆಯು ಒಂದು ಸಮತೂಕದ ಪ್ರಸ್ತಭೂಮಿಯಾಗಿ ಅದನ್ನು ಸೂಚಿಸಬಹುದಾದರೂ, ನೈಜತೆಯಲ್ಲಿ ಖೊರಾಜಿನ್ ಬೆಟ್ಟಗಳಲ್ಲಿದ್ದು, ಕಿನಾರೆಗಿಂತ 885 ಅಡಿಗಳಷ್ಟು ಎತ್ತರದಲ್ಲಿದೆ.
ಕಪೆರ್ನೌಮಿನಿಂದ ಅಷ್ಟೇ ದೂರದ ಕರಾವಳಿಯಲ್ಲಿ ಬೆತ್ಸಾಯಿದ ಇತ್ತೆಂದು ತಿಳಿಯಲು ಇದು ನೆರವಾಗುತ್ತದೆ. ಹೀಗೆ, ಈ ಮೂರು ಪಟ್ಟಣಗಳನ್ನು ನಿಂದಿಸುವಲ್ಲಿ ಯೇಸುವು ಗಲಿಲಾಯದಲ್ಲಿ ತನ್ನ ಚಟುವಟಿಕೆಯ ಕೇಂದ್ರದ ಸುತ್ತಲಿನ ಒಂದು ಚಿಕ್ಕ ಕ್ಷೇತ್ರವನ್ನು ಕೇಂದ್ರೀಕರಿಸಿದ್ದಾನೆ. (ಮತ್ತಾಯ 4:13; ಮಾರ್ಕ 2:1; ಲೂಕ 4:31) ಯೇಸು ಅವರ ಮೇಲೆ ದುರ್ಗತಿಯನ್ನು ಯಾಕೆ ಉಚ್ಛರಿಸಿದನು?
ಯೇಸು ಆ ಪ್ರದೇಶದಲ್ಲಿ ತನ್ನ ಅಪೊಸ್ತಲರೊಂದಿಗೆ ಬಹಳಷ್ಟು ಸಮಯವನ್ನು ವ್ಯಯಿಸಿದ್ದನು ಮತ್ತು ಅಲ್ಲಿ ಅನೇಕ ಮಹತ್ಕಾರ್ಯಗಳನ್ನು ನಡಿಸಿದ್ದನು. ಬೇತ್ಸಾಯಿದದ ಬಳಿ ಅವನು 5000ಕ್ಕಿಂತಲೂ ಹೆಚ್ಚು ಮಂದಿಗೆ ಅದ್ಭುತಕರವಾಗಿ ಉಣಿಸಿದ್ದನು ಮತ್ತು ಕುರುಡನೊಬ್ಬನಿಗೆ ದೃಷ್ಟಿಯನ್ನು ಪುನಃ ಕೊಟ್ಟನು. (ಮಾರ್ಕ 8:22-25; ಲೂಕ 9:10-17) ಕಪೆರ್ನೌಮಲ್ಲಿ ಮತ್ತು ಪರಿಸರದಲ್ಲಿ ನಡಿಸಿದ ಅವನ ಮಹತ್ಕಾರ್ಯಗಳಲ್ಲಿ ದೂರದ ಒಬ್ಬ ರೋಗಸ್ಥ ಬಾಲಕನನ್ನು ಗುಣಪಡಿಸಿದ್ದು, ದೆವ್ವ ಪೀಡಿತ ಮನುಷ್ಯನೊಬ್ಬನನ್ನು ವಾಸಿಮಾಡಿದ್ದು, ಪಾರ್ಶ್ವವಾಯು ರೋಗಿಯನ್ನು ನಡೆದಾಡುವಂತೆ ಮಾಡಿದ್ದು ಮತ್ತು ಸಭಾಮಂದಿರ ಅಧಿಕಾರಿಯ ಮನಳೋಬ್ಬನನ್ನು ಪುನರುತ್ಥಾನಗೊಳಿಸಿದ್ದು ಸೇರಿದೆ. (ಮಾರ್ಕ 2:1-12; 5:21-43; ಲೂಕ 4:31-37; ಯೋಹಾನ 4:46-54) ಖೊರಾಜಿನ್ ನಲ್ಲಿ ಯಾವ “ಮಹತ್ಕಾರ್ಯಗಳನ್ನು” ನಡಿಸಿದ್ದನೆಂದು ಬೈಬಲ್ ನಿರ್ಧಿಷ್ಟವಾಗಿ ಜೋಡಿಸಿ ತಿಳಿಸಿದ್ದರೂ, ಅಲ್ಲಿ ಯಾ ಅದರ ಅಕ್ಕಪಕ್ಕಗಳಲ್ಲಿ ಯೇಸು ಮಹತ್ಕಾರ್ಯಗಳನ್ನು ನಡಿಸಿದ್ದನೆಂದು ಮತ್ತಾಯ 11:21 ಸೂಚಿಸುತ್ತದೆ. ಆದರೂ, ಜನರು ಪಶ್ಚಾತ್ತಾಪ ಪಡಲಿಲ್ಲ ಮತ್ತು ದೇವರ ಬೆಂಬಲವಿರುವ ಮೆಸ್ಸೀಯನೆಂದು ಅವನ ಮೇಲೆ ನಂಬಿಕೆಯಿಡಲಿಲ್ಲ.
ಇಲ್ಲಿ ಕೊಟ್ಟಿರುವ ದೃಶ್ಯಗಳಲ್ಲಿ ಯೇಸುವು ಅಂತಹ ಕಾರ್ಯಗಳನ್ನು ನಡಿಸಿದ್ದನ್ನು ನೋಡಿ, “ಖೊರಾಜಿನ್ ನ ಜನರು ಅಷ್ಟೊಂದು ಪ್ರತಿವರ್ತನಾರಹಿತರಾಗಿರಲು ಹೇಗೆ ಸಾಧ್ಯ?” ಎಂದು ನಾವು ಕೇಳಬಹುದು. ಸಾ.ಶ. ಮೂರನೇ ಶತಕದ ತಾರೀಕಿರುವ ಅವಶೇಷಗಳಲ್ಲಿ ಭೂಅಗಿತ ಶಾಸ್ತ್ರಜ್ನರು ಹೊರತೆಗೆದ ಕಪ್ಪು ಅಗ್ನಿಶಿಲೆಗಳಲ್ಲಿ ಪ್ರಾಯಶಃ ನಮಗೆ ಒಂದು ಸುಳಿವು ದೊರಕಬಹುದು. ಈ ಅವಶೇಷಗಳಲ್ಲಿ ನಗರಮಧ್ಯದ ಒಂದು ಸಭಾಮಂದಿರ ಮತ್ತು ಸನ್ನಿಹದಲ್ಲಿದ್ದ ವಸತಿಪ್ರದೇಶಗಳಿವೆ. ಸಭಾಮಂದಿರದ ಕೆಲವು ಕಲ್ಲುಗಳಲ್ಲಿ ಅಸಾಮಾನ್ಯ ಕೆತ್ತನೆಯ ಕೆಲಸವಿದೆ. ಯಾವುದರದ್ದು? ಗ್ರೀಕ್ ಪುರಾಣ ಶಾಸ್ತ್ರದಲ್ಲಿರುವ ಆಕೃತಿಗಳು, ಹಾವುಗೂದಲಿನ ಸ್ತ್ರೀ ರಾಕ್ಷಸಿಯೊಬ್ಬಳು (ಮಿಡ್ಯೂಸ), ಮತ್ತು ಅರ್ಧ ಕುದುರೆ ಗಳಂತವುಗಳೂ ಇವೆ. ಅಂತಹ ವಿಗ್ರಹಾರಾಧಕ ಶಿಲ್ಪಕಲೆಯನ್ನು ಯೂದಾಯ ಪಂಥ ಬಲವಾಗಿ ವಿರೋಧಿಸುವರನಂದ, ಅವರ ಸಭಾಮಂದಿರಗಳಲ್ಲಿ ಖೊರಾಜಿನ್ ನ ಯೆಹೂದಿ ಮುಖಂಡರು ಯಾಕೆ ಇದಕ್ಕೆ ಅನುಮತಿಸುತ್ತಿದ್ದರು?
ಒಂದು ನಿರೂಪಣೆ ಏನೆಂದರೆ “ಆ ಸ್ಥಳದಲ್ಲಿ ಬಹಳಷ್ಟು ಸ್ವತಂತ್ರ ಮನೋಭಾವವು ಸಾಂಪ್ರದಾಯಿಕವಾಗಿದ್ದಿರಬಹುದು.” ಇದರಿಂದ ನಗರದಲ್ಲಿ ಉತ್ತಮ ಪ್ರತಿವರ್ತನೆ ಬರಬಹುದೆಂದು ನಿರೀಕ್ಷಿಸಲು ಯೇಸುವಿಗೆ ಕಾರಣವನ್ನಿತ್ತಿರಬೇಕು.a ಆದರೆ ಯೇಸುವಿನ ದಿನಗಳಲ್ಲಿದ್ದ ಮನೋಭಾವವನ್ನು ಸಭಾಮಂದಿರದ ಅಲಂಕಾರ ಪಟ್ಟಿಗಳೂ ಏನಾದರೂ ಸೂಚಿಸುವುದಾದರೆ, “ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ” ಆರಾಧಿಸುವ ವಿಷಯವಾಗಿ ಖೊರಾಜಿನ್ ನ ಹೆಚ್ಚಿನ ಜನರು ವಿಶಿಷ್ಟವಾಗಿ ಚಿಂತಿಸಿಲ್ಲವೆಂದು ವ್ಯಕ್ತವಾಗುತ್ತದೆ. (ಯೋಹಾನ 4:23) ಅದ್ಭುತ ನಡಿಸಿದ ಮೆಸ್ಸೀಯವನ್ನು ಅವರು ಸ್ವೀಕರಿಸಿದ್ದೇ ಇದ್ದ ಮೂಲಕ ಅವರಿದನ್ನು ತೋರಿಸಿದರು.
ಯೇಸು 70 ಶಿಷ್ಯರನ್ನು ಕಳುಹಿಸಿದಾಗ, ಅವನು ಪುನಃ ಖೊರಾಜಿನ್, ಬೆತ್ಸಾಯಿದ ಮತ್ತು ಕಪೆರ್ನೌಮ್ನ ಅಪ್ರತಿವರ್ತನೆಯನ್ನು ಒಳಗೂಡಿಸಿ ಅತಿಶಯೋಕ್ತಿಯನ್ನು ಉಪಯೋಗಿಸಿದನು. ಖೊರಾಜಿನ್ನ ಯೇಸುವಿನ ಸಹ ಗಲಿಲಾಯದವರು ಅವನ ಮಹತ್ಕಾರ್ಯಗಳ ಪರಿಚಯವಿದ್ದಾಗ್ಯೂ ಮೆಚ್ಚಿಕೆಯ ಪ್ರತಿಕ್ರಿಯೆ ತೋರಿಸದಿದ್ದರೆ, ಬೇರೆ ಕೆಲವು ನಗರಗಳಲ್ಲಿ ಶಿಷ್ಯರು ಸಾರಿದಾಗ ಒಂದುವೇಳೆ ಅಲ್ಲಿನ ನಿವಾಸಿಗಳು ಕೇಳದೇ ಹೋದರೆ ಅವರು ಅಚ್ಚರಿಗೊಳ್ಳಬೇಕಾಗಿಲ್ಲ.—ಲೂಕ 10:10-15.
ಖೊರಾಜಿನ್ನ ನಿರ್ಜೀವ ಕಪ್ಪು ಅವಶೇಷಗಳನ್ನು ನಾವು ಪರಿಶೀಲಿಸಿದಾಗ, ಯೇಸುವಿನ “ಅಯ್ಯೋ (ದುರ್ಗತಿ) ಎಂಬದರಲ್ಲಿರುವ ಎಚ್ಚರಿಕೆಯನ್ನು ಹೃದಯಕ್ಕೆ ತಕ್ಕೊಳಬೇಕಾಗಿದೆ. ದೇವಜನರಿಂದ ನಡಿಸಲ್ಪಡುವ ದೇವರ ಕೆಲಸಗಳಿಗೆ ಪ್ರತಿಕ್ರಿಯಿಸಿ, ಪಶ್ಚಾತ್ತಾಪಪಡಲು ತಪ್ಪಿದರೆ, ಅದು ಅಧೋಪತನಕ್ಕೆ ಮತ್ತು ಭಗ್ನ ಭವಿಷ್ಯತ್ತಿಗೆ ನಡಿಸಬಲ್ಲದು. (w89 7/1)
[ಅಧ್ಯಯನ ಪ್ರಶ್ನೆಗಳು]
a ದಿ ವರ್ಲ್ಡ್ ಆಫ್ ಬೈಬಲ್, ಸಂಪುಟ 5, ಪುಟ 44, ಎಡ್ಯುಕೇಶನಲ್ ಹೆರಿಟೆಜ್, ಇನ್ಕೊ; ನ್ಯೂ ಯೋರ್ಕ್, 1959, ರವರಿಂದ ಪ್ರಕಾಶಿತವಾದದ್ದು.
[Map on page 16]
(For fully formatted text, see publication)
ಖೊರಾಜಿನ್
ಬೇತ್ಸಾಯಿದ
ಕಪೆರ್ನೌಮ್
ಗಲಿಲಾಯ ಸಮುದ್ರ
ತಿಬೇರಿಯಸ್
[ಕೃಪೆ]
Pictorial Archive (Near Eastern History) Est. and Survey of Israel
[ಪುಟ 16 ರಲ್ಲಿರುವ ಚಿತ್ರ ಕೃಪೆ]
[ಪುಟ 16 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.