ಬೈಬಲಿನಲ್ಲಿರುವ ರತ್ನಗಳು | ಲೂಕ 12-13
“ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರು”
ಯಾವ ವಿಷಯದ ಬಗ್ಗೆ ಮಾತಾಡುತ್ತಾ ಯೇಸು ಲೂಕ 12:6, 7ರಲ್ಲಿರುವ ಮಾತನ್ನು ಹೇಳಿದನು? 4ನೇ ವಚನದಲ್ಲಿ ಯೇಸು ತನ್ನ ಹಿಂಬಾಲಕರಿಗೆ, ಅವರನ್ನು ವಿರೋಧಿಸುವವರನ್ನು ಅಥವಾ ಅವರನ್ನು ಕೊಲ್ಲಬಹುದಾದ ವ್ಯಕ್ತಿಗಳನ್ನು ನೋಡಿ ಹೆದರಬಾರದು ಎಂದು ಹೇಳಿದನು. ಯೇಸು ತನ್ನ ಶಿಷ್ಯರು ಎದುರಿಸಲಿದ್ದ ವಿರೋಧಕ್ಕೆ ಅವರನ್ನು ಸಿದ್ಧಪಡಿಸುತ್ತಿದ್ದನು. ಯೆಹೋವನು ತನ್ನ ಸೇವಕರಲ್ಲಿ ಒಬ್ಬೊಬ್ಬರನ್ನೂ ಅಮೂಲ್ಯವಾಗಿ ನೋಡುತ್ತಾನೆ ಮತ್ತು ಅವರಿಗೆ ಶಾಶ್ವತ ಹಾನಿಯಾಗುವಂತೆ ಬಿಡುವುದಿಲ್ಲ ಎಂಬ ಆಶ್ವಾಸನೆ ಕೊಟ್ಟನು.
ಹಿಂಸೆ ಅನುಭವಿಸುತ್ತಿರುವವರ ಮೇಲೆ ಯೆಹೋವನಿಗಿರುವ ಕಾಳಜಿಯನ್ನು ನಾವು ಹೇಗೆ ಅನುಕರಿಸಬಹುದು?
ತಮ್ಮ ನಂಬಿಕೆಯ ಕಾರಣದಿಂದಾಗಿ ಸೆರೆಮನೆಯಲ್ಲಿರುವ ಯೆಹೋವನ ಸಾಕ್ಷಿಗಳ ಬಗ್ಗೆ ಇತ್ತೀಚಿನ ಮಾಹಿತಿಯನ್ನು ನಾವು ಎಲ್ಲಿ ಕಂಡುಕೊಳ್ಳಬಹುದು?
ಈಗ ಎಷ್ಟು ಸಹೋದರ ಸಹೋದರಿಯರು ಸೆರೆಮನೆಯಲ್ಲಿದ್ದಾರೆ?