ದೇವರ ವಾಕ್ಯವು ಪುನರವತಾರವನ್ನು ಬೋಧಿಸುತ್ತದೊ?
ಪುನರವತಾರದ ತತ್ವಕ್ಕೆ ಆಧಾರವನ್ನು ಕಂಡುಕೊಳ್ಳುವ ನಿರೀಕ್ಷೆಗಳಿಂದ ಬೈಬಲನ್ನು ಪರೀಕ್ಷಿಸುವ ಯಾವನಾದರೂ ಆಶಾಭಂಗಗೊಳ್ಳುವುದು ನಿಶ್ಚಯ. ಮಾನವರು ಪೂರ್ವ ಜೀವಿತಗಳನ್ನು ಜೀವಿಸಿದ್ದರು ಎಂಬುದನ್ನು ನೀವು ಬೈಬಲಿನಲ್ಲಿ ಎಲ್ಲಿಯೂ ಕಂಡುಕೊಳ್ಳುವುದಿಲ್ಲ. ಇಷ್ಟೇ ಅಲ್ಲದೆ, “ಪುನರವತಾರ” ಅಥವಾ “ಆತ್ಮದ ದೇಹಾಂತರಹೊಂದುವಿಕೆ” ಅಥವಾ “ಅಮರ ಆತ್ಮ” ಎಂಬ ಅಭಿವ್ಯಕ್ತಿಗಳನ್ನು ಬೈಬಲಿನಲ್ಲಿ ನೀವು ಕಂಡುಕೊಳ್ಳುವುದಿಲ್ಲ.
ಹಾಗಿದ್ದರೂ, ಪುರಾತನ ಕಾಲಗಳಲ್ಲಿ ಪುನರವತಾರದ ಕಲ್ಪನೆಯು ಎಷ್ಟು ಸಾಮಾನ್ಯವಾಗಿದ್ದಿರಬಹುದೆಂದರೆ ಯಾವುದೇ ವಿವರಣೆಯು ಅತ್ಯಾಧಿಕ್ಯವಾಗಿತ್ತು ಎಂದು ಹೇಳುವ ಮೂಲಕ, ಪುನರವತಾರದಲ್ಲಿ ನಂಬಿಕೆಯಿಡುವ ಕೆಲವರು ಬೈಬಲಿನ ಬೆಂಬಲದ ಈ ಕೊರತೆಯನ್ನು ವಿವರಿಸಲು ಪ್ರಯತ್ನಿಸುತ್ತಾರೆ. ಪುನರವತಾರದ ತತ್ವವು ತೀರ ಪುರಾತನದ್ದಾಗಿದೆ ನಿಜ, ಆದರೆ ಅದು ಎಷ್ಟೇ ಪುರಾತನವಾದದ್ದಾಗಿರಲಿ ಅಥವಾ ಅದು ಎಷ್ಟು ಸಾಮಾನ್ಯವಾಗಿರಲಿ ಅಥವಾ ಇಲ್ಲದಿರಲಿ, ಬೈಬಲು ಅದನ್ನು ಬೋಧಿಸುತ್ತದೊ? ಎಂಬ ಪ್ರಶ್ನೆಯು ಇನ್ನೂ ಉಳಿಯುತ್ತದೆ.
ಎರಡನೆಯ ತಿಮೊಥೆಯ 3:16, 17ರಲ್ಲಿ ಅಪೊಸ್ತಲ ಪೌಲನು ಬರೆದದ್ದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು [ಪೂರ್ಣ, NW] ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ [ಸಂಪೂರ್ಣ, NW] ಸನ್ನದ್ಧನಾಗುವನು.” ಹೌದು, ಬೈಬಲು ದೈವಪ್ರೇರಿತ ವಾಕ್ಯವಾಗಿದೆ, ಮಾನವ ಕುಟುಂಬಕ್ಕೆ ಆತನ ಸಂಪರ್ಕ ಸಾಧನವಾಗಿದೆ. ಮತ್ತು ಪೌಲನು ಬರೆದಂತೆ, ಅದು ಪ್ರಾಮಾಣಿಕ ವಿಚಾರಕನನ್ನು ಗತ, ಪ್ರಸ್ತುತ, ಮತ್ತು ಭವಿಷ್ಯತ್ತಿನ ಕುರಿತಾದ ಪ್ರಶ್ನೆಗಳನ್ನೂ ಒಳಗೊಂಡು, ಜೀವಿತದ ಕುರಿತಾದ ಪ್ರಾಮುಖ್ಯ ಪ್ರಶ್ನೆಗಳೆಲ್ಲವನ್ನೂ ಉತ್ತರಿಸಲು “ಪೂರ್ಣ ಪ್ರವೀಣನಾಗಿ, ಸಂಪೂರ್ಣ ಸನ್ನದ್ಧನಾಗ”ಲು ಶಕ್ತನನ್ನಾಗಿ ಮಾಡುತ್ತದೆ.
ಪೌಲನು ಮತ್ತೂ ಹೇಳಿದ್ದು: “ಹೀಗಿರಲಾಗಿ ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು” ಅಂಗೀಕರಿಸಿದಿರಿ. (1 ಥೆಸಲೊನೀಕ 2:13) ಬೈಬಲು ಅಪರಿಪೂರ್ಣ ಮಾನವರದ್ದನ್ನಲ್ಲ, ದೇವರ ಆಲೋಚನೆಗಳನ್ನು ಒಳಗೊಂಡಿರುವುದರಿಂದ, ಮಾನವನ ಆಲೋಚನೆಗಳು ವರ್ಷಗಳಿಂದಲೂ ಜನಪ್ರಿಯವಾಗಿರುವುದಾದರೂ, ಬೈಬಲು ಪದೇ ಪದೇ ಅವುಗಳಿಂದ ಭಿನ್ನವಾಗಿರುವುದನ್ನು ಕಂಡುಕೊಳ್ಳುವುದು ನಮ್ಮನ್ನು ಆಶ್ಚರ್ಯಗೊಳಿಸಬಾರದು. ಆದರೆ ‘ಬೈಬಲು ಕಡಿಮೆಪಕ್ಷ ಕೆಲವೊಂದು ಕಡೆಗಳಲ್ಲಿ ಪುನರವತಾರವನ್ನು ಸೂಚಿಸುವುದಿಲ್ಲವೊ?’ ಎಂದು ನೀವು ಹೇಳಬಹುದು.
ತಪ್ಪಾಗಿ ಗ್ರಹಿಸಲ್ಪಟ್ಟ ವಚನಗಳು
ಮತ್ತಾಯ 17:11-13ರಲ್ಲಿ, ಯೇಸು ಸ್ನಾನಿಕನಾದ ಯೋಹಾನನನ್ನು ಪುರಾತನ ಪ್ರವಾದಿ ಎಲೀಯನೊಂದಿಗೆ ಸಂಬಂಧಿಸುವ ವಿಷಯಕ್ಕೆ ಬೈಬಲು ಸಂಕ್ಷಿಪ್ತವಾಗಿ ನಿರ್ದೇಶಿಸುತ್ತದೆಂದು ಪುನರವತಾರದಲ್ಲಿ ನಂಬಿಕೆಯಿಡುವವರು ಹೇಳುತ್ತಾರೆ. ಈ ವಚನವು ಹೀಗೆ ಓದುತ್ತದೆ: “ಎಲೀಯನು ಬರುವದು ನಿಜ; ಬಂದು ಎಲ್ಲವನ್ನು ತಿರಿಗಿ ಸರಿಮಾಡುವನು; ಆದರೆ ನಾನು ನಿಮಗೆ ಹೇಳುವದೇನಂದರೆ, ಎಲೀಯನು ಬಂದು ಹೋದನು; . . . ಆಗ ಸ್ನಾನಿಕನಾದ ಯೋಹಾನನ ವಿಷಯವಾಗಿ ತಮಗೆ ಈ ಮಾತನ್ನು ಹೇಳಿದನೆಂದು ಶಿಷ್ಯರು ತಿಳುಕೊಂಡರು.”
ಇದನ್ನು ಹೇಳುವುದರಿಂದ, ಸ್ನಾನಿಕನಾದ ಯೋಹಾನನು ಪ್ರವಾದಿ ಎಲೀಯನ ಪುನರವತಾರವಾಗಿದ್ದನೆಂದು ಯೇಸು ಅರ್ಥೈಸಿದನೊ? ಆತನು ಎಲೀಯನಾಗಿರಲಿಲ್ಲವೆಂದು ಸ್ವತಃ ಯೋಹಾನನು ತಿಳಿದಿದ್ದನು. ಒಂದು ಸಂದರ್ಭದಲ್ಲಿ “ನೀನು ಎಲೀಯನೋ?” ಎಂದು ಆತನು ಕೇಳಲ್ಪಟ್ಟಾಗ, ಯೋಹಾನನು ಸ್ಪಷ್ಟವಾಗಿಗಿ ಉತ್ತರಿಸಿದ್ದು: “ಅಲ್ಲ.” (ಯೋಹಾನ 1:21) ಆದರೂ, ಯೋಹಾನನು “ಎಲೀಯನ ಗುಣ ಶಕಿಗ್ತಳಿಂದ” ಕೂಡಿದವನಾಗಿ, ಮೆಸ್ಸೀಯನಿಗೆ ಪೂರ್ವಭಾವಿಯಾಗಿ ಬರುವನೆಂದು ಮುಂತಿಳಿಸಲ್ಪಟ್ಟಿತ್ತು. (ಲೂಕ 1:17; ಮಲಾಕಿಯ 4:5, 6) ಬೇರೆ ಮಾತುಗಳಲ್ಲಿ, ಆತನು ಎಲೀಯನಿಗೆ ತುಲನಾತ್ಮಕವಾದ ಒಂದು ಕೆಲಸವನ್ನು ಕಾರ್ಯರೂಪಕ್ಕೆ ತಂದ ಆ ಅರ್ಥದಲ್ಲಿ ಸ್ನಾನಿಕನಾದ ಯೋಹಾನನು “ಎಲೀಯ”ನಾಗಿದ್ದನು.
ಯೋಹಾನ 9:1, 2ರಲ್ಲಿ ನಾವು ಓದುವುದು: “ಯೇಸು ಹಾದುಹೋಗುತ್ತಿರುವಾಗ ಒಬ್ಬ ಹುಟ್ಟು ಕುರುಡನನ್ನು ಕಂಡನು. ಆತನ ಶಿಷ್ಯರು—‘ಗುರುವೇ, ಇವನು ಕುರುಡನಾಗಿ ಹುಟ್ಟಿರುವದಕ್ಕೆ ಯಾರು ಪಾಪಮಾಡಿದರು? ಇವನೋ? ಇವನ ತಂದೆ ತಾಯಿಗಳೋ? ಎಂದು ಆತನನ್ನು ಕೇಳಿ”ದರು. ಪುನರವತಾರದಲ್ಲಿ ನಂಬಿಕೆಯಿಡುವ ಕೆಲವರು ಸೂಚಿಸುತ್ತಾರೇನಂದರೆ, ಈ ಮನುಷ್ಯನು ಹುಟ್ಟು ಕುರಡನಾಗಿದದ್ದರಿಂದ ಪೂರ್ವ ಜೀವಿತವೊಂದರಲ್ಲಿ ಅವನ ಪಾಪವು ಸಂಭವಿಸಿರಬೇಕು.
ಆದರೆ ಶಿಷ್ಯರ ಪ್ರಶ್ನೆಗೆ ಉಗಮವನ್ನು ಕೊಟ್ಟದ್ದು ಏನೇ ಆಗಿದ್ದಿರಲಿ, ಯೇಸು ಕೊಟ್ಟ ಉತ್ತರವು ನಿರ್ಧಾರಕ ಅಂಶವಾಗಿರಬೇಕು. ಆತನು ಪ್ರಕಟಿಸಿದ್ದು: “ಇವನೂ ಪಾಪಮಾಡಲಿಲ್ಲ, ಇವನ ತಂದೆತಾಯಿಗಳೂ ಪಾಪಮಾಡಲಿಲ್ಲ.” (ಯೋಹಾನ 9:3) ಪೂರ್ವ ಜೀವಿತವೊಂದರ ಪಾಪದ ಮೇಲೆ ಬಲಹೀನತೆಗಳು ಅವಲಂಬಿಸಿವೆಯೆಂದು ನಿಜಭಿಪ್ರಾಯ ಕೊಡುವ ಪುನರವತಾರವನ್ನು ಇದು ಅಲ್ಲಗಳೆಯುತ್ತದೆ. ಏಸಾವ ಮತ್ತು ಯಾಕೋಬರ ಕುರಿತು “ಅವರು ಇನ್ನು ಹುಟ್ಟದೆಯೂ ಒಳ್ಳೇದನ್ನಾಗಲಿ ಕೆಟ್ಟದ್ದನ್ನಾಗಲಿ ಮಾಡದೆಯೂ ಇದ್ದಾಗ . . . ” ಎಂದು ಪೌಲನು ಬರೆದಾಗ, ಜನಿಸುವುದಕ್ಕೆ ಮೊದಲು ಯಾರೂ ಪಾಪ ಮಾಡಸಾಧ್ಯವಿಲ್ಲ ಎಂಬ ಹೇಳಿಕೆಯು ಸಹ ಆತನಿಂದ ರುಜುಮಾಡಲ್ಪಟ್ಟಿತು.—ರೋಮಾಪುರ 9:11.
ಪುನರವತಾರವಲ್ಲ, ಪುನರುತ್ಥಾನ
ಬೈಬಲು ಪುನರವತಾರದ ತತ್ವವನ್ನು ಬೆಂಬಲಿಸದಿದ್ದಾಗ್ಯೂ, ಯಾರೂ ಆಶಾಭಂಗಗೊಳ್ಳುವ ಆವಶ್ಯಕತೆಯಿಲ್ಲ. ಅಸ್ವಸ್ಥತೆ, ದುಃಖ, ವೇದನೆ, ಮತ್ತು ಮರಣದಿಂದ ತುಂಬಿರುವ ಒಂದು ಲೋಕದಲ್ಲಿ ಪುನಃ ಜನಿಸುವ ಕಲ್ಪನೆಗಿಂತಲೂ ಇನ್ನೂ ಹೆಚ್ಚು ಸಂತೈಸುವಿಕೆಯನ್ನು ನೀಡುವ ಯಾವುದನ್ನೋ ಬೈಬಲಿನ ಸಂದೇಶವು ಒದಗಿಸುತ್ತದೆ. ಮತ್ತು ಬೈಬಲು ಒದಗಿಸುವ ಈ ವಿಷಯವು ಸಂತೈಸುವಿಕೆಯಾಗಿರುವುದು ಮಾತ್ರವಲ್ಲ, ಅದು ಸತ್ಯವಾಗಿದೆ, ದೇವರ ಸ್ವಂತ ವಾಕ್ಯವಾಗಿದೆ.
ಆ ಪ್ರೋತ್ಸಾಹದಾಯಕ ತತ್ವವನ್ನು ಪೌಲನು ಈ ರೀತಿಯಲ್ಲಿ ವ್ಯಕ್ತಪಡಿಸಿದ್ದಾನೆ: “ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು . . . ನಾನು ದೇವರಲ್ಲಿ ನಿರೀಕ್ಷೆಯುಳ್ಳವನಾಗಿದ್ದೇನೆ.” “ಪುನರುತ್ಥಾನ” ಎಂಬ ಶಬ್ದ ಅಥವಾ ಅದರ ಶಬ್ದ ರೂಪವು, ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ 50ಕ್ಕಿಂತಲೂ ಹೆಚ್ಚು ಬಾರಿ ಕಂಡುಬರುತ್ತದೆ, ಮತ್ತು ಪೌಲನು ಅದರ ಕುರಿತು ಕ್ರೈಸ್ತ ನಂಬಿಕೆಯ ಮೂಲ ತತ್ವವೆಂದು ಹೇಳುತ್ತಾನೆ.—ಅ. ಕೃತ್ಯಗಳು 24:15; ಇಬ್ರಿಯ 6:1, 2.
ಸತ್ತವರಿಂದ ಪುನರುತ್ಥಾನ ಅಂದರೆ, ಮರಣವು ಅಸ್ತಿತ್ವದಲ್ಲಿದೆಯೆಂಬುದು ನಿಸ್ಸಂಶಯ. ಮಾನವನಿಗೆ ಅಮರವಾದ ಆತ್ಮವಿದೆಯೆಂಬ ಯಾವುದೇ ಸುಳಿವನ್ನು ಬೈಬಲಿನಲ್ಲಿ ನೀವೆಲ್ಲಿಯೂ ಕಂಡುಕೊಳ್ಳುವುದಿಲ್ಲ. ಮರಣದಲ್ಲಿ ದೇಹದಿಂದ ಬೇರ್ಪಟ್ಟ ಅಮರ ಆತ್ಮವು ಮನುಷ್ಯನಿಗಿರುವುದಾದರೆ ಮತ್ತು ಸ್ವರ್ಗದಲ್ಲಾಗಲಿ ನರಕದಲ್ಲಾಗಲಿ ಶಾಶ್ವತವಾದ ನಿಯತಿಗೆ ಹೋಗುವುದಾದರೆ ಯಾ ಪುನರವತಾರ ಹೊಂದಿದ್ದರೆ, ಪುನರುತ್ಥಾನದ ಆವಶ್ಯಕತೆಯು ಇರುವುದಿಲ್ಲ. ಇನ್ನೊಂದು ಕಡೆಯಲ್ಲಿ, ಸುಮಾರು ಒಂದು ನೂರು ಬೈಬಲ್ ವಚನಗಳು ತೋರಿಸುತ್ತವೇನಂದರೆ, ಮಾನವ ಆತ್ಮವು ಅಮರವಾಗಿಲ್ಲ, ಆದರೆ ಮರ್ತ್ಯ ಮತ್ತು ವಿನಾಶ್ಯವಾಗಿದೆ. ಮರಣವು ಜೀವಕ್ಕೆ ವಿರುದ್ಧವಾದದ್ದಾಗಿದೆ—ಅಂದರೆ, ಅಸ್ತಿತ್ವಕ್ಕೆ ತದ್ವಿರುದ್ಧವಾಗಿ ಅನಸಿತ್ತವ್ವಾದದ್ದು—ಎಂದು ಬೈಬಲು ದೃಢವಾಗಿ ಹೇಳುತ್ತದೆ.
ಆದಾಮ ಮತ್ತು ಹವ್ವರ ದೇವರ ವಿರುದ್ಧವಾದ ಪಾಪಕ್ಕಾಗಿ ಮರಣ ಅಥವಾ ಅನಸಿತ್ತವ್ವು ಶಿಕ್ಷೆಯಾಗಿತ್ತು. ಬೇರೊಂದು ಸ್ಥಳದಲ್ಲಿ ಅಮರ ಜೀವಿತಕ್ಕೆ ಅದು ಪ್ರವೇಶಮಾರ್ಗವಾಗಿರಲಿಲ್ಲ, ಅದು ಒಂದು ಶಿಕ್ಷೆಯಾಗಿತ್ತು. ಅವರೆಲ್ಲಿಂದ ಬಂದಿದ್ದರೊ ಆ ನೆಲದ ಮಣ್ಣಿಗೆ ಅವರು ಹಿಂದಿರುಗುವರೆಂದು ದೇವರು ಸ್ಪಷ್ಟವಾಗಿಗಿ ಪ್ರಕಟಿಸಿದನು: “ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಲ್ಲವೋ; ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ.” (ಆದಿಕಾಂಡ 3:19) ಅವರು ದೇವರಿಂದ ಸೃಷ್ಟಿಸಲ್ಪಡುವ ಮತ್ತು ಭೂಮಿಯ ಮೇಲೆ ಏದೆನ್ ಉದ್ಯಾನವನದಲ್ಲಿ ಇಡಲ್ಪಡುವ ಮೊದಲು ಅವರಿಗೆ ಅಮರ ಆತ್ಮವಿರಲಿಲ್ಲ, ಮತ್ತು ಅವರು ಸತ್ತ ಬಳಿಕವೂ ಅವರಿಗೆ ಏನೂ ಇರಲಿಲ್ಲ.
ಮರಣದಿಂದ ಪುನರುತ್ಥಾನವು ನಿದ್ರೆಯಿಂದ ಅಥವಾ ವಿಶ್ರಾಂತಿಯಿಂದ ಎಚ್ಚರಗೊಳ್ಳುವಿಕೆಗೆ ಹೋಲಿಸಲ್ಪಟ್ಟಿದೆ. ಉದಾಹರಣೆಗೆ, ತಾನು ಪುನರುತ್ಥಾನಗೊಳಿಸಲಿಕ್ಕಿದ್ದ ಲಾಜರನ ಕುರಿತು ಯೇಸು ಹೇಳಿದ್ದು: “ಲಾಜರನು ನಿದ್ರೆಮಾಡುತ್ತಾನೆ; ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವದಕ್ಕಾಗಿ ಹೋಗುತ್ತೇನೆ.” (ಯೋಹಾನ 11:11) ಪ್ರವಾದಿ ದಾನಿಯೇಲನ ಕುರಿತಾಗಿ ನಾವು ಓದುವುದು: “ನೀನು ದೀರ್ಘನಿದ್ರೆಯನ್ನು ಹೊಂದಿ ಯುಗಸಮಾಪ್ತಿಯಲ್ಲಿ ಎದ್ದು ನಿನಗಾಗುವ ಸ್ವಾಸ್ತ್ಯದೊಳಗೆ ನಿಲ್ಲುವಿ.”—ದಾನಿಯೇಲ 12:13.
ಭೂಮಿಯ ಮೇಲೆ ನಿತ್ಯ ಜೀವ
ಮರಣದಿಂದ ಪುನರುತ್ಥಾನಗೊಳಿಸಲ್ಪಟ್ಟವರಿಗೆ ಯಾವ ಸ್ವಾಸ್ತ್ಯವು ಲಭಿಸಲಿರುವುದು? ಎರಡು ರೀತಿಯ ಪುನರುತ್ಥಾನಗಳ ಕುರಿತು ಬೈಬಲು ಮಾತಾಡುತ್ತದೆ—ಒಂದು ಸ್ವರ್ಗೀಯ ಜೀವಿತದ್ದು ಮತ್ತು ಇನ್ನೊಂದು ಭೂಜೀವಿತದ್ದಾಗಿದೆ. ಭೂ ಪುನರುತ್ಥಾನವು, ಜೀವಿಸಿದ್ದವರು ಮತ್ತು ಮರಣಹೊಂದಿರುವವರಲ್ಲಿ ಅಪಾರ ಸಂಖ್ಯೆಯ ಜನರ ಸ್ವಾಸ್ತ್ಯವಾಗಲಿರುವುದು. ಕೇವಲ ಕೊಂಚ ಮಂದಿಗೆ—ದೇವರ ಸ್ವರ್ಗೀಯ ರಾಜ್ಯದಲ್ಲಿ ಕ್ರಿಸ್ತನೊಂದಿಗೆ ಆಳಲಿಕ್ಕಾಗಿ—ಸ್ವರ್ಗೀಯ ಪುನರುತ್ಥಾನವಿದೆ. (ಪ್ರಕಟನೆ 14:1-3; 20:4) ಭೂ ಪುನರುತ್ಥಾನವು ಯಾವಾಗ ಆರಂಭವಾಗಲಿರುವುದು? ದೇವರ ಮೂಲಕ ಈ ಪ್ರಸ್ತುತ ದುಷ್ಟ ವ್ಯವಸ್ಥೆಯ ನಾಶಮಾಡಲ್ಪಟ್ಟ ಬಳಿಕ ಮತ್ತು ಒಂದು “ನೂತನಭೂಮಂಡಲ,” ಒಂದು ನೀತಿಯ ನೂತನ ಮಾನವ ಸಮಾಜವು ವಾಸ್ತವವಾಗಿ ಪರಿಣಮಿಸಿದ ಬಳಿಕ ಅದು ಪ್ರಾರಂಭವಾಗುವುದು.—2 ಪೇತ್ರ 3:13; ಜ್ಞಾನೋಕ್ತಿ 2:21, 22; ದಾನಿಯೇಲ 2:44.
“ನೂತನ ಭೂಮಂಡಲ”ದಲ್ಲಿ ಅಸ್ವಸ್ಥತೆ ಅಥವಾ ಕಷ್ಟಾನುಭವವು ಇನ್ನಿರುವುದಿಲ್ಲ. ಮರಣವು ಕೂಡ ಇನ್ನು ಮುಂದೆ ಅಸ್ತಿತ್ವದಲ್ಲಿರುವುದಿಲ್ಲ, ಬದಲಿಗೆ ಅದು ನಿತ್ಯ ಜೀವದ ಪ್ರತೀಕ್ಷೆಯಿಂದ ಭರ್ತಿಯಾಗಲಿಕ್ಕಿದೆ. “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:4) ಹಾಗೂ ಕೀರ್ತನೆಗಾರನು ಮುಂತಿಳಿಸಿದ್ದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) ತದ್ರೀತಿಯಲ್ಲಿ ಯೇಸು ಹೇಳಿದ್ದು: “ಶಾಂತರು ಧನ್ಯರು; [ಸಂತೋಷಿತರು, NW] ಅವರು ಭೂಮಿಗೆ ಬಾಧ್ಯರಾಗುವರು.”—ಮತ್ತಾಯ 5:5.
ದೇವರ ಆ ಮಹಾ ವಾಗ್ದಾನಗಳನ್ನು ಪುನರವತಾರದ ತತ್ವದೊಂದಿಗೆ ಹೋಲಿಸಿರಿ. ಆ ಕಲ್ಪನೆಗನುಸಾರ, ಭ್ರಷ್ಟಗೊಂಡಿರುವ ಅದೇ ಹಳೆ ವಿಷಯಗಳ ವ್ಯವಸ್ಥೆಯಲ್ಲಿ ಜೀವಿಸಲು ನೀವು ಬಾರಿಬಾರಿಗೆ ಹಿಂದಿರುಗುವಿರೆಂದು ಊಹಿಸಲ್ಪಡುತ್ತದೆ. ನೀವು ದುಷ್ಟತನ, ಕಷ್ಟಾನುಭವ, ಮತ್ತು ಮರಣಿಸುವುದರಿಂದ—ಬಹುಮಟ್ಟಿಗೆ ಕೊನೆಯಿಲ್ಲದ ಚಕ್ರದೋಪಾದಿ—ಸತತವಾಗಿ ಆವರಿಸಲ್ಪಟ್ಟಿರುವಿರೆಂದು ಇದು ಅರ್ಥೈಸುತ್ತದೆ. ಎಂತಹ ಒಂದು ನಿರೀಕ್ಷಾರಹಿತ ಹೊರನೋಟವು ಅದಾಗಿದೆ!
ಹೀಗೆ, ಈ ಹಿಂದೆ ನೀವು ಜೀವಿಸಿದ್ದೀರೊ? ಮತ್ತು, ನೀವು ಪುನಃ ಜೀವಿಸುವಿರೊ? ಎಂಬ ಪ್ರಶ್ನೆಗಳನ್ನು ಬೈಬಲು ಈ ರೀತಿಯಲ್ಲಿ ಉತ್ತರಿಸುತ್ತದೆ: ಇಲ್ಲ, ಪ್ರಸ್ತುತ ಜೀವಿತದ ಹೊರತು ಯಾವುದೇ ಜೀವಿತವನ್ನು ನೀವು ಜೀವಿಸಿಲ್ಲ. ಆದರೆ ನಿಮ್ಮ ಜೀವಿತವನ್ನು ಸ್ಥಿರವಾದದ್ದಾಗಿ, ವಾಸ್ತವವಾಗಿ ಶಾಶ್ವತವಾದದ್ದಾಗಿ ಮಾಡಲು ನಿಮಗೆ ಸಾಧ್ಯವಾಗಿದೆ. ಇಂದು, ಸದ್ಯದ ವ್ಯವಸ್ಥೆಯ ಈ “ಕಡೇ ದಿವಸ”ಗಳಲ್ಲಿ, ಮರಣಹೊಂದದೇ ಈ ಲೋಕದ ಅಂತ್ಯವನ್ನು ಪಾರಾಗುವ ಮತ್ತು ದೇವರ ನೂತನ ಲೋಕದೊಳಗೆ ಪ್ರವೇಶವನ್ನು ಪಡೆಯುವ ನಿರೀಕ್ಷೆಯು ನಿಮಗಿರಬಲ್ಲದು. (2 ತಿಮೊಥೆಯ 3:1-5; ಪ್ರಕಟನೆ 7:9-15) ಅಥವಾ ದೇವರ ನೂತನ ಲೋಕವು ಬರುವುದಕ್ಕೆ ಮೊದಲು ನೀವು ಸಾಯುವುದಾದರೆ, ಒಂದು ಪ್ರಮೋದವನ ಭೂಮಿಯಲ್ಲಿ ನಿತ್ಯವಾದ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುವ ನಿರೀಕ್ಷೆಯು ನಿಮಗಿರಬಲ್ಲದು.—ಲೂಕ 23:43.
ನೀವು ಯೇಸುವಿನಲ್ಲಿ ನಂಬಿಕೆಯನ್ನು ಅಭ್ಯಸಿಸುವುದಾದರೆ, ಏನೇ ಸಂಭವಿಸಬಹುದಾದರೂ, ಮಾರ್ಥಳ ಸಹೋದರ ಲಾಜರನು ಸತ್ತಾಗ ಯೇಸು ಅವಳಿಗೆ ಹೇಳಿದ ಮಾತುಗಳು ನಿಮಗೂ ಅನ್ವಯಿಸುತ್ತವೆ: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು; ಮತ್ತು ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವದಿಲ್ಲ.”—ಯೋಹಾನ 11:25, 26. (g94 6/8)
[ಪುಟ 8 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಆದಾಮನಿಗೆ ಅಮರವಾದ ಆತ್ಮವಿರಲಿಲ್ಲ ಬದಲಿಗೆ ಅವನು ಸತ್ತಾಗ ಮಣ್ಣಿಗೆ ಹಿಂದಿರುಗಿದನು
[ಪುಟ 9 ರಲ್ಲಿರುವ ಚಿತ್ರ]
ದೇವರ ವಾಕ್ಯವು ಪುನರುತ್ಥಾನವನ್ನು ಬೋಧಿಸುತ್ತದೆ, ಪುನರವತಾರವನ್ನಲ್ಲ