ರತ್ನಗಳು ಯೋಹಾನನ ಸುವಾರ್ತೆಯಿಂದ
ಯೇಸುವಿನ ಜೀವನ ಮತ್ತು ಶುಶ್ರೂಷೆಯ ಒಂದು ಪ್ರೇರಕ ದಾಖಲೆಯನ್ನು ಬರೆಯುವಂತೆ ಯೆಹೋವನ ಆತ್ಮವು ಪ್ರಾಯ ಸಂದ ಅಪೊಸ್ತಲ ಯೋಹಾನನನ್ನು ಪ್ರಚೋದಿಸಿತು. ಈ ಸುವಾರ್ತೆಯ ಸಾ.ಶ. 98ರಲ್ಲಿ ಎಫೆಸ್ಯದಲ್ಲಿ ಯಾ ಸಮೀಪವೇ ಬರೆಯಲ್ಪಟ್ಟಿತು. ಆದರೆ ಈ ದಾಖಲೆಯ ಸ್ವಭಾವವು ಏನಾಗಿದೆ? ಇದರಲ್ಲಿರುವ ಕೆಲವು ರತ್ನಗಳು ಯಾವುವು?
ಬಹುಮಟ್ಟಿಗೆ ಸಂಪೂರಕ
ಯೋಹಾನನು ಆಯ್ಕೆಗಾರನಾಗಿದ್ದು, ಮತ್ತಾಯ, ಮಾರ್ಕ ಮತ್ತು ಲೂಕರು ಬರೆದವುಗಳಿಂದ ಕೊಂಚವನ್ನೇ ಪುನರಾವರ್ತನೆ ಮಾಡುತ್ತಾನೆ. ನಿಜವಾಗಿಯೂ, ಅವನು ಕಣ್ಣಾರೆ ಕಂಡ ಸಂಗತಿಗಳಲ್ಲಿ ಬಹುಮಟ್ಟಿಗೆ ಸಂಪೂರಕವಾಗಿದ್ದು, ಇತರ ಸುವಾರ್ತೆಗಳಲ್ಲಿ ಆವರಿಸದಂತಹ ಶೇಖಡಾ 90 ವಿವರಗಳಿವೆ. ಉದಾಹರಣೆಗೆ, ಅವನೊಬ್ಬನೇ ಯೇಸುವಿನ ಮಾನವ ಪೂರ್ವದ ಅಸ್ತಿತ್ವವನ್ನು ಮತ್ತು “ವಾಕ್ಯವು ಮಾಂಸವಾಗಿ ಬಂದನು” ಎಂದು ನಮಗೆ ಹೇಳುತ್ತಾನೆ. (1:1-14) ತನ್ನ ಶುಶ್ರೂಷೆಯ ಕೊನೆಯಲ್ಲಿ ದೇವಾಲಯವನ್ನು ಯೇಸುವು ಶುದ್ಧಗೊಳಿಸಿದ್ದನ್ನು ಇತರ ಸುವಾರ್ತೆಯ ಲೇಖಕರು ಹೇಳುವಾಗ, ಅದರ ಆರಂಭದಲ್ಲೂ ಕ್ರಿಸ್ತನು ಅದನ್ನು ಮಾಡಿದ್ದನೆಂದು ಯೋಹಾನನು ಹೇಳುತ್ತಾನೆ. (2:13-17) ಪ್ರಾಯ ಸಂದ ಅಪೊಸ್ತಲನು ಮಾತ್ರ ಯೇಸುವಿನಿಂದ ನಡಿಸಲ್ಪಟ್ಟ ಕೆಲವು ನಿರ್ದಿಷ್ಟ ಮಹತ್ಕಾರ್ಯಗಳನ್ನು, ಅಂದರೆ ನೀರನ್ನು ದ್ರಾಕ್ಷಾರಸವನ್ನಾಗಿ ಪರಿವರ್ತಿಸುವದು, ಸತ್ತ ಲಾಜರಸನನ್ನು ಎಬ್ಬಿಸುವದು ಮತ್ತು ಅವನ ಪುನರುತ್ಥಾನದ ಅನಂತರ ಅದ್ಭುತಕರ ರೀತಿಯಲ್ಲಿ ಮೀನನ್ನು ಹಿಡಿಯುವುದನ್ನು ನಮಗೆ ತಿಳಿಸುತ್ತಾನೆ.—2:1-11; 11:38-44; 21:4-14.
ತನ್ನ ಮರಣದ ಜ್ಞಾಪಕಾಚರಣೆಯನ್ನು ಯೇಸುವು ಸ್ಥಾಪಿಸಿದ ವಿಧವನ್ನು ಸುವಾರ್ತೆಯ ಎಲ್ಲಾ ಲೇಖಕರು ಹೇಳುವಾಗ, ನಮ್ರತೆಯ ಒಂದು ಪಾಠವನ್ನು ತನ್ನ ಅಪೊಸ್ತಲರಿಗೆ ಆ ರಾತ್ರಿಯಲ್ಲಿ ಅವರ ಪಾದಗಳನ್ನು ತೊಳೆಯುವುದರ ಮೂಲಕ ಕ್ರಿಸ್ತನು ಕಲಿಸಿದನು ಎಂದು ಯೋಹಾನನೊಬ್ಬನೇ ತೋರಿಸುತ್ತಾನೆ. ಇನ್ನೂ ಹೆಚ್ಚಾಗಿ ಯೇಸುವು ಬಿಚ್ಚು ಹೃದಯದಿಂದ ಮರೆಮಾಜದೆ ಮಾತಾಡಿದ್ದನ್ನು, ಆ ಸಮಯದಲ್ಲಿ ಅವರ ಪರವಾಗಿ ಪ್ರಾರ್ಥನೆ ಸಲ್ಲಿಸಿದ್ದನ್ನೂ ಯೋಹಾನನೊಬ್ಬನೇ ದಾಖಲಿಸುತ್ತಾನೆ.—13:1-17:26.
ಈ ಸುವಾರ್ತೆಯಲ್ಲಿ, ಯೋಹಾನ ಎಂಬ ಹೆಸರನ್ನು ಸ್ನಾನಿಕನಿಗೆ ಸಂಬೋಧಿಸುತ್ತಾ, ಲೇಖಕರು ಸ್ವತಹ ತನ್ನನ್ನು ‘ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು’ ಎಂದು ಕರೆದಿದ್ದಾನೆ. (13:23) ಅಪೊಸ್ತಲನು ನಿಜವಾಗಿಯೂ ಯೇಸುವನ್ನು ಪ್ರೀತಿಸಿದ್ದನು ಮತ್ತು ಯೋಹಾನನು ಕ್ರಿಸ್ತನನ್ನು ವಾಕ್ಯ, ಜೀವದ ರೊಟ್ಟಿ, ಲೋಕದ ಬೆಳಕು, ಒಳ್ಳೆಯ ಕುರುಬನು, ಮಾರ್ಗ, ಸತ್ಯ ಮತ್ತು ಜೀವವೆಂದು ಚಿತ್ರಿಸುವಾಗ ಕ್ರಿಸ್ತನಡೆಗಿನ ನಮ್ಮ ಸ್ವಂತ ಪ್ರೀತಿ ಏರುತ್ತದೆ. (1:1-3,14; 6:35; 8:12; 10:11; 14:6) ಇದು ಯೋಹಾನ ನಮೂದಿಸಲ್ಪಟ್ಟ ಉದ್ದೇಶವನ್ನು ಪೂರೈಸುತ್ತದೆ: “ಆದರೆ ಯೇಸು ದೇವಕುಮಾರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ, ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡಕೊಳ್ಳುವಂತೆಯೂ ಇಷ್ಟೆಲ್ಲಾ (ಈ ಸಂಗತಿಗಳು) ಬರೆದದೆ.”—20:31.
ನಮ್ರತೆ ಮತ್ತು ಸಂತೋಷ
ಯೇಸುವನ್ನು ವಾಕ್ಯವನ್ನಾಗಿಯೂ, ಪಾಪ ಪರಿಹಾರ ಮಾಡುವ ಕುರಿಮರಿಯನ್ನಾಗಿಯೂ ಮತ್ತು “ದೇವರು ಪ್ರತಿಷ್ಠಿಸಿದವನೆಂದು” ಅವನ ಅದ್ಭುತಗಳು ರುಜುಪಡಿಸುವದನ್ನೂ ಯೋಹಾನನ ಸುವಾರ್ತೆಯು ಪ್ರಸ್ತಾಪಿಸುತ್ತದೆ. (1:1-9;41) ಇನ್ನಿತರ ಸಂಗತಿಗಳೊಂದಿಗೆ, ಸ್ನಾನಿಕನಾದ ಯೋಹಾನನ ನಮ್ರತೆ ಮತ್ತು ಆನಂದವು ಈ ದಾಖಲೆಯು ಎತ್ತಿ ತೋರಿಸುತ್ತದೆ. ಅವನು ಕ್ರಿಸ್ತನ ಮುಂದೂತನಾಗಿದ್ದನು. ಆದರೂ ಅನ್ನುವದು: “ಆತನ ಕೆರದ ಬಾರನ್ನು ಬಿಚ್ಚುವದಕ್ಕೂ ನಾನು ಯೋಗ್ಯನಲ್ಲ.” (1:27) ಕೆರಗಳು ಕರ್ಮದ ಪಟ್ಟಿಗಳು ಯಾ ಬಾರುಗಳಿಂದ ಕಟ್ಟಲ್ಪಡುತ್ತಿದ್ದವು. ಇನ್ನೊಬ್ಬ ವ್ಯಕ್ತಿಗಳ ಕೆರಗಳ ಬಾರುಗಳನ್ನು ಸೇವಕನು ಬಿಚ್ಚಿ, ಅವನಿಗೋಸ್ಕರ ಅದನ್ನು ಕೊಂಡೊಯ್ಯಬಹುದು. ಇದೊಂದು ನಿಷ್ಕೃಷ್ಟ ಕೆಲಸವೆಂದು ನೋಡಲ್ಪಡುತ್ತಿತ್ತು. ತನ್ನ ಯಜಮಾನನ ಹೋಲಿಕೆಯಲ್ಲಿ ತಾನು ನಗಣ್ಯವಾದನೆಂದು ಸ್ನಾನಿಕನಾದ ಯೋಹಾನನಿಗೆ ತಿಳಿದಿತ್ತು ಮತ್ತು ಈ ರೀತಿ ನಮ್ರತೆಯನ್ನು ವ್ಯಕ್ತಪಡಿಸಿದನು. ಯೆಹೋವನ ಮತ್ತು ಮೆಸ್ಸೀಯ ಅರಸನ ಸೇವೆಗೆ ಕೇವಲ ನಮ್ರರಾದವರು ಮಾತ್ರ ತಕ್ಕವರಾಗಿದ್ದಾರೆ ಎಂಬುದು ಎಂಥ ಉತ್ತಮ ಪಾಠ!—ಕೀರ್ತನೆ 138:6; ಜ್ಞಾನೋಕ್ತಿ 21:4.
ಅಹಂಕಾರದಿಂದ ಯೇಸುವನ್ನು ತೆಗಳುವ ಬದಲು, ಸ್ನಾನಿಕನಾದ ಯೋಹಾನನು ಅಂದದ್ದು: “ಆದರೂ ಮದಲಿಂಗನ ಗೆಳೆಯನು ಅವನ ಹತ್ತಿರ ನಿಂತುಕೊಂಡು ಅವನ ಮಾತುಗಳನ್ನು ಕೇಳಿ ಮದಲಿಂಗನ ಧ್ವನಿಗೆ ಬಹು ಸಂತೋಷ ಪಡುತ್ತಾನಲ್ಲವೇ; ಇದರಂತೆ ನನಗಿರುವ ಸಂತೋಷ.”(3:29) ಮದಲಿಂಗನ ಪ್ರತಿನಿಧಿಯೋಪಾದಿ, ಮದಲಿಂಗನ ಗೆಳೆಯನು ಮದುವೆಯ ಸಮಾಲೋಚನೆಗಳನ್ನು ಮಾಡುವನು, ಕೆಲವೊಮ್ಮೆ ಮದಲಗಿತ್ತಿಗಾಗಿ ಏರ್ಪಡಿಸುವನು ಮತ್ತು ಮದಲಗಿತ್ತಿಗೆ ಬಹುಮಾನಗಳನ್ನು ಮತ್ತು ಅವಳ ತಂದೆಗೆ ಕನ್ಯಾಹಣವನ್ನು ದಾಟಿಸುವನು. ತನ್ನ ಕೆಲಸವು ಪೂರೈಸಲ್ಪಟ್ಟಾಗ ಈ ಪ್ರತಿನಿಧಿಗೆ ಸಂತೋಷ ಪಡಲು ಕಾರಣವಿದೆ. ತದ್ರೀತಿಯಲ್ಲಿ ಅವನ ಮದಲಗಿತ್ತಿಯ ಮೊದಲ ಸದಸ್ಯರನ್ನು ಯೇಸುವಿನೊಂದಿಗೆ ಒಟ್ಟು ಸೇರಿಸುವುದರಲ್ಲಿ, ಯೋಹಾನನು ತದ್ರೀತಿಯಲ್ಲಿ ಸಂತೋಷಿಸಿದನು. (ಪ್ರಕಟನೆ 21:2,9) ಮದಲಿಂಗನ ಗೆಳೆಯನೋಪಾದಿ ಕೊಂಚ ಕಾಲಕ್ಕೆ ಮಾತ್ರ ಅವನ ಸೇವೆಯ ಅಗತ್ಯವಿತ್ತು. ತದ್ರೀತಿಯಲ್ಲಿ ಯೋಹಾನನ ಕೆಲಸ ಕೂಡಲೇ ಅಂತ್ಯಗೊಂಡಿತು. ಅವನು ಕಡಿಮೆಯಾಗುತ್ತಾ ಹೋಗುವಾಗ ಯೇಸುವು ವೃದ್ಧಿಯಾಗುತ್ತಾ ಹೋದನು.—ಯೋಹಾನ 3:30.
ಜನರಿಗಾಗಿ ಯೇಸುವಿನ ಗಮನ
ಸುಖರೆಂಬ ನಗರದ ಬಾವಿಯ ಬಳಿ, ನಿತ್ಯ ಜೀವವನ್ನು ನೀಡುವ ಸಾಂಕೇತಿಕ ನೀರಿನ ಕುರಿತು ಸಮಾರ್ಯ ಸ್ತ್ರೀಯೊಬ್ಬಳಿಗೆ ಯೇಸುವು ಹೇಳಿದನು. ಅವನ ಶಿಷ್ಯರು ಬಂದಾಗ, “ಆತನು ಒಬ್ಬ ಹೆಂಗಸಿನ ಸಂಗಡ ಮಾತಾಡುತ್ತಿರುವದನ್ನು ಕಂಡು ಅವರು ಆಶ್ಚರ್ಯಪಟ್ಟರು.” (4:27) ಅಂತಹ ಪ್ರತಿಕ್ರಿಯೆ ಯಾಕಾಗಿ? ಒಳ್ಳೆದು, ಯೆಹೂದ್ಯರು ಸಮಾರ್ಯದವರನ್ನು ತುಚ್ಛೀಕರಿಸುತ್ತಿದ್ದರು ಮತ್ತು ಅವರೊಂದಿಗೆ ಯಾವುದೇ ಹೊಕ್ಕು ಬಳಕೆಯಿರಲಿಲ್ಲ. (4:9; 8:48) ಯೆಹೂದಿ ಬೋಧಕನೊಬ್ಬನು ಸಾರ್ವಜನಿಕವಾಗಿ ಹೆಂಗಸಿನೊಡನೆ ಮಾತಾಡುವದು ಕೂಡಾ ವಿರಳವಾಗಿತ್ತು. ಜನರ ಕಡೆಗಿನ ಯೇಸುವಿನ ಕನಿಕರವು, ಈ ಸಾಕ್ಷಿಯನ್ನು ಕೊಡಲು ನಡಿಸಿತು ಮತ್ತು ಇದರ ಕಾರಣ, ನಗರದ ನಿವಾಸಿಗಳು “ಆತನ ಬಳಿಗೆ ಬರುವದಕ್ಕೆ ತೊಡಗಿದರು.”—4:28-30.
ಜನರ ಕಡೆಗಿನ ಪರಿಗಣನೆಯು ಇದನ್ನು ಹೇಳುವಂತೆ ಯೇಸುವನ್ನು ನಡಿಸಿತು: “ಯಾವನಿಗಾದರೂ ನೀರಡಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ.”(7:37) ಈ ರೀತಿಯಲ್ಲಿ ಎಂಟು ದಿನಗಳ ಪರ್ಣಶಾಲೆಗಳ ಹಬ್ಬಕ್ಕೆ ಜೋಡಿಸಲ್ಪಟ್ಟ ಒಂದು ಸಂಪ್ರದಾಯವನ್ನು ಪ್ರಾಸಂಗಿಕವಾಗಿ ಪ್ರಸ್ತಾಪಿಸಿದನು. ಏಳು ತಿಂಗಳುಗಳ ಪ್ರತಿದಿನ ಬೆಳಿಗ್ಗೆಯೂ, ಶೀಲೊವಿನ ಕೊಳದಿಂದ ನೀರನ್ನು ಸೇದಿ, ಯಾಜಕನೊಬ್ಬನು ದೇವಾಲಯದ ಯಜ್ಞವೇದಿಯ ಮೇಲೆ ಸುರಿಸುತ್ತಿದ್ದನು. ಇನ್ನಿತರ ವಿಷಯಗಳೊಂದಿಗೆ, ಇದು ಆತ್ಮವನ್ನು ಸುರಿಸುವದನ್ನು ಪ್ರತಿನಿಧಿಸುತ್ತದೆಂದು ಹೇಳಲಾಗುತ್ತದೆ. ಸಾ.ಶ. 33ರ ಪಂಚಾಶತಮದಿಂದ ಆರಂಭಿಸಿ, ಯೇಸುವಿನ ಶಿಷ್ಯರು ಭೂವ್ಯಾಪಕವಾಗಿ ಜೀವನೀಡುವ ನೀರನ್ನು ಜನರೆಡೆಗೆ ಕೊಂಡೊಯ್ಯುವಂತೆ ದೇವರ ಆತ್ಮವು ಪ್ರಚೋದಿಸಿತು, “ಜೀವದ ನೀರಿನ ಬುಗ್ಗೆಯಾದ” ಯೆಹೋವನಿಂದ ಮಾತ್ರ, ಕ್ರಿಸ್ತನ ಮೂಲಕ ಯಾರೇ ಒಬ್ಬನು ನಿತ್ಯ ಜೀವವನ್ನು ಪಡೆಯಬಹುದು.—ಯೆರೆಮೀಯ 2:13; ಯೆಶಾಯ 12:3; ಯೋಹಾನ 17:3.
ಒಳ್ಳೆಯ ಕುರುಬನು ಲಕ್ಷಕೊಡುತ್ತಾನೆ.
ತನ್ನ ಕುರಿಗಳಂತಹ ಹಿಂಬಾಲಕರನ್ನು ಲಕ್ಷಿಸುವುದರಲ್ಲಿ, ಒಳ್ಳೆಯ ಕುರುಬನೋಪಾದಿಯ ಪಾತ್ರದಲ್ಲಿ ಯೇಸುವು ಜನರೆಡೆಗೆ ಗಮನವೀಯುತ್ತಾನೆಂಬುದು ವಿದಿತವಾಗುತ್ತದೆ. ಅವನ ಮರಣವು ಹತ್ತರಿಸಿದರೂ ಕೂಡಾ, ಯೇಸುವು ತನ್ನ ಶಿಷ್ಯರಿಗೆ ಪ್ರೀತಿಯ ಬುದ್ಧಿವಾದ ಕೊಡುತ್ತಾನೆ. ಅವರ ಪರವಾಗಿ ಪ್ರಾರ್ಥಿಸುತ್ತಾನೆ. (10:1-17;26) ಕಳ್ಳ ನರಿ ಯಾ ದೋಚುವವನಂತೆ ಇರದೆ, ಅವನು ಬಾಗಲಿನ ಮೂಲಕ ಕುರಿಹಿಂಡನ್ನು ಪ್ರವೇಶಿಸುತ್ತಾನೆ. (10:1-5) ಕುರೀದೊಡ್ಡಿಯು ಕಳ್ಳರಿಂದಲೂ, ಕೊಳ್ಳೆಹೊಡೆಯುವ ಪ್ರಾಣಿಗಳಿಂದಲೂ ರಾತ್ರಿಯಲ್ಲಿ ಕುರಿಗಳನ್ನು ಇಡುವ ಒಂದು ಆವರಣವಾಗಿರುತ್ತದೆ. ಅದಕ್ಕೆ ಕಲ್ಲುಗಳ ಗೋಡೆಗಳಿದ್ದು ಮೇಲಿನಿಂದ ಮುಳ್ಳುಕೊಂಬೆಗಳನ್ನು ಇಡುತ್ತಿದ್ದಿರಬಹುದು ಮತ್ತು ಒಂದು ಪ್ರವೇಶ ದ್ವಾರವನ್ನು ಬಾಗಲು ಕಾಯುವವನು ನೋಡಿಕೊಳ್ಳುತ್ತಾನೆ.
ಹಲವಾರು ಕುರುಬರುಗಳ ಹಿಂಡುಗಳನ್ನು ಒಂದೇ ಕುರೀದೊಡ್ಡಿಯಲ್ಲಿ ಇಡಬಹುದು. ಆದರೆ ಕುರಿಗಳು ಅವರವರ ಕುರುಬರ ಸ್ವರಕ್ಕೆ ಮಾತ್ರ ಪ್ರತಿವರ್ತಿಸುತ್ತವೆ. ಮ್ಯಾನರ್ಸ್ ಆ್ಯಂಡ್ ಕಸ್ಟಮ್ಸ್ ಆಫ್ ಬೈಬಲ್ ಲ್ಯಾಂಡ್ ಎಂಬ ತನ್ನ ಪುಸ್ತಕದಲ್ಲಿ (ಬೈಬಲ್ ದೇಶಗಳ ರೀತಿಗಳು ಮತ್ತು ಪದ್ಧತಿಗಳು) ಫ್ರೆಡ್ ಹೆಚ್. ವೈಟ್ ಹೇಳುವದು: “ಕುರಿಗಳ ಹಲವಾರು ಹಿಂಡುಗಳನ್ನು ಪ್ರತ್ಯೇಕಿಸಬೇಕಾದ ಜರೂರಿ ಬಂದಾಗ, ಒಂದರ ನಂತರ ಇನ್ನೊಬ್ಬ ಕುರುಬನು ನಿಂತುಕೊಂಡು, ಕರೆಯುತ್ತಾನೆ: ‘ಟಾ ಹ್ಹೂ! ಟಾ ಹ್ಹೂ!’ ಇಲ್ಲವೇ ತನ್ನ ಸ್ವಂತ ಆರಿಸುವಿಕೆಯ ತದ್ರೀತಿಯ ಕರೆಯಾಗಿರುತ್ತದೆ. ಕುರಿಗಳು ತಲೆಯನ್ನು ಎತ್ತುತ್ತವೆ, ಮತ್ತು ಸಾಮಾನ್ಯ ಹಿಗ್ಗಾಮುಗ್ಗಾ ಜಗ್ಗಾಟದ ನಂತರ, ಪ್ರತಿಯೊಂದು ತನ್ನ ಸ್ವಂತ ಕುರುಬನ ಹಿಂದೆ ಹಿಂಬಾಲಿಸಲು ಆರಂಭಿಸುತ್ತವೆ. ಅವರು ಅವರ ಸ್ವಂತ ಕುರುಬನ ಸ್ವರಭಾರ ವನ್ನು ಪೂರ್ಣವಾಗಿ ತಿಳಿದಿರುತ್ತವೆ. ಅಪರಿಚಿತರು ಅದೇ ರೀತಿಯ ಕರೆಯನ್ನು ಹಲವಾರು ಬಾರಿ ಬಳಸಿರುತ್ತಾರೆ, ಆದರೆ ಕುರಿಗಳು ತಮ್ಮನ್ನು ಹಿಂಬಾಲಿಸುವ ಅವರ ಪ್ರಯತ್ನಗಳಲ್ಲಿ ಅವರು ಯಾವಾಗಲೂ ಪರಾಜಯಗೊಂಡಿರುತ್ತಾರೆ.” ಆಸಕ್ತಿಕರವಾಗಿಯೇ ಯೇಸುವಂದದ್ದು: “ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ಬಲ್ಲಿನು; ಅವು ನನ್ನ ಹಿಂದೆ ಬರುತ್ತವೆ. ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ.” (10:27,28) “ಚಿಕ್ಕ ಹಿಂಡಿನ” ಮತ್ತು “ಬೇರೆ ಕುರಿಗಳು” ಯೇಸುವಿನ ಸ್ವರಕ್ಕೆ ಪ್ರತಿವರ್ತಿಸಿ, ಅವನ ನಾಯಕತ್ವವನ್ನು ಹಿಂಬಾಲಿಸುವವು ಮತ್ತು ಅವನ ನಾಯಕತ್ವವನ್ನು ಹಿಂಬಾಲಿಸುವವು ಮತ್ತು ಅವನ ಕೋಮಲ ಶುಶ್ರೂಷೆಯಲ್ಲಿ ಆನಂದಿಸುವವು.—ಲೂಕ 12:32; ಯೋಹಾನ 10:16.
ದೇವರ ಸದಾ ನಂಬಿಗಸ್ತ ಪುತ್ರನು
ಕ್ರಿಸ್ತನು ಯಾವಾಗಲೂ ದೇವರಿಗೆ ನಂಬಿಗಸ್ತನಾಗಿದ್ದನು ಮತ್ತು ಅವನ ಐಹಿಕ ಜೀವಿತದಲ್ಲಿಲ್ಲಾ, ಪ್ರೀತಿಯ ಕುರುಬನೋಪಾದಿ ಆದರ್ಶಪ್ರಾಯನಾಗಿದ್ದನು. ಅವನ ಕನಿಕರವು, ಪುನರುತ್ಥಾನದ ನಂತರದ ಕಾಣಿಸುವಿಕೆಗಳಲ್ಲಿ ವ್ಯಕ್ತವಾಗಿದೆ. ತನ್ನ ಕುರಿಗಳಿಗೆ ಉಣಿಸುವಂತೆ ಪೇತ್ರನಿಗೆ ಯೇಸುವೇ ಒತ್ತಾಯಿಸಲು, ಇತರರೆಡೆಗೆ ಅವನಲ್ಲಿದ್ದ ಕನಿಕರವೇ ಆಗಿತ್ತು.—18:1-21;25.
ಹಿಂಸಾಕಂಭಕ್ಕೇರಿಸಲ್ಪಟ್ಟವನೋಪಾದಿ, ಮರಣದ ತನಕವೂ ನಂಬಿಗಸ್ತಿಕೆಯ ಶ್ರೇಷ್ಠ ಉದಾಹರಣೆಯನ್ನು ಯೇಸುವು ನಮಗೋಸ್ಕರ ಇಟ್ಟಿರುತ್ತಾನೆ. ಅವನು ಅನುಭವಿಸಿದ ಒಂದು ಅಪನಿಂದೆ. ‘ಅವನ ಬಟ್ಟೆಯನ್ನು ಅವರು ತಮ್ಮೊಳಗೆ ಪಾಲು ಮಾಡಿಕೊಂಡರು’ ಎಂಬ ಪ್ರಾವಾದನೆಯ ನೆರವೇರಿಕೆಯೇ. (ಕೀರ್ತನೆ 22:18) ಯಾವುದೇ ಹೊಲಿಗೆ ಇಲ್ಲದೇ ನೇಯಲ್ಪಟ್ಟ ಅವನ ಒಳ್ಳೆಯ ಒಳ ಅಂಗಿಗಾಗಿ (ಗ್ರೀಕ್, ಖಿಟೊನ್), ಯಾರು ಅದನ್ನು ಪಡೆದುಕೊಳ್ಳುವದು ಎಂದು ತಮ್ಮೊಳಗೆ ಚೀಟಿ ಎತ್ತುತ್ತಾರೆ. (19:23,24) ಅಂತಹ ಒಂದು ಮೋಟು ತೋಳಿನ ಜುಬ್ಬ, ಉಣ್ಣೆಯಿಂದ ಯಾ ಇತರ ನಾರಗಸೆಯ ದಾರದಿಂದ ಅಖಂಡವಾಗಿ ಹೆಣಯಲ್ಪಟ್ಟ ಅದು ಬಿಳಿ ಯಾ ಇತರ ವಿವಿಧ ಬಣ್ಣಗಳಿಂದ ಕೂಡಿದ್ದಿರಬಹುದು. ಹೆಚ್ಚಿನ ಸಂದರ್ಭಗಳಲ್ಲಿ ತೋಳು ಇಲ್ಲದ್ದಾಗಿದ್ದು, ಮೈಚರ್ಮದ ನಂತರ ಧರಿಸಲ್ಪಟ್ಟು, ಅದು ಮಂಡಿಯ ವರೆಗೆ ಯಾ ಕಾಲಿನ ಹರಡಿನ ತನಕ ತಲುಪುತ್ತಿತ್ತು. ಯೇಸುವು ಲೌಕಿಕನಾಗಿಲಿಲ್ಲವೆಂಬದೇನೋ ಸತ್ಯ, ಆದರೆ ಅವನು ಅಂತಹ ಉತ್ತಮ ದರ್ಜೆಯ, ಅಖಂಡವಾಗಿರುವ ಹೊಲಿಗೆಯಿಲ್ಲದ ಮೋಟು ತೋಳಿನ ಜುಬ್ಬವನ್ನು ಧರಿಸಿದ್ದನು.
ಪುನರುತ್ಥಾನದ ನಂತರದ ಯೇಸುವಿನ ಒಂದು ದರ್ಶನದಲ್ಲಿ, ಅವನು ತನ್ನ ಶಿಷ್ಯರನ್ನು ಹೀಗೆ ವಂದಿಸಿದನು: “ನಿಮಗೆ ಸಮಾಧಾನವಾಗಲಿ.” (20:19) ಯೆಹೂದ್ಯರಲ್ಲಿ ಇದೊಂದು ಸಾಮಾನ್ಯ ವಂದಿಸುವಿಕೆಯ ಕ್ರಮವಾಗಿತ್ತು. (10:12,13) ಅನೇಕರಿಗೆ ಅಂತಹ ಶಬ್ದಗಳ ಬಳಕೆಯು ಹೆಚ್ಚು ಅರ್ಥವತ್ತಾಗಿರಲಿಲ್ಲ. ಆದರೆ ಯೇಸುವಿಗೆ ಹಾಗಿರಲಿಲ್ಲ. ಯಾಕಂದರೆ ಇದರ ಮೊದಲೇ ಅವನು ತನ್ನ ಅನುಯಾಯಿಗಳಿಗೆ ಅಂದದ್ದು: “ಶಾಂತಿಯನ್ನು ನಿಮಗೆ ಬಿಟ್ಟು ಹೋಗುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ.” (ಯೋಹಾನ 14:27) ದೇವರ ಪುತ್ರನೋಪಾದಿ ಅವನಲ್ಲಿ ಅವರಿಟ್ಟ ನಂಬಿಕೆಯ ಆಧಾರದಲ್ಲಿ ಯೇಸುವು ತನ್ನ ಶಿಷ್ಯರಿಗೆ ಶಾಂತಿಯನ್ನು ಕೊಟ್ಟನು ಮತ್ತು ಅವರ ಹೃದಯ, ಮನಗಳನ್ನು ಶಾಂತಿಗೊಳಿಸುವಂತೆ ಅದು ಕಾರ್ಯವೆಸಗಿತು.
ತದ್ರೀತಿಯಲ್ಲಿ “ದೇವರ ಶಾಂತಿ”ಯಲ್ಲಿ ನಾವು ಆನಂದಿಸ ಸಾಧ್ಯವಿದೆ. ಅವನ ಪ್ರೀತಿಯ ಮಗನ ಮೂಲಕ ಯೆಹೋವನೊಂದಿಗಿನ ನಮ್ಮ ಆಪ್ತ ಸಂಬಂಧದ ಮೂಲಕ ಈ ಅಸದೃಶವಾದ ಪ್ರಶಾಂತತೆಯನ್ನು ನಾವೆಲ್ಲರೂ ನೆಮ್ಮಿಕೊಂಡಿರೋಣ.
[ಪುಟ 27 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.