ದುಃಖಿಸುತ್ತಿರುವುದಾದರೂ, ನಾವು ನಿರೀಕ್ಷಾಹೀನರಲ್ಲ
“ಸಹೋದರರೇ, ನಿದ್ರೆಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು ನಿರೀಕ್ಷೆಯಿಲ್ಲದವರಾದ ಇತರರಂತೆ ದುಃಖಿಸುವದು ನಮ್ಮ ಮನಸ್ಸಿಗೆ ಒಪ್ಪುವದಿಲ್ಲ.”—1 ಥೆಸಲೊನೀಕ 4:13.
1. ಮಾನವಕುಲವು ಕ್ರಮವಾಗಿ ಏನನ್ನು ಅನುಭವಿಸುತ್ತದೆ?
ನೀವು ಮರಣದಲ್ಲಿ ಒಬ್ಬ ಪ್ರಿಯ ವ್ಯಕ್ತಿಯನ್ನು ಕಳೆದುಕೊಂಡಿದ್ದೀರೋ? ವಯಸ್ಸು ಎಷ್ಟೇ ಆಗಿರಲಿ, ನಮ್ಮಲ್ಲಿ ಹೆಚ್ಚಿನವರು ಒಬ್ಬ ಸಂಬಂಧಿಕನ ಅಥವಾ ಸ್ನೇಹಿತನೊಬ್ಬನ ನಷ್ಟದಿಂದ ದುಃಖಿಸಲ್ಪಟ್ಟಿದ್ದೇವೆ. ಪ್ರಾಯಶಃ, ಅದು ಒಬ್ಬ ಅಜ್ಜಅಜಿಯ್ಜೋ, ಒಬ್ಬ ಹೆತ್ತವನೋ, ಒಬ್ಬ ವಿವಾಹ ಸಂಗಾತಿಯೋ ಅಥವಾ ಒಂದು ಮಗುವೋ ಆಗಿದ್ದಿರಬೇಕು. ವೃದ್ಧಾಪ್ಯ, ಅಸ್ವಸ್ಥತೆ, ಮತ್ತು ಅಪಘಾತಗಳು ಒಂದು ಕ್ರಮವಾದ ಕೊಯ್ಲನ್ನು ಕೊಯ್ಯುತ್ತವೆ. ಪಾತಕ, ಹಿಂಸಾಕೃತ್ಯ, ಮತ್ತು ಯುದ್ಧ, ಸಂಕಟ ಹಾಗೂ ದುಃಖವನ್ನು ಅಧಿಕಗೊಳಿಸುತ್ತದೆ. ಪ್ರತಿ ವರ್ಷ ಲೋಕದ ಸುತ್ತಲೂ, ಸರಾಸರಿ ಐದು ಕೋಟಿಗಿಂತಲೂ ಹೆಚ್ಚಿನ ಜನರು ಸಾಯುತ್ತಾರೆ. 1993 ರಲ್ಲಿ ದೈನಿಕ ಸರಾಸರಿಯು 1,40,250 ಆಗಿತ್ತು. ಮರಣದ ದುಃಖಕರ ಬೆಲೆಯು ಸ್ನೇಹಿತರನ್ನು ಮತ್ತು ಕುಟುಂಬವನ್ನು ಬಾಧಿಸುತ್ತದೆ, ಮತ್ತು ಕಳೆದುಕೊಳ್ಳುವಿಕೆಯ ಅನಿಸಿಕೆಯು ಗಾಢವಾಗಿರುತ್ತದೆ.
2. ಮಕ್ಕಳ ಸಾಯುವಿಕೆಯ ವಿಷಯದಲ್ಲಿ ಯಾವುದು ಅಸಾಮಾನ್ಯವಾಗಿ ತೋರುತ್ತದೆ?
2 ಒಂದು ಅಸಹಜವಾದ ವಾಹನ ಅಪಘಾತದಲ್ಲಿ ತಮ್ಮ ಗರ್ಭಿಣಿ ಮಗಳನ್ನು ದುರಂತಮಯವಾಗಿ ಕಳೆದುಕೊಂಡ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವ ಹೆತ್ತವರೊಂದಿಗೆ ನಾವು ಮರುಗಲಾರೆವೋ? ಒಂದೇ ಏಟಿಗೆ, ಅವರು ತಮ್ಮ ಒಬ್ಬಳೇ ಮಗಳನ್ನು ಮತ್ತು ತಮ್ಮ ಪ್ರಥಮ ಮೊಮ್ಮಗುವಾಗಲಿದ್ದ ಕೂಸನ್ನು ಕಳೆದುಕೊಂಡರು. ಆಹುತಿಯಾದವಳ ಗಂಡನು, ಒಬ್ಬ ಹೆಂಡತಿಯನ್ನು ಮತ್ತು ತನ್ನ ಪ್ರಥಮ ಮಗ ಅಥವಾ ಮಗಳನ್ನು ಕಳೆದುಕೊಂಡನು. ಇನ್ನೂ ಎಳೆಯದ್ದಾಗಿರಲಿ ಅಥವಾ ದೊಡ್ಡದಾಗಿರಲಿ, ಒಬ್ಬ ಮಗುವಿನ ಮರಣವನ್ನು ಅನುಭವಿಸುವುದು ಹೇಗೂ ಹೆತ್ತವರಿಗೆ ಅಸ್ವಾಭಾವಿಕವಾಗಿದೆ. ತಮ್ಮ ಹೆತ್ತವರಿಗಿಂತ ಮುಂಚೆಯೇ ಮಕ್ಕಳು ಸಾಯುವುದು ಸಾಮಾನ್ಯ ಸಂಗತಿಯಾಗಿರುವುದಿಲ್ಲ. ನಾವೆಲ್ಲರೂ ಜೀವವನ್ನು ಪ್ರೀತಿಸುತ್ತೇವೆ. ಆ ಕಾರಣದಿಂದ, ಮರಣವು ನಿಜವಾಗಿಯೂ ಒಂದು ಶತ್ರುವಾಗಿದೆ.—1 ಕೊರಿಂಥ 15:26.
ಮರಣವು ಮಾನವ ಕುಟುಂಬದೊಳಗೆ ಪ್ರವೇಶಿಸುತ್ತದೆ
3. ಹೇಬೆಲನ ಮರಣವು ಆದಾಮಹವ್ವರನ್ನು ಹೇಗೆ ಬಾಧಿಸಿದಿರ್ದಬಹುದು?
3 ನಮ್ಮ ಮೊದಲ ಮಾನವ ಹೆತ್ತವರಾದ, ಆದಾಮ ಮತ್ತು ಹವ್ವರ ದಂಗೆಯಂದಿನಿಂದ, ಮಾನವ ಇತಿಹಾಸದ ಸುಮಾರು ಆರು ಸಾವಿರ ವರ್ಷಗಳಿಗೆ ಪಾಪ ಮತ್ತು ಮರಣ ರಾಜರಾಗಿ ಆಳಿವೆ. (ರೋಮಾಪುರ 5:14; 6:12, 23) ಅವನ ಸಹೋದರನಾದ ಕಾಯಿನನಿಂದ ಅವರ ಮಗನಾದ ಹೇಬೆಲನ ಕೊಲೆಗೆ ಅವರು ಹೇಗೆ ಪ್ರತಿವರ್ತಿಸಿದರೆಂದು ಬೈಬಲ್ ನಮಗೆ ಹೇಳುವುದಿಲ್ಲ. ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ಅದು ಅವರಿಗೆ ಒಂದು ಧ್ವಂಸಕಾರಕ ಅನುಭವವಾಗಿದ್ದಿರಬೇಕು. ಇಲ್ಲಿ, ಪ್ರಥಮ ಬಾರಿಗೆ, ತಮ್ಮ ಸ್ವಂತ ಮಗನ ಮುಖದಲ್ಲಿ ಪ್ರತಿಬಿಂಬಿಸಲ್ಪಟ್ಟ, ಮಾನವ ಮರಣದ ನಿಜತ್ವವನ್ನು ಅವರು ಎದುರಿಸಿದರು. ತಮ್ಮ ದಂಗೆಯ ಮತ್ತು ಇಚ್ಛಾ ಸ್ವಾತಂತ್ರ್ಯದ ಮುಂದುವರಿದ ದುರುಪಯೋಗದ ಫಲವನ್ನು ಅವರು ನೋಡಿದರು. ದೇವರಿಂದ ಬಂದ ಎಚ್ಚರಿಕೆಗಳ ಹೊರತೂ, ಕಾಯಿನನು ಮೊದಲನೆಯ ಭ್ರಾತೃಘಾತವನ್ನು ನಡಿಸಲು ಆರಿಸಿಕೊಂಡಿದ್ದನು. ಹೇಬೆಲನ ಮರಣದಿಂದ ಹವ್ವಳು ಆಳವಾಗಿ ಬಾಧಿಸಲ್ಪಟ್ಟಿರಬೇಕೆಂದು ನಮಗೆ ತಿಳಿದಿದೆ ಯಾಕಂದರೆ ಅವಳು ಸೇತನಿಗೆ ಜನ್ಮಕೊಟ್ಟಾಗ, ಅವಳಂದದ್ದು: “ಕಾಯಿನನು ಕೊಂದುಹಾಕಿದ ಹೇಬೆಲನಿಗೆ ಬದಲಾಗಿ ದೇವರು ನನಗೆ ಬೇರೆ ಸಂತಾನವನ್ನು ನೇಮಿಸಿ” ದ್ದಾನೆ.—ಆದಿಕಾಂಡ 4:3-8, 25.
4. ಹೇಬೆಲನ ಮರಣದ ನಂತರ ಅಮರ-ಆತ್ಮದ ಮಿಥ್ಯೆ ಒಂದು ಸಾಂತ್ವನವಾಗಿರಸಾಧ್ಯವಿರಲಿಲ್ಲವೇಕೆ?
4 ಅವರು ದಂಗೆಯೆದ್ದು ಅವಿಧೇಯರಾಗುವಲ್ಲಿ, ಅವರು “ಸತ್ತೇ ಹೋಗು” ವರೆಂಬ ಅವರ ಮೇಲಿನ ದೇವರ ತೀರ್ಪಿನ ವಾಸ್ತವಿಕತೆಯನ್ನು ಸಹ ನಮ್ಮ ಮೊದಲ ಮಾನವ ಹೆತ್ತವರು ನೋಡಿದರು. ಸೈತಾನನ ಸುಳ್ಳಿನ ಹೊರತೂ, ಪ್ರಾಯಶಃ ಆ ಸಮಯದಷ್ಟಕ್ಕೆ ಅಮರ ಆತ್ಮದ ಕುರಿತಾದ ಮಿಥ್ಯೆಯು ಇನ್ನೂ ವಿಕಸಿಸಿರಲಿಲ್ಲ, ಆದುದರಿಂದ ಅವರು ಅದರಿಂದ ಯಾವುದೇ ಹುಸಿ ಸಾಂತ್ವನವನ್ನು ಪಡೆಯಲು ಸಾಧ್ಯವಿರಲಿಲ್ಲ. “ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಲ್ಲವೋ; ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ” ಎಂದು ದೇವರು ಆದಾಮನಿಗೆ ಹೇಳಿದ್ದನು. ಸ್ವರ್ಗ, ನರಕ, ಲಿಂಬೊ, ಪರ್ಗಟರಿ ಅಥವಾ ಇನ್ನೆಲಿಯ್ಲಾದರೂ ಆಗಲಿ ಒಂದು ಅಮರ ಆತ್ಮದೋಪಾದಿ ಭವಿಷ್ಯದ ಅಸ್ತಿತ್ವವೊಂದರ ಕುರಿತಾಗಿ ಅವನು ತಿಳಿಸಲಿಲ್ಲ. (ಆದಿಕಾಂಡ 2:17; 3:4, 5, 19) ಪಾಪಮಾಡಿದ ಜೀವಿಸುವ ಆತ್ಮಗಳಾಗಿ, ಆದಾಮಹವ್ವರು ಕಟ್ಟಕಡೆಗೆ ಸತ್ತು ಅಸ್ತಿತ್ವವನ್ನು ನಿಲ್ಲಿಸಲಿದ್ದರು. ರಾಜ ಸೊಲೊಮೋನನು ಹೀಗೆ ಬರೆಯಲು ಪ್ರೇರಿಸಲ್ಪಟ್ಟನು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇಲ್ಲ, ಅವರ ಜ್ಞಾಪಕವೇ ಹೋಯಿತಲ್ಲವೆ. ಅವರು ಸತ್ತಾಗಲೇ ಅವರ ಪ್ರೀತಿಯೂ ಹಗೆಯೂ ಹೊಟ್ಟೇಕಿಚ್ಚೂ ಅಳಿದು ಹೋದವು; ಲೋಕದೊಳಗೆ ನಡೆಯುವ ಯಾವ ಕೆಲಸದಲ್ಲಿಯೂ ಅವರಿಗೆ ಇನ್ನೆಂದಿಗೂ ಪಾಲೇ ಇಲ್ಲ.”—ಪ್ರಸಂಗಿ 9:5, 6.
5. ಸತ್ತವರಿಗಾಗಿ ನಿಜವಾದ ನಿರೀಕ್ಷೆ ಏನಾಗಿದೆ?
5 ಆ ಮಾತುಗಳು ಎಷ್ಟೊಂದು ಸತ್ಯವಾಗಿವೆ! ನಿಜವಾಗಿ, ಇನ್ನೂರು ಅಥವಾ ಮುನ್ನೂರು ವರ್ಷಗಳ ಹಿಂದಿನ ಪೂರ್ವಜರನ್ನು ಯಾರು ನೆನಪಿಸಿಕೊಳ್ಳುತ್ತಾರೆ? ಅನೇಕಸಲ ಅವರ ಸಮಾಧಿಗಳು ಸಹ ಅಜ್ಞಾತವಾಗಿರುತ್ತವೆ ಅಥವಾ ಬಹಳ ಸಮಯದಿಂದ ಅಲಕ್ಷಿಸಲ್ಪಟ್ಟಿರುತ್ತವೆ. ನಮ್ಮ ಸತ್ತ ಪ್ರಿಯ ಜನರಿಗೆ ಯಾವ ನಿರೀಕ್ಷೆಯೂ ಇಲ್ಲವೆಂದು ಅದು ಅರ್ಥೈಸುತ್ತದೋ? ಇಲ್ಲವೇ ಇಲ್ಲ. ತನ್ನ ಮೃತ ಸಹೋದರ ಲಾಜರನ ಕುರಿತಾಗಿ ಮಾರ್ಥಳು ಯೇಸುವಿಗಂದದ್ದು: “ಸತ್ತವರಿಗೆ ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದುಬರುವನೆಂದು ನಾನು ಬಲ್ಲೆನು.” (ಯೋಹಾನ 11:24) ಭವಿಷ್ಯದ ಒಂದು ಸಮಯದಲ್ಲಿ ದೇವರು ಸತ್ತವರನ್ನು ಪುನರುತ್ಥಾನಗೊಳಿಸುವನೆಂದು ಹೀಬ್ರು ಜನರು ನಂಬಿದರು. ಆದರೂ, ಪ್ರಿಯರೊಬ್ಬರ ಕಳೆದುಕೊಳ್ಳುವಿಕೆಯ ಕುರಿತಾಗಿ ದುಃಖಿಸುವದರಿಂದ ಅದು ಅವರನ್ನು ತಡೆಯಲಿಲ್ಲ.—ಯೋಬ 14:13.
ದುಃಖಿಸಿದಂತಹ ನಂಬಿಗಸ್ತರು
6, 7. ಅಬ್ರಹಾಮ್ ಮತ್ತು ಯಾಕೋಬರು ಮರಣಕ್ಕೆ ಹೇಗೆ ಪ್ರತಿವರ್ತಿಸಿದರು?
6 ಹತ್ತಿರಹತ್ತಿರ ನಾಲ್ಕು ಸಾವಿರ ವರ್ಷಗಳ ಹಿಂದೆ, ಅಬ್ರಹಾಮನ ಪತ್ನಿಯಾದ ಸಾರಳು ಸತ್ತಾಗ, “ಅಬ್ರಹಾಮನು ಬಂದು ಆಕೆಯ ನಿಮಿತ್ತ ಗೋಳಾಡಿ ಕಣ್ಣೀರುಸುರಿಸಿದನು.” ದೇವರ ಆ ನಂಬಿಗಸ್ತ ಸೇವಕನು ತನ್ನ ಪ್ರಿಯ ಮತ್ತು ನಿಷ್ಠಾವಂತ ಪತ್ನಿಯ ಕಳೆದುಕೊಳ್ಳುವಿಕೆಯ ವಿಷಯದಲ್ಲಿ ತನ್ನ ಆಳವಾದ ಅನಿಸಿಕೆಗಳನ್ನು ತೋರಿಸಿದನು. ಅವನು ಕೆಚ್ಚೆದೆಯ ಒಬ್ಬ ಮನುಷ್ಯನಾಗಿದ್ದರೂ, ತನ್ನ ದುಃಖವನ್ನು ಕಣ್ಣೀರಿನ ಮೂಲಕ ವ್ಯಕ್ತಪಡಿಸಲು ಅವನು ನಾಚಿಕೆಪಡಲಿಲ್ಲ.—ಆದಿಕಾಂಡ 14:11-16; 23:1, 2.
7 ಯಾಕೋಬನ ವಿದ್ಯಮಾನವು ತದ್ರೀತಿಯದ್ದಾಗಿತ್ತು. ತನ್ನ ಮಗನಾದ ಯೋಸೇಫನು ಒಂದು ಕಾಡು ಮೃಗದಿಂದ ಕೊಲ್ಲಲ್ಪಟ್ಟಿದ್ದನೆಂದು ನಂಬುವಂತೆ ಅವನು ವಂಚಿಸಲ್ಪಟ್ಟಾಗ, ಅವನು ಹೇಗೆ ಪ್ರತಿವರ್ತಿಸಿದನು? ಆದಿಕಾಂಡ 37:34, 35 ರಲ್ಲಿ ನಾವು ಹೀಗೆ ಓದುತ್ತೇವೆ: “[ಯಾಕೋಬನು] ತನ್ನ ಬಟ್ಟೆಗೆಳನ್ನು ಹರಿದುಕೊಂಡು ನಡುವಿನ ಮೇಲೆ ಗೋಣೀತಟ್ಟು ಸುತ್ತಿಕೊಂಡು ತನ್ನ ಮಗನಿಗಾಗಿ ಬಹುದಿನಗಳ ವರೆಗೂ ಹಂಬಲಿಸುತ್ತಿದ್ದನು. ಅವನ ಗಂಡುಮಕ್ಕಳೂ ಹೆಣ್ಣುಮಕ್ಕಳೂ ಎಲ್ಲರೂ ದುಃಖಶಮನಮಾಡುವದಕ್ಕೆ ಪ್ರಯತ್ನಿಸಿದಾಗ್ಯೂ ಅವನು ಶಾಂತಿಯನ್ನು ಹೊಂದಲೊಲ್ಲದೆ—ನಾನು ಹೀಗೇ ಹಂಬಲಿಸುತ್ತಾ ನನ್ನ ಮಗನಿರುವ ಪಾತಾಳವನ್ನು ಸೇರುವೆನು ಅಂದನು. ಹೀಗೆ ತಂದೆಯು ಮಗನಿಗೋಸ್ಕರ ಅಳುತ್ತಿದ್ದನು.” ಹೌದು, ಪ್ರಿಯ ವ್ಯಕ್ತಿಯೊಬ್ಬನು ಸತ್ತಾಗ ದುಃಖವನ್ನು ವ್ಯಕ್ತಪಡಿಸುವುದು ಮಾನವೀಯವೂ ಸ್ವಾಭಾವಿಕವೂ ಆಗಿದೆ.
8. ಹೀಬ್ರು ಜನರು ಅನೇಕ ವೇಳೆ ತಮ್ಮ ದುಃಖವನ್ನು ಹೇಗೆ ವ್ಯಕ್ತಪಡಿಸುತ್ತಿದ್ದರು?
8 ಆಧುನಿಕ ಅಥವಾ ಸ್ಥಳೀಯ ಮಟ್ಟಗಳಿಗನುಸಾರ, ಯಾಕೋಬನ ಪ್ರತಿವರ್ತನೆಯು ವಿಪರೀತ ಮತ್ತು ನಾಟಕೀಯವಾಗಿತ್ತೆಂದು ಕೆಲವರು ನೆನಸಬಹುದು. ಆದರೆ ಅವನು ಒಂದು ಭಿನ್ನ ಸಮಯ ಮತ್ತು ಸಂಸ್ಕೃತಿಯ ಉತ್ಪಾದನೆಯಾಗಿದ್ದನು. ಅವನ ದುಃಖದ ವ್ಯಕ್ತಪಡಿಸುವಿಕೆಯು—ಗೋಣೀತಟ್ಟನ್ನು ಧರಿಸುವುದು—ಬೈಬಲಿನಲ್ಲಿ ಈ ಆಚರಣೆಯ ಮೊದಲ ಪ್ರಸ್ತಾವನೆಯಾಗಿದೆ. ಆದಾಗಲೂ, ಹೀಬ್ರು ಶಾಸ್ತ್ರವಚನಗಳಲ್ಲಿ ವರ್ಣಿಸಲ್ಪಟ್ಟಂತೆ ಶೋಕವನ್ನು, ರೋದನೆಯ ಮೂಲಕ, ಶೋಕಗೀತಗಳನ್ನು ರಚಿಸುವ ಮೂಲಕ, ಮತ್ತು ಬೂದಿಯಲ್ಲಿ ಕುಳಿತುಕೊಳ್ಳುವ ಮೂಲಕವೂ ವ್ಯಕ್ತಪಡಿಸಲಾಗುತ್ತಿತ್ತು. ದುಃಖದ ತಮ್ಮ ಯಥಾರ್ಥ ವ್ಯಕ್ತಪಡಿಸುವಿಕೆಗಳಲ್ಲಿ ಹೀಬ್ರು ಜನರು ನಿಷೇಧಿಸಲ್ಪಟ್ಟಿರಲಿಲ್ಲವೆಂಬದು ವ್ಯಕ್ತವಾಗುತ್ತದೆ.a—ಯೆಹೆಜ್ಕೇಲ 27:30-32; ಆಮೋಸ 8:10.
ಯೇಸುವಿನ ಸಮಯದಲ್ಲಿನ ದುಃಖ
9, 10. (ಎ) ಲಾಜರನ ಮರಣಕ್ಕೆ ಯೇಸು ಹೇಗೆ ಪ್ರತಿವರ್ತಿಸಿದನು? (ಬಿ) ಯೇಸುವಿನ ಪ್ರತಿವರ್ತನೆಯು ನಮಗೆ ಆತನ ಕುರಿತಾಗಿ ಏನನ್ನು ತಿಳಿಸುತ್ತದೆ?
9 ಯೇಸುವಿನ ಆರಂಭದ ಶಿಷ್ಯರ ಕುರಿತಾಗಿ ನಾವು ಏನನ್ನು ಹೇಳಬಲ್ಲೆವು? ಉದಾಹರಣೆಗಾಗಿ, ಲಾಜರನು ಸತ್ತಾಗ, ಅವನ ಸಹೋದರಿಯರಾದ ಮಾರ್ಥ ಮತ್ತು ಮರಿಯಳು ಅವನ ಮರಣವನ್ನು ಕಣ್ಣೀರು ಮತ್ತು ಅಳುವಿಕೆಯೊಂದಿಗೆ ಶೋಕಿಸಿದರು. ಪರಿಪೂರ್ಣ ಮನುಷ್ಯನಾದ ಯೇಸು ಅವರ ಮನೆಗೆ ಬಂದಾಗ ಹೇಗೆ ಪ್ರತಿವರ್ತಿಸಿದನು? ಯೋಹಾನನ ವರದಿಯು ಹೇಳುವುದು: “ಮರಿಯಳು ಯೇಸು ಇದಲ್ದಿಗ್ಲೆ ಬಂದು ಆತನನ್ನು ಕಂಡು ಆತನ ಪಾದಕ್ಕೆ ಬಿದ್ದು—ಸ್ವಾಮೀ, ನೀನು ಇಲ್ಲಿ ಇರುತ್ತಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ ಅಂದಳು. ಆಕೆ ಗೋಳಾಡುವದನ್ನೂ ಆಕೆಯ ಸಂಗಡ ಬಂದ ಯೆಹೂದ್ಯರು ಗೋಳಾಡುವದನ್ನೂ ಯೇಸು ಕಂಡಾಗ ಆತ್ಮದಲ್ಲಿ ನೊಂದುಕೊಂಡು ತತ್ತರಿಸಿ—ಅವನನ್ನು ಎಲ್ಲಿ ಇಟ್ಟಿದ್ದೀರಿ ಎಂದು ಕೇಳಿದನು. ಅವರು—ಸ್ವಾಮೀ, ಬಂದು ನೋಡು ಅಂದರು. ಯೇಸು ಕಣ್ಣೀರು ಬಿಟ್ಟನು.”—ಯೋಹಾನ 11:32-35.
10 “ಯೇಸು ಕಣ್ಣೀರು ಬಿಟ್ಟನು.” ಆ ಕೆಲವೇ ಮಾತುಗಳು ಯೇಸುವಿನ ಮಾನವೀಯತೆ, ಆತನ ಕನಿಕರ, ಆತನ ಅನಿಸಿಕೆಗಳ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನೀಡುವವುಗಳಾಗಿವೆ. ಪುನರುತ್ಥಾನದ ನಿರೀಕ್ಷೆಯ ಕುರಿತಾಗಿ ಪೂರ್ಣವಾಗಿ ಅರಿವುಳ್ಳವನಾಗಿದ್ದರೂ, “ಯೇಸು ಅತನ್ತು.” (ಯೋಹಾನ 11:35, ಕಿಂಗ್ ಜೇಮ್ಸ್ ವರ್ಷನ್) ಪ್ರೇಕ್ಷಕರ ಹೇಳಿಕೆಗಳನ್ನು ತಿಳಿಸುತ್ತಾ ವರದಿಯು ಮುಂದುವರಿಯುವುದು: “ಆಹಾ, ಈತನು ಅವನ [ಲಾಜರನ] ಮೇಲೆ ಎಷ್ಟೋ ಮಮತೆ ಇಟ್ಟಿದ್ದನು.” ಪರಿಪೂರ್ಣ ಮನುಷ್ಯನಾದ ಯೇಸು ಒಬ್ಬ ಸ್ನೇಹಿತನ ನಷ್ಟಕ್ಕಾಗಿ ಅತ್ತಿರುವಲ್ಲಿ, ಇಂದು ಒಬ್ಬ ಗಂಡಸು ಅಥವಾ ಹೆಂಗಸು ಶೋಕಿಸುತ್ತಾ ಕಣ್ಣೀರು ಸುರಿಸಿದರೆ ಅದೊಂದು ಅವಮಾನವಾಗಿರುವದಿಲ್ಲ.—ಯೋಹಾನ 11:36.
ಸತ್ತವರಿಗಾಗಿ ಯಾವ ನಿರೀಕ್ಷೆ?
11. (ಎ) ಶೋಕವನ್ನೊಳಗೂಡಿರುವ ಬೈಬಲ್ ಸಂಬಂಧಿತ ಉದಾಹರಣೆಗಳಿಂದ ನಾವೇನನ್ನು ಕಲಿಯಸಾಧ್ಯವಿದೆ? (ಬಿ) ನಿರೀಕ್ಷೆಯಿಲ್ಲದವರು ದುಃಖಿಸುವಂತೆ ನಾವು ದುಃಖಿಸುವುದಿಲ್ಲವೇಕೆ?
11 ಈ ಬೈಬಲ್ ಸಂಬಂಧಿತ ಉದಾಹರಣೆಗಳಿಂದ ನಾವೇನನ್ನು ಕಲಿಯಬಲ್ಲೆವು? ಏನಂದರೆ ದುಃಖಿಸುವುದು ಮಾನವೀಯವೂ ಸ್ವಾಭಾವಿಕವೂ ಆಗಿದೆ, ಮತ್ತು ನಮ್ಮ ದುಃಖವು ತೋರಿಬರುವಂತೆ ಬಿಡಲು ನಾವು ನಾಚಿಕೆಪಡಬಾರದು. ಪುನರುತ್ಥಾನದ ನಿರೀಕ್ಷೆಯ ಕಾರಣ ಶಮನ ಮಾಡಲ್ಪಟ್ಟಾಗಲೂ, ಪ್ರಿಯ ವ್ಯಕ್ತಿಯೊಬ್ಬನ ಮರಣವು ಇನ್ನೂ ಅನುಭವಿಸಲ್ಪಡುವ, ಮಾನಸಿಕವಾಗಿ ಆಘಾತಗೊಳಿಸುವ ಒಂದು ಕಳೆದುಕೊಳ್ಳುವಿಕೆಯಾಗಿದೆ. ವರ್ಷಗಳ, ಪ್ರಾಯಶಃ ದಶಕಗಳ ನಿಕಟ ಒಡನಾಟವು ಮತ್ತು ಸಹಭಾಗಿತ್ವವು ಹಠಾತ್ತಾಗಿ ಮತ್ತು ದುರಂತಕರವಾಗಿ ಅಂತ್ಯಗೊಳಿಸಲ್ಪಡುತ್ತದೆ. ನಿರೀಕ್ಷೆಯಿಲ್ಲದವರು ಅಥವಾ ಸುಳ್ಳು ನಿರೀಕ್ಷೆಗಳಿರುವವರು ದುಃಖಿಸುವ ಹಾಗೇ ನಾವು ದುಃಖಿಸುವದಿಲ್ಲವೆಂಬುದು ನಿಜ. (1 ಥೆಸಲೊನೀಕ 4:13) ಹಾಗೂ, ಮನುಷ್ಯನು ಒಂದು ಅಮರ ಆತ್ಮವನ್ನು ಹೊಂದಿರುವುದರ ಅಥವಾ ಪುನರ್ಜನ್ಮದ ಮೂಲಕ ಅಸ್ತಿತ್ವವನ್ನು ಮುಂದುವರಿಸುವುದರ ಮಿಥ್ಯೆಗಳಿಂದ ನಾವು ತಪ್ಪುದಾರಿಗೆಳೆಯಲ್ಪಟ್ಟಿರುವುದಿಲ್ಲ. ಯೆಹೋವನು ‘ನೀತಿಯು ವಾಸವಾಗಲಿರುವ ನೂತನಾಕಾಶಮಂಡಲ ಹಾಗೂ ನೂತನಭೂಮಂಡಲವನ್ನು’ ವಾಗ್ದಾನಿಸಿದ್ದಾನೆ. (2 ಪೇತ್ರ 3:13) ದೇವರು “[ನಮ್ಮ] ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:4.
12. ಪೌಲನು ಪುನರುತ್ಥಾನದಲ್ಲಿ ತನ್ನ ನಂಬಿಕೆಯನ್ನು ಹೇಗೆ ವ್ಯಕ್ತಪಡಿಸಿದನು?
12 ಸತ್ತಿರುವವರಿಗಾಗಿ ಯಾವ ನಿರೀಕ್ಷೆಯಿದೆ?b ಕ್ರೈಸ್ತ ಲೇಖಕನಾದ ಪೌಲನು ಹೀಗೆ ಬರೆದಾಗ ನಮಗೆ ಸಾಂತ್ವನ ಮತ್ತು ನಿರೀಕ್ಷೆಯನ್ನು ಕೊಡಲು ಪ್ರೇರಿಸಲ್ಪಟ್ಟನು: “ಮರಣವು ಕಡೇ ಶತ್ರುವಾಗಿ ನಿವೃತ್ತಿಯಾಗುವದು.” (1 ಕೊರಿಂಥ 15:26) ದ ನ್ಯೂ ಇಂಗ್ಲಿಷ್ ಬೈಬಲ್ ತಿಳಿಸುವದು: “ಅಳಿಸಲ್ಪಡುವ ಕೊನೆಯ ಶತ್ರುವು ಮರಣವಾಗಿದೆ.” ಪೌಲನು ಅದರ ಕುರಿತಾಗಿ ಅಷ್ಟು ನಿಶ್ಚಿತನಾಗಿರಲು ಸಾಧ್ಯವಿತ್ತು ಏಕೆ? ಯಾಕಂದರೆ ಅವನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೊಬ್ಬನಾದ ಯೇಸು ಕ್ರಿಸ್ತನಿಂದ ಪರಿವರ್ತಿಸಲ್ಪಟ್ಟಿದ್ದನು ಮತ್ತು ಕಲಿಸಲ್ಪಟ್ಟಿದ್ದನು. (ಅ. ಕೃತ್ಯಗಳು 9:3-19) ಆ ಕಾರಣದಿಂದಲೇ ಪೌಲನು ಹೀಗೆ ಹೇಳಸಾಧ್ಯವಾದದ್ದು: “ಮನುಷ್ಯನ [ಆದಾಮನ] ಮೂಲಕ ಮರಣವು ಉಂಟಾದ ಕಾರಣ ಮನುಷ್ಯನ [ಯೇಸು] ಮೂಲಕ ಸತ್ತವರಿಗೆ ಪುನರುತ್ಥಾನವುಂಟಾಗುವದು. ಯಾವ ಪ್ರಕಾರ ಆದಾಮನ ಸಂಬಂಧದಿಂದ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಕ್ರಿಸ್ತನ ಸಂಬಂಧದಿಂದ ಎಲ್ಲರೂ ಜೀವಿತರಾಗುವರು.”—1 ಕೊರಿಂಥ 15:21, 22.
13. ಲಾಜರನ ಪುನರುತ್ಥಾನಕ್ಕೆ ಪ್ರತ್ಯಕ್ಷಸಾಕ್ಷಿಗಳು ಹೇಗೆ ಪ್ರತಿಕ್ರಿಯಿಸಿದರು?
13 ಯೇಸುವಿನ ಬೋಧನೆಯು, ಭವಿಷ್ಯತ್ತಿಗಾಗಿ ಮಹತ್ತಾದ ಸಾಂತ್ವನ ಮತ್ತು ನಿರೀಕ್ಷೆಯನ್ನು ನಮಗೆ ಕೊಡುತ್ತದೆ. ಉದಾಹರಣೆಗಾಗಿ, ಲಾಜರನ ವಿದ್ಯಮಾನದಲ್ಲಿ ಅವನು ಏನು ಮಾಡಿದನು? ನಾಲ್ಕು ದಿನಗಳಿಂದ ಲಾಜರನ ಶವವನ್ನು ಎಲ್ಲಿ ಇಡಲಾಗಿತ್ತೋ ಆ ಸಮಾಧಿಗೆ ಅವನು ಹೋದನು. ಅವನು ಒಂದು ಪ್ರಾರ್ಥನೆಯನ್ನು ನುಡಿದನು ಮತ್ತು “ಅದನ್ನು ಹೇಳಿದ ಮೇಲೆ ದೊಡ್ಡ ಶಬ್ದದಿಂದ—ಲಾಜರನೇ, ಹೊರಗೆ ಬಾ ಎಂದು ಕೂಗಿದನು. ಸತ್ತಿದ್ದವನು ಹೊರಗೆ ಬಂದನು; ಅವನ ಕೈಕಾಲುಗಳು ಬಟ್ಟೆಗೆಳಿಂದ ಕಟ್ಟಿದ್ದವು, ಅವನ ಮುಖವು ಕೈಪಾವಡದಿಂದ ಸುತ್ತಿತ್ತು. ಯೇಸು ಅವರಿಗೆ—ಅವನನ್ನು ಬಿಚ್ಚಿರಿ, ಹೋಗಲಿ ಎಂದು ಹೇಳಿದನು.” ಮಾರ್ಥ ಮತ್ತು ಮರಿಯಳ ಮುಖಗಳ ಮೇಲಿನ ಆಶ್ಚರ್ಯ ಮತ್ತು ಆನಂದದ ನೋಟಗಳನ್ನು ನೀವು ಕಲ್ಪಿಸಿಕೊಳ್ಳಬಲ್ಲಿರೋ? ಈ ಅದ್ಭುತವನ್ನು ನೋಡಿದಾಗ ನೆರೆಯವರು ಎಷ್ಟು ಆಶ್ಚರ್ಯಚಕಿತರಾಗಿದ್ದಿರಬೇಕು! ಅನೇಕ ಪ್ರೇಕ್ಷಕರು ಯೇಸುವಿನಲ್ಲಿ ನಂಬಿಕೆಯನ್ನು ಇಟ್ಟಿರುವದು ಆಶ್ಚರ್ಯಕರವಲ್ಲ. ಅವನ ಧಾರ್ಮಿಕ ಶತ್ರುಗಳಾದರೋ, “ಆತನನ್ನು ಕೊಲ್ಲುವದಕ್ಕೆ ಆಲೋಚಿಸುತ್ತಿದ್ದರು.”—ಯೋಹಾನ 11:41-53.
14. ಲಾಜರನ ಪುನರುತ್ಥಾನವು ಯಾವುದರ ಒಂದು ಮುನ್ಸೂಚನೆಯಾಗಿತ್ತು?
14 ಆ ಮರೆಯಲಾರದ ಪುನರುತ್ಥಾನವನ್ನು ಯೇಸು ಹಲವಾರು ಪ್ರತ್ಯಕ್ಷಸಾಕ್ಷಿಗಳ ಮುಂದೆ ನಡೆಸಿದನು. ಹಿಂದೆ ಒಂದು ಸಂದರ್ಭದಲ್ಲಿ ಅವನು ಮುಂತಿಳಿಸಿದ್ದ ಭವಿಷ್ಯದ ಪುನರುತ್ಥಾನವೊಂದರ ಒಂದು ಮುನ್ಸೂಚನೆಯು ಅದಾಗಿತ್ತು. ಅವನು ಆಗ ಅಂದದ್ದು: “ಅದಕ್ಕೆ ಆಶ್ಚರ್ಯಪಡಬೇಡಿರಿ; ಸಮಾಧಿಗಳಲ್ಲಿರುವವರೆಲ್ಲರು [ದೇವರ ಮಗನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ. ಒಳ್ಳೇದನ್ನು ಮಾಡಿದವರಿಗೆ ಜೀವಕ್ಕಾಗಿ ಪುನರುತ್ಥಾನವಾಗುವದು; ಕೆಟ್ಟದ್ದನ್ನು ನಡಿಸಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವದು.”—ಯೋಹಾನ 5:28, 29.
15. ಯೇಸುವಿನ ಪುನರುತ್ಥಾನದ ಕುರಿತಾಗಿ ಪೌಲನಿಗೆ ಮತ್ತು ಅನನೀಯನಿಗೆ ಯಾವ ಸಾಕ್ಷ್ಯವಿತ್ತು?
15 ಈ ಮುಂಚೆ ತಿಳಿಸಲ್ಪಟ್ಟಂತೆ, ಅಪೊಸ್ತಲ ಪೌಲನು ಪುನರುತ್ಥಾನದಲ್ಲಿ ನಂಬಿಕೆಯಿರಿಸಿದ್ದನು. ಯಾವ ಆಧಾರದ ಮೇಲೆ? ಅವನು ಈ ಮುಂಚೆ, ಕ್ರೈಸ್ತರ ಹಿಂಸಕನಾದ, ನೀಚ ಸೌಲನಾಗಿದ್ದನು. ಅವನ ಹೆಸರು ಮತ್ತು ಖ್ಯಾತಿಯು ವಿಶ್ವಾಸಿಗಳ ನಡುವೆ ಭಯವನ್ನು ಹುಟ್ಟಿಸಿತು. ಎಷ್ಟೆಂದರೂ, ಕ್ರೈಸ್ತ ಹುತಾತ್ಮನಾದ ಸೆಫ್ತನನನ್ನು ಕಲ್ಲೆಸೆದು ಕೊಲ್ಲುವದನ್ನು ಸಮ್ಮತಿಸಿದವನು ಅವನೇ ಆಗಿದ್ದನಲ್ಲವೋ? (ಅ. ಕೃತ್ಯಗಳು 8:1; 9:1, 2, 26) ಆದರೂ, ದಮಸ್ಕಕ್ಕೆ ಹೋಗುವ ದಾರಿಯಲ್ಲಿ, ಅವನನ್ನು ತಾತ್ಕಾಲಿಕ ಕುರುಡುತನದಿಂದ ಬಾಧಿಸುವ ಮೂಲಕ, ಪುನರುತಿತ್ಥ ಕ್ರಿಸ್ತನು ಸೌಲನಿಗೆ ಬುದ್ಧಿ ಕಲಿಸಿದನು. ಒಂದು ವಾಣಿಯು ಅವನಿಗೆ ಹೀಗೆ ಹೇಳುವದನ್ನು ಸೌಲನು ಕೇಳಿದನು: “ಸೌಲನೇ, ಸೌಲನೇ, ನನ್ನನ್ನು ಯಾಕೆ ಹಿಂಸೆಪಡಿಸುತ್ತೀ . . . ಅವನು—ಕರ್ತನೇ, ನೀನಾರು ಎಂದು ಕೇಳಿದ್ದಕ್ಕೆ ಕರ್ತನು—ನೀನು ಹಿಂಸೆಪಡಿಸುವ ಯೇಸುವೇ ನಾನು.” ಅದೇ ಪುನರುತಿತ್ಥ ಕ್ರಿಸ್ತನು ಅನಂತರ ದಮಸ್ಕದಲ್ಲಿ ಜೀವಿಸುತ್ತಿದ್ದ ಅನನೀಯನನ್ನು, ಪೌಲನು ಎಲ್ಲಿ ಪ್ರಾರ್ಥಿಸುತ್ತಿದ್ದನೊ ಆ ಮನೆಗೆ ಹೋಗಿ ಅವನ ದೃಷ್ಟಿಯನ್ನು ಪುನಃಸ್ಥಾಪಿಸಲು ಉಪದೇಶಿಸಿದನು. ಹೀಗೆ, ವೈಯಕ್ತಿಕ ಅನುಭವದಿಂದ, ಸೌಲ ಮತ್ತು ಅನನೀಯ ಇಬ್ಬರಿಗೂ ಪುನರುತ್ಥಾನದಲ್ಲಿ ನಂಬಲು ಯಥೇಷ್ಟ ಕಾರಣವಿತ್ತು.—ಅ. ಕೃತ್ಯಗಳು 9:4, 5, 10-12.
16, 17. (ಎ) ಮಾನವ ಆತ್ಮದ ಅಂತರ್ಗತ ಅಮರತ್ವದ ಗ್ರೀಕ್ ಚಿಂತನಾರೂಪವನ್ನು ಪೌಲನು ನಂಬಲಿಲ್ಲವೆಂದು ನಮಗೆ ಹೇಗೆ ತಿಳಿದಿದೆ? (ಬಿ) ಬೈಬಲ್ ಯಾವ ಸುದೃಢ ನಿರೀಕ್ಷೆಯನ್ನು ಕೊಡುತ್ತದೆ? (ಇಬ್ರಿಯ 6:17-20)
16 ಸೌಲನಾಗಿದ್ದ ಅಪೊಸ್ತಲ ಪೌಲನು, ಹಿಂಸಿಸಲ್ಪಟ್ಟ ಒಬ್ಬ ಕ್ರೈಸ್ತನಾಗಿ ದೇಶಾಧಿಪತಿಯಾದ ಫೇಲಿಕ್ಸನ ಮುಂದೆ ತರಲ್ಪಟ್ಟಾಗ ಹೇಗೆ ಉತ್ತರಿಸಿದನೆಂಬುದನ್ನು ಗಮನಿಸಿರಿ. ಅ. ಕೃತ್ಯಗಳು 24:15 ರಲ್ಲಿ ನಾವು ಓದುವುದು: “ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು . . . ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ.” ಯಾವುದೋ ಮಿಥ್ಯೆಯ ಮರಣೋತ್ತರ ಜೀವನ ಅಥವಾ ಅಧೋಲೋಕದೊಳಗೆ ದಾಟಿ ಹೋಗುತ್ತದೆಂದು ನಂಬಲಾಗುವ ಮಾನವ ಆತ್ಮದ ಅಂತರ್ಗತ ಅಮರತ್ವದ ಒಂದು ವಿಧರ್ಮಿ ಗ್ರೀಕ್ ಚಿಂತನಾರೂಪವನ್ನು ಪೌಲನು ನಂಬಿಲಿಲ್ಲವೆಂಬುದು ಸ್ಫುಟ. ಅವನು ಪುನರುತ್ಥಾನದಲ್ಲಿ ನಂಬಿದನು ಮತ್ತು ಅದರಲ್ಲಿ ನಂಬಿಕೆಯನ್ನು ಕಲಿಸಿದನು. ಅದು ಕೆಲವರಿಗೆ ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆತ್ಮ ಜೀವಿಗಳಾಗಿ ಅಮರ ಜೀವನದ ವರದಾನದ ಅರ್ಥದಲ್ಲಿರುವುದು ಮತ್ತು ಅಧಿಕಾಂಶ ಜನರಿಗೆ ಒಂದು ಪರಿಪೂರ್ಣ ಭೂಮಿಯ ಮೇಲೆ ಜೀವನಕ್ಕೆ ಹಿಂದಿರುಗುವ ಅರ್ಥದಲ್ಲಿರುವುದು.—ಲೂಕ 23:43; 1 ಕೊರಿಂಥ 15:20-22, 53, 54; ಪ್ರಕಟನೆ 7:4, 9, 17; 14:1, 3.
17 ಹೀಗೆ, ಪುನರುತ್ಥಾನದ ಮೂಲಕ, ಅನೇಕರು ತಮ್ಮ ಪ್ರಿಯ ಜನರನ್ನು ಪುನಃ ಇಲ್ಲಿ ಭೂಮಿಯ ಮೇಲೆ, ಆದರೆ ತೀರ ವಿಭಿನ್ನ ಪರಿಸ್ಥಿತಿಗಳ ಕೆಳಗೆ ಕಾಣುವರೆಂಬ ಒಂದು ಸ್ಪಷ್ಟವಾಗಿದ ವಾಗ್ದಾನ ಮತ್ತು ಸುದೃಢ ನಿರೀಕ್ಷೆಯನ್ನು ಬೈಬಲ್ ನಮಗೆ ಕೊಡುತ್ತದೆ.—2 ಪೇತ್ರ 3:13; ಪ್ರಕಟನೆ 21:1-4.
ದುಃಖಿಸುವವರಿಗಾಗಿ ವ್ಯಾವಹಾರಿಕ ಸಹಾಯ
18. (ಎ) “ದಿವ್ಯ ಭಯ” ಅಧಿವೇಶನಗಳಲ್ಲಿ ಯಾವ ಸಹಾಯಕಾರಿ ಸಾಧನವು ಬಿಡುಗಡೆಗೊಳಿಸಲ್ಪಟ್ಟಿತು? (ರೇಖಾಚೌಕವನ್ನು ನೋಡಿರಿ.) (ಬಿ) ಯಾವ ಪ್ರಶ್ನೆಗಳು ಈಗ ಉತ್ತರಿಸಲ್ಪಡಬೇಕು?
18 ಈಗ ನಮಗೆ ನಮ್ಮ ನೆನಪುಗಳು ಮತ್ತು ನಮ್ಮ ದುಃಖವಿದೆ. ಈ ಪರೀಕ್ಷಾತ್ಮಕ ವಿಯೋಗಾವಸ್ಥೆಯ ಅವಧಿಯನ್ನು ಪಾರಾಗಲು ನಾವೇನು ಮಾಡಸಾಧ್ಯವಿದೆ? ದುಃಖಿಸುತ್ತಿರುವವರಿಗೆ ಸಹಾಯ ಮಾಡಲು ಇತರರು ಏನು ಮಾಡಸಾಧ್ಯವಿದೆ? ಇನ್ನೂ ಹೆಚ್ಚಾಗಿ, ನಮ್ಮ ಕ್ಷೇತ್ರ ಶುಶ್ರೂಷೆಯಲ್ಲಿ ನಾವು ಭೇಟಿಯಾಗುವ ನಿಜವಾದ ನಿರೀಕ್ಷೆಯಿಲ್ಲದ ಮತ್ತು ದುಃಖಿಸುತ್ತಿರುವ ಪ್ರಾಮಾಣಿಕ ಜನರಿಗೆ ಸಹಾಯ ಮಾಡಲು ನಾವು ಏನು ಮಾಡಬಲ್ಲೆವು? ಮತ್ತು ಮರಣದಲ್ಲಿ ನಿದ್ರೆಹೋಗಿರುವ ನಮ್ಮ ಪ್ರಿಯ ಜನರ ವಿಷಯದಲ್ಲಿ ನಾವು ಬೈಬಲಿನಿಂದ ಇನ್ನೂ ಹೆಚ್ಚಿನ ಯಾವ ಸಾಂತ್ವನವನ್ನು ಪಡೆಯಬಲ್ಲೆವು? ಮುಂದಿನ ಲೇಖನವು ಕೆಲವು ಸಲಹೆಗಳನ್ನು ನೀಡುವುದು.
[ಅಧ್ಯಯನ ಪ್ರಶ್ನೆಗಳು]
a ಬೈಬಲ್ ಸಂಬಂಧಿತ ಕಾಲಗಳಲ್ಲಿ ಶೋಕದ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇಂಕ್., ಇವರಿಂದ ಪ್ರಕಾಶಿತವಾದ ಶಾಸ್ತ್ರಗಳ ಒಳನೋಟ (ಇಂಗ್ಲಿಷ್), ಸಂಪುಟ 2, ಪುಟಗಳು 446-7ನ್ನು ನೋಡಿರಿ.
b ಬೈಬಲಿನಲ್ಲಿ ಕಂಡುಬರುವ ಪುನರುತ್ಥಾನದ ನಿರೀಕ್ಷೆಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಶಾಸ್ತ್ರಗಳ ಒಳನೋಟ (ಇಂಗ್ಲಿಷ್), ಸಂಪುಟ 2, ಪುಟಗಳು 783-93ನ್ನು ನೋಡಿರಿ.
ನೀವು ಉತ್ತರಿಸಬಲ್ಲಿರೋ?
◻ ಮರಣವು ಒಂದು ಶತ್ರುವಾಗಿದೆಯೆಂದು ಏಕೆ ಹೇಳಸಾಧ್ಯವಿದೆ?
◻ ಬೈಬಲ್ ಸಮಯಗಳಲ್ಲಿ ದೇವರ ಸೇವಕರು ತಮ್ಮ ದುಃಖವನ್ನು ಹೇಗೆ ತೋರಿಸಿದರು?
◻ ಸತ್ತ ಪ್ರಿಯ ಜನರಿಗೆ ಯಾವ ನಿರೀಕ್ಷೆಯಿದೆ?
◻ ಪುನರುತ್ಥಾನದಲ್ಲಿ ನಂಬಿಕೆಯಿಡಲು ಪೌಲನಿಗೆ ಯಾವ ಆಧಾರವಿತ್ತು?
[ಪುಟ 8,9ರಲ್ಲಿರುವಚೌಕ]
ದುಃಖಿಸುವವರಿಗಾಗಿ ವ್ಯಾವಹಾರಿಕ ಸಹಾಯ
1994-95 ರಲ್ಲಿ “ದಿವ್ಯ ಭಯ” ಅಧಿವೇಶನಗಳಲ್ಲಿ ವಾಚ್ ಟವರ್ ಸೊಸೈಟಿಯು “ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ” ಎಂಬ ಶಿರೋನಾಮವಿರುವ ಹೊಸ ಬ್ರೋಷರಿನ ಬಿಡುಗಡೆಯನ್ನು ಘೋಷಿಸಿತು. ಈ ಪ್ರೋತ್ಸಾಹದಾಯಕ ಪ್ರಕಾಶನವು ಎಲ್ಲಾ ರಾಷ್ಟ್ರಗಳ ಮತ್ತು ಭಾಷೆಗಳ ಜನರಿಗೆ ಸಾಂತ್ವನವನ್ನು ತರುವಂತೆ ರಚಿಸಲ್ಪಟ್ಟಿದೆ. ನೀವು ಪ್ರಾಯಶಃ ಈಗಾಗಲೇ ನೋಡಿರುವಂತೆ, ಅದು ಮರಣ ಮತ್ತು ಸತ್ತವರ ಸ್ಥಿತಿಯ ಕುರಿತಾಗಿ ಬೈಬಲಿನ ಸರಳ ವಿವರಣೆಯನ್ನು ಸಾದರಪಡಿಸುತ್ತದೆ. ಇನ್ನೂ ಹೆಚ್ಚು ಪ್ರಾಮುಖ್ಯವಾಗಿ ಅದು, ಕ್ರಿಸ್ತ ಯೇಸುವಿನ ಮೂಲಕ, ಒಂದು ಶುಚೀಕರಿಸಲ್ಪಟ್ಟ ಪ್ರಮೋದವನ ಭೂಮಿಯ ಮೇಲೆ ಜೀವಿತಕ್ಕೆ ಪುನರುತ್ಥಾನವೊಂದರ ದೇವರ ವಾಗ್ದಾನವನ್ನು ಎತ್ತಿಹೇಳುತ್ತದೆ. ಅದು ಶೋಕಿಸುವವರಿಗೆ ನಿಜವಾಗಿ ಸಾಂತ್ವನವನ್ನು ತರುತ್ತದೆ. ಆದುದರಿಂದ, ಅದು ಕ್ರೈಸ್ತ ಶುಶ್ರೂಷೆಯಲ್ಲಿ ಒಂದು ಸಹಾಯಕಾರಿಯಾದ ಸಾಧನವಾಗಿರಬೇಕು ಮತ್ತು ಆಸಕ್ತಿಯನ್ನು ಕೆರಳಿಸುವಂತೆ ಕಾರ್ಯನಡಿಸಬೇಕು, ಹೀಗೆ ಇನ್ನೂ ಹೆಚ್ಚಿನ ಮನೆ ಬೈಬಲ್ ಅಧ್ಯಯನಗಳಲ್ಲಿ ಫಲಿಸಬೇಕು. ಯಾವನೇ ಪ್ರಾಮಾಣಿಕ, ಶೋಕಿಸುತ್ತಿರುವ ವ್ಯಕ್ತಿಯೊಂದಿಗೆ ಆವರಿಸಲ್ಪಟ್ಟ ಅಂಶಗಳ ಒಂದು ಸುಲಭವಾದ ಪುನರ್ವಿಮರ್ಶೆಯನ್ನು ಮಾಡಸಾಧ್ಯವಾಗುವಂತೆ, ಅಧ್ಯಯನಕ್ಕಾಗಿ ಪ್ರಶ್ನೆಗಳು ಪ್ರತಿಯೊಂದು ವಿಭಾಗದ ಕೊನೆಯಲ್ಲಿ ಚೌಕ ಪೆಟ್ಟಿಗೆಗಳಲ್ಲಿ ವಿವೇಚನೆಯಿಂದ ಇಡಲ್ಪಟ್ಟಿವೆ.
[ಪುಟ 8 ರಲ್ಲಿರುವ ಚಿತ್ರ]
ಲಾಜರನು ಸತ್ತಾಗ, ಯೇಸು ಅತನ್ತು
[ಪುಟ 9 ರಲ್ಲಿರುವ ಚಿತ್ರ]
ಯೇಸು ಲಾಜರನನ್ನು ಸತ್ತವರೊಳಗಿಂದ ಎಬ್ಬಿಸಿದನು
[ಪುಟ 7 ರಲ್ಲಿರುವ ಚಿತ್ರ ಕೃಪೆ]
First Mourning, by W. Bouguereau, from original glass plate in Photo-Drama of Creation, 1914