ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್ಗಳು
ನವೆಂಬರ್ 5-11
ಬೈಬಲಿನಲ್ಲಿರುವ ರತ್ನಗಳು | ಯೋಹಾನ 20-21
“ನೀನು ಇವುಗಳಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತೀಯೊ?”
ಯೋಹಾ 21:15, 17ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ಯೇಸು ಸೀಮೋನ ಪೇತ್ರನಿಗೆ ಹೇಳಿದ್ದು: ಯೇಸು ಮತ್ತು ಪೇತ್ರನ ನಡುವಿನ ಈ ಸಂಭಾಷಣೆ, ಪೇತ್ರನು ಯೇಸುವನ್ನು ಮೂರು ಸಲ ಅಲ್ಲಗೆಳೆದ ನಂತರ ಸ್ಪಲ್ಪದರಲ್ಲೇ ನಡೆಯಿತು. ತನ್ನ ಕಡೆಗೆ ಪೇತ್ರನಿಗಿದ್ದ ಮನೋಭಾವವನ್ನು ತಿಳಿಯಲು ಯೇಸು ಕೇಳಿದ ಮೂರು ಪ್ರಶ್ನೆಗಳು ಪೇತ್ರನನ್ನು ತುಂಬ ‘ದುಃಖಪಡಿಸಿದವು.’ (ಯೋಹಾ 21:17) ಯೋಹಾ 21:15-17ರಲ್ಲಿರುವ ಯೋಹಾನನ ವೃತ್ತಾಂತವು ಇಲ್ಲಿ, ಅಗಪಾವೊ ಎರಡು ಫಿಲಿಯೋ ಎಂಬ ಎರಡು ವಿಭಿನ್ನವಾದ ಗ್ರೀಕ್ ಕ್ರಿಯಾಪದಗಳನ್ನು ಉಪಯೋಗಿಸಿದೆ. ಅವನ್ನು ಪ್ರೀತಿ ಮತ್ತು ಮಮತೆ ಇರಲಿ ಎಂದು ಭಾಷಾಂತರಿಸಲಾಗಿದೆ. ಯೇಸು ಪೇತ್ರನಿಗೆ ಎರಡು ಬಾರಿ “ನನ್ನನ್ನು ಪ್ರೀತಿಸುತ್ತಿಯೋ” ಎಂದು ಕೇಳಿದನು. ಎರಡು ಬಾರಿಯೂ ಪೇತ್ರನು “ನನಗೆ ನಿನ್ನ ಮೇಲೆ ಮಮತೆ ಇದೆ” ಎಂದು ಮನಃಪೂರ್ವಕವಾಗಿ ಹೇಳಿದನು. ಯೇಸು, “ನಿನಗೆ ನನ್ನ ಮೇಲೆ ಮಮತೆ ಇದೆಯಾ” ಎಂದು ಕೇಳಿದಾಗ ಪೇತ್ರನು ಪುನಃ ಮಮತೆ ಇದೆ ಎಂದು ಹೇಳಿದನು. ಪೇತ್ರನು ಪ್ರತಿ ಬಾರಿ ತನ್ನ ಮಮತೆಯನ್ನು ವ್ಯಕ್ತಪಡಿಸಿದಾಗ ತನ್ನ ಶಿಷ್ಯರನ್ನು ಆಧ್ಯಾತ್ಮಿಕವಾಗಿ ಮೇಯಿಸಿ, ‘ಪಾಲಿಸುವಂತೆ’ ಯೇಸು ಪ್ರಚೋದಿಸುತ್ತಿದ್ದನು. ಇಲ್ಲಿ ಶಿಷ್ಯರನ್ನು ಕುರಿಮರಿಗಳು ಅಥವಾ ‘ಚಿಕ್ಕಕುರಿಗಳು’ ಎಂದು ಸೂಚಿಸಲಾಗಿದೆ. (ಯೋಹಾ 21:16, 17; 1ಪೇತ್ರ 5:1-3) ಪೇತ್ರನು ತನ್ನ ಪ್ರೀತಿಯನ್ನು ಮೂರು ಬಾರಿ ದೃಢಪಡಿಸಲು ಯೇಸು ಅವಕಾಶ ಕೊಟ್ಟು, ನಂತರ ತನ್ನ ಕುರಿಗಳನ್ನು ಪರಿಪಾಲಿಸುವ ಜವಾಬ್ದಾರಿಯನ್ನು ಕೊಟ್ಟನು. ಹೀಗೆ ತನ್ನನ್ನು ಮೂರು ಬಾರಿ ಅಲ್ಲಗಳೆದದ್ದಕ್ಕಾಗಿ ಪೇತ್ರನನ್ನು ಸಂಪೂರ್ಣವಾಗಿ ಕ್ಷಮಿಸಿದ್ದೇನೆಂದು ತೋರಿಸಿಕೊಟ್ಟನು.
ನೀನು ಇವುಗಳಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಿಯೊ?: ವ್ಯಾಕರಣಕ್ಕನುಸಾರ, “ಇವುಗಳಿಗಿಂತ ಹೆಚ್ಚಾಗಿ” ಎಂಬ ಪದಗುಚ್ಛವನ್ನು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಅರ್ಥಮಾಡಬಹುದು. “ಈ ಬೇರೆ ಶಿಷ್ಯರನ್ನು ನೀನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಿಯಾ?” ಇಲ್ಲವೇ “ಈ ಶಿಷ್ಯರು ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುತ್ತಿಯಾ” ಎಂದು ಕೆಲವು ವಿದ್ವಾಂಸರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ಆದರೆ “ಇವುಗಳಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಿಯಾ” ಎಂಬ ವಾಕ್ಯದ ಸಂಭವನೀಯ ಅರ್ಥವು, ಪೇತ್ರನು ಹಿಡಿದಿದ್ದ ಮೀನುಗಳಿಗಿಂತ ಇಲ್ಲವೇ ಮೀನಿನ ವ್ಯಾಪಾರಕ್ಕೆ ಸಂಬಂಧಿಸಿದ ವಸ್ತುಗಳಿಗಿಂತ ಅವನು ಯೇಸುವನ್ನು ಪ್ರೀತಿಸುತ್ತಾನಾ ಎಂದಾಗಿದೆ. ಹೀಗೆ ಈ ವಚನದ ಒಟ್ಟಾರ್ಥ “ಪ್ರಾಪಂಚಿಕ ವಸ್ತುಗಳಿಗಿಂತ ಅಥವಾ ಕೆಲಸಗಳಿಗಿಂತ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುವುದಾದರೆ ಈ ನನ್ನ ಕುರಿಗಳನ್ನು ಮೇಯಿಸು” ಎಂದಾಗಿದೆ. ಪೇತ್ರನ ಜೀವನದ ಹಿನ್ನೆಲೆಯ ಪ್ರಕಾರ ಈ ಪ್ರಶ್ನೆ ಸಮಂಜಸವಾಗಿದೆ. ಪೇತ್ರನು ಯೇಸುವಿನ ಮೊದಲ ಶಿಷ್ಯರಲ್ಲಿ ಒಬ್ಬನಾಗಿದ್ದರೂ (ಯೋಹಾ 1:35-42) ಅವನು ಯೇಸುವನ್ನು ಸಂಪೂರ್ಣವಾಗಿ ಹಿಂಬಾಲಿಸಲಿಲ್ಲ. ಅವನು ಮೀನು ಹಿಡಿಯುವ ತನ್ನ ಕೆಲಸಕ್ಕೆ ಹಿಂತಿರುಗಿ ಹೋದನು. ಕೆಲವು ತಿಂಗಳುಗಳ ನಂತರ ಯೇಸು ಅವನನ್ನು ಆ ವ್ಯಾಪಾರದಿಂದ ಕರೆದು “ಮನುಷ್ಯರನ್ನು ಹಿಡಿಯುವ ಬೆಸ್ತನಾಗುವಂತೆ” ಮಾಡಿದನು. (ಮತ್ತಾ 4:18-20; ಲೂಕ 5:1-11) ಯೇಸುವಿನ ಮರಣದ ನಂತರ ಪೇತ್ರನು ಪುನಃ ತಾನು ಮೀನು ಹಿಡಿಯುವ ಕೆಲಸಕ್ಕೆ ಹೋಗುತ್ತೇನೆಂದು ಹೇಳಿದನು ಮತ್ತು ಬೇರೆ ಅಪೊಸ್ತಲರೂ ಅವನೊಂದಿಗೆ ಹೊರಟರು. (ಯೋಹಾ 21:2, 3) ಹಾಗಾಗಿ ಪೇತ್ರನು ಇಲ್ಲಿ ಒಂದು ನಿರ್ಣಾಯಕ ಆಯ್ಕೆ ಮಾಡುವ ಅಗತ್ಯವನ್ನು ಯೇಸು ಒತ್ತಿಹೇಳುತ್ತಿದ್ದನು. ಅವನ ಮುಂದೆಯೇ ರಾಶಿ ಬಿದ್ದಿದ್ದ ಮೀನುಗಳ ವ್ಯಾಪಾರಕ್ಕೆ ಪ್ರಾಮುಖ್ಯತೆ ಕೊಡುತ್ತಾನಾ? ಅಥವಾ ಯೇಸುವಿನ ಕುರಿಗಳಾದ ಶಿಷ್ಯರಿಗೆ ಆಧ್ಯಾತ್ಮಿಕವಾಗಿ ಉಣಿಸುವ ಕೆಲಸಕ್ಕೆ ಪ್ರಥಮ ಸ್ಥಾನವನ್ನು ಕೊಡುವನೋ?—ಯೋಹಾ 21:4-8.
ಮೂರನೆಯ ಬಾರಿ: ಪೇತ್ರನು ತನ್ನ ಕರ್ತನನ್ನು ಮೂರು ಬಾರಿ ಅಲ್ಲಗಳೆದಿದ್ದನು. ಯೇಸು ಈಗ ತನ್ನ ಭಾವನೆಗಳನ್ನು ಸ್ಪಷ್ಟವಾಗಿ ತಿಳಿಸಲು ಅವನಿಗೆ ಮೂರು ಅವಕಾಶಗಳನ್ನು ಕೊಟ್ಟನು. ಪೇತ್ರನು ಸ್ಪಷ್ಟಪಡಿಸಿದಾಗ, ಪವಿತ್ರ ಸೇವೆಯನ್ನು ಎಲ್ಲಾದಕ್ಕಿಂತ ಪ್ರಥಮವಾಗಿಡುವ ಮೂಲಕ ಆ ಪ್ರೀತಿ ಮತ್ತು ಮಮತೆಯನ್ನು ತೋರಿಸುವಂತೆ ಯೇಸು ಹೇಳಿದನು. ಪೇತ್ರನು ಇತರ ಜವಬ್ದಾರಿಯುತ ಸಹೋದರರೊಂದಿಗೆ ಸೇರಿ ಕ್ರಿಸ್ತನ ನಂಬಿಗಸ್ತ ಹಿಂಬಾಲಕರ ಮಂದೆಯನ್ನು ಉಣಿಸಿ, ಬಲಪಡಿಸಿ, ಪಾಲಿಸುವನು. ಅವರು ಅಭಿಷಿಕ್ತರಾಗಿದ್ದರೂ ಅವರಿಗೆ ಆಧ್ಯಾತ್ಮಿಕವಾಗಿ ಉಣಿಸುವ ಅಗತ್ಯವು ಇನ್ನೂ ಇತ್ತು.—ಲೂಕ 22:32.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಯೋಹಾ 20:17ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ನನ್ನನ್ನು ಅಪ್ಪಿಕೊಳ್ಳುವುದನ್ನು ನಿಲ್ಲಿಸು: ಹೆಪ್ಟೋಮಾಯ್ ಎಂಬ ಗ್ರೀಕ್ ಕ್ರಿಯಾಪದಕ್ಕೆ “ಮುಟ್ಟುವುದನ್ನು” ಅಥವಾ ಅಪ್ಪಿಕೊಳ್ಳುವುದು ಅಥವಾ ಅಂಟಿಕೊಳ್ಳುವುದು ಎಂಬರ್ಥವಿದೆ. ಕೆಲವು ಭಾಷಾಂತರಗಳು ಯೇಸುವಿನ ಈ ಮಾತುಗಳನ್ನು “ನನ್ನನ್ನು ಮುಟ್ಟಬೇಡ” ಎಂದು ಭಾಷಾಂತರಿಸಿವೆ. ಆದರೆ ಮಗ್ದಲದ ಮರಿಯಳಿಗೆ ಯೇಸು ಇಲ್ಲಿ ನನ್ನನ್ನು ಮುಟ್ಟಬೇಡ ಎಂದು ಆಕ್ಷೇಪಿಸುತ್ತಿಲ್ಲ. ಅದರಲ್ಲೂ ಪುನರುತ್ಥಾನವಾದ ಮೇಲೆ ಅವನನ್ನು ನೋಡಿದ ಇತರ ಸ್ತ್ರೀಯರು ಅವನ “ಪಾದಗಳನ್ನು ಹಿಡಿದಾಗ” ಅವನು ಆಕ್ಷೇಪವೆತ್ತಿರಲಿಲ್ಲ. (ಮತ್ತಾ 28:9) ಯೇಸು ಬೇಗನೆ ಸ್ವರ್ಗಕ್ಕೆ ಏರಿಹೋಗಲಿದ್ದಾನೆ ಎಂದು ಮಗ್ದಲದ ಮರಿಯಳು ಭಯಪಟ್ಟಳೆಂದು ತೋರುತ್ತದೆ. ತಾನು ತನ್ನ ಸ್ವಾಮಿಯೊಂದಿಗೆ ಇರಬೇಕು ಎಂಬ ಬಲವಾದ ಇಚ್ಛೆಯ ಕಾರಣ ಅವಳು ಅವನನ್ನು ಬಿಗಿಯಾಗಿ ಹಿಡಿದಿದ್ದಳು. ಆಗ ತಾನು ಅವಳನ್ನು ಬಿಟ್ಟುಹೋಗುತ್ತಿಲ್ಲ ಎಂದು ಮರಿಯಳಿಗೆ ಅರ್ಥಮಾಡಿಸಲು “ನನ್ನನ್ನು ಅಪ್ಪಿಕೊಳ್ಳುವುದನ್ನು ನಿಲ್ಲಿಸು” ಮತ್ತು ಹೋಗಿ ಪುನರುತ್ಥಾನದ ಬಗ್ಗೆ ಶಿಷ್ಯರಿಗೆ ತಿಳಿಸು ಎಂದು ಯೇಸು ಹೇಳಿದನು.
ಯೋಹಾ 20:28ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ನನ್ನ ಕರ್ತನೇ, ನನ್ನ ದೇವರೇ!: ಅಕ್ಷರಶಃ “ನನ್ನ ಕರ್ತನು ಮತ್ತು ನನ್ನ ದೇವರು [ಹೊಥಿಯೋಸ್]. ಕೆಲವು ವಿದ್ವಾಂಸರು ಈ ಮಾತುಗಳನ್ನು ತೋಮನು ಯೇಸುವಿಗೆ ಆಶ್ಚರ್ಯದಿಂದ ನುಡಿದ ಉದ್ಗಾರವೆಂದು ಪರಿಗಣಿಸುವುದಾದರೂ ಅದು ನಿಜವಾಗಿ ಯೇಸುವಿನ ತಂದೆಯಾದ ದೇವರಿಗೆ ಸಂಬೋಧಿಸಿದ್ದೆಂದು ಅಭಿಪ್ರಯಿಸುತ್ತಾರೆ. ಇತರರು ಮೂಲ ಗ್ರೀಕ್ ಭಾಷೆಗನುಸಾರ ಇದು ಯೇಸುವಿಗೇ ಸಂಭೋಧಿಸಲ್ಪಟ್ಟದ್ದು ಎಂದು ವಾದಿಸುತ್ತಾರೆ. ಒಂದೇ ವೇಳೆ ಇದೇ ನಿಜವಾದರೆ, “ನನ್ನ ಕರ್ತನೇ, ನನ್ನ ದೇವರೇ,” ಎಂಬ ಮಾತುಗಳ ಒಳಾರ್ಥವೇನಾಗಿದೆಯೆಂದು ಬೈಬಲಿನ ಉಳಿದ ಪೂರ್ವಾಪರ ವಚನಗಳಿಂದ ಚೆನ್ನಾಗಿ ತಿಳಿದು ಬರುತ್ತದೆ. ಯೇಸು ಈ ಮೊದಲೇ ತನ್ನ ಶಿಷ್ಯರಿಗೆ, “ನಾನು ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ಏರಿಹೋಗಲಿದ್ದೇನೆ” ಎಂದು ಹೇಳಿದ್ದನು. ಹಾಗಾಗಿ ಯೇಸು ಸರ್ವಶಕ್ತನಾದ ದೇವರೆಂದು ತೋಮನು ನೆನಸಿದನೆಂದು ನಂಬಲು ಕಾರಣವೇ ಇರುವುದಿಲ್ಲ. (ಯೋಹಾ 20:17ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.) ಯೇಸು ತನ್ನ ತಂದೆಯನ್ನು ಪ್ರಾರ್ಥನೆಯಲ್ಲಿ “ಒಬ್ಬನೇ ಸತ್ಯದೇವರು” ಎಂದು ಕರೆದಿದ್ದನ್ನು ತೋಮ ಕೇಳಿಸಿಕೊಂಡಿದ್ದನು. (ಯೋಹಾ 17:1-3) ಹಾಗಾಗಿ ತೋಮನು ಯೇಸುವನ್ನು “ನನ್ನ ದೇವರೇ” ಎಂದು ಕರೆದದ್ದು ಈ ಕಾರಣಗಳಿಗಾಗಿ ಇದ್ದಿರಬಹುದು, ಅವನು ಯೇಸುವನ್ನು “ಒಬ್ಬ ದೇವನು” ಎಂದು ಸೂಚಿಸಿದನು, ಸರ್ವಶಕ್ತ ದೇವರು ಎಂದಲ್ಲ. (ಯೋಹಾ 1:1ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.) ಅಥವಾ ಹೀಬ್ರೂ ಶಾಸ್ತ್ರದಲ್ಲಿ ದಾಖಲೆಯಾಗಿರುವಂತೆ, ನಂಬಿಗಸ್ತ ಸೇವಕರು ಯೆಹೋವನ ದೇವದೂತರನ್ನು ಸಂಭೋದಿಸಿದ್ದ ಹಾಗೆಯೇ ಅವನೂ ಕರೆದಿರಬೇಕು. ವ್ಯಕ್ತಿಗಳು ಅಥವಾ ಕೆಲವೊಮ್ಮೆ ವೃತ್ತಾಂತ ಬರೆದ ಬೈಬಲ್ ಲೇಖಕರು ಸಂದೇಶವಾಹಕ ದೇವದೂತರನ್ನು ಯೆಹೋವ ದೇವರೇ ಮಾತಾಡುತ್ತಿದ್ದಾನೆ ಎಂಬಂತೆ ಸೂಚಿಸಿರುವ ವಿಷಯಗಳು ತೋಮನಿಗೆ ತಿಳಿದಿದ್ದಿರಬಹುದು. (ಹೋಲಿಸಿ ಆದಿ 16:7-11, 13; 18:1-5, 22-33; 32:24-30; ನ್ಯಾಯ 6:11-15; 13:20-22) ಆದಕಾರಣ ತೋಮನು ಯೇಸುವನ್ನು ಸತ್ಯದೇವರ ಪ್ರತಿನಿಧಿ ಮತ್ತು ವಕ್ತಾರ ಎಂಬರ್ಥದಲ್ಲಿ “ನನ್ನ ದೇವರೇ” ಎಂದು ಕರೆದಿರಬೇಕು.
ಕೆಲವರು “ಕರ್ತ” ಮತ್ತು “ದೇವ” ಎಂಬ ಶಬ್ದಗಳ ಮುಂಚೆ ಬಳಸಿರುವ ಗ್ರೀಕ್ ಖಚಿತವಾದ ನಿರ್ದೇಶಕ ಗುಣವಾಚಿ ಸರ್ವಶಕ್ತ ದೇವರಿಗೆ ಸೂಚಿಸುತ್ತದೆ ಎಂದು ವಾದಿಸುತ್ತಾರೆ. ಆದರೆ, ಈ ಪೂರ್ವಾಪರದಲ್ಲಿ ಆ ಗುಣವಾಚಿ ಕೇವಲ ಗ್ರೀಕ್ ವ್ಯಾಕರಣವನ್ನು ಸೂಚಿಸುತ್ತದೆ. ಖಚಿತ ನಿರ್ದೇಶಕ ಗುಣವಾಚಿ ಇರುವ ಸಂಬೋಧನಾ ವಿಭಕ್ತಿಯ ನಾಮಪದವನ್ನು ಗ್ರೀಕ್ನಲ್ಲಿ ವ್ಯಾಕರಣ ಪದ್ಧತಿಯಾಗಿ ಬಳಸಲಾಗುತ್ತದೆ. ಇದನ್ನು ಲೂಕ 12:32 (ಅಕ್ಷರಶಃ “ಚಿಕ್ಕ ಹಿಂಡು”) ಮತ್ತು ಕೊಲೊ 3:18–4:1 (ಅಕ್ಷರಶಃ “ಹೆಂಡತಿಯರು”; “ಗಂಡಂದಿರು”; “ಮಕ್ಕಳು”; “ತಂದೆಗಳು”; “ದಾಸರು”; “ಯಜಮಾನರು”) ವಚನಗಳ ಅಕ್ಷರಶಃ ಭಾಷಾಂತರಗಳಿಂದ ದೃಷ್ಟಾಂತಿಸಬಹುದು. ತದ್ರೀತಿಯಲ್ಲಿ 1 ಪೇತ್ರ 3:7ರ ಅಕ್ಷರಶಃ ಭಾಷಾಂತರ ಇಂಗ್ಲಿಷ್ನಲ್ಲಿ ಖಚಿತ ಗುಣವಾಚಿಯೊಂದಿಗೆ “ಗಂಡಂದಿರೇ” ಎಂದು ತಿಳಿಸುತ್ತದೆ. ಆದುದರಿಂದ ತೋಮನು ಹಾಗೆ ಹೇಳಿದಾಗ ಅವನ ಮನಸ್ಸಿನಲ್ಲಿ ಏನಿತ್ತು ಎಂಬುದನ್ನು ನಿರ್ಣಯಿಸುವುದಕ್ಕೆ ಗುಣವಾಚಿಯ ಬಳಕೆ ಇಲ್ಲಿ ಪ್ರಾಮುಖ್ಯವಾಗಿರಲಿಕ್ಕಿಲ್ಲ.
ನವೆಂಬರ್ 12-18
ಬೈಬಲಿನಲ್ಲಿರುವ ರತ್ನಗಳು | ಅಪೊಸ್ತಲರ ಕಾರ್ಯಗಳು 1-3
“ಕ್ರೈಸ್ತ ಸಭೆಯ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟಿತು”
w86 12/1 29 ¶4-5, 7
ಹೃದಯವನ್ನು ಸಂತೋಷ ಪಡಿಸುವ ಕಾಣಿಕೆಗಳು
ಕ್ರಿ.ಶ. 33ರಲ್ಲಿ ಕ್ರೈಸ್ತ ಸಭೆಯು ಹುಟ್ಟಿದ ಮೊದಲನೆ ದಿನದಂದು ಹೊಸತಾಗಿ ದೀಕ್ಷಾಸ್ನಾನ ಪಡೆದ 3000 ಮಂದಿ ಮತಾಂತರಿಗಳು ‘ಪರಸ್ಪರವಾಗಿ ಹಂಚಿಕೊಳ್ಳುವುದನ್ನು, ಭೋಜನಗಳನ್ನು ಸೇವಿಸುವುದನ್ನು ಮತ್ತು ಪ್ರಾರ್ಥನೆಗಳನ್ನು’ ನಡಿಸುತ್ತಿದ್ದರು. ಯಾವ ಕಾರಣಕ್ಕಾಗಿ? ಯಾಕೆಂದರೆ “ಅಪೊಸ್ತಲರ ಬೋಧನೆಗೆ ತಮ್ಮನ್ನು ಮೀಸಲಿಡುವ ಮೂಲಕ ತಮ್ಮ ಹೊಸ ನಂಬಿಕೆಯನ್ನು ಬಲಪಡಿಸಿಕೊಳ್ಳಲಿಕ್ಕಾಗಿಯೇ.—ಅಪೊಸ್ತಲರ ಕಾರ್ಯಗಳು 2:41, 42.
ಯೆಹೂದ್ಯರು ಮತ್ತು ಯೆಹೂದಿ ಮತಾವಲಂಬಿಗಳು ಪಂಚಾಶತ್ತಮ ಹಬ್ಬಕ್ಕಾಗಿ ಮಾತ್ರವೇ ಯೆರೂಸಲೇಮಿನಲ್ಲಿ ಉಳುಕೊಳ್ಳಲು ಬಂದಿದ್ದರು. ಆದರೆ ಅವರು ಕ್ರೈಸ್ತರಾದಾಗ ಅಲ್ಲಿ ಹೆಚ್ಚು ಸಮಯ ಉಳುಕೊಂಡು ತಮ್ಮ ಹೊಸ ನಂಬಿಕೆಯನ್ನು ಬಲಗೊಳಿಸಲು ಮತ್ತು ಹೆಚ್ಚನ್ನು ಕಲಿಯಲು ಬಯಸಿದರು. ಹಾಗಾಗಿ ಅಲ್ಲಿ ಆಹಾರ ಮತ್ತು ವಸತಿಯ ಬಿಕ್ಕಟ್ಟು ತಲೆದೋರಿತು. ಕೆಲವರಲ್ಲಿ ಸಾಕಷ್ಟು ಹಣವಿರಲಿಲ್ಲ, ಇತರರಲ್ಲಿ ಹೆಚ್ಚುವರಿಯಿತ್ತು. ಆದ್ದರಿಂದ ಒಂದು ತಾತ್ಕಾಲಿಕ ನಿಧಿಯನ್ನು ಒಟ್ಟುಮಾಡಿ ಕೊರತೆಯಿದ್ದವರಿಗೆ ಆಹಾರ ವಸ್ತುಗಳನ್ನು ಹಂಚಲಾಯಿತು.—ಅಪೊಸ್ತಲರ ಕಾರ್ಯಗಳು 2:43-47.
ಜಮೀನಿನ ಮಾರಾಟ ಮತ್ತು ವಸ್ತುಗಳ ಹಂಚಿಕೊಳ್ಳುವಿಕೆಯು ಕಟ್ಟುನಿಟ್ಟಾಗಿ ಸ್ವಯಂ ಪ್ರೇರಿತವಾಗಿತ್ತು. ಮಾರಲು ಅಥವಾ ದಾನಮಾಡಲು ಯಾರಿಗೂ ಒತ್ತಾಯವಿರಲಿಲ್ಲ. ಇದು ಎಲ್ಲರನ್ನು ಬಡವರನ್ನಾಗಿ ಮಾಡಬೇಕೆಂಬ ಆಲೋಚನೆಯೂ ಆಗಿರಲಿಲ್ಲ. ಧನಿಕ ಸದಸ್ಯರು ತಮ್ಮ ಸ್ವತ್ತನ್ನೆಲ್ಲ ಮಾರಿ ಬಡವರಾಗಬೇಕೆಂದಲ್ಲ ಇಲ್ಲಿರುವ ವಿಷಯ. ಬದಲಿಗೆ, ಆ ಸಮಯದಲ್ಲಿ ಜೊತೆ ವಿಶ್ವಾಸಿಗಳ ಕೊರತೆಯನ್ನು ಕಂಡು ಕನಿಕರದಿಂದ ಅವರು ತಮ್ಮ ಆಸ್ತಿಯನ್ನು ಮಾರಿದರು ಮತ್ತು ಆ ಹಣವನ್ನೆಲ್ಲ ರಾಜ್ಯದ ಸೇವೆಗೆ ಕಾಣಿಕೆಯಾಗಿ ಕೊಟ್ಟರು.—ಹೋಲಿಸಿ 2 ಕೊರಿಂಥ 8:12-15.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-2 61 ¶1
ಯೇಸು ಕ್ರಿಸ್ತನು
“ಜೀವದ ಮುಖ್ಯ ನಿಯೋಗಿ.” ಕ್ರಿಸ್ತ ಯೇಸು ತನ್ನ ತಂದೆಯ ಅಪಾತ್ರ ದಯೆಯ ಅಭಿವ್ಯಕ್ತಿಯಾಗಿ ತನ್ನ ಪರಿಪೂರ್ಣ ಮಾನವ ಜೀವವನ್ನು ತ್ಯಾಗಮಾಡಿದನು. ಇದು ಕ್ರಿಸ್ತನು ಆರಿಸಿಕೊಂಡ ಹಿಂಬಾಲಕರನ್ನು ಅವನ ಸ್ವರ್ಗೀಯ ರಾಜ್ಯದಲ್ಲಿ ಆಳುವುದಕ್ಕಾಗಿ ಐಕ್ಯಗೊಳಿಸಿತು ಮತ್ತು ರಾಜ್ಯದ ಭೂಪ್ರಜೆಗಳು ಆ ರಾಜ್ಯದ ಆಳ್ವಕೆಯ ಪ್ರಜೆಗಳಾಗುವ ಅವಕಾಶ ನೀಡಿತು. (ಮತ್ತಾ 6:10; ಯೋಹಾ 3:16; ಎಫೆ 1:7; ಇಬ್ರಿ 2:5; RANSOM ನೋಡಿ.) ಅವನು ಈ ಮೂಲಕ ಸರ್ವ ಮಾನವ ಕುಲಕ್ಕೆ “ಜೀವದ ಮುಖ್ಯ ನಿಯೋಗಿ” ಆದನು. (ಅ. ಕಾ. 3:15) ಇಲ್ಲಿ ಬಳಸಿರುವ ಗ್ರೀಕ್ ಪದಕ್ಕೆ ಮೂಲಭೂತವಾಗಿ “ಮುಖ್ಯ ನಾಯಕ” ಎಂಬರ್ಥವಿದೆ. ಇದಕ್ಕೆ ಸಂಬಂಧಿತ ಪದವೊಂದನ್ನು ಇಸ್ರಾಯೇಲಿನ “ಪ್ರಭು” ಮೋಶೆಗೆ (ಅ. ಕಾ. 7:27, 35) ಅನ್ವಯಿಸಲಾಗಿದೆ.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
it-1 129¶2,3
ಯೂದನು ಅಪನಂಬಿಗಸ್ತನಾಗಿ ತೀರಿ ಹೋದ ನಂತರ ಯೇಸುವಿನ ಅಪೊಸ್ತಲರಲ್ಲಿ 11 ಮಂದಿ ಮಾತ್ರ ಉಳಿದರು. ಯೇಸು ಪುನರುತ್ಥಾನ ಹೊಂದಿ ನಲವತ್ತು ದಿನಗಳಾದ ನಂತರ ಸ್ವರ್ಗಕ್ಕೆ ಏರಿ ಹೋಗುವವರೆಗೂ ಯೂದನ ಬದಲಿಗೆ ಯಾರನ್ನೂ ಅಪೊಸ್ತಲರನ್ನಾಗಿ ಮಾಡಲಿಲ್ಲ. ಸ್ವರ್ಗಕ್ಕೆ ಹೋದ ಮೇಲೆ ಸುಮಾರು 10 ದಿನಗಳ ಸಮಯದಲ್ಲಿ ಮತ್ತು ಪಂಚಾಶತ್ತಮ ದಿನದಂದು ಯೂದನ ಸ್ಥಾನಕ್ಕೆ ಮತ್ತೊಬ್ಬನನ್ನು ಆಯ್ಕೆ ಮಾಡುವುದು ಅಗತ್ಯವೆಂಬಂತೆ ತೋರಿತು. ಇದಕ್ಕೆ ಕಾರಣ ಯೂದನು ಸತ್ತು ಹೋದನು ಎಂಬುದಲ್ಲ ಬದಲಿಗೆ ಪೇತ್ರನು ವಚನಗಳಲ್ಲಿ ಉಲ್ಲೇಖಿಸಿದಂತೆ ಅವನು ಪಾಪ ಮಾಡಿದ್ದರಿಂದ ಈ ಆಯ್ಕೆ ಮಾಡಬೇಕಾಯಿತು. (ಅಕಾ 1:15-22; ಕೀರ್ತ 69:25; 109:8; ಹೋಲಿಸಿ ಪ್ರಕ 3:11.) ಆದರೆ, ನಂಬಿಗಸ್ತ ಅಪೊಸ್ತಲ ಯಾಕೋಬನು ತೀರಿ ಹೋದಾಗ ಅವನ ಸ್ಥಾನಕ್ಕೆ ಬೇರೊಬ್ಬನನ್ನು ಆಯ್ಕೆ ಮಾಡಲಾಯಿತೆಂದು ಎಲ್ಲಿಯೂ ದಾಖಲೆ ಇಲ್ಲ.—ಅಕಾ 12:2.
ಯೇಸುವಿನ ಅಪೊಸ್ತಲನಾಗುವ ಅರ್ಹತೆ ಪಡೆಯುವವರು ಯೇಸುವಿನೊಂದಿಗೆ ವೈಯಕ್ತಿಕವಾಗಿ ಮಾತಾಡಿರಬೇಕು ಮತ್ತು ಯೇಸುವಿನ ಸೇವೆ, ಅದ್ಭುತಗಳು ಮತ್ತು ಪುನರುತ್ಥಾನಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿರಬೇಕೆಂದು ಪೇತ್ರನ ಹೇಳಿಕೆಗಳು ಸ್ಪಷ್ಟಪಡಿಸುತ್ತವೆ. ಅಂದರೆ, ಸ್ವಲ್ಪ ಸಮಯದಲ್ಲೇ ಅಪೊಸ್ತಲರಾಗಿ ನೇಮಕ ಪಡೆಯುವ ಸುಯೋಗ ಕೊನೆಯಾಗುತ್ತದೆಂದು ಈ ಅಂಶದ ಬಗ್ಗೆ ಯೋಚಿಸಿದರೆ ತಿಳಿದು ಬರುತ್ತದೆ. ಆಗಿನ ಕಾಲದಲ್ಲಿ ಸ್ವಲ್ಪ ಸಮಯದ ನಂತರ ದೇವರ ಶಕ್ತಿಯಿಂದ ಅದ್ಭುತ ನಡೆದ ಹೊರತು ಈ ಅಂಶಗಳು ಒಬ್ಬ ವ್ಯಕ್ತಿಯಲ್ಲಿ ನೆರವೇರಲು ಸಾಧ್ಯವಿರಲಿಲ್ಲ. ಪಂಚಾಶತ್ತಮ ದಿನಕ್ಕೆ ಸ್ವಲ್ಪ ಮುಂಚೆ ಈ ಅರ್ಹತೆಗಳನ್ನು ಗಳಿಸಿದ್ದ ಕೆಲವು ಪುರುಷರಿದ್ದರು. ಅಪನಂಬಿಗಸ್ತ ಯೂದನ ಸ್ಥಾನಕ್ಕೆ ಅರ್ಹತೆ ಇದ್ದ ಇಬ್ಬರು ವ್ಯಕ್ತಿಗಳನ್ನು ಪರಿಗಣಿಸಲಾಯಿತು. ಜ್ಞಾನೋಕ್ತಿ 16:33 ಅನ್ನು ಮನಸ್ಸಿನಲ್ಲಿಟ್ಟವರಾಗಿ, ಚೀಟುಗಳನ್ನು ಹಾಕಿದರು ಮತ್ತು ಅದು ಮತ್ತೀಯನಿಗೆ ಬಂತು. ಆಗ ‘ಅವನನ್ನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಲೆಕ್ಕಿಸಲಾಯಿತು.’ (ಅಕಾ 1:23-26) ಆದ್ದರಿಂದ ಗ್ರೀಕ್ ಮಾತಾಡುವ ಶಿಷ್ಯರ ಸಮಸ್ಯೆಯನ್ನು ಪರಿಹರಿಸುವಾಗ ಅವನನ್ನು ಸಹ ‘ಹನ್ನೆರಡು ಮಂದಿಯಲ್ಲಿ’ ಒಳಗೂಡಿಸಿಕೊಳ್ಳಲಾಯಿತು. (ಅಕಾ 6:1, 2) ಮತ್ತು ಯೇಸು ಪುನರುತ್ಥಾನವಾದ ನಂತರ ಕಾಣಿಸಿಕೊಂಡದ್ದರ ಬಗ್ಗೆ 1 ಕೊರಿಂಥ 15:4-8ರಲ್ಲಿ ಮಾತಾಡುವಾಗ ಪೌಲನು ಮತ್ತೀಯನನ್ನು ಆ ಹನ್ನೆರಡು ಮಂದಿಯಲ್ಲಿ ಸೇರಿಕೊಂಡನೆಂದು ಗೊತ್ತಾಗುತ್ತದೆ. ಆದ್ದರಿಂದಲೇ, ಪಂಶಾಶತ್ತಮ ಬಂದಾಗ ಆಧ್ಯಾತ್ಮಿಕ ಇಸ್ರಾಯೇಲನ್ನು ಆರಂಭಿಸಲು ಅಲ್ಲಿ 12 ಅಪೊಸ್ತಲರು ತಳಪಾಯದಂತಿದ್ದರು.
ನವೆಂಬರ್ 19-25
ಬೈಬಲಿನಲ್ಲಿರುವ ರತ್ನಗಳು | ಅಪೊಸ್ತಲರ ಕಾರ್ಯಗಳು 4-5
“ಅವರು ದೇವರ ವಾಕ್ಯವನ್ನು ಧೈರ್ಯದಿಂದ ಮಾತಾಡಿದರು”
w08 9/1 15, ಚೌಕ
ಬಾಯಿ ಮಾತುಗಳಿಂದ ಪವಿತ್ರ ಗ್ರಂಥಪಾಠಕ್ಕೆ—ಬರಹಗಳು ಮತ್ತು ಆರಂಭದ ಕ್ರೈಸ್ತರು
ಅಪೊಸ್ತಲರು ಅನಕ್ಷರಸ್ಥರಾಗಿದ್ದರೊ?
ಯೆರೂಸಲೇಮಿನ ಅಧಿಪತಿಗಳು ಮತ್ತು ಹಿರಿಯರು “ಪೇತ್ರ ಯೋಹಾನರು ಧೈರ್ಯದಿಂದ ಮಾತಾಡುವುದನ್ನು ಕಂಡು ಇವರು ಹೆಚ್ಚು ವಿದ್ಯಾಭ್ಯಾಸವಿಲ್ಲದ ಸಾಧಾರಣ ವ್ಯಕ್ತಿಗಳೆಂದು ತಿಳಿದು ಆಶ್ಚರ್ಯಪಟ್ಟರು.” (ಅ. ಕಾ. 4:13) ಅಪೊಸ್ತಲರು ನಿಜವಾಗಿ ಅಕ್ಷರ ಜ್ಞಾನವಿಲ್ಲದವರು ಅಥವಾ ಅನಕ್ಷರಸ್ಥರು ಆಗಿದ್ದರಾ? ಇದರ ಬಗ್ಗೆ ದ ನ್ಯೂ ಇಂಟರ್ ಪ್ರಿಟರ್ಸ್ ಬೈಬಲ್ ಹೇಳುವುದು; “ಪೇತ್ರ [ಮತ್ತು ಯೋಹಾನ]ರು ಓದುಬರಹ ಬಲ್ಲವರಲ್ಲ ಶಾಲೆಗೆ ಹೋದವರಲ್ಲ ಎಂದು ಈ ವಾಕ್ಯಗಳ ಅರ್ಥವಲ್ಲ. ಬದಲಿಗೆ ನ್ಯಾಯತೀರ್ಪು ಮಾಡುವ ಅಧಿಪತಿಗಳಿಗೆ ಹೋಲಿಸುವಾಗ ಅವರ ಮುಂದೆ ಇವರ ಸಾಮಾಜಿಕ ದರ್ಜೆಯ ಕೇವಲ ಅಂತರವನ್ನು ಅವು ತೋರಿಸುತ್ತವೆ.
it-1 128 ¶3
ಅಪೊಸ್ತಲ
ಕ್ರೈಸ್ತ ಸಭೆಯ ಚಟುವಟಿಕೆ: ಪಂಚಾಶತ್ತಮದಲ್ಲಿ ದೇವರ ಪವಿತ್ರಾತ್ಮದ ಸುರಿಸುವಿಕೆಯು ಅಪೊಸ್ತಲರನ್ನು ಬಹಳವಾಗಿ ಬಲಪಡಿಸಿತು. ಅಪೊಸ್ತಲರ ಕಾರ್ಯಗಳು ಪುಸ್ತಕದ ಮೊದಲ 5 ಅಧ್ಯಾಯಗಳು ಅಪೊಸ್ತಲರ ಅಪಾರ ಧೈರ್ಯ ಮತ್ತು ಎದೆಗಾರಿಕೆಗೆ ಸಾಕ್ಷಿ ನೀಡುತ್ತದೆ. ಸೆರೆವಾಸ, ಹೊಡೆತಗಳು, ಅಧಿಪತಿಗಳಿಂದ ಸಾವಿನ ಬೆದರಿಕೆಗಳು ಬಂದರೂ ಸುವಾರ್ತೆಯನ್ನು ಮತ್ತು ಕ್ರಿಸ್ತನ ಪುನರುತ್ಥಾನವನ್ನು ಘೋಷಿಸುವುದರಲ್ಲಿ ಅವರು ತೋರಿಸಿದ ಧೈರ್ಯ ಅಪಾರ. ಪಂಚಾಶತ್ತಮದ ನಂತರದ ದಿನಗಳಲ್ಲಿ ಪವಿತ್ರಾತ್ಮದ ಶಕ್ತಿಯಿಂದ ಅಪೊಸ್ತಲರು ಪ್ರಬಲವಾದ ಮುಂದಾಳುತ್ವ ವಹಿಸಿದರು. ಪರಿಣಾಮವಾಗಿ ಕ್ರೈಸ್ತ ಸಭೆಯಲ್ಲಿ ಆಶ್ಚರ್ಯಕರ ಅಭಿವೃದ್ಧಿ ಉಂಟಾಯಿತು. (ಅ. ಕಾ. 2:41; 4:4) ಮೊದಲಾಗಿ ಅವರ ಸೇವೆ ಯೆರೂಸಲೇಮಿನಲ್ಲಿ ಕೇಂದ್ರೀಕರಿಸಿದ್ದರೂ ಬಳಿಕ ಸಮಾರ್ಯಕ್ಕೆ ವಿಸ್ತಾರಗೊಂಡು, ಸಮಯಾನಂತರ ಆಗ ಪರಿಚಿತವಾಗಿದ್ದ ಲೋಕದಲ್ಲೆಲ್ಲಾ ಹರಡಿತು.—ಅ. ಕಾ. 5:42; 6:7; 8:5-17, 25; 1:8.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-1 514 ¶4
ಮೂಲೆಗಲ್ಲು
ಕಟ್ಟುವವರು ತ್ಯಜಿಸಿದ ಕಲ್ಲೇ “ಮುಖ್ಯವಾದ ಮೂಲೆಗಲ್ಲಾಯಿತು” (ಹಿಬ್ರೂ- ರೋಶ್ ಪಿನ್ಹಾ) ಎಂದು ಕೀರ್ತನೆ 118:22 ತಿಳಿಸುತ್ತದೆ. ಯೇಸು ಈ ಪ್ರವಾದನೆಯನ್ನು ಉಲ್ಲೇಖಿಸುತ್ತಾ ತಾನೇ ಆ “ಮುಖ್ಯ ಮೂಲೆಗಲ್ಲು” ಎಂದು ಅನ್ವಯಿಸಿಕೊಂಡನು. (ಗ್ರೀಕ್- ಕೆಫಾಲಿ- ಗೋ-ನಿಯಸ್) (ಮತ್ತಾ 21:42; ಮಾರ್ಕ 12:10, 11; ಲೂಕ 20:17) ಒಂದು ಕಟ್ಟಡದ ತುತ್ತತುದಿಯ ಕಲ್ಲು ಹೇಗೆ ಸುಲಭವಾಗಿ ಎದ್ದುಕಾಣುತ್ತದೊ ಹಾಗೆ ಯೇಸು ಕ್ರಿಸ್ತನು ಅಭಿಷಿಕ್ತರ ಕ್ರೈಸ್ತಸಭೆಯ ಮುಕುಟಪ್ರಾಯ ಕಲ್ಲು ಆಗಿರುತ್ತಾನೆ. ಆ ಸಭೆಯನ್ನು ಆಧ್ಯಾತ್ಮಿಕ ಆಲಯಕ್ಕೆ ಹೋಲಿಸಲಾಗಿದೆ. ಪೇತ್ರನು ಸಹ ಕೀರ್ತನೆ 118:22ನ್ನು ಕ್ರಿಸ್ತನಿಗೆ ಅನ್ವಯಿಸಿದನು. ಅವನೇ ಮನುಷ್ಯರು ತಿರಸ್ಕರಿಸಿದ “ಕಲ್ಲು,” ಆದರೆ ದೇವರಿಂದ ಆರಿಸಲ್ಪಟ್ಟ “ಮುಖ್ಯವಾದ ಮೂಲೆಗಲ್ಲಾದನು” ಎಂದು ಹೇಳಿದನು.—ಅ. ಕಾ. 4:8-12; ನೋಡಿ 1ಪೇತ್ರ 2:4-7.
ನವೆಂಬರ್ 26–ಡಿಸೆಂಬರ್ 2
ಬೈಬಲಿನಲ್ಲಿರುವ ರತ್ನಗಳು | ಅಪೊಸ್ತಲರ ಕಾರ್ಯಗಳು 6-8
“ಆವಶ್ಯಕ ಕೆಲಸ” ಮಾಡಲಿಕ್ಕಾಗಿ ಅರ್ಹ ಪುರುಷರು (ಅ. ಕಾರ್ಯಗಳು 6:1-6)
‘ಕೂಲಂಕಷ ಸಾಕ್ಷಿ’ ಅಧ್ಯಾಯ 5 ಪ್ಯಾರ 17
ಈ ನವಜಾತ ಸಭೆಗೆ ಈಗ ಒಳಗಿಂದಲೇ ಒಂದು ನವಿರಾದ ಅಪಾಯ ಎದುರಾಯಿತು. ಅದೇನಾಗಿತ್ತು? ದೀಕ್ಷಾಸ್ನಾನ ಪಡೆಯುತ್ತಿದ್ದವರಲ್ಲಿ ಅನೇಕರು ಬೇರೆ ದೇಶಗಳಿಂದ ಯೆರೂಸಲೇಮಿಗೆ ಬಂದವರಾಗಿದ್ದರು. ಇವರು ತಮ್ಮತಮ್ಮ ದೇಶಕ್ಕೆ ಹಿಂದಿರುಗುವ ಮುಂಚೆ ತಮ್ಮ ಹೊಸ ನಂಬಿಕೆಯ ಬಗ್ಗೆ ಹೆಚ್ಚು ಕಲಿಯಬೇಕೆಂದಿದ್ದರು. ಹೀಗೆ ಉಳುಕೊಂಡ ಇವರಿಗೆ ಆಹಾರ ಮತ್ತು ಬೇರೆ ಆವಶ್ಯ ಸಾಮಗ್ರಿಗಳನ್ನು ಒದಗಿಸಲು ಯೆರೂಸಲೇಮಿನ ಶಿಷ್ಯರು ಸಂತೋಷದಿಂದ ಹಣವನ್ನು ದಾನಮಾಡಿದರು. (ಅ. ಕಾ. 2:44-46; 4:34-37) ಈ ಸಮಯದಲ್ಲಿ ಒಂದು ನಾಜೂಕಾದ ಸಮಸ್ಯೆ ಹುಟ್ಟಿಕೊಂಡಿತು. ಗ್ರೀಕ್ ಭಾಷೆಯನ್ನಾಡುವ ವಿಧವೆಯರನ್ನು “ದೈನಂದಿನ ಆಹಾರದ ವಿತರಣೆಯಲ್ಲಿ ಅಲಕ್ಷಿಸಲಾಗುತ್ತಿತ್ತು.” (ಅ. ಕಾ. 6:1) ಆದರೆ ಹೀಬ್ರು ಭಾಷೆಯನ್ನಾಡುವ ವಿಧವೆಯರನ್ನು ಅಲಕ್ಷಿಸಲಾಗುತ್ತಿರಲಿಲ್ಲ. ಇಲ್ಲಿ ಸಮಸ್ಯೆ ಬೇಧಭಾವ ಆಗಿತ್ತೆಂದು ತೋರುತ್ತದೆ. ಬೇಧಭಾವವು ಸಭೆಯಲ್ಲಿ ಸುಲಭವಾಗಿ ಒಡಕುಗಳನ್ನು ಉಂಟುಮಾಡಬಲ್ಲದು.
‘ಕೂಲಂಕಷ ಸಾಕ್ಷಿ’ ಅಧ್ಯಾಯ 5 ಪ್ಯಾರ 18
ದೊಡ್ಡದಾಗುತ್ತಾ ಇದ್ದ ಕ್ರೈಸ್ತ ಸಭೆಯ ಆಡಳಿತ ಮಂಡಲಿಯಾಗಿ ಅಪೊಸ್ತಲರು ಕೆಲಸಮಾಡುತ್ತಿದ್ದರು. ಅವರು ‘ದೇವರ ವಾಕ್ಯ ಬೋಧಿಸುವುದನ್ನು ಬಿಟ್ಟು ಆಹಾರ ವಿತರಣೆಯಲ್ಲಿ ತೊಡಗುವುದು’ ವಿವೇಕಯುತವಲ್ಲ ಎಂದು ಗ್ರಹಿಸಿದರು. (ಅ. ಕಾ. 6:2) ಹಾಗಾಗಿ, ಈ ಸಮಸ್ಯೆಯನ್ನು ಬಗೆಹರಿಸಲು “ಪವಿತ್ರಾತ್ಮಭರಿತರೂ ವಿವೇಕಭರಿತರೂ” ಆದ ಏಳು ಮಂದಿ ಪುರುಷರನ್ನು ಹುಡುಕುವಂತೆ ಶಿಷ್ಯರಿಗೆ ನಿರ್ದೇಶನ ಕೊಟ್ಟರು. ಈ ಪುರುಷರನ್ನು ಅಪೊಸ್ತಲರು ಆಹಾರ ವಿತರಣೆಯ “ಆವಶ್ಯಕ ಕೆಲಸದ ಮೇಲೆ” ನೇಮಿಸಲಿದ್ದರು. (ಅ. ಕಾ. 6:3) ಈ ಕೆಲಸ ಮಾಡಲು ಅರ್ಹ ಪುರುಷರೇ ಬೇಕಾಗಿದ್ದರು ಯಾಕೆಂದರೆ ಇದರಲ್ಲಿ ಆಹಾರ ಬಡಿಸುವುದು ಮಾತ್ರವಲ್ಲ ಹಣ ನಿರ್ವಹಣೆ, ಸಾಮಗ್ರಿಗಳ ಖರೀದಿ ಮತ್ತು ದಾಖಲೆ ಬರೆದಿಡುವುದು ಸಹ ಸೇರಿತ್ತು. ಆರಿಸಲಾದ ಪುರುಷರೆಲ್ಲರಿಗೂ ಗ್ರೀಕ್ ಹೆಸರುಗಳಿದ್ದವು. ಇಂಥವರನ್ನು ಆರಿಸಿಕೊಂಡದ್ದು, ನೊಂದುಕೊಂಡಿದ್ದ ವಿಧವೆಯರಿಗೆ ಇಷ್ಟವಾಗಿರಬೇಕು. ಶಿಫಾರಸ್ಸು ಮಾಡಲಾದವರ ಬಗ್ಗೆ ಪ್ರಾರ್ಥನಾಪೂರ್ವಕವಾಗಿ ಯೋಚಿಸಿದ ನಂತರ ಅಪೊಸ್ತಲರು ಈ ಏಳು ಪುರುಷರನ್ನು ‘ಆವಶ್ಯಕ ಕೆಲಸಕ್ಕಾಗಿ’ ನೇಮಿಸಿದರು.
ಸಾಮಾನ್ಯವಾಗಿ ಹಿರಿಯರಿಗೆ ಇರಬೇಕಾದ ಅರ್ಹತೆಗಳನ್ನೇ ಈ ಪುರುಷರೂ ಪೂರೈಸಿದ್ದಿರಬೇಕು. ಯಾಕೆಂದರೆ “ಈ ಆವಶ್ಯಕ ಕೆಲಸ”ವನ್ನು ನಿರ್ವಹಿಸುವುದು ಒಂದು ಗಂಭೀರ ಜವಾಬ್ದಾರಿ ಆಗಿತ್ತು. ಆದರೆ ಕ್ರೈಸ್ತ ಸಭೆಯಲ್ಲಿ ಹಿರಿಯರು ಇಲ್ಲವೇ ಮೇಲ್ವಿಚಾರಕರನ್ನು ಯಾವಾಗಿನಿಂದ ನೇಮಿಸಲು ಆರಂಭಿಸಲಾಯಿತೆಂದು ಬೈಬಲ್ ನಿಖರವಾಗಿ ಎಲ್ಲೂ ತಿಳಿಸುವುದಿಲ್ಲ.
‘ಕೂಲಂಕಷ ಸಾಕ್ಷಿ’ ಅಧ್ಯಾಯ 6 ಪ್ಯಾರ 2
ಈ ಸಮಯದಲ್ಲಿ ಸ್ತೆಫನನ ಮುಖಭಾವದಲ್ಲಿ ಏನೋ ವಿಶೇಷತೆ ಇತ್ತು. ನ್ಯಾಯಾಧೀಶರು ಅವನ ಕಡೆಗೆ ನೋಡಿದಾಗ ಅವನ ಮುಖವು “ಒಬ್ಬ ದೇವದೂತನ ಮುಖದಂತೆ” ಇರುವುದನ್ನು ಕಂಡರು. (ಅ. ಕಾ. 6:15) ದೇವದೂತರು ಯೆಹೋವ ದೇವರ ಸಂದೇಶವನ್ನು ತಿಳಿಸುವವರು. ಹಾಗಾಗಿ, ಅವರು ಕಿಂಚಿತ್ತೂ ಭಯಪಡದೆ, ಶಾಂತರಾಗಿ, ಸಮಾಧಾನದಿಂದ ಇರುತ್ತಾರೆ. ಸ್ತೆಫನನೂ ಹಾಗೆಯೇ ಇದ್ದನು. ಇದನ್ನೇ ಆ ದ್ವೇಷತುಂಬಿದ ನ್ಯಾಯಾಧೀಶರು ಅವನ ಮುಖದಲ್ಲಿ ನೋಡಿದರು. ಅವನು ಇಂಥ ಪರಿಸ್ಥಿತಿಯಲ್ಲೂ ಇಷ್ಟೊಂದು ಶಾಂತನಾಗಿರಲು ಕಾರಣವೇನಾಗಿತ್ತು?
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಕೂಲಂಕಷ ಸಾಕ್ಷಿ’ ಅಧ್ಯಾಯ 7 ಪ್ಯಾರ 16
ಇಂದು ಕ್ರೈಸ್ತರಿಗೆ ಫಿಲಿಪ್ಪನು ಮಾಡಿದಂಥ ಕೆಲಸವನ್ನೇ ಮಾಡುವ ಸುಯೋಗವಿದೆ. ಅನೇಕ ಸಲ ಅವರಿಗೆ ರಾಜ್ಯದ ಸಂದೇಶವನ್ನು ಅನೌಪಚಾರಿಕ ಸನ್ನಿವೇಶಗಳಲ್ಲಿ ಉದಾಹರಣೆಗೆ ಪ್ರಯಾಣಿಸುವಾಗ ತಿಳಿಸುವ ಸಂದರ್ಭಗಳೂ ಸಿಗುತ್ತವೆ. ಎಷ್ಟೋ ಸನ್ನಿವೇಶಗಳಲ್ಲಿ ಅವರು ಆಸಕ್ತ ವ್ಯಕ್ತಿಯನ್ನು ಭೇಟಿಯಾದಾಗ, ‘ಇದು ಆಕಸ್ಮಿಕವಾಗಿ ನಡೆದದ್ದಲ್ಲ’ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ರೀತಿ ಆಗುವುದು ಅನಿರೀಕ್ಷಿತವಲ್ಲ. ಯಾಕಂದರೆ ರಾಜ್ಯ ಸಂದೇಶವು “ಸಕಲ ಕುಲ ಜನಾಂಗ ಭಾಷೆ ಮತ್ತು ಪ್ರಜೆಗಳಿಗೂ” ತಲಪುವಂತೆ ದೇವದೂತರು ಸಾರುವ ಕೆಲಸವನ್ನು ನಿರ್ದೇಶಿಸುತ್ತಿದ್ದಾರೆಂದು ಬೈಬಲ್ ಸ್ಪಷ್ಟವಾಗಿ ಹೇಳುತ್ತದೆ. (ಪ್ರಕ. 14:6) ಸಾರುವ ಕೆಲಸದಲ್ಲಿ ದೇವದೂತರ ಮಾರ್ಗದರ್ಶನ ಇರುತ್ತದೆಂದು ಯೇಸು ಸಹ ಮುಂತಿಳಿಸಿದ್ದನು. ಗೋದಿ ಮತ್ತು ಹಣಜಿಯ ಕುರಿತ ತನ್ನ ದೃಷ್ಟಾಂತದಲ್ಲಿ, ಕೊಯ್ಲಿನ ಸಮಯ ಅಂದರೆ ವಿಷಯಗಳ ಸಮಾಪ್ತಿಯ ಸಮಯದಲ್ಲಿ “ಕೊಯ್ಯುವವರು ದೇವದೂತರು” ಆಗಿರುವರೆಂದು ಯೇಸು ಹೇಳಿದ್ದನು. ಆತನು ಮುಂದುವರಿಸಿ ಹೇಳಿದ್ದೇನೆಂದರೆ “ಎಡವುವಂತೆ ಮಾಡುವ ಎಲ್ಲ ವಿಷಯಗಳನ್ನೂ ಅಧರ್ಮಿಗಳಾದ ಎಲ್ಲ ಜನರನ್ನೂ ಅವನ ರಾಜ್ಯದೊಳಗಿಂದ ಒಟ್ಟುಗೂಡಿ”ಸುವ ಕೆಲಸವನ್ನು ಈ ದೇವದೂತರು ಮಾಡುವರು. (ಮತ್ತಾ. 13:37-41) ಅದೇ ಸಮಯದಲ್ಲಿ ಯೆಹೋವನು ತನ್ನ ಸಂಘಟನೆಯೊಳಗೆ ಸೆಳೆಯಲು ಬಯಸುವವರನ್ನು ಅಂದರೆ ಮುಂದೆ ರಾಜ್ಯದ ಬಾಧ್ಯಸ್ಥರಾಗಿ ಸ್ವರ್ಗಕ್ಕೆ ಹೋಗುವವರನ್ನು ಮತ್ತು ನಂತರ ‘ಬೇರೆ ಕುರಿಗಳ’ ‘ಮಹಾ ಸಮೂಹವನ್ನು’ ಈ ದೇವದೂತರು ಒಟ್ಟುಗೂಡಿಸುವರು.—ಪ್ರಕ. 7:9; ಯೋಹಾ. 6:44, 65; 10:16.