ಪತ್ನಿಯಾಗಿದ್ದು ಪ್ರೀತಿ ಮತ್ತು ಗೌರವ ತೋರಿಸುವುದು
“ಪತ್ನಿಗೆ ತನ್ನ ಪತಿಯ ಮೇಲೆ ಆಳವಾದ ಗೌರವವಿರಬೇಕು”—ಎಫೆಸ 5:33.
1. ವಿವಾಹದ ಆಧುನಿಕ ಸ್ಥಿತಿಗತಿಯ ಕುರಿತು ಯಾವ ಪ್ರಶ್ನೆಗಳೇಳುತ್ತವೆ?
ಸ್ವಾತಂತ್ರ್ಯ ಮತ್ತು “ವಿಮೋಚನೆ” ಯ ಈ ಆಧುನಿಕ ಯುಗದಲ್ಲಿ ವಿವಾಹ ಸಂಬಂಧದಲ್ಲಿ ಸಾಂಪ್ರದಾಯಿಕ ವೀಕ್ಷಣೆಗೆ ಬಿರುಸಾದ ಹೊಡೆತಗಳು ಬಿದ್ದಿವೆ. ತಂದೆ ಅಥವಾ ತಾಯಿ ಇಲ್ಲದೆನೇ ಲಕ್ಷಾಂತರ ಕುಟುಂಬಗಳು ಕೆಲಸ ನಡಿಸಬೇಕಾಗಿದೆ. ಶಾಸನಬದ್ಧ ವಿವಾಹವಿಲ್ಲದೆ ಜೊತೆಯಾಗಿ ಜೀವಿಸುವುದು ಅನೇಕರಿಗೆ ವಾಡಿಕೆಯಾಗಿ ಹೋಗಿದೆ. ಆದರೆ ಇದು ಸ್ತ್ರೀ ಮತ್ತು ತಾಯಿಗೆ ಹೆಚ್ಚು ಭದ್ರತೆ ತಂದಿದೆಯೇ? ಮಕ್ಕಳಿಗೆ ಇದು ಸ್ಥಾಯಿತ್ವವನ್ನು ಒದಗಿಸಿದೆಯೇ? ಈ ಜೀವನಗಳ ಮೌಲ್ಯಗಳ ಪತನವು ಕುಟುಂಬ ವ್ಯವಸ್ಥೆಯೊಳಗೆ ಹೆಚ್ಚಿನ ಗೌರವಕ್ಕೆ ನಡಿಸಿದೆಯೇ? ಇದಕ್ಕೆ ಭಿನ್ನವಾಗಿ ದೇವರ ವಾಕ್ಯವು ಏನು ಶಿಫಾರಸು ಮಾಡುತ್ತದೆ?
2. ಆದಾಮನು ಒಂಟಿಗನಾಗಿರುವುದು ಏಕೆ ಒಳ್ಳೆಯದಾಗಿರಲ್ಲಿಲ್ಲ?
2 ಪ್ರಥಮ ಸ್ತ್ರೀಯನ್ನು ನಿರ್ಮಿಸುವ ಉದ್ದೇಶವನ್ನು ವ್ಯಕ್ತಪಡಿಸಿದಾಗ ದೇವರು, “ಮನುಷ್ಯನು ಒಂಟಿಗನಾಗಿರುವುದು ಒಳ್ಳೇದಲ್ಲ” ಎಂದು ಹೇಳಿದನು. ಮತ್ತು ಪ್ರಾಣಿ ಕುಟುಂಬಗಳಲ್ಲಿ ಗಂಡು, ಹೆಣ್ಣು ಮತ್ತು ಮರಿಗಳನ್ನು ನೋಡಿದಾಗ ಆದಾಮನ ಅನಿಸಿಕೆ ಈ ಹೇಳಿಕೆಯೊಂದಿಗೆ ಹೊಂದಿಕೆಯಿಂದಿದಿರ್ದಬೇಕು. ಪರಿಪೂರ್ಣನಾಗಿ, ಸಂತೃಪ್ತಿಕರವಾದ ಪ್ರಮೋದವನದಲ್ಲಿದ್ದರೂ ಆದಾಮನಿಗೆ ತನ್ನ ವಿಧದ ವ್ಯಕ್ತಿಯೊಂದಿಗೆ ಒಡನಾಟದ ಕೊರತೆ ಇತ್ತು. ಅವನಿಗೆ ಬುದ್ಧಿಶಕ್ತಿ ಮತ್ತು ವಾಕ್ಶಕ್ತಿಯ ವರದಾನವಿದ್ದರೂ ಅವುಗಳಲ್ಲಿ ಪಾಲಿಗನಾಗಲು ತನ್ನಂತೆಯೇ ಇರುವ ಇನ್ನೊಂದು ಜೀವಿ ಅಲ್ಲಿರಲಿಲ್ಲ. ಆದರೂ ಅವನಿಗೆ ಈ ಪರಿಸ್ಥಿತಿ ಬದಲಾವಣೆಗೊಳ್ಳಲಿತ್ತು. ಏಕೆಂದರೆ ದೇವರು ಅವನಿಗೆ ಹೀಗೆಂದನು: “ನಾನು ಅವನಿಗೆ ಅವನ ಅನುಪೂರಕಳಾಗಿರುವಂತೆ ಒಬ್ಬ ಸಹಕಾರಿಣಿಯನ್ನು ಉಂಟುಮಾಡುವೆನು.”—ಆದಿಕಾಂಡ 2:18-20, NW.
3. (ಎ) ಹವ್ವಳು ಆದಾಮನ “ಜಾತಿ” ಯವಳಾಗಿದ್ದದ್ದು ಹೇಗೆ? (ಬಿ) ಪುರುಷನು ಹೆಂಡತಿಗೆ “ಅಂಟಿಕೊಳ್ಳು” ವುದೆಂದರೆ ಅರ್ಥವೇನು?
3 ಯೆಹೋವನು ಆದಾಮನ ಪಕ್ಕೆಲುಬುಗಳಲ್ಲಿ ಒಂದನ್ನು ಪಾಯವಾಗಿರಿಸಿ ಸ್ತ್ರೀಯಾದ ಹವ್ವಳನ್ನು ಸೃಷ್ಟಿಸಿದನು. ಹೀಗೆ ಹವ್ವ ಆದಾಮನದ್ದೇ “ಜಾತಿ” ಯವಳಾಗಿದ್ದಳು. ಆಕೆ ಕೆಳವರ್ಗದ ಪ್ರಾಣಿಯಾಗಿರದೆ, “[ಅವನ] ಎಲುಬುಗಳಿಂದ ಬಂದ ಎಲುಬೂ [ಅವನ] ಮಾಂಸದಿಂದ ಬಂದ ಮಾಂಸವೂ” ಆಗಿದ್ದಳು. ಈ ಕಾರಣದಿಂದಲೇ, ಪ್ರೇರಿತ ವೃತ್ತಾಂತವು ತಿಳಿಸುವುದು: “ಈ ಕಾರಣದಿಂದ ಪುರುಷನು ತಂದೆ ತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು [ಅಂಟಿಕೊಳ್ಳುವನು, NW] ಅವರಿಬ್ಬರು ಒಂದೇ ಶರೀರವಾಗುವರು.” (ಆದಿಕಾಂಡ 2:23, 24) “ಅಂಟಿಕೋ” ಎಂದು ಭಾಷಾಂತರಿಸಲ್ಪಟ್ಟ ಹಿಬ್ರೂ ಪದದ ಅಕ್ಷರಾರ್ಥವು “ಹತ್ತಿಕೋ”, ವಿಶೇಷವಾಗಿ ಬಲವಾಗಿ “ಕಚ್ಚಿಕೋ” ಎಂದಾಗಿದೆ. (ಜೆಸೀನಿಯಸ್ನ ಹಿಬ್ರೂ ಎಂಡ್ ಕಾಲ್ಡಿ ಲೆಕ್ಸಿಕನ್ ಟು ದಿ ಓಲ್ಡ್ ಟೆಸ್ಟಮೆಂಟ್ ಸ್ಕ್ರಿಪ್ಚರ್ಸ್) ಗಂಡ ಹೆಂಡಿರು ಪ್ರತ್ಯೇಕಿಸಲಾದ ಸಂಗಾತಿಗಳೆಂದು ಇದು ಸೂಚಿಸುತ್ತದೆ. ಇನ್ನೊಬ್ಬ ಪಂಡಿತರು ಹೇಳಿದ್ದು: “ಇದು ಗಂಡ ಮತ್ತು ಹೆಂಡತಿಯ ಲೈಂಗಿಕ ಐಕ್ಯಕ್ಕೆ ಮಾತ್ರ ಸೀಮಿತವಾಗಿರದೆ ಪೂರ್ತಿ ಸಂಬಂಧವನ್ನು ಆವರಿಸುತ್ತದೆ.” ಹೀಗೆ ವಿವಾಹ ದಾಟಿಹೋಗುವ ಭ್ರಮೆಯಾಗಿರದೆ ಶಾಶ್ವತವಾದ ಸಂಬಂಧವಾಗಿದೆ. ಮತ್ತು ಪರಸ್ಪರ ಸನ್ಮಾನ ಮತ್ತು ಗೌರವವಿರುವಲ್ಲಿ, ಇಂತಹ ಏಕತೆ ಕೆಲವು ಸಾರಿ ಉಳುಕಿ ಹೋಗುವುದಾದರೂ ಮುರಿಯಲಾರದಾಗಿದೆ.—ಮತ್ತಾಯ 19:3-9.
4. ಸ್ತ್ರೀ ಪುರುಷನಿಗೆ ಸಹಕಾರಿಯೂ ಅನುಪೂರಕಳೂ ಆಗಿರುವುದು ಯಾವ ಅರ್ಥದಲ್ಲಿ?
4 ಸ್ತ್ರೀ ಪುರುಷನಿಗೆ ಸಹಕಾರಿಯೂ ಅನುಪೂರಕಳೂ ಆಗಿರುವಳೆಂದು ದೇವರಂದನು. ಅವರು ದೇವರ ಸ್ವರೂಪದಲ್ಲಿ ಮಾಡಲ್ಪಟ್ಟಿರುವುದರಿಂದ, ತನ್ನ ಗುಣಗಳಾದ ನ್ಯಾಯ, ಪ್ರೀತಿ, ವಿವೇಕ ಮತ್ತು ಶಕ್ತಿಯನ್ನು ಅವರು ತಮ್ಮ ಸಂಬಂಧದಲ್ಲಿ ಪ್ರದರ್ಶಿಸುವರೆಂದು ದೇವರು ಅಪೇಕ್ಷಿಸುತ್ತಾನೆ. ಈ ಕಾರಣದಿಂದ ಹವ್ವ ಅನುಪೂರಕಳೇ ಹೊರತು ಸ್ಪರ್ಧಿಯಲ್ಲ. ಕುಟುಂಬವು ಎರಡು ಸ್ಪರ್ಧಿಸುವ ಕ್ಯಾಪನ್ಟರಿರುವ ನೌಕೆಯಲ್ಲ. ಆದಾಮನು ನಾಯಕತ್ವ ನಿರ್ವಹಿಸುವನು.—1 ಕೊರಿಂಥ 11:3; ಎಫೆಸ 5:22-24; 1 ತಿಮೋಥಿ 2:12, 13.
5. ಅನೇಕ ಪುರುಷರು ಸ್ತ್ರೀಯ ಕಡೆಗೆ ಹೇಗೆ ವರ್ತಿಸಿದ್ದಾರೆ, ಆದರೆ ಇದಕ್ಕೆ ದೇವರ ಒಪ್ಪಿಗೆ ಇದೆಯೋ?
5 ಆದರೂ ದೇವರ ಪ್ರೀತಿಯ ಶಿರಸ್ಸುತನದ ವಿರುದ್ಧ ಪ್ರಥಮ ಮಾನವ ಜೊತೆಯ ದಂಗೆ ಮತ್ತು ಪಾಪ ಅವರ ಕುಟುಂಬ ರಚನೆ ಮತ್ತು ಎಲ್ಲಾ ಭಾವೀ ಕುಟುಂಬ ರಚನೆಗಳಿಗೆ ಪ್ರತ್ಯೇಕವಾದ ಒಂದು ಹಿನ್ನೆಲೆಯನ್ನು ಕೊಟ್ಟಿತು. ಅವರ ಪಾಪದ ಪರಿಣಾಮ ಮತ್ತು ಮಾನವ ಸಂತತಿಗೆ ಅದರಿಂದಾದ ಫಲದ ಮುನ್ನರಿವನ್ನು ತಿಳಿದಿದ್ದ ಯೆಹೋವನು ಹವ್ವಳಿಗೆ ಹೇಳಿದ್ದು: “ಗಂಡನ ಮೇಲೆ ನಿನಗೆ ಆಶೆಯಿರುವುದು; ಅವನು ನಿನಗೆ ಒಡೆಯನಾಗುವನು.” (ಆದಿಕಾಂಡ 3:16) ದುರ್ಭಾಗ್ಯವಶಾತ್, ಅನೇಕ ಪುರುಷರು, ಶತಮಾನಗಳಿಂದ ಸ್ತ್ರೀಯರ ಮೇಲೆ ದಬ್ಬಾಳಿಕೆಯಿಂದ ಒಡೆತನ ನಡಿಸಿದ್ದಾರೆ. ಲೋಕಾದ್ಯಂತ ಸ್ತ್ರೀಯರಿಗೆ ಅನೇಕ ವಿಧಗಳಲ್ಲಿ ಅಪಮಾನ, ಹೀನೈಕೆಗಳು ನಡೆದಿವೆ ಮತ್ತು ಇಂದೂ ನಡೆಯುತ್ತಾ ಇವೆ. ಆದರೂ ನಾವು ಫೆಬ್ರವರಿ ಲೇಖನದಲ್ಲಿ ನೋಡಿರುವಂತೆ, ಬೈಬಲ್ ಮೂಲತತ್ವವನ್ನು ಅನ್ವೈಸುವಲ್ಲಿ, ಅದು ಪುರುಷ ದಬ್ಬಾಳಿಕೆಗೆ ಯಾವ ಆಧಾರವನ್ನೂ ಕೊಡುವುದಿಲ್ಲ. ಬದಲಿಗೆ, ಅದು ಆಳವಾದ ಗೌರವದ ಬೆಲೆಯನ್ನು ಒತ್ತಿಹೇಳುತ್ತದೆ.
ಆಳವಾದ ರವ—ಒಂದು ಪಂಥಾಹ್ವಾನ
6, 7. (ಎ) ಅವಿಶ್ವಾಸಿಗಳಾದ ಗಂಡದದಿರನ್ನು ಸತ್ಯದ ಪಕ್ಷಕ್ಕೆ ಹೇಗೆ ಜಯಿಸಬಹುದು? (ಬಿ) ತನ್ನ ಅವಿಶ್ವಾಸಿಯಾದ ಗಂಡನಿಗೆ “ಆಳವಾದ ಗೌರವ” ತೋರಿಸುವುದರಲ್ಲಿ ಹೆಂಡತಿ ಹೇಗೆ ತಪ್ಪ ಸಾಧ್ಯವಿದೆ?
6 ಅಪೋಸ್ತಲ ಪೇತ್ರನು ಕ್ರಿಸ್ತನ ನಡತೆಯ ಮಾದರಿಯನ್ನು ಒತ್ತಿಹೇಳುತ್ತಾ ‘ಅವನ ಹೆಜ್ಜೆಯನ್ನು ಒತ್ತಾಗಿ ಅನುಸರಿಸಲು ಮಾದರಿಯನ್ನು’ ಇಟ್ಟನೆಂದು ಹೇಳಿದನು. ಬಳಿಕ ಪೇತ್ರನು ಹೇಳಿದ್ದು: “ಅದೇ ರೀತಿಯಾಗಿ ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ ಭಯಬರಿತರಾಗಿಯೂ [ಆಳವಾದ ಗೌರವ, NW] ನಡೆದುಕೊಳ್ಳುವದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು.” (1 ಪೇತ್ರ 2:21–3:2) ಕ್ರೈಸ್ತ ಪತ್ನಿಯರು ಈ “ಆಳವಾದ ಗೌರವವನ್ನು” ಹೇಗೆ ತೋರಿಸಬಲ್ಲರು?
7 ನಮ್ಮ ಅನೇಕ ಕ್ರೈಸ್ತ ಸಹೋದರಿಯರು ಅವಿಶ್ವಾಸಿಗಳಾದ ಮತ್ತು ಅನೇಕ ವೇಳೆ ವಿರೋಧಿಸುವ ಪತಿಗಳುಳ್ಳವರಾಗಿದ್ದಾರೆ. ಹಾಗಾದರೆ ಇಂತಹ ಸಂದರ್ಭಗಳಲ್ಲಿ ಪೇತ್ರನ ಬುದ್ಧಿವಾದ ರದ್ದಾಗುತ್ತದೋ? ಇಲ್ಲ, ಅಧೀನತೆ ಮತ್ತು ಗೌರವವನ್ನು ಅವರು “ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ” ಸಲ್ಲಿಸಬೇಕು. ಹೀಗಿರುವಲ್ಲಿ ವಿರೋಧಿಸುವ ಗಂಡನಿರುವ ಕ್ರೈಸ್ತ ಪತ್ನಿಯೊಬ್ಬಳು ರಾಜ್ಯ ಸಭಾಗೃಹಕ್ಕೆ ಬಂದು ಅವನ ವಿಷಯ ಹರಟೆ ಮಾತಾಡುತ್ತಾ ಸಭೆಯ ಅನೇಕ ಸಹೋದರಿಯರಿಗೆ ತನ್ನ ಗಂಡನು ತನಗೆ ಕೊಡುವ ಎಲ್ಲಾ ಪೀಡೆಗಳನ್ನು ತಿಳಿಸುವುದು ಆಳವಾದ ಗೌರವವಾಗಬಹುದೋ? ಅವಳು ಸಭೆಯ ಸಹೋದರ ಅಥವಾ ಸಹೋದರಿಯ ಕುರಿತು ಹೀಗೆ ಮಾಡಿದರೆ ಅದನ್ನು ಏನೆಂದು ಕರೆಯಲಾದೀತು? ಹರಟೆ ಅಥವಾ ಚಾಡಿ ಮಾತು ಎಂದೇ. ಆದ್ದರಿಂದ ಅವಿಶ್ವಾಸಿಯಾದ ಗಂಡನನ್ನು ಹೀಗೆ ದೂಷಿಸುವುದು ಆಳವಾದ ಗೌರವದ ರುಜುವಾತಲ್ಲ. (1 ತಿಮೋಥಿ 3:11; 5:13) ಆದರೂ ಕೆಲವು ಸಹೋದರಿಯರಿಗೆ ಗಂಭೀರ ಸಮಸ್ಯೆ ಇದೆಂಬದನ್ನು ನಾವು ಒಪ್ಪಲೇ ಬೇಕು. ಇದಕ್ಕೆ ಕ್ರೈಸ್ತ ಪರಿಹಾರ ಮಾರ್ಗವೇನು? ಹಿರಿಯರ ಬಳಿಗೆ ಹೋಗಿ ಅವರ ಸಹಾಯ ಮತ್ತು ಸಲಹೆಯನ್ನು ಕೇಳುವದೇ.—ಇಬ್ರಿಯ 13:17.
8. ವಿರೋಧಿಸುವ ಗಂಡನ ವಿಚಾರಸರಣಿ ಹೇಗಿರಬಹುದು?
8 ವಿರೋಧಿ ಗಂಡನೊಂದಿಗೆ ಹಿರಿಯರು ಹೇಗೆ ಜಾಣ್ಮೆಯಿಂದ ವರ್ತಿಸಬಹುದು? ಮೊತ್ತಮೊದಲು ಅವನ ನೋಟದಿಂದ ಪರಿಸ್ಥಿತಿಯನ್ನು ನೋಡ ಪ್ರಯತ್ನಿಸಬೇಕು. ಅವನು ಬಾಯಿ ಮಾತಿನಿಂದ ಅಥವಾ ಶಾರೀರಿಕವಾಗಿ ಕೊಡುವ ಹಿಂಸೆ ಅಜ್ಞಾನದಿಂದ ಭಯ ಮತ್ತು ಭಯದಿಂದ ಹಿಂಸಾಪ್ರತಿಕ್ರಿಯೆಗೆ ನಡೆಸುವ ಮೂರು ಉಂಗುರಗಳಿರುವ ಸರಪಣಿ ಪ್ರಕ್ರಿಯೆಯ ಕಾರಣದಿಂದಾಗಿರಬಹುದು. ಮತ್ತು ಇದೇಕೆ ಆಗುತ್ತದೆ? ಕೆಲವು ಸಲ ಗಂಡನಿಗೆ ಯೆಹೋವನ ಸಾಕ್ಷಿಗಳ ಕುರಿತು ಸ್ವಲ್ಪವೇ ತಿಳಿದಿರುತ್ತದೆ ಅಥವಾ ಏನೂ ತಿಳಿದಿರುವುದಿಲ್ಲ. ಇದನ್ನೂ ಅವನು ಅವಿಚಾರಾಭಿಪ್ರಾಯದ ಜೊತೆ ಕೆಲಸಗಾರರಿಂದ ಕೇಳಿರಬಹುದು. ಬೈಬಲ್ ಅಧ್ಯಯನ ಪ್ರಾರಂಭಿಸುವುದಕ್ಕೆ ಮೊದಲು ತನ್ನ ಹೆಂಡತಿ ತನಗೆ ಮತ್ತು ಮಕ್ಕಳಿಗೆ ಪೂರ್ತಿ ಮಗ್ನತೆ ತೋರಿಸುತ್ತಿದ್ದಳೆಂದು ಅವನಿಗೆ ಗೊತ್ತು. ಈಗ ಅವಳು ಹೆಚ್ಚು ಉತ್ತಮ ಪತ್ನಿ ಮತ್ತು ತಾಯಿಯಾದರೂ ಅವನ ಮನೋಭಾವ ಹೀಗಿರಬಹುದು: ‘ಆ ಕೂಟಗಳಿಗೆ ಹೋಗಲು ಅವಳು ನನ್ನನ್ನು ವಾರಕ್ಕೆ ಮೂರು ಬಾರಿ ಬಿಟ್ಟುಹೋಗುತ್ತಾಳೆ. ಆ ಕೂಟಗಳಲ್ಲಿ ಎನು ನಡಿಯುತ್ತದೋ ನಾನು ತಿಳಿಯೆ. ಆದರೆ ಆ ಹಾಲ್ನಲ್ಲಿ ಕೆಲವು ಸುಂದರ ಪುರುಷರಿದ್ದಾರೆ ಮತ್ತು . . . ’ ಹೌದು, ಅವನ ಅಜ್ಞಾನ ಅಸೂಯೆ ಮತ್ತು ಭಯಕ್ಕೆ ನಡಿಸಬಹುದು. ಆಗ ಸ್ವರಕ್ಷಣೆಯ ಪ್ರತಿಕ್ರಿಯೆಯು ಬರುತ್ತದೆ. ಈ ಮನೋಭಾವ ಕಂಡುಬರುವಲ್ಲಿ ಹಿರಿಯರು ಹೇಗೆ ಸಹಾಯ ನೀಡಬಹುದು?—ಜ್ಞಾನೋಕ್ತಿ 14:30; 27:4.
9. ಹಲವು ಅವಿಶ್ವಾಸಿಗಳಾದ ಗಂಡಂದಿರನ್ನು ಹೇಗೆ ಜಾಣ್ಮೆಯಿಂದ ಸಮೀಪಿಸಬಹುದು, ಮತ್ತು ಇದರಿಂದ ಯಾವ ಪರಿಣಾಮವಾಗಬಹುದು?
9 ಪ್ರಾಯಶ: ಹಿರಿಯರಲ್ಲಿ ಒಬ್ಬನು ಗಂಡನನ್ನು ವೈಯಕ್ತಿಕವಾಗಿ ಪರಿಚಯಿಸಿಕೊಳ್ಳಬಹುದು. (1 ಕೊರಿಂಥ 9:19-23) ಗಂಡನಿಗೆ ಇಲೆಕ್ಟ್ರಿಶನ್, ಬಡಗಿ ಅಥವಾ ಪೆಯಿಂಟರ್ ಕೆಲಸ ಗೊತ್ತಿರಬಹುದು. ಹಾಗಿರುವಲ್ಲಿ ಅವನು ರಾಜ್ಯ ಸಭಾಗೃಹದಲ್ಲಿರುವ ಈ ವಿಷಯದ ಸಮಸ್ಯೆಯ ಕುರಿತು ಸಹಾಯ ಮಾಡಲು ಬಯಸಬಹುದು. ಹೀಗೆ, ಕೂಟಕ್ಕೆ ಹಾಜರಾಗುವ ಯಾವ ಹಂಗೂ ಇಲ್ಲದೆ ಅವನು ರಾಜ್ಯ ಸಭಾಗೃಹದ ಒಳಗೆ ಬರುವಂತಾಗಬಹುದು. ಅವನು ಹೀಗೆ ಸಹೋದರರ ಪರಿಚಯ ಮಾಡಿಕೊಳ್ಳುವಲ್ಲಿ ತನ್ನ ಹೆಂಡತಿಯ ಮತ್ತು ಸತ್ಯದ ಕಡೆಗೆ ಅವನಿಗಿರುವ ಮನೋಭಾವ ಮೆತ್ತಗಾಗಬಹುದು. ಸಭೆಯಲ್ಲಿರುವ ಪ್ರೀತಿ ಮತ್ತು ಸಹಕಾರ ಪ್ರವೃತ್ತಿಯನ್ನು ನೋಡಿ ಅವನು ತನ್ನ ಹೆಂಡತಿಯನ್ನು ಕೂಟಗಳಿಗೆ ಕರೆದುಕೊಂಡು ಬರಲೂಬಹುದು. ಬಳಿಕ, ವಿಷಯಗಳು ಒಂದಕ್ಕೊಂದು ಜೋಡಣೆಯಾಗಿ, ಅವನು ಕೂಟಕ್ಕೆ ತುಸು ಕಿವಿಗೊಡುವ ಉದ್ದೇಶದಿಂದ ಒಳಗೆ ಹೆಜ್ಜೆಯಿಡಲೂ ಬಹುದು. ಸ್ವಲ್ಪದರಲ್ಲಿ ಅವನು ಒಂದು ಬೈಬಲ್ ಅಧ್ಯಯನವನ್ನು ವಿನಂತಿಸಬಹುದು. ಇವೆಲ್ಲವೂ ಆಗುವ ಸಾಧ್ಯತೆ ಇದೆ ಮತ್ತು ಆದದ್ದೂ ಇದೆ. ಇಂತಹ ಪ್ರೀತಿ ಮತ್ತು ಪತ್ನಿಯ “ಆಳವಾದ ಗೌರವ” ದ ಕಾರಣ ಇಂದು ಸಾವಿರಾರು ಜನರು ನಂಬುವ ಗಂಡಂದಿರಾಗಿದ್ದಾರೆ.—ಎಫೆಸ 5:33.
ತನ್ನ ಕುಟುಂಬದ ಮೇಲೆ ಕಣ್ಣಿಡುತ್ತಾಳೆ
10, 11. ಲೆಮುವೇಲ್ ರಾಜನು ಒಬ್ಬ ಯೋಗ್ಯ ಸತಿಯ ಯಾವ ವಿಭಿನ್ನ ಗುಣಗಳನ್ನು ವರ್ಣಿಸುತ್ತಾನೆ? (ಪ್ರತ್ಯೇಕವಾಗಿ ಚರ್ಚಿಸಿ.)
10 ಲೆಮುವೇಲ್ ರಾಜನು ಆದರ್ಶಪ್ರಾಯಳಾದ ಹೆಂಡತಿಯ ಗುಣಗಳ ಕುರಿತು ತನ್ನ ತಾಯಿಯಿಂದ ಉತ್ತಮ ಸಲಹೆ ಪಡೆದನು. (ಜ್ಞಾನೋಕ್ತಿ 31:1) ಶ್ರಮಪಟ್ಟು ದುಡಿಯುವ ಹೆಂಡತಿ ಮತ್ತು ತಾಯಿಯ ಕುರಿತು ಜ್ಞಾನೋಕ್ತಿ 31:10-31 ರಲ್ಲಿ ಅವಳು ಮಾಡಿರುವ ವರ್ಣನೆಯನ್ನು ಜಾಗ್ರತೆಯಿಂದ ಓದುವುದು ಲಾಭದಾಯಕ. ದೇವರ ನೀತಿಯ ಸೂತ್ರಗಳನ್ನು ಅನ್ವಯಿಸಿಕೊಳ್ಳುವುದರಲ್ಲಿ ಮತ್ತು ಆಳವಾದ ಗೌರವ ತೋರಿಸುವುದರಲ್ಲಿ ಅವಳಿಗೆ ಅನುಭವವಿತ್ತೆಂಬದು ಸ್ಪಷ್ಟ.
11 “ಗುಣವತಿಯಾದ ಸತಿ” ವಿಶ್ವಾಸಾರ್ಹಳು, ಭರವಸಪಾತ್ರಳು ಮತ್ತು ನಿಷ್ಟಳೆಂದು ಲೆಮುವೇಲನು ಬರೆಯುತ್ತಾನೆ. (10-12 ವಚನಗಳು) ತನ್ನ ಗಂಡ ಮತ್ತು ಮಕ್ಕಳಿಗೆ ಉಣಿಸಿ ಅವರ ಜಾಗ್ರತೆ ವಹಿಸಲಿಕ್ಕಾಗಿ ಅವಳು ಶ್ರಮಪಟ್ಟು ದುಡಿಯುತ್ತಾಳೆ. (13-19, 21, 24 ವಚನಗಳು) ನಿಜವಾಗಿಯೂ ಅಭಾವವಿರುವವರಿಗೆ ಅವಳು ದಯಾಪರತೆ ಮತ್ತು ದಾನಶೀಲತೆ ತೋರಿಸುತ್ತಾಳೆ. (20ನೇ ವಚನ) ಅವಳ ಗೌರವ ಮತ್ತು ಉತ್ತಮ ನಡವಳಿಕೆಯ ಮೂಲಕ ಗಂಡನ ಸತ್ಕೀರ್ತಿಯನ್ನು ವರ್ಧಿಸುತ್ತಾಳೆ. (23ನೇ ವಚನ) ಅವಳು ಹರಟೆಮಲ್ಲಿಯೂ ಅಲ್ಲ, ನಾಶಕರವಾದ ವಿಮರ್ಶಕಳೂ ಅಲ್ಲ. ಇದಕ್ಕೆ ಬದಲು ನಾಲಿಗೆಯ ಮೂಲಕ ಅವಳು ಭಕ್ತವೃದ್ಧಿಯನ್ನೂ ವಾಸಿಯನ್ನೂ ಮಾಡುತ್ತಾಳೆ. (26ನೇ ವಚನ) ಸೋಮಾರಿಯಲ್ಲದ ಕಾರಣ ಅವಳ ಮನೆ ಶುದ್ಧವೂ ಕ್ರಮಬದ್ಧವೂ ಆಗಿದೆ. (27ನೇ ವಚನ) (ವಾಸ್ತವವೇನಂದರೆ ಕ್ರೈಸ್ತ ಮನೆ ನೆರೆಹೊರೆಯಲ್ಲಿ ಅತ್ಯಂತ ಚೊಕ್ಕಟವಾಗಿರಬೇಕು.) ಆಕೆಯ ಗಂಡನೂ ಮಕ್ಕಳೂ ಕೃತಜ್ಞತೆ ತೋರಿಸಿ ಅವಳನ್ನು ಪ್ರಶಂಸಿಸುತ್ತಾರೆ. ಕುಟುಂಬದ ಹೊರಗಿನವರೂ ಅವಳ ಗುಣಗಳನ್ನು ಗಣ್ಯಮಾಡುತ್ತಾರೆ. (28, 29, 31ನೇ ವಚನಗಳು) ಅವಳ ಚೆಲುವೆಲ್ಲಾ ಚರ್ಮದಲ್ಲಿಲ್ಲ. ಅವಳ ಸೌಂದರ್ಯ ದೇವಭಯದ ಸ್ತ್ರೀಯ ದಿವ್ಯ ವ್ಯಕ್ತಿತ್ವದ ಸೌಂದರ್ಯ.—30ನೇ ವಚನ.
ಸಾತ್ವಿಕವಾದ ಶಾಂತ ಮನಸ್ಸು
12. “ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದು” ಯಾವುದು ಮತ್ತು ಒಂದು ಸ್ಪ್ಯಾನಿಷ್ ನಾಣ್ಣುಡಿ ಈ ವಿಷಯವನ್ನು ಹೇಗೆ ಒತ್ತಿಹೇಳುತ್ತದೆ?
12 ಕ್ರೈಸ್ತ ಸ್ತ್ರೀ ಬಾಹ್ಯ ತೋರಿಕೆಗೆ ವಿಪರೀತ ಗಮನ ಕೊಡಬಾರದೆಂದು ಪೇತ್ರನು ಬುದ್ಧಿಹೇಳುವಾಗ ಈ ಕೊನೆಯ ವಿಷಯವು ಪ್ರತಿದ್ವನಿಸುತ್ತದೆ. ಅವನು ಪ್ರೋತ್ಸಾಹಿಸುವುದು: “ಸಾತ್ವಿಕವಾದ ಶಾಂತಮನಸ್ಸು ಎಂಬ ಒಳಗಣ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. . .ಇದು ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದಾಗಿದೆ.” (1 ಪೇತ್ರ 3:3, 4) ‘ಸಾತ್ವಿಕವಾದ ಶಾಂತ ಮನಸ್ಸು ದೇವರ ದೃಷ್ಟಿಯಲ್ಲಿ ಬಹು ಬೆಲೆಯುಳ್ಳದ್ದಾಗಿದೆ’ ಎಂಬ ಈ ವಿಚಾರವನ್ನು ಗಮನಿಸಿರಿ. ಹೀಗೆ, ಇಂತಹ ಮನೋಭಾವವಿರುವ ಕ್ರೈಸ್ತ ಹೆಂಡತಿ ಮತ್ತು ತಾಯಿ ತನ್ನ ಗಂಡನನ್ನು ಮೆಚ್ಚಿಸುವುದು ಮಾತ್ರವಲ್ಲ, ಹೆಚ್ಚು ಪ್ರಾಮುಖ್ಯವಾಗಿ, ಆಕೆಯು ಪೂರ್ವದ ನಂಬಿಗಸ್ತಿಯರಂತೆ ದೇವರನ್ನು ಮೆಚ್ಚಿಸುತ್ತಾಳೆ. ಈ ಒಳಗಣ ಸೌಂದರ್ಯ ಈ ಸ್ಪ್ಯಾನಿಷ್ ನಾಣ್ಣುಡಿಯಲ್ಲೂ ಪ್ರತಿಬಿಂಬಿತವಾಗಿದೆ: “ಸುಂದರಿಯಾದ ಸ್ತ್ರೀ ಕಣ್ಣಿಗೆ ಮೆಚ್ಚಿಗೆಯಾದವಳು; ಒಳ್ಳೆಯ ಸ್ತ್ರೀ ಹೃದಯಕ್ಕೆ ಮೆಚ್ಚು. ಒಂದನೆಯವಳು ರತ್ನವಾಗಿದ್ದರೆ ಎರಡನೆಯವಳು ನಿಧಿಯೇ ಸರಿ.”
13. ಒಬ್ಬ ಹೆಂಡತಿ ತನ್ನ ಮಕ್ಕಳ ಮೇಲೆ ಯಾವ ಚೈತನ್ಯದಾಯಕ ಪರಿಣಾಮವನ್ನು ತರಬಲ್ಲಳು?
13 ಕ್ರೈಸ್ತ ಹೆಂಡತಿ ಕುಟುಂಬದ ಸರ್ವರಿಗೂ ಚೈತನ್ಯ ತೋರಿಸಬಲ್ಲಳು. (ಮತ್ತಾಯ 11:28-30 ಹೋಲಿಸಿ.) ಆಕೆ ಗಂಡನಿಗೆ ತೋರಿಸುವ ಮರ್ಯಾದೆಯನ್ನು ಮಕ್ಕಳು ಗಮನಿಸುವಾಗ ಅವರೂ ಹೆತ್ತವರೊಂದಿಗಿನ ಮತ್ತು ಕುಟುಂಬದ ಹೊರಗಿನವರೊಂದಿಗಿನ ವ್ಯವಹಾರದಲ್ಲಿ ಅದೇ ಮರ್ಯಾದೆಯನ್ನು ಪ್ರತಿಬಿಂಬಿಸುವರು. ಇದರ ಪರಿಣಾಮವಾಗಿ ಕ್ರೈಸ್ತ ಮಕ್ಕಳು ದಯಾಪರರೂ ಪರಹಿತಚಿಂತಕರೂ ಆಗುವರು. ಕೆಲಸ ಮಾಡಲು ಉತ್ತೇಜನ ಕೊಡುವ ಬದಲಾಗಿ ಮಕ್ಕಳು ತಾವಾಗಿಯೇ ಅದಕ್ಕಾಗಿ ಮುಂದೆ ಬರುವುದು ಅದೆಷ್ಟು ಚೈತನ್ಯದಾಯಕ! ಅವರ ನಿಸ್ವಾರ್ಥತೆ ಮನೆಯ ಸಂತೋಷಕ್ಕೆ ಸಹಾಯ ನೀಡುತ್ತದೆ. ಮತ್ತು ತಾಯಿಯ ಒಪ್ಪಿಗೆಯ ನಸುನಗೆ ಅದಕ್ಕೆ ದೊಡ್ಡ ವೇತನವೇ ಸರಿ.
14. ಶಿಸ್ತಿನ ಅವಶ್ಯಕತೆ ಯಾವ ಪಂಥಾಹ್ವಾನಕ್ಕೆ ನಡಿಸಬಹುದು?
14 ಆದರೆ ಶಿಸ್ತು ಬೇಕಾಗಿರುವ ಸಮಯಗಳಲ್ಲಿ ಎನು? ಹೆತ್ತವರಂತೆ ಮಕ್ಕಳೂ ತಪ್ಪುಮಾಡುತ್ತಾರೆ. ಕೆಲವು ಸಲ ಅವಿಧೇಯತೆ ತೋರಿಸುತ್ತಾರೆ. ತಂದೆ ಇಲ್ಲದಿರುವಾಗ ಕ್ರೈಸ್ತ ತಾಯಿ ಈ ಸಮಯದಲ್ಲಿ ಹೇಗೆ ಪ್ರತಿವರ್ತಿಸುವಳು? ತಮ್ಮ ಮಕ್ಕಳ ಗೌರವವನ್ನು ಗಣ್ಯಮಾಡುತ್ತಾ ಹೋಗುವಳೋ? ಅಥವಾ ಅವರ ವಿಧೇಯತೆಯನ್ನು ಸಂಪಾದಿಸಲಿಕ್ಕಾಗಿ ಚೀರಿ ಕಿರಿಚಾಡುವಳೋ? ಒಂದು ಮಗು ನಾವು ಮಾಡುವ ಗದ್ದಲದ ಮೇಲೆ ಹೊಂದಿಕೊಂಡು ಕಲಿಯುತ್ತದೋ? ಅಥವಾ ಮೆತ್ತಗಿನ ವಿವೇಚನೆಯ ಸ್ವರದಿಂದ ಹೆಚ್ಚು ಫಲ ಬಂದೀತೇ? —ಎಫೆಸ 4.31, 32.
15. ಮಕ್ಕಳ ವಿಧೇಯತೆಯ ಕುರಿತು ಸಂಶೋಧಕರು ಏನು ಕಂಡು ಹಿಡಿದಿದ್ದಾರೆ?
15 ಮಕ್ಕಳ ವಿಧೇಯತೆಯ ಕುರಿತು ಬರೆಯುತ್ತಾ ಸೈಖಾಲಜಿ ಟುಡೇ ಪತ್ರಿಕೆಯು ಹೇಳಿದ್ದು: “ಇತ್ತೀಚಿಗಿನ ಒಂದು ಅಧ್ಯಯನಕ್ಕನುಸಾರ ಯಾವ ಒಂದು ವಿಷಯವನ್ನಾದರೂ ಮಾಡಬಾರದೆಂದು ನೀವು ಎಷ್ಟು ಗಟ್ಟಿಯಾಗಿ ಹೇಳುತ್ತೀರೋ ಅಷ್ಟು ಹೆಚ್ಚಾಗಿ ಅವರು ನೀವು ಮಾಡಬಯಸದ ವಿಷಯವನ್ನು ಮಾಡುವ ಸಂಭವವಿದೆ.” ಇದಕ್ಕೆ ವ್ಯತಿರಿಕ್ತವಾಗಿ, ವಯಸ್ಕರು ಮೆತ್ತಗೆ ಮಾತಾಡುವಲ್ಲಿ ಮಕ್ಕಳು ಹೆಚ್ಚು ತಡಮಾಡದೆ ವಿಧೇಯರಾಗುತ್ತಾರೆ. ಮಗನೊಂದಿಗೆ ಸದಾ ಅಧಿಕಾರಯುಕ್ತವಾಗಿ ಮಾತಾಡಿ ರೇಗಿಸುವ ಬದಲಿಗೆ ವಿವೇಚಿಸಿ ಮಾತಾಡುವುದು ವಿಶೇಷವಾಗಿ ಪ್ರಾಮುಖ್ಯ.—ಎಫೆಸ 6:4; 1 ಪೇತ್ರ 4:8.
ಶಾರೀರಿಕ ಸಂಬಂಧದಲ್ಲಿ ಗೌರವ
16. ಗಂಡನ ಭಾವಾವೇಶದ ಆವಶ್ಯಕತೆಗಳಿಗೆ ಹೆಂಡತಿ ಹೇಗೆ ಪರಿಗಣನೆ ತೋರಿಸಬಲ್ಲಳು, ಮತ್ತು ಪ್ರಯೋಜನವೇನು?
16 ಗಂಡನು ಹೆಂಡತಿಯ ಹೆಚ್ಚು ಲಲಿತ ದೇಹಪ್ರಕೃತಿಯ ಕಾರಣ ಅವಳಿಗೆ ಪರಿಗಣನೆ ಹೇಗೆ ತೋರಿಸಬೇಕೋ ಹಾಗೆಯೇ ಹೆಂಡತಿ ತನ್ನ ಗಂಡನ ಭಾವಾವೇಶದ ಮತ್ತು ಲೈಂಗಿಕ ಅವಶ್ಯಕತೆಗಳನ್ನು ಗುರುತಿಸಬೇಕು. ಪುರುಷನೂ ಪತ್ನಿಯೂ ಪರಸ್ಪರ ಸಂತೋಷಿಸಿ ತೃಪ್ತಿಪಡೆಯಬೇಕೆಂದು ಬೈಬಲು ಸೂಚಿಸುತ್ತದೆ. ಪ್ರತಿಯೊಬ್ಬರು ತಮ್ಮತಮ್ಮೊಳಗಿನ ಅವಶ್ಯಕತೆ ಮತ್ತು ಮನೋವೃತ್ತಿಗೆ ಸೂಕ್ಷ್ಮ ಪ್ರತಿಕ್ರಿಯೆ ತೋರಿಸಬೇಕೆಂದು ಇದು ಕೇಳಿಕೊಳ್ಳುತ್ತದೆ. ಈ ಪರಸ್ಪರ ತೃಪ್ತಿ, ದಂಪತಿಗಳಲ್ಲಿ ಯಾರಿಗೂ ಅಲೆದಾಡುವ ದೇಹಕ್ಕೆ ನಡಿಸುವ ಅಲೆದಾಡುವ ಕಣ್ಣುಗಳು ಇರದಂತೆ ಸಹಾಯ ನೀಡುತ್ತದೆ.—ಜ್ಞಾನೋಕ್ತಿ 5:15-20.
17. ವಿವಾಹದಲ್ಲಿ ಸಲ್ಲತಕ್ಕದರ್ದ ಕುರಿತು ಗಂಡಹೆಂಡಿರ ವೀಕ್ಷಣ ಹೇಗಿರಬೇಕು?
17 ಪರಸ್ಪರ ಗೌರವವಿರುವಲ್ಲಿ ಗಂಡ ಹೆಂಡತಿಯರಲ್ಲಿ ಯಾರೂ ಲೈಂಗಿಕ ಅವಶ್ಯಕತೆಗಳನ್ನು ಮನೋಪರಿಣಾಮದ ಅಸ್ತ್ರವಾಗಿ ಉಪಯೋಗಿಸರೆಂಬದು ನಿಶ್ಚಯ. ಮದುವೆಯಲ್ಲಿ ಸಲ್ಲತಕ್ಕದ್ದನ್ನು ಅವರು ಒಬ್ಬರಿಗೊಬ್ಬರು ಕೊಡಬೇಕು. ತಾತ್ಕಾಲಿಕವಾಗಿ ಭೋಗವರ್ಜನೆ ಮಾಡುವಲ್ಲಿ ಅದನ್ನು ಪರಸ್ಪರ ಒಪ್ಪಿಗೆಯಿಂದ ಮಾಡಬೇಕು. (1 ಕೊರಿಂಥ 7:1-5) ಉದಾಹರಣೆಗೆ, ಒಬ್ಬ ಗಂಡನು ತಾತ್ಕಾಲಿಕ ಕಟ್ಟಡದ ಕೆಲಸಕ್ಕಾಗಿ ವಾಚ್ಟವರ್ ಸೊಸೈಟಿಯ ಸ್ಥಳೀಕ ಬ್ರಾಂಚಿಗೆ ಹೋಗಬಹುದು ಅಥವಾ ಇನ್ನಿತರ ದೇವಪ್ರಭುತ್ವ ಯೋಜನೆಯಲ್ಲಿ ಕೆಲಸಮಾಡಲು ಹೋಗಬಹುದು. ಇಂಥ ಸಂದರ್ಭದಲ್ಲಿ ತನ್ನ ಹೆಂಡತಿಯ ಹೃತ್ಪೂರ್ವಕ ಒಪ್ಪಿಗೆ ಇದಕ್ಕಿದೆ ಎಂದು ಅವನು ನಿಶ್ಚಯ ಮಾಡಿಕೊಳ್ಳಬೇಕು. ಇಂತಹ ಪ್ರತ್ಯೇಕತೆ ಕುಟುಂಬಕ್ಕೆ ಆತ್ಮಿಕ ಆಶೀರ್ವಾದಗಳನ್ನು, ಗಂಡನು ಹಿಂದಿರುಗಿ ಬಂದಾಗ ಪ್ರೋತ್ಸಾಹಕರ ಅನುಭವಗಳ ರೂಪದಲ್ಲಿ ತರಬಲ್ಲದು.
ಸಹೋದರಿಯರ ಪ್ರಾಮುಖ್ಯ ಪಾತ್ರ
18. ಒಬ್ಬ ಹಿರಿಯನ ಹೆಂಡತಿಗೆ ಏಕೆ ಹೆಚ್ಚಿನ ಜವಾಬ್ದಾರಿಕೆ ಇದೆ?
18 ಕ್ರೈಸ್ತ ಸ್ತ್ರೀಯ ಗಂಡನು ಹಿರಿಯನಾಗಿರುವಲ್ಲಿ ಆಕೆಗೆ ಹೆಚ್ಚು ಜವಾಬ್ದಾರಿಕೆಯಿದೆ. ಒಂದನೆಯದಾಗಿ, ಗಂಡನಿಂದ ಹೆಚ್ಚನ್ನು ಕೇಳಿಕೊಳ್ಳಲಾಗುತ್ತದೆ. ಸಭೆಯ ಆತ್ಮಿಕ ಸ್ಥಿತಿಗತಿಗೆ ಅವನು ಯೆಹೋವನಿಗೆ ಜವಾಬು ಕೊಡಬೇಕಾದವನು. (ಇಬ್ರಿಯ 13.17) ಆದರೆ ಆಕೆ ಹಿರಿಯನ ಹೆಂಡತಿಯಾಗಿರುವುದರಿಂದ ಮತ್ತು ಪ್ರಾಯಶ: ತಾನೇ ಪ್ರಾಯಸ್ಥ ಸ್ತ್ರೀಯಾಗಿರುವದರಿಂದ ಆಕೆಯ ಮರ್ಯಾದೆಯ ಮಾದರಿಯು ಸಹಾ ಪ್ರಾಮುಖ್ಯ. (1 ತಿಮೋಥಿ 5:9, 10, ಹೋಲಿಸಿ; ತೀತ 2:3-5) ಮತ್ತು ಹಿರಿಯರ ಪತ್ನಿಗಳಲ್ಲಿ ಹೆಚ್ಚಿನವರು ತಮ್ಮ ಗಂಡಂದಿರಿಗೆ ಬೆಂಬಲ ಕೊಡುವುದರಲ್ಲಿ ಎಷ್ಟು ಉತ್ತಮ ಮಾದರಿಯನ್ನಿಡುತ್ತಾರೆ! ಅನೇಕವೇಳೆ, ಗಂಡನು ಸಭಾವಿಚಾರಗಳನ್ನು ನೋಡಿಕೊಳ್ಳಲಿಕ್ಕಾಗಿ ಹೊರಗೆ ಹೋಗಬಹುದು ಮತ್ತು ಇದು ಒಂದುವೇಳೆ ಅವಳ ಕುತೂಹಲವನ್ನೆಬ್ಬಿಸಬಹುದು. ಆದರೂ ಕರ್ತವ್ಯನಿಷ್ಟೆಯಿಂದ ಇಂಥ ದೇವಭಕ್ತಿಯ ಪತ್ನಿ ಅಧಿಕಪ್ರಸಂಗಿಯಂತೆ ಸಭಾವಿಚಾರಗಳಲ್ಲಿ ತಲೆಹಾಕಳು.—1 ಪೇತ್ರ 4:15.
19. ಒಬ್ಬ ಹಿರಿಯನಿಗೆ ‘ಸ್ವಂತ ಮನೆಯವರನ್ನು ಆಳುವದರಲ್ಲಿ’ ಏನು ಸೇರಿರಬಹುದು?
19 ಆದರೂ ಹೆಂಡತಿ ಭಕ್ತಿವೃದ್ಧಿ ಮಾಡದಿರುವ ಮನೋಭಾವ ಪ್ರದರ್ಶಿಸುವಲ್ಲಿ ಅಥವಾ ಇತರ ಸಹೋದರಿಯರಿಗೆ ಉತ್ತಮ ಮಾದರಿಯನ್ನು ಇಡದಿರುವಲ್ಲಿ ಹಿರಿಯನು ತನ್ನ ಹೆಂಡತಿಗೆ ಸಲಹೆ ನೀಡಬೇಕಾದೀತು. ‘ಸ್ವಂತ ಮನೆಯವರನ್ನು ಆಳುವುದರಲ್ಲಿ’ ಕೇವಲ ಮಕ್ಕಳಲ್ಲ, ಹೆಂಡತಿಯೂ ಸೇರಿದ್ದಾಳೆ. ಈ ಶಾಸ್ತ್ರೀಯ ಮಟ್ಟವನ್ನು ಅನ್ವಯಿಸುವಾಗ ಕೆಲವು ಹೆಂಡತಿಯರ ಧೈನ್ಯಭಾವ ಪರೀಕೆಗ್ಷೊಳಗಾಗಬಹುದು.—1 ತಿಮೋಥಿ 3:4, 5, 11; ಇಬ್ರಿಯ 12:11.
20. ಪೂರ್ವಕಾಲದ ಮತ್ತು ಆಧುನಿಕ ಸಮಯಗಳ ಕೆಲವು ವಿವಾಹಿತ ಮತ್ತು ಅವಿವಾಹಿತ ಸಹೋದರಿಯರ ಉತ್ತಮ ಮಾದರಿಗಳನ್ನು ತಿಳಿಸಿರಿ. (ವಾಚ್ಟವರ್ ಪಬ್ಲಿಕೇಶನ್ ಇಂಡೆಕ್ಸ್ 1930-1985 ಈ ಪುಸ್ತಕದಲ್ಲಿ “ಲೈಫ್ ಸ್ಟೋರೀಸ್ ಆಫ್ ಜೆಹೋವಸ್ ವಿಟ್ನೆಸಸ್” ನೋಡಿ.)
20 ಅವಿವಾಹಿತ ಸಹೋದರಿಯರೂ ಸಭೆಯಲ್ಲಿರುವ ಹೆಂಡತಿಯರ ಗೌರವದ ಪಾತ್ರವನ್ನು ನೆನಪಿಕೊಳ್ಳಬಹುದು. ಶಾಸ್ತ್ರಗ್ರಂಥದಲ್ಲಿಯೂ ಇಂದಿನ ಸಭೆಗಳಲ್ಲಿಯೂ ನಂಬಿಗಸ್ತೆಯರಾದ ಉತ್ತಮ ಸಹೋದರಿಯರ ಅನೇಕ ಉತ್ತಮ ಮಾದರಿಗಳಿವೆ! ಪ್ರಾಯಶ: ಅವಿವಾಹಿತೆಯಾಗಿದ್ದ ದೊರ್ಕ ಎಂಬ ಸಹೋದರಿಯನ್ನು ಅವಳ “ಸತ್ಕ್ರಿಯೆ” ಗಳಿಗಾಗಿ ಬಹಳವಾಗಿ ಪ್ರಶಂಸಿಸಲಾಗಿದೆ. (ಅಪೋಸ್ತಲರ ಕೃತ್ಯ 9:36-42) ಪ್ರಿಸ್ಕ ಮತ್ತು ಫೊಯಿಬೆ ಸಹಾ ಸತ್ಯಕ್ಕಾಗಿ ಆಸಕ್ತಿ ತೋರಿಸಿದರು. (ರೋಮಾಪುರ 16:1-4) ಇದೇ ರೀತಿ ಇಂದು ನಮ್ಮ ಅನೇಕ ಸಹೋದರಿಯರು, ವಿವಾಹವಾಗಿರಲಿ ಇಲ್ಲದಿರಲಿ ಪ್ರಮುಖ ಮಿಶನೆರಿಗಳು, ಪಯನೀಯರರು ಮತ್ತು ಪ್ರಚಾರಕರಾಗಿದ್ದಾರೆ. ಅದೇ ಸಮಯದಲ್ಲಿ, ಇಂಥ ದೇವಭಕ್ತೆ ಮಹಿಳೆಯರು ನಿರ್ಮಲವೂ ವ್ಯವಸ್ಥಿತವೂ ಆದ ಮನೆಗಳನ್ನಿಡುತ್ತಾರೆ. ಅವರು ತಮ್ಮ ಕುಟುಂಬಗಳನ್ನು ಅಸಡ್ಡೆ ಮಾಡುವುದಿಲ್ಲ. ಅವರ ಸಂಖ್ಯೆ ಮತ್ತು ಸನ್ನಿವೇಶಗಳ ಕಾರಣದಿಂದ ಅನೇಕ ವೇಳೆ ಇವರು ಸಾರುವ ಕಾರ್ಯದಲ್ಲಿ ಹೆಚ್ಚಿನ ಭಾಗವನ್ನು ಮಾಡುತ್ತಾರೆ.—ಕೀರ್ತನೆ 68:11.
21. ಕ್ರೈಸ್ತ ಸಹೋದರರಿಗೆ ನಂಬಿಗಸ್ತ ಸಹೋದರಿಯರು ಹೇಗೆ ಪ್ರೋತ್ಸಾಹಜನಕರಾಗಿದ್ದಾರೆ?
21 ಸಭೆಯಲ್ಲಿ ನಂಬಿಗಸ್ತ ಸಹೋದರಿಯರು ಮುಖ್ಯವಾದ ಭಕ್ತಿವೃದ್ಧಿಯ ಪಾತ್ರವನ್ನು ವಹಿಸುತ್ತಾರೆ. ಅವರ ಆಸಕ್ತಿ ಮತ್ತು ಮಾದರಿ ಸಹೋದರರಿಗೂ ಸಭೆಗೂ ಪ್ರೋತ್ಸಾಹಜನಕವಾಗಿದೆ. ಅವರು ನಿಜವಾಗಿಯೂ ಅನುಪೂರಕರೂ ಸಹಾಯಕರೂ ಆಗಿದ್ದಾರೆ. (ಆದಿಕಾಂಡ 2:18 ಹೋಲಿಸಿ.) ಇವರು ಎಂತಹ ನಿಜ ಪ್ರೀತಿ ಮತ್ತು ಗೌರವಕ್ಕೆ ಅರ್ಹರು! ಮತ್ತು ಕ್ರೈಸ್ತ ವಿವಾಹ ಜೊತೆಗಳಿಗೆ ಪೌಲನ ಬುದ್ಧಿವಾದ ಅತಿ ಯೋಗ್ಯವಾಗಿದೆ: “ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನು ಪ್ರೀತಿಸಬೇಕು. ಪ್ರತಿ ಹೆಂಡತಿಯು ತನ್ನ ಗಂಡನಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕು.”—ಎಫೆಸ 5:33. (w89 5/15)
ನೆನಪಿದೆಯೇ?
◻ ಪರಿಪೂರ್ಣ ಪುರುಷನಿಗೂ ಸ್ತ್ರೀಗೂ ದೇವರು ಕೊಟ್ಟ ಮೂಲ ಪಾತ್ರ ಯಾವುದು?
◻ ಅವಿಶ್ವಾಸಿಗಳಾದ ಗಂಡಂದಿರನ್ನು ಸತ್ಯದ ಪಕ್ಷಕ್ಕೆ ಹೇಗೆ ಜಯಿಸಬಹುದು?
◻ ಸಮರ್ಥಳಾದ ಹೆಂಡತಿಯ ಪ್ರಮುಖ ಗುಣಗಳಾವುವು?
◻ ಒಬ್ಬ ಕ್ರೈಸ್ತ ಪತ್ನಿ ‘ಸಾತ್ವಿಕವಾದ ಶಾಂತ ಮನಸ್ಸನ್ನು’ ಹೇಗೆ ತೋರಿಸಬಹುದು?
◻ ಗಂಡ ಹೆಂಡಿರ ಮಧ್ಯೆ ಶಾರೀರಿಕ ಸಂಬಂಧದಲ್ಲಿ ಯಾವ ಸಮತೆ ಅಗತ್ಯ?
[ಪುಟ 22 ರಲ್ಲಿರುವ ಚಿತ್ರ]
ಕುಟುಂಬವು ಇಬ್ಬರು ಸ್ಪರ್ಧಿಗಳಾಗಿರುವ ಕ್ಯಾಪನ್ಟರಿರುವ ನೌಕೆಯಂತಿರಬಾರದು
[ಪುಟ 24 ರಲ್ಲಿರುವ ಚಿತ್ರ]
ತನ್ನ ಹೆಂಡತಿಯ ಕೂಟದ ಹಾಜರಿ ಮತಿತ್ತರ ಕ್ರಿಸ್ತೀಯ ಚಟುವಟಿಕೆಗಳನ್ನು ನೋಡಿ ಗಂಡನಿಗೆ ಸಂಶಯ ಮತ್ತು ತುಸು ಭಯವೂ ಆಗಬಹುದು. ಅವನಿಗೆ ಹೇಗೆ ಸಹಾಯ ನೀಡಬಹುದು?