“ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ”
ಒಂದನೆಯ ಕೊರಿಂಥದವರಿಗೆ ಪತ್ರದ ಮುಖ್ಯಾಂಶಗಳು
ಯೆಹೋವ ದೇವರ ಘನತೆಯು ಆತನನ್ನು “ಆತ್ಮ ಮತ್ತು ಸತ್ಯದಿಂದ” ಆರಾಧಿಸುವವರೆಲರ್ಲಿಗೆ ಅತೀ ಪ್ರಾಮುಖ್ಯತೆಯದ್ದಾಗಿದೆ. (ಯೋಹಾನ 4:23, 24) ಆದಕಾರಣ, ಅಪೊಸ್ತಲ ಪೌಲನು ಪುರಾತನ ಕೊರಿಂಥದಲ್ಲಿದ್ದ ಜತೆಕ್ರೈಸ್ತರಿಗೆ ಅಂದದ್ದು: “ಹೀಗಿರಲಾಗಿ ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ.” (1 ಕೊರಿಂಥ 10:31) ಈ ಪ್ರಾಪಂಚಿಕ, ಅನೈತಿಕ ಲೋಕವು ಸುಳ್ಳು ಧರ್ಮದಲ್ಲಿ ಮುಳುಗಿರುವಾಗ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಯೆಹೋವನ ಮಾರ್ಗವನ್ನು ನಾವು ಸ್ವೀಕರಿಸುವುದು ಇದರಲ್ಲಿ ಸೇರಿರುತ್ತದೆ.
ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಕೊರಿಂಥ್ಯದ ಕ್ರೈಸ್ತರಿಗೆ ದೈವಿಕ ಸಹಾಯ ಬೇಕಾಗಿತ್ತು, ಯಾಕೆಂದರೆ ಸುಳ್ಳುಧರ್ಮದಿಂದ ಪೂರ್ಣವಾಗಿ ತುಂಬಿದ್ದ ಸಮೃದ್ಧಿಯ, ಅನೈತಿಕ ನಗರವೊಂದರಲ್ಲಿ ಅವರು ಜೀವಿಸುತ್ತಿದ್ದರು. ಗ್ರೀಕ್ಖಂಡ ಮತ್ತು ಪಿಲೊಪೊನಿಸೊಸ್ ಮಧ್ಯದಲ್ಲಿನ ಭೂಸಂಧಿಯಲ್ಲಿ ಇದು ಇದ್ದು, ರೋಮಿನ ಆಖಾಯ ಪ್ರಾಂತ್ಯದ ರಾಜಧಾನಿಯಾಗಿದ್ದ ಈ ಕೊರಿಂಥ್ಯದಲ್ಲಿ ಸುಮಾರು 4,00,000 ಜನಸಂಖ್ಯೆ ಇತ್ತೆಂದು ಅಂದಾಜಿಸಲಾಗಿದೆ. ಸಾ.ಶ. 50ರ ಸುಮಾರಿಗೆ ಪೌಲನು ಅಲ್ಲಿ ಸಭೆಯನ್ನು ಸ್ಥಾಪಿಸಿದ್ದನು.—ಅ. ಕೃತ್ಯಗಳು 18:1-11.
ಮದುವೆ ಮತ್ತು ವಿಗ್ರಹಗಳಿಗೆ ನೈವೇದ್ಯ ಮಾಡಿದ ಮಾಂಸವನ್ನು ತಿನ್ನುವುದರ ಕುರಿತಾಗಿ ಪ್ರಶ್ನಿಸಿ, ಕೊರಿಂಥ್ಯರು ಪೌಲನಿಗೆ ಬರೆದಿದ್ದರು. (7:1) ಅವರಲ್ಲಿ ಭೇದಗಳು ಮತ್ತು ಒಂದು ಗಂಭೀರ ಅನೈತಿಕತೆ ಇದ್ದಕಾರಣ ಅವನಿಗೆ ತುಂಬಾ ಕ್ಲೇಶವುಂಟಾಗಿತ್ತು. ಕರ್ತನ ರಾತ್ರಿಭೋಜನದ ಆಚರಣೆಯ ಯೋಗ್ಯಕ್ರಮದ ಕುರಿತಾಗಿ ಅವರಿಗೆ ಸಲಹೆ ಅವಶ್ಯವಾಗಿತ್ತು. ಧರ್ಮಭ್ರಷ್ಟತೆಯ ಬೆದರಿಕೆಯು ಕೂಡ ಅಲ್ಲಿತ್ತು. ಸಭೆಗೆ ಪ್ರೀತಿಯ ಮೇಲೆ ಬುದ್ಧಿವಾದ ಬೇಕಾಗಿತ್ತು. ಅಂತಹ ಕಾರಣಗಳಿಗಾಗಿ ಸಾ.ಶ. 55ರಲ್ಲಿ ಎಫೆಸ್ಯದಿಂದ ಕೊರಿಂಥದವರಿಗೆ ತನ್ನ ಮೊದಲ ಪತ್ರವನ್ನು ಪೌಲನು ಬರೆದನು. ಆದರೆ ಅದರಿಂದ ನಾವು ಕೂಡ ಪ್ರಯೋಜನ ಪಡೆಯ ಬಲ್ಲೆವು.
ಐಕ್ಯತೆ ಮತ್ತು ನೈತಿಕ ಶುದ್ಧತೆ ಅವಶ್ಯ
ನಾವು “ಎಲ್ಲವನ್ನೂ ದೇವರ ಘನತೆಗಾಗಿ ಮಾಡುವುದಾದರೆ” ಸಭೆಯಲ್ಲಿ ಭೇದಗಳನ್ನು ಹುಟ್ಟಿಸಲು ಕಾರಣರಾಗುವ ಯಾರನ್ನೂ ಅನುಸರಿಸಲಾರೆವು—ಇದೊಂದು ಸಮಸ್ಯೆಯನ್ನು ಕೊರಿಂಥದವರು ಎದುರಿಸಿದ್ದರು. (1:1–4:21) ಪೌಲನು ಅವರಿಗೆ ಪ್ರಬೋಧನೆ ಕೊಟ್ಟು ‘ಒಂದೇ ಮಾತು ಆಗಿರಬೇಕು; ಭೇದಗಳಿರಬಾರದು, ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿದ್ದು ಹೊಂದಿಕೆಯಿಂದಿರಬೇಕು” ಎಂದಿದ್ದನು. ಈ ಬುದ್ಧಿವಾದವನ್ನು ನಾವು ಅನುಸರಿಸಿದರೆ ಮತ್ತು ಆತ್ಮಿಕ ಗುಣಗಳನ್ನು ಬೆಳೆಸಿದರೆ ಐಕ್ಯತೆ ಇರುವದು. ಯಾವನೇ ಪಾಪಿ ಮಾನವನಲ್ಲಿ ಗರ್ವಪಡುವದರ ಬದಲು, ನಾವು ‘ನೆಡುತ್ತೇವೆ ಮತ್ತು ನೀರು ಹೊಯ್ಯುತ್ತೇವೆ, ಬೆಳೆಸುತ್ತಾ ಬರುವವನು ದೇವರು’ ಆತ್ಮಿಕವಾಗಿ, ಎಂಬದನ್ನು ನಾವು ನೆನಪಿಡತಕ್ಕದ್ದು. ಹೆಮ್ಮೆ ಪಡುತ್ತಿದ್ದ ಕೊರಿಂಥದ ಕೆಲವರು ಹೊಂದದೆ ಇರುವಂಥದ್ದು ಯಾವದೂ ಇರಲಿಲ್ಲ. ಅದುದರಿಂದ ನಮ್ಮ ಸಹ ವಿಶ್ವಾಸಿಗಳಿಂದ ನಾವು ಉತ್ತಮರು ಎಂಬದಾಗಿ ನಾವಾಗಿಯೇ ಎಂದಿಗೂ ಎಣಿಸದಿರೋಣ. ಅಂತಹ ದೀನ ಆತ್ಮವು ಐಕ್ಯತೆಯನ್ನು ವರ್ಧಿಸಲು ನಮಗೆ ನೆರವಾಗುತ್ತದೆ.
ಐಕ್ಯತೆಯು ನೆಲೆಸಿರಬೇಕಾದರೆ, ಸಭೆಯನ್ನು ಆತ್ಮಿಕವಾಗಿ ಶುದ್ಧವಾಗಿಡಲು ಹಿರಿಯರು ಕ್ರಿಯೆಗೈಯತಕ್ಕದ್ದು (5:1–6:20) “ಸ್ವಲ್ಪ ಹುಳಿಯು ಕಣಿಕವನ್ನೆಲ್ಲಾ ಹುಳಿ” ಮಾಡುವದರಿಂದ, ಪಶ್ಚಾತ್ತಾಪಪಡದ ವ್ಯಭಿಚಾರಿಗಳು, ಲೋಭಿಗಳು, ವಿಗ್ರಹಾರಾಧಕರು, ದೂಷಕರು, ಕುಡಿಕರು ಅಥವಾ ಸುಲುಕೊಳ್ಳುವವರು ಬಹಿಷ್ಕರಿಸಲ್ಪಡಬೇಕು. ದೇವರ ಆಲಯವನ್ನು ನೈತಿಕ ಅಶುದ್ಧತೆಯು ಮಲಿನಗೊಳಿಸುವುದರಿಂದ ಯೆಹೋವನ ಜನರಲ್ಲಿ ಅದನ್ನು ಸಹಿಸಬಾರದು. ಬದಲಾಗಿ, ದೇವರನ್ನು ಘನಪಡಿಸುವ ಸಂಗತಿಗಳನ್ನು ಮಾಡತಕ್ಕದ್ದು.
ಇತರರೆಡೆ ಪರಿಗಣನೆಯುಳ್ಳವರಾಗಿರಿ
“ಎಲ್ಲವನ್ನು ದೇವರ ಘನತೆಗಾಗಿ ಮಾಡಲು” ವಿವಾಹ ಮತ್ತು ಏಕಾಂಗಿಯಾಗಿರುವ ಕುರಿತಾದ ಪೌಲನ ಸಲಹೆಗಳನ್ನು ಅನ್ವಯಿಸುವ ಅಗತ್ಯ ನಮಗಿದೆ. (7:1-40) ವಿವಾಹವಾಗಿರುವವರು ಪರಿಗಣನೆಯುಳ್ಳವರಾಗಿ ಲೈಂಗಿಕ ಸಲ್ಲತಕ್ಕದ್ದನ್ನು ಸಲ್ಲಿಸಬೇಕು. ಅವಿಶ್ವಾಸಿ ಸಂಗಾತಿಯಿಂದ ವಿವಾಹಿತ ಕ್ರೈಸ್ತನೊಬ್ಬನು ಅಗಲಿ ಹೋಗಬಾರದು, ಒಟ್ಟಿಗೆ ನಿಲ್ಲುವದರಿಂದ ಒಬ್ಬನು ರಕ್ಷಣೆ ಪಡೆಯಲು ಸಹಾಯವಾಗಬಹುದು. ಹೆಚ್ಚಿನ ಚಿಂತೆಯನ್ನು ಮದುವೆಯು ತರುವಾಗ, ಏಕಾಂಗಿತನವು, ಅಪಕರ್ಶಣೆಯಿಲ್ಲದೇ ಕರ್ತನನ್ನು ಸೇವಿಸುವದರಿಂದ ಇತರರಿಗೆ ಆತ್ಮೀಕವಾಗಿ ಸಹಾಯ ಮಾಡಲು ಇಚ್ಛಿಸುವ ವ್ಯಕ್ತಿಗಳಿಗೆ ಪ್ರಯೋಜನದಾಯಕವಾಗಬಲ್ಲದು.
ಇತರ ಆತ್ಮೀಕ ಹಿತಾಸಕ್ತಿಯೆಡೆಗೆ ಪರಿಗಣನೆ ತೋರಿಸುವದು, ಅವರು ವಿವಾಹಿತರಿರಲಿ, ಅವಿವಾಹಿತರಿರಲಿ, ಎಲ್ಲಾ ಕ್ರೈಸ್ತರ ಕರ್ತವ್ಯವಾಗಿರುತ್ತದೆ. (8:1–10:33) ಆದಕಾರಣ, ವಿಗ್ರಹಗಳಿಗೆ ನೈವೇದ್ಯವಾಗಿ ಅರ್ಪಿಸಿದ ಆಹಾರವನ್ನು ತಿಂದು ಇತರರಿಗೆ ವಿಘ್ನಕಾರಿಗಳಾಗದಂತೆ ಕೊರಿಂಥದವರಿಗೆ ಬುದ್ಧಿವಾದ ಕೊಡಲಾಯಿತು. ಸುವಾರ್ತೆಯನ್ನು ಸ್ವೀಕರಿಸಲು ಅಡ್ಡಿಯಾಗುವದನ್ನು ಹೋಗಲಾಡಿಸಲಿಕ್ಕಾಗಿ, ಲೌಕಿಕ ನೆರವನ್ನು ಪಡೆಯುವ ತನ್ನ ಹಕ್ಕನ್ನು ಪೌಲನು ಚಲಾಯಿಸಲಿಲ್ಲ. ಅವನು ‘ಇತರರಿಗೆ ಸಾರಿಯಾದ ಮೇಲೆ ತಾನೇ ಅಯೋಗ್ಯನೆನಿಸಿ ಕೊಂಡೆನೋ ಎಂಬ ಭಯದಿಂದ ತನ್ನ ಮೈಯನ್ನು ಜಜ್ಜಿ ಸ್ವಾಧೀನ ಪಡಿಸಿಕೊಳ್ಳುತ್ತಿದ್ದನು.’ ಪಾಪಿಗಳಾದ ಇಸ್ರಾಯೇಲ್ಯರ ಅರಣ್ಯ ಸಂಚಾರದ ಅನುಭವಗಳನ್ನು ಹೃದಯಕ್ಕೆ ತೆಗೆದುಕೊಳ್ಳುವದರಿಂದ ವಿಗ್ರಹಾರಾಧನೆ ಮತ್ತು ಕೆಟ್ಟತನವನ್ನು ಹೋಗಲಾಡಿಸಲು ನಮಗೆ ಸಹಾಯವಾಗುತ್ತದೆ.
ಗೌರವ ತೋರಿಸಿರಿ ಮತ್ತು ಕ್ರಮವನ್ನು ಕಾಪಾಡಿರಿ
“ಎಲ್ಲವನ್ನು ದೇವರ ಘನತೆಗಾಗಿ ಮಾಡುವದು” ಯೋಗ್ಯ ಗೌರವ ನಾವು ತೋರಿಸುವಂತೆ ಅಪೇಕ್ಷಿಸುತ್ತದೆ. (11:1-34) ಸಭೆಯಲ್ಲಿ ಪ್ರಾರ್ಥಿಸುವಾಗ ಯಾ ಪ್ರವಾದಿಸುವಾಗ ಮೊದಲನೆ ಶತಕದ ಕ್ರೈಸ್ತ ಸ್ತ್ರೀಯರು ತಲೆಗೆ ಮುಸುಕು ಧರಿಸುವದರ ಮೂಲಕ ಶಿರಸ್ಸುತನಕ್ಕೆ ಗೌರವ ತೋರಿಸಿದರು. ತದ್ರೀತಿಯ ಶಿರಸ್ಸುತನಕ್ಕೆ ಗೌರವ ಇಂದಿನ ದೇವಭೀರು ಸ್ತ್ರೀಯರಿಂದ ತೋರಿಸಲ್ಪಡುತ್ತದೆ. ಅದಲ್ಲದೇ, ಕರ್ತನ ರಾತ್ರಿ ಭೋಜನದಾಚರಣೆಗೆ ನಾವೆಲ್ಲರೂ ಗೌರವ ತೋರಿಸುವದರಿಂದ ಕೊರಿಂಥದವರಿಗೆ ಅವಶ್ಯವಾದ ಸರಿಪಡಿಸುವಿಕೆ ನಮಗೆ ಸಿಗದಂತೆ ಅವರಂತಾಗುವದನ್ನು ಹೋಗಲಾಡಿಸೋಣ.
“ದೇವರ ಘನತೆಗಾಗಿ ಎಲ್ಲವನ್ನು ಮಾಡಬೇಕಾದರೆ” ನಾವು ಕೂಟಗಳನ್ನು ಕ್ರಮಬದ್ಧವಾಗಿ ನಡಿಸತಕ್ಕದ್ದು. (12:1–14:40) ಆರಂಭದ ಕ್ರೈಸ್ತರು ಒಟ್ಟುಸೇರಿದಾಗ, ಆತ್ಮನ ವರದಾನಗಳಂತಹ ವಾಣಿಗಳಲ್ಲಿ ಮಾತಾಡುವಂತಹದ್ದನ್ನು, ಅದರ ಉಗಮ ಮತ್ತು ಉದ್ದೇಶದೆಡೆಗೆ ಗೌರವ ಮತ್ತು ಗಣ್ಯತೆಯನ್ನು ತೋರಿಸುತ್ತಾ ಅದನ್ನು ಬಳಸಬೇಕಿತ್ತು. ಇಂತಹ ವರದಾನಗಳಿಂದು ನಮಗಿಲ್ಲವಾದರೂ, ಅವುಗಳಿಗಿಂತಲೂ ಮಿಗಿಲಾದ ಪ್ರೀತಿಯನ್ನು ಪ್ರದರ್ಶಿಸುವದರಿಂದ ದೇವರಿಗೆ ಮಹಿಮೆಯನ್ನು ನಾವು ತರುತ್ತೇವೆ. ನಾವು ಯೆಹೋವನನ್ನು ಘನಪಡಿಸುತ್ತೇವೆ ಯಾಕಂದರೆ ನಮ್ಮ ಕೂಟಗಳು ಒಳ್ಳೇದಾಗಿ ಸಂಸ್ಥಾಪಿಸಲ್ಪಟ್ಟಿವೆ ಮತ್ತು ಪೌಲನ ಬುದ್ಧಿವಾದವನ್ನು ನಾವು ಗೌರವಯುಕ್ತವಾಗಿ ಅನ್ವಯಿಸುತ್ತೇವೆ: “ಆದರೆ ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲಿ.”
“ಎಲ್ಲವನ್ನು ದೇವರ ಘನತೆಗಾಗಿ ಮಾಡುವದು” ಬೈಬಲಿನ ಬೋಧನೆಗಳಿಗೆ ನಾವು ಗೌರವ ನೀಡುವದೂ ಮತ್ತು ಆತ್ಮಿಕವಾಗಿ ಸ್ಥಿರರಾಗಿ ನಿಲ್ಲುವದೂ ನಮ್ಮಿಂದ ಕೇಳಿಕೊಳ್ಳುತ್ತದೆ. (15:1–16:24) ಗ್ರೀಕ್ ತತ್ವಜ್ಞಾನದಿಂದ ಪ್ರಾಯಶ: ಪ್ರಭಾವಿತರಾಗಿ, ಕೊರಿಂಥ ಸಭೆಯ ಕೆಲವರು ಹೇಳಿದ್ದು: “ಸತ್ತವರಿಗೆ ಪುನರುತ್ಥಾನವೇ ಇಲ್ಲ.” (ಅ. ಕೃತ್ಯಗಳು 17:18, 32 ಹೋಲಿಸಿ.) ಜೀವಂತ ಕ್ರೈಸ್ತರು ಸಾಂಕೇತಿಕ, ಆತ್ಮೀಕ ಪುನರುತ್ಥಾನವೊಂದನ್ನು ಈಗಾಗಲೇ ಅನುಭವಿಸಿದ್ದಾರೆ, ಆದ್ದರಿಂದ ಭವಿಷ್ಯದಲ್ಲೊಂದು ಪುನರುತ್ಥಾನವಿಲ್ಲವೆಂಬ ಧರ್ಮಭ್ರಷ್ಟ ನೋಟವನ್ನು ಅವರು ಇರಿಸಿಕೊಂಡಿರಬಹುದು. (2 ತಿಮೊಥಿ 2:16-18) ಯೇಸುವಿನ ಪುನರುತ್ಥಾನವನ್ನು ಉಲ್ಲೀಖಿಸುತ್ತಾ ನಿಜ ನಿರೀಕ್ಷೆಯನ್ನು ಪೌಲನು ಬೆಂಬಲಿಸಿದನು ಮತ್ತು ಅಮರತ್ವದ ಸ್ವರ್ಗೀಯ ಜೀವಿತಕ್ಕೆ ಎಬ್ಬಿಸಲ್ಪಡಬೇಕಾದರೆ ಅಭಿಷಿಕ್ತ ಕ್ರೈಸ್ತರು ಸಾಯಲೇ ಬೇಕಾಗಿದೆ ಎಂದು ತೋರಿಸಿದನು. ಬೇರೆ ರೀತಿಗಳಲ್ಲೂ ಅವನ ಮಾತುಗಳು ನಾವು ಧರ್ಮಭ್ರಷ್ಟತೆಯನ್ನು ಹೋಗಲಾಡಿಸಲು ಮತ್ತು “ನಂಬಿಕೆಯಲ್ಲಿ ಸ್ಥಿರರಾಗಿ ನಿಲ್ಲಲು” ನಮಗೆ ಸಹಾಯ ಮಾಡುತ್ತವೆ.
ಯಾವಾಗಲೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ
ಸಾ.ಶ. ಮೊದಲನೆ ಶತಕದಂತೆ, ಮೊದಲನೆ ಕೊರಿಂಥದವರಿಗೆ ಬರೆದ ಪತ್ರಿಕೆಯಲ್ಲಿರುವ ಪೌಲನ ಹಿತೋಕ್ತಿಯು ಇಂದು ಪ್ರಯೋಜನಕರವಾಗಿದೆ. ಶುದ್ಧ ಜನರಾಗಿ ಐಕ್ಯತೆಯಿಂದ ದೇವರನ್ನು ಸೇವಿಸಲು ಆಧುನಿಕ ದಿನದ ಯೆಹೋವನ ಸಾಕ್ಷಿಗಳನ್ನು ಅದು ಪ್ರಚೋದಿಸುತ್ತದೆ. ಇತರರ ಬಗ್ಗೆ ಹಿತಾಸಕ್ತಿಯುಳ್ಳವರಾಗುವಂತೆ, ಯೋಗ್ಯ ಗೌರವ ತೋರಿಸುವಂತೆ ಅಪೊಸ್ತಲನ ಮಾತುಗಳು ನಮ್ಮನ್ನು ಪ್ರೇರಿಸಬೇಕಾಗಿದೆ. ಧರ್ಮಭ್ರಷ್ಟತೆಯನ್ನು ಪ್ರತಿರೋಧಿಸಲು ಮತ್ತು ನಿಜನಂಬಿಕೆಯಲ್ಲಿ ಸ್ಥಿರರಾಗಿ ನಿಲ್ಲಲು ಪೌಲ ನೇನು ಅಂದನೋ ಅದು ನಮ್ಮನ್ನು ಬಲಪಡಿಸ ಶಕ್ತವಾಗಿದೆ.
ಖಂಡಿತವಾಗಿಯೂ, ಯೆಹೋವನ ಪ್ರತಿಯೊಬ್ಬ ನಂಬಿಗಸ್ತ ಸೇವಕನ ಹೃದಯಪೂರ್ವಕ ಆಶೆಯೇನಂದರೆ ಅವನನ್ನು ಸ್ತುತಿಸಲು, ಅವನ ರಾಜ್ಯವನ್ನು ಪ್ರಕಟಿಸಲು ಮತ್ತು ಅವನ ಪವಿತ್ರ ನಾಮವನ್ನು ಮಹಿಮೆ ಪಡಿಸುವುದೇ ಆಗಿರುತ್ತದೆ. (ಕೀರ್ತನೆ 145: 1, 2, 10-13) ವಾಸ್ತವದಲ್ಲಿ ಪೌಲನು ಮೊದಲನೆ ಕೊರಿಂಥದವರಿಗೆ ಬರೆದ ಪತ್ರವು “ಎಲ್ಲವನ್ನು ದೇವರ ಘನತೆಗಾಗಿ ಮಾಡಲು” ನಮಗೆ ಸಹಾಯ ನೀಡುತ್ತದೆ. (w90 9/15)
[ಚೌಕ/ಚಿತ 28,29]
ಸಾಯುವದು ಖಂಡಿತ: ಮಲ್ಲರಂಗದಲ್ಲಿನ ಮರಣದ ಕುರಿತಾಗಿ ಪೌಲನು ಕೊರಿಂಥದವರಿಗೆ ಬರೆದ ತನ್ನ ಪತ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪ್ರಸ್ತಾಪಿಸಿದ್ದಾನೆ. ಉದಾಹರಣೆಗೆ ಅವನು ಬರೆದದ್ದು: “ಹಾಗಾಗದೆ ದೇವರು ಅಪೊಸ್ತಲರಾದ ನಮ್ಮನ್ನು ಮರಣವಿಧಿ ಹೊಂದಿದವರನ್ನೋ ಎಂಬಂತೆ ಕಡೆಯವರಾಗಿ ತೋರಿಸಿದ್ದಾನೆಂದು ನನಗೆ ತೋಚುತ್ತದೆ; ನಾವು ದೇವದೂತರಿಗೂ ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲಾ ನೋಟವಾದೆವು.” (1 ಕೊರಿಂಥ 4:9) ಪೌಲನು ಬೆಸಿಯ್ಟರಿ (ಮೃಗಗಳೊಂದಿಗೆ ಹೋರಾಡಿದ ಪುರುಷರು) ಮತ್ತು ಗಾಡ್ಲಿಯೇಟರ್ಸ್ (ಪುರುಷರೊಂದಿಗೆ ಹೋರಾಡಿದ ಖಡ್ಗಮಲ್ಲರು)ರ ಸಾರ್ವಜನಿಕ ಪ್ರದರ್ಶನಗಳ ಕುರಿತು ಯೋಚಿಸುತ್ತಿದ್ದಿರಬಹುದು. ಕೆಲವರು ಸಂಬಳಕ್ಕಾಗಿ ಹೋರಾಡಿದರು, ಆದರೆ ದುಷ್ಕರ್ಮಿಗಳು ಹೋರಾಡುವಂತೆ ಬಲಾತ್ಕರಿಸಲ್ಪಟ್ಟರು. ಮೊದಲು ಆಯುಧಗಳನ್ನು ಬಳಸಲು ಅನುಮತಿಯನ್ನಿತ್ತಿದ್ದರೂ, ಅನಂತರ ಈ ಸೆರೆಮನೆವಾಸಿಗಳು ಯಾವುದೇ ಉಡುಪಿಲ್ಲದೆ, ನಿರಾಯುಧರಾಗಿ ತರಲ್ಪಡುತ್ತಿದ್ದರು ಮತ್ತು ಸಾಯುವದು ಖಂಡಿತವಾಗಿತ್ತು.
“ದೇವದೂತರು” ಮತ್ತು “ಮನುಷ್ಯರು” (ಕೇವಲ ಮಾನವಕುಲದ “ಲೋಕ”ವಲ್ಲ) ವೀಕ್ಷಕರಾಗಿದ್ದು, ಅಪೊಸ್ತಲರು ಅಂತಹ ಕೊನೆಯ ಹೆಪ್ಪುಗಟ್ಟಿದ ನೋಟವೊಂದರಲ್ಲಿ ಸಾಯುವವರೋಪಾದಿ ಇದ್ದರು. ಪೌಲನು “ಎಫೆಸದಲ್ಲಿ ಮೃಗಗಳೊಂದಿಗೆ ಯುದ್ಧ ಮಾಡಿದ್ದೆನು” ಎಂದು ಹೇಳಿದ್ದನ್ನು ಕೆಲವರು ಸಂದೇಹಿಸುತ್ತಾರೆ ಯಾಕಂದರೆ ರೋಮನ್ ನಾಗರಿಕನೊಬ್ಬನನ್ನು ಅಂತಹ ವರ್ತನೆಗೆ ಒಳಪಡಿಸಲಿಕ್ಕಿಲ್ಲ, ಬದಲು ಮೃಗಗಳಂತಹ ವಿರೋಧಿಗಳನ್ನು ಅವರು ಪ್ರಾಸ್ತಾವಿಕವಾಗಿ ಹೇಳಿರಬಹುದೆನ್ನುತ್ತಾರೆ. (1 ಕೊರಿಂಥ 15:32) ಆದರೂ, ದೇವರು ಅವನನ್ನು ಆಸ್ಯ ಸೀಮೆಯಲ್ಲಿ (ಅಲ್ಲಿ ಎಫೆಸ್ಯವು ಇತ್ತು) “ಮರಣವಾಗುತ್ತದೆಂಬ ನಿಶ್ಚಯದಂತಹ ಅತ್ಯಧಿಕ ಭಾರದಿಂದ” ಪಾರು ಮಾಡಿದ್ದನೆಂಬ ಪೌಲನ ಹೇಳಿಕೆಯು, ಮಾನವ ವಿರೋಧಿಗಳಿಂದ ಯಾ ಮಲ್ಲರಂಗದಲ್ಲಿ ನೈಜವಾದ ಕ್ರೂರ ಮೃಗಗಳೊಂದಿಗೆ ಅವನಿಗೆ ಅನುಭವವಾಗಿತ್ತೆಂಬದು ಹೆಚ್ಚು ಹೊಂದಿಕೆಯಾಗುತ್ತದೆ.—2 ಕೊರಿಂಥ 1:8-10; 11:23; ಅ. ಕೃತ್ಯ 19:23-41.
[ಪುಟ 29 ರಲ್ಲಿರುವ ಚೌಕ/ಚಿತ್ರಗಳು]
ಬಹುಮಾನವನ್ನು ನೋಟದಲ್ಲಿ ಇಡುವದು: ಮುಖ್ಯ ವಿಷಯಗಳನ್ನು ಉದಾಹರಿಸಲು ಪೌಲನು ಪ್ರಾಚೀನ ಗ್ರೀಸಿನ ಆಟಗಳ ಲಕ್ಷಣಗಳನ್ನು ಬಳಸಿದನು. (1ಕೊರಿಂಥ 9:24-27) ಭೂಸಂಧಿಯ (ಇಸ್ತಾಮಿಯನ್ ಗೇಮ್ಸ್) ಆಟಗಳಂತಹ ಸ್ಪರ್ಧೆಗಳು ಎರಡು ವರ್ಷಗಳಿಗೊಮ್ಮೆ ಕೊರಿಂಥದಲ್ಲಿ ನಡಿಸಲ್ಪಡುತ್ತಿದ್ದವು. ಕಾರ್ಯಕ್ರಮವು ಓಡುವ, ಮುಷ್ಟಿಕಾಳಗದ ಮತ್ತು ಇತರ ಆಟೋಟಗಳಿಂದ ಕೂಡಿರುತ್ತಿತ್ತು. ಈ ಸ್ಪರ್ಧೆಗಳಿಗೆ ಸಿದ್ಧತೆ ನಡಿಸುವಾಗ ಓಟಗಾರರು ಮತ್ತು ಮುಷ್ಟಿಕಾಳಗ ಜಟ್ಟಿಗಳು ಸ್ವನಿಯಂತ್ರಣದ ಅಭ್ಯಾಸಗಳನ್ನು ಮಾಡಬೇಕಿತ್ತು, ಸರಳವಾದ ಆರೋಗ್ಯಕರ ಆಹಾರ ಸೇವಿಸಬೇಕಿತ್ತು ಮತ್ತು ಹತ್ತು ತಿಂಗಳ ತನಕ ದ್ರಾಕ್ಷಾರಸ ಕುಡಿಯಬಾರದಿತ್ತು. ಆದಾಗ್ಯೂ, ಇಸ್ತಾಮಿಯನ್ ಆಟಗಳಲ್ಲಿ ಬಾಡಿ ನಾಶವಾಗುವಂತಹ ಪೀತದಾರು ಯಾ ಐವಿಯೆಂಬ ನಿತ್ಯ ಹಸುರಿನ ಹಬ್ಬು ಬಳ್ಳಿಯಿಂದ ಮಾಡಿದ ಜಯಮಾಲೆಯನ್ನು ಗೆದ್ದವರಿಗೆ ಕೊಡುತ್ತಿದ್ದರು, ಇದಕ್ಕೆ ಬದಲಾಗಿ ಅಭಿಷಿಕ್ತ ಕ್ರೈಸ್ತರು ಲಯವಾಗದ ಅಮರ ಜೀವದ ಬಹುಮಾನಕ್ಕಾಗಿ ಪ್ರಯತ್ನಿಸುತ್ತಿದ್ದರು. ಈ ಬಹುಮಾನವನ್ನು ಪಡೆಯ ಬೇಕಾದರೆ, ಒಬ್ಬನು ತನ್ನ ಕಣ್ಣುಗಳನ್ನು ಅದರ ಮೇಲೆಕೇಂದ್ರೀಕರಿಸಬೇಕು ಮತ್ತು ದಮೆಯನ್ನು ಅಭ್ಯಾಸಿಸಬೇಕು. ಐಹಿಕ ನಿತ್ಯಜೀವವನ್ನು ನೋಟದಲ್ಲಿಟ್ಟುಕೊಂಡಿರುವ ಯೆಹೋವನ ಸಾಕ್ಷಿಗಳಿಗೂ ಅದೇ ಸೂತ್ರ ಅನ್ವಯಿಸುತ್ತದೆ.