ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್ಗಳು
ಏಪ್ರಿಲ್ 22-28
ಬೈಬಲಿನಲ್ಲಿರುವ ರತ್ನಗಳು | 1 ಕೊರಿಂಥ 14–16
“ದೇವರು ಎಲ್ಲರಿಗೂ ಎಲ್ಲವೂ ಆಗುವನು”
kr ಪುಟ 237 ಪ್ಯಾರ 21
ದೇವರ ಇಷ್ಟವನ್ನು ರಾಜ್ಯವು ಭೂಮಿಯ ಮೇಲೆ ನೆರವೇರಿಸುತ್ತದೆ
21 ಕಾಯಿಲೆಯಿಂದ, ಅನಿವಾರ್ಯವಾಗಿರುವ ಪಾಪದಿಂದ ಬರುವಂಥ ಮರಣದ ವಿಷಯದಲ್ಲೇನು? ಅದು ನಮ್ಮ “ಕೊನೆಯ ಶತ್ರು.” ಇಂದೋ ನಾಳೆಯೋ ಎಲ್ಲ ಅಪರಿಪೂರ್ಣ ಮಾನವರು ಅದಕ್ಕೆ ಶರಣಾಗಲೇಬೇಕು. (1 ಕೊರಿಂ. 15:26) ಆದರೆ ಯೆಹೋವನಿಗೆ ಮರಣವನ್ನು ಸದೆಬಡಿಯಲು ಆಗುವುದಿಲ್ಲವಾ? ಯೆಶಾಯನು ಮುಂತಿಳಿಸಿದ್ದನ್ನು ಗಮನಿಸಿ: “[ಆತನು] ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವನು. ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.” (ಯೆಶಾ. 25:8) ಆ ಸಮಯ ಹೇಗಿರಬಹುದೆಂದು ಊಹಿಸಿ! ಶವಸಂಸ್ಕಾರಗಳಾಗಲಿ ಸಮಾಧಿಸ್ಥಳಗಳಾಗಲಿ ಅಥವಾ ಸಾವು ತರುವ ಕಣ್ಣೀರಾಗಲಿ ಅಲ್ಲಿ ಇರುವುದಿಲ್ಲ. ಬದಲಾಗಿ ಅಲ್ಲಿ ದೇವರು ಸತ್ತವರನ್ನು ಎಬ್ಬಿಸುವ ಮೂಲಕ ತನ್ನ ರೋಚಕ ವಾಗ್ದಾನವನ್ನು ನೆರವೇರಿಸುತ್ತಾನೆ. ಆಗ ಎಲ್ಲರ ಕಣ್ಣಲ್ಲಿ ಆನಂದಬಾಷ್ಪವಿರುತ್ತದೆ! (ಯೆಶಾಯ 26:19 ಓದಿ.) ಮರಣ ತಂದಿರುವ ಅಸಂಖ್ಯಾತ ನೋವು-ದುಃಖ ಕೊನೆಗೂ ಇಲ್ಲದೆ ಹೋಗುತ್ತದೆ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
w12 9/1 ಪುಟ 9, ಚೌಕ
ಸ್ತ್ರೀಯರು ಮಾತಾಡಲೇ ಬಾರದೆಂದು ಅಪೊಸ್ತಲ ಪೌಲನು ಹೇಳಿದನಾ?
“ಸ್ತ್ರೀಯರು ಸಭೆಗಳಲ್ಲಿ ಮೌನವಾಗಿರಲಿ” ಎಂದು ಅಪೊಸ್ತಲ ಪೌಲನು ಬರೆದನು. (1 ಕೊರಿಂಥ 14:34) ಆತನ ಮಾತಿನ ಅರ್ಥವೇನಾಗಿತ್ತು? ಸ್ತ್ರೀಯರು ಅಷ್ಟು ಬುದ್ಧಿವಂತರಲ್ಲ ಅಂತನಾ? ಇಲ್ಲ. ಯಾಕೆಂದರೆ ಆತನು ಸ್ತ್ರೀಯರ ಬೋಧನೆಗಳ ಬಗ್ಗೆ ಅನೇಕ ವೇಳೆ ಹೊಗಳಿ ಬರೆದನು. (2 ತಿಮೊಥೆಯ 1:5; ತೀತ 2:3-5) ಕೊರಿಂಥದವರಿಗೆ ಬರೆದ ಪತ್ರದಲ್ಲಿ “ಮೌನವಾಗಿರಲಿ” ಎಂದು ಪೌಲನು ಸಲಹೆ ನೀಡಿದ್ದು ಸ್ತ್ರೀಯರಿಗೆ ಮಾತ್ರವಲ್ಲ. ಭಾಷೆಗಳ ಮತ್ತು ಪ್ರವಾದನೆಗಳ ವರವಿದ್ದವರು ಸಹ ಇನ್ನೊಬ್ಬ ವಿಶ್ವಾಸಿಯು ಮಾತಾಡುವಾಗ “ಮೌನವಾಗಿರಲಿ” ಎಂದು ಪೌಲನು ಹೇಳಿದನು. (1 ಕೊರಿಂಥ 14:26-30, 33) ಆಗಿನ ಕೆಲವು ಕ್ರೈಸ್ತ ಸ್ತ್ರೀಯರು ತಮ್ಮ ಹೊಸ ನಂಬಿಕೆಯ ಬಗ್ಗೆ ಬಹಳ ಉತ್ಸಾಹದಿಂದ ಇದ್ದರು. ಎಷ್ಟೆಂದರೆ ಆಗಿನ ಸಮಯದಲ್ಲಿ ಸಾಮಾನ್ಯವಾಗಿದ್ದ ಪದ್ಧತಿಯಂತೆ ಭಾಷಣಗಾರನು ಮಾತಾಡುವಾಗ ಅವರು ಮಧ್ಯೆ ಬಾಯಿಹಾಕಿ ಪ್ರಶ್ನೆ ಕೇಳುತ್ತಿದ್ದಿರಬಹುದು. ಇಂಥ ಗಲಿಬಿಲಿಯನ್ನು ನಿಲ್ಲಿಸಲು ‘ಮನೆಯಲ್ಲಿ ತಮ್ಮ ಗಂಡಂದಿರನ್ನು ಕೇಳುವಂತೆ’ ಪೌಲನು ಅವರನ್ನು ಪ್ರೋತ್ಸಾಹಿಸಿದನು.—1 ಕೊರಿಂಥ 14:35.
it-1 ಪುಟ 1197-1198
ನಿರ್ಲಯತ್ವ
ಯೇಸುವಿಗಾದ ಪುನರುತ್ಥಾನದಂತೆಯೇ ಆತನ ಅಭಿಷಿಕ್ತರಿಗೂ ಪುನರುತ್ಥಾನವಾಗುತ್ತದೆ. ಅಂದರೆ ಅವರನ್ನು ಆತ್ಮಜೀವಿಗಳಾಗಿ ಎಬ್ಬಿಸುವುದು ಸದಾಕಾಲ ಜೀವಿಸುವುದಕ್ಕಷ್ಟೇ ಅಲ್ಲ, ಬದಲಿಗೆ ಅಮರತ್ವ ಮತ್ತು ನಿರ್ಲಯತ್ವ ಪಡಕೊಳ್ಳಲು ಎಬ್ಬಿಸಲಾಗುವುದು. ಅವರು ತಮ್ಮ ಜೀವನದಲ್ಲಿ ನಂಬಿಗಸ್ತಿಕೆಯಿಂದ ಸೇವೆಮಾಡಿ ಕೊನೆಗೆ ಲಯಾವಸ್ಥೆಯಲ್ಲಿರುವ ತಮ್ಮ ಮಾನವ ದೇಹದಲ್ಲಿ ಸಾಯುತ್ತಾರೆ. ಆದರೆ ಪುನರುತ್ಥಾನದಲ್ಲಿ ಅವರು ನಿರ್ಲಯಾವಸ್ಥೆಯ ಆತ್ಮಿಕ ದೇಹಗಳನ್ನು ಪಡೆಯುವರೆಂದು ಪೌಲನು 1 ಕೊರಿಂಥ 15:42-54 ರಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾನೆ. ಅವರು ಪುನರುತ್ಥಾನದಲ್ಲಿ ಅಮರತ್ವವನ್ನು ಅಂದರೆ ಶ್ರೇಷ್ಠ ಗುಣಮಟ್ಟದ ಜೀವನವನ್ನು ಅನುಭವಿಸುವರು. ಇದು ಅನಂತತೆ ಮತ್ತು ಯಾವತ್ತಿಗೂ ಅಂತ್ಯವಾಗದಿರುವುದಕ್ಕೆ ಸೂಚಿಸುತ್ತದೆ. ನಿರ್ಲಯಾವಸ್ಥೆಯನ್ನು ಸಹ ಅವರು ಪಡೆಯುವರು, ಅಂದರೆ ದೇವರು ಅವರಿಗೆ ಕೊಡುವ ದೇಹ ಅಥವಾ ಶರೀರ ಯಾವತ್ತಿಗೂ ಕೊಳೆತು ಹೋಗುವುದಿಲ್ಲ, ಹಾಳಾಗುವುದಿಲ್ಲ ಅಥವಾ ನಾಶವಾಗುವುದಿಲ್ಲ. ತಾವಾಗಿಯೇ ಪೋಷಣೆ ಮಾಡಿಕೊಳ್ಳುವಂಥ ಶಕ್ತಿಯನ್ನು ದೇವರು ಅವರಿಗೆ ಕೊಡುತ್ತಾನೆಂದು ಕಾಣುತ್ತದೆ. ಅಂದರೆ ಅವರು ಇತರ ಮಾಂಸಿಕ-ಆತ್ಮಜೀವಿಗಳಂತೆ ಬಾಹ್ಯಶಕ್ತಿಗಳ ಮೂಲವನ್ನು ಹೊಂದಿಕೊಂಡು ಜೀವಿಸುವ ಅಗತ್ಯವಿರಲ್ಲ. ದೇವರಿಗೆ ಅವರ ಮೇಲೆ ಎಷ್ಟು ಭರವಸೆ ಇದೆ ಎಂದು ತೋರಿಸುವ ಉತ್ತೇಜಕ ಪುರಾವೆ ಇದಾಗಿದೆ. ಆದರೆ ಇಂಥ ಸ್ವಾತಂತ್ರ್ಯ ಹಾಗೂ ನಾಶವಾಗದ ಅಸ್ತಿತ್ವ ಅವರಿಗಿರುವುದಾದರೂ ಅವರು ಇನ್ನೂ ದೇವರ ನಿಯಂತ್ರಣದೊಳಗೇ ಇರುತ್ತಾರೆ. ಶಿರಸ್ಸಾದ ಕ್ರಿಸ್ತ ಯೇಸುವಿನಂತೆ ತಮ್ಮ ತಂದೆಯ ಇಷ್ಟ ಮತ್ತು ನಿರ್ದೇಶನಗಳಿಗೆ ವಿಧೇಯರಾಗುವುದನ್ನು ಅವರು ಮುಂದುವರಿಸುತ್ತಾರೆ.—1 ಕೊರಿಂ. 15:23-28; ಇಮ್ಮೊರ್ಟಾಲಿಟಿ; ಸೋಲ್ ನೋಡಿ.
ಏಪ್ರಿಲ್ 29–ಮೇ 5
ನಮ್ಮ ಕ್ರೈಸ್ತ ಜೀವನ | 2 ಕೊರಿಂಥ 1-3
ಯೆಹೋವನು ಕೊಡುವ ಶಿಕ್ಷಣವೇ ಅತ್ಯುತ್ತಮ
kr ಪುಟ 189
ರಾಜ್ಯ ಪ್ರಚಾರಕರ ಶಾಲೆ
ಉದ್ದೇಶ: ಈ ಶಾಲೆ ಈಗಾಗಲೇ ಪೂರ್ಣ ಸಮಯದ ಸೇವೆ ಮಾಡುತ್ತಿರುವವರಿಗೆ (ದಂಪತಿಗಳು, ಅವಿವಾಹಿತ ಸಹೋದರರು ಹಾಗೂ ಸಹೋದರಿಯರು) ವಿಶೇಷ ತರಬೇತಿ ಕೊಡಲು ಏರ್ಪಡಿಸಲಾಗುತ್ತದೆ. ಆಗ ಅವರನ್ನು ಯೆಹೋವ ಮತ್ತು ಆತನ ಸಂಘಟನೆ ಸೇವೆಯಲ್ಲಿ ಹೆಚ್ಚು ಉಪಯೋಗಿಸಲು ಸಾಧ್ಯವಾಗುತ್ತದೆ. ಈ ಶಾಲೆಯಲ್ಲಿ ತರಬೇತಿ ಪಡೆಯುವ ಅನೇಕರನ್ನು ತಮ್ಮ ದೇಶದಲ್ಲೇ ಹೆಚ್ಚು ಅಗತ್ಯವಿರುವ ಕಡೆ ಸೇವೆ ಮಾಡಲು ನೇಮಿಸಲಾಗುತ್ತದೆ. 50ಕ್ಕಿಂತ ಕಡಿಮೆ ವಯಸ್ಸಿನ ಪದವೀಧರರನ್ನು ತಾತ್ಕಾಲಿಕ ವಿಶೇಷ ಪಯನೀಯರರಾಗಿ ನೇಮಿಸಿ ಇದುವರೆಗೂ ಸುವಾರ್ತೆ ಸಾರಲ್ಪಟ್ಟಿರದ ದೂರದ ಸ್ಥಳಗಳಿಗೆ ಕಳುಹಿಸಲಾಗುತ್ತದೆ.
ಅವಧಿ: ಎರಡು ತಿಂಗಳು.
ಸ್ಥಳ: ಶಾಖಾ ಕಚೇರಿ ನಿರ್ಧರಿಸುತ್ತದೆ; ಸಾಮಾನ್ಯವಾಗಿ ಒಂದು ರಾಜ್ಯ ಸಭಾಗೃಹದಲ್ಲಿ ಅಥವಾ ಸಮ್ಮೇಳನ ಸಭಾಂಗಣದಲ್ಲಿ ಇದನ್ನು ನಡೆಸಲಾಗುತ್ತದೆ.
ಯಾರು ಅರ್ಜಿ ಹಾಕಬಹುದು: 23 ರಿಂದ 65 ವಯಸ್ಸಿನೊಳಗೆ ಇರುವ ಪೂರ್ಣ ಸಮಯದ ಸೇವಕರು ಅರ್ಜಿ ಹಾಕಬಹುದು. ಒಳ್ಳೇ ಆರೋಗ್ಯ ಇರಬೇಕು, ಹೆಚ್ಚು ಅಗತ್ಯವಿರುವ ಕಡೆ ಸೇವೆ ಮಾಡಲು ತಯಾರಿರುವವರು ಆಗಿರಬೇಕು ಮತ್ತು “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂಬ ಮನೋಭಾವ ಇರುವವರು ಆಗಿರಬೇಕು. (ಯೆಶಾ. 6:8) ಈ ಶಾಲೆಯಲ್ಲಿ ಭಾಗವಹಿಸಲು ಬಯಸುವ ಅವಿವಾಹಿತ ಸಹೋದರ-ಸಹೋದರಿಯರು ಮತ್ತು ದಂಪತಿಗಳು ಕಡಿಮೆಪಕ್ಷ ಎರಡು ವರ್ಷ ನಿಲ್ಲಿಸದೆ ಪೂರ್ಣ ಸಮಯದ ಸೇವೆ ಮಾಡಿರಬೇಕು. ದಂಪತಿಗಳಾಗಿರುವಲ್ಲಿ ಮದುವೆಯಾಗಿ ಕಡಿಮೆಪಕ್ಷ ಎರಡು ವರ್ಷ ಆಗಿರಬೇಕು. ಸಹೋದರರು ಕಡಿಮೆಪಕ್ಷ ಎರಡು ವರ್ಷ ಹಿರಿಯರಾಗಿ ಅಥವಾ ಸಹಾಯಕ ಸೇವಕರಾಗಿ ಸೇವೆ ಮಾಡಿರಬೇಕು. ನಿಮ್ಮ ಶಾಖೆಯ ವ್ಯಾಪ್ತಿಯಲ್ಲಿ ಈ ಶಾಲೆಯ ಏರ್ಪಾಡು ಇರುವುದಾದರೆ, ಪ್ರಾದೇಶಿಕ ಅಧಿವೇಶನದಲ್ಲಿ ಇದರ ಬಗ್ಗೆ ಒಂದು ಕೂಟವನ್ನು ನಡೆಸಲಾಗುತ್ತದೆ. ಈ ಶಾಲೆಗೆ ಹಾಜರಾಗಲು ಬಯಸುವವರು ಈ ಕೂಟಕ್ಕೆ ಹೋಗಬಹುದು.
ಪ್ರಯೋಜನಗಳು: ಅವಿವಾಹಿತ ಸಹೋದರರಿಗಾಗಿ ಮತ್ತು ದಂಪತಿಗಳಿಗಾಗಿರುವ ಬೈಬಲ್ ಶಾಲೆಗೆ ಹಾಜರಾದವರು ಅದರಿಂದ ತುಂಬ ಪ್ರಯೋಜನ ಪಡೆದಿದ್ದೇವೆ ಎಂದು ಹೇಳಿದ್ದಾರೆ. 2013 ರಲ್ಲಿ ಆಡಳಿತ ಮಂಡಲಿಯು ಈ ಎರಡೂ ಶಾಲೆಗಳನ್ನು ಒಟ್ಟುಗೂಡಿಸಿ ರಾಜ್ಯ ಪ್ರಚಾರಕರ ಶಾಲೆಯನ್ನು ಆರಂಭಿಸಲು ಒಪ್ಪಿಗೆ ನೀಡಿತು. ಈಗ ಈ ಶಾಲೆಯಿಂದ ಇನ್ನಷ್ಟು ಹೆಚ್ಚು ನಿಷ್ಠಾವಂತ ಪಯನೀಯರರಿಗೆ ಪ್ರಯೋಜನ ಸಿಗುತ್ತದೆ. ಅವಿವಾಹಿತ ಸಹೋದರಿಯರಿಗೂ ಇದರಿಂದ ಪ್ರಯೋಜನ ಸಿಗುತ್ತದೆ.