ಹೊಸ ಸೃಷ್ಟಿಗಳು ಹುಟ್ಟಿಸಲ್ಪಟ್ಟದ್ದು!
ಜ್ಞಾನಿ ಅರಸ ಸೊಲೊಮೋನನು ಒಮ್ಮೆ ಹೇಳಿದ್ದು: “ಲೋಕದಲ್ಲಿ ಹೊಸದೇನೂ ಇಲ್ಲ.” (ಪ್ರಸಂಗಿ 1:9) ನಾವು ಜೀವಿಸುವ ಭೌತಿಕ ಲೋಕದ ವಿಷಯದಲ್ಲಿ ಇದು ಸತ್ಯವಾಗಿದೆ, ಆದರೆ ಯೆಹೋವನ ಆತ್ಮಿಕ ಸೃಷ್ಟಿಯ ವಿಸ್ತಾರವಾದ ಕ್ಷೇತ್ರದ ಕುರಿತಾಗಿ ಏನು? ಆ ಕ್ಷೇತ್ರದಲ್ಲಿ, ಸೊಲೊಮೋನನಿಗಿಂತಲೂ ದೊಡ್ಡವನಾದ ಒಬ್ಬಾತನು, ನಿಶ್ಚಯವಾಗಿಯೂ ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನು, ಒಂದು ಮಹತ್ತಾದ ಹೊಸ ಸೃಷ್ಟಿಯಾದನು. ಇದು ಸಂಭವಿಸಿದ್ದು ಹೇಗೆ?
ನಮ್ಮ ಸಾಮಾನ್ಯ ಶತಕದ 29 ನೆಯ ವರ್ಷದಲ್ಲಿ, ಪರಿಪೂರ್ಣ ಮನುಷ್ಯ ಯೇಸು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಪಡೆಯಲು ತನ್ನನ್ನು ನೀಡಿಕೊಂಡನು. “ಯೇಸು ಸ್ನಾನ ಮಾಡಿಸಿಕೊಂಡ ಕೂಡಲೆ ನೀರಿನಿಂದ ಮೇಲಕ್ಕೆ ಬರಲು ಇಗೋ, ಆಕಾಶವು ತೆರೆಯಿತು; ಮತ್ತು ದೇವರ ಆತ್ಮ ಪಾರಿವಾಳದ ಹಾಗೆ ಇಳಿದು ತನ್ನ ಮೇಲೆ ಬರುವದನ್ನು ಕಂಡನು. ಆಗ—ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು.” (ಮತ್ತಾಯ 3:16, 17) ಹೀಗೆ, ಮನುಷ್ಯ ಕ್ರಿಸ್ತ ಯೇಸುವು ಹೊಸ ಸೃಷ್ಟಿಯಲ್ಲಿ ಮೊದಲಿಗನಾದನು, ದೇವರ ಚಿತ್ತವನ್ನು ಮಾಡಲು ಅಭಿಷಿಕ್ತನಾದನು. ತದನಂತರ, ಆತನ ಯಜ್ಞಾರ್ಪಣೆಯ ಮರಣದ ಬಳಿಕ, ಯೇಸುವು ದೇವರ ಮತ್ತು ಮನುಷ್ಯರ ಒಂದು ಆಯ್ದ ಗುಂಪಿನ ನಡುವೆ ಒಂದು ಹೊಸ ಒಡಂಬಡಿಕೆಯ ಮಧ್ಯಸ್ಥನಾದನು. ಇವರಲ್ಲಿ ಪ್ರತಿಯೊಬ್ಬರು, ಕ್ರಿಸ್ತನೊಂದಿಗೆ ಆತನ ಸ್ವರ್ಗೀಯ ರಾಜ್ಯದಲ್ಲಿ ಆಳುವ ಪ್ರತೀಕ್ಷೆಯೊಂದಿಗೆ, ಒಂದು ಸ್ವರ್ಗೀಯ ನಿರೀಕ್ಷೆಗಾಗಿ ದೇವರಾತ್ಮದಿಂದ ಆದುಕೊಳ್ಳಲ್ಪಟ್ಟು “ಒಂದು ಹೊಸ ಸೃಷ್ಟಿ” ಯಾದರು.—2 ಕೊರಿಂಥ 5:17; 1 ತಿಮೊಥೆಯ 2:5, 6; ಇಬ್ರಿಯರಿಗೆ 9:15.
ಶತಮಾನಗಳಿಂದ ಈ ಅಭಿಷಿಕ್ತ, ಆತ್ಮ-ಜನ್ಯ ಕ್ರೈಸ್ತರು, ತಾನೇ ಒಂದು ಹೊಸ ಸೃಷ್ಟಿಯಾಗಿರುವ ನಿಜ ಕ್ರೈಸ್ತ ಸಭೆಯೋಪಾದಿ, ಕ್ರಿಸ್ತನೊಂದಿಗೆ ಐಕ್ಯತೆಯಲ್ಲಿ ಒಟ್ಟುಗೂಡಿಸಲ್ಪಟ್ಟಿದ್ದಾರೆ. ಅಪೊಸ್ತಲ ಪೇತ್ರನು ಹೇಳುವ ಮೇರೆಗೆ, ದೇವರು ಅವರನ್ನು ಒಂದು ಉದ್ದೇಶಕ್ಕಾಗಿ ಈ ಲೋಕದೊಳಗಿಂದ ಕರೆದನು: “ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸಕ್ವೀಯ ಪ್ರಜೆಯೂ ಆಗಿದ್ದೀರಿ.” (1 ಪೇತ್ರ 2:9) ದೇವರ ಆರಂಭದ ಹೊಸ ಸೃಷ್ಟಿಯಾದ ಕ್ರಿಸ್ತ ಯೇಸುವಿನಂತೆ, ಈ ತರುವಾಯದ ಹೊಸ ಸೃಷ್ಟಿಗೆ ಸುವಾರ್ತೆಯನ್ನು ಸಾರುವ ಪ್ರಾಮುಖ್ಯ ಜವಾಬ್ದಾರಿಕೆ ಇದೆ. (ಲೂಕ 4:18, 19) ಕಟ್ಟಕಡೆಗೆ 1,44,000 ಸಂಖ್ಯೆಯಾಗುವ ಅದರ ಸದಸ್ಯರು ವೈಯಕ್ತಿಕವಾಗಿ, “ದೇವರ ಚಿತ್ತಕ್ಕೆ ಅನುಸಾರವಾಗಿ ನಿಜ ನೀತಿ ಮತ್ತು ನಿಷ್ಠೆಯಲ್ಲಿ ನಿರ್ಮಿಸಲ್ಪಟ್ಟ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಬೇಕು.” (ಎಫೆಸ 4:24, NW; ಪ್ರಕಟನೆ 14:1, 3) ಇದು ಗಲಾತ್ಯ 5:22, 23 ರಲ್ಲಿ ವರ್ಣಿಸಲಾದ “ಆತ್ಮನ ಫಲಗಳನ್ನು” ಅವರು ಬೆಳೆಸುವಂತೆ ಮತ್ತು ನಂಬಿಗಸತ್ತೆಯಿಂದ ತಮ್ಮ ಮನೆವಾರ್ತೆಯ ಕೆಲಸವನ್ನು ಪರಾಮರಿಕೆ ಮಾಡುವಂತೆ ಆವಶ್ಯಪಡಿಸುತ್ತದೆ.—1 ಕೊರಿಂಥ 4:2; 9:16.
ಆಧುನಿಕ ಸಮಯದಲ್ಲಿ ಈ ಹೊಸ ಸೃಷ್ಟಿಯ ವಿಷಯದಲ್ಲೇನು? ಬೈಬಲ್ ಕಾಲತಖ್ತೆಯು ತೋರಿಸುವ ಮೇರೆಗೆ, 1914 ನೆಯ ವರ್ಷದಲ್ಲಿ, ಪ್ರಕಟನೆ 11:15 ರ ಮಾತುಗಳು ನೆರವೇರಿಕೆಯನ್ನು ಪಡೆದಿವೆ: “ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ [ಯೆಹೋವ] ಆತನು ಅಭಿಷೇಕಿಸಿದವನಿಗೂ ಉಂಟಾಯಿತು; ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು.” ಹೊಸತಾಗಿ ಪ್ರತಿಷ್ಠಾಪಿಸಲ್ಪಟ್ಟ ಅರಸನೋಪಾದಿ ಕ್ರಿಸ್ತನ ಮೊದಲನೆಯ ಕೆಲಸವು ಸೈತಾನನನ್ನು ಮತ್ತು ಅವನ ಪೈಶಾಚಿಕ ದೂತರನ್ನು ಪರಲೋಕದಿಂದ ಭೂಮಿಯ ಸಾಮೀಪ್ಯಕ್ಕೆ ದೊಬ್ಬುವುದೇ ಆಗಿತ್ತು. ಇದು ಭೂಮಿಗೆ, ಮೊದಲನೆಯ ಲೋಕ ಯುದ್ಧ ಮತ್ತು ಅದರ ಜೊತೆಗೆ ಬಂದ ಸಂಕಟಗಳ ರೂಪದಲ್ಲಿ, “ದುರ್ಗತಿಯನ್ನು” ತಂದಿದೆ.—ಪ್ರಕಟನೆ 12:9, 12, 17.
ಇದು ಭೂಮಿಯಲ್ಲಿರುವ ಹೊಸ ಸೃಷ್ಟಿಯಲ್ಲಿ ಉಳಿದಿರುವವರಿಗೆ ಅವರು ಯೇಸುವಿನ ಪ್ರವಾದನೆಯಲ್ಲಿ ಭಾಗವಹಿಸಲೇಬೇಕೆಂಬ ಸೂಚನೆಯಾಗಿಯೂ ಕಾರ್ಯನಡಿಸಿತು: “ [ಸ್ಥಾಪಿತವಾದ] ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” ಆ “ಅಂತ್ಯ” ಎಂದರೇನು? ಯೇಸು ಮುಂದರಿಸುತ್ತಾ ವಿವರಿಸುವುದು: “ಅಂಥ ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನ ವರೆಗೂ ಆಗಲಿಲ್ಲ. ಇನ್ನು ಮೇಲೆಯೂ ಆಗುವದಿಲ್ಲ. ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯದು; ಆದರೆ ತಾನು ಆದುಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆ ಮಾಡುವನು.”—ಮತ್ತಾಯ 24:3-14, 21, 22.
ಯೆಹೋವನ ಆತ್ಮವು ಆತನ ಹೊಸ ಸೃಷ್ಟಿಯ ಆ ಅಭಿಷಿಕ್ತ ಜನರನ್ನು, ಈ ಭೂಮಿಯಲ್ಲಿ ಹಿಂದೆಂದೂ ನಡೆಯದ ಆ ಅತಿ ವಿಸ್ತಾರವಾದ ಸಾರುವ ಚಟುವಟಿಕೆಯಲ್ಲಿ ಕಾರ್ಯಮಗ್ನರಾಗುವಂತೆ ಪ್ರೇರೇಪಿಸಿತು. ಈ ಹುರುಪಿನ ರಾಜ್ಯ ಘೋಷಕರ ಸಂಖ್ಯೆಯು, 1919 ರಲ್ಲಿ ಕೆಲವೇ ಸಾವಿರದಿಂದ ಹಿಡಿದು 1930 ರುಗಳ ಮಧ್ಯದೊಳಗೆ ಸುಮಾರು 50,000 ಕ್ಕೆ ವೃದ್ಧಿಯಾಯಿತು. ಪ್ರವಾದಿಸಲ್ಪಟ್ಟ ಪ್ರಕಾರವೇ, “ಸಾರುವವರ ದ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು, ಅವರ ನುಡಿಗಳು ಭೂಮಿಯ ಕಟ್ಟಕಡೆಯ ವರೆಗೂ ವ್ಯಾಪಿಸಿದವು.”—ರೋಮಾಪುರ 10:18.
ಹೊಸ ಸೃಷ್ಟಿಯಲ್ಲಿ ಉಳಿದಿರುವವರು ಮಾತ್ರವೇ ರಕ್ಷಣೆಗಾಗಿ ಒಟ್ಟುಗೂಡಿಸಲ್ಪಡುವವರಾಗಿರುವರೋ? ಅಲ್ಲ, ಯಾಕಂದರೆ ಪರಲೋಕಕ್ಕೆ-ಹೊರಟ ಈ ಆತ್ಮಿಕ ಇಸ್ರಾಯೇಲ್ಯರು ಮಾತ್ರವಲ್ಲದೆ, “ಯಾರಿಂದಲೂ ಎಣಿಸಲಾಗದಂಥ . . . ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನಾಡುವವರೂ” ಆಗಿರುವ ಬೇರೆಯವರ ಒಟ್ಟುಗೂಡಿಸುವಿಕೆಯು ಸಹ ಮುಗಿಯುವ ತನಕ, ದೇವರ ದೂತರು ಆ ಮಹಾ ಸಂಕಟದ ಗಾಳಿಗಳನ್ನು ತಡೆದು ಹಿಡಿಯುವರು ಎಂದು ಪ್ರವಾದನೆಯು ಹೇಳಿಯದೆ. ಅವರ ಗಮ್ಯ ಸ್ಥಾನವು ಯಾವುದಾಗಿರುವುದು? ಅವರು ಒಂದು ಪರದೈಸ ಭೂಮಿಯಲ್ಲಿ ನಿತ್ಯ ಜೀವವನ್ನು ಆನಂದಿಸಲಿಕ್ಕಾಗಿ “ಆ ಮಹಾ ಹಿಂಸೆಯನ್ನು” ನಿರಪಾಯವಾಗಿ ಪಾರಾಗಿ ಹೊರಗೆ ಬರುವರು!—ಪ್ರಕಟನೆ 7:1-4, 9, 14.
ಸಂತೋಷಕರವಾಗಿ, ಸುಮಾರು 229 ದೇಶಗಳಿಂದ ಒಟ್ಟುಗೂಡಿಸಲ್ಪಟ್ಟ ಈ ಮಹಾ ಸಮೂಹದವರು ಸುಮಾರು 45,00,000 ದ ಕ್ರಿಯಾಸಕ್ತ ಸಾಕ್ಷಿಗಳಾಗಿ ಬಲುಬೇಗನೆ ಬೆಳೆದಿದ್ದಾರೆ. ಇನ್ನೂ ಅನೇಕಾನೇಕರು ಬರುತ್ತಿದ್ದಾರೆಂಬದು ಕಳೆದ ವರ್ಷದ ಏಪ್ರಿಲ್ 17 ರಲ್ಲಿ ಕ್ರಿಸ್ತನ ಮರಣದ ಸ್ಮರಣೆಗಾಗಿ ಹಾಜರಾದ 1,14,31,171 ರಿಂದ ಸೂಚಿಸಲ್ಪಟ್ಟಿದೆ. ಲಕ್ಷಾಂತರ ಸಂಖ್ಯೆಯ ಈ ಎಲ್ಲರಲ್ಲಿ, ಯಾರು ಹೊಸ ಸೃಷ್ಟಿಯಲ್ಲಿ ಭೂಮಿಯಲ್ಲಿ ಉಳಿದವರೆಂಬದಾಗಿ ಪ್ರತಿಪಾದಿಸುತ್ತಾರೋ ಆ ಕೇವಲ 8,683 ಮಂದಿ ಮಾತ್ರವೇ ಸ್ಮಾರಕ ಕುರುಹುಗಳಲ್ಲಿ ಪಾಲುಗಾರರಾದರು. ಈ ಚಿಕ್ಕ ಗುಂಪಿನವರೆಂದೂ, ಸ್ವತಃ ತಾವಾಗಿಯೇ, ಇಂದಿನ ವ್ಯಾಪಕ ಸಾರುವ ಕಾರ್ಯವನ್ನು ಪೂರೈಸಶಕ್ತರಲ್ಲ. ಮಹಾ ಸಮೂಹದಲ್ಲಿ ಕೂಡಿರುವ ಲಕ್ಷಾಂತರ ಜನರು ಈಗ ಆ ಕಾರ್ಯವನ್ನು ಮಾಡಿ ಮುಗಿಸುವುದರಲ್ಲಿ ಅವರೊಂದಿಗೆ ಹೆಗಲು ಹೆಗಲಾಗಿ ಕೆಲಸ ಮಾಡುತ್ತಿದ್ದಾರೆ. (ಚೆಫನ್ಯ 3:9) ಅದಲ್ಲದೆ, ಹೇಗೆ ಇಸ್ರಾಯೇಲ್ಯೇತರ ನೆತಿನಿಮರು ಯೆರೂಸಲೇಮಿನ ಗೋಡೆಗಳನ್ನು ದುರುಸ್ತಿ ಮಾಡುವುದರಲ್ಲಿ ಯಾಜಕರೊಂದಿಗೆ ಕೆಲಸ ಮಾಡಿದರೋ ಹಾಗೆ, ಒಳ್ಳೇ ತರಬೇತು ಪಡೆದ ಮಹಾ ಸಮೂಹದ ಸದಸ್ಯರು ಆತ್ಮಿಕ ಇಸ್ರಾಯೇಲ್ಯರ ಅಭಿಷಿಕ್ತ ಆಡಳಿತ ಮಂಡಲಿಯೊಂದಿಗೆ ಕಾರ್ಯ ನಿರ್ವಹಣ ಮತ್ತು ಇತರ ಹೊಣೆಗಾರಿಕೆಯ ಕೆಲಸವನ್ನು ಮಾಡುತ್ತಿದ್ದಾರೆ.—ನೆಹೆಮೀಯ 3:22-26.
“ನೂತನಾಕಾಶಮಂಡಲ ಮತ್ತು ನೂತನಭೂಮಂಡಲ” ದ ಸೃಷ್ಟಿ
ಈ ಒಟ್ಟುಗೂಡಿಸುವಿಕೆಯಲ್ಲಿ ಎಂಥ ಸಂತೋಷವು ಜತೆಗೂಡಿರುತ್ತದೆ! ಅದು ಯೆಹೋವನು ಹೇಳಿರುವಂತೆಯೇ ಆಗಿರುತ್ತದೆ: “ಇಗೋ, ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು. ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ. ಆಹಾ, ನಾನು ಯೆರೂಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಯೂ ಅದರ ಜನರನ್ನು ಹರ್ಷಭರಿತರನ್ನಾಗಿಯೂ ಮಾಡುವೆನು. ನಾನೂ ಯೆರೂಸಲೇಮನ್ನು ದೃಷ್ಟಿಸುತ್ತಾ ಉಲ್ಲಾಸಿಸುವೆನು, ಅದರ ಜನರನ್ನು ಈಕ್ಷಿಸುತ್ತಾ ಹರ್ಷಗೊಳ್ಳುವೆನು. ರೋದನಶಬ್ದವೂ ಪ್ರಲಾಪದ್ವನಿಯೂ ಅಲ್ಲಿ ಇನ್ನು ಕೇಳಿಸವು.” (ಯೆಶಾಯ 65:17-19) ಯೆಹೋವನ ಸೃಷ್ಟಿಯ ನೂತನಾಕಾಶಮಂಡಲವು ಕಟ್ಟಕಡೆಗೆ, ಕ್ರಿಸ್ತ ಯೇಸುವಿನಿಂದ ಮತ್ತು ಕಳೆದ 19 ಶತಮಾನಗಳಿಂದ ಮಾನವ ಕುಲದವರೊಳಗಿಂದ ಖರೀದಿಸಲ್ಪಟ್ಟ ಹೊಸ ಸೃಷ್ಟಿಯ 1,44,000 ಮಂದಿ ಪುನರುತಿಥ್ತ ಸದಸ್ಯರಿಂದ ಕೂಡಿರುವುದು. ಅದು ಅಕ್ಷರಾರ್ಥಕ ಯೆರೂಸಲೇಮಿನಲ್ಲಿ ಆಳಿದ ಯಾವುದೇ ಲೌಕಿಕ ಸರಕಾರಕ್ಕಿಂತ, ಸೊಲೊಮೋನನ ದಿನಗಳಲಿದ್ಲದ್ದಕ್ಕಿಂತಲೂ, ಎಷ್ಟೋ ಹೆಚ್ಚು ಮಹಿಮಾಭರಿತವಾಗಿದೆ. ಅದು ಪ್ರಕಟನೆ 21 ನೆಯ ಅಧ್ಯಾಯದಲ್ಲಿ ಅದರ ಎಲ್ಲಾ ಮಿನುಮಿನುಗುವ ಸೌಂದರ್ಯದಲ್ಲಿ ವರ್ಣಿಸಲ್ಪಟ್ಟ, ಸ್ವರ್ಗೀಯ ಪಟ್ಟಣವಾದ ಹೊಸ ಯೆರೂಸಲೇಮನ್ನು ಏಕೀಭವಿಸುತ್ತದೆ.
ಕ್ರಿಸ್ತನ ಆತ್ಮಿಕ ವಧುವಾದ ಹೊಸ ಯೆರೂಸಲೇಮು, ಅವನ 1,44,000 ಮಂದಿ ಅಭಿಷಿಕ್ತ ಹಿಂಬಾಲಕರು, ತಮ್ಮ ಮರಣ ಮತ್ತು ಆತ್ಮಿಕ ಪುನರುತ್ಥಾನದ ಅನಂತರ ಪರಲೋಕದಲ್ಲಿ ತಮ್ಮ ಮದಲಿಂಗನನ್ನು ಜತೆಗೂಡುವರು. ಅವರು ಪ್ರಕಟನೆ 21:1-4 ರಲ್ಲಿ “ಪರಲೋಕದಿಂದ ದೇವರ ಬಳಿಯಿಂದ ಇಳಿದು ಬರು” ವವರಾಗಿ, ಅಂದರೆ, ಇಲ್ಲಿ ಭೂಮಿಯ ಮೇಲೆ ಮಾನವಕುಲಕ್ಕೆ ಆಶೀರ್ವಾದಗಳನ್ನು ಮಾರ್ಗದರ್ಶಿಸುವುದರಲ್ಲಿ ಆತನಿಂದ ಬಳಸಲ್ಪಡುವವರಾಗಿ ಚಿತ್ರಿಸಲ್ಪಟ್ಟಿದ್ದಾರೆ. ಈ ರೀತಿಯಲ್ಲಿ ಪ್ರವಾದನೆಯು ನೆರವೇರುತ್ತದೆ: “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು. ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”
ಆ ನೂತನಾಕಾಶಮಂಡಲದ ದೇವರ ಸೃಷ್ಟಿಗಾಗಿ ನಾವೆಷ್ಟು ಕೃತಜ್ಞರಾಗಿರಬಲ್ಲೆವು! ಮಾನವಕುಲವನ್ನು ಇಷ್ಟು ಸಮಯ ಬಾಧಿಸಿರುವ ಕಿಂಚಿತ್ ಕಾಲದ, ಭ್ರಷ್ಟ ಆಡಳಿತಗಳಿಗೆ ಅಸದೃಶವಾಗಿ, ದೇವರ ಈ ಸರಕಾರಿ ಏರ್ಪಾಡಾದರೋ ಕಾಯಂ ಆಗಿರುವುದು. ಈ ಹೊಸ ಸೃಷ್ಟಿ ಮತ್ತು ಅವರ ಆತ್ಮಿಕ ಸಂತತಿಯಾದ ಮಹಾ ಸಮೂಹವು, ದೇವರ ಇನ್ನೂ ಹೆಚ್ಚಿನ ವಾಗ್ದಾನದಲ್ಲಿ ಉಲ್ಲಾಸಿಸುವುದು: “ನಾನು ಸೃಷ್ಟಿಸುವ ನೂತನಾಕಾಶಮಂಡಲವೂ ನೂತನಭೂಮಂಡಲವೂ ನನ್ನ ಮುಂದೆ ಸ್ಥಿರವಾಗಿ ನಿಲ್ಲುವ ಪ್ರಕಾರ ನಿಮ್ಮ ಸಂತತಿಯೂ ನಿಮ್ಮ ಹೆಸರೂ ಸ್ಥಿರವಾಗಿ ನಿಲ್ಲುವವು.”—ಯೆಶಾಯ 66:22.
“ನೂತನಭೂಮಂಡಲವು” ಹೊಸ ಸೃಷ್ಟಿಯ ಅಭಿಷಿಕ್ತರ ಈ ಸಂತತಿಯಿಂದ ಪ್ರಾರಂಭಗೊಳ್ಳುತ್ತದೆ. ಅದು ಭೂಮಿಯ ಮೇಲಿನ ಹೊಸತಾದ, ದೇವ-ಬೀರು ಮಾನವ ಕುಲದ ಸಮಾಜವಾಗಿದೆ. ಇಂದು ಮಾನವ ಸಮಾಜದಲ್ಲಿರುವ ಹಗೆ, ಪಾತಕ, ಹಿಂಸಾಚಾರ, ಭ್ರಷ್ಟಾಚಾರ, ಮತ್ತು ಅನೈತಿಕತೆಯು, ಧರ್ಮಶೀಲ ನೂತನಾಕಾಶಮಂಡಲದ ಮಾರ್ಗದರ್ಶನೆಯ ಕೆಳಗೆ ಕಾರ್ಯನಡಿಸುವ ಒಂದು ಹೊಸ ಭೂಸಮಾಜದ ಪೂರ್ಣ ಬದಲಾವಣೆಗಾಗಿ ಖಂಡಿತವಾಗಿಯೂ ಒತ್ತುಹಾಕುತ್ತದೆ. ಯೆಹೋವನು ಉದ್ದೇಶಿಸಿರುವುದೂ ಅದನ್ನೇ. ಆತನು ನೂತನಾಕಾಶಮಂಡಲವನ್ನು ಸೃಷ್ಟಿಸಿದ ಪ್ರಕಾರವೇ, ಮಹಾ ಸಮೂಹವನ್ನು ಒಂದು ಶಾಂತಿಭರಿತ ನೂತನ ಲೋಕ ಸಮಾಜದ ಕೇಂದ್ರಬಿಂದುವಾಗಿ ಒಟ್ಟುಗೂಡಿಸುವ ಮೂಲಕ ಒಂದು ನೂತನಭೂಮಂಡಲವನ್ನು ಸಹ ಆತನು ಸೃಷ್ಟಿಸುತ್ತಾದ್ದಾನೆ, ಈ ಸಮಾಜವು ಮಾತ್ರ ಆ “ಮಹಾ ಹಿಂಸೆಯನ್ನು” ಸಜೀವವಾಗಿ ಪಾರಾಗುವುದು.—ಪ್ರಕಟನೆ 7:14.
ಮಹಾ ಸಂಕಟವನ್ನು ಹಿಂಬಾಲಿಸಿ ನಾವೇನನ್ನು ನಿರೀಕ್ಷಿಸ ಸಾಧ್ಯವಿದೆ? ನೂತನ ಭೂಮಂಡಲವನ್ನು ಆಳಲಿರುವ ನೂತನಾಕಾಶಮಂಡಲದಲ್ಲಿ ಒಳಗೂಡಿರುವ ಪ್ರಾರಂಭದ ವ್ಯಕ್ತಿಗಳಾದ ತನ್ನ ಅಪೊಸ್ತಲರಿಗೆ ಯೇಸು ವಾಗ್ದಾನಿಸಿದ್ದು: “ನಿಮಗೆ ಸತ್ಯವಾಗಿ ಹೇಳುತ್ತೇನೆ, ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವಾಗ ನನ್ನನ್ನು ಹಿಂಬಾಲಿಸಿರುವ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲ್ಯರ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.” (ಮತ್ತಾಯ 19:28) ಮಾನವಕುಲದ ನ್ಯಾಯತೀರಿಸುವಿಕೆಯಲ್ಲಿ ಯೇಸುವಿನೊಂದಿಗೆ ಈ ಹೊಸ ಯೆರೂಸಲೇಮಿನ ಎಲ್ಲಾ 1,44,000 ಮಂದಿ ಸಹಭಾಗಿಗಳಾಗುವರು. ಯಾವುದರ ಮೇಲೆ ಮಾನವ ಸಮಾಜವು ಕಟ್ಟಲಾಗುವುದೋ ಅದರ ಮೂಲಾಧಾರವಾದ ಪ್ರೀತಿಯು ಆಗ ಸ್ವಾರ್ಥಪರತೆ ಮತ್ತು ದ್ವೇಷವನ್ನು ಸ್ಥಾನಪಲ್ಲಟ ಮಾಡುವುದು. ಗೋತ್ರ ಸಂಬಂಧವಾದ, ಜಾತೀಯ ಮತ್ತು ರಾಷ್ಟ್ರೀಯ ಸಮಸ್ಯೆಗಳು ನಿರ್ಮೂಲಗೊಳಿಸಲ್ಪಡುವುವು. ಪುನರುತ್ಥಾನವು ಪ್ರಿಯ ಜನರನ್ನು ಕ್ರಮ ಕ್ರಮವಾಗಿ ಹಿಂದೆ ತರುವುದು. ನಂಬಿಗಸ್ತ ಮಾನವಕುಲವು ಕೋಟಿಗಟ್ಟಲೆಯಲ್ಲಿ ಒಂದು ದೊಡ್ಡ, ಒಕ್ಕಟ್ಟಿನ ಕುಟುಂಬವಾಗಿ ಪರಿಣಮಿಸಿ, ಒಂದು ಪರದೈಸವಾಗಿ ಮಾರ್ಪಡುವ ಭೂಮಿಯ ಮೇಲೆ ನಿತ್ಯಜೀವಕ್ಕೆ ಮೇಲೆತ್ತಲ್ಪಡುವುದು.
ಇದು ಕಾರ್ಯಸಾಧಕವಲ್ಲದ ಆದರ್ಶ ಯೋಜನೆ ಅಥವಾ ಕಾಲ್ಪನಿಕ ಕಥೆಯಲ್ಲ. ಅದು ಒಂದು ಕಾಯಂ ಸೃಷ್ಟಿಯಾಗಿರುವುದು—“ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ನಿಶ್ಚಯವಾಗಿಯೂ ಇದು ಒಂದು ಆಶ್ಚರ್ಯಕರವಾದ ಪ್ರತೀಕ್ಷೆಯು; “ಇಗೋ, ಎಲ್ಲವನ್ನು ಹೊಸದು ಮಾಡುತ್ತೇನೆ” ಎಂದು ಹೇಳಿದಾತನಿಂದ, ಮತ್ತು “ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ” ಎಂಬ ನಂಬಿಕೆ-ಪ್ರೇರಕ ಹೇಳಿಕೆಯನ್ನು ಕೂಡಿಸಿದಾತನಿಂದ ವಾಗ್ದಾನಿಸಲ್ಪಟ್ಟ ಆಶ್ಚರ್ಯಕರವಾದ ವಾಗ್ದಾನವು.—ಪ್ರಕಟನೆ 21:5.