ಅಧ್ಯಾಯ 20
ಒಂದು ಬಹುಸಂಖ್ಯಾತ ಮಹಾ ಸಮೂಹ
1. ಯೋಹಾನನು 1,44,000 ಮಂದಿಯ ಮುದ್ರೆ ಒತ್ತುವುದನ್ನು ವರ್ಣಿಸಿದ ಮೇಲೆ, ಬೇರೆ ಯಾವ ಗುಂಪನ್ನು ಕಾಣುತ್ತಾನೆ?
ಯೋಹಾನನು 1,44,000 ಮಂದಿ ಮುದ್ರೆ ಒತ್ತಿಸಿಕೊಳ್ಳುವುದನ್ನು ವಿವರಿಸಿಯಾದ ಅನಂತರ, ಸಂಪೂರ್ಣ ಶಾಸ್ತ್ರವಚನದಲ್ಲಿ ಅತಿ ಉತ್ತೇಜಕ ಪ್ರಕಟನೆಗಳಲ್ಲೋಂದನ್ನು ವರದಿಸುತ್ತಾ ಹೋಗುತ್ತಾನೆ. ಅದನ್ನು ವಿವರಿಸುತ್ತಿದ್ದಂತೆ, ಅವನ ಹೃದಯವು ಉಲ್ಲಾಸದಿಂದ ನೆಗೆದಿದಿರ್ದಬೇಕು. ಅವನನ್ನುವುದು: “ಇವುಗಳಾದ ಮೇಲೆ ಇಗೋ, ಸಕಲ ಜನಾಂಗ, ಕುಲ, ಪ್ರಜೆಗಳವರಿಂದ ಮತ್ತು ಭಾಷೆಗಳಿಂದ ಹೊರಬಂದ, ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡ, ಯಾವನಿಂದಲೂ ಎಣಿಸಲಾಗದಂಥ ಮಹಾ ಸಮೂಹವು ಸಿಂಹಾಸನದ ಮುಂದೆಯೂ, ಕುರಿಮರಿಯ ಮುಂದೆಯೂ ನಿಂತಿರುವುದನ್ನು ಕಂಡೆನು; ಅವರ ಕೈಗಳಲ್ಲಿ ತಾಳೆಯ ಗರಿಗಳು ಇದ್ದವು.” (ಪ್ರಕಟನೆ 7:9, NW) ಹೌದು, ನಾಲ್ಕು ಗಾಳಿಗಳ ತಡೆದುಹಿಡಿಯುವಿಕೆಯು ಆತ್ಮಿಕ ಇಸ್ರಾಯೇಲಿನ 1,44,000 ಸದಸ್ಯರದ್ದಲ್ಲದೆ ಇನ್ನೊಂದು ಗುಂಪಿನ ರಕ್ಷಣೆಗೆ ಅನುಮತಿಸುತ್ತದೆ: ಬಹು ಭಾಷೆಯ, ಅಂತಾರಾಷ್ಟ್ರೀಯ ಒಂದು ಮಹಾ ಸಮೂಹ.a—ಪ್ರಕಟನೆ 7:1.
2. ಮಹಾ ಸಮೂಹವನ್ನು ಲೌಕಿಕ ವ್ಯಾಖ್ಯಾನಕಾರರು ಹೇಗೆ ವಿವರಿಸಿದ್ದಾರೆ, ಮತ್ತು ಈ ಗುಂಪನ್ನು ಬೈಬಲ್ ವಿದ್ಯಾರ್ಥಿಗಳು ಸಹ ಗತಕಾಲದಲ್ಲಿ ಹೇಗೆ ವೀಕ್ಷಿಸಿದರು?
2 ಲೌಕಿಕ ವ್ಯಾಖ್ಯಾನಕಾರರು, ಈ ಮಹಾ ಸಮೂಹವು ಕ್ರೈಸ್ತತ್ವಕ್ಕೆ ಮತಾಂತರಗೊಂಡಿರುವ ಮಾಂಸಿಕ ಯೆಹೂದ್ಯೇತರರಾಗಿದ್ದಾರೆಂದು ಯಾ ಸ್ವರ್ಗಕ್ಕೆ ಹೋಗತಕ್ಕ ಕ್ರೈಸ್ತ ಹುತಾತ್ಮರೆಂದು ಅರ್ಥವಿವರಿಸಿದ್ದಾರೆ. ಸಡ್ಟೀಸ್ ಇನ್ ದ ಸ್ಕ್ರಿಪ್ಚರ್ಸ್ನ ಮೊದಲ ಸಂಪುಟವಾದ, ದ ಡಿವೈನ್ ಪ್ಲ್ಯಾನ್ ಆಫ್ ದ ಏಜೆಸ್ ನಲ್ಲಿ 1886 ರಲ್ಲಿ ಗಮನಿಸಿದಂತೆ, ಗತಕಾಲದಲ್ಲಿ ಬೈಬಲ್ ವಿದ್ಯಾರ್ಥಿಗಳು ಕೂಡ ಅವರನ್ನು ಪರಲೋಕಕ್ಕೆ ಹೋಗುವ ದ್ವಿತೀಯ ವರ್ಗದವರೆಂದು ಪರಿಗಣಿಸಿದ್ದರು: “ಅವರು ಸಿಂಹಾಸನವನ್ನು ಮತ್ತು ದೈವಿಕ ಸ್ವಭಾವದ ಬಹುಮಾನವನ್ನು ಕಳೆದುಕೊಳ್ಳುತ್ತಾರೆ, ಆದರೆ ದೈವಿಕ ಸ್ವಭಾವಕ್ಕಿಂತ ಕೆಳಮಟ್ಟದ ಕ್ರಮದಲ್ಲಿ ಇವರು ಆತ್ಮ ವ್ಯಕ್ತಿಗಳಾಗಿ ಕೊನೆಯಲ್ಲಿ ಜನನವನ್ನು ತಲುಪುವರು. ಇವರು ನಿಜವಾಗಿ ಮೀಸಲಾಗಿಡಲ್ಪಟ್ಟರೂ, ತಮ್ಮ ಜೀವಗಳನ್ನು ಯಜ್ಞವಾಗಿ ಸಲ್ಲಿಸಲು ತಪ್ಪಿಹೋಗುವಷ್ಟರ ಮಟ್ಟಿಗೆ, ಲೌಕಿಕ ಆತ್ಮವು ಅವರನ್ನು ಜಯಿಸುತ್ತದೆ.” ಮತ್ತು 1930 ನೆಯ ವರ್ಷದ ತನಕವೂ, ಲೈಟ್ ಪುಸ್ತಕ ಒಂದು, ಇದರಲ್ಲಿ ಇದೇ ವಿಚಾರವು ವ್ಯಕ್ತಪಡಿಸಲ್ಪಟ್ಟಿದೆ: “ಈ ಮಹಾ ಸಮೂಹದವರು ಕರ್ತನ ಹುರುಪಿನ ಸಾಕ್ಷಿಗಳಾಗುವ ಆಮಂತ್ರಣಕ್ಕೆ ಪ್ರತಿಕ್ರಿಯಿಸಲು ತಪ್ಪುತ್ತಾರೆ.” ಸತ್ಯದ ಜ್ಞಾನವಿದ್ದರೂ ಅದನ್ನು ಸಾರುವುದರ ಕುರಿತು ಕೊಂಚವೇ ಮಾಡಿದ, ಸ್ವ-ನೀತಿಯ ಗುಂಪಿನವರು ಎಂದು ಇವರನ್ನು ವರ್ಣಿಸಲಾಯಿತು. ಕ್ರಿಸ್ತನೊಂದಿಗೆ ಆಳುವುದರಲ್ಲಿ ಪಾಲಿಲ್ಲದವರಾದ ಇವರು ದ್ವಿತೀಯ ವರ್ಗದವರಾಗಿ ಸ್ವರ್ಗಕ್ಕೆ ಹೋಗಲಿದ್ದರು.
3. (ಎ) ಸಾರುವಿಕೆಯಲ್ಲಿ ಅನಂತರದ ಸಮಯಗಳಲ್ಲಿ ಹುರುಪಿನವರಾದ ನಿರ್ದಿಷ್ಟ ಸುಹೃದಯದವರ ಮುಂದೆ ಯಾವ ನಿರೀಕ್ಷೆಯನ್ನು ಇಡಲಾಯಿತು? (ಬಿ) ಇಸವಿ 1923ರ ದ ವಾಚ್ಟವರ್ ಕುರಿ ಮತ್ತು ಆಡುಗಳ ಸಾಮ್ಯವನ್ನು ಹೇಗೆ ವಿವರಿಸಿತು?
3 ಆದಾಗ್ಯೂ, ಅಭಿಷಿಕ್ತ ಕ್ರೈಸ್ತರೊಂದಿಗೆ ಅನಂತರ ಸಾರುವಿಕೆಯ ಕೆಲಸದಲ್ಲಿ ಅತಿ ಹುರುಪುಳ್ಳವರಾದ ಇತರ ಜತೆಗಾರರು ಇದ್ದರು. ಅವರಿಗೆ ಸ್ವರ್ಗಕ್ಕೆ ಹೋಗುವ ಯಾವುದೇ ಹೆಬ್ಬಯಕೆಗಳಿರಲಿಲ್ಲ. ನಿಜ, ಅವರ ನಿರೀಕ್ಷೆಯು ಯೆಹೋವನ ಜನರಿಂದ 1918 ರಿಂದ 1922ರ ವರೆಗೆ ನೀಡಲ್ಪಟ್ಟ ಒಂದು ಬಹಿರಂಗ ಭಾಷಣದ ಮುಖ್ಯ ವಿಷಯದೊಂದಿಗೆ ಹೊಂದಿಕೆಯಲ್ಲಿತ್ತು. ಮೂಲತಃ ಇದು “ಲೋಕವು ಅಂತ್ಯವಾಗಿದೆ—ಈಗ ಜೀವಿಸುವ ಮಿಲ್ಯಾಂತರ ಜನರು ಎಂದೆಂದಿಗೂ ಸಾಯರು” ಎಂದಾಗಿತ್ತು.b ತದನಂತರ ಶೀಘ್ರದಲ್ಲೇ, ಅಕ್ಟೋಬರ 15, 1923ರ ವಾಚ್ಟವರ್ ಪತ್ರಿಕೆಯು ಕುರಿ ಮತ್ತು ಆಡುಗಳ ಯೇಸುವಿನ ಸಾಮ್ಯವನ್ನು ವಿವರಿಸಿತು. (ಮತ್ತಾಯ 25:31-46) ಅದು ಅಂದದ್ದು: “ಕುರಿಗಳು, ಆತ್ಮಜನಿತರನ್ನಲ್ಲ, ನೀತಿಯ ಪ್ರವೃತ್ತಿಯವರನ್ನು, ಯೇಸು ಕ್ರಿಸ್ತನನ್ನು ಕರ್ತನೆಂದು ಮಾನಸಿಕವಾಗಿ ಒಪ್ಪಿಕೊಳ್ಳುವವರನ್ನು ಮತ್ತು ಆತನ ಆಳಿಕೆಯನ್ನು ಎದುರುನೋಡುತ್ತಾ ಅದರಲ್ಲಿ ಹೆಚ್ಚು ಉತ್ತಮ ಸಮಯವನ್ನು ನಿರೀಕ್ಷಿಸುವ ಜನಾಂಗಗಳ ಎಲ್ಲಾ ಜನರನ್ನು ಪ್ರತಿನಿಧೀಕರಿಸುತ್ತವೆ.”
4. ಐಹಿಕ ವರ್ಗದ ಕುರಿತಾದ ಬೆಳಕು ಹೇಗೆ 1931 ರಲ್ಲಿ, 1932 ರಲ್ಲಿ, 1934 ರಲ್ಲಿ ಇನ್ನಷ್ಟು ಪ್ರಕಾಶಗೊಂಡಿತು?
4 ಕೆಲವು ವರ್ಷಗಳ ಅನಂತರ, 1931 ರಲ್ಲಿ ವಿಂಡಿಕೇಶನ್ ಪುಸ್ತಕ ಒಂದು, ಯೆಹೆಜ್ಕೇಲ ಅಧ್ಯಾಯ 9ನ್ನು ಚರ್ಚಿಸಿ, ಲೋಕಾಂತ್ಯದಲ್ಲಿ ಸಂರಕ್ಷಣೆಗಾಗಿ ಹಣೆಯ ಮೇಲೆ ಗುರುತು ಹಾಕಲ್ಪಡುವ ಆ ವ್ಯಕ್ತಿಗಳು ಮೇಲಿನ ಸಾಮ್ಯದ ಕುರಿಗಳೆಂದು ಗುರುತಿಸಿತು. ಇಸವಿ 1932 ರಲ್ಲಿ ಬಿಡುಗಡೆಯಾದ ವಿಂಡಿಕೇಶನ್ ಪುಸ್ತಕ ಮೂರು, ಇಸ್ರಾಯೇಲಿನ ಅಭಿಷಿಕ್ತ ರಾಜನಾದ ಯೇಹುವಿನೊಂದಿಗೆ ಅವನ ರಥದಲ್ಲಿ ಜತೆಗೂಡಿದ ಮತ್ತು ಸುಳ್ಳು ಧರ್ಮಾವಲಂಬಿಗಳಿಗೆ ಶಿಕ್ಷೆ ವಿಧಿಸುವುದರಲ್ಲಿ ಯೇಹುವಿನ ಹುರುಪನ್ನು ನೋಡಲು ಅವನೊಂದಿಗೆ ಹೋದ ಇಸ್ರಾಯೇಲ್ಯನಲ್ಲದ ವ್ಯಕ್ತಿ ಯೆಹೋನಾದಾಬನ ಯಥಾರ್ಥ ಹೃದಯದ ಭಾವವನ್ನು ವರ್ಣಿಸಿತು. (2 ಅರಸುಗಳು 10:15-17) ಈ ಪುಸ್ತಕವು ವ್ಯಾಖ್ಯಾನಿಸಿದ್ದು: “ಯೇಹುವಿನ [ಯೆಹೋವನ ನ್ಯಾಯತೀರ್ಪನ್ನು ಪ್ರಚುರಪಡಿಸುವ] ಕಾರ್ಯವು ಪ್ರಗತಿಯಾಗುತ್ತಿರುವ ಕಾಲದಲ್ಲಿ, ಈಗ ಭೂಮಿಯ ಮೇಲೆ ಇರುವ ಸುಚಿತ್ತದ ಜನರ, ಸೈತಾನನ ಸಂಸ್ಥೆಯೊಂದಿಗೆ ಹೊಂದಾಣಿಕೆಯಿಲ್ಲದವರ, ನೀತಿಯ ಪಕ್ಷದಲ್ಲಿ ತಮ್ಮ ನಿಲುವನ್ನು ತೆಗೆದುಕೊಳ್ಳುವ ಜನರ ಒಂದು ವರ್ಗವನ್ನು ಯೆಹೋನಾದಾಬನು ಪ್ರತಿನಿಧಿಸುತ್ತಾನೆ ಯಾ ಮುನ್ಚಿತ್ರಿಸುತ್ತಾನೆ ಮತ್ತು ಅರ್ಮಗೆದೋನಿನ ಸಮಯದಲ್ಲಿ ಕರ್ತನು ಆ ಸಂಕಟದಲ್ಲಿ ಸಂರಕ್ಷಿಸುವ, ಆ ಸಂಕಟದ ಮೂಲಕ ಪಾರುಗೊಳಿಸುವ, ಮತ್ತು ಭೂಮಿಯ ಮೇಲೆ ನಿತ್ಯಜೀವವನ್ನು ಅವರಿಗೆ ಕೊಡುವ ಜನರಾಗಿದ್ದಾರೆ. ಇವರು ‘ಕುರಿ’ ವರ್ಗದವರಾಗಿದ್ದಾರೆ.” ದ ವಾಚ್ಟವರ್ 1934 ರಲ್ಲಿ ಸ್ಪಷ್ಟೀಕರಿಸಿತೇನಂದರೆ, ಭೂನಿರೀಕ್ಷೆಯುಳ್ಳ ಈ ಕ್ರೈಸ್ತರು ಯೆಹೋವನಿಗೆ ಒಂದು ಸಮರ್ಪಣೆ ಮಾಡಿ, ದೀಕ್ಷಾಸ್ನಾನ ಹೊಂದಬೇಕು. ಈ ಭೂವರ್ಗದ ಕುರಿತಾದ ಬೆಳಕು ಇನ್ನಷ್ಟು ಉಜ್ವಲಮಯವಾಗಿ ಪ್ರಕಾಶಿಸುತ್ತಿತ್ತು.—ಜ್ಞಾನೋಕ್ತಿ 4:18.
5. (ಎ) ಮಹಾ ಸಮೂಹದ ಯಾವ ಗುರುತಿಸುವಿಕೆಯನ್ನು 1935 ರಲ್ಲಿ ಮಾಡಲಾಯಿತು? (ಬಿ) ಜೆ.ಎಫ್. ರಥರ್ಫರ್ಡ್ 1935 ರಲ್ಲಿ, ಭೂಮಿಯ ಮೇಲೆ ಜೀವಿಸುವ ನಿರೀಕ್ಷೆ ಇದ್ದ ಅಧಿವೇಶನಕಾರರಿಗೆ ಎದ್ದು ನಿಲ್ಲಲು ಕೇಳಿಕೊಂಡಾಗ, ಏನು ಸಂಭವಿಸಿತು?
5 ಪ್ರಕಟನೆ 7:9-17ರ ತಿಳಿವಳಿಕೆಯು ಅದರ ಪೂರ್ತಿ ಮಿಂಚುವ ಹೊಳಪಿನಿಂದ ಈಗ ಪ್ರಕಟಗೊಳ್ಳಲಿತ್ತು! (ಕೀರ್ತನೆ 97:11) ಅಮೆರಿಕದ ವಾಷಿಂಗ್ಟನ್ ಡಿ.ಸಿ. ಯಲ್ಲಿ ಮೇ 30 ರಿಂದ ಜೂನ್ 3, 1935ರ ವರೆಗೆ ಗೊತ್ತುಪಡಿಸಿದ ಅಧಿವೇಶನವೊಂದು ಯೆಹೋನಾದಾಬನಿಂದ ಚಿತ್ರಿತರಾದವರಿಗೆ “ಒಂದು ನಿಜ ಸಾಂತ್ವನ ಮತ್ತು ಪ್ರಯೋಜನಕಾರಿ” ಆಗಲಿದೆಯೆಂಬ ನಿರೀಕ್ಷೆಯನ್ನು ದ ವಾಚ್ಟವರ್ ಪತ್ರಿಕೆಯು ಪುನಃ ಪುನಃ ವ್ಯಕ್ತಪಡಿಸಿತ್ತು. ಅದು ಹಾಗೆಯೇ ಆಗಿ ಪರಿಣಮಿಸಿತು! ಸುಮಾರು 20,000 ಅಧಿವೇಶನಕಾರರ ಮುಂದೆ ಸಾದರಪಡಿಸಲಾದ “ಮಹಾ ಸಮೂಹ” ಎಂಬ ಉತ್ತೇಜಕ ಭಾಷಣದಲ್ಲಿ ವಾಚ್ ಟವರ್ ಸೊಸೈಟಿಯ ಅಧ್ಯಕ್ಷ ಜೆ. ಎಫ್. ರಥರ್ಫರ್ಡ್ ಆಧುನಿಕ ದಿನದ ಬೇರೆ ಕುರಿಗಳು ಪ್ರಕಟನೆ 7:9ರ ಮಹಾ ಸಮೂಹದೊಂದಿಗೆ ಸರಿಹೋಲಿಕೆಯಲ್ಲಿವೆ ಎಂಬುದಕ್ಕೆ ಶಾಸ್ತ್ರೀಯ ಪುರಾವೆಯನ್ನು ಕೊಟ್ಟರು. ಈ ಭಾಷಣದ ಕೊನೆಯಲ್ಲಿ, ಭಾಷಣಕರ್ತರು ಕೇಳಿದ್ದು: “ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯುಳ್ಳವರೆಲ್ಲರು ದಯಮಾಡಿ ನಿಲ್ಲುವಿರಾ?” ಸಭಿಕರ ಬಹುದೊಡ್ಡ ಭಾಗ ಎದ್ದು ನಿಂತಂತೆ, ಅಧ್ಯಕ್ಷರು ಘೋಷಿಸಿದ್ದು: “ನೋಡಿರಿ! ಮಹಾ ಸಮೂಹ!” ಮೊದಲು ನಿಶ್ಶಬ್ದ ಆವರಿಸಿತು, ಅನಂತರ, ಮಹಾ ಗುಡುಗಿನೋಪಾದಿ ಜಯಘೋಷವು ಹಿಂಬಾಲಿಸಿತು. ಯೋಹಾನ ವರ್ಗ ಮತ್ತು ಯೆಹೋನಾದಾಬ ವರ್ಗವೂ ಸಹ ಎಷ್ಟು ಹರ್ಷಗೊಂಡಿತು! ಮರುದಿನ, 840 ಹೊಸ ಸಾಕ್ಷಿಗಳು, ಇವರಲ್ಲಿ ಹೆಚ್ಚಿನವರು ತಾವು ಮಹಾ ಸಮೂಹದವರೆಂದು ಹೇಳಿಕೊಂಡು ದೀಕ್ಷಾಸ್ನಾನ ಪಡೆದರು.
ಮಹಾ ಸಮೂಹದ ಗುರುತನ್ನು ದೃಢೀಕರಿಸುವುದು
6. (ಎ) ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯಿರುವ ಆಧುನಿಕ ದಿನಗಳ ಸಮರ್ಪಿತ ಕ್ರೈಸ್ತರ ಗುಂಪು ಮಹಾ ಸಮೂಹವಾಗಿದೆ ಎಂದು ನಾವು ಸ್ಪಷ್ಟವಾಗಿ ಹೇಗೆ ತಿಳಿದುಕೊಳ್ಳಸಾಧ್ಯವಿದೆ? (ಬಿ) ಮಹಾ ಸಮೂಹದವರ ಬಿಳೀ ನಿಲುವಂಗಿಗಳು ಯಾವುದನ್ನು ಸಂಕೇತಿಸುತ್ತವೆ?
6 ದೇವರ ಭೂಮಿಯ ಮೇಲೆ ನಿತ್ಯವಾಗಿ ಜೀವಿಸುವ ನಿರೀಕ್ಷೆಯುಳ್ಳವರಾದ ಈ ಆಧುನಿಕ ದಿನದ ಸಮರ್ಪಿತ ಕ್ರೈಸ್ತರ ಗುಂಪೇ ಮಹಾ ಸಮೂಹ ಆಗಿದೆಯೆಂದು ನಾವು ಇಷ್ಟು ನಿಶ್ಚಿತವಾಗಿ ಹೇಗೆ ಹೇಳಸಾಧ್ಯವಿದೆ? ಇದಕ್ಕಿಂತ ಮೊದಲು, ಯೋಹಾನನು ದರ್ಶನವೊಂದರಲ್ಲಿ “ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ . . . ದೇವರಿಗಾಗಿ ಕೊಂಡುಕೊಳ್ಳಲ್ಪಟ್ಟ” ಒಂದು ಸ್ವರ್ಗೀಯ ಗುಂಪನ್ನು ನೋಡಿದ್ದನು. (ಪ್ರಕಟನೆ 5:9, 10) ಮಹಾ ಸಮೂಹಕ್ಕೂ ತದ್ರೀತಿಯದ್ದೇ ಉಗಮವಿದೆ, ಆದರೂ ಒಂದು ಭಿನ್ನವಾದ ಅಂತ್ಯಫಲ ಇದೆ. ದೇವರ ಇಸ್ರಾಯೇಲಿನಂತೆ, ಅವರ ಸಂಖ್ಯೆಯು ಪೂರ್ವ ನಿರ್ಧಾರಿತವಾಗಿಲ್ಲ. ಎಷ್ಟು ಇರುವರೆಂದು ಯಾವ ಮಾನವನೂ ಮುಂದಾಗಿಯೇ ಹೇಳಶಕ್ತನಾಗಿಲ್ಲ. ಯಜ್ಞದ ಕುರಿಯಾದಾತನ ರಕ್ತದಲ್ಲಿ ಅವರ ನಿಲುವಂಗಿಗಳನ್ನು ಶುಭ್ರವಾಗಿ ತೊಳೆಯಲಾಗಿದೆ, ಯೇಸುವಿನ ಯಜ್ಞದ ಮೇಲೆ ತಮ್ಮ ನಂಬಿಕೆಯನ್ನು ಇಟ್ಟದರ್ದಿಂದ, ಅವರಿಗೆ ಯೆಹೋವನ ಮುಂದೆ ಒಂದು ನೀತಿಯುಳ್ಳ ನಿಲುವು ಇದೆ ಎಂದು ಇದು ಸೂಚಿಸುತ್ತದೆ. (ಪ್ರಕಟನೆ 7:14) ಮತ್ತು ಅವರು ತಾಳೆಯ ಗರಿಗಳನ್ನು ಬೀಸುತ್ತಾ ಮೆಸ್ಸೀಯನು ತಮ್ಮ ರಾಜನೆಂದು ಜೈಜೈಕಾರ ಮಾಡುತ್ತಿದ್ದಾರೆ.
7, 8. (ಎ) ತಾಳೆಯ ಗರಿಗಳನ್ನು ಅಲ್ಲಾಡಿಸುವುದು ಅಪೊಸ್ತಲ ಯೋಹಾನನಿಗೆ ಯಾವ ಘಟನೆಗಳನ್ನು ನಿಸ್ಸಂದೇಹವಾಗಿ ನೆನಪಿಗೆ ತಂದಿರಬೇಕು? (ಬಿ) ಮಹಾ ಸಮೂಹದವರು ತಾಳೆಯ ಗರಿಗಳನ್ನು ಅಲ್ಲಾಡಿಸುವುದರ ವಾಸ್ತವಾಂಶದ ಮಹತ್ವವೇನು?
7 ಈ ದರ್ಶನವನ್ನು ಅವನು ನೋಡುತ್ತಿದ್ದಂತೆ, ಯೋಹಾನನ ಯೋಚನೆಗಳು ಅವನನ್ನು 60 ವರ್ಷಗಳಿಗಿಂತಲೂ ಹಿಂದಕ್ಕೆ ಭೂಮಿಯ ಮೇಲೆ ಯೇಸುವಿನ ಕೊನೆಯ ವಾರಕ್ಕೆ ಕೊಂಡೊಯ್ದಿರಬೇಕು. ಸಾ. ಶ. 33ರ ನೈಸಾನ್ 9 ರಂದು, ಯೇಸುವನ್ನು ಯೆರೂಸಲೇಮಿನೊಳಗೆ ಸ್ವಾಗತಿಸಲು ಜನಸಮೂಹವು ನೆರೆದುಬಂತು, ಅವರು “ಖರ್ಜೂರದ (ತಾಳೆಯ NW) ಗರಿಗಳನ್ನು ತಕ್ಕೊಂಡು ಆತನನ್ನು ಎದುರುಗೊಳ್ಳುವದಕ್ಕೆ ಹೊರಗೆ ಬಂದು—ಜಯ, ಕರ್ತನ (ಯೆಹೋವನ, NW) ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ; ಇಸ್ರಾಯೇಲಿನ ಅರಸನಿಗೆ ಆಶೀರ್ವಾದ ಎಂದು ಆರ್ಭಟಿಸಿದರು.” (ಯೋಹಾನ 12:12, 13) ಅದೇ ಶೈಲಿಯಲ್ಲಿ, ಯೆಹೋವನ ನೇಮಿತ ಅರಸನಾಗಿ ಯೇಸುವನ್ನು ಸ್ವೀಕರಿಸುವುದರಲ್ಲಿ ಅವರಿಗಿರುವ ಅಂಕೆಯಿಲ್ಲದ ಸಂತೋಷವು, ಮಹಾ ಸಮೂಹದವರು ತಾಳೆಯ ಗರಿಗಳನ್ನು ಬೀಸುತ್ತಾ, ಆರ್ಭಟಿಸುವುದರಿಂದ ತೋರಿಸಲ್ಪಟ್ಟಿದೆ.
8 ನಿಸ್ಸಂದೇಹವಾಗಿ, ತಾಳೆಯ ಗರಿಗಳು ಮತ್ತು ಆರ್ಭಟದ ಕೂಗುವಿಕೆಗಳು ಯೋಹಾನನಿಗೆ ಪುರಾತನ ಇಸ್ರಾಯೇಲ್ಯರ ಪರ್ಣಶಾಲೆಗಳ ಜಾತ್ರೆಯನ್ನು ಕೂಡ ನೆನಪಿಗೆ ತರುತ್ತವೆ. ಈ ಹಬ್ಬಕ್ಕೆ ಯೆಹೋವನು ಆಜ್ಞಾಪಿಸಿದ್ದು: “ಮೊದಲನೆಯ ದಿನದಲ್ಲಿ ಶ್ರೇಷ್ಠ ವೃಕ್ಷದ ಹಣ್ಣುಗಳನ್ನೂ, ತಾಳೆಯ ಮರದ ಗರಿಗಳನ್ನೂ ಎಲೆಗಳು ದಟ್ಟವಾಗಿರುವ ಮರಗಳ ಕೊಂಬೆಗಳನ್ನೂ ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆಯುವ ನೀರವಂಜಿ ಚಿಗುರುಗಳನ್ನೂ ತೆಗೆದುಕೊಂಡು ಯೆಹೋವನ ಸನ್ನಿಧಿಯಲ್ಲಿ ಏಳು ದಿನಗಳು ಸಂಭ್ರಮವಾಗಿರಬೇಕು.” ತಾಳೆಯ ಗರಿಗಳನ್ನು ಸಂಭ್ರಮದ ಚಿಹ್ನೆಯಾಗಿ ಉಪಯೋಗಿಸಲಾಗುತ್ತಿತ್ತು. ತಾತ್ಕಾಲಿಕ ಪರ್ಣಶಾಲೆಗಳು ಯೆಹೋವನು ತನ್ನ ಜನರನ್ನು ಐಗುಪ್ತದಿಂದ ಪಾರುಗೊಳಿಸಿ ಅರಣ್ಯದಲ್ಲಿ ಗುಡಾರದಲ್ಲಿ ವಾಸಿಸುವಂತೆ ಮಾಡಿದ ಸಂಗತಿಯನ್ನು ನೆನಪಿಸುತ್ತಿತ್ತು. “ಪರದೇಶದವರೂ, ತಾಯಿತಂದೆಯಿಲ್ಲದವರೂ, ವಿಧವೆಯರೂ” ಈ ಹಬ್ಬದಲ್ಲಿ ಪಾಲು ತೆಗೆದುಕೊಂಡರು. ಇಸ್ರಾಯೇಲ್ ಎಲ್ಲವೂ “ಸಂಭ್ರಮದಿಂದ” ಇರಬೇಕಿತ್ತು.—ಯಾಜಕಕಾಂಡ 23:40; ಧರ್ಮೋಪದೇಶಕಾಂಡ 16:13-15.
9. ಮಹಾ ಸಮೂಹದವರು ಯಾವ ಆನಂದಕರ ಕೂಗುವಿಕೆಯಲ್ಲಿ ಜತೆಗೂಡುತ್ತಾರೆ?
9 ಹಾಗಾದರೆ, ಮಹಾ ಸಮೂಹದವರು ಆತ್ಮಿಕ ಇಸ್ರಾಯೇಲಿನ ಭಾಗವಾಗಿರದೆ ಇದ್ದರೂ, ಖರ್ಜೂರದ ಗರಿಗಳನ್ನು ಬೀಸುವುದು ತಕ್ಕದ್ದಾಗಿದೆ ಯಾಕಂದರೆ ಅವರು ಆನಂದದಿಂದ ಮತ್ತು ಕೃತಜ್ಞತೆಯಿಂದ ದೇವರಿಗೂ ಕುರಿಮರಿಗೂ ಜಯ ಮತ್ತು ರಕ್ಷಣೆಯು ಸೇರಿದುದು ಎನ್ನುತ್ತಾರೆ. ಯೋಹಾನನು ಅದನ್ನು ಇಲ್ಲಿ ಅವಲೋಕಿಸುವುದು: “ಮತ್ತು ಅವರು ಮಹಾ ಶಬ್ದದಿಂದ ಕೂಗುವುದನ್ನು ಮುಂದರಿಸುತ್ತಾ, ಹೇಳುವುದು: ‘ಸಿಂಹಾಸನಾಸೀನನಾದಾತನಾದ ನಮ್ಮ ದೇವರಿಗೆ ಮತ್ತು ಕುರಿಮರಿಗೆ ನಮ್ಮ ರಕ್ಷಣೆಗಾಗಿ ನಾವು ಋಣಿಗಳು.’” (ಪ್ರಕಟನೆ 7:10, NW) ಅವರು ಎಲ್ಲಾ ಬುಡಕಟ್ಟುಗಳಿಂದ ಹೊರಗೆ ಬಂದಿರುವುದಾದರೂ ಕೂಡ, ಮಹಾ ಸಮೂಹವು ಆ ಒಂದೇ “ಮಹಾ ಶಬ್ದ” ದಿಂದ ಕೂಗುತ್ತದೆ. ಜನಾಂಗ ಮತ್ತು ಭಾಷೆಗಳ ಅವರ ವೈವಿಧ್ಯದಲ್ಲೂ ಅವರು ಇದನ್ನು ಹೇಗೆ ಮಾಡಶಕ್ತರು?
10. ಜನಾಂಗಗಳ ಮತ್ತು ಭಾಷೆಗಳ ವೈವಿಧ್ಯದ ನಡುವೆಯೂ ಮಹಾ ಸಮೂಹವು ಐಕ್ಯದಲ್ಲಿ “ಮಹಾಶಬ್ದದಿಂದ” ಹೇಗೆ ಕೂಗಸಾಧ್ಯವಿದೆ?
10 ಈ ಮಹಾ ಸಮೂಹವು ಇಂದು ಭೂಮಿಯ ಮೇಲೆ ಏಕಮಾತ್ರ ನಿಜವಾಗಿಯೂ ಐಕ್ಯವಾಗಿರುವ ಬಹು-ಜನಾಂಗಿಕ ಸಂಸ್ಥೆಯ ಒಂದು ಭಾಗವಾಗಿರುತ್ತದೆ. ಅವರಲ್ಲಿ ವಿಭಿನ್ನ ದೇಶಗಳಲ್ಲಿ ವಿಭಿನ್ನ ಮಟ್ಟಗಳು ಇಲ್ಲ, ಆದರೆ ಅವರು ಎಲ್ಲಿಯೇ ಜೀವಿಸುತ್ತಿರಲಿ, ಬೈಬಲಿನ ನೀತಿಯ ಮಟ್ಟಗಳನ್ನು ಏಕಪ್ರಕಾರವಾಗಿ ಅನ್ವಯಿಸುತ್ತಾರೆ. ಅವರು ರಾಷ್ಟ್ರೀಯ, ಕ್ರಾಂತಿಕಾರಕ ಚಳುವಳಿಗಳಲ್ಲಿ ಒಳಗೂಡಿರುವುದಿಲ್ಲ. ಬದಲಾಗಿ ಅವರು ನಿಜವಾಗಿ ‘ತಮ್ಮ ಕತ್ತಿಗಳನ್ನು ಕುಡುಗೋಲುಗಳನ್ನಾಗಿ ಬಡಿದಿರುತ್ತಾರೆ.’ (ಯೆಶಾಯ 2:4) ಹೀಗೆ ಕ್ರೈಸ್ತ ಪ್ರಪಂಚದ ಧರ್ಮಗಳು ಮಾಡುವಂತೆ ಅವರು ಗೊಂದಲದಲ್ಲಿ ಬಿದ್ದಿರುವುದಿಲ್ಲವಾದ್ದರಿಂದ ಯಾ ಪರಸ್ಪರ ವಿರೋಧಿಸುವ ಸಂದೇಶಗಳನ್ನು ಕೂಗುವುದಿಲ್ಲವಾದ್ದರಿಂದ ಅವರು ತಮ್ಮನ್ನು ಮತಗಳಾಗಿ ಯಾ ಪಂಗಡಗಳಾಗಿ ವಿಭಾಗಿಸಿಕೊಂಡಿರುವುದಿಲ್ಲ ಅಥವಾ ಅವರ ಸ್ತುತಿಸುವಿಕೆಯನ್ನು ತಮ್ಮ ಪರವಾಗಿ ಮಾಡಲು ಕಸಬಿನ ಪಾದ್ರಿವರ್ಗದವರಿಗೆ ಅವರು ಬಿಟ್ಟುಕೊಡುವುದಿಲ್ಲ. ರಕ್ಷಣೆಯುಂಟಾದುದಕ್ಕಾಗಿ ಅವರು ಪವಿತ್ರಾತ್ಮಕ್ಕೆ ಸ್ತೋತ್ರವನ್ನು ಹೇಳುವುದಿಲ್ಲ ಯಾಕಂದರೆ ಅವರು ತ್ರಯೈಕ್ಯ ದೇವರ ದಾಸರಲ್ಲ. ಭೂಮಿಯಾದ್ಯಂತ ಕೆಲವು 200 ಭೌಗೋಲಿಕ ಕ್ಷೇತ್ರಗಳಲ್ಲಿ, ಸತ್ಯದ ಒಂದೇ ಶುದ್ಧ ಭಾಷೆಯನ್ನು ಮಾತಾಡುತ್ತಾ, ಅವರೆಲ್ಲರೂ ಯೆಹೋವನ ಹೆಸರನ್ನು ಹೇಳಿಕೊಳ್ಳುವುದರಲ್ಲಿ ಐಕಮತ್ಯದಲ್ಲಿರುತ್ತಾರೆ. (ಚೆಫನ್ಯ 3:9) ಯುಕ್ತವಾಗಿಯೇ, ತಮ್ಮ ರಕ್ಷಣೆಯು, ರಕ್ಷಣೆಯ ದೇವರಾದ ಯೆಹೋವನಿಂದ, ರಕ್ಷಣೆಯ ಆತನ ಮುಖ್ಯ ಕಾರ್ಯಭಾರಿಯಾದ ಯೇಸು ಕ್ರಿಸ್ತನಿಂದ ಬರುತ್ತದೆಂದು ಅವರು ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ.—ಕೀರ್ತನೆ 3:8; ಇಬ್ರಿಯ 2:10.
11. ಮಹಾ ಸಮೂಹದವರ ಮಹಾ ಧ್ವನಿಯನ್ನು ಇನ್ನೂ ಗಟ್ಟಿಯಾಗಿ ಸಲ್ಲಿಸಲು ಆಧುನಿಕ ತಂತ್ರಜ್ಞಾನವು ಹೇಗೆ ಸಹಾಯ ಮಾಡಿದೆ?
11 ಐಕ್ಯದ ಮಹಾ ಸಮೂಹದ ಮಹಾ ಶಬ್ದವು ಇನ್ನಷ್ಟು ಗಟ್ಟಿಯಾಗಿ ಧ್ವನಿಸಲ್ಪಡಲು ಆಧುನಿಕ ತಾಂತ್ರಿಕತೆಯು ನೆರವನ್ನಿತ್ತಿದೆ. ಬೈಬಲ್ ಅಭ್ಯಾಸದ ಸಹಾಯಕಗಳನ್ನು 200 ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಪ್ರಕಾಶಿಸುವ ಅಗತ್ಯತೆಯು ಭೂಮಿಯ ಮೇಲಿನ ಬೇರೆ ಯಾವುದೇ ಧಾರ್ಮಿಕ ಗುಂಪಿಗೆ ಇಲ್ಲ ಯಾಕಂದರೆ ಒಂದೇ ಐಕಮತ್ಯದ ಸಂದೇಶವನ್ನು ಜನರಿಗೆ ಮುಟ್ಟಿಸುವುದರಲ್ಲಿ ಇತರ ಯಾವುದೇ ಧಾರ್ಮಿಕ ಗುಂಪಿಗೆ ಆಸಕ್ತಿಯಿಲ್ಲ. ಇದರಲ್ಲಿ ಅಧಿಕ ಸಹಾಯಕವಾಗಿ, ಯೆಹೋವನ ಸಾಕ್ಷಿಗಳ ಅಭಿಷಿಕ್ತ ಆಡಳಿತ ಮಂಡಳಿಯ ಮೇಲ್ವಿಚಾರಣೆಯ ಕೆಳಗೆ, ಮಲಿಲ್ಟ್ಯಾಂಗೆಜ್ವ್ ಎಲೊಕ್ಟ್ರಾನಿಕ್ ಫೋಟೊ ಟೈಪ್ಸೆಟ್ಟಿಂಗ್ ಸಿಸ್ಟಮ್ (MEPS) ಒಂದನ್ನು ವಿಕಸಿಸಲಾಯಿತು. ಈ ಬರವಣಿಗೆಯ ಸಮಯದಲ್ಲಿ ನೂರಕ್ಕಿಂತಲೂ ಹೆಚ್ಚು ದೇಶಗಳಲ್ಲಿ ತರ್ಜುಮೆ ಮಾಡಿದ ಮೂಲಪಾಠವು ಮೆಪ್ಸ್ (MEPS) ವ್ಯವಸ್ಥೆಯ ಮೂಲಕ ಪ್ರಕ್ರಿಯೆ ಹೊಂದುತ್ತದೆ ಮತ್ತು ಇದು ಪ್ರಧಾನವಾಗಿ ತಿಂಗಳಿಗೆರಡು ಬರುವ ಪತ್ರಿಕೆ, ದ ವಾಚ್ಟವರ್ನ್ನು 85 ಭಾಷೆಗಳಲ್ಲಿ ಏಕಕಾಲದಲ್ಲಿ ಪ್ರಕಾಶಿಸಲ್ಪಡುವುದನ್ನು ಸಾಧ್ಯಮಾಡಲು ಸಹಾಯ ಮಾಡಿದೆ. ಈ ಪುಸ್ತಕದಂತಿರುವ ಪುಸ್ತಕಗಳನ್ನು ಅನೇಕ ಭಾಷೆಗಳಲ್ಲಿ ಯೆಹೋವನ ಜನರು ಏಕಕಾಲದಲ್ಲಿ ಪ್ರಕಾಶಿಸುತ್ತಾರೆ. ಹೀಗೆ, ಯೆಹೋವನ ಸಾಕ್ಷಿಗಳು—ಇದರಲ್ಲಿ ಅಧಿಕ ಸಂಖ್ಯಾತರು ಮಹಾ ಸಮೂಹದವರಾಗಿರುತ್ತಾರೆ—ಎಲ್ಲಾ ಸುಪರಿಚಿತ ಭಾಷೆಗಳಲ್ಲಿ ನೂರಾರು ಲಕ್ಷಗಟ್ಟಲೆ ಪ್ರತಿಗಳನ್ನು ವಾರ್ಷಿಕವಾಗಿ ಹಂಚಲು ಶಕ್ತರಾಗುತ್ತಿದ್ದಾರೆ, ಮತ್ತು ಎಲ್ಲಾ ಕುಲಗಳ ಮತ್ತು ಭಾಷೆಗಳಿಂದ ಹೆಚ್ಚಿನ ಗುಂಪು ದೇವರ ವಾಕ್ಯವನ್ನು ಅಭ್ಯಾಸಿಸುವಂತೆ ಮತ್ತು ಮಹಾ ಸಮೂಹದವರ ಮಹಾ ಧ್ವನಿಯೊಂದಿಗೆ ಅವರ ಧ್ವನಿಗಳನ್ನು ಜತೆಗೂಡಿಸುವಂತೆ ಇದು ಸಾಧ್ಯಮಾಡಿದೆ.—ಯೆಶಾಯ 42:10, 12.
ಪರಲೋಕದಲ್ಲಿ ಯಾ ಭೂಮಿಯ ಮೇಲೆ?
12, 13. ಮಹಾ ಸಮೂಹವು “ಸಿಂಹಾಸನದ ಮುಂದೆಯೂ ಕುರಿಮರಿಯ ಮುಂದೆಯೂ” ಯಾವ ರೀತಿಯಲ್ಲಿ ನಿಂತಿರುತ್ತದೆ?
12 “ಸಿಂಹಾಸನದ ಮುಂದೆ ನಿಲ್ಲುವುದು” ಎಂಬ ವಾಕ್ಸರಣಿಯು ಮಹಾ ಸಮೂಹವು ಪರಲೋಕದಲ್ಲಿ ಇರುತ್ತದೆ ಎಂಬರ್ಥವನ್ನು ಕೊಡುವುದಿಲ್ಲವೆಂದು ನಾವು ಹೇಗೆ ಬಲ್ಲೆವು? ಈ ವಿಷಯದ ಮೇಲೆ ಹೆಚ್ಚು ಸ್ಪಷ್ಟ ರುಜುವಾತಿದೆ. ಉದಾಹರಣೆಗೆ, “ಮುಂದೆ” (ಎ-ನೊ‘ಪಿ-ಯೊನ್ ) ಎಂದು ಇಲ್ಲಿ ಭಾಷಾಂತರಿಸಲಾದ ಗ್ರೀಕ್ ಪದವು “ಗೋಚರದಲ್ಲಿ” ಎಂಬ ಅಕ್ಷರಾರ್ಥ ಅರ್ಥವನ್ನು ಕೊಡುತ್ತದೆ ಮತ್ತು ಭೂಮಿಯ ಮೇಲೆ ಯೆಹೋವನ “ಮುಂದೆ” ಯಾ “ಗೋಚರದಲ್ಲಿ” ಇರುವ ಮಾನವರ ಕುರಿತಾಗಿ ಹೇಳುವಾಗ, ಅನೇಕ ಬಾರಿ ಬಳಸಲ್ಪಟ್ಟಿದೆ. (1 ತಿಮೊಥೆಯ 5:21; 2 ತಿಮೊಥೆಯ 2:14; ರೋಮಾಪುರ 14:22; ಗಲಾತ್ಯ 1:20) ಒಂದು ಸಂದರ್ಭದಲ್ಲಿ ಇಸ್ರಾಯೇಲ್ಯರು ಅರಣ್ಯದಲ್ಲಿದ್ದಾಗ, ಮೋಶೆಯು ಆರೋನನಿಗೆ ಅಂದದ್ದು: “ನೀನು ಇಸ್ರಾಯೇಲ್ಯರ ಸಮೂಹದ ಬಳಿಗೆ ಹೋಗಿ ಅವರಿಗೆ—ಯೆಹೋವನು ನಿಮ್ಮ ಗುಣುಗುಟ್ಟುವಿಕೆಯನ್ನು ಕೇಳಿದ್ದಾನಾದದರಿಂದ ನೀವೆಲ್ಲರೂ ಆತನ ಸನ್ನಿಧಿಗೆ (ಮುಂದೆ, NW) ಕೂಡಿಬರಬೇಕೆಂದು ಆಜ್ಞಾಪಿಸಿದ್ದಾನೆ.” (ವಿಮೋಚನಕಾಂಡ 16:9) ಆ ಸಂದರ್ಭದಲ್ಲಿ ಯೆಹೋವನ ಮುಂದೆ ನಿಲಲ್ಲಿಕ್ಕೋಸ್ಕರ ಇಸ್ರಾಯೇಲ್ಯರನ್ನು ಪರಲೋಕಕ್ಕೆ ರವಾನಿಸಲ್ಪಡಬೇಕಾಗಿರಲಿಲ್ಲ. (ಯಾಜಕಕಾಂಡ 24:8 ನ್ನು ಹೋಲಿಸಿರಿ.) ಅದರ ಬದಲು, ಅವರು ಅರಣ್ಯದಲ್ಲೇ ಯೆಹೋವನ ದೃಷ್ಟಿಯಲ್ಲಿ ನಿಂತರು ಮತ್ತು ಆತನ ಲಕ್ಷ್ಯವು ಅವರ ಮೇಲಿತ್ತು.
13 ಹೆಚ್ಚಿನದ್ದಾಗಿ, ನಾವು ಓದುವುದು: “ಮನುಷ್ಯಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ . . . ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು.”c ಈ ಪ್ರವಾದನೆಯು ನೆರವೇರುವಾಗ ಇಡೀ ಮಾನವಕುಲವು ಪರಲೋಕದಲ್ಲಿ ಇರುವುದಿಲ್ಲ. ಖಂಡಿತವಾಗಿ, “ನಿತ್ಯಶಿಕ್ಷೆಗೆ ಹೋಗುವವರು” ಪರಲೋಕದಲ್ಲಿಲ್ಲ. (ಮತ್ತಾಯ 25:31-33, 41, 46) ಅದರ ಬದಲು, ಮಾನವ ಕುಲವು ಭೂಮಿಯ ಮೇಲೆ ಯೇಸುವಿನ ದೃಷ್ಟಿಯಲ್ಲಿ ನಿಂತಿರುತ್ತದೆ ಮತ್ತು ಅವರ ನ್ಯಾಯವಿಚಾರಣೆಯನ್ನು ಮಾಡಲು ಅವನು ತನ್ನ ಗಮನವನ್ನು ಅವರೆಡೆಗೆ ತಿರುಗಿಸುತ್ತಾನೆ. ತದ್ರೀತಿಯಲ್ಲಿ, ಮಹಾ ಸಮೂಹವು “ಸಿಂಹಾಸನದ ಮುಂದೆಯೂ, ಯಜ್ಞದ ಕುರಿಮರಿಯ ಮುಂದೆಯೂ” ಇದೆ ಅಂದರೆ ಅದು ಯಾರಿಂದ ಮೆಚ್ಚಿಕೆಯ ನ್ಯಾಯತೀರ್ಪನ್ನು ಪಡೆಯುತ್ತದೋ, ಆ ಯೆಹೋವನ ಮತ್ತು ಅವನ ರಾಜ, ಕ್ರಿಸ್ತ ಯೇಸುವಿನ ದೃಷ್ಟಿಗೋಚರದಲ್ಲಿ ಅವರು ನಿಂತಿದ್ದಾರೆ.
14. (ಎ) “ಸಿಂಹಾಸನದ ಸುತ್ತಲೂ,” ಮತ್ತು “[ಸ್ವರ್ಗೀಯ] ಚೀಯೋನ್ ಪರ್ವತದ ಮೇಲೆ” ಇದ್ದಾರೆಂದು ಯಾರನ್ನು ವರ್ಣಿಸಲಾಗಿದೆ? (ಬಿ) ಮಹಾ ಸಮೂಹವು ದೇವರನ್ನು “ಆತನ ಆಲಯದಲ್ಲಿ” ಸೇವಿಸುತ್ತಿರುವುದಾದರೂ, ಇದು ಅವರನ್ನು ಒಂದು ಯಾಜಕ ವರ್ಗವಾಗಿ ಮಾಡುವುದಿಲ್ಲ ಯಾಕೆ?
14 ಯೆಹೋವನ “ಸಿಂಹಾಸನದ ಸುತ್ತಲೂ” ಮತ್ತು “ಚೀಯೋನ್ [ಸ್ವರ್ಗೀಯ] ಪರ್ವತದ ಮೇಲೆ” 24 ಹಿರಿಯರು ಮತ್ತು 1,44,000 ಮಂದಿ ಅಭಿಷಿಕ್ತರ ಒಂದು ಗುಂಪು ನಿಂತಿದೆಯೆಂದು ವರ್ಣಿಸಲಾಗಿದೆ. (ಪ್ರಕಟನೆ 4:4; 14:1) ಮಹಾ ಸಮೂಹವು ಒಂದು ಯಾಜಕತ್ವದ ವರ್ಗವಲ್ಲ ಮತ್ತು ಆ ಮಹಿಮೆಯ ಪದವಿಯನ್ನು ಪಡೆಯುವುದಿಲ್ಲ. ದೇವರನ್ನು “ಅವನ ಆಲಯದಲ್ಲಿ” ಸೇವಿಸುತ್ತಾರೆಂದು ಅವರ ಕುರಿತು ಅನಂತರ ಪ್ರಕಟನೆ 7:15 ರಲ್ಲಿ ವರ್ಣಿಸಲಾಗಿರುವುದು ನಿಜ. ಆದರೆ ಈ ದೇವಾಲಯವು ಅತಿ ಪವಿತ್ರಸ್ಥಾನದ ಒಳಗಣ ಪ್ರಾಕಾರವನ್ನು ಸೂಚಿಸುವುದಿಲ್ಲ. ಅದರ ಬದಲು ಇದು ದೇವರ ಆತ್ಮಿಕ ಆಲಯದ ಭೂಅಂಗಣವಾಗಿದೆ. “ಆಲಯ” ವೆಂದು ಇಲ್ಲಿ ಭಾಷಾಂತರಿಸಲಾದ ಗ್ರೀಕ್ ಪದ ನಾ-ಓಸ್ ಅನೇಕ ವೇಳೆ, ಯೆಹೋವನ ಆರಾಧನೆಗಾಗಿ ರಚಿಸಲ್ಪಟ್ಟಿರುವ ಇಡೀ ಮಂದಿರದ ವಿಶಾಲ ಅರ್ಥವನ್ನು ಕೊಡುತ್ತದೆ. ಇಂದು, ಇದು ಭೂ-ಪರಲೋಕಗಳೆರಡನ್ನೂ ಆವರಿಸುವ ಒಂದು ಆತ್ಮಿಕ ಕಟ್ಟಡವಾಗಿದೆ.—ಹೋಲಿಸಿರಿ ಮತ್ತಾಯ 26:61; 27:5, 39, 40; ಮಾರ್ಕ 15:29, 30; ಯೋಹಾನ 2:19-21, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ರೆಫರೆನ್ಸ್ ಬೈಬಲ್, ಪಾದಟಿಪ್ಪಣಿ.
ಸ್ತುತಿಯ ಒಂದು ಸಾರ್ವತ್ರಿಕ ಕೂಗು
15, 16. (ಎ) ಮಹಾ ಸಮೂಹದ ಗೋಚರಿಸುವಿಕೆಗೆ ಪರಲೋಕದಲ್ಲಿ ಪ್ರತಿಕ್ರಿಯೆ ಏನಾಗಿದೆ? (ಬಿ) ಯೆಹೋವನ ಆತ್ಮಿಕ ಸೃಷ್ಟಿಯು ಆತನ ಉದ್ದೇಶದ ಪ್ರತಿಯೊಂದು ಹೊಸ ಪ್ರಕಟನೆಗೆ ಹೇಗೆ ಪ್ರತಿಕ್ರಿಯೆ ತೋರಿಸುತ್ತದೆ? (ಸಿ) ಭೂಮಿಯ ಮೇಲಿರುವ ನಾವು ಸ್ತುತಿಗೀತೆಯಲ್ಲಿ ಹೇಗೆ ಜತೆಗೂಡಸಾಧ್ಯವಿದೆ?
15 ಮಹಾ ಸಮೂಹವು ಯೆಹೋವನನ್ನು ಸ್ತುತಿಸುತ್ತದೆ, ಆದರೆ ಇತರರು ಕೂಡ ಆತನ ಸ್ತೋತ್ರಗಳನ್ನು ಹಾಡುತ್ತಾರೆ. ಯೋಹಾನನು ವರದಿಮಾಡುವುದು: “ಮತ್ತು ದೇವದೂತರೆಲ್ಲರೂ ಸಿಂಹಾಸನದ ಮತ್ತು ಹಿರಿಯರ ಮತ್ತು ನಾಲ್ಕು ಜೀವಿಗಳ ಸುತ್ತಲೂ ನಿಂತುಕೊಂಡಿದ್ದರು, ಮತ್ತು ಅವರು ಸಿಂಹಾಸನದ ಮುಂದೆ ಸಾಷ್ಟಾಂಗ ಅಡಬ್ಡಿದ್ದರು ಮತ್ತು ದೇವರನ್ನು ಆರಾಧಿಸುತ್ತಾ ಅನ್ನುವುದು: ‘ಆಮೆನ್! ಸ್ತೋತ್ರವೂ ಪ್ರಭಾವವೂ ವಿವೇಕವೂ ಕೃತಜ್ಞತಾಸ್ತುತಿಯೂ ಮಾನವೂ ಬಲವೂ ಶಕ್ತಿಯೂ ನಮ್ಮ ದೇವರಿಗೆ ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.’”—ಪ್ರಕಟನೆ 7:11, 12, NW.
16 ಯೆಹೋವನು ಭೂಮಿಯನ್ನು ಸೃಷ್ಟಿಸಿದಾಗ, ಆತನ ಎಲ್ಲಾ ಪವಿತ್ರ ದೇವದೂತರು ‘ಒಟ್ಟಾಗಿ ಉತ್ಸಾಹಧ್ವನಿಯೆತ್ತಿದರು, ದೇವಕುಮಾರರೆಲ್ಲರೂ ಆನಂದ ಘೋಷ ಮಾಡಿದರು.’ (ಯೋಬ 38:6) ಯೆಹೋವನ ಉದ್ದೇಶದ ಪ್ರತಿಯೊಂದು ಹೊಸ ಪ್ರಕಟನೆಯು, ತದ್ರೀತಿಯಲ್ಲಿ ದೇವದೂತರ ಸ್ತುತಿಯ ಘೋಷವನ್ನು ಪ್ರೇರಿಸಿರಬೇಕು. 24 ಹಿರಿಯರು—ತಮ್ಮ ಸ್ವರ್ಗೀಯ ಮಹಿಮೆಯಲ್ಲಿರುವ 1,44,000 ಮಂದಿ—ಕುರಿಮರಿಯ ಅಂಗೀಕಾರವನ್ನು ಗಟ್ಟಿಯಾಗಿ ತೋರ್ಪಡಿಸಿದಾಗ, ದೇವರ ಸ್ವರ್ಗೀಯ ಜೀವಿಗಳಲ್ಲಿ ಇತರರೆಲ್ಲರೂ ಯೇಸುವಿಗೆ ಮತ್ತು ಯೆಹೋವ ದೇವರಿಗೆ ಸ್ತುತಿಗಳನ್ನು ಹೇಳುವುದರಲ್ಲಿ ಹೊಂದಿಕೆಯಲ್ಲಿ ಧ್ವನಿಗೂಡಿಸುತ್ತಾರೆ. (ಪ್ರಕಟನೆ 5:9-14) ಈಗಾಗಲೇ, ನಂಬಿಗಸ್ತ ಅಭಿಷಿಕ್ತ ಮಾನವರನ್ನು ಆತ್ಮಿಕ ಕ್ಷೇತ್ರದಲ್ಲಿ ಮಹಿಮಾಭರಿತ ಸ್ಥಳಕ್ಕೆ ಪುನರುತ್ಥಾನಗೊಳಿಸುವ ಯೆಹೋವನ ಉದ್ದೇಶಗಳ ನೆರವೇರಿಕೆಯನ್ನು ಅವಲೋಕಿಸುವುದರಲ್ಲಿ ಈ ಜೀವಿಗಳು ಅಧಿಕವಾಗಿ ಆನಂದಪಟ್ಟಿದ್ದಾರೆ. ಈಗ, ಮಹಾ ಸಮೂಹವು ತೋರಿಬರುವಾಗ, ಯೆಹೋವನ ನಂಬಿಗಸ್ತ ಸ್ವರ್ಗೀಯ ಜೀವಿಗಳೆಲ್ಲವೂ ಮಧುರಮಯ ಸ್ತುತಿಗಳಿಂದ ಹಠಾತ್ತನೆ ತುಂಬಿತುಳುಕಿದವು. ನಿಜ, ಯೆಹೋವನ ಸೇವಕರೆಲ್ಲರಿಗೆ ಕರ್ತನ ದಿನದಲ್ಲಿ ಜೀವಿಸುವುದು ತಾನೇ ಒಂದು ರೋಮಾಂಚಕಾರೀ ಸಮಯವಾಗಿರುತ್ತದೆ. (ಪ್ರಕಟನೆ 1:10) ಇಲ್ಲಿ ಭೂಮಿಯ ಮೇಲೆ, ಯೆಹೋವನ ರಾಜ್ಯಕ್ಕೆ ಸಾಕ್ಷಿ ನೀಡುವುದರಿಂದ ಸ್ತುತಿಗೀತೆಯಲ್ಲಿ ಪಾಲಿಗರಾಗಲು ನಾವು ಎಷ್ಟು ಸುಯೋಗ ಹೊಂದಿದವರಾಗಿದ್ದೇವೆ!
ಮಹಾ ಸಮೂಹವು ತನ್ನ ಗೋಚರಿಸುವಿಕೆಯನ್ನು ಮಾಡುತ್ತದೆ
17. (ಎ) ಇಪ್ಪತ್ತನಾಲ್ಕು ಹಿರಿಯರಲ್ಲಿ ಒಬ್ಬನಿಂದ ಯಾವ ಪ್ರಶ್ನೆಯು ಎಬ್ಬಿಸಲ್ಪಡುತ್ತದೆ, ಮತ್ತು ಆ ಹಿರಿಯನಿಗೆ ಉತ್ತರವನ್ನು ಕಂಡುಹಿಡಿಯಸಾಧ್ಯವಿದೆ ಎಂಬುದರ ನಿಜತ್ವವು ಏನನ್ನು ಸೂಚಿಸುತ್ತದೆ? (ಬಿ) ಆ ಹಿರಿಯನ ಪ್ರಶ್ನೆಯು ಯಾವಾಗ ಉತ್ತರಿಸಲ್ಪಟ್ಟಿತು?
17 ಅಪೊಸ್ತಲ ಯೋಹಾನನ ಸಮಯದಿಂದ ಮತ್ತು ಕರ್ತನ ದಿನದೊಳಗೆ ಬಂದಂದಿನಿಂದ, ಮಹಾ ಸಮೂಹದ ಗುರುತಿನ ಬಗ್ಗೆ ಅಭಿಷಿಕ್ತ ಕ್ರೈಸ್ತರು ತಬ್ಬಿಬ್ಬಾಗಿದ್ದರು. ಹಾಗಾದರೆ, ಈಗಾಗಲೇ ಪರಲೋಕದಲ್ಲಿರುವ ಅಭಿಷಿಕ್ತರನ್ನು ಪ್ರತಿನಿಧೀಕರಿಸುವ 24 ಹಿರಿಯರಲ್ಲೊಬ್ಬನು, ಒಂದು ಸುಸಂಗತವಾದ ಪ್ರಶ್ನೆಯನ್ನು ಎಬ್ಬಿಸುವುದರ ಮೂಲಕ ಯೋಹಾನನ ಯೋಚನೆಯನ್ನು ಪ್ರೇರಿಸತಕ್ಕದ್ದಾಗಿರುವುದು ಯೋಗ್ಯ: “ಮತ್ತು ಪ್ರತಿವರ್ತನೆಯಾಗಿ ಹಿರಿಯರಲ್ಲೊಬ್ಬನು ನನಗೆ ಅಂದದ್ದು: ‘ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡಿರುವವರಾದ ಇವರು ಯಾರು ಮತ್ತು ಎಲ್ಲಿಂದ ಬಂದರು?’ ಆಗ ತಕ್ಷಣವೇ ನಾನು ಅವನಿಗೆ ಹೇಳಿದೆ: ‘ನನ್ನೊಡೆಯ, ಅದನ್ನು ತಿಳಿದಾತನು ನೀನೇ ಆಗಿರುತ್ತಿ.’” (ಪ್ರಕಟನೆ 7:13, 14ಎ, NW) ಹೌದು, ಆ ಹಿರಿಯನಿಗೆ ಉತ್ತರವನ್ನು ಕಂಡುಹಿಡಿದು, ಅದನ್ನು ಯೋಹಾನನಿಗೆ ಕೊಡಸಾಧ್ಯವಿತ್ತು. 24 ಮಂದಿ ಹಿರಿಯರ ಗುಂಪಿನಲ್ಲಿ ಪುನರುತಿತ್ಥರಾದವರು ಇಂದು ದೈವಿಕ ಸತ್ಯತೆಗಳನ್ನು ತಲುಪಿಸುವುದರಲ್ಲಿ ಒಳಗೂಡಿರಬಹುದು ಎಂದು ಇದು ಸೂಚಿಸುತ್ತದೆ. ತಮ್ಮ ಮಟ್ಟಿಗಾದರೊ, ಭೂಮಿಯ ಮೇಲಿನ ಯೋಹಾನ ವರ್ಗದವರು, ಯೆಹೋವನು ತಮ್ಮ ನಡುವೆ ಏನನ್ನು ಮಾಡುತ್ತಾ ಇದ್ದನೋ ಅದನ್ನು ಬಹಳ ನಿಕಟವಾಗಿ ಅವಲೋಕಿಸುವುದರ ಮೂಲಕ, ಮಹಾ ಸಮೂಹದವರ ಗುರುತನ್ನು ಕಂಡುಕೊಳ್ಳಲು ಕಲಿತರು. ಯೆಹೋವನ ಕ್ಲುಪ್ತಕಾಲದಲ್ಲಿ, ಅಂದರೆ 1935 ರಲ್ಲಿ ದೇವಪ್ರಭುತ್ವ ಗಗನಮಂಡಲದಲ್ಲಿ ಅಲಂಕೃತಗೊಂಡ ದೈವಿಕ ಸತ್ಯದ ಈ ಕಣ್ಣುಕೋರೈಸುವ ಹೊಳಪನ್ನು ಗಣ್ಯಮಾಡುವದರಲ್ಲಿ ಅವರು ತೀವ್ರಗಾಮಿಗಳಾಗಿದ್ದರು.
18, 19. (ಎ) ಯೋಹಾನ ವರ್ಗದಿಂದ 1920 ಗಳ ಮತ್ತು 1930 ರ ಕಾಲದಲ್ಲಿ ಯಾವ ನಿರೀಕ್ಷೆಯು ಒತ್ತಿಹೇಳಲ್ಪಟ್ಟಿತು, ಆದರೆ ಏರುತ್ತಿರುವ ಸಂಖ್ಯೆಯಲ್ಲಿ ಯಾರು ಸಂದೇಶಕ್ಕೆ ಪ್ರತಿಕ್ರಿಯಿಸಿದರು? (ಬಿ) ಮಹಾ ಸಮೂಹದ 1935ರಲ್ಲಿನ ಗುರುತಿಸುವಿಕೆಯು 1,44,000 ಮಂದಿಯ ಸಂಬಂಧದಲ್ಲಿ ಏನನ್ನು ಸೂಚಿಸಿತು? (ಸಿ) ಜ್ಞಾಪಕಾಚರಣೆಯ ಅಂಕಿಸಂಖ್ಯೆಗಳು ಏನನ್ನು ಪ್ರಕಟಿಸುತ್ತವೆ?
18 ದಶಕ 1920 ರಲ್ಲಿ ಮತ್ತು 1930 ಗಳ ಆರಂಭದಲ್ಲಿ ಪ್ರಕಾಶನಗಳಲ್ಲಿ ಮತ್ತು ಸಾರುವಿಕೆಯ ಕಾರ್ಯದಲ್ಲಿ ಪರಲೋಕದ ನಿರೀಕ್ಷೆಯ ಕುರಿತು ಯೋಹಾನ ವರ್ಗವು ಒತ್ತಿಹೇಳಿತು. ಒಂದು ಲಕ್ಷ ನಲ್ವತ್ತನಾಲ್ಕು ಸಾವಿರ ಮಂದಿಯ ಸಂಖ್ಯೆಯು ಪೂರ್ಣವಾಗಿ ತುಂಬಲಿಕ್ಕೆ ಇನ್ನೂ ಇತ್ತೆಂದು ವ್ಯಕ್ತವಾಗುತ್ತದೆ. ಆದರೆ ಸಂದೇಶವನ್ನು ಆಲಿಸಿದವರಲ್ಲಿ ಮತ್ತು ಸಾಕ್ಷಿ ಕಾರ್ಯದಲ್ಲಿ ಹುರುಪನ್ನು ತೋರಿಸಿದವರಲ್ಲಿ ಏರುತ್ತಿರುವ ಸಂಖ್ಯೆಯವರು ಪ್ರಮೋದವನ ಭೂಮಿಯ ಮೇಲೆ ನಿತ್ಯವಾಗಿ ಜೀವಿಸುವುದರಲ್ಲಿ ಆಸಕ್ತಿ ತೋರಿಸುವವರಾಗಿ ತೋರಿಬಂದರು. ಅವರಿಗೆ ಪರಲೋಕಕ್ಕೆ ಹೋಗುವ ಯಾವುದೇ ಆಕಾಂಕ್ಷೆ ಇರಲಿಲ್ಲ. ಅದು ಅವರ ಕರೆಯಾಗಿರಲಿಲ್ಲ. ಅವರು ಬೇರೆ ಕುರಿಗಳಾಗಿದ್ದರೇ ಹೊರತು ಚಿಕ್ಕ ಹಿಂಡಿನ ಭಾಗವಾಗಿರಲಿಲ್ಲ. (ಲೂಕ 12:32; ಯೋಹಾನ 10:16) ಬೇರೆ ಕುರಿಗಳ ಮಹಾ ಸಮೂಹದವರೆಂದು 1935 ರಲ್ಲಿ ಅವರ ಗುರುತಿಸುವಿಕೆಯು ತಾನೇ 1,44,000 ಮಂದಿಯ ಆಯ್ಕೆಯು ಈಗಾಗಲೇ ಪೂರ್ಣಗೊಳ್ಳಲಿದೆ ಎಂಬುದರ ಒಂದು ಸೂಚಕವಾಗಿತ್ತು.
19 ಅಂಕಿಸಂಖ್ಯೆಗಳು ಈ ತೀರ್ಮಾನವನ್ನು ಬೆಂಬಲಿಸುತ್ತವೋ? ಹೌದು, ಅವು ಹಾಗೆಯೆ ಮಾಡುತ್ತವೆ. ಲೋಕವ್ಯಾಪಕವಾಗಿ 59,047 ಯೆಹೋವನ ಸಾಕ್ಷಿಗಳು 1938 ರಲ್ಲಿ, ಶುಶ್ರೂಷೆಯಲ್ಲಿ ಪಾಲಿಗರಾಗಿದ್ದರು. ಅವರಲ್ಲಿ, ಯೇಸುವಿನ ಮರಣದ ಸ್ಮಾರಕದ ವಾರ್ಷಿಕಾಚರಣೆಯಲ್ಲಿ 36,732 ಮಂದಿ ಸೂಚಕಗಳಲ್ಲಿ ಪಾಲುತೆಗೆದುಕೊಂಡರು, ಆ ಮೂಲಕ ಅವರಿಗೆ ಪರಲೋಕದ ಕರೆಯಿದೆ ಎಂದು ಸೂಚಿಸಿದರು. ಅಂದಿನಿಂದ ವರ್ಷಗಳು ಗತಿಸಿದಷ್ಟಕ್ಕೆ ಪಾಲು ತೆಗೆದುಕೊಳ್ಳುವವರ ಸಂಖ್ಯೆಯು ಪ್ರಗತಿಪರವಾಗಿ ಕಡಿಮೆಗೊಂಡಿದೆ, ಕಾರಣವೇನೆಂದರೆ ಪ್ರಾಮುಖ್ಯವಾಗಿ ಯೆಹೋವನ ನಂಬಿಗಸ್ತ ಸಾಕ್ಷಿಗಳು ಮರಣದಲ್ಲಿ ಅವರ ಐಹಿಕ ಜೀವಿತವನ್ನು ಮುಗಿಸಿದ್ದಾರೆ. ಕೇವಲ 8,693 ಮಂದಿ ಮಾತ್ರ ಸ್ಮಾರಕದ ಸೂಚಕಗಳಲ್ಲಿ 1993 ರಲ್ಲಿ ಪಾಲುತೆಗೆದುಕೊಂಡರು—ಇದು ಲೋಕವ್ಯಾಪಕವಾಗಿ ಆಚರಣೆಗೆ ಹಾಜರಾದ 1,18,65,765 ಮಂದಿಯ 0.1 ಪ್ರತಿಶತಕ್ಕಿಂತಲೂ ಕಡಿಮೆಯಾಗಿದೆ.
20. (ಎ) ಎರಡನೆಯ ಲೋಕಯುದ್ಧದ ಸಮಯದಲ್ಲಿ, ಮಹಾ ಸಮೂಹದ ಕುರಿತು ಸಂಸ್ಥೆಯ ಅಧ್ಯಕ್ಷರು ಖಾಸಗಿಯಾಗಿ ಯಾವ ವರದಿಯನ್ನು ಮಾಡಿದರು? (ಬಿ) ಮಹಾ ಸಮೂಹವು ನಿಜವಾಗಿಯೂ ದೊಡ್ಡದಾಗಿದೆಯೆಂದು ಯಾವ ನಿಜತ್ವಗಳು ಈಗ ತೋರಿಸುತ್ತವೆ?
20 ಎರಡನೆಯ ಲೋಕ ಯುದ್ಧವು ಸ್ಫೋಟಗೊಂಡಾಗ, ಮಹಾ ಸಮೂಹದವರ ಕೊಯ್ಲನ್ನು ನಿಲ್ಲಿಸಲು ಸೈತಾನನು ನಿಷ್ಠುರವಾದ ಪ್ರಯತ್ನಗಳನ್ನು ಹೂಡಿದನು. ಯೆಹೋವನ ಕಾರ್ಯವು ಅನೇಕ ದೇಶಗಳಲ್ಲಿ ನಿರ್ಬಂಧಿಸಲ್ಪಟ್ಟಿತ್ತು. ಆ ಕರಾಳ ದಿನಗಳಲ್ಲಿ, ಮತ್ತು ಜನವರಿ 1942 ರಲ್ಲಿ ಮೃತಿಹೊಂದುವದಕ್ಕೆ, ಸ್ವಲ್ಪ ಮುಂಚೆ ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾದ ಜೆ. ಎಫ್. ರಥರ್ಫರ್ಡ್ ಹೀಗೆ ಹೇಳುವುದು ಕೇಳಿಸಲ್ಪಟ್ಟಿತ್ತು: “ಒಳ್ಳೆಯದು, . . . ಬಹುಸಂಖ್ಯಾತರು ಹೇಗೂ ಅಷ್ಟೊಂದು ಮಹಾ ಸಂಖ್ಯೆಯವರೆಂದು ತೋರಿಬರುವುದಿಲ್ಲ.” ಆದರೆ ದೈವಿಕ ಆಶೀರ್ವಾದವು ಬೇರೆ ರೀತಿಯಾಗಿ ನಿರ್ದೇಶಿಸಿತು! ಇಸವಿ 1946 ರೊಳಗೆ ಲೋಕವ್ಯಾಪಕವಾಗಿ ಶುಶ್ರೂಷೆ ಸಲ್ಲಿಸುವ ಸಾಕ್ಷಿಗಳ ಸಂಖ್ಯೆಯು 1,76,456 ಕ್ಕೇರಿತು. ಇವರಲ್ಲಿ ಬಹುಸಂಖ್ಯಾತರು ಮಹಾ ಸಮೂಹದವರಾಗಿದ್ದರು. ಇಸವಿ 1993 ರಲ್ಲಿ 231 ವಿವಿಧ ದೇಶದ್ವೀಪಗಳಲ್ಲಿ ಯೆಹೋವನನ್ನು ನಂಬಿಗಸ್ತರಾಗಿ ಸೇವಿಸುವ 47,09,889 ಮಂದಿ ಸಾಕ್ಷಿಗಳು ಇದ್ದರು—ಇದು ಖಂಡಿತವಾಗಿಯೂ ಒಂದು ಮಹಾ ಸಮೂಹವೇ! ಮತ್ತು ಈ ಸಂಖ್ಯೆಯು ಏರುತ್ತಾ ಹೋಗುತ್ತಿದೆ.
21. (ಎ) ಕರ್ತನ ದಿನದ ಉದ್ದಕ್ಕೂ ದೇವಜನರ ಕೊಯ್ಲು ಯೋಹಾನನ ದರ್ಶನದೊಂದಿಗೆ ಹೇಗೆ ಪೂರ್ತಿ ಸಹಮತದಲ್ಲಿದೆ? (ಬಿ) ನಿರ್ದಿಷ್ಟ ಪ್ರಾಮುಖ್ಯ ಪ್ರವಾದನೆಗಳು ಹೇಗೆ ನೆರವೇರಲು ತೊಡಗಿದವು?
21 ಕರ್ತನ ದಿನದ ಉದ್ದಕ್ಕೂ ದೇವಜನರ ಕೊಯ್ಲು ಯೋಹಾನನ ದರ್ಶನದೊಂದಿಗೆ ಪೂರ್ತಿ ಸಹಮತದಲ್ಲಿದೆ: ಮೊದಲು 1,44,000 ಮಂದಿಯಲ್ಲಿ ಉಳಿದವರನ್ನು ಒಟ್ಟುಗೂಡಿಸುವ ಕಾರ್ಯ, ತದನಂತರ ಮಹಾ ಸಮೂಹದವರ ಒಟ್ಟುಗೂಡಿಸುವಿಕೆ. ಯೆಶಾಯನು ಪ್ರವಾದಿಸಿದಂತೆ, ಈಗ “ಅಂತ್ಯಕಾಲದಲ್ಲಿ” ಎಲ್ಲಾ ಜನಾಂಗದವರು ಯೆಹೋವನ ಶುದ್ಧಾರಾಧನೆಯಲ್ಲಿ ಪಾಲು ತೆಗೆದುಕೊಳ್ಳಲು ಪ್ರವಾಹದಂತೆ ಬರುತ್ತಿದ್ದಾರೆ. ಮತ್ತು ನಿಜವಾಗಿಯೂ, ಯೆಹೋವನ ಸೃಷ್ಟಿಯಾದ “ನೂತನಾಕಾಶಮಂಡಲ ಮತ್ತು ನೂತನ ಭೂಮಿ” ಯೊಂದರ ಗಣ್ಯತೆಯಲ್ಲಿ ನಾವು ಉಲ್ಲಾಸಿಸುತ್ತೇವೆ. (ಯೆಶಾಯ 2:2-4; 65:17, 18) “ಕ್ರಿಸ್ತನಲ್ಲಿ ಪುನಃ ಸಕಲ ವಿಷಯಗಳನ್ನು ಅಂದರೆ ಸ್ವರ್ಗದಲ್ಲಿಯ ವಿಷಯಗಳನ್ನು ಮತ್ತು ಈ ಭೂಮಿಯ ವಿಷಯಗಳನ್ನು ಒಟ್ಟಾಗಿ ಕೂಡಿಸಲಿಕ್ಕಾಗಿ” ದೇವರು ಒಟ್ಟುಗೂಡಿಸುತ್ತಾ ಇದ್ದಾನೆ. (ಎಫೆಸ 1:10, NW) ಸ್ವರ್ಗೀಯ ರಾಜ್ಯದ ಅಭಿಷಿಕ್ತ ಬಾಧ್ಯಸ್ಥರು—ಯೇಸುವಿನ ದಿನದಿಂದ ಹಿಡಿದು ಶತಮಾನಗಳಲ್ಲಿಲ್ಲಾ ಆರಿಸಲ್ಪಟ್ಟವರು—“ಸ್ವರ್ಗದಲ್ಲಿಯ ವಿಷಯಗಳು” ಮತ್ತು ಈಗ, ಬೇರೆ ಕುರಿಗಳ ಮಹಾ ಸಮೂಹವು “ಭೂಮಿಯಲ್ಲಿ” ಆರಂಭದವರಾಗಿ ತೋರಿಬರುತ್ತಾರೆ. ಆ ಏರ್ಪಾಡಿನೊಂದಿಗೆ ಹೊಂದಿಕೆಯಲ್ಲಿ ನೀವು ಸೇವಿಸುವದು ನಿಮಗೆ ಅನಂತ ಆನಂದದ ಅರ್ಥದಲ್ಲಿರಬಲ್ಲದು.
ಮಹಾ ಸಮೂಹದ ಆಶೀರ್ವಾದಗಳು
22. ಮಹಾ ಸಮೂಹದ ಕುರಿತು ಯೋಹಾನನು ಯಾವ ಹೆಚ್ಚಿನ ಸಮಾಚಾರವನ್ನು ಪಡೆಯುತ್ತಾನೆ?
22 ದೈವಿಕ ಸಂಪರ್ಕಕಾಲುವೆಯ ಮೂಲಕ, ಈ ಮಹಾ ಸಮೂಹದ ಕುರಿತು ಇನ್ನೂ ಹೆಚ್ಚಿನ ಸಮಾಚಾರವನ್ನು ಯೋಹಾನನು ಪಡೆಯುತ್ತಾನೆ: “ಮತ್ತು ಅವನು [ಆ ಹಿರಿಯನು] ನನಗೆ ಅಂದದ್ದು: ‘ಇವರು ಆ ಮಹಾ ಸಂಕಟದಿಂದ ಹೊರಬರುವವರು, ಮತ್ತು ಅವರು ತಮ್ಮ ನಿಲುವಂಗಿಗಳನ್ನು ಕುರಿಮರಿಯ ರಕ್ತದಲ್ಲಿ ತೊಳೆದುಕೊಂಡು, ಅವುಗಳನ್ನು ಶುಭ್ರಮಾಡಿಕೊಂಡಿದ್ದಾರೆ. ಈ ಕಾರಣದಿಂದ ಅವರು ದೇವರ ಸಿಂಹಾಸನದ ಮುಂದೆ ಇದ್ದಾರೆ; ಮತ್ತು ಅವರು ಆತನ ಆಲಯದಲ್ಲಿ ಹಗಲಿರುಳು ಆತನಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತಾ ಇದ್ದಾರೆ; ಮತ್ತು ಸಿಂಹಾಸನದಲ್ಲಿ ಕೂತಿರುವಾತನು ತನ್ನ ಗುಡಾರವನ್ನು ಅವರ ಮೇಲೆ ಆವರಿಸುವನು.”—ಪ್ರಕಟನೆ 7:14ಬಿ, 15, NW.
23. ಮಹಾ ಸಮೂಹವು “ಹೊರಬರುವ” ಮಹಾ ಸಂಕಟವು ಏನಾಗಿದೆ?
23 ಹಿಂದೆ ಒಂದು ಸಂದರ್ಭದಲ್ಲಿ, ರಾಜವೈಭವದಲ್ಲಿ ತನ್ನ ಸಾನ್ನಿಧ್ಯವು ‘ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನ ತನಕ ಆಗಲಿಲ್ಲವೋ, ಮತ್ತು ಇನ್ನು ಮೇಲೆಯೂ ಆಗುವುದಿಲ್ಲವೋ ಆ ಮಹಾ ಸಂಕಟದಲ್ಲಿ’ ತುತ್ತತುದಿಗೇರಲಿದೆಯೆಂದು ಯೇಸು ಹೇಳಿದ್ದನು. (ಮತ್ತಾಯ 24:21, 22) ಆ ಪ್ರವಾದನೆಯ ನೆರವೇರಿಕೆಯಲ್ಲಿ ದೇವದೂತರು ಸೈತಾನನ ಲೋಕ ವ್ಯವಸ್ಥೆಯನ್ನು ಧ್ವಂಸಗೊಳಿಸಲು ಭೂಮಿಯ ನಾಲ್ಕು ಗಾಳಿಗಳನ್ನು ಬಿಡುಗಡೆಗೊಳಿಸುವರು. ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲ್ ಮೊದಲು ಇಲ್ಲವಾಗಿ ಹೋಗುವುದು. ಅನಂತರ ಸಂಕಟದ ತುತ್ತತುದಿಯಲ್ಲಿ, ಭೂಮಿಯ ಮೇಲೆ 1,44,000 ಮಂದಿಯಲ್ಲಿ ಉಳಿದವರನ್ನು, ಬಹುಸಂಖ್ಯಾತ ಮಹಾ ಸಮೂಹದವರೊಂದಿಗೆ ಒಟ್ಟಾಗಿ ಯೇಸುವು ಪಾರುಗೊಳಿಸಲಿರುವನು.—ಪ್ರಕಟನೆ 7:1; 18:2.
24. ಮಹಾ ಸಮೂಹದ ವ್ಯಕ್ತಿಗಳು ಪಾರಾಗುವಿಕೆಗೆ ಹೇಗೆ ಯೋಗ್ಯರಾಗುತ್ತಾರೆ?
24 ಮಹಾ ಸಮೂಹದ ವ್ಯಕ್ತಿಗಳು ಪಾರಾಗುವಿಕೆಗೆ ಯೋಗ್ಯರಾಗುವುದು ಹೇಗೆ? ಅವರು “ಕುರಿಮರಿಯ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡು, ಅವುಗಳನ್ನು ಶುಭ್ರಮಾಡಿಕೊಂಡಿದ್ದಾರೆ” ಎಂದು ಆ ಹಿರಿಯನು ಯೋಹಾನನಿಗೆ ಹೇಳುತ್ತಾನೆ. ಬೇರೆ ಮಾತುಗಳಲ್ಲಿ, ಅವರ ವಿಮೋಚಕನೋಪಾದಿ ಯೇಸುವಿನಲ್ಲಿ ಅವರು ನಂಬಿಕೆಯನ್ನು ಪ್ರದರ್ಶಿಸಿ, ಯೆಹೋವನಿಗೆ ಒಂದು ಸಮರ್ಪಣೆಯನ್ನು ಮಾಡಿಕೊಂಡು, ತಮ್ಮ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿದ್ದಾರೆ ಮತ್ತು ತಮ್ಮ ಉನ್ನತ ಮಟ್ಟದ ನಡತೆಯಿಂದ “ಒಳ್ಳೇ ಮನಸ್ಸಾಕ್ಷಿ” ಉಳ್ಳವರಾಗಿದ್ದಾರೆ. (1 ಪೇತ್ರ 3:16, 21; ಮತ್ತಾಯ 20:28) ಹೀಗೆ, ಯೆಹೋವನ ಕಣ್ಣಮುಂದೆ ಅವರು ಶುದ್ಧರಾಗಿದ್ದಾರೆ ಮತ್ತು ನೀತಿವಂತರಾಗಿದ್ದಾರೆ. ಮತ್ತು ಅವರು ತಮ್ಮನ್ನು “ಪ್ರಪಂಚದ ದೋಷವು ಹತ್ತದಂತೆ” ಇಟ್ಟುಕೊಂಡಿದ್ದಾರೆ.—ಯಾಕೋಬ 1:27.
25. (ಎ) ಮಹಾ ಸಮೂಹವು ಯೆಹೋವನಿಗೆ “ಆತನ ಆಲಯದಲ್ಲಿ ಹಗಲಿರುಳು. . . ಪವಿತ್ರ ಸೇವೆಯನ್ನು” ಹೇಗೆ ಸಲ್ಲಿಸುತ್ತಿದೆ? (ಬಿ) ಯೆಹೋವನು ಮಹಾ ಸಮೂಹದವರ ಮೇಲೆ “ತನ್ನ ಗುಡಾರವನ್ನು ಆವರಿಸುವುದು” ಹೇಗೆ?
25 ಇನ್ನೂ ಹೆಚ್ಚಾಗಿ, ಅವರು—“ಆತನ ಆಲಯದಲ್ಲಿ ಹಗಲಿರುಳು ಆತನಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತಾ” ಇರುವ ಯೆಹೋವನ ಹುರುಪುಳ್ಳ ಸಾಕ್ಷಿಗಳಾಗಿ ಪರಿಣಮಿಸಿದ್ದಾರೆ. ಈ ಸಮರ್ಪಿತ ಮಹಾ ಸಮೂಹದಲ್ಲಿ ನೀವು ಒಬ್ಬರಾಗಿದ್ದೀರೊ? ಹಾಗಿದ್ದಲ್ಲಿ, ಅವನ ಮಹಾ ಆತ್ಮಿಕ ಆಲಯದ ಐಹಿಕ ಪ್ರಾಂಗಣದಲ್ಲಿ ಯೆಹೋವನನ್ನು ಎಡೆಬಿಡದೆ ಸೇವಿಸುವ ಸುಯೋಗವು ನಿಮ್ಮದಾಗಿದೆ. ಇಂದು, ಅಭಿಷಿಕ್ತರ ಮಾರ್ಗದರ್ಶನದ ಕೆಳಗೆ, ಮಹಾ ಸಮೂಹವು ಸಾಕ್ಷಿ ಕಾರ್ಯದ ಅಧಿಕವಾದ ಭಾಗವನ್ನು ನಿರ್ವಹಿಸುತ್ತದೆ. ಐಹಿಕ ಜವಾಬ್ದಾರಿಗಳ ಮಧ್ಯೆ, ಅವರಲ್ಲಿ ನೂರಾರು ಸಾವಿರಾರು ಮಂದಿ ಪಯನೀಯರರಾಗಿ, ಪೂರ್ಣ ಸಮಯದ ಶುಶ್ರೂಷೆಗೆ ಅವಕಾಶ ಮಾಡಿಕೊಂಡಿದ್ದಾರೆ. ನೀವು ಈ ಗುಂಪಿನಲ್ಲಿ ಇರಲಿ ಯಾ ಇಲ್ಲದಿರಲಿ, ಮಹಾ ಸಮೂಹದ ಒಬ್ಬ ಸಮರ್ಪಿತ ಸದಸ್ಯನೋಪಾದಿ, ನೀವು ಸಂತೋಷಿಸಸಾಧ್ಯವಿದೆ ಯಾಕಂದರೆ ದೇವರ ಸ್ನೇಹಿತರೋಪಾದಿ ನಿಮ್ಮನ್ನು ನೀತಿವಂತರೆಂದು ನಿರ್ಣಯಿಸಲಾಗುತ್ತದೆ ಮತ್ತು ಅವನ ಗುಡಾರದಲ್ಲಿ ಒಬ್ಬ ಅತಿಥಿಯೋಪಾದಿ ನಿಮಗೆ ಸ್ವಾಗತವನ್ನೀಯಲಾಗುತ್ತದೆ. (ಕೀರ್ತನೆ 15:1-5; ಯಾಕೋಬ 2:21-26) ಈ ರೀತಿಯಲ್ಲಿ ಅವನನ್ನು ಪ್ರೀತಿಸುವವರ ಮೇಲೆ ಯೆಹೋವನು ‘ತನ್ನ ಗುಡಾರವನ್ನು ಆವರಿಸುತ್ತಾನೆ,’ ಮತ್ತು, ಒಬ್ಬ ಒಳ್ಳೆಯ ಆತಿಥೇಯನೋಪಾದಿ, ಅವರನ್ನು ಸಂರಕ್ಷಿಸುತ್ತಾನೆ.—ಜ್ಞಾನೋಕ್ತಿ 18:10.
26. ಮಹಾ ಸಮೂಹವು ಯಾವ ಇತರ ಆಶೀರ್ವಾದಗಳನ್ನು ಆನಂದಿಸುವುದು?
26 ಆ ಹಿರಿಯನು ಮುಂದರಿಸುವುದು: “ಇನ್ನು ಮುಂದೆ ಅವರು ಹಸಿಯುವುದೂ ಇಲ್ಲ, ಬಾಯಾರುವುದೂ ಇಲ್ಲ; ಸೂರ್ಯನು ಅವರ ಮೇಲೆ ಬಡಿಯುವುದಿಲ್ಲ, ಯಾವುದೇ ಸುಡುವ ಕಾವು ಸಹ. ಏಕೆಂದರೆ ಸಿಂಹಾಸನದ ಮಧ್ಯ ಇರುವ ಕುರಿಮರಿ ಅವರನ್ನು ಪಾಲಿಸಿ ಜೀವಜಲದ ಒರತೆಗಳ ಬಳಿಗೆ ಅವರನ್ನು ನಡಿಸುವನು, ಮತ್ತು ದೇವರು ಅವರ ಕಣ್ಣುಗಳಿಂದ ಪ್ರತಿಯೊಂದು ಕಂಬನಿಯನ್ನು ಒರಸಿಬಿಡುವನು.” (ಪ್ರಕಟನೆ 7:16, 17, NW) ಹೌದು, ಯೆಹೋವನು ನಿಜವಾಗಿಯೂ ಆದರಿಸುವವನಾಗಿದ್ದಾನೆ! ಆದರೆ ಈ ಮಾತುಗಳಿಗೆ ಅರ್ಥದ ಯಾವ ಗಾಢತೆಯಿದೆ?
27. (ಎ) ಆ ಹಿರಿಯನ ಮಾತುಗಳಿಗೆ ಸಮಾನವಾದದ್ದನ್ನು ಯೆಶಾಯನು ಹೇಗೆ ಪ್ರವಾದಿಸಿದನು? (ಬಿ) ಯೆಶಾಯನ ಪ್ರವಾದನೆಯು ಪೌಲನ ದಿನಗಳಲ್ಲಿ ಕ್ರೈಸ್ತ ಸಭೆಯ ಮೇಲೆ ನೆರವೇರಲು ಪ್ರಾರಂಭವಾಯಿತೆಂದು ಯಾವುದು ತೋರಿಸುತ್ತದೆ?
27 ತದ್ರೀತಿಯ ಮಾತುಗಳ ಪ್ರವಾದನೆಯೊಂದನ್ನು ನಾವು ಗಮನಿಸೋಣ: “ಇದೇ ಯೆಹೋವನ ನುಡಿ—ಈ ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರವನ್ನು ದಯಪಾಲಿಸಿದ್ದೇನೆ, ಈ ರಕ್ಷಣೆಯ ದಿನದಲ್ಲಿ ನಿನಗೆ ಸಹಾಯ ಮಾಡಿದ್ದೇನೆ. . . . ಅವರಿಗೆ ಹಸಿವೆ ಬಾಯಾರಿಕೆಗಳು ಆಗವು. ಝಳವೂ ಬಿಸಿಲೂ ಬಡಿಯವು; ಅವರನ್ನು ಕರುಣಿಸುವಾತನು ದಾರಿತೋರಿಸುತ್ತಾ, ನೀರುಕ್ಕುವ ಒರತೆಗಳ ಬಳಿಯಲ್ಲಿ ನಡಿಸುವನು.” (ಯೆಶಾಯ 49:8, 10; ಕೀರ್ತನೆ 121:5, 6ನ್ನು ಸಹ ನೋಡಿರಿ.) ಅಪೊಸ್ತಲ ಪೌಲನು ಈ ಪ್ರವಾದನೆಯ ಭಾಗವೊಂದನ್ನು ಸಾ. ಶ. 33ರ ಪಂಚಾಶತ್ತಮದಲ್ಲಿ ಆರಂಭಗೊಂಡ “ರಕ್ಷಣೆಯ ದಿನ”ಕ್ಕೆ ಅನ್ವಯಿಸಿದನು. ಅವನು ಬರೆದದ್ದು: “ಅವನು [ಯೆಹೋವನು] ಅಂದದ್ದು: ‘ಪ್ರಸನ್ನತೆಯ ಕಾಲದಲ್ಲಿ ನಿನ್ನ ಮನವೆಯನ್ನು ಕೇಳಿದೆನು, ಮತ್ತು ರಕ್ಷಣೆಯ ದಿನದಲ್ಲಿ ನಿನಗೆ ಸಹಾಯ ಮಾಡಿದೆನು.’ ಇಗೋ! ಈಗ ವಿಶೇಷವಾಗಿ ಸುಪ್ರಸನ್ನತೆಯ ಕಾಲ. ಇಗೋ! ಈಗ ರಕ್ಷಣೆಯ ದಿನ.”—2 ಕೊರಿಂಥ 6:2, NW.
28, 29. (ಎ) ಯೆಶಾಯನ ಮಾತುಗಳು ಮೊದಲನೆಯ ಶತಮಾನದಲ್ಲಿ ಹೇಗೆ ನೆರವೇರಿದವು? (ಬಿ) ಪ್ರಕಟನೆ 7:16ರ ಮಾತುಗಳು ಮಹಾ ಸಮೂಹದವರ ಸಂಬಂಧದಲ್ಲಿ ಹೇಗೆ ನೆರವೇರಿವೆ? (ಸಿ) “ಜೀವಜಲಗಳ ಒರತೆಗಳ” ಬಳಿಗೆ ಮಹಾ ಸಮೂಹದವರ ನಡಿಸುವಿಕೆಯಿಂದ ಏನು ಪರಿಣಮಿಸಲಿದೆ? (ಡಿ) ಮಹಾ ಸಮೂಹದವರು ಮಾನವ ಕುಲದ ನಡುವೆ ಯಾಕೆ ಅದ್ವಿತೀಯರಾಗಿದ್ದಾರೆ?
28 ಹಸಿವು ಯಾ ಬಾಯಾರಿಕೆ ಆಗದಿರುವ ಯಾ ಯಾವುದೇ ಉರಿಯುವ ಶಾಖದಿಂದ ಬಾಧಿಸಲ್ಪಡದ ಆ ವಾಗ್ದಾನಕ್ಕೆ ಆ ಸಮಯದಲ್ಲಿ ಯಾವ ಅನ್ವಯವಿತ್ತು? ನಿಶ್ಚಯವಾಗಿಯೂ, ಪ್ರಥಮ ಶತಮಾನದ ಕ್ರೈಸ್ತರು ಆಗಾಗ್ಗೆ ಅಕ್ಷರಶಃ ಹಸಿವು ಮತ್ತು ಬಾಯಾರಿಕೆಯನ್ನು ಅನುಭವಿಸಿದರು. (2 ಕೊರಿಂಥ 11:23-27) ಆದರೂ ಆತ್ಮಿಕ ರೀತಿಯಲ್ಲಿ ಅವರಿಗೆ ಯಥೇಷ್ಟವಾಗಿ ಇತ್ತು. ಅವರಿಗೆ ಹೇರಳವಾಗಿ ಒದಗಿಸಲ್ಪಟ್ಟಿತು, ಹೀಗೆ ಆತ್ಮಿಕ ವಿಷಯಗಳಿಗಾಗಿ ಅವರು ಹಸಿದವರಾಗಿ ಯಾ ಬಾಯಾರಿದವರಾಗಿ ಇರಲಿಲ್ಲ. ಇನ್ನೂ ಹೆಚ್ಚಾಗಿ, ಯೆಹೋವನ ಕ್ರೋಧದ ಶಾಖವು, ಸಾ. ಶ. 70 ರಲ್ಲಿ ಯೆಹೂದಿ ವಿಷಯಗಳ ವ್ಯವಸ್ಥೆಯನ್ನು ನಾಶಮಾಡಿದಾಗ, ಅವರ ವಿರುದ್ಧವಾಗಿ ಉರಿಯಲಿಲ್ಲ. ಪ್ರಕಟನೆ 7:16ರ ಮಾತುಗಳು ಇಂದು ಮಹಾ ಸಮೂಹದವರಿಗೆ ತದ್ರೀತಿಯ ಆತ್ಮಿಕ ನೆರವೇರಿಕೆಯಲ್ಲಿರುತ್ತವೆ. ಅಭಿಷಿಕ್ತ ಕ್ರೈಸ್ತರೊಂದಿಗೆ, ಅವರು ವಿಪುಲವಾದ ಆತ್ಮಿಕ ಒದಗಿಸುವಿಕೆಗಳಲ್ಲಿ ಆನಂದಿಸುತ್ತಾರೆ.—ಯೆಶಾಯ 65:13; ನಹೂಮ 1:6, 7.
29 ಆ ಮಹಾ ಸಮೂಹದವರಲ್ಲಿ ನೀವು ಒಬ್ಬರಾಗಿದ್ದರೆ, ಸೈತಾನನ ವ್ಯವಸ್ಥೆಯ ನಸು ಬೆಳಕಿನ ಈ ವರ್ಷಗಳಲ್ಲಿ ನಿಮಗೆ ಸಹಿಸಬಹುದಾದ ಅಭಾವ ಮತ್ತು ಒತ್ತಡಗಳ ನಡುವೆಯೂ, ನಿಮ್ಮ ಹೃದಯದ ಸುಸ್ಥಿತಿಯು ನಿಮ್ಮನ್ನು “ಹರ್ಷಧ್ವನಿಗೈಯುವಂತೆ” ಮಾಡುವುದು. (ಯೆಶಾಯ 65:14) ಆ ಭಾವಾರ್ಥದಲ್ಲಿ, ಈಗಲೂ ಕೂಡ, ಯೆಹೋವನಿಗೆ ‘ಅವರ ಕಣ್ಣುಗಳಿಂದ ಪ್ರತಿಯೊಂದು ಕಂಬನಿಯನ್ನು ಒರಸಿಬಿಡಲು’ ಸಾಧ್ಯವಿದೆ. ಪ್ರತಿಕೂಲ ನ್ಯಾಯತೀರ್ಪಿನ ದೇವರ ಅತ್ಯುಷ್ಣದ “ಸೂರ್ಯನು” ನಿಮಗೆ ಬೆದರಿಕೆಯೊಡ್ಡುವುದಿಲ್ಲ, ಮತ್ತು ನಾಶದ ಚತುರ್ದಿಕ್ಕುಗಳ ಗಾಳಿಗಳು ಬಿಡುಗಡೆಗೊಳಿಸಲ್ಪಟ್ಟಾಗ, ಯೆಹೋವನ ಅಪ್ರಸನ್ನತೆಯ “ಸುಡುವ ಕಾವು” ಬಡಿಯುವುದರಿಂದ ತಡೆಯಲ್ಪಟ್ಟು ನೀವು ಉಳಿಸಲ್ಪಡುವಿರಿ. ಆ ನಾಶವು ಮುಗಿದ ನಂತರ, ನವಚೈತನ್ಯಕರ “ಜೀವಜಲಗಳ ಒರತೆಗಳ”—ನೀವು ನಿತ್ಯ ಜೀವವನ್ನು ಪಡೆಯಲು ಯೆಹೋವನು ಮಾಡುವ ಎಲ್ಲಾ ಒದಗಿಸುವಿಕೆಗಳನ್ನು ಇವುಗಳು ಪ್ರತಿನಿಧಿಸುತ್ತವೆ—ಮೂಲಕ ಪೂರ್ಣ ಪ್ರಯೋಜನ ಪಡೆಯುವಂತೆ ಕುರಿಮರಿಯು ನಿಮ್ಮನ್ನು ನಡಿಸುವನು. ನೀವು ಕ್ರಮೇಣ ಮಾನವ ಪರಿಪೂರ್ಣತೆಗೆ ಏರಿಸಲ್ಪಡುತ್ತಿರುವಾಗ, ಕುರಿಮರಿಯ ರಕ್ತದ ಮೇಲೆ ನಿಮ್ಮ ನಂಬಿಕೆಯು ಸಮರ್ಥಿಸಲ್ಪಡುವುದು. ಮಹಾ ಸಮೂಹದ ನೀವು, ಸಾಯಲು ಕೂಡ ಇಲ್ಲದಿದ್ದ “ಲಕ್ಷಾಂತರ” ಮಂದಿಯೋಪಾದಿ, ಮಾನವ ಕುಲದಲ್ಲಿ ಅದ್ವಿತೀಯರಾಗುವಿರಿ! ಪೂರ್ಣಾರ್ಥದಲ್ಲಿ, ನಿಮ್ಮ ಕಣ್ಣುಗಳಿಂದ ಪ್ರತಿಯೊಂದು ಕಣ್ಣೀರು ಒರಸಲ್ಪಡುವುದು.—ಪ್ರಕಟನೆ 21:4.
ಕರೆಯನ್ನು ಖಾತ್ರಿ ಮಾಡುವುದು
30. ಯೋಹಾನನ ದರ್ಶನದಲ್ಲಿ ಯಾವ ಭವ್ಯವಾದ ದೃಶ್ಯವು ನಮಗೆ ತೆರೆಯಲ್ಪಟ್ಟಿದೆ ಮತ್ತು “ನಿಲ್ಲುವುದಕ್ಕೆ” ಯಾರು ಶಕ್ತರಾಗುವರು?
30 ಈ ಮಾತುಗಳು ಎಂಥ ಒಂದು ಭವ್ಯವಾದ ದೃಶ್ಯವನ್ನು ನಮ್ಮ ಮುಂದೆ ತೆರೆಯುತ್ತವೆ! ಯೆಹೋವನು ತಾನೇ ತನ್ನ ಸಿಂಹಾಸನದ ಮೇಲೆ ಆಸೀನನಾಗಿದ್ದಾನೆ, ಮತ್ತು ಆತನ ಸ್ವರ್ಗೀಯ ಮತ್ತು ಭೂಮಿಯ ಎಲ್ಲಾ ಸೇವಕರು ಆತನನ್ನು ಸ್ತುತಿಸುವುದರಲ್ಲಿ ಐಕ್ಯರಾಗಿದ್ದಾರೆ. ಆತನ ಭೂಸೇವಕರು ಸ್ತುತಿಯ ಈ ಏರುತ್ತಿರುವ ಮೇಳಗೀತೆಯಲ್ಲಿ ಪಾಲು ತೆಗೆದುಕೊಳ್ಳುವುದು ನಿಜವಾಗಿಯೂ ಎಂತಹ ಒಂದು ಗಂಭೀರ ಸುಯೋಗವೆಂಬುದನ್ನು ಗಣ್ಯ ಮಾಡುತ್ತಾರೆ. ಬೇಗನೆ, ಯೆಹೋವನು ಮತ್ತು ಕ್ರಿಸ್ತ ಯೇಸುವು ನ್ಯಾಯದಂಡನೆಯನ್ನು ಜಾರಿಗೊಳಿಸುವರು, ಮತ್ತು ಈ ಕೂಗು ಕೇಳಲ್ಪಡುವುದು: “ಅವರ ಕೋಪವು ಕಾಣಿಸುವ ಮಹಾ ದಿನವು ಬಂದಿದೆ, ಮತ್ತು ಅದರ ಮುಂದೆ ನಿಲ್ಲುವುದಕ್ಕೆ ಯಾರು ಶಕ್ತರು?” (ಪ್ರಕಟನೆ 6:17) ಉತ್ತರ? ಮಾನವ ಕುಲದಲ್ಲಿ ಕೇವಲ ಅಲ್ಪಸಂಖ್ಯಾತರು ಅಂದರೆ ಮುದ್ರೆ ಪಡೆದ 1,44,000 ಮಂದಿಯಲ್ಲಿ ಮಾಂಸಿಕವಾಗಿ ಇನ್ನೂ ಉಳಿದಿರುವವರು ಮತ್ತು ಅವರೊಂದಿಗೆ ಪಾರಾಗುವ ಬೇರೆ ಕುರಿಗಳ ಒಂದು ಮಹಾ ಸಮೂಹವು “ನಿಲ್ಲಲು” ಶಕ್ತರಾಗುವರು.—ಹೋಲಿಸಿರಿ ಯೆರೆಮೀಯ 35:19; 1 ಕೊರಿಂಥ 16:13.
31. ಯೋಹಾನನ ದರ್ಶನದ ನೆರವೇರಿಕೆಯು ಕ್ರೈಸ್ತರಲ್ಲಿ, ಅಭಿಷಿಕ್ತರಿಗೂ, ಮಹಾ ಸಮೂಹದವರಿಗೂ ಹೇಗೆ ತಟ್ಟತಕ್ಕದ್ದು?
31 ಈ ವಾಸ್ತವಾಂಶದ ನೋಟದಲ್ಲಿ, ಯೋಹಾನ ವರ್ಗದ ಅಭಿಷಿಕ್ತ ಕ್ರೈಸ್ತರು ‘ಎದೆಬೊಗ್ಗಿದವರಾಗಿ ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ಅವರ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುವುದರಲ್ಲಿ’ ತಮ್ಮನ್ನು ಪರಿಶ್ರಮಪೂರ್ವಕವಾಗಿ ದುಡಿಸಿಕೊಳ್ಳುತ್ತಾರೆ. (ಫಿಲಿಪ್ಪಿ 3:14) ಈ ದಿನಗಳಲ್ಲಿ ನಡೆಯುವ ಘಟನೆಗಳು ಅವರ ವತಿಯಿಂದ ವಿಶೇಷ ತಾಳ್ಮೆಯನ್ನು ಕೇಳಿಕೊಳ್ಳುತ್ತವೆ ಎಂದವರು ಪೂರ್ತಿಯಾಗಿ ಅರಿತಿರುತ್ತಾರೆ. (ಪ್ರಕಟನೆ 13:10) ಯೆಹೋವನನ್ನು ಇಷ್ಟೊಂದು ವರ್ಷಗಳ ತನಕ ನಿಷ್ಠೆಯಿಂದ ಸೇವಿಸಿದ ಅನಂತರ, ಅವರು ನಂಬಿಕೆಯಲ್ಲಿ ದೃಢರಾಗಿ ಇದ್ದುಕೊಂಡು, ತಮ್ಮ ಹೆಸರುಗಳು “ಪರಲೋಕದಲ್ಲಿ ಬರೆದಿರುವುದರಲ್ಲಿ” ಆನಂದಿಸುತ್ತಾರೆ. (ಲೂಕ 10:20; ಪ್ರಕಟನೆ 3:5) “ಕಡೇ ವರೆಗೂ ತಾಳುವವನು ರಕ್ಷಣೆ ಹೊಂದುವನು” ಎಂದು ಸಹ ಮಹಾ ಸಮೂಹದವರಿಗೆ ಗೊತ್ತದೆ. (ಮತ್ತಾಯ 24:13) ಮಹಾ ಸಮೂಹವು ಒಂದು ಗುಂಪಿನೋಪಾದಿ ಮಹಾ ಸಂಕಟದಿಂದ ಹೊರಬರಲು ಗುರುತಿಸಲ್ಪಟ್ಟಿರುವಾಗ, ಅದರಲ್ಲಿನ ವ್ಯಕ್ತಿಗಳು ಶುದ್ಧರು ಮತ್ತು ಕ್ರಿಯಾಶೀಲರಾಗಿ ಉಳಿಯುವಂತೆ, ತಮ್ಮನ್ನು ಪರಿಶ್ರಮಪೂರ್ವಕವಾಗಿ ದುಡಿಸಿಕೊಳ್ಳಬೇಕಾಗಿದೆ.
32. ಯೆಹೋವನ ಕೋಪದ ದಿನದಲ್ಲಿ ಕೇವಲ ಎರಡೇ ಗುಂಪುಗಳು “ನಿಲ್ಲ”ಶಕ್ತರು ಎಂಬ ನಿಜತ್ವದಿಂದ ಯಾವ ತುರ್ತಿನ ಸಂಗತಿಯು ಎತ್ತಿತೋರಿಸಲಾಗಿದೆ?
32 ಈ ಎರಡು ಗುಂಪುಗಳ ಹೊರತು, ಯೆಹೋವನ ಕೋಪದ ದಿನದಲ್ಲಿ ಬೇರೆ ಯಾರಾದರೂ “ನಿಲ್ಲಲು ಶಕ್ತರು” ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಪ್ರತಿ ವರ್ಷ ಯೇಸುವಿನ ಯಜ್ಞಕ್ಕೆ ಒಂದು ನಿರ್ದಿಷ್ಟ ಗೌರವವನ್ನು ತೋರಿಸಲು ಅವನ ಮರಣದ ಸ್ಮಾರಕಾಚರಣೆಗೆ ಲಕ್ಷಾಂತರ ಮಂದಿ ಹಾಜರಾಗುವುದಾದರೂ, ಯೆಹೋವನ ಸೇವೆಯಲ್ಲಿ ಕ್ರಿಯಾಶೀಲರಾಗಿದ್ದು, ಆತನ ಸಮರ್ಪಿತ, ಸ್ನಾನಿತ ಸೇವಕರಾಗುವಷ್ಟರ ಮಟ್ಟಿಗೆ ಯೇಸುವಿನ ಯಜ್ಞದಲ್ಲಿ ನಂಬಿಕೆಯನ್ನು ಪ್ರದರ್ಶಿಸದಿರುವ ಲಕ್ಷಾಂತರ ಮಂದಿಗೆ ಇದು ಯಾವ ಅರ್ಥದಲ್ಲಿರುತ್ತದೆ? ಇನ್ನೂ ಹೆಚ್ಚಾಗಿ, ಹಿಂದೆ ಒಮ್ಮೆ ಕ್ರಿಯಾಶೀಲರಾಗಿದ್ದು, ಈಗ ತಮ್ಮ ಹೃದಯಗಳನ್ನು “ಪ್ರಪಂಚದ ಚಿಂತೆಗಳಿಂದ . . . ಭಾರವಾಗಲು” ಬಿಟ್ಟವರ ಕುರಿತೇನು? “ಬರುವುದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವುದಕ್ಕೂ ಮತ್ತು ಮನುಷ್ಯ ಕುಮಾರನ”—ಯೇಸು ಕ್ರಿಸ್ತನ—“ಮುಂದೆ ನಿಂತುಕೊಳ್ಳುವುದಕ್ಕೂ ಪೂರ್ಣಶಕ್ತರಾಗುವಂತೆ” ಇಂಥವರೆಲ್ಲರೂ ಎಚ್ಚತ್ತು, ಎಚ್ಚರವಾಗಿಯೇ ಉಳಿಯಲಿ. ಸಮಯವು ಕೊಂಚವಿದೆ!—ಲೂಕ 21:34-36.
[ಅಧ್ಯಯನ ಪ್ರಶ್ನೆಗಳು]
a ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ರೆಫರೆನ್ಸ್ ಬೈಬಲ್ ಪಾದಟಿಪ್ಪಣಿಯನ್ನು ನೋಡಿರಿ.
b ದ ವಾಚ್ಟವರ್, ಏಪ್ರಿಲ್ 1, 1918, ಪುಟ 98.
c ಅಕ್ಷರಶಃ, “ಅವನ ಎದುರುಗಡೆಯಲ್ಲಿ,” ದ ಕಿಂಗ್ಡಂ ಇಂಟರ್ಲಿನಿಯರ್ ಟ್ರಾನ್ಸ್ಲೇಶನ್ ಆಫ್ ದ ಸ್ಕ್ರಿಪ್ಚರ್ಸ್.
[ಪುಟ 220 ರಲ್ಲಿರುವ ಚೌಕ]
ಅರ್ಥವಿವರಣೆಗಳು ದೇವರಿಗೆ ಸೇರಿದ್ದು
ಹಲವಾರು ದಶಕಗಳ ತನಕ ಯೋಹಾನ ವರ್ಗವು ಮಹಾ ಸಮೂಹದ ಗುರುತಿಸುವಿಕೆಯ ಕುರಿತು ಬಹಳಷ್ಟು ಅನ್ವೇಷಣೆ ಮಾಡಿದರೂ, ತೃಪ್ತಿದಾಯಕ ವಿವರಣೆಯು ದೊರಕದೆ ಹೋಯಿತು. ಯಾಕೆ? ಇದಕ್ಕೆ ಉತ್ತರವನ್ನು ನಂಬಿಗಸ್ತ ಯೋಸೇಫನು ಹೇಳಿದ ಮಾತುಗಳಲ್ಲಿ ನಾವು ಕಂಡುಕೊಳ್ಳುತ್ತೇವೆ: “[ಸ್ವಪ್ನಗಳ] ಅರ್ಥವಿವರಣೆಯು ದೇವರಿಂದಲ್ಲವೇ?” (ಆದಿಕಾಂಡ 40:8) ದೇವರು ತನ್ನ ಪ್ರವಾದನೆಗಳ ನೆರವೇರಿಕೆಯ ಅರ್ಥವಿವರಣೆಯನ್ನು ಯಾವಾಗ ಮತ್ತು ಹೇಗೆ ನೀಡುತ್ತಾನೆ? ಸಾಮಾನ್ಯವಾಗಿ, ಅವುಗಳು ನೆರವೇರುವ ಸಮಯ ಸಮೀಪಿಸಿದಾಗ, ಇಲ್ಲವೆ ನೆರವೇರುತ್ತಾ ಇರುವಾಗ. ಇದರಿಂದ ಅವನ ಅನ್ವೇಷಕ ಸೇವಕರಿಂದ ಅವುಗಳ ಸಂದೇಶವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ತಿಳಿವಳಿಕೆಯು “ನಮ್ಮ ತಾಳ್ಮೆಯ ಮುಖಾಂತರ ಮತ್ತು ಶಾಸ್ತ್ರಗಳಿಂದ ಬರುವ ಸಾಂತ್ವನದ ಮುಖಾಂತರ ನಾವು ನಿರೀಕ್ಷೆಯುಳ್ಳವರಾಗುವಂತೆ ನಮ್ಮ ಶಿಕ್ಷಣಕ್ಕಾಗಿ ಬರೆಯಲ್ಪಟ್ಟಿವೆ.”—ರೋಮಾಪುರ 15:4, NW.
[ಪುಟ 235 ರಲ್ಲಿರುವ ಚೌಕ]
ಮಹಾ ಸಮೂಹದ ಸದಸ್ಯರು
▪ ಸಕಲ ಜನಾಂಗ ಕುಲ ಪ್ರಜೆಗಳಿಂದ ಮತ್ತು ಭಾಷೆಗಳಿಂದ ಹೊರಬರುತ್ತಾರೆ
▪ ಯೆಹೋವನ ಸಿಂಹಾಸನದ ಮುಂದೆ ನಿಲ್ಲುತ್ತಾರೆ
▪ ಕುರಿಮರಿಯ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡು ಶುಭ್ರಮಾಡಿಕೊಂಡಿದ್ದಾರೆ
▪ ಯೆಹೋವನಿಗೆ ಮತ್ತು ಯೇಸುವಿಗೆ ರಕ್ಷಣೆಯ ಪ್ರಶಂಸಾಸ್ತೋತ್ರಮಾಡುತ್ತಾರೆ
▪ ಮಹಾ ಸಂಕಟದಿಂದ ಪಾರಾಗಿ ಹೊರಬರುತ್ತಾರೆ
▪ ಹಗಲು ರಾತ್ರಿ ಯೆಹೋವನನ್ನು ಆತನ ಆಲಯದಲ್ಲಿ ಸೇವಿಸುತ್ತಾರೆ
▪ ಯೆಹೋವನ ಪ್ರೀತಿಯ ಸಂರಕ್ಷಣೆಯನ್ನು ಮತ್ತು ಪರಾಮರಿಕೆಯನ್ನು ಪಡೆಯುತ್ತಾರೆ
▪ ಜೀವಜಲಗಳ ಒರತೆಗಳ ಬಳಿಗೆ ಯೇಸುವಿನಿಂದ ನಡಸಲ್ಪಡುತ್ತಾರೆ
[Full-page picture on page 121]
[Picture on page 127]
ಮಹಾ ಸಮೂಹವು ರಕ್ಷಣೆಗಾಗಿ ದೇವರಿಗೆ ಮತ್ತು ಕುರಿಮರಿಗೆ ಋಣಿಗಳಾಗಿರುವುದು
[Picture on page 128]
ಕುರಿಮರಿಯು ಮಹಾ ಸಮೂಹವನ್ನು ಜೀವಜಲಗಳ ಒರತೆಗಳ ಬಳಿಗೆ ಮಾರ್ಗದರ್ಶಿಸುವನು