ಯೆಹೋವನ ಪ್ರೀತಿಯ ಕೌಟುಂಬಿಕ ಏರ್ಪಾಡು
“ಹೀಗಿರಲಾಗಿ ಯಾವ ತಂದೆಯಿಂದ ಭೂಪರಲೋಕಗಳಲ್ಲಿರುವ ಪ್ರತಿಜನವೂ [ಪ್ರತಿಕುಟುಂಬವೂ, NW] ಹೆಸರು ತೆಗೆದುಕೊಳ್ಳುತ್ತದೋ ಆ ತಂದೆಯ ಮುಂದೆ ಮೊಣಕಾಲೂರಿಕೊಳ್ಳುತ್ತೇನೆ.”—ಎಫೆಸ 3:14, 15.
1, 2. (ಎ) ಕುಟುಂಬ ಏಕಾಂಶವನ್ನು ಯೆಹೋವನು ಯಾವ ಉದ್ದೇಶದಿಂದ ನಿರ್ಮಿಸಿದ್ದನು? (ಬಿ) ಯೆಹೋವನ ಏರ್ಪಾಡಿನಲ್ಲಿ ಇಂದು ಕುಟುಂಬಕ್ಕೆ ಯಾವ ಭಾಗವಿರಬೇಕು?
ಯೆಹೋವನು ಕುಟುಂಬ ಏಕಾಂಶವನ್ನು ನಿರ್ಮಿಸಿದ್ದಾನೆ. ಅದರ ಮೂಲಕ, ಸಾಹಚರ್ಯಕ್ಕಾಗಿ, ಬೆಂಬಲಕ್ಕಾಗಿ, ಯಾ ಆಪತ್ತೆಗಾಗಿರುವ ಮಾನವನ ಆವಶ್ಯಕತೆಯನ್ನು ತೃಪ್ತಿಗೊಳಿಸುವುದಕ್ಕಿಂತಲೂ ಹೆಚ್ಚನ್ನು ಅವನು ಮಾಡಿದ್ದಾನೆ. (ಆದಿಕಾಂಡ 2:18) ಭೂಮಿಯನ್ನು ತುಂಬಿಕೊಳ್ಳುವ ದೇವರ ಮಹಿಮೆಯ ಉದ್ದೇಶವನ್ನು ನೆರವೇರಿಸಲು ಕುಟುಂಬವು ಒಂದು ಮಾಧ್ಯಮವಾಗಿತ್ತು. ಮೊದಲ ವಿವಾಹಿತ ದಂಪತಿಗೆ ಅವನಂದದ್ದು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯನ್ನು ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ.” (ಆದಿಕಾಂಡ 1:28) ಕುಟುಂಬದ ಬೆಚ್ಚಗೆನ ಮತ್ತು ಆರೈಕೆಯ ಪರಿಸರವು ಆದಾಮ ಮತ್ತು ಹವ್ವರಿಗೆ ಮತ್ತು ಅವರ ಸಂತತಿಯವರಿಗೆ ಹುಟ್ಟುವ ಬಹುಸಂಖ್ಯಾತ ಮಕ್ಕಳಿಗೆ ಪ್ರಯೋಜನದಾಯಕವಾಗಿ ರುಜುವಾಗಲಿರುವುದು.
2 ಆದಾಗ್ಯೂ, ಆ ಮೊದಲ ದಂಪತಿಗಳು ಅವಿಧೇಯತೆಯ ಪಥವೊಂದನ್ನು ಆರಿಸಿದರು—ಅವರಿಗೂ, ಅವರ ಸಂತತಿಯವರಿಗೂ ವಿಧ್ವಂಸಕರ ಪರಿಣಾಮಗಳೊಂದಿಗೆ. (ರೋಮಾಪುರ 5:12) ಹೀಗೆ, ದೇವರು ಏನಾಗಿರಬೇಕೆಂದು ಬಯಸಿದ್ದನೋ ಅದರ ವಕ್ರತೆಯು ಇಂದಿನ ಕುಟುಂಬ ಜೀವನವಾಗಿದೆ. ಆದರೂ, ಯೆಹೋವನ ಏರ್ಪಾಡಿನಲ್ಲಿ ಒಂದು ಪ್ರಾಮುಖ್ಯ ಸ್ಥಾನವು ಕುಟುಂಬಕ್ಕೆ ಇರುವುದು ಮುಂದರಿದು, ಕ್ರೈಸ್ತ ಸಂಸ್ಥಾಪನೆಯ ಒಂದು ಮೂಲ ಏಕಾಂಶವಾಗಿ ಕಾರ್ಯವೆಸಗುತ್ತದೆ. ನಮ್ಮ ಮಧ್ಯದಲ್ಲಿರುವ ಅನೇಕ ಅವಿವಾಹಿತರಿಂದ ಮಾಡಲ್ಪಡುವ ಉತ್ತಮ ಕೆಲಸದ ನಗಣ್ಯತೆಯಿಂದ ಇದನ್ನು ಹೇಳಲಾಗುವುದಿಲ್ಲ. ಬದಲಾಗಿ, ಸಮಗ್ರವಾಗಿ ಕ್ರೈಸ್ತ ಸಂಸ್ಥಾಪನೆಯ ಆತ್ಮಿಕ ಆರೋಗ್ಯಕ್ಕಾಗಿ ಕುಟುಂಬಗಳು ಕೂಡ ಮಹತ್ತಾದ ಕಾಣಿಕೆಗಳನ್ನು ಕೊಡುತ್ತವೆ ಎಂದು ನಾವು ಅಂಗೀಕರಿಸುತ್ತೇವೆ. ಬಲವಾದ ಕುಟುಂಬಗಳು ಬಲವಾದ ಸಭೆಗಳನ್ನು ಉಂಟುಮಾಡುತ್ತವೆ. ಹಾಗಿದ್ದರೂ, ಇಂದಿನ ಒತ್ತಡಗಳ ಎದುರಲ್ಲೂ ನಿಮ್ಮ ಕುಟುಂಬವು ಹೇಗೆ ವರ್ಧಿಸಬಹುದು? ಉತ್ತರವಾಗಿ, ಕುಟುಂಬದೇರ್ಪಾಡಿನ ಕುರಿತು ಬೈಬಲು ಏನು ಹೇಳುತ್ತದೆ ಎಂದು ನಾವು ಪರೀಕ್ಷಿಸೋಣ.
ಬೈಬಲ್ ಸಮಯಗಳಲ್ಲಿ ಕುಟುಂಬ
3. ಕುಲಪತಿಗಳ ಕುಟುಂಬದಲ್ಲಿ ಗಂಡನೂ, ಹೆಂಡತಿಯೂ ಯಾವ ಪಾತ್ರಗಳನ್ನು ಆಡಿದರು?
3 ದೇವರ ಶಿರಸ್ಸುತನದ ಏರ್ಪಾಡನ್ನು ಆದಾಮ ಮತ್ತು ಹವ್ವರಿಬ್ಬರೂ ಧಿಕ್ಕರಿಸಿದರು. ಆದರೆ ನೋಹ, ಅಬ್ರಹಾಮ, ಇಸಾಕ, ಯಾಕೋಬ, ಮತ್ತು ಯೋಬರಂಥ ನಂಬಿಕೆಯ ಮನುಷ್ಯರು ಕುಟುಂಬದ ಶಿರಸ್ಸುಗಳೋಪಾದಿ ತಮ್ಮ ಸ್ಥಾನಗಳನ್ನು ಯೋಗ್ಯವಾಗಿ ತಕ್ಕೊಂಡರು. (ಇಬ್ರಿಯ 7:4) ಕುಲಪತಿಯ ಕುಟುಂಬವು ಒಂದು ಸಣ್ಣ ಸರಕಾರದೋಪಾದಿ ಇದ್ದು, ತಂದೆಯು ಧಾರ್ಮಿಕ ನಾಯಕನೂ, ಉಪದೇಶಕನೂ, ಮತ್ತು ನ್ಯಾಯಾಧಿಪತಿಯೂ ಆಗಿ ವರ್ತಿಸುತ್ತಿದ್ದನು. (ಆದಿಕಾಂಡ 8:20; 18:19) ಪತ್ನಿಯರು ಕೂಡ ಒಂದು ಪ್ರಧಾನ ಪಾತ್ರವನ್ನು, ದಾಸಿಗಳೋಪಾದಿ ಅಲ್ಲ, ಬದಲಿಗೆ ಸಹಾಯಕ ಗೃಹಕೃತ್ಯದ ವ್ಯವಸ್ಥಾಪಿಕೆಯೋಪಾದಿ ಕಾರ್ಯನಿರ್ವಹಿಸುತ್ತಿದ್ದಳು.
4. ಮೋಶೆಯ ನಿಯಮಶಾಸ್ತ್ರಕ್ಕನುಸಾರ ಕುಟುಂಬ ಜೀವನವು ಹೇಗೆ ಬದಲಾವಣೆಗೊಂಡಿತು, ಆದರೆ ಯಾವ ಪಾತ್ರ ಆಡುವದನ್ನು ಹೆತ್ತವರು ಮುಂದರಿಸಿದರು?
4 ಸಾ.ಶ.ಪೂ. 1513 ರಲ್ಲಿ ಇಸ್ರಾಯೇಲ್ ಒಂದು ಜನಾಂಗವಾದಾಗ, ಮೋಶೆಯ ಮೂಲಕ ಕೊಡಲ್ಪಟ್ಟ ರಾಷ್ಟ್ರೀಯ ನಿಯಮಗಳಿಗೆ ಕೌಟುಂಬಿಕ ನಿಯಮವು ಅಧೀನವಾಯಿತು. (ವಿಮೋಚನಕಾಂಡ 24:3-8) ಜೀವನ್ಮರಣಗಳ ಸಹಿತ ವಿಷಯಗಳನ್ನು ತೀರ್ಮಾನಿಸಲು ಅಧಿಕಾರವು ಈಗ ನೇಮಿತ ನ್ಯಾಯಾಧಿಪತಿಗಳಿಗೆ ಕೊಡಲ್ಪಟ್ಟಿತು. (ವಿಮೋಚನಕಾಂಡ 18:13-26) ಲೇವ್ಯರ ಯಾಜಕತ್ವವು ಆರಾಧನೆಯ ಯಜ್ಞಗಳ ವಿಭಾಗದ ಮೇಲ್ವಿಚಾರ ತಕ್ಕೊಂಡಿತು. (ಯಾಜಕಕಾಂಡ 1:2-5) ಹೀಗಿದ್ದರೂ, ತಂದೆಯು ಒಂದು ಪ್ರಾಮುಖ್ಯ ಪಾತ್ರವನ್ನಾಡುವುದನ್ನು ಮುಂದರಿಸಿದನು. ಮೋಶೆಯು ತಂದೆಗಳಿಗೆ ಪ್ರಬೋಧಿಸಿದ್ದು: “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” (ಧರ್ಮೋಪದೇಶಕಾಂಡ 6:6, 7) ತಾಯಂದಿರಿಗೆ ಬಹಳಷ್ಟು ಪ್ರಭಾವವಿತ್ತು. ಜ್ಞಾನೋಕ್ತಿ 1:8 ಯುವಕರಿಗೆ ಆಜ್ಞಾಪಿಸಿದ್ದು; “ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.” ಹೌದು, ಗಂಡನ ಅಧಿಕಾರದ ಕಾರ್ಯವೃತ್ತದೊಳಗೆ, ಹೀಬ್ರು ಪತ್ನಿಯು ಕೌಟುಂಬಿಕ ನಿಯಮಗಳನ್ನು ಮಾಡಬಹುದಿತ್ತು—ಅನುಷ್ಠಾನಗೊಳಿಸಬಹುದಿತ್ತು. ಅವಳು ಪ್ರಾಯಸಂದ ನಂತರವೂ, ಅವಳ ಮಕ್ಕಳಿಂದ ಅವಳು ಗೌರವಿಸಲ್ಪಡಬೇಕಿತ್ತು.—ಜ್ಞಾನೋಕ್ತಿ 23:22.
5. ಕುಟುಂಬದೇರ್ಪಾಡಿನಲ್ಲಿ ಮಕ್ಕಳ ಸ್ಥಾನವನ್ನು ಮೋಶೆಯ ನಿಯಮಶಾಸ್ತ್ರವು ಹೇಗೆ ನಿರೂಪಿಸಿತು?
5 ದೇವರ ನಿಯಮದಿಂದ ಮಕ್ಕಳ ಸ್ಥಾನವೂ ಕೂಡ ಸ್ಪಷ್ಟವಾಗಿಗಿ ನಿರೂಪಿಸಲ್ಪಟ್ಟಿತ್ತು. ಧರ್ಮೋಪದೇಶಕಾಂಡ 5:16 ಹೇಳಿದ್ದು: “ನಿನ್ನ ದೇವರಾದ ಯೆಹೋವನು ಆಜ್ಞಾಪಿಸಿದಂತೆ ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಇರುವಿ, ಮತ್ತು ನಿನಗೆ ಮೇಲಾಗುವದು.” ಮೋಶೆಯ ನಿಯಮಶಾಸ್ತ್ರದ ಕೆಳಗೆ ಒಬ್ಬನ ಹೆತ್ತವರಿಗೆ ಅಗೌರವವು ಒಂದು ಅತಿ ಗಂಭೀರವಾದ ಅಪರಾಧವಾಗಿತ್ತು. (ವಿಮೋಚನಕಾಂಡ 21:15, 17) “ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣಶಿಕ್ಷೆಯಾಗಬೇಕು” ಎನ್ನುತ್ತದೆ ನಿಯಮಶಾಸ್ತ್ರ. (ಯಾಜಕಕಾಂಡ 20:9) ಒಬ್ಬನ ಹೆತ್ತವರ ವಿರುದ್ಧ ದಂಗೆಯು ಸ್ವತಃ ದೇವರ ವಿರುದ್ಧ ಮಾಡುವ ದಂಗೆಗೆ ಸರಿಸಮಾನವಾಗಿತ್ತು.
ಕ್ರೈಸ್ತ ಗಂಡಂದಿರ ಪಾತ್ರ
6, 7. ಎಫೆಸ 5:23-29 ರಲ್ಲಿ ಪೌಲನ ಮಾತುಗಳು ಮೊದಲನೆಯ ಶತಕದ ಅವನ ವಾಚಕರಿಗೆ ಕ್ರಾಂತಿಕಾರಕವಾಗಿ ಭಾಸವಾದದ್ದು ಯಾಕೆ?
6 ಕ್ರೈಸ್ತತ್ವವು ಕುಟುಂಬದೇರ್ಪಾಡಿನ ಮೇಲೆ, ನಿರ್ದಿಷ್ಟವಾಗಿ ಗಂಡನ ಪಾತ್ರದ ಕುರಿತು ಬೆಳಕನ್ನು ಚೆಲಿತ್ಲು. ಕ್ರೈಸ್ತ ಸಭೆಯ ಹೊರಗೆ, ಮೊದಲನೆಯ ಶತಕದ ಗಂಡಂದಿರು ತಮ್ಮ ಹೆಂಡತಿಯರನ್ನು ಕ್ರೂರವಾಗಿ, ದಬ್ಬಾಳಿಕೆಯ ವಿಧದಲ್ಲಿ ಉಪಚರಿಸುವುದು ಒಂದು ಸಾಮಾನ್ಯ ಸಂಗತಿಯಾಗಿತ್ತು. ಸ್ತ್ರೀಯರಿಗೆ ಮೂಲಭೂತ ಹಕ್ಕುಗಳನ್ನು ಮತ್ತು ಗೌರವವನ್ನು ನಿರಾಕರಿಸಲಾಗುತ್ತಿತ್ತು. ದ ಎಕ್ಸ್ಪೊಸಿಟರ್ಸ್ ಬೈಬಲ್ ಹೇಳುವುದು: “ಸುಸಂಸ್ಕೃತ ಗ್ರೀಕನು ಮಕ್ಕಳ ಉತ್ಪಾದನೆಗೋಸ್ಕರ ಹೆಂಡತಿಯನ್ನು ತೆಗೆದುಕೊಳ್ಳುತ್ತಿದ್ದನು. ಅವಳ ಹಕ್ಕುಗಳು ಅವನ ಲೈಂಗಿಕ ರುಚಿಯ ಮೇಲೆ ಯಾವುದೇ ನಿರ್ಬಂಧವನ್ನು ಹಾಕಲಿಲ್ಲ. ಮದುವೆಯ ಒಪ್ಪಂದದಲ್ಲಿ ಪ್ರೀತಿಯು ಇರಲಿಲ್ಲ. . . . ದಾಸಿ-ಹೆಂಗಸಿಗೆ ಯಾವುದೇ ಹಕ್ಕುಗಳಿರಲಿಲ್ಲ. ಅವಳ ದೇಹವು ಅವಳ ಧಣಿಯ ವಿನಿಯೋಗದಲ್ಲಿತ್ತು.”
7 ಅಂಥ ವಾತಾವರಣವೊಂದರಲ್ಲಿ ಪೌಲನು ಎಫೆಸ 5:23-29ರ ಮಾತುಗಳನ್ನು ಬರೆದನು: “ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. ಕ್ರಿಸ್ತನೋ ಸಭೆಯೆಂಬ ದೇಹಕ್ಕೆ ರಕ್ಷಕನಾಗಿದ್ದಾನೆ. . . . ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. . . . ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. ಯಾರೂ ಎಂದು ತನ್ನ ಸ್ವಶರೀರವನ್ನು ಹಗೆಮಾಡಿದ್ದಿಲ್ಲ; ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಸಂರಕ್ಷಿಸುತ್ತಾರೆ.” ಮೊದಲನೆಯ ಶತಕದ ವಾಚಕರಿಗೆ ಈ ಮಾತುಗಳು ಕ್ರಾಂತಿಕಾರಕವಾಗಿದ್ದವು. ದ ಎಕ್ಸ್ಪೊಸಿಟರ್ಸ್ ಬೈಬಲ್ ಹೇಳುವುದು: “ಆ ಕಾಲದ ಲಂಪಟತನದ ನೈತಿಕತೆಗಳಿಗೆ ಹೋಲಿಸುವಾಗ, ಕ್ರೈಸ್ತತ್ವದಲ್ಲಿ ವಿವಾಹದ ಕ್ರೈಸ್ತ ನೋಟಕ್ಕಿಂತ ಹೆಚ್ಚು ನವೀನತೆಯದ್ದೂ, ಹೆಚ್ಚು ಕಠಿಣವೂ ಆಗಿ ತೋರಿಬಂದದ್ದು ಇನ್ನಾವುದೂ ಇಲ್ಲ. . . . [ಅದು] ಮಾನವಕುಲಕ್ಕೆ ಒಂದು ಹೊಸ ಯುಗವನ್ನು ತೆರೆಯಿತು.”
8, 9. ಸ್ತ್ರೀಯರೆಡೆಗೆ ಪುರುಷರಲ್ಲಿ ಯಾವ ಅನಾರೋಗ್ಯಕರ ಮನೋಭಾವ ಸಾಮಾನ್ಯವಾಗಿ ಇದೆ, ಮತ್ತು ಅಂತಹ ದೃಷ್ಟಿಕೋನಗಳನ್ನು ಕ್ರೈಸ್ತ ಪುರುಷರು ತೊರೆಯುವುದು ಯಾಕೆ ಪ್ರಾಮುಖ್ಯವಾಗಿದೆ?
8 ಗಂಡಂದಿರಿಗೆ ಇರುವ ಬೈಬಲಿನ ಹಿತೋಪದೇಶವು ಇಂದು ಕಡಿಮೆ ಕ್ರಾಂತಿಕಾರಕವೇನೂ ಅಲ್ಲ. ಸ್ತ್ರೀವಿಮೋಚನೆಯ ಎಲ್ಲಾ ಭಾಷಣಗಳ ಹೊರತಾಗಿಯೂ, ಕೇವಲ ಲೈಂಗಿಕ ಸುಖಾನುಭವದ ವಸ್ತುಗಳಾಗಿ ಸ್ತ್ರೀಯರನ್ನು ಅನೇಕ ಪುರುಷರು ವೀಕ್ಷಿಸುತ್ತಾರೆ. ದೊರೆತನದಿಂದ, ಹತೋಟಿಯಲ್ಲಿಡುವುದರಿಂದ, ಯಾ ಜಬರದಸ್ತಿಯಿಂದ ನಿಜವಾಗಿಯೂ ಸ್ತ್ರೀಯರು ಆನಂದಿಸುತ್ತಾರೆಂಬ ಮಿಥ್ಯೆಯನ್ನು ನಂಬುತ್ತಾ, ಅನೇಕ ಪುರುಷರು ತಮ್ಮ ಹೆಂಡತಿಯರನ್ನು ದೈಹಿಕವಾಗಿಯೂ, ಭಾವನಾತ್ಮಕವಾಗಿಯೂ ಪೀಡಿಸುತ್ತಾರೆ. ಕ್ರೈಸ್ತ ಪುರುಷನೊಬ್ಬನು ಪ್ರಾಪಂಚಿಕ ಯೋಚನೆಯಿಂದ ಪ್ರಭಾವಿಸಲ್ಪಟ್ಟು, ತನ್ನ ಹೆಂಡತಿಯನ್ನು ಪೀಡಿಸುವುದು ಎಷ್ಟು ಅವಮಾನಕಾರಿಯಾಗಿರುವುದು! ಒಬ್ಬ ಕ್ರೈಸ್ತ ಸ್ತ್ರೀಯು ಹೇಳುವುದು, “ನನ್ನ ಗಂಡನು ಶುಶ್ರೂಷಾ ಸೇವಕನಾಗಿದ್ದಾನೆ ಮತ್ತು ಸಾರ್ವಜನಿಕ ಭಾಷಣಗಳನ್ನು ನೀಡುತ್ತಾನೆ.” ಆದರೂ ಅವಳು ಪ್ರಕಟಿಸುವುದು, “ಹೆಂಡತಿ-ಹೊಡೆತದ ಬಲಿಯೊಬ್ಬಳು ನಾನಾಗಿದ್ದೇನೆ.” ಸ್ಪಷ್ಟವಾಗಿಗಿ, ಅಂತಹ ಕೃತ್ಯಗಳು ದೇವರ ಏರ್ಪಾಡಿನೊಂದಿಗೆ ಹೊಂದಿಕೆಯಲ್ಲಿರುವುದಿಲ್ಲ. ಆ ಮನುಷ್ಯನು ಒಂದು ವಿಶೇಷ ಅಪವಾದಾತ್ಮಕನು; ಅವನು ದೇವರ ಮೆಚ್ಚಿಕೆಯನ್ನು ಪಡೆಯಲು ನಿರೀಕ್ಷಿಸಿದ್ದಲ್ಲಿ, ತನ್ನ ಕೋಪವನ್ನು ಅಣಗಿಸಿಕೊಳ್ಳಲು ಸಹಾಯವನ್ನು ಪಡೆಯುವ ಅಗತ್ಯವಿತ್ತು.—ಗಲಾತ್ಯ 5:19-21.
9 ತಮ್ಮ ಸ್ವಂತ ಶರೀರದಂತೆಯೇ ಅವರ ಹೆಂಡತಿಯರನ್ನು ಪ್ರೀತಿಸಬೇಕು ಎಂದು ದೇವರಿಂದ ಗಂಡಂದಿರಿಗೆ ಆಜ್ಞಾಪಿಸಲಾಗಿದೆ. ಹಾಗೆ ಮಾಡಲು ನಿರಾಕರಿಸುವುದು ದೇವರ ಅಪ್ಪಟ ಏರ್ಪಾಡಿನ ವಿರುದ್ಧ ದಂಗೆಯಾಗಿರುತ್ತದೆ ಮತ್ತು ದೇವರೊಂದಿಗಿನ ಒಬ್ಬನ ಸಂಬಂಧವನ್ನು ಶಿಥಿಲಗೊಳಿಸಸಾಧ್ಯವಿದೆ. ಅಪೊಸ್ತಲ ಪೇತ್ರನ ಮಾತುಗಳು ಸ್ಪಷ್ಟವಾಗಿಗಿ ಇವೆ: “ಅದೇ ರೀತಿಯಾಗಿ ಪುರುಷರೇ, ಸ್ತ್ರೀಯು ಪುರುಷನಿಗಿಂತ ಬಲಹೀನಳೆಂದು ಜ್ಞಾಪಕಮಾಡಿಕೊಂಡು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನಮಾಡಿರಿ. . . . ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವದಿಲ್ಲ.” (1 ಪೇತ್ರ 3:7) ಒಬ್ಬನ ಹೆಂಡತಿಯನ್ನು ಕ್ರೂರವಾಗಿ ಉಪಚರಿಸುವುದರಿಂದ, ಅವಳ ಆತ್ಮಿಕತೆ ಮತ್ತು ಒಬ್ಬನ ಮಕ್ಕಳ ಆತ್ಮಿಕತೆಯ ಮೇಲೆ ವಿಪರೀತ ಹಾನಿಯ ಪರಿಣಾಮ ತರಸಾಧ್ಯವಿದೆ.
10. ಕ್ರಿಸ್ತನಂತಹ ವಿಧಾನದಲ್ಲಿ ಶಿರಸ್ಸುತನವನ್ನು ಗಂಡಂದಿರು ಚಲಾಯಿಸುವ ಕೆಲವು ರೀತಿಗಳು ಯಾವುವು?
10 ಗಂಡಂದಿರೇ, ಕ್ರಿಸ್ತನಂಥ ವಿಧದಲ್ಲಿ ನಿಮ್ಮ ಶಿರಸ್ಸುತನವನ್ನು ಚಲಾಯಿಸಿದರೆ, ನಿಮ್ಮ ಕುಟುಂಬವು ಏಳಿಗೆ ಹೊಂದುವುದು. ಕ್ರಿಸ್ತನು ಎಂದೂ ಕ್ರೂರ ಯಾ ಪೀಡಿಸುವ ರೀತಿಯಲ್ಲಿ ಇರಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಅವನು ಹೀಗೆ ಹೇಳಶಕ್ತನಾದನು: “ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು.” (ಮತ್ತಾಯ 11:29) ನಿಮ್ಮ ವಿಷಯದಲ್ಲಿ ನಿಮ್ಮ ಕುಟುಂಬವು ಅದನ್ನು ಹೇಳಶಕ್ತವಾಗಿದೆಯೋ? ಯೇಸುವು ತನ್ನ ಶಿಷ್ಯರನ್ನು ಸ್ನೇಹಿತರುಗಳೋಪಾದಿ ಉಪಚರಿಸಿದನು ಮತ್ತು ಅವರ ಮೇಲೆ ಭರವಸವನ್ನಿಟ್ಟನು. (ಯೋಹಾನ 15:15) ನಿಮ್ಮ ಹೆಂಡತಿಯರಿಗೆ ಅದೇ ಗೌರವವನ್ನು ನೀವು ನೀಡುತ್ತೀರೋ? ಬೈಬಲಿನಲ್ಲಿ “ಗುಣವತಿಯಾದ [ಸಮರ್ಥಳಾದ, NW] ಸತಿಯ” ಕುರಿತು ಹೀಗನ್ನಲಾಗಿದೆ: “ಪತಿಹೃದಯವು ಆಕೆಯಲ್ಲಿ ಭರವಸವಿಡುವದು.” (ಜ್ಞಾನೋಕ್ತಿ 31:10, 11) ಅಸಮಂಜಸತೆಯ ನಿರ್ಬಂಧಗಳೊಂದಿಗೆ ಅವಳನ್ನು ಕಟ್ಟಿಹಾಕದೆ, ಸ್ವಾತಂತ್ರ್ಯದ ಮತ್ತು ಮನೋವೈಶಾಲ್ಯದ ಪರಿಮಾಣವನ್ನು ಅನುಮತಿಸುವುದೆ ಅದರ ಅರ್ಥವಾಗಿದೆ. ಇನ್ನೂ ಹೆಚ್ಚಾಗಿ, ಅವರ ಭಾವನೆಗಳನ್ನು ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತೆ ತನ್ನ ಶಿಷ್ಯರನ್ನು ಯೇಸುವು ಉತ್ತೇಜಿಸಿದನು. (ಮತ್ತಾಯ 9:28; 16:13-15) ನಿಮ್ಮ ಹೆಂಡತಿಯೊಂದಿಗೆ ನೀವು ಹಾಗೆ ಮಾಡುತ್ತೀರೋ? ಯಾ ಪ್ರಾಮಾಣಿಕವಾದ ಅಸಮ್ಮತಿಯು ನಿಮ್ಮ ಅಧಿಕಾರಕ್ಕೆ ಒಂದು ಪಂಥಾಹ್ವಾನವೆಂಬಂತೆ ವೀಕ್ಷಿಸುತ್ತೀರೋ? ನಿಮ್ಮ ಹೆಂಡತಿಯ ಭಾವನೆಗಳನ್ನು ಅಲಕ್ಷಿಸದೇ, ಗಮನಕ್ಕೆ ತಕ್ಕೊಳ್ಳುವದರ ಮೂಲಕ, ನಿಮ್ಮ ಶಿರಸ್ಸುತನಕ್ಕೆ ಅವಳ ಗೌರವವನ್ನು ನೀವು ವಾಸ್ತವದಲ್ಲಿ ಕಟ್ಟುತ್ತೀರಿ.
11. (ಎ) ತಮ್ಮ ಮಕ್ಕಳ ಆತ್ಮಿಕ ಆವಶ್ಯಕತೆಗಳಿಗಾಗಿ ತಂದೆಯಂದಿರು ಹೇಗೆ ಲಕ್ಷ್ಯಕೊಡಬಲ್ಲರು? (ಬಿ) ತಮ್ಮ ಕುಟುಂಬಗಳನ್ನು ಪರಿಪಾಲಿಸುವುದರಲ್ಲಿ ಹಿರಿಯರು ಮತ್ತು ಶುಶ್ರೂಷಾ ಸೇವಕರು ಯಾಕೆ ಒಳ್ಳೆಯ ಮಾದರಿಯನ್ನು ಇಡತಕ್ಕದ್ದು?
11 ನೀವೊಬ್ಬ ತಂದೆಯಾಗಿರುವುದಾದರೆ, ನಿಮ್ಮ ಮಕ್ಕಳ ಆತ್ಮಿಕ, ಭಾವನಾತ್ಮಕ, ಮತ್ತು ಶಾರೀರಿಕ ಅವಶ್ಯಕತೆಗಳನ್ನು ಲಕ್ಷಿಸುವುದರಲ್ಲಿ ನೀವು ಮುಂದಾಳುತನವನ್ನು ವಹಿಸುವುದನ್ನು ಕೂಡ ನಿಮ್ಮಿಂದ ಅಪೇಕ್ಷಿಸಲಾಗುತ್ತದೆ. ಅದರಲ್ಲಿ ನಿಮ್ಮ ಕುಟುಂಬಕ್ಕೆ ಒಂದು ಒಳ್ಳೆಯ ಆತ್ಮಿಕ ದಿನಚರಿಯು ಸೇರಿರುತ್ತದೆ: ಕ್ಷೇತ್ರಸೇವೆಯಲ್ಲಿ ಅವರೊಂದಿಗೆ ಕೆಲಸಮಾಡುವುದು, ಒಂದು ಮನೆ ಬೈಬಲ್ ಅಭ್ಯಾಸವನ್ನು ನಡಿಸುವುದು, ದಿನದ ವಚನವನ್ನು ಚರ್ಚಿಸುವುದು. ಆಸಕ್ತಿಕರವಾಗಿಯೇ, ಹಿರಿಯ ಯಾ ಶುಶ್ರೂಷಾ ಸೇವಕನೊಬ್ಬನು “ತನ್ನ ಮನೆಯನ್ನು ಚೆನ್ನಾಗಿ ಆಳುವವನಾಗಿರಬೇಕು” ಎಂದು ಬೈಬಲ್ ತೋರಿಸುತ್ತದೆ. ಈ ಸ್ಥಾನಗಳಲ್ಲಿ ಸೇವೆ ಸಲ್ಲಿಸುವ ಪುರುಷರು ಆದರ್ಶಪ್ರಾಯ ಕುಟುಂಬ ತಲೆಗಳಾಗಿರತಕ್ಕದ್ದು. ಸಭೆಯ ಜವಾಬ್ದಾರಿಕೆಯ ಒಂದು ಭಾರವಾದ ಹೊರೆಯನ್ನು ಅವರು ಹೊರುತ್ತಿರಬಹುದಾದರೂ, ಅವರ ಸ್ವಂತ ಕುಟುಂಬಕ್ಕೆ ಅವರು ಆದ್ಯತೆಯನ್ನು ಕೊಡತಕ್ಕದ್ದು. ಯಾಕೆ ಎಂದು ಪೌಲನು ತೋರಿಸಿದನು: “ಸ್ವಂತ ಮನೆಯವರನ್ನು ಆಳುವದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಮರಿಸುವನು?”—1 ತಿಮೊಥೆಯ 3:4, 5, 12.
ಬೆಂಬಲಿಸುವ ಕ್ರೈಸ್ತ ಪತ್ನಿಯರು
12. ಕ್ರೈಸ್ತ ಏರ್ಪಾಡಿನಲ್ಲಿ ಹೆಂಡತಿಯು ಯಾವ ಪಾತ್ರವನ್ನು ಆಡುತ್ತಾಳೆ?
12 ನೀವೊಬ್ಬ ಕ್ರೈಸ್ತ ಪತ್ನಿಯಾಗಿದ್ದೀರೋ? ಹಾಗಿದ್ದಲ್ಲಿ, ನಿಮಗೆ ಕೂಡ ಕುಟುಂಬದೇರ್ಪಾಡಿನಲ್ಲಿ ಒಂದು ಪ್ರಮುಖ ಪಾತ್ರವನ್ನು ಆಡಲಿದೆ. ಕ್ರೈಸ್ತ ಪತ್ನಿಯರಿಗೆ ಅವರು “ಗಂಡಂದಿರನ್ನೂ ಮಕ್ಕಳನ್ನೂ ಪ್ರೀತಿಸುವವರೂ ದಮೆಯುಳ್ಳವರೂ ಪತಿವ್ರತೆಯರೂ ಮನೆಯಲ್ಲೇ ಕೆಲಸಮಾಡುವವರೂ ಸುಶೀಲೆಯರೂ . . . ಗಂಡಂದಿರಿಗೆ ಅಧೀನರೂ ಆಗಿರಬೇಕು” ಎಂದು ಪ್ರಬೋಧಿಸಿದೆ. (ತೀತ 2:4, 5) ಹೀಗೆ, ನಿಮ್ಮ ಕುಟುಂಬಕ್ಕೆ ಒಂದು ಶುಭ್ರವಾದ ಮತ್ತು ಆಹ್ಲಾದಕರವಾದ ಮನೆಯನ್ನು ಕಾಪಾಡಿಕೊಳ್ಳುವದರಲ್ಲಿ ಒಬ್ಬ ಆದರ್ಶಪ್ರಾಯ ಗೃಹಪತ್ನಿಯಾಗಿರುವದಕ್ಕೆ ನೀವು ಶ್ರಮಿಸಬೇಕು. ಗೃಹಕೃತ್ಯಗಳು ಕೆಲವೊಮ್ಮೆ ಬೇಸರಗೊಳಿಸುವದಾಗಿರಬಹುದು, ಆದರೂ ಅದು ಅರ್ಥಹೀನ ಯಾ ಕ್ಷುಲ್ಲಕವಾಗಿರುವದಿಲ್ಲ. ಪತ್ನಿಯೋಪಾದಿ, ನೀವು “ಮನೆಯ ಯಜಮಾನಿತಿ”ಯಾಗಿರುತ್ತೀರಿ ಮತ್ತು ಈ ವಿಷಯದಲ್ಲಿ ಗಮನಾರ್ಹ ರೀತಿಯ ಮನೋವೈಶಾಲ್ಯದಲ್ಲಿ ಆನಂದಿಸಬಹುದು. (1 ತಿಮೊಥೆಯ 5:14) “ಗುಣವತಿಯಾದ ಪತ್ನಿಯು” ಉದಾಹರಣೆಗೆ, ಮನೆಗೆ ಬೇಕಾದ ಒದಗಿಸುವಿಕೆಗಳನ್ನು ಖರೀದಿಸಿದಳು, ಆಸ್ತಿವಹಿವಾಟುಗಳನ್ನು ಮಾಡಿದಳು, ಮತ್ತು ಸಣ್ಣ ವ್ಯಾಪಾರವನ್ನು ನಿರ್ವಹಿಸುವುದರಿಂದ ಆದಾಯವನ್ನೂ ಕೂಡ ಉತ್ಪಾದಿಸಿದಳು. ಅವಳ ಗಂಡನ ಹೊಗಳಿಕೆಯನ್ನು ಅವಳು ಸಂಪಾದಿಸಿದರ್ದಲ್ಲೇನೂ ಆಶ್ಚರ್ಯವಿಲ್ಲ! (ಜ್ಞಾನೋಕ್ತಿ, ಅಧ್ಯಾಯ 31) ಸಹಜವಾಗಿಯೇ, ಅವಳ ತಲೆಯೋಪಾದಿ ತನ್ನ ಗಂಡನು ಕೊಟ್ಟ ಮಾರ್ಗದರ್ಶಿಕೆಗಳೊಳಗೆ ಅಂತಹ ಮೊದಲ ಹೆಜ್ಜೆಗಳನ್ನು ತಕ್ಕೊಳ್ಳಲಾಯಿತು.
13. (ಎ) ಕೆಲವು ಸ್ತ್ರೀಯರಿಗೆ ಅಧೀನತೆಯು ಯಾಕೆ ಕಷ್ಟಕರವಾಗಿರಬಹುದು? (ಬಿ) ತಮ್ಮ ಗಂಡಂದಿರಿಗೆ ಕ್ರೈಸ್ತ ಸ್ತ್ರೀಯರು ಅಧೀನರಾಗುವುದು ಯಾಕೆ ಪ್ರಯೋಜನಕಾರಿಯಾಗಿದೆ?
13 ಆದಾಗ್ಯೂ, ನಿಮ್ಮ ಗಂಡಂದಿರಿಗೆ ಸ್ವತಃ ಅಧೀನರಾಗಿರುವುದು ಯಾವಾಗಲೂ ಸುಲಭವಾಗಿರಲಿಕ್ಕಿಲ್ಲ. ಎಲ್ಲಾ ಪುರುಷರು ಗೌರವವನ್ನು ಪಡೆಯುವುದಿಲ್ಲ. ಮತ್ತು ಹಣಕಾಸಿನ, ಯೋಜನೆಗಳ, ಯಾ ಸಂಸ್ಥಾಪಿಸುವುದರ ಕುರಿತು ನೀವು ಒಳ್ಳೆಯ ಸಾಮರ್ಥ್ಯವುಳ್ಳವರಾಗಿರಬಹುದು. ನಿಮಗೊಂದು ಐಹಿಕ ಕೆಲಸವಿರಬಹುದು ಮತ್ತು ಕುಟುಂಬದ ಆದಾಯಕ್ಕೆ ಬಹುಮಟ್ಟಿನ ಕೊಡುಗೆಯೊಂದನ್ನು ಮಾಡುತ್ತಿರಬಹುದು. ಯಾ ಗತಿಸಿರುವಂತಹ ಸಮಯಗಳಲ್ಲಿ ನೀವು ಪುರುಷ ದಬ್ಬಾಳಿಕೆಯ ಕೆಳಗೆ ಕೆಲವೊಂದು ರೀತಿಯಲ್ಲಿ ಬಾಧಿತರಾಗಿರಬಹುದು ಮತ್ತು ಪುರುಷನೊಬ್ಬನಿಗೆ ಅಧೀನಪಡಿಸಿಕೊಳ್ಳುವದು ಕಷ್ಟಕರವಾಗಿ ಕಂಡುಬರಬಹುದು. ಆದಾಗ್ಯೂ, ನಿಮ್ಮ ಗಂಡನಿಗೆ “ಆಳವಾದ ಗೌರವ” ಯಾ “ಭಯ”ವನ್ನು ತೋರಿಸುವುದು ದೇವರ ಶಿರಸ್ಸುತನಕ್ಕೆ ನಿಮಗಿರುವ ಗೌರವವನ್ನು ಪ್ರದರ್ಶಿಸುತ್ತದೆ. (ಎಫೆಸ 5:33, ಕಿಂಗ್ಡಮ್ ಇಂಟರ್ಲಿನಿಯರ್; 1 ಕೊರಿಂಥ 11:3) ನಿಮ್ಮ ಕುಟುಂಬದ ಯಶಸ್ವಿಗೆ ಅಧೀನತೆಯು ನಿಷ್ಕರ್ಷಕವಾಗಿದೆ; ನಿಮ್ಮ ಮದುವೆಯನ್ನು ಅನಾವಶ್ಯಕವಾದ ಒತ್ತಡಗಳಿಗೆ ಮತ್ತು ಬಿಗುಪುಗಳಿಗೆ ಒಳಪಡಿಸುವುದನ್ನು ಹೋಗಲಾಡಿಸಲು ಅದು ನಿಮಗೆ ನೆರವಾಗುತ್ತದೆ.
14. ತನ್ನ ಗಂಡನಿಂದ ಮಾಡಲ್ಪಟ್ಟ ನಿರ್ಣಯವೊಂದರ ಬಗ್ಗೆ ಹೆಂಡತಿಯು ಅಸಮ್ಮತಿಸುವುದಾದಲ್ಲಿ, ಅವಳು ಏನು ಮಾಡಬಹುದು?
14 ಆದರೂ, ನಿಮ್ಮ ಕುಟುಂಬದ ಅತ್ಯುತ್ತಮ ಹಿತಾಸಕ್ತಿಗಳ ವಿರುದ್ಧ ನಿಮ್ಮ ಗಂಡನ ನಿರ್ಣಯವು ಕಾರ್ಯವೆಸಗುತ್ತದೆ ಎಂದು ನೀವೇಣಿಸುವಲ್ಲಿ, ನೀವು ಸುಮ್ಮನಿರಬೇಕು ಎಂದು ಇದರರ್ಥವೋ? ಹಾಗೆ ಇರುವ ಜರೂರಿಯೇನೂ ಇಲ್ಲ. ತನ್ನ ಮಗ, ಇಸಾಕನ ಶ್ರೇಯೋಭಿವೃದ್ಧಿಗೆ ಬೆದರಿಕೆಯೊಂದನ್ನು ಅರಿತಾಗ, ಅಬ್ರಹಾಮನ ಹೆಂಡತಿಯಾದ ಸಾರಳು ಸುಮ್ಮನೆ ಇರಲಿಲ್ಲ. (ಆದಿಕಾಂಡ 21:8-10) ತದ್ರೀತಿಯಲ್ಲಿ, ಕೆಲವೊಂದು ಸಂದರ್ಭಗಳಲ್ಲಿ ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವ ಒಂದು ಹಂಗಿನ ಭಾವನೆ ನಿಮ್ಮಲ್ಲಿರಬಹುದು. ಅದನ್ನು “ಯೋಗ್ಯ ಸಮಯದಲ್ಲಿ” ಗೌರವಾರ್ಹವಾದ ರೀತಿಯಲ್ಲಿ ಮಾಡಿರುವುದಾದರೆ, ದೇವಭಕ್ತಿಯ ಕ್ರೈಸ್ತ ಪುರುಷನು ಆಲಿಸುವನು. (ಜ್ಞಾನೋಕ್ತಿ 25:11) ಆದರೆ ನಿಮ್ಮ ಸಲಹೆಯನ್ನು ಪರಿಪಾಲಿಸದಿದ್ದಲ್ಲಿ, ಮತ್ತು ಬೈಬಲ್ ಸೂತ್ರವೊಂದರ ಗಂಭೀರವಾದ ಉಲ್ಲಂಘನೆ ಇಲ್ಲದಿರುವಲ್ಲಿ, ನಿಮ್ಮ ಗಂಡನ ಇಚ್ಛೆಗಳಿಗೆ ವಿರುದ್ಧವಾಗಿ ಹೋಗುವುದು ಸ್ವ-ಪರಾಜಯವಲ್ಲವೇ? ನೆನಪಿನಲ್ಲಿಡಿರಿ, “ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು; ಜ್ಞಾನಹೀನಳು ಅದನ್ನು ಸ್ವಂತ ಕೈಯಿಂದ ಮುರಿದುಬಿಡುವಳು.” (ಜ್ಞಾನೋಕ್ತಿ 14:1) ನಿಮ್ಮ ಮನೆಯನ್ನು ಕಟ್ಟುವ ಒಂದು ಮಾರ್ಗವು, ನಿಮ್ಮ ಗಂಡನ ಶಿರಸ್ಸುತನಕ್ಕೆ ಬೆಂಬಲಿಸುವವರಾಗಿದ್ದು, ಅವನ ಸಾಧನೆಗಳಿಗಾಗಿ ಹೊಗಳುವಾಗ, ಅವನ ತಪ್ಪುಗಳಿಂದ ಕ್ಷೋಭೆಗೊಳ್ಳದೆ ಶಾಂತತೆಯಿಂದ ನಿಭಾಯಿಸುತ್ತಿರುವವರಾಗಬೇಕು.
15. ಅವಳ ಮಕ್ಕಳ ಶಿಸ್ತು ಮತ್ತು ತರಬೇತಿಗೊಳಿಸುವಿಕೆಯಲ್ಲಿ ಹೆಂಡತಿಯು ಹೇಗೆ ಪಾಲಿಗಳಾಗಸಾಧ್ಯವಿದೆ?
15 ನಿಮ್ಮ ಮನೆಯನ್ನು ಕಟ್ಟುವ ಇನ್ನೊಂದು ರೀತಿಯು, ನಿಮ್ಮ ಮಕ್ಕಳನ್ನು ಶಿಸ್ತು ಮತ್ತು ತರಬೇತಿಗೊಳಿಸುವುದರಲ್ಲಿ ಪಾಲಿಗರಾಗುವುದರಿಂದ. ಉದಾಹರಣೆಗೆ, ಕುಟುಂಬದ ಬೈಬಲ್ ಅಧ್ಯಯನವನ್ನು ಕ್ರಮವಾಗಿಯೂ, ಬಲವರ್ಧಕವಾಗಿಯೂ ಇಡುವುದರಲ್ಲಿ ನಿಮ್ಮ ಭಾಗವನ್ನು ನೀವು ಮಾಡಸಾಧ್ಯವಿದೆ. ಪ್ರತಿಯೊಂದು ಸಂದರ್ಭದಲ್ಲಿಯೂ—ಅವರೊಂದಿಗೆ ಪ್ರಯಾಣಿಸುತ್ತಿರುವಾಗ ಯಾ ಕೇವಲ ಖರೀದಿಸುತ್ತಿರುವಾಗ, ನಿಮ್ಮ ಮಕ್ಕಳೊಂದಿಗೆ ದೇವರ ಸತ್ಯತೆಗಳಲ್ಲಿ ಪಾಲಿಗರಾಗುವದರಲ್ಲಿ “ಕೈದೆಗೆಯಬೇಡ.” (ಪ್ರಸಂಗಿ 11:6) ಕೂಟಗಳಿಗಾಗಿ ಅವರ ಹೇಳಿಕೆಗಳನ್ನು ಮತ್ತು ದೇವ ಪ್ರಭುತ್ವ ಶುಶ್ರೂಷಾ ಶಾಲೆಯ ಭಾಗಗಳನ್ನು ತಯಾರಿಸಲು ಅವರಿಗೆ ಸಹಾಯಮಾಡಿರಿ. ಅವರ ಸಹವಾಸಗಳ ಮೇಲೆ ಕಣ್ಣಿಡಿರಿ. (1 ಕೊರಿಂಥ 15:33) ದೈವಿಕ ಮಟ್ಟಗಳ ಮತ್ತು ಶಿಸ್ತುಗೊಳಿಸುವ ವಿಷಯಗಳಿಗೆ ಬರುವಾಗ, ನೀವು ಮತ್ತು ನಿಮ್ಮ ಗಂಡನು ಐಕ್ಯತೆಯಲಿದ್ಲೀರ್ದಿ ಎಂದು ನಿಮ್ಮ ಮಕ್ಕಳು ತಿಳಿದಿರಲಿ. ನಿಮ್ಮ ಮತ್ತು ನಿಮ್ಮ ಗಂಡನ ನಡುವೆ ತಿಕ್ಕಾಟವಾಗುವಂತೆ ಮಾಡಿ, ಮಕ್ಕಳಿಗೆ ಏನು ಬೇಕೊ ಅದನ್ನು ಪಡೆಯಲು ಅವರಿಗೆ ಅವಕಾಶಕೊಡಬೇಡಿರಿ.
16. (ಎ) ಏಕ ಹೆತ್ತವರಿಗೆ ಮತ್ತು ಅವಿಶ್ವಾಸಿಯರೊಂದಿಗೆ ಮದುವೆಯಾದವರಿಗೆ ಬೈಬಲಿನ ಯಾವ ಉದಾಹರಣೆಯು ಪ್ರೋತ್ಸಾಹಕರವಾಗಿದೆ? (ಬಿ) ಅಂಥವರಿಗೆ ಸಭೆಯಲ್ಲಿರುವ ಇತರರು ಹೇಗೆ ನೆರವಾಗಬಲ್ಲರು?
16 ನೀವು ಏಕ ಹೆತ್ತವರಾಗಿರುವುದಾದರೆ ಯಾ ಅವಿಶ್ವಾಸಿ ಸಂಗಾತಿಯಿರುವುದಾದರೆ, ಆತ್ಮಿಕ ವಿಷಯಗಳಲ್ಲಿ ನಾಯಕತ್ವವನ್ನು ನೀವು ಭೇಷಕ್ ತಕ್ಕೊಳ್ಳಲಿಕ್ಕಿರಬಹುದು. ಇದು ಕಷ್ಟವಾಗಿರಬಹುದು ಮತ್ತು ಕೆಲವೊಮ್ಮೆ ಎದೆಗುಂದಿಸಲೂಬಹುದು. ಆದರೆ ಬಿಟ್ಟುಕೊಡಬೇಡಿರಿ. ತಿಮೊಥೆಯನ ತಾಯಿ, ಯೂನೀಕೆಯು ಒಬ್ಬ ಅವಿಶ್ವಾಸಿಯೊಂದಿಗೆ ವಿವಾಹವಾಗಿದ್ದರೂ, “ಚಿಕ್ಕಂದಿನಿಂದಲೂ” ಪವಿತ್ರ ಶಾಸ್ತ್ರಗ್ರಂಥವನ್ನು ಅವನಿಗೆ ಕಲಿಸುವುದರಲ್ಲಿ ಯಶಸ್ವೀಯಾದಳು. (2 ತಿಮೊಥೆಯ 1:5; 3:15) ಮತ್ತು ತದ್ರೀತಿಯ ಯಶಸ್ಸಿನಲ್ಲಿ ಆನಂದಿಸುವ ಅನೇಕರು ನಮ್ಮ ನಡುವೆ ಇದ್ದಾರೆ. ಈ ವಿಷಯದಲ್ಲಿ ನಿಮಗೇನಾದರೂ ನೆರವು ಬೇಕಾಗಿರುವಲ್ಲಿ, ಹಿರಿಯರಿಗೆ ನಿಮ್ಮ ಆವಶ್ಯಕತೆಗಳನ್ನು ತಿಳಿಯುವಂತೆ ಮಾಡಿರಿ. ಕೂಟಗಳಿಗೆ ಮತ್ತು ಕ್ಷೇತ್ರ ಸೇವೆಗೆ ಯಾರಾದರೊಬ್ಬರು ನಿಮಗೆ ಸಹಾಯ ಮಾಡುವಂತೆ ಅವರೇನಾದರೂ ಏರ್ಪಡಿಸಲು ಶಕ್ತರಾಗಬಹುದು. ಮನೋರಂಜನೆಯ ವಿಹಾರಗಳಲ್ಲಿ ಯಾ ಒಟ್ಟುಗೂಡುವಿಕೆಗಳಲ್ಲಿ ನಿಮ್ಮ ಕುಟುಂಬವನ್ನು ಸೇರಿಸಿಕೊಳ್ಳುವಂತೆ ಇತರರನ್ನು ಅವರು ಪ್ರೋತ್ಸಾಹಿಸಬಹುದು. ಯಾ ಒಂದು ಕುಟುಂಬ ಅಭ್ಯಾಸವು ಆರಂಭಿಸಲ್ಪಡುವಂತೆ ನಿಮಗೆ ಸಹಾಯ ಮಾಡಲು ಒಬ್ಬ ಅನುಭವೀ ಪ್ರಚಾರಕನೊಂದಿಗೆ ಅವರು ಏರ್ಪಡಿಸಬಹುದು.
ಗಣ್ಯಮಾಡುವ ಮಕ್ಕಳು
17. (ಎ) ಕುಟುಂಬದ ಒಳಿತಿಗೆ ಯುವಕರು ಹೇಗೆ ನೆರವಾಗಬಲ್ಲರು? (ಬಿ) ಈ ವಿಷಯದಲ್ಲಿ ಯೇಸು ಯಾವ ಮಾದರಿಯನ್ನು ಇಟ್ಟನು?
17 ಎಫೆಸ 6:1-3 ರಲ್ಲಿರುವ ಬುದ್ಧಿವಾದವನ್ನು ಅನುಸರಿಸುವ ಮೂಲಕ ಕ್ರೈಸ್ತ ಯುವಕರು ಕುಟುಂಬದ ಒಳಿತಿಗೆ ನೆರವನ್ನೀಯಬಲ್ಲರು: “ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು; ಇದು ಧರ್ಮ. ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ—ನಿನ್ನ ತಂದೆತಾಯಿಗಳನ್ನೂ ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.” ನಿಮ್ಮ ಹೆತ್ತವರೊಂದಿಗೆ ಸಹಕರಿಸುವುದರ ಮೂಲಕ, ಯೆಹೋವನೆಡೆಗಿನ ನಿಮ್ಮ ಗೌರವವನ್ನು ನೀವು ಪ್ರದರ್ಶಿಸುತ್ತೀರಿ. ಯೇಸು ಕ್ರಿಸ್ತನು ಪರಿಪೂರ್ಣನಾಗಿದ್ದನು ಮತ್ತು ತನ್ನ ಅಪರಿಪೂರ್ಣ ಹೆತ್ತವರಿಗೆ ಅಧೀನನಾಗುವುದು ತನ್ನ ಮರ್ಯಾದೆಗೆ ಕಡಮೆಯೆಂದು ಅವನು ಸುಲಭವಾಗಿ ತರ್ಕಿಸಬಹುದಿತ್ತು. ಆದರೂ, “ಆತನು . . . ಅವರಿಗೆ ಅಧೀನನಾಗಿದ್ದನು. . . . ಯೇಸು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು; ಇದಲ್ಲದೆ ದೇವರ ಮತ್ತು ಮನುಷ್ಯರ ದಯೆಯು ಆತನ ಮೇಲೆ ಹೆಚ್ಚಾಗುತ್ತಾ ಬಂತು.”—ಲೂಕ 2:51, 52.
18, 19. (ಎ) ಒಬ್ಬನ ಹೆತ್ತವರನ್ನು ಸನ್ಮಾನಿಸುವುದು ಎಂಬದರ ಅರ್ಥವೇನು? (ಬಿ) ಮನೆಯು ಹೇಗೆ ಒಂದು ದಣಿವಾರಿಕೆಯ ಸ್ಥಳವಾಗಬಲ್ಲದು?
18 ತದ್ರೀತಿಯಲ್ಲಿ ನಿಮ್ಮ ಹೆತ್ತವರನ್ನು ನೀವು ಸನ್ಮಾನಿಸಬೇಕೋ? ಇಲ್ಲಿ “ಸನ್ಮಾನಿಸು” ಅಂದರೆ ಯಥೋಕ್ತವಾಗಿ ಕಾನೂನುಬದ್ಧ ಅಧಿಕಾರವನ್ನು ಅಂಗೀಕರಿಸುವುದು ಎಂದರ್ಥವಾಗಿದೆ. (ಹೋಲಿಸಿರಿ 1 ಪೇತ್ರ 2:17.) ಅನೇಕ ಸನ್ನಿವೇಶಗಳಲ್ಲಿ, ಒಬ್ಬನ ಹೆತ್ತವರು ಅವಿಶ್ವಾಸಿಗಳಾಗಿದ್ದರೂ, ಯಾ ಒಳ್ಳೆಯ ಮಾದರಿಯನ್ನು ಇಡದಿದ್ದರೂ ಅಂಥ ಸನ್ಮಾನವು ಸಲ್ಲಿಸಲ್ಪಡಬೇಕು. ಅವರು ಆದರ್ಶಪ್ರಾಯ ಕ್ರೈಸ್ತರಾಗಿರುವುದಾದರೆ ನಿಮ್ಮ ಹೆತ್ತವರನ್ನು ನೀವು ಅಧಿಕವಾಗಿ ಸನ್ಮಾನಿಸತಕ್ಕದ್ದು. ಇದನ್ನೂ ನೆನಪಿನಲ್ಲಿಡಿರಿ, ನಿಮ್ಮ ಹೆತ್ತವರು ನೀಡುವ ಶಿಸ್ತು ಮತ್ತು ಮಾರ್ಗದರ್ಶನೆಯು ಅನುಚಿತವಾಗಿ ನಿಮ್ಮನ್ನು ನಿರ್ಬಂಧಿಸುವ ಉದ್ದೇಶದಿಂದಲ್ಲ. ಬದಲಾಗಿ, ನೀವು “ಜೀವಿಸುತ್ತಾ ಮುಂದರಿಯುವಂತೆ” ನಿಮ್ಮನ್ನು ಸಂರಕ್ಷಿಸಲು ಅವುಗಳು ಇರುತ್ತವೆ.—ಜ್ಞಾನೋಕ್ತಿ 7:1, 2, NW.
19 ಹಾಗಿರುವಲ್ಲಿ, ಕುಟುಂಬವು ಎಂತಹ ಒಂದು ಪ್ರೀತಿಯ ಏರ್ಪಾಡಾಗಿದೆ! ಗಂಡಂದಿರು, ಹೆಂಡತಿಯರು, ಮತ್ತು ಮಕ್ಕಳು ಎಲ್ಲರೂ ಕುಟುಂಬ ಜೀವನದಲ್ಲಿ ದೇವರ ನಿಯಮಗಳನ್ನು ಪರಿಪಾಲಿಸುವುದಾದರೆ, ಮನೆಯು ಒಂದು ವಿಶ್ರಾಂತಿ ಸ್ಥಾನ, ಒಂದು ದಣಿವಾರಿಕೆಯ ಸ್ಥಳವಾಗುತ್ತದೆ. ಆದಾಗ್ಯೂ, ಸಂಸರ್ಗ ಮತ್ತು ಮಕ್ಕಳ ತರಬೇತಿಗಳನ್ನೊಳಗೊಂಡ ಸಮಸ್ಯೆಗಳು ಎದ್ದೇಳಬಹುದು. ನಮ್ಮ ಮುಂದಿನ ಲೇಖನವು ಈ ಸಮಸ್ಯೆಗಳಲ್ಲಿ ಕೆಲವನ್ನು ಹೇಗೆ ಪರಿಹರಿಸಬಹುದು ಎಂದು ಚರ್ಚಿಸುತ್ತದೆ.
ನಿಮಗೆ ನೆನಪಿದೆಯೇ?
▫ ಬೈಬಲ್ ಕಾಲಗಳಲ್ಲಿ ದೇವ-ಭೀರು ಗಂಡಂದಿರು, ಹೆಂಡತಿಯರು, ಮತ್ತು ಮಕ್ಕಳು ಯಾವ ನಮೂನೆಯನ್ನು ಇಟ್ಟರು?
▫ ಗಂಡಂದಿರ ಪಾತ್ರದ ಮೇಲೆ ಕ್ರೈಸ್ತತ್ವವು ಯಾವ ಬೆಳಕನ್ನು ಚೆಲಿತ್ಲು?
▫ ಕ್ರೈಸ್ತ ಕುಟುಂಬದಲ್ಲಿ ಹೆಂಡತಿಯು ಯಾವ ಪಾತ್ರವನ್ನು ಆಡಬೇಕು?
▫ ಕುಟುಂಬದ ಒಳಿತಿಗೆ ಕ್ರೈಸ್ತ ಯುವಕರು ಹೇಗೆ ನೆರವಾಗಬಲ್ಲರು?
[ಪುಟ 9 ರಲ್ಲಿರುವ ಚಿತ್ರ]
“ಆ ಕಾಲದ ಲಂಪಟತನದ ನೈತಿಕತೆಗಳಿಗೆ ಹೋಲಿಸುವಾಗ, ಕ್ರೈಸ್ತತ್ವದಲ್ಲಿ ವಿವಾಹದ ಕ್ರೈಸ್ತ ನೋಟಕ್ಕಿಂತ ಹೆಚ್ಚು ನವೀನತೆಯದ್ದೂ, ಹೆಚ್ಚು ಕಠಿಣವೂ ಆಗಿ ತೋರಿಬಂದದ್ದು ಇನ್ನಾವುದೂ ಇಲ್ಲ. . . . [ಅದು] ಮಾನವಕುಲಕ್ಕೆ ಒಂದು ಹೊಸ ಯುಗವನ್ನು ತೆರೆಯಿತು.”
[ಪುಟ 10 ರಲ್ಲಿರುವ ಚಿತ್ರ]
ಆ ಭಾವನೆಗಳನ್ನು ಗಮನದಲ್ಲಿರಿಸಿಕೊಂಡು, ತಮ್ಮ ಹೆಂಡತಿಯರು ಅವರ ಭಾವನೆಗಳನ್ನು ವ್ಯಕ್ತ ಪಡಿಸಲು ಕ್ರೈಸ್ತ ಗಂಡಂದಿರು ಉತ್ತೇಜನಕೊಡುತ್ತಾರೆ