ಮಾತುಕತೆ ಮತ್ತು ನಡತೆಯಲ್ಲಿ ಒಂದು ಮಾದರಿಯಾಗಿರ್ರಿ
1 ಅಪೊಸ್ತಲ ಪೌಲನು ತಿಮೊಥೆಯನಿಗೆ, ಮಾತುಕತೆ ಮತ್ತು ನಡತೆಯಲ್ಲಿ ಒಂದು ಮಾದರಿಯಾಗಲು ಬುದ್ಧಿಹೇಳಿದನು. (1 ತಿಮೊ. 4:12) ನಾವು ಸಹ ಆದರ್ಶಪ್ರಾಯವಾದ ನಡೆನುಡಿಯನ್ನು, ವಿಶೇಷವಾಗಿ ಶುಶ್ರೂಷೆಯಲ್ಲಿ ಒಳಗೂಡಿರುವಾಗ ಪ್ರದರ್ಶಿಸಬೇಕು, ಯಾಕಂದರೆ ಹಾಗೆ ಮಾಡುವುದು ನಾವು ಸಂಧಿಸುವವರ ಹೃದಯವನ್ನು ತಲಪುವೆವೊ ಇಲ್ಲವೊ ಎಂಬ ವಿಷಯವನ್ನು ನಿರ್ಧರಿಸಬಹುದು.
2 ಸೌಜನ್ಯ, ವಿಚಾರಶೀಲತೆ, ದಯೆ, ಸೌಮ್ಯಭಾವ, ಮತ್ತು ಜಾಣ್ಮೆಯನ್ನು ಒಳಗೂಡಿಸಿ, ಶಿಷ್ಟಾಚಾರಗಳ ಎಲ್ಲಾ ಅಂಶಗಳನ್ನು ನಾವು ಪ್ರದರ್ಶಿಸುವ ಅಗತ್ಯವಿದೆ. ಈ ಗುಣಗಳನ್ನು ಪ್ರತಿಬಿಂಬಿಸುವ ಮೂಲಕ, ನಮ್ಮ ಕ್ರಿಯೆಗಳು ಇತರರ ಭಾವನೆಗಳನ್ನು ಹೇಗೆ ಬಾಧಿಸುತ್ತವೆ ಎಂಬುದರ ಕುರಿತಾಗಿ ನಾವು ಅರಿವುಳ್ಳವರಾಗಿದ್ದೇವೆಂದು ನಾವು ತೋರಿಸುತ್ತೇವೆ. ಶುಶ್ರೂಷೆಯಲ್ಲಿನ ಶಿಷ್ಟಾಚಾರಗಳು, ಆಹಾರದ ರುಚಿಯನ್ನು ಹೆಚ್ಚಿಸಲು ಉಪಯೋಗಿಸಲ್ಪಡುವ ಸಾಂಬಾರ ಜಿನಸಿಗಳಿಗೆ ಹೋಲಿಸಲ್ಪಡಬಹುದು. ಅವುಗಳಿಲ್ಲದೆ, ಹಿತಕರವಾದ ಆಹಾರವು ನೀರಸವೂ ಹಸಿವುಕುಂದುಕವೂ ಆಗಿರಸಾಧ್ಯವಿದೆ. ಇತರರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ಶಿಷ್ಟಾಚಾರಗಳನ್ನು ಪ್ರದರ್ಶಿಸಲು ತಪ್ಪುವುದು ತದ್ರೀತಿಯ ಒಂದು ಪರಿಣಾಮವನ್ನು ಹೊಂದಿರಬಲ್ಲದು.—ಕೊಲೊ. 4:6.
3 ಮಾತುಕತೆಯಲ್ಲಿ ಒಂದು ಮಾದರಿಯಾಗಿರ್ರಿ: ಒಂದು ಸ್ನೇಹಮಯ ನಸುನಗು ಮತ್ತು ಹೃದಯೋಲ್ಲಾಸದ ವಂದನೆಯು, ಸುವಾರ್ತೆಯ ನಮ್ಮ ಪ್ರಸ್ತುತಪಡಿಸುವಿಕೆಯ ಅತ್ಯಾವಶ್ಯಕವಾದ ಮೂಲಾಂಶಗಳಾಗಿವೆ. ನಮ್ಮ ಪೀಠಿಕೆಗೆ ನಾವು ಹೃದಯೋಲ್ಲಾಸ ಮತ್ತು ಪ್ರಾಮಾಣಿಕತೆಯೊಂದಿಗೆ ವಿಶಿಷ್ಟಗೊಳಿಸುವಾಗ, ನಾವು ಅವನಲ್ಲಿ ಯಥಾರ್ಥವಾಗಿ ಆಸಕ್ತರಾಗಿದ್ದೇವೆಂದು ನಾವು ಮನೆಯವನಿಗೆ ತಿಳಿಯಪಡಿಸುತ್ತೇವೆ. ಅವನು ಮಾತಾಡುವಾಗ, ಜಾಗರೂಕತೆಯಿಂದ ಕಿವಿಗೊಟ್ಟು, ಅವನ ಅಭಿಪ್ರಾಯಕ್ಕೆ ತಕ್ಕದ್ದಾದ ಗೌರವವನ್ನು ತೋರಿಸಿರಿ. ನೀವು ಮಾತಾಡುವಾಗ, ಜಾಣ್ಮೆ ಮತ್ತು ವಿನಯಶೀಲತೆಯೊಂದಿಗೆ ಹಾಗೆ ಮಾಡಿರಿ.—ಅ. ಕೃತ್ಯಗಳು 6:8 ನ್ನು ಹೋಲಿಸಿರಿ.
4 ಆಗಿಂದಾಗ್ಗೆ, ಸ್ನೇಹಪರನಲ್ಲದ, ಜಗಳಗಂಟನೂ ಆಗಿರಬಹುದಾದ ಒಬ್ಬ ವ್ಯಕ್ತಿಯನ್ನು ನಾವು ಸಂಧಿಸುತ್ತೇವೆ. ನಾವು ಹೇಗೆ ಪ್ರತಿಕ್ರಿಯಿಸತಕ್ಕದ್ದು? ‘ಸಾತ್ವಿಕತೆಯನ್ನೂ ಮನೋಭೀತಿಯನ್ನೂ’ ಪ್ರದರ್ಶಿಸುವ ಒಂದು ವಿಧದಲ್ಲಿ ಮಾತಾಡುವಂತೆ ಪೇತ್ರನು ನಮ್ಮನ್ನು ಉತ್ತೇಜಿಸಿದನು. (1 ಪೇತ್ರ 3:15; ರೋಮಾ. 12:17, 18) ಒಬ್ಬ ಮನೆಯವನು ರಾಜ್ಯದ ಸಂದೇಶವನ್ನು ಒರಟುತನದಿಂದ ತಿರಸ್ಕರಿಸುವಲ್ಲಿ, ನಾವು ಬರಿ ‘ನಮ್ಮ ಕಾಲಿಗೆ ಹತ್ತಿದ ಧೂಳನ್ನು ಝಾಡಿಸಿಬಿಡ’ಬೇಕೆಂದು ಯೇಸು ಹೇಳಿದನು. (ಮತ್ತಾ. 10:14) ಅಂತಹ ಪರಿಸ್ಥಿತಿಗಳ ಕೆಳಗೆ ನಾವು ಆದರ್ಶಪ್ರಾಯವಾದ ಶಿಷ್ಟಾಚಾರಗಳನ್ನು ತೋರಿಸುವುದು, ಕಟ್ಟಕಡೆಗೆ ವಿರೋಧಿಯ ಹೃದಯವನ್ನು ಮೃದುಗೊಳಿಸಬಹುದು.
5 ನಡತೆಯಲ್ಲಿ ಒಂದು ಮಾದರಿಯಾಗಿರ್ರಿ: ಸುವಾರ್ತೆಯನ್ನು ಜನನಿಬಿಡವಾದ ಬೀದಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾರುವುದು, ನಾವು ವಿಚಾರಶೀಲರು ಆಗಿರುವಂತೆ, ಎಂದೂ ಗಟ್ಟಿಯಾಗಿ ಮಾತಾಡುವವರು ಅಥವಾ ಒತ್ತಾಯಮಾಡುವವರು ಆಗಿರದಂತೆ, ಮತ್ತು ಹಾದುಹೋಗುವವರ ಸರಾಗ ಚಲನೆಯನ್ನು ನಾವು ಅಡ್ಡೈಸದಿರುವುದನ್ನು ಅವಶ್ಯಪಡಿಸುತ್ತದೆ. ಆಸಕ್ತ ವ್ಯಕ್ತಿಗಳ ಮನೆಗಳಲ್ಲಿರುವಾಗ, ಅವರ ಅತಿಥಿಸತ್ಕಾರಕ್ಕೆ ಗಣ್ಯತೆ ತೋರಿಸುತ್ತಾ, ನಾವು ಯೋಗ್ಯವಾದ ಸಭ್ಯಾಚಾರವನ್ನು ಕಾಪಾಡಿಕೊಂಡು, ನಮ್ಮನ್ನು ಕೃಪಾಳು ಅತಿಥಿಗಳಾಗಿ ನಡಿಸಿಕೊಳ್ಳಬೇಕು. ನಮ್ಮ ಜೊತೆಗೆ ಮಕ್ಕಳಿರುವಲ್ಲಿ ಅವರು, ಮನೆಯವನು ಮತ್ತು ಅವನ ಸ್ವತ್ತಿಗಾಗಿ ಗೌರವವನ್ನು ತೋರಿಸಬೇಕು ಮತ್ತು ನಾವು ಸಂಭಾಷಿಸುತ್ತಿರುವಾಗ ಶಿಷ್ಟಾಚಾರವುಳ್ಳವರೂ ಗಮನಕೊಡುತ್ತಿರುವವರೂ ಆಗಿರಬೇಕು. ಮಕ್ಕಳು ಪುಂಡಾಟ ಮಾಡುವವರಾಗಿರುವುದಾದರೆ, ಇದು ಒಂದು ಅಪ್ರಸನ್ನಕರವಾದ ಅಭಿಪ್ರಾಯವನ್ನು ಕೊಡುವುದು.—ಜ್ಞಾನೋ. 29:15.
6 ನಮ್ಮ ವೈಯಕ್ತಿಕ ತೋರಿಕೆಯು, ನಾವು ದೇವರ ವಾಕ್ಯದ ಶುಶ್ರೂಷಕರಾಗಿದ್ದೇವೆಂಬುದನ್ನು ಇತರರಿಗೆ ಸ್ಪಷ್ಟಪಡಿಸಬೇಕು. ನಮ್ಮ ಉಡುಪು ಮತ್ತು ಕೇಶಶೈಲಿಯಲ್ಲಿ, ನಾವು ಹೊಲಸಿಗರು ಕೇಶಕೆದರಿಕೊಂಡಿರುವವರೂ ಆಗಿರಬಾರದು, ಇಲ್ಲವೇ ಥಳಥಳಿಸುವವರು ಮತ್ತು ವೈಪರೀತ್ಯದವರೂ ಆಗಿರಬಾರದು. ನಮ್ಮ ತೋರಿಕೆಯು ಯಾವಾಗಲೂ ಸುವಾರ್ತೆಗೆ ಯೋಗ್ಯವಾಗಿರಬೇಕು. (ಫಿಲಿಪ್ಪಿ 1:27 ನ್ನು ಹೋಲಿಸಿರಿ.) ನಮ್ಮ ತೋರಿಕೆ ಮತ್ತು ಉಪಕರಣಕ್ಕೆ ಜಾಗರೂಕವಾದ ಗಮನವನ್ನು ಕೊಡುವ ಮೂಲಕ, ನಾವು ಇತರರಿಗೆ ಎಡವಿಬೀಳಲು ಅಥವಾ ನಮ್ಮ ಶುಶ್ರೂಷೆಯಲ್ಲಿ ದೋಷವನ್ನು ಕಂಡುಹಿಡಿಯಲು ಒಂದು ಕಾರಣವನ್ನು ಕೊಡದಿರುವೆವು. (2 ಕೊರಿಂ. 6:3, 4) ನಮ್ಮ ಆದರ್ಶಪ್ರಾಯ ನಡೆನುಡಿಯು, ಯೆಹೋವನಿಗೆ ಸನ್ಮಾನವನ್ನು ತರುತ್ತಾ, ರಾಜ್ಯ ಸಂದೇಶಕ್ಕೆ ಆಕರ್ಷಕವಾದ ಗುಣವನ್ನು ಕೂಡಿಸುತ್ತದೆ.—1 ಪೇತ್ರ 2:12.