ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಅಕ್ಟೋಬರ್ 7-13
ಬೈಬಲಿನಲ್ಲಿರುವ ರತ್ನಗಳು | ಯಾಕೋಬ 3–5
“ದೈವಿಕ ವಿವೇಕ ತೋರಿಸಿ”
(ಯಾಕೋಬ 3:17) ಆದರೆ ಮೇಲಣಿಂದ ಬರುವ ವಿವೇಕವು ಮೊದಲು ಶುದ್ಧವಾದದ್ದು, ತರುವಾಯ ಶಾಂತಿಶೀಲವಾದದ್ದು, ನ್ಯಾಯಸಮ್ಮತವಾದದ್ದು, ವಿಧೇಯತೆ ತೋರಿಸಲು ಸಿದ್ಧವಾದದ್ದು, ಕರುಣೆ ಮತ್ತು ಒಳ್ಳೇ ಫಲಗಳಿಂದ ತುಂಬಿರುವಂಥದ್ದು ಆಗಿದೆ; ಅದು ಪಕ್ಷಭೇದಗಳನ್ನು ಮಾಡುವುದಿಲ್ಲ, ಅದರಲ್ಲಿ ಕಪಟವೂ ಇಲ್ಲ.
“ಮೇಲಣಿಂದ ಬರುವ ವಿವೇಕವು” ನಿಮ್ಮ ಜೀವನದಲ್ಲಿ ಕಾರ್ಯನಡಿಸುತ್ತಿದೆಯೇ?
9 “ಮೊದಲು ನೈತಿಕವಾಗಿ ಶುದ್ಧವಾದದ್ದು.” ಶುದ್ಧವಾಗಿರುವುದು ಎಂದರೆ ಹೊರಗೂ ಒಳಗೂ ನಿರ್ಮಲರೂ ನಿಷ್ಕಳಂಕರೂ ಆಗಿರುವುದಾಗಿದೆ. ಬೈಬಲು ವಿವೇಕವನ್ನು ಒಂದು ಹೃದಯದೊಂದಿಗೆ ಜೊತೆಗೂಡಿಸುತ್ತದೆ, ಆದರೆ ಸ್ವರ್ಗೀಯ ವಿವೇಕವು ದುಷ್ಟ ಆಲೋಚನೆಗಳು, ಅಪೇಕ್ಷೆಗಳು, ಮತ್ತು ಹೇತುಗಳಿಂದ ಕಲುಷಿತವಾಗಿರುವ ಒಂದು ಹೃದಯವನ್ನು ಪ್ರವೇಶಿಸಲಾರದು. (ಜ್ಞಾನೋಕ್ತಿ 2:10; ಮತ್ತಾಯ 15:19, 20) ಆದರೂ ನಮ್ಮ ಹೃದಯವು—ಅಪರಿಪೂರ್ಣ ಮಾನವರಾಗಿರುವ ನಮಗೆ ಶಕ್ಯವಾದಷ್ಟು ಮಟ್ಟಿಗೆ—ಶುದ್ಧವಾಗಿದ್ದರೆ, ನಾವು “ಕೆಟ್ಟದ್ದಕ್ಕೆ ಹೋಗದೆ ಒಳ್ಳೆಯದನ್ನೇ ಮಾಡು”ವವರಾಗಿರುವೆವು. (ಕೀರ್ತನೆ 37:27; ಜ್ಞಾನೋಕ್ತಿ 3:7) ಹೀಗಿರುವಾಗ, ಪಟ್ಟಿಮಾಡಲ್ಪಟ್ಟವುಗಳಲ್ಲಿ ವಿವೇಕದ ಮೊದಲನೆಯ ಗುಣವು ನೈತಿಕ ಶುದ್ಧತೆ ಆಗಿರುವುದು ತಕ್ಕದಾಗಿದೆ ಅಲ್ಲವೇ? ಎಷ್ಟೆಂದರೂ, ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ನಾವು ಶುದ್ಧರಾಗಿರದೆ ಇದ್ದಲ್ಲಿ, ಮೇಲಣಿಂದ ಬರುವ ವಿವೇಕದ ಇತರ ಗುಣಗಳನ್ನು ನಾವು ನಿಜವಾಗಿಯೂ ಹೇಗೆ ಪ್ರದರ್ಶಿಸೇವು?
10 “ಆಮೇಲೆ ಸಮಾಧಾನ ಪ್ರವೃತ್ತಿಯದ್ದು.” ಸ್ವರ್ಗೀಯ ವಿವೇಕವು, ದೇವರಾತ್ಮದ ಫಲಗಳಲ್ಲೊಂದಾಗಿರುವ ಸಮಾಧಾನವನ್ನು ಬೆನ್ನಟ್ಟುವಂತೆ ನಮ್ಮನ್ನು ಪ್ರೇರೇಪಿಸುತ್ತದೆ. (ಗಲಾತ್ಯ 5:22) ಯೆಹೋವನ ಜನರನ್ನು ಐಕ್ಯಗೊಳಿಸುವ “ಸಮಾಧಾನವೆಂಬ ಬಂಧನ”ವನ್ನು ಒಡೆಯದಿರಲು ನಾವು ಪ್ರಯಾಸಪಡುತ್ತೇವೆ. (ಎಫೆಸ 4:3) ಸಮಾಧಾನವು ಕದಡಿಸಲ್ಪಟ್ಟಾಗಲೂ ಅದನ್ನು ಪುನಸ್ಸ್ಥಾಪಿಸಲು ನಮ್ಮಿಂದಾದಷ್ಟು ಮಟ್ಟಿಗಿನ ಪ್ರಯತ್ನಗಳನ್ನು ನಾವು ಮಾಡುತ್ತೇವೆ. ಇದು ಯಾಕೆ ಪ್ರಾಮುಖ್ಯವಾಗಿದೆ? ಬೈಬಲು ಅನ್ನುವುದು: “ಸಮಾಧಾನದಿಂದಿರಿ; ಆಗ ಪ್ರೀತಿಯನ್ನೂ ಶಾಂತಿಯನ್ನೂ ಕೊಡುವ ದೇವರು ನಿಮ್ಮ ಸಂಗಡ ಇರುವನು.” (2 ಕೊರಿಂಥ 13:11) ಹೀಗೆ ನಾವೆಷ್ಟರ ತನಕ ಸಮಾಧಾನದಿಂದ ಜೀವಿಸುತ್ತಾ ಮುಂದುವರಿಯುವೆವೋ ಅಷ್ಟರ ತನಕ ಶಾಂತಿಯ ದೇವರು ನಮ್ಮೊಂದಿಗಿರುವನು. ನಮ್ಮ ಜೊತೆ ಆರಾಧಕರನ್ನು ನಾವು ಉಪಚರಿಸುವ ರೀತಿಯು, ಯೆಹೋವನೊಂದಿಗಿನ ನಮ್ಮ ಸಂಬಂಧದ ಮೇಲೆ ನೇರವಾದ ಪ್ರಭಾವವನ್ನು ಬೀರುತ್ತದೆ. ನಾವು ಶಾಂತಿಕರ್ತರಾಗಿದ್ದೇವೆಂದು ಹೇಗೆ ಸಿದ್ಧಪಡಿಸಿ ತೋರಿಸಬಲ್ಲೆವು? ಒಂದು ಉದಾಹರಣೆಯನ್ನು ಪರಿಗಣಿಸಿರಿ.
(ಯಾಕೋಬ 3:17) ಆದರೆ ಮೇಲಣಿಂದ ಬರುವ ವಿವೇಕವು ಮೊದಲು ಶುದ್ಧವಾದದ್ದು, ತರುವಾಯ ಶಾಂತಿಶೀಲವಾದದ್ದು, ನ್ಯಾಯಸಮ್ಮತವಾದದ್ದು, ವಿಧೇಯತೆ ತೋರಿಸಲು ಸಿದ್ಧವಾದದ್ದು, ಕರುಣೆ ಮತ್ತು ಒಳ್ಳೇ ಫಲಗಳಿಂದ ತುಂಬಿರುವಂಥದ್ದು ಆಗಿದೆ; ಅದು ಪಕ್ಷಭೇದಗಳನ್ನು ಮಾಡುವುದಿಲ್ಲ, ಅದರಲ್ಲಿ ಕಪಟವೂ ಇಲ್ಲ.
“ಮೇಲಣಿಂದ ಬರುವ ವಿವೇಕವು” ನಿಮ್ಮ ಜೀವನದಲ್ಲಿ ಕಾರ್ಯನಡಿಸುತ್ತಿದೆಯೇ?
12 “ನ್ಯಾಯಸಮ್ಮತವಾದುದು.” ನ್ಯಾಯಸಮ್ಮತರಾಗಿರುವುದು ಎಂಬುದರ ಅರ್ಥವೇನು? ಬೈಬಲ್ ವಿದ್ವಾಂಸರಿಗೆ ಅನುಸಾರವಾಗಿ, “ನ್ಯಾಯಸಮ್ಮತವಾದುದು” ಎಂದು ಭಾಷಾಂತರವಾದ ಯಾಕೋಬ 3:17ರ (NW) ಮೂಲ ಗ್ರೀಕ್ ಶಬ್ದವನ್ನು ಭಾಷಾಂತರಮಾಡುವುದು ಕಷ್ಟ. ಭಾಷಾಂತರಕಾರರು “ಸಾತ್ವಿಕತೆ,” “ವಿನಯ,” ಮತ್ತು “ಸೈರಣೆ” ಮುಂತಾದ ಪದಗಳನ್ನು ಉಪಯೋಗಿಸಿದ್ದಾರೆ. ನೂತನ ಲೋಕ ಭಾಷಾಂತರ (ಇಂಗ್ಲಿಷ್) ಬೈಬಲ್ ಅದರ ಪಾದಟಿಪ್ಪಣಿಯಲ್ಲಿ ಆ ಪದದ ಅಕ್ಷರಾರ್ಥವು “ಮಣಿಯುವುದು” ಆಗಿದೆಯೆಂದು ಸೂಚಿಸುತ್ತದೆ. ಮೇಲಣ ವಿವೇಕದ ಈ ಅಂಶವು ನಮ್ಮಲ್ಲಿ ಕಾರ್ಯನಡಿಸುತ್ತಿದೆಯೆಂದು ನಾವು ಹೇಗೆ ತೋರಿಸಬಲ್ಲೆವು?
“ಮೇಲಣಿಂದ ಬರುವ ವಿವೇಕವು” ನಿಮ್ಮ ಜೀವನದಲ್ಲಿ ಕಾರ್ಯನಡಿಸುತ್ತಿದೆಯೇ?
14 “ವಿಧೇಯತೆ ತೋರಿಸಲು ಸಿದ್ಧವಾದುದು.” ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಬೇರೆಲ್ಲೂ “ವಿಧೇಯತೆ ತೋರಿಸಲು ಸಿದ್ಧ,” ಎಂದು ತರ್ಜುಮೆಯಾಗಿರುವ ಗ್ರೀಕ್ ಪದವು ಕಂಡುಬರುವುದಿಲ್ಲ. ಒಬ್ಬ ಬೈಬಲ್ ವಿದ್ವಾಂಸನಿಗನುಸಾರ ಈ ಶಬ್ದವು “ಹೆಚ್ಚಾಗಿ ಮಿಲಿಟರಿ ಶಿಸ್ತಿನ ಸಂಬಂಧದಲ್ಲಿ ಪ್ರಯೋಗಿಸಲ್ಪಡುತ್ತದೆ.” ಅದು “ಮನವೊಪ್ಪಿಸಲು ಸುಲಭವಾಗಿರುವುದು” ಮತ್ತು “ಅಧೀನತೆಯಲ್ಲಿರುವುದು” ಎಂಬ ವಿಚಾರವನ್ನು ಸೂಚಿಸುತ್ತದೆ. ಮೇಲಣಿಂದ ಬರುವ ವಿವೇಕದಿಂದ ನಿರ್ದೇಶಿಸಲ್ಪಡುವ ವ್ಯಕ್ತಿಯು ಶಾಸ್ತ್ರವಚನವು ಏನನ್ನುತ್ತದೋ ಅದಕ್ಕೆ ಸುಲಭವಾಗಿ ಅಧೀನನಾಗಲು ಸಿದ್ಧನಾಗಿರುತ್ತಾನೆ. ಮೊದಲೇ ನಿರ್ಣಯವನ್ನು ಮಾಡಿ, ಅದಕ್ಕೆ ವಿರುದ್ಧವಾದ ಯಾವುದೇ ನಿಜತ್ವಗಳಿದ್ದರೂ ಅದರಿಂದ ಪ್ರಭಾವಿಸಲ್ಪಡಲು ಒಪ್ಪದಿರುವ ವ್ಯಕ್ತಿ ಎಂಬ ಖ್ಯಾತಿ ಅವನಿಗಿರುವುದಿಲ್ಲ. ಅದರ ಬದಲಿಗೆ ಅವನು ತೆಗೆದುಕೊಂಡ ನಿಲುವು ತಪ್ಪು ಮತ್ತು ಅವನು ಮಾಡಿರುವ ನಿರ್ಣಯಗಳು ಸರಿಯಲ್ಲವೆಂಬುದಕ್ಕೆ ಶಾಸ್ತ್ರೀಯ ಆಧಾರವು ಸ್ಪಷ್ಟವಾಗಿ ನೀಡಲ್ಪಡುವಾಗ, ಅವನು ಕೂಡಲೆ ತಿದ್ದುಪಡಿಯನ್ನು ಮಾಡಲು ಸಿದ್ಧನಾಗಿರುವನು. ಇಂಥ ಹೆಸರು ನಿಮಗಿದೆಯೊ?
“ಕರುಣೆ ಹಾಗೂ ಸುಫಲಗಳಿಂದ ತುಂಬಿರುವಂಥದ್ದು”
15 “ಕರುಣೆ ಹಾಗೂ ಸುಫಲಗಳಿಂದ ತುಂಬಿರುವಂಥದ್ದು.” ಮೇಲಣಿಂದ ಬರುವ ವಿವೇಕದ ಒಂದು ಪ್ರಾಮುಖ್ಯ ಭಾಗವು ಕರುಣೆಯಾಗಿದೆ, ಯಾಕಂದರೆ ಅಂಥ ವಿವೇಕವು ‘ಕರುಣೆಯಿಂದ ತುಂಬಿರುತ್ತದೆ’ ಎಂದು ಹೇಳಲಾಗಿದೆ. “ಕರುಣೆ” ಮತ್ತು “ಸುಫಲ”ವು ಒಟ್ಟಾಗಿ ತಿಳಿಸಲ್ಪಟ್ಟಿರುವುದನ್ನು ಗಮನಿಸಿರಿ. ಇದು ತಕ್ಕದ್ದು ಯಾಕಂದರೆ ಹೆಚ್ಚಾಗಿ ಬೈಬಲಿನಲ್ಲಿ ಕರುಣೆಯು ಇತರರ ಕಡೆಗೆ ತೋರಿಸಲ್ಪಡುವ ಕ್ರಿಯಾಶೀಲ ಕಾಳಜಿ, ದಯಾಪರ ಕೃತ್ಯಗಳ ಸಮೃದ್ಧ ಫಸಲನ್ನು ಉತ್ಪಾದಿಸುವ ಕನಿಕರಕ್ಕೆ ಸೂಚಿಸುತ್ತದೆ. ಒಂದು ಪರಾಮರ್ಶೆ ಕೃತಿಯು ಕರುಣೆಯನ್ನು, “ಬೇರೆಯವರ ದುರವಸ್ಥೆಗಾಗಿ ದುಃಖಪಡುವ ಮತ್ತು ಅದರ ಬಗ್ಗೆ ಏನನ್ನಾದರೂ ಮಾಡಲು ಪ್ರಯತ್ನಿಸುವ ಒಂದು ಭಾವನೆ” ಎಂದು ಅರ್ಥನಿರೂಪಿಸುತ್ತದೆ. ಹೀಗಿರುವುದರಿಂದ ದೈವಿಕ ವಿವೇಕವು ಬರಡಾದದ್ದು, ನಿರ್ದಯವಾದದ್ದು ಅಥವಾ ಕೇವಲ ತಲೆಯಲ್ಲಿ ತುಂಬಿರುವ ಜ್ಞಾನವಲ್ಲ. ಬದಲಿಗೆ, ಅದು ಹಾರ್ದಿಕವೂ ಹೃತ್ಪೂರ್ವಕವೂ ಸೂಕ್ಷ್ಮಸಂವೇದಿಯೂ ಆಗಿರುತ್ತದೆ. ನಾವು ಕರುಣೆಯಿಂದ ತುಂಬಿದವರಾಗಿದ್ದೇವೆಂದು ಹೇಗೆ ತೋರಿಸಬಲ್ಲೆವು?
(ಯಾಕೋಬ 3:17) ಆದರೆ ಮೇಲಣಿಂದ ಬರುವ ವಿವೇಕವು ಮೊದಲು ಶುದ್ಧವಾದದ್ದು, ತರುವಾಯ ಶಾಂತಿಶೀಲವಾದದ್ದು, ನ್ಯಾಯಸಮ್ಮತವಾದದ್ದು, ವಿಧೇಯತೆ ತೋರಿಸಲು ಸಿದ್ಧವಾದದ್ದು, ಕರುಣೆ ಮತ್ತು ಒಳ್ಳೇ ಫಲಗಳಿಂದ ತುಂಬಿರುವಂಥದ್ದು ಆಗಿದೆ; ಅದು ಪಕ್ಷಭೇದಗಳನ್ನು ಮಾಡುವುದಿಲ್ಲ, ಅದರಲ್ಲಿ ಕಪಟವೂ ಇಲ್ಲ.
“ಮೇಲಣಿಂದ ಬರುವ ವಿವೇಕವು” ನಿಮ್ಮ ಜೀವನದಲ್ಲಿ ಕಾರ್ಯನಡಿಸುತ್ತಿದೆಯೇ?
18 ‘ಪಕ್ಷಭೇದಗಳನ್ನು ಮಾಡದಿರುವುದು.’ ದೈವಿಕ ವಿವೇಕವು ಜಾತೀಯ ಪೂರ್ವಾಗ್ರಹ ಮತ್ತು ರಾಷ್ಟ್ರಾಭಿಮಾನಕ್ಕೆ ಈಡಾಗದೆ ಮೇಲ್ಮಟ್ಟದಲ್ಲಿರುತ್ತದೆ. ನಾವು ಅಂಥ ವಿವೇಕದಿಂದ ಮಾರ್ಗದರ್ಶಿಸಲ್ಪಡುವಲ್ಲಿ, ಪಕ್ಷಪಾತವನ್ನು ತೋರಿಸುವ ಯಾವುದೇ ಪ್ರವೃತ್ತಿಯನ್ನು ನಮ್ಮ ಹೃದಯದಿಂದ ಬೇರುಸಮೇತ ಕಿತ್ತುಹಾಕಲು ಪ್ರಯಾಸಪಡುವೆವು. (ಯಾಕೋಬ 2:9) ಬೇರೆಯವರ ಶೈಕ್ಷಣಿಕ ಹಿನ್ನೆಲೆ, ಆರ್ಥಿಕ ಅಂತಸ್ತು, ಅಥವಾ ಸಭಾ ಜವಾಬ್ದಾರಿಯ ಆಧಾರದ ಮೇಲೆ ಅವರಿಗೆ ಹೆಚ್ಚು ಅಭಿಮಾನಭರಿತ ಉಪಚಾರವನ್ನು ನಾವು ನೀಡುವುದಿಲ್ಲ; ಇಲ್ಲವೆ ನಮ್ಮ ಜೊತೆ ಆರಾಧಕರಲ್ಲಿ ಯಾರನ್ನೂ ಅವರೆಷ್ಟೇ ದೀನಸ್ಥಿತಿಯಲ್ಲಿರುವಂತೆ ಕಂಡುಬಂದರೂ ಅವರನ್ನು ಕೀಳಾಗಿ ನೋಡುವುದಿಲ್ಲ. ಅಂಥವರನ್ನು ಯೆಹೋವನೇ ತನ್ನ ಪ್ರೀತಿಗೆ ಪಾತ್ರರನ್ನಾಗಿ ಮಾಡಿರುವಾಗ, ನಮ್ಮ ಪ್ರೀತಿಗೂ ಅವರು ಅರ್ಹರೆಂದು ನಾವು ನಿಶ್ಚಯವಾಗಿಯೂ ಎಣಿಸಬೇಕು.
19 ‘ಕಪಟಾಚರಣೆಯಿಲ್ಲದ್ದು.’ “ಕಪಟಿ”ಗಾಗಿರುವ ಗ್ರೀಕ್ ಶಬ್ದವು “ಒಂದು ಪಾತ್ರವನ್ನು ಅಭಿನಯಿಸಿದ ನಟನಿಗೆ” ಸೂಚಿತವಾಗಬಲ್ಲದು. ಪುರಾತನ ಕಾಲಗಳಲ್ಲಿ ಗ್ರೀಕ್ ಮತ್ತು ರೋಮನ್ ನಟರು ನಾಟಕಗಳಲ್ಲಿ ಅಭಿನಯಿಸುವಾಗ ದೊಡ್ಡದೊಡ್ಡ ಮುಖವಾಡಗಳನ್ನು ಧರಿಸುತ್ತಿದ್ದರು. ಆದುದರಿಂದ, “ಕಪಟಿ”ಗಾಗಿರುವ ಗ್ರೀಕ್ ಶಬ್ದವು ಒಂದು ಸೋಗನ್ನು ಹಾಕಿಕೊಳ್ಳುವವನಿಗೆ, ನಟನೆ ಮಾಡುವವನಿಗೆ ಅನ್ವಯಿಸಲಾರಂಭಿಸಲ್ಪಟ್ಟಿತು. ದೈವಿಕ ವಿವೇಕದ ಈ ಅಂಶವು, ನಮ್ಮ ಜೊತೆ ವಿಶ್ವಾಸಿಗಳನ್ನು ನಾವು ಹೇಗೆ ಉಪಚರಿಸುತ್ತೇವೆಂಬುದನ್ನು ಮಾತ್ರವಲ್ಲ, ಅವರ ಬಗ್ಗೆ ನಮ್ಮ ಅನಿಸಿಕೆಯನ್ನೂ ಪ್ರಭಾವಿಸಬೇಕು.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಯಾಕೋಬ 4:5) “ಅಸೂಯೆಪಡುವ ಪ್ರವೃತ್ತಿಯಿಂದಲೇ ನಮ್ಮೊಳಗೆ ವಾಸಿಸುವ ಮನೋಭಾವವು ಹಂಬಲಿಸುತ್ತಾ ಇದೆ” ಎಂಬ ಶಾಸ್ತ್ರವಚನವು ಯಾವುದೇ ಉದ್ದೇಶವಿಲ್ಲದೆ ಹಾಗೆ ಹೇಳುತ್ತದೆಂದು ನಿಮಗನಿಸುತ್ತದೊ?
w08 11/15 ಪುಟ 20 ಪ್ಯಾರ 6
ಯಾಕೋಬ ಮತ್ತು ಪೇತ್ರನ ಪತ್ರಗಳ ಮುಖ್ಯಾಂಶಗಳು
4:5—ಯಾಕೋಬನು ಇಲ್ಲಿ ಯಾವ ವಚನವನ್ನು ಉಲ್ಲೇಖಿಸುತ್ತಾನೆ? ಯಾಕೋಬನು ಇಲ್ಲಿ ನಿರ್ದಿಷ್ಟವಾಗಿ ಯಾವುದೇ ಒಂದು ವಚನವನ್ನು ಉಲ್ಲೇಖಿಸುವುದಿಲ್ಲ. ಆದರೆ ಈ ದೈವಪ್ರೇರಿತ ಮಾತುಗಳು ಬಹುಶಃ, ಆದಿಕಾಂಡ 6:5; 8:21; ಜ್ಞಾನೋಕ್ತಿ 21:10 ಮತ್ತು ಗಲಾತ್ಯ 5:17ರಂಥ ವಚನಗಳಲ್ಲಿರುವ ವಿಚಾರದ ಮೇಲಾಧರಿತವಾಗಿವೆ.
(ಯಾಕೋಬ 4:11, 12) ಒಬ್ಬರ ವಿರುದ್ಧ ಇನ್ನೊಬ್ಬರು ಮಾತಾಡುವುದನ್ನು ನಿಲ್ಲಿಸಿರಿ. ಸಹೋದರನ ವಿರುದ್ಧ ಮಾತಾಡುವವನು ಅಥವಾ ತನ್ನ ಸಹೋದರನ ವಿಷಯವಾಗಿ ತೀರ್ಪುಮಾಡುವವನು ನಿಯಮದ ವಿರುದ್ಧ ಮಾತಾಡುವವನಾಗಿದ್ದಾನೆ ಮತ್ತು ನಿಯಮದ ವಿಷಯವಾಗಿ ತೀರ್ಪುಮಾಡುವವನಾಗಿದ್ದಾನೆ. ನೀನು ನಿಯಮವನ್ನು ತೀರ್ಪುಮಾಡುವಲ್ಲಿ ನಿಯಮದ ಪ್ರಕಾರ ಮಾಡುವವನಾಗಿರದೆ ನ್ಯಾಯಾಧಿಪತಿಯಾಗಿದ್ದೀ. 12 ನ್ಯಾಯವನ್ನು ವಿಧಿಸುವವನೂ ನ್ಯಾಯಾಧಿಪತಿಯಾಗಿರುವವನೂ ಒಬ್ಬನೇ; ಆತನೇ ರಕ್ಷಿಸುವುದಕ್ಕೂ ನಾಶಮಾಡುವುದಕ್ಕೂ ಶಕ್ತನಾಗಿದ್ದಾನೆ. ಆದರೆ ನಿನ್ನ ನೆರೆಯವನ ವಿಷಯದಲ್ಲಿ ತೀರ್ಪುಮಾಡಲು ನೀನು ಯಾರು?
w97 11/15 ಪುಟ 20-21 ಪ್ಯಾರ 8
ನಂಬಿಕೆ ನಮ್ಮನ್ನು ತಾಳ್ಮೆಯುಳ್ಳವರು ಮತ್ತು ಪ್ರಾರ್ಥನಾಪರರಾಗಿ ಮಾಡುತ್ತದೆ
8 ಜೊತೆ ವಿಶ್ವಾಸಿಯ ವಿರುದ್ಧ ಮಾತನಾಡುವುದು ಪಾಪಕರ. (ಯಾಕೋಬ 4:11, 12) ಹೀಗಿದ್ದರೂ, ಕೆಲವರು ಜೊತೆ ಕ್ರೈಸ್ತರನ್ನು, ಪ್ರಾಯಶಃ ತಮ್ಮ ಸ್ವಂತ ಸ್ವನೀತಿವಂತ ಮನೋಭಾವದ ಫಲಿತಾಂಶವಾಗಿ ಇಲ್ಲವೆ ಇತರರನ್ನು ಕೀಳುಮಾಡಿ ತಮ್ಮನ್ನು ಅಟ್ಟಕ್ಕೇರಿಸಿಕೊಳ್ಳುವ ಮೂಲಕ ಟೀಕಿಸುತ್ತಾರೆ. (ಕೀರ್ತನೆ 50:20; ಜ್ಞಾನೋಕ್ತಿ 3:29) “ನಿಂದಿಸು” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು, ದ್ವೇಷವನ್ನು ಸೂಚಿಸಿ, ಅತಿಶಯಿಸಲ್ಪಟ್ಟ ಅಥವಾ ಸುಳ್ಳು ಅಪವಾದದ ಸೂಚ್ಯಾರ್ಥವನ್ನು ಕೊಡುತ್ತದೆ. ಇದು ಒಬ್ಬ ಸಹೋದರನ ಮೇಲೆ ಪ್ರತಿಕೂಲವಾಗಿ ತೀರ್ಪುಮಾಡುವುದಕ್ಕೆ ಸಮನಾಗುತ್ತದೆ. ಇದು ‘ನಿಂದಿಸಿ ಧರ್ಮಶಾಸ್ತ್ರಕ್ಕೆ ತೀರ್ಪುಮಾಡಿದಂತೆ’ ಆಗುವುದು ಹೇಗೆ? ಶಾಸ್ತ್ರಿಗಳೂ ಫರಿಸಾಯರೂ ಚಾಕಚಕ್ಯತೆಯಿಂದ ‘ದೇವರಾಜ್ಞೆಯನ್ನು ಬಿಟ್ಟು,’ ತಮ್ಮ ಸ್ವಂತ ಮಟ್ಟಗಳಿಂದ ತೀರ್ಪುಮಾಡಿದರು. (ಮಾರ್ಕ 7:1-13) ಅದೇ ರೀತಿ, ಯೆಹೋವನು ಖಂಡಿಸದ ಒಬ್ಬ ಸಹೋದರನನ್ನು ನಾವು ಖಂಡಿಸುವಲ್ಲಿ, ‘ದೇವರ ನಿಯಮಕ್ಕೆ ತೀರ್ಪುಮಾಡಿ,’ ಅದು ಅಸಮರ್ಪಕವೆಂದು ಪಾಪಭರಿತವಾಗಿ ಸೂಚಿಸಿದಂತಾಗುವುದಿಲ್ಲವೆ? ಮತ್ತು ನಮ್ಮ ಸಹೋದರನನ್ನು ಅನ್ಯಾಯವಾಗಿ ಟೀಕಿಸುವ ಮೂಲಕ ಪ್ರೀತಿಯ ನಿಯಮವನ್ನು ನಾವು ಪೂರ್ಣಗೊಳಿಸುವವರಾಗಿರುವುದಿಲ್ಲ.—ರೋಮಾಪುರ 13:8-10.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
w17 ಜನವರಿ ಪುಟ 10 ಪ್ಯಾರ 10-14
ಯೆಹೋವನಲ್ಲಿ ಭರವಸೆ ಇಟ್ಟು ಒಳ್ಳೇದನ್ನು ಮಾಡಿ
10 ರಾಜ ದಾವೀದ ದೇವರಿಗೆ ನಂಬಿಗಸ್ತನಾಗಿದ್ದ ವ್ಯಕ್ತಿ. ಯೆಹೋವನಿಗೆ ದಾವೀದನೆಂದರೆ ತುಂಬ ಇಷ್ಟ. (ಅ. ಕಾ. 13:22) ಆದರೂ ದಾವೀದ ದೊಡ್ಡ ತಪ್ಪುಗಳನ್ನು ಮಾಡಿದ. ಬತ್ಷೆಬೆ ಜೊತೆ ವ್ಯಭಿಚಾರ ಮಾಡಿದ. ಅಷ್ಟೇ ಅಲ್ಲ, ತಾನು ಮಾಡಿದ ತಪ್ಪನ್ನು ಮುಚ್ಚಿಹಾಕಲು ಬತ್ಷೆಬೆಯ ಗಂಡನಾದ ಊರೀಯನು ಯುದ್ಧದಲ್ಲಿ ಸಾಯುವಂತೆ ಮಾಡಿದ. ಆ ಒಳಸಂಚಿನ ಬಗ್ಗೆ ದಾವೀದ ಸೇನಾಪತಿಗೆ ಬರೆದ ಪತ್ರವನ್ನು ಊರೀಯನ ಕೈಯಲ್ಲೇ ಕೊಟ್ಟುಕಳುಹಿಸಿದ! (2 ಸಮು. 11:1-21) ಆದರೆ ದಾವೀದನ ಪಾಪಗಳು ಬೆಳಕಿಗೆ ಬಂದವು. (ಮಾರ್ಕ 4:22) ಅವನು ಸಿಕ್ಕಿಬಿದ್ದಾಗ ಏನು ಮಾಡಿದ?
11 ದಾವೀದನಿಗೆ ಏನು ಮಾಡಲು ಆಗಲಿಲ್ಲ: ದಾವೀದ ಹಿಂದೆ ಹೋಗಿ ತನ್ನಿಂದಾದ ತಪ್ಪನ್ನು ಸರಿಪಡಿಸಲು ಆಗಲಿಲ್ಲ. ಇದರ ಕೆಲವು ಪರಿಣಾಮಗಳನ್ನು ಜೀವನಪೂರ್ತಿ ಅನುಭವಿಸಬೇಕಾಯಿತು. (2 ಸಮು. 12:10-12, 14) ಆಗೆಲ್ಲ ಅವನು ದೇವರ ಮೇಲೆ ಬಲವಾದ ನಂಬಿಕೆ ಇಡಬೇಕಿತ್ತು. ತಾನು ನಿಜವಾಗಲೂ ಪಶ್ಚಾತ್ತಾಪಪಟ್ಟರೆ ಯೆಹೋವನು ತನ್ನನ್ನು ಕ್ಷಮಿಸುತ್ತಾನೆ, ಮಾತ್ರವಲ್ಲ ತನ್ನ ಪಾಪಗಳ ಕೆಟ್ಟ ಪರಿಣಾಮಗಳನ್ನು ಸಹಿಸಿಕೊಳ್ಳಲು ಸಹಾಯ ಮಾಡುತ್ತಾನೆ ಎಂದು ನಂಬಬೇಕಿತ್ತು.
12 ನಾವೆಲ್ಲರೂ ಅಪರಿಪೂರ್ಣರಾದ ಕಾರಣ ತಪ್ಪುಮಾಡುತ್ತೇವೆ. ಕೆಲವೊಮ್ಮೆ ದೊಡ್ಡ ತಪ್ಪುಗಳನ್ನೂ ಮಾಡಿಬಿಡುತ್ತೇವೆ. ಅದನ್ನು ಸರಿಪಡಿಸಲು ನಮ್ಮಿಂದ ಕೆಲವೊಮ್ಮೆ ಆಗುವುದಿಲ್ಲ. ‘ಮಾಡಿದ್ದುಣ್ಣೋ ಮಾರಾಯ’ ಎನ್ನುವಂತೆ ನಮ್ಮ ತಪ್ಪಿನಿಂದಾಗುವ ಪರಿಣಾಮಗಳನ್ನು ನಾವು ಅನುಭವಿಸಬೇಕಾಗುತ್ತದೆ. (ಗಲಾ. 6:7) ಇಂಥ ಸಂದರ್ಭದಲ್ಲಿ ನಾವು ದೇವರ ಮೇಲೆ ಭರವಸೆ ಇಡಬೇಕು. ನಾವು ಪಶ್ಚಾತ್ತಾಪಪಟ್ಟರೆ ಕಷ್ಟಗಳನ್ನು ಸಹಿಸಿಕೊಳ್ಳಲು ದೇವರು ಸಹಾಯ ಮಾಡುತ್ತಾನೆ. ಆ ಕಷ್ಟಗಳು ನಮ್ಮ ತಪ್ಪಿನಿಂದ ಬಂದಿರುವುದಾದರೂ ಆತನು ನಮಗೆ ಸಹಿಸಿಕೊಳ್ಳಲು ಸಹಾಯ ಮಾಡುತ್ತಾನೆ ಎಂದು ನಂಬಬೇಕು.—ಯೆಶಾಯ 1:18, 19; ಅಪೊಸ್ತಲರ ಕಾರ್ಯಗಳು 3:19 ಓದಿ.
13 ದಾವೀದನಿಗೆ ಏನು ಮಾಡಲು ಆಯಿತು: ದಾವೀದ ತಪ್ಪುಮಾಡಿದಾಗ ಯೆಹೋವನ ಜೊತೆ ಅವನಿಗಿದ್ದ ಸಂಬಂಧ ಹಾಳಾಯಿತು. ಇದನ್ನು ಸರಿಪಡಿಸಿಕೊಳ್ಳಲು ಬಯಸಿದ ದಾವೀದ ದೇವರು ಕೊಟ್ಟ ಸಹಾಯವನ್ನು ಸ್ವೀಕರಿಸಿದನು. ಯೆಹೋವನ ಪ್ರವಾದಿಯಾದ ನಾತಾನನು ದಾವೀದನನ್ನು ತಿದ್ದಿದಾಗ ಅದಕ್ಕೆ ಒಳ್ಳೇ ರೀತಿಯಲ್ಲಿ ಪ್ರತಿಕ್ರಿಯಿಸಿದ. (2 ಸಮು. 12:13) ಅಷ್ಟೇ ಅಲ್ಲ ಯೆಹೋವನಿಗೆ ಪ್ರಾರ್ಥಿಸಿ ‘ತಪ್ಪು ಮಾಡಿಬಿಟ್ಟೆ ದೇವರೇ, ಕ್ಷಮಿಸಿಬಿಡು’ ಎಂದು ಬೇಡಿಕೊಂಡ. ಹೀಗೆ ತನಗೆ ದೇವರ ಅನುಗ್ರಹ ಪುನಃ ಬೇಕು ಎಂದು ತೋರಿಸಿಕೊಟ್ಟ. (ಕೀರ್ತ. 51:1-17) ಆಗಿ ಹೋದ ತಪ್ಪಿನ ಬಗ್ಗೆ ಕೊರಗುತ್ತಾ ಕೂರುವ ಬದಲು ತನ್ನ ತಪ್ಪಿನಿಂದ ಪಾಠ ಕಲಿತ. ಆ ತಪ್ಪುಗಳನ್ನು ಮುಂದೆಂದೂ ಮಾಡಲಿಲ್ಲ. ದಾವೀದ ಕೊನೇ ತನಕ ನಂಬಿಗಸ್ತನಾಗಿದ್ದ. ಅವನು ಸತ್ತು ಶತಮಾನಗಳೇ ಕಳೆದರೂ ಯೆಹೋವನು ಅವನ ನಂಬಿಗಸ್ತಿಕೆಯನ್ನು ಮರೆಯಲಿಲ್ಲ.—ಇಬ್ರಿ. 11:32-34.
14 ದಾವೀದನಿಂದ ನಾವು ಕಲಿಯುವ ಪಾಠವೇನು? ನಾವು ತಪ್ಪು ಮಾಡಿದಾಗ ಪಶ್ಚಾತ್ತಾಪ ಪಡಬೇಕು, ಯೆಹೋವನ ಹತ್ತಿರ ಅದನ್ನು ಒಪ್ಪಿಕೊಳ್ಳಬೇಕು ಮತ್ತು ಆತನ ಕ್ಷಮೆ ಕೇಳಬೇಕು. (1 ಯೋಹಾ. 1:9) ಹಿರಿಯರ ಹತ್ತಿರನೂ ಇದರ ಬಗ್ಗೆ ಮಾತಾಡಬೇಕು. ಅವರು ಯೆಹೋವನ ಜೊತೆ ನಮ್ಮ ಸಂಬಂಧವನ್ನು ಸರಿಪಡಿಸಿಕೊಳ್ಳಲು ಸಹಾಯ ಮಾಡುತ್ತಾರೆ. (ಯಾಕೋಬ 5:14-16 ಓದಿ.) ಯೆಹೋವನು ಕೊಡುವ ಸಹಾಯವನ್ನು ಪಡೆದುಕೊಳ್ಳುವ ಮೂಲಕ ಆತನು ನಮ್ಮನ್ನು ಕ್ಷಮಿಸುತ್ತಾನೆ ಎನ್ನುವ ಭರವಸೆ ನಮಗಿದೆ ಎಂದು ತೋರಿಸಿಕೊಡುತ್ತೇವೆ. ಅಷ್ಟೇ ಅಲ್ಲ, ನಮ್ಮ ತಪ್ಪುಗಳಿಂದ ಪಾಠ ಕಲಿತು ಆತನ ಸೇವೆಯನ್ನು ದೃಢವಿಶ್ವಾಸದಿಂದ ಮಾಡುತ್ತಾ ಇರಬೇಕು.—ಇಬ್ರಿ. 12:12, 13.
ಅಕ್ಟೋಬರ್ 14-20
ಬೈಬಲಿನಲ್ಲಿರುವ ರತ್ನಗಳು | 1 ಪೇತ್ರ 1-2
“ನೀವೂ ಪವಿತ್ರರಾಗಿರಬೇಕು”
(1 ಪೇತ್ರ 1:14, 15) ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ಇಚ್ಛೆಗಳಿಗನುಸಾರ ನಡೆಯುತ್ತಿದ್ದಂತೆ ಈಗ ನಡೆಯುವುದನ್ನು ಬಿಟ್ಟುಬಿಡಿರಿ. 15 ನಿಮ್ಮನ್ನು ಕರೆದಾತನು ಪವಿತ್ರನಾಗಿರುವ ಪ್ರಕಾರ ವಿಧೇಯ ಮಕ್ಕಳಂತೆ ನಿಮ್ಮ ಎಲ್ಲ ನಡವಳಿಕೆಯಲ್ಲಿ ನೀವು ಸಹ ಪವಿತ್ರರಾಗಿರಿ.
ವಿಮೋಚನಾ ಮೌಲ್ಯ—ನಮ್ಮ ತಂದೆ ಕೊಟ್ಟ “ಪರಿಪೂರ್ಣ ವರ”
5 ನಮಗೂ ಯೆಹೋವನ ಹೆಸರಿನ ಬಗ್ಗೆ ತುಂಬ ಗೌರವವಿದೆಯೆಂದು ಹೇಗೆ ತೋರಿಸಬಹುದು? ನಮ್ಮ ನಡತೆಯ ಮೂಲಕ. ನಾವು ಪವಿತ್ರರಾಗಿರಬೇಕೆಂದು ಯೆಹೋವನು ಬಯಸುತ್ತಾನೆ. (1 ಪೇತ್ರ 1:15, 16 ಓದಿ.) ಹಾಗಾಗಿ ನಾವು ಆತನೊಬ್ಬನನ್ನೇ ಆರಾಧಿಸುತ್ತೇವೆ. ಆತನಿಗೆ ಮನಸಾರೆ ವಿಧೇಯರಾಗುತ್ತೇವೆ. ನಾವು ಹಿಂಸೆ-ವಿರೋಧವನ್ನು ಎದುರಿಸುತ್ತಿರುವಾಗಲೂ ಆತನು ಕಲಿಸಿಕೊಟ್ಟಂಥ ರೀತಿಯಲ್ಲಿ ಜೀವಿಸಲು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡುತ್ತೇವೆ. ಯೆಹೋವನ ನಿಯಮಗಳು, ಮಟ್ಟಗಳಿಗನುಸಾರ ಜೀವಿಸುವ ಮೂಲಕ ಆತನ ಹೆಸರಿಗೆ ಮಹಿಮೆ ತರುತ್ತೇವೆ. (ಮತ್ತಾ. 5:14-16) ಯೆಹೋವನ ನಿಯಮಗಳಿಂದ ನಮಗೆ ಒಳ್ಳೇದೇ ಆಗುತ್ತದೆ ಮತ್ತು ಸೈತಾನನು ಹೇಳಿದ್ದೆಲ್ಲ ಸುಳ್ಳು ಎಂದು ತೋರಿಸಿಕೊಡುತ್ತೇವೆ. ನಾವು ಪರಿಪೂರ್ಣರಲ್ಲ, ಹಾಗಾಗಿ ಎಷ್ಟೋ ಸಲ ತಪ್ಪುಮಾಡುತ್ತೇವೆ. ಆದರೆ ನಾವು ಪಶ್ಚಾತ್ತಾಪಪಟ್ಟು, ದೇವರ ಹೆಸರಿಗೆ ಅಗೌರವ ತರುವಂಥ ಕೆಲಸ ಮಾಡುವುದನ್ನು ನಿಲ್ಲಿಸುತ್ತೇವೆ.—ಕೀರ್ತ. 79:9.
(1 ಪೇತ್ರ 1:16) ಏಕೆಂದರೆ, “ನಾನು ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಬೇಕು” ಎಂದು ಬರೆಯಲ್ಪಟ್ಟಿದೆ.
lvs-E ಪುಟ 77 ಪ್ಯಾರ 6
ಒಳ್ಳೇ ಮನೋರಂಜನೆಯನ್ನು ಆರಿಸಿಕೊಳ್ಳುವ ವಿಧ
6 ಯೆಹೋವನು ನಮಗೆ, “ನಾನು ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಬೇಕು” ಎಂದು ಹೇಳಿದ್ದಾನೆ. (1 ಪೇತ್ರ 1:14-16; 2 ಪೇತ್ರ 3:11) ನಮ್ಮ ಆರಾಧನೆ ಶುದ್ಧವಾಗಿದ್ದರೆ ಮಾತ್ರ ದೇವರು ಅದನ್ನು ಸ್ವೀಕರಿಸುತ್ತಾನೆ. (ಧರ್ಮೋಪದೇಶಕಾಂಡ 15:21) ಯೆಹೋವನು ಅನೈತಿಕತೆ, ಹಿಂಸೆ ಮತ್ತು ಪ್ರೇತ ವ್ಯವಹಾರ ಮುಂತಾದ ವಿಷಯಗಳನ್ನು ಇಷ್ಟಪಡುವುದಿಲ್ಲ. (ರೋಮನ್ನರಿಗೆ 6:12-14; 8:13) ನಾವು ಇಂಥ ವಿಷಯಗಳನ್ನು ಮಾಡಿದರೆ ನಮ್ಮ ಆರಾಧನೆ ಶುದ್ಧವಾಗಿರುವುದಿಲ್ಲ. ನಮ್ಮ ಮನೋರಂಜನೆಯಲ್ಲಿ ಸಹ ಇಂಥ ವಿಷಯಗಳು ಇರುವುದಾದರೆ, ಯೆಹೋವನಿಗೆ ಬೇಸರ ಆಗುತ್ತೆ. ಇದೆಲ್ಲಾ ನಮ್ಮ ಆರಾಧನೆಯನ್ನು ಅಶುದ್ಧಗೊಳಿಸುತ್ತೆ. ಇದನ್ನು ಯೆಹೋವನು ಖಂಡಿತ ಸ್ವೀಕರಿಸುವುದಿಲ್ಲ ಮತ್ತು ಇದರಿಂದ ಯೆಹೋವನೊಂದಿಗಿರುವ ನಮ್ಮ ಸಂಬಂಧ ಕೂಡ ಹಾಳಾಗುತ್ತೆ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(1 ಪೇತ್ರ 1:10-12) ನಿಮಗೆ ದೊರಕಲಿದ್ದ ಅಪಾತ್ರ ದಯೆಯ ಕುರಿತು ಪ್ರವಾದಿಸಿದ ಪ್ರವಾದಿಗಳು ಈ ರಕ್ಷಣೆಯ ಕುರಿತಾಗಿಯೇ ಶ್ರದ್ಧಾಪೂರ್ವಕವಾಗಿ ವಿಚಾರಿಸಿ ಜಾಗರೂಕತೆಯಿಂದ ಪರಿಶೋಧನೆಮಾಡಿದರು. 11 ತಮ್ಮಲ್ಲಿದ್ದ ಪವಿತ್ರಾತ್ಮವು ಕ್ರಿಸ್ತನು ಅನುಭವಿಸಬೇಕಾಗಿದ್ದ ಕಷ್ಟಗಳ ಕುರಿತು ಮತ್ತು ತದನಂತರ ಸಿಗಲಿರುವ ಮಹಿಮೆಯ ಕುರಿತು ಮುಂದಾಗಿಯೇ ಸಾಕ್ಷಿನೀಡಿದಾಗ ಯಾವ ನಿರ್ದಿಷ್ಟ ಕಾಲವನ್ನು ಅಥವಾ ಎಂಥ ಕಾಲವನ್ನು ಅದು ಸೂಚಿಸುತ್ತಿತ್ತು ಎಂಬುದನ್ನು ಅವರು ಪರಿಶೋಧಿಸುತ್ತಾ ಇದ್ದರು. 12 ಇದಲ್ಲದೆ, ಸ್ವರ್ಗದಿಂದ ಕಳುಹಿಸಲ್ಪಟ್ಟ ಪವಿತ್ರಾತ್ಮದಿಂದ ನಿಮಗೆ ಸುವಾರ್ತೆಯನ್ನು ಸಾರಿದವರ ಮೂಲಕ ಈಗ ನಿಮಗೆ ಪ್ರಕಟಿಸಲ್ಪಟ್ಟಿರುವ ವಿಷಯಗಳನ್ನು ಮುಂತಿಳಿಸುವುದರಲ್ಲಿ ಅವರು ತಮಗೋಸ್ಕರವಲ್ಲ, ನಿಮಗೋಸ್ಕರವೇ ಸೇವೆಮಾಡುತ್ತಿದ್ದರು ಎಂಬುದು ಅವರಿಗೆ ಪ್ರಕಟವಾಯಿತು. ದೇವದೂತರು ಸಹ ಇವೇ ಸಂಗತಿಗಳನ್ನು ಕುತೂಹಲಪೂರ್ವಕವಾಗಿ ನೋಡಲು ಬಯಸುತ್ತಿದ್ದಾರೆ.
w08 11/15 ಪುಟ 21 ಪ್ಯಾರ 9
ಯಾಕೋಬ ಮತ್ತು ಪೇತ್ರನ ಪತ್ರಗಳ ಮುಖ್ಯಾಂಶಗಳು
1:10-12. ಅಭಿಷಿಕ್ತ ಕ್ರೈಸ್ತ ಸಭೆಯ ಕುರಿತು ಹಿಂದಿನಕಾಲದ ದೇವರ ಪ್ರವಾದಿಗಳು ಬರೆದ ಗಹನವಾದ ಆಧ್ಯಾತ್ಮಿಕ ಸತ್ಯಗಳನ್ನು ಲಕ್ಷ್ಯವಿಟ್ಟು ನೋಡುವ ಮತ್ತು ಅರ್ಥೈಸಿಕೊಳ್ಳುವ ಅಪೇಕ್ಷೆ ದೇವದೂತರಿಗಿತ್ತು. ಆದರೆ ಆ ಸತ್ಯಗಳು, ಯೆಹೋವನು ಆ ಸಭೆಯೊಂದಿಗೆ ವ್ಯವಹರಿಸಲು ಆರಂಭಿಸಿದಾಗಲೇ ಸ್ಪಷ್ಟವಾದವು. (ಎಫೆ. 3:10, 11) ನಾವು ಆ ದೇವದೂತರ ಮಾದರಿಯನ್ನು ಅನುಸರಿಸುತ್ತಾ, “ದೇವರ ಅಗಾಧವಾದ ವಿಷಯಗಳನ್ನು” ಪರಿಶೋಧಿಸಲು ಪ್ರಯತ್ನಿಸಬೇಕಲ್ಲವೇ?—1 ಕೊರಿಂ. 2:10.
(1 ಪೇತ್ರ 2:25) ನೀವು ದಾರಿತಪ್ಪಿದ ಕುರಿಗಳಂತಿದ್ದಿರಿ, ಆದರೆ ಈಗ ನೀವು ನಿಮ್ಮ ಪ್ರಾಣಗಳನ್ನು ಕಾಯುವ ಕುರುಬನೂ ಮೇಲ್ವಿಚಾರಕನೂ ಆಗಿರುವಾತನ ಬಳಿಗೆ ಹಿಂದಿರುಗಿದ್ದೀರಿ.
it-2 ಪುಟ 565 ಪ್ಯಾರ 3
ಮೇಲ್ವಿಚಾರಕ
“ನಾವೆಲ್ಲರೂ ಕುರಿಗಳಂತೆ ದಾರಿ ತಪ್ಪಿ ತೊಳಲುತ್ತಿದ್ದೆವು” ಎಂದು ಯೆಶಾಯ 53:6 ರಲ್ಲಿ ಹೇಳಲಾಗಿದೆ. ಇದೇ ಮಾತನ್ನು ಪೇತ್ರ ಸಹ ಹೇಳಿದನು. ಅವನು 1 ಪೇತ್ರ 2:25ರಲ್ಲಿ “ನೀವು ನಿಮ್ಮ ಪ್ರಾಣಗಳನ್ನು ಕಾಯುವ ಕುರುಬನೂ ಮೇಲ್ವಿಚಾರಕನೂ ಆಗಿರುವಾತನ ಬಳಿಗೆ ಹಿಂದಿರುಗಿದ್ದೀರಿ” ಎಂದು ಬರೆದನು. ಹಾಗಾದರೆ ವಚನದಲ್ಲಿ ತಿಳಿಸಿರುವ “ಕುರುಬನೂ ಮೇಲ್ವಿಚಾರಕನೂ” ಯಾರು? ಯೇಸು ಕ್ರಿಸ್ತನಾ ಅಥವಾ ಯೆಹೋವನಾ? ಅಂದಿನ ಕ್ರೈಸ್ತರು ತಮ್ಮ ಕುರುಬನಿಂದ ದೂರ ಹೋಗಿದ್ದಾರೆ ಅಂತ ಪೇತ್ರ ಹೇಳಿದ್ದ. ಆದ್ರೆ ಇಲ್ಲಿ ಅವನು, ಕುರುಬ ಅಂತ ಯೇಸುವಿಗೆ ಸೂಚಿಸಿ ಮಾತಾಡುತ್ತಾ ಇಲ್ಲ. ಯಾಕೆಂದರೆ, ಅಂದಿನ ಕ್ರೈಸ್ತರು ಯೆಹೋವನನ್ನು ಬಿಟ್ಟು ದೂರ ಹೋಗಿದ್ದರು. ಅವರು ಯೆಹೋವನ ಬಳಿ ತಿರುಗಿ ಬರಲು ಯೇಸು ಸಹಾಯಮಾಡಿದನು. ಇದರಿಂದ ಈ ವಚನದಲ್ಲಿ ತಿಳಿಸಿದ ಕುರುಬ ಯೆಹೋವನೇ ಅಂತ ಸ್ಪಷ್ಟವಾಗಿ ಗೊತ್ತಾಗುತ್ತೆ. (ಕೀರ್ತ 23:1; 80:1; ಯೆರೆ 23:3; ಯೆಹೆ 34:12) ಮಹಾಕುರುಬನಾದ ಯೆಹೋವನು ಮೇಲ್ವಿಚಾರಕನೂ ಆಗಿದ್ದಾನೆ. ಯೆಹೋವನು ತನ್ನ ಜನರನ್ನು ಪರೀಕ್ಷಿಸುತ್ತಾನೆ. (ಕೀರ್ತ 17:3) ಈ ಪರೀಕ್ಷೆಯಲ್ಲಿ ಕೆಟ್ಟವರಿಗೆ ಶಿಕ್ಷೆ ಕೊಡುತ್ತಾನೆ. ಉದಾಹರಣೆಗೆ, (ಗ್ರೀಕ್ ಪದ-ಎಪಿಸ್ಕೊಪಿ) ಒಂದನೇ ಶತಮಾನದಲ್ಲಿ ಯೆಹೋವನು ಯೆರೂಸಲೇಮಿನ ಮೇಲೆ ತಂದ ತೀರ್ಪಿನಲ್ಲಿ, ಆತನ ಮಾತು ಕೇಳದೇ ಹೋದವರು ನಾಶವಾದರು. (ಲೂಕ 19:44) ಅಷ್ಟೇ ಅಲ್ಲ, ಯೆಹೋವನು ಪರೀಕ್ಷಿಸುವಾಗ ಒಳ್ಳೆಯವರನ್ನು ಅಂದರೆ ಆತನನ್ನು ಯಾರು ಮಹಿಮೆಪಡಿಸುತ್ತಾರೋ ಅವರನ್ನು ಆಶೀರ್ವದಿಸುತ್ತಾನೆ ಸಹ.—1ಪೇತ್ರ 2:12.
ಅಕ್ಟೋಬರ್ 21-27
ಬೈಬಲಿನಲ್ಲಿರುವ ರತ್ನಗಳು | 1 ಪೇತ್ರ 3-5
“ಎಲ್ಲವುಗಳ ಅಂತ್ಯವು ಸಮೀಪಿಸಿದೆ”
(1 ಪೇತ್ರ 4:7) ಆದರೆ ಎಲ್ಲವುಗಳ ಅಂತ್ಯವು ಸಮೀಪಿಸಿದೆ. ಆದುದರಿಂದ ಸ್ವಸ್ಥಚಿತ್ತರಾಗಿರಿ ಮತ್ತು ಪ್ರಾರ್ಥನೆಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ.
w13 11/15 ಪುಟ 3 ಪ್ಯಾರ 1
ಪ್ರಾರ್ಥನೆ ಮಾಡುವ ವಿಷಯದಲ್ಲಿ ಎಚ್ಚರವಾಗಿರಿ
“ರಾತ್ರಿಯಲ್ಲಿ ಎಚ್ಚರವಾಗಿರಲು ತುಂಬ ಕಷ್ಟವಾದ ಹೊತ್ತೆಂದರೆ ಮುಂಜಾವಿಗೆ ಮುಂಚೆ” ಎನ್ನುತ್ತಾರೆ ರಾತ್ರಿಪಾಳಿಯಲ್ಲಿದ್ದ ನೌಕರರೊಬ್ಬರು. ಈ ಮಾತನ್ನು ಕಾರಣಾಂತರದಿಂದ ರಾತ್ರಿಯಿಡೀ ಎಚ್ಚರವಾಗಿರಬೇಕಾದವರು ಕೂಡ ಒಪ್ಪುವರು. ತ್ರದೀತಿ ಎಚ್ಚರವಾಗಿರುವ ಸವಾಲು ಇಂದಿನ ಕ್ರೈಸ್ತರಿಗಿದೆ. ಏಕೆಂದರೆ ಸೈತಾನನ ಈ ದುಷ್ಟ ಲೋಕದ ದೀರ್ಘ ರಾತ್ರಿ ಇನ್ನೇನು ಕೊನೆಗೊಳ್ಳಲಿರುವ ಸಮಯದಲ್ಲಿ ನಾವಿದ್ದೇವೆ. (ರೋಮ. 13:12) ಇಂಥ ಸಮಯದಲ್ಲಿ ನಾವು ನಿದ್ರೆ ಹೋಗುವುದು ಅಪಾಯಕಾರಿ! ಆದ್ದರಿಂದಲೇ ನಾವು “ಸ್ವಸ್ಥಚಿತ್ತ”ರಾಗಿರಬೇಕು ಮತ್ತು ಪ್ರಾರ್ಥನೆ ಮಾಡುವ ವಿಷಯದಲ್ಲಿ ಎಚ್ಚರವಾಗಿರಬೇಕು.—1 ಪೇತ್ರ 4:7.
(1 ಪೇತ್ರ 4:8) ಎಲ್ಲಕ್ಕಿಂತಲೂ ಮಿಗಿಲಾಗಿ ಒಬ್ಬರಿಗೊಬ್ಬರು ಗಾಢವಾದ ಪ್ರೀತಿಯುಳ್ಳವರಾಗಿರಿ; ಏಕೆಂದರೆ ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.
w99 4/15 ಪುಟ 22 ಪ್ಯಾರ 3
ಆತ್ಮಿಕ ಬಲಹೀನತೆಯನ್ನು ಗುರುತಿಸುವ ಮತ್ತು ಜಯಿಸುವ ವಿಧ
ಕೊನೆಯದಾಗಿ, ಅಪೊಸ್ತಲ ಪೇತ್ರನ ಪ್ರೀತಿಪೂರ್ಣ ಬುದ್ಧಿವಾದವನ್ನು ಮನಸ್ಸಿನಲ್ಲಿ ದೃಢವಾಗಿಟ್ಟುಕೊಳ್ಳಿರಿ: “ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; ಆದದರಿಂದ ನೀವು ಜಿತೇಂದ್ರಿಯರಾಗಿಯೂ ಪ್ರಾರ್ಥನೆಗೆ ಸಿದ್ಧವಾಗಿರುವಂತೆ ಸ್ವಸ್ಥಚಿತ್ತರಾಗಿಯೂ ಇರ್ರಿ. ಮೊಟ್ಟಮೊದಲು ನಿಮ್ಮನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ; ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.” (1 ಪೇತ್ರ 4:7, 8) ನಮ್ಮ ಸ್ವಂತ ಹಾಗೂ ಇತರ ಜನರ ಮಾನವ ಅಪರಿಪೂರ್ಣತೆಗಳು ನಮ್ಮ ಹೃದಮನಗಳೊಳಗೆ ನುಸುಳಿ, ಅಡೆತಡೆಗಳಾಗಿ ಪರಿಣಮಿಸುವಂತೆ ಬಿಡುವುದು ಬಹಳ ಸುಲಭ. ಈ ಮಾನವ ಬಲಹೀನತೆಯನ್ನು ಸೈತಾನನು ಚೆನ್ನಾಗಿ ಬಲ್ಲನು. ಒಡಕು ಹುಟ್ಟಿಸಿ ಜಯಿಸುವುದು, ಅವನ ಕುತಂತ್ರಗಳಲ್ಲೊಂದಾಗಿದೆ. ಆದುದರಿಂದ, ನಾವು ಪರಸ್ಪರರಿಗಾಗಿರುವ ತೀವ್ರವಾದ ಪ್ರೀತಿಯಿಂದ ಇಂತಹ ಪಾಪಗಳನ್ನು ಮುಚ್ಚಬೇಕು ಮತ್ತು “ಸೈತಾನನಿಗೆ ಅವಕಾಶಕೊಡ”ದೇ ಇರಬೇಕು.—ಎಫೆಸ 4:25-27.
(1 ಪೇತ್ರ 4:9) ಗುಣುಗುಟ್ಟದೆ ಒಬ್ಬರಿಗೊಬ್ಬರು ಅತಿಥಿಸತ್ಕಾರಮಾಡಿರಿ.
ಅತಿಥಿಸತ್ಕಾರ—ಆನಂದಕರ, ಆವಶ್ಯಕ
2 ಆ ಸಹೋದರರಿಗೆ ಸಹಾಯ ಮಾಡಿದ ಒಂದು ವಿಷಯ ಅತಿಥಿಸತ್ಕಾರ. ಪೇತ್ರನು ಅವರಿಗೆ, “ಒಬ್ಬರಿಗೊಬ್ಬರು ಅತಿಥಿಸತ್ಕಾರಮಾಡಿರಿ” ಎಂದು ಉತ್ತೇಜಿಸಿದನು. (1 ಪೇತ್ರ 4:9) ಅತಿಥಿಸತ್ಕಾರ ಎಂದು ಭಾಷಾಂತರವಾಗಿರುವ ಗ್ರೀಕ್ ಪದದ ಅರ್ಥ “ಅಪರಿಚಿತರಿಗೆ ಪ್ರೀತಿ ಅಥವಾ ದಯೆ ತೋರಿಸುವುದು” ಎಂದಾಗಿದೆ. ಆದರೆ ಪೇತ್ರನು, ಪರಿಚಯವಿದ್ದ ಮತ್ತು ಒಟ್ಟಿಗೆ ಸಹವಾಸ ಮಾಡುತ್ತಿದ್ದ ಸಹೋದರ ಸಹೋದರಿಯರಿಗೆ “ಒಬ್ಬರಿಗೊಬ್ಬರು” ಅತಿಥಿಸತ್ಕಾರ ಮಾಡಿ ಎಂದು ಉತ್ತೇಜಿಸಿದನು. ಅತಿಥಿಸತ್ಕಾರದಿಂದ ಅವರಿಗೆ ಯಾವ ಸಹಾಯ ಸಿಕ್ಕಿತು?
3 ಅತಿಥಿಸತ್ಕಾರ ಮಾಡುವುದರಿಂದ ಅವರು ಒಬ್ಬರಿಗೊಬ್ಬರು ಆಪ್ತರಾಗಬಹುದಿತ್ತು. ನಿಮಗೂ ಇದೇ ಅನುಭವ ಆಗಿದೆಯಾ? ನಿಮ್ಮನ್ನು ಯಾರಾದರೂ ಮನೆಗೆ ಕರೆದಾಗ ನೀವು ಅಲ್ಲಿ ಹೋಗಿ ಸಮಯ ಕಳೆದಿದ್ದು ನಿಮಗೆ ಸಂತೋಷವಾಗಿರಬೇಕಲ್ವಾ? ಅಥವಾ ನಿಮ್ಮ ಮನೆಗೆ ಯಾರನ್ನಾದರೂ ಕರೆದಾಗ ಅವರು ನಿಮಗೆ ಆಪ್ತರಾಗಿರಬೇಕಲ್ವಾ? ನಮ್ಮ ಸಹೋದರ ಸಹೋದರಿಯರನ್ನು ಚೆನ್ನಾಗಿ ತಿಳಿದುಕೊಳ್ಳುವಂಥ ಅತ್ಯುತ್ತಮ ವಿಧ ಅತಿಥಿಸತ್ಕಾರ ಆಗಿದೆ. ಪೇತ್ರನ ಸಮಯದಲ್ಲಿದ್ದ ಕ್ರೈಸ್ತರು ಒಬ್ಬರಿಗೊಬ್ಬರು ಆಪ್ತರಾಗಬೇಕಿತ್ತು. ಯಾಕೆಂದರೆ ಅವರಿಗೆ ಮುಂದೆ ಹೆಚ್ಚು ಕಷ್ಟಗಳು ಬರಲಿದ್ದವು. “ಕಡೇ ದಿವಸಗಳಲ್ಲಿ” ಜೀವಿಸುತ್ತಿರುವ ನಾವು ಸಹ ಒಬ್ಬರಿಗೊಬ್ಬರು ಆಪ್ತರಾಗಲೇಬೇಕು.—2 ತಿಮೊ. 3:1.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(1 ಪೇತ್ರ 3:19, 20) ಈ ಸ್ಥಿತಿಯಲ್ಲಿ ಅವನು ಸೆರೆಯಲ್ಲಿದ್ದ ಆತ್ಮಜೀವಿಗಳಿಗೆ, 20 ಅಂದರೆ ನೋಹನ ದಿನಗಳಲ್ಲಿ ನಾವೆಯು ಕಟ್ಟಲ್ಪಡುತ್ತಿದ್ದಾಗ ದೇವರು ತಾಳ್ಮೆಯಿಂದ ಕಾದುಕೊಂಡಿದ್ದ ಸಮಯದಲ್ಲಿ ಅವಿಧೇಯರಾಗಿದ್ದವರಿಗೆ ಹೋಗಿ ಸಾರಿದನು. ಆ ನಾವೆಯಲ್ಲಿ ಕೆಲವೇ ಮಂದಿ, ಅಂದರೆ ಎಂಟು ಮಂದಿ ನೀರಿನ ಮಧ್ಯೆ ಸುರಕ್ಷಿತವಾಗಿ ಪಾರಾದರು.
w13 6/15 ಪುಟ 23
ವಾಚಕರಿಂದ ಪ್ರಶ್ನೆಗಳು
“ಸೆರೆಯಲ್ಲಿದ್ದ ಆತ್ಮಜೀವಿಗಳಿಗೆ” ಯೇಸು ಸಾರಿದನು ಎನ್ನುತ್ತೆ ಬೈಬಲ್. (1 ಪೇತ್ರ 3:19, 20) ಹಾಗೆಂದರೇನು?
▪ ಅಪೊಸ್ತಲ ಪೇತ್ರ ಹೇಳುತ್ತಿರುವುದು “ನೋಹನ ದಿನಗಳಲ್ಲಿ ನಾವೆಯು ಕಟ್ಟಲ್ಪಡುತ್ತಿದ್ದಾಗ ದೇವರು ತಾಳ್ಮೆಯಿಂದ ಕಾದುಕೊಂಡಿದ್ದ ಸಮಯದಲ್ಲಿ ಅವಿಧೇಯರಾಗಿದ್ದ” ಆತ್ಮಜೀವಿಗಳ ಬಗ್ಗೆ. (1 ಪೇತ್ರ 3:20) ಈ ಆತ್ಮಜೀವಿಗಳು ಸೈತಾನನ ದಂಗೆಯಲ್ಲಿ ಕೈಜೋಡಿಸಿದ್ದರು. ಇವರ ಬಗ್ಗೆ ಯೂದನು ಹೇಳಿದ್ದು: “ತಮ್ಮ ಮೂಲಸ್ಥಾನವನ್ನು ಕಾಪಾಡಿಕೊಳ್ಳದೆ ತಮ್ಮ ಸೂಕ್ತವಾದ ವಾಸಸ್ಥಳವನ್ನು ಬಿಟ್ಟುಬಂದ ದೇವದೂತರಿಗೆ” ದೇವರು “ನಿತ್ಯವಾದ ಬೇಡಿಗಳನ್ನು ಹಾಕಿ ಮಹಾ ದಿನದಲ್ಲಾಗುವ ನ್ಯಾಯತೀರ್ಪಿಗಾಗಿ ದಟ್ಟವಾದ ಕತ್ತಲೆಯಲ್ಲಿ ಇಟ್ಟಿದ್ದಾನೆ.”—ಯೂದ 6.
ನೋಹನ ದಿನದಲ್ಲಿ ಆತ್ಮಜೀವಿಗಳು ಯಾವ ರೀತಿಯಲ್ಲಿ ಅವಿಧೇಯರಾದರು? ಜಲಪ್ರಳಯಕ್ಕೆ ಮುಂಚೆ ಈ ದುಷ್ಟ ಆತ್ಮಜೀವಿಗಳು, ತಮ್ಮನ್ನು ಮಾನವ ರೂಪಕ್ಕೆ ಬದಲಾಯಿಸಿಕೊಂಡರು. ದೇವರು ಅವರನ್ನು ಈ ಉದ್ದೇಶದೊಂದಿಗೆ ಸೃಷ್ಟಿಸಿರಲಿಲ್ಲ. (ಆದಿ. 6:2, 4) ಅಷ್ಟೇ ಅಲ್ಲದೆ ಈ ಆತ್ಮಜೀವಿಗಳು ಸ್ತ್ರೀಯರೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಂಡು ತಮ್ಮ ಸ್ವಭಾವಕ್ಕೆ ವಿರುದ್ಧವಾಗಿ ನಡೆದುಕೊಂಡರು. ದೇವರು ಆತ್ಮಜೀವಿಗಳನ್ನು ಸ್ತ್ರೀಯರೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುವ ಉದ್ದೇಶದೊಂದಿಗೆ ಸೃಷ್ಟಿಸಿಲ್ಲ. (ಆದಿ. 5:2) ಹಾಗಾಗಿ ದೇವರು ಈ ದುಷ್ಟ, ಅವಿಧೇಯ ಆತ್ಮಜೀವಿಗಳನ್ನು ತಕ್ಕ ಸಮಯದಲ್ಲಿ ನಾಶಮಾಡುತ್ತಾನೆ. ಈಗ ಅವು “ದಟ್ಟವಾದ ಕತ್ತಲೆಯಲ್ಲಿ” ಅಂದರೆ ಆಧ್ಯಾತ್ಮಿಕ ಬಂಧಿವಾಸದಲ್ಲಿದ್ದಾರೆ ಎಂದು ಯೂದ ಬರೆದಿದ್ದಾನೆ.
ಯೇಸು ಕ್ರಿಸ್ತನು ‘ಸೆರೆಯಲ್ಲಿದ್ದ ಆತ್ಮಜೀವಿಗಳಿಗೆ’ ಸಾರಿದ್ದು ಯಾವಾಗ ಮತ್ತು ಹೇಗೆ? ಯೇಸು “ಆತ್ಮಜೀವಿಯಾಗಿ ಬದುಕುವಂತಾದ” ಮೇಲೆ ಅಂದರೆ ಪುನರುತ್ಥಾನವಾದ ಮೇಲೆ ಸಾರಿದನೆಂದು ಪೇತ್ರನು ಹೇಳಿದನು. (1 ಪೇತ್ರ 3:18-20) ಯೇಸು “ಸಾರಿದನು” ಎಂದು ಪೇತ್ರ ಹೇಳಿರುವುದನ್ನು ಗಮನಿಸಿ. ಪೇತ್ರ ಬಳಸಿದ ಪದ ಭೂತಕಾಲದಲ್ಲಿರುವುದರಿಂದ ಅವನು ಮೊದಲನೇ ಪತ್ರ ಬರೆಯುವುದಕ್ಕಿಂತ ಮುಂಚೆಯೇ ಯೇಸು ಈ ಸಾರುವ ಕೆಲಸವನ್ನು ಮಾಡಿದ್ದನು ಎಂದು ತಿಳಿಯುತ್ತೆ. ಯೇಸು ದುಷ್ಟಾತ್ಮಗಳಿಗೆ ನಿರೀಕ್ಷೆ ಕೊಡುವ ಯಾವುದೇ ವಿಷಯವನ್ನು ಸಾರಲಿಲ್ಲ. ಬದಲಿಗೆ ನ್ಯಾಯವಾಗಿ ಅವರಿಗೆ ಸಿಗಲಿರುವ ತೀರ್ಪನ್ನು ಘೋಷಿಸಿದನು. (ಯೋನ 1:1, 2) ಯೇಸು ತನ್ನ ನಂಬಿಕೆ ಮತ್ತು ನಿಷ್ಠೆಯನ್ನು ಸಾಯುವವರೆಗೂ ಕಾಪಾಡಿಕೊಂಡನು ಮತ್ತು ಪುನರುತ್ಥಾನ ಹೊಂದಿದನು. ಇದರಿಂದ ತನ್ನ ಮೇಲೆ ಸೈತಾನನಿಗೆ ಯಾವುದೇ ಹಿಡಿತವಿಲ್ಲ ಎಂದು ಸಾಬೀತುಪಡಿಸಿದನು. ಹಾಗಾಗಿ ಸಂಪೂರ್ಣ ಹಕ್ಕಿನಿಂದ ದುಷ್ಟಾತ್ಮಗಳಿಗೆ ದಂಡನಾತ್ಮಕ ಘೋಷಣೆಯನ್ನು ಮಾಡಿದನು.—ಯೋಹಾ. 14:30; 16:8-11.
ಭವಿಷ್ಯತ್ತಿನಲ್ಲಿ ಯೇಸು ಸೈತಾನನನ್ನು ಮತ್ತು ಅವನ ಸಂಗಡಿಗರನ್ನು ಅಗಾಧ ಸ್ಥಳಕ್ಕೆ ದೊಬ್ಬಲಿದ್ದಾನೆ. (ಲೂಕ 8:30, 31; ಪ್ರಕ. 20:1-3) ಅಲ್ಲಿಯ ವರೆಗೆ ಈ ಅವಿಧೇಯ ದುಷ್ಟಾತ್ಮಗಳು ದಟ್ಟವಾದ ಆಧ್ಯಾತ್ಮಿಕ ಅಂಧಕಾರದಲ್ಲಿರುತ್ತವೆ ಮತ್ತು ಅವುಗಳ ನಾಶ ಖಂಡಿತ.—ಪ್ರಕ. 20:7-10.
(1 ಪೇತ್ರ 4:6) ವಾಸ್ತವದಲ್ಲಿ, ಸತ್ತವರು ಮನುಷ್ಯರ ದೃಷ್ಟಿಯಲ್ಲಿ ಶರೀರಪ್ರಕಾರವಾಗಿ ತೀರ್ಪುಹೊಂದಿ ದೇವರ ದೃಷ್ಟಿಯಲ್ಲಿ ಆಧ್ಯಾತ್ಮಿಕವಾಗಿ ಬದುಕುವಂತಾಗಬೇಕೆಂಬ ಉದ್ದೇಶಕ್ಕಾಗಿಯೇ ಅವರಿಗೂ ಸುವಾರ್ತೆಯು ಪ್ರಕಟಿಸಲ್ಪಟ್ಟಿತು.
w08 11/15 ಪುಟ 21 ಪ್ಯಾರ 7
ಯಾಕೋಬ ಮತ್ತು ಪೇತ್ರನ ಪತ್ರಗಳ ಮುಖ್ಯಾಂಶಗಳು
4:6—ಯಾರಿಗೆ ‘ಸುವಾರ್ತೆಯು ತಿಳಿಸಲ್ಪಟ್ಟಿತ್ತೊ’ ಆ “ಸತ್ತಿರುವವರು” ಯಾರು? ಇವರು, ಸುವಾರ್ತೆಯನ್ನು ಕೇಳುವ ಮುಂಚೆ ತಮ್ಮ ‘ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಸತ್ತವರಾಗಿದ್ದರು.’ (ಎಫೆ. 2:1) ಆದರೆ ಅವರು ಸುವಾರ್ತೆಯಲ್ಲಿ ನಂಬಿಕೆಯನ್ನಿಟ್ಟ ಬಳಿಕ, ಆಧ್ಯಾತ್ಮಿಕವಾಗಿ ‘ಜೀವಕ್ಕೆ’ ಬಂದರು.
ಅಕ್ಟೋಬರ್ 28–ನವೆಂಬರ್ 3
ಬೈಬಲಿನಲ್ಲಿರುವ ರತ್ನಗಳು | 2 ಪೇತ್ರ 1–3
“ಯೆಹೋವನ ದಿನದ ಸಾನ್ನಿಧ್ಯವನ್ನು ಎದುರು ನೋಡುತ್ತಾ ಇರಿ”
(2 ಪೇತ್ರ 3:9, 10) ತಡಮಾಡುವ ವಿಷಯದಲ್ಲಿ ಕೆಲವರು ನೆನಸುವ ಪ್ರಕಾರ ತನ್ನ ವಾಗ್ದಾನದ ವಿಷಯದಲ್ಲಿ ಯೆಹೋವನು ತಡಮಾಡುವವನಲ್ಲ, ಬದಲಾಗಿ ಯಾವನಾದರೂ ನಾಶವಾಗುವುದನ್ನು ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪವನ್ನು ಹೊಂದುವುದನ್ನು ಬಯಸುವಾತನಾಗಿರುವುದರಿಂದ ನಿಮ್ಮ ವಿಷಯದಲ್ಲಿ ತಾಳ್ಮೆಯಿಂದಿದ್ದಾನೆ. 10 ಆದರೂ ಯೆಹೋವನ ದಿನವು ಕಳ್ಳನಂತೆ ಬರುವುದು; ಆಗ ಆಕಾಶವು ಹಿಸ್ಸೆಂಬ ಶಬ್ದದಿಂದ ಗತಿಸಿಹೋಗುವುದು; ಘಟಕಾಂಶಗಳು ತೀಕ್ಷ್ಣವಾದ ಕಾವಿನಿಂದಾಗಿ ಉರಿದು ಕರಗಿ ಹೋಗುವವು; ಭೂಮಿಯೂ ಅದರಲ್ಲಿರುವ ಕೆಲಸಗಳೂ ಬಯಲಾಗುವವು.
w07 1/1 ಪುಟ 19 ಪ್ಯಾರ 11
ಯೆಹೋವನು ‘ನ್ಯಾಯವನ್ನು ತೀರಿಸುವನು’
11 ಆದರೆ, ಯೆಹೋವನು “ಬೇಗ” ನ್ಯಾಯತೀರಿಸುವನೆಂಬ ಯೇಸುವಿನ ಆಶ್ವಾಸನೆಯನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ಯೆಹೋವನು ‘ದೀರ್ಘಶಾಂತಿಯುಳ್ಳವನಾದರೂ’ ತಕ್ಕ ಕಾಲದಲ್ಲಿ ಬೇಗನೆ ನ್ಯಾಯತೀರಿಸುವನು ಎಂದು ದೇವರ ವಾಕ್ಯವು ತಿಳಿಸುತ್ತದೆ. (ಲೂಕ 18:7, 8; 2 ಪೇತ್ರ 3:9, 10) ನೋಹನ ದಿನಗಳಲ್ಲಿ ಜಲಪ್ರಳಯ ಬಂದಾಗ ದುಷ್ಟರು ಕೂಡಲೇ ನಾಶವಾದರು. ತದ್ರೀತಿ ಲೋಟನ ದಿನಗಳಲ್ಲಿ ಆಕಾಶದಿಂದ ಬೆಂಕಿ ಸುರಿದಾಗ ದುಷ್ಟರು ಹತರಾದರು. “ಮನುಷ್ಯಕುಮಾರನು ಪ್ರತ್ಯಕ್ಷವಾಗುವ ದಿವಸದಲ್ಲಿ ಅದೇ ರೀತಿಯಾಗಿ ಇರುವದು” ಎಂದು ಯೇಸು ಹೇಳಿದನು. (ಲೂಕ 17:27-30) ಇನ್ನೊಮ್ಮೆ ದುಷ್ಟರ ಮೇಲೆ ನಾಶನವು “ಫಕ್ಕನೆ” ಬರುವುದು. (1 ಥೆಸಲೊನೀಕ 5:2, 3, NIBV) ಸೈತಾನನ ಲೋಕವನ್ನು ನ್ಯಾಯವು ಅವಶ್ಯಪಡಿಸುವುದಕ್ಕಿಂತ ಒಂದು ದಿನ ಸಹ ಹೆಚ್ಚಾಗಿ ಅಸ್ತಿತ್ವದಲ್ಲಿರುವಂತೆ ಯೆಹೋವನು ಬಿಡುವುದಿಲ್ಲ ಎಂಬ ಪೂರ್ಣ ಭರವಸೆ ನಮಗಿರಬಲ್ಲದು.
(2 ಪೇತ್ರ 3:11, 12) ಇವುಗಳೆಲ್ಲವೂ ಹೀಗೆ ಲಯವಾಗಿ ಹೋಗುವುದರಿಂದ ನೀವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದನ್ನು ಆಲೋಚಿಸಿರಿ. ನೀವು ಪವಿತ್ರ ನಡತೆಯುಳ್ಳವರೂ ದೇವಭಕ್ತಿಯ ಕ್ರಿಯೆಗಳುಳ್ಳವರೂ ಆಗಿರಬೇಕು, 12 ಏಕೆಂದರೆ ನೀವು ಯೆಹೋವನ ದಿನದ ಸಾನ್ನಿಧ್ಯವನ್ನು ಎದುರುನೋಡುತ್ತಾ ಮನಸ್ಸಿನಲ್ಲಿ ನಿಕಟವಾಗಿ ಇಡುತ್ತಾ ಇದ್ದೀರಲ್ಲಾ. ಆ ದಿನದಲ್ಲಿ ಆಕಾಶವು ಬೆಂಕಿ ಹೊತ್ತಿ ಲಯವಾಗಿ ಹೋಗುವುದು ಮತ್ತು ಘಟಕಾಂಶಗಳು ಅತಿಯಾದ ಉಷ್ಣತೆಯಿಂದ ಕರಗಿಹೋಗುವವು.
w07 1/1 ಪುಟ 11 ಪ್ಯಾರ 18
“ಯೆಹೋವನ ಮಹಾದಿನವು ಹತ್ತಿರವಾಯಿತು”
18 ಆದುದರಿಂದಲೇ ನಾವು “ಯೆಹೋವನ ದಿನದ ಪ್ರತ್ಯಕ್ಷತೆ”ಗಾಗಿ ಹಾರೈಸುತ್ತಾ ಇರುವಂತೆ ಅಪೊಸ್ತಲ ಪೇತ್ರನು ಉತ್ತೇಜಿಸಿದನು. ನಾವಿದನ್ನು ಹೇಗೆ ಮಾಡಬಲ್ಲೆವು? ಒಂದು ವಿಧವು, “ನಡವಳಿಕೆಯ ಪವಿತ್ರ ಕೃತ್ಯಗಳು ಹಾಗೂ ದೇವಭಕ್ತಿಯ ಕ್ರಿಯೆ”ಗಳಲ್ಲಿ ಮಗ್ನರಾಗಿರುವ ಮೂಲಕವೇ. (2 ಪೇತ್ರ 3:11, 12, NW) ಇಂಥ ಚಟುವಟಿಕೆಗಳಲ್ಲಿ ನಿರತರಾಗಿರುವುದು, ನಾವು ‘ಯೆಹೋವನ ದಿನದ’ ಆಗಮನಕ್ಕಾಗಿ ಕಾತರದಿಂದ ಕಾಯುತ್ತಾ ಇರಲು ಸಹಾಯಮಾಡುವುದು. ‘ಹಾರೈಸುತ್ತಾ ಇರು’ ಎಂಬುದಕ್ಕಾಗಿರುವ ಗ್ರೀಕ್ ಪದಕ್ಕೆ, ‘ತ್ವರೆಪಡಿಸು’ ಎಂಬ ಅಕ್ಷರಾರ್ಥವಿದೆ. ಯೆಹೋವನ ದಿನದ ಆಗಮನಕ್ಕಾಗಿ ಉಳಿದಿರುವ ಸಮಯವನ್ನು ನಾವು ನಿಜವಾಗಿ ತ್ವರೆಗೊಳಿಸಲು ಸಾಧ್ಯವಿಲ್ಲ. ಆದರೆ ನಾವು ಆ ದಿನಕ್ಕಾಗಿ ಕಾಯುತ್ತಾ, ಅದೇ ಸಮಯದಲ್ಲಿ ದೇವರ ಸೇವೆಯಲ್ಲಿ ಕಾರ್ಯಮಗ್ನರಾಗಿರುವುದಾದರೆ ನಮಗೆ ಸಮಯ ಹೋದದ್ದೇ ಗೊತ್ತಾಗುವುದಿಲ್ಲ.—1 ಕೊರಿಂಥ 15:58.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(2 ಪೇತ್ರ 1:19) ಇದರಿಂದಾಗಿ ಪ್ರವಾದನ ವಾಕ್ಯವು ನಮಗೆ ಇನ್ನಷ್ಟು ಹೆಚ್ಚು ದೃಢಪಡಿಸಲ್ಪಟ್ಟಿದೆ; ದಿನವು ಬೆಳಗಿ ಉದಯ ನಕ್ಷತ್ರವು ಮೂಡುವ ವರೆಗೆ ನೀವು ಆ ವಾಕ್ಯವನ್ನು ನಿಮ್ಮ ಹೃದಯಗಳಲ್ಲಿ ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುತ್ತಿರುವ ದೀಪವೆಂದೆಣಿಸಿ ಅದಕ್ಕೆ ಗಮನ ಕೊಡುವುದು ಒಳ್ಳೇದು.
w08 11/15 ಪುಟ 22 ಪ್ಯಾರ 2
ಯಾಕೋಬ ಮತ್ತು ಪೇತ್ರನ ಪತ್ರಗಳ ಮುಖ್ಯಾಂಶಗಳು
1:19—“ಬೆಳ್ಳಿ” ಅಥವಾ “ಉದಯ ನಕ್ಷತ್ರ” ಯಾರು? ಅವನು ಯಾವಾಗ ಉದಯಿಸುತ್ತಾನೆ, ಮತ್ತು ಅವನು ಉದಯಿಸಿದ್ದಾನೆಂದು ನಮಗೆ ಹೇಗೆ ಗೊತ್ತು? “ಬೆಳ್ಳಿಯು,” ರಾಜ್ಯಾಧಿಕಾರವಿರುವ ಯೇಸು ಕ್ರಿಸ್ತನಾಗಿದ್ದಾನೆ. (ಪ್ರಕ. 22:16) 1914ರಲ್ಲಿ ಯೇಸು, ಮೆಸ್ಸೀಯ ರಾಜನಾಗಿ ಇಡೀ ಸೃಷ್ಟಿಯ ಮುಂದೆ ಉದಯಿಸುತ್ತಾ, ಹೊಸ ದಿನವೊಂದರ ಆಗಮನವನ್ನು ಸೂಚಿಸಿದನು. ರೂಪಾಂತರ ದರ್ಶನವು, ಯೇಸುವಿನ ಮಹಿಮೆ ಹಾಗೂ ರಾಜ್ಯಾಧಿಕಾರದ ಕುರಿತು ಮುನ್ನೋಟವನ್ನು ಕೊಟ್ಟಿತ್ತು ಮತ್ತು ದೇವರ ಪ್ರವಾದನಾ ವಾಕ್ಯದ ನಿಶ್ಚಿತತೆಯನ್ನು ಒತ್ತಿಹೇಳಿತು. ಆ ವಾಕ್ಯಕ್ಕೆ ಲಕ್ಷ್ಯಕೊಡುವುದು ನಮ್ಮ ಹೃದಯಗಳನ್ನು ಬೆಳಗಿಸುತ್ತದೆ, ಮತ್ತು ಹೀಗೆ ಆ ಬೆಳ್ಳಿ ಉದಯಿಸಿದೆಯೆಂದು ನಮಗೆ ತಿಳಿದುಬರುತ್ತದೆ.
(2 ಪೇತ್ರ 2:4) ಪಾಪಮಾಡಿದ ದೇವದೂತರನ್ನು ದೇವರು ಸುಮ್ಮನೆ ಬಿಡದೆ, ಅವರನ್ನು ಟಾರ್ಟರಸ್ಗೆ ದೊಬ್ಬುವ ಮೂಲಕ ನ್ಯಾಯತೀರ್ಪನ್ನು ಹೊಂದುವುದಕ್ಕೆ ಕಾದಿರಿಸಲ್ಪಟ್ಟವರಾಗಿ ದಟ್ಟವಾದ ಕತ್ತಲೆ ಗುಂಡಿಗಳಿಗೆ ಒಪ್ಪಿಸಿದನು.
w08 11/15 ಪುಟ 22 ಪ್ಯಾರ 3
ಯಾಕೋಬ ಮತ್ತು ಪೇತ್ರನ ಪತ್ರಗಳ ಮುಖ್ಯಾಂಶಗಳು
2:4—ಇಲ್ಲಿ “ಟಾರ್ಟರಸ್” ಎಂದರೇನು, ಮತ್ತು ದಂಗೆಕೋರ ದೇವದೂತರನ್ನು ಯಾವಾಗ ಅದರಲ್ಲಿ ಎಸೆಯಲಾಯಿತು? ಇಲ್ಲಿ ‘ನರಕ’ ಎಂದು ಭಾಷಾಂತರಿಸಲಾಗಿರುವ ಮೂಲಭಾಷೆಯ ಪದವು “ಟಾರ್ಟರಸ್” ಆಗಿದೆ. ಇದು ಒಂದು ಬಂಧಿವಾಸದಂಥ ಸ್ಥಿತಿಯಾಗಿದೆ. ಮಾನವರನ್ನಲ್ಲ ಬದಲಾಗಿ ಕೇವಲ ಆತ್ಮಜೀವಿಗಳನ್ನು ಆ ಸ್ಥಿತಿಗೆ ದೊಬ್ಬಲಾಗುತ್ತದೆ. ದೇವರ ಉಜ್ವಲ ಉದ್ದೇಶಗಳ ಕುರಿತ ಮಾನಸಿಕ ಗಾಢ ಅಂಧಕಾರದ ಸ್ಥಿತಿ ಅದಾಗಿದೆ. ಅಲ್ಲಿರುವವರಿಗೆ ಭವಿಷ್ಯತ್ತಿಗಾಗಿ ಯಾವುದೇ ನಿರೀಕ್ಷೆಯಿಲ್ಲ. ನೋಹನ ದಿನಗಳಲ್ಲಿ ದೇವರು ಅವಿಧೇಯ ದೂತರನ್ನು ಟಾರ್ಟರಸ್ಗೆ ದೊಬ್ಬಿದನು. ಅವರ ನಾಶನವಾಗುವ ವರೆಗೂ ಅವರು ಆ ಕೀಳಾದ ಸ್ಥಿತಿಯಲ್ಲಿ ಉಳಿಯುವರು.