ನಂಬುವವರನ್ನು ರಕ್ಷಿಸಲು ಯೆಹೋವನ “ಹುಚ್ಚುತನದ” ಬಳಸುವಿಕೆ
“ಹೇಗಂದರೆ ಲೋಕವು ಜ್ಞಾನವೆನಿಸುವ ಮಾರ್ಗದಿಂದ ದೇವರನ್ನು ತಿಳುಕೊಳ್ಳದೆ ಹೋದದ್ದು ದೇವರ ಜ್ಞಾನದ ಸಂಕಲ್ಪವೇ; ಹೀಗಾದ ಮೇಲೆ ಹುಚ್ಚುಮಾತು ಎಣಿಸಿಕೊಂಡಿರುವ ನಮ್ಮ ಪ್ರಸಂಗದಿಂದಲೇ ನಂಬುವವರನ್ನು ರಕ್ಷಿಸುವದು ದೇವರಿಗೆ ಒಳ್ಳೇದೆಂದು ತೋಚಿತು.”—1 ಕೊರಿಂಥ 1:21.
1. ಯಾವ ಅರ್ಥದಲ್ಲಿ ಯೆಹೋವನು “ಹುಚ್ಚುತನ”ವನ್ನು ಬಳಸುತ್ತಾನೆ, ಮತ್ತು ಲೋಕವು ಅದರ ಜ್ಞಾನದೊಂದಿಗೆ ದೇವರನ್ನು ತಿಳಿದುಕೊಂಡಿಲ್ಲವೆಂದು ನಾವು ಹೇಗೆ ಬಲ್ಲೆವು?
ಏನು? ಯೆಹೋವನು ಹುಚ್ಚುಮಾತನ್ನು ಬಳಸುವನೇ? ನಿಜವಾಗಿ ಇಲ್ಲ! ಆದರೆ ಲೋಕಕ್ಕೆ ಹುಚ್ಚುತನ ಎಂದು ಕಾಣಿಸಿಕೆಳ್ಳುವದನ್ನು ಅವನು ಉಪಯೋಗಿಸಸಾಧ್ಯವಿದೆ ಮತ್ತು ಉಪಯೋಗಿಸುತ್ತಾನೆ. ಅವನನ್ನು ತಿಳಿದಿರುವ ಮತ್ತು ಪ್ರೀತಿಸುವ ಜನರನ್ನು ರಕ್ಷಿಸಲಿಕ್ಕೋಸ್ಕರ ಅವನು ಹಾಗೆ ಮಾಡುತ್ತಾನೆ. ಲೋಕದ ಜ್ಞಾನದ ಮೂಲಕ, ಅದು ದೇವರನ್ನು ತಿಳಿದುಕೊಳ್ಳಲು ಶಕ್ತವಾಗಿಲ್ಲ. ಇದನ್ನು ಅವನು ಪ್ರಾರ್ಥನೆಯಲ್ಲಿ ಹೀಗೆ ಹೇಳಿದಾಗ, ಯೇಸು ಕ್ರಿಸ್ತನು ಸ್ಪಷ್ಟಗೊಳಿಸಿದನು: “ನೀತಿಸ್ವರೂಪನಾದ ತಂದೆಯೇ, ಲೋಕವಂತೂ ನಿನ್ನನ್ನು ತಿಳಿಯಲಿಲ್ಲ.”—ಯೋಹಾನ 17:25.
2. ಯೆಹೋವನ ಮಾರ್ಗಗಳು ಮತ್ತು ಲೋಕದ ಮಾರ್ಗಗಳು ಒಂದಕ್ಕೊಂದು ಸಮಾನಾಂತರವಾಗಿ ಹೋಗುತ್ತವೆ ಎಂದು ಹೇಗೆ ಭಾಸವಾಗಬಹುದು, ಆದರೆ ವಾಸ್ತವಾಂಶಗಳೇನು?
2 ಲೋಕದ ರೀತಿಗಳಿಗಿಂತ ದೇವರ ಮಾರ್ಗಗಳು ಭಿನ್ನವಾಗಿವೆ ಎಂದು ಯೇಸುವಿನ ಮಾತುಗಳು ತೋರಿಸುತ್ತವೆ. ಮೇಲ್ಮೈಯಲ್ಲಿ ದೇವರ ಉದ್ದೇಶ ಮತ್ತು ಲೋಕದ್ದು ಸಮಾನಾಂತರವಾಗಿ ಹೋಗುತ್ತಾ ಇವೆಯೊ ಎಂಬಂತೆ ತೋರಬಹುದು. ಈ ಲೋಕದ ಧ್ಯೇಯಗಳಿಗೆ ದೇವರ ಆಶೀರ್ವಾದವಿದೆಯೊ ಎಂಬಂತೆ ಭಾಸವಾಗಬಹುದು. ಉದಾಹರಣೆಗೆ, ಭೂಮಿಯ ಮೇಲೆ ಮಾನವಕುಲಕ್ಕೆ ಶಾಂತಿ, ಸಂತೋಷ, ಮತ್ತು ಅಭ್ಯುದಯದ ಜೀವಿತವನ್ನು ತರುವ ನೀತಿಯ ಒಂದು ಸರಕಾರವನ್ನು ದೇವರು ಸ್ಥಾಪಿಸುವನು ಎಂದು ಬೈಬಲ್ ಹೇಳುತ್ತದೆ. (ಯೆಶಾಯ 9:6, 7; ಮತ್ತಾಯ 6:10) ತದ್ರೀತಿಯಲ್ಲಿ, ಜನರಿಗೆ ಶಾಂತಿ, ಅಭ್ಯುದಯ, ಮತ್ತು ಒಳ್ಳೆಯ ಸರಕಾರವನ್ನು ಹೊಸ ಲೋಕ ಕ್ರಮವೆಂದೆಣಿಸುವುದರ ಮೂಲಕ ಕೊಡುವುದು ಅದರ ಉದ್ದೇಶವಾಗಿದೆ ಎಂದು ಲೋಕವು ಘಂಟಾಘೋಷವಾಗಿ ಹೇಳುತ್ತದೆ. ಆದರೆ ದೇವರ ಉದ್ದೇಶಗಳು ಮತ್ತು ಲೋಕದವುಗಳು ಒಂದೇ ಆಗಿರುವದಿಲ್ಲ. ವಿಶ್ವದ ವರಿಷ್ಠಸಾರ್ವಭೌಮನೋಪಾದಿ ತನ್ನನ್ನು ಸಮರ್ಥಿಸಿಕೊಳ್ಳುವುದು ಯೆಹೋವನ ಉದ್ದೇಶವಾಗಿದೆ. ಇದನ್ನು ಭೂಮಿಯ ಎಲ್ಲಾ ಸರಕಾರಗಳನ್ನು ಸ್ವರ್ಗೀಯ ಸರಕಾರವೊಂದರ ಮೂಲಕ ನಿರ್ಮೂಲಗೊಳಿಸುವದರಿಂದ ಅವನು ಮಾಡಲಿದ್ದಾನೆ. (ದಾನಿಯೇಲ 2:44; ಪ್ರಕಟನೆ 4:11; 12:10) ಆದುದರಿಂದ ದೇವರಿಗೆ ಈ ಲೋಕದೊಂದಿಗೆ ಸರಿಗಟ್ಟುವ ಸಮಾನಸ್ತರದ ಯಾವುದೇ ಒಂದು ಸಂಗತಿಯಿಲ್ಲ. (ಯೋಹಾನ 18:36; 1 ಯೋಹಾನ 2:15-17) ಆದುದರಿಂದಲೇ ಬೈಬಲು ಎರಡು ತೆರದ ಜ್ಞಾನಗಳ ಕುರಿತು ಮಾತಾಡುತ್ತದೆ—“ದೇವರ ಜ್ಞಾನ” ಮತ್ತು “ಲೋಕದ ಜ್ಞಾನ.”—1 ಕೊರಂಥ 1:20, 21.
ಲೌಕಿಕ ಜ್ಞಾನದ ಮೂಲಭೂತ ನ್ಯೂನತೆ
3. ಲೋಕದ ಜ್ಞಾನವು ಪ್ರಭಾವಯುಕ್ತವಾಗಿದೆಯೆಂದು ತೋರಬಹುದಾದರೂ, ಮಾನವ ವಾಗ್ದಾನಿತ ಹೊಸ ಲೋಕ ಕ್ರಮವು ಎಂದಿಗೂ ತೃಪ್ತಿದಾಯಕವಾಗಿರದು ಯಾಕೆ?
3 ದೇವರ ಜ್ಞಾನದಿಂದ ಮಾರ್ಗದರ್ಶಿಸಲ್ಪಡದವರಿಗೆ ಲೋಕದ ಜ್ಞಾನವು ಪ್ರಭಾವಯುಕ್ತವಾಗಿ ತೋರುತ್ತದೆ. ಮನಸ್ಸನ್ನು ಮುಗ್ಧಗೊಳಿಸುವ ಉನ್ನತ ಸ್ವರದ ಲೌಕಿಕ ತತ್ವಜ್ಞಾನವು ಅಲ್ಲಿರುತ್ತದೆ. ಉನ್ನತ ಕಲಿಕೆಯ ಶಿಕ್ಷಣವನ್ನೀಯುವ ಸಾವಿರಾರು ಸಂಸ್ಥೆಗಳು ಅನೇಕರು ಎಣಿಸುವ ಮನುಕುಲದ ಶ್ರೇಷ್ಠ ತಲೆಗಳಿಂದ ಸಮಾಚಾರವನ್ನು ಒದಗಿಸುತ್ತವೆ. ಶತಕಗಳ ಮಾನವ ಅನುಭವದ ಸಂಗ್ರಹಿಸಲ್ಪಟ್ಟ ಜ್ಞಾನದೊಂದಿಗೆ ವಿಸ್ತಾರವಾದ ಪುಸ್ತಕಾಲಯಗಳು ಸಂಪೂರಿತವಾಗಿವೆ. ಇದೆಲ್ಲಾದರ ಹೊರತಾಗಿಯೂ, ಲೋಕದ ಧುರೀಣರು ಪ್ರಸ್ತಾಪಿಸುವ ಹೊಸ ಲೋಕ ಕ್ರಮವು, ಕೇವಲ ಅಪರಿಪೂರ್ಣ, ಪಾಪದಿಂದ ಕಳಂಕಿತ, ಮೃತಪ್ರಾಯಗೊಳ್ಳುವ ಮನುಷ್ಯರ ಒಂದು ಆಡಳಿತೆ ಮಾತ್ರವಾಗಿರಬಲ್ಲದು. ಆದಕಾರಣ, ಆ ವ್ಯವಸ್ಥೆಯು ಕೂಡ ಅಪರಿಪೂರ್ಣವಾದದ್ದಾಗಿದ್ದು, ಗತಕಾಲದ ಅನೇಕ ಪ್ರಮಾದಗಳನ್ನು ಮರುಕೊಳಿಸುತ್ತಾ, ಮಾನವ ಕುಲದ ಆವಶ್ಯಕತೆಗಳೆಲ್ಲವುಗಳನ್ನು ಎಂದಿಗೂ ತೃಪ್ತಿಗೊಳಿಸಶಕ್ಯವಿಲ್ಲದ್ದಾಗಿದೆ.—ರೋಮಾಪುರ 3:10-12; 5:12.
4. ಪ್ರಸ್ತಾಪಿತ ಹೊಸ ಲೋಕ ಕ್ರಮವು ಯಾವುದೆಕ್ಕೆ ಅಧೀನವಾಗಿದೆ, ಮತ್ತು ಯಾವ ಫಲಿತಾಂಶದೊಂದಿಗೆ?
4 ಮಾನವ ಪ್ರಸ್ತಾಪಿತ ಹೊಸ ಲೋಕ ಕ್ರಮವು ಕೇವಲ ಮಾನವ ದೌರ್ಬಲ್ಯಗಳಿಗೆ ಆಧೀನವಾಗಿರುವದು ಮಾತ್ರವಲ್ಲ, ದುಷ್ಟ ಆತ್ಮ ಜೀವಿಗಳ—ಹೌದು, ಪಿಶಾಚನಾದ ಸೈತಾನನ ಮತ್ತು ಅವನ ದೆವ್ವಗಳ ಪ್ರಭಾವದ ಕೆಳಗೂ ಇರುವವು. ಅವರು “ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆ”ಯಲ್ಲಿ ನಂಬಿಕೆಯಿಡದಂತೆ, ಸೈತಾನನು ಜನರ ಮನಸ್ಸುಗಳನ್ನು ಮಂಕುಗೊಳಿಸಿದ್ದಾನೆ. (2 ಕೊರಿಂಥ 4:3, 4; ಎಫೆಸ 6:12) ತತ್ಪರಿಣಾಮವಾಗಿ, ಲೋಕವು ಒಂದರ ನಂತರ ಇನ್ನೊಂದು ಅಕ್ರಮದಿಂದ ಬಾಧಿಸಲ್ಪಡುತ್ತದೆ. ದೇವರ ಸಹಾಯವಿಲ್ಲದೆ ಮತ್ತು ದೈವಿಕ ಚಿತ್ತದ ಕಡೆಗೆ ಯಾವುದೆ ಪರಿಗಣನೆಯಿಲ್ಲದೆ ಅದು ತನ್ನನ್ನು ಸ್ವತಃ ಆಳಿಕೊಳ್ಳುವ ಅದರ ವಿಪತ್ಕಾರಕ ಪ್ರಯತ್ನದಲ್ಲಿ ಹೋರಾಟ ನಡಿಸುತ್ತದೆ ಮತ್ತು ರೋದಿಸುತ್ತದೆ. (ಯೆರೆಮೀಯ 10:23; ಯಾಕೋಬ 3:15, 16) ಈ ರೀತಿಯಲ್ಲಿ, ಅಪೊಸ್ತಲ ಪೌಲನು ಹೇಳಿದಂತೆ, “ಲೋಕವು ಜ್ಞಾನವೆನಿಸುವ ಮಾರ್ಗದಿಂದ ದೇವರನ್ನು ತಿಳುಕೊಳ್ಳದೆ ಹೋಗಿ”ರುತ್ತದೆ.—1 ಕೊರಿಂಥ 1:21.
5. ಈ ಲೋಕದ ಜ್ಞಾನದ ಮೂಲಭೂತ ನ್ಯೂನತೆ ಏನು?
5 ಹಾಗಾದರೆ, ಹೊಸ ಲೋಕ ಕ್ರಮವೊಂದರ ಅದರ ಯೋಜನೆಗಳ ಸಹಿತ, ಈ ಲೋಕದ ಜ್ಞಾನದಲ್ಲಿ, ಮೂಲಭೂತ ನ್ಯೂನತೆ ಏನು? ಅದು ಯಾವುದನ್ನು ಯಶಸ್ವಿಯಾಗಿ ಎಂದಿಗೂ ನಗಣ್ಯಮಾಡಸಾಧ್ಯವಿಲ್ಲವೋ—ಯೆಹೋವ ದೇವರ ವರಿಷ್ಠ ಸಾರ್ವಭೌಮತ್ವವನ್ನು ಲೋಕವು ಅಲಕ್ಷ್ಯಿಸುತ್ತಿರುವದೇ ಆಗಿದೆ. ದೈವಿಕ ಸಾರ್ವಭೌಮತ್ವವನ್ನು ಅಂಗೀಕರಿಸಲು ಅದು ದರ್ಪದಿಂದ ನಿರಾಕರಿಸುತ್ತದೆ. ಲೋಕವು ಅದರ ಎಲ್ಲಾ ಯೋಜನೆಗಳಿಂದ ಯೆಹೋವನನ್ನು ಉದ್ದೇಶಪೂರ್ವಕವಾಗಿ ತ್ಯಜಿಸುತ್ತದೆ ಮತ್ತು ಅದರ ಸ್ವಂತ ಸಾಮರ್ಥ್ಯ ಮತ್ತು ತಂತ್ರಗಳ ಮೇಲೆ ಅದು ಆಧರಿಸುತ್ತದೆ. (ಹೋಲಿಸಿರಿ ದಾನಿಯೇಲ 4:31-34; ಯೋಹಾನ 18:37.) “ಯೆಹೋವನ ಭಯವೇ ಜ್ಞಾನಕ್ಕೆ ಮೂಲವು” ಎಂದು ಬೈಬಲ್ ಬಹಳ ಸ್ಪಷ್ಟವಾಗಿ ಹೇಳಿದೆ. (ಜ್ಞಾನೋಕ್ತಿ 9:10; ಕೀರ್ತನೆ 111:10) ಆದರೂ, ಜ್ಞಾನದ ಈ ಮೂಲಭೂತ ಅವಶ್ಯಕತೆಯನ್ನು ಕೂಡ ಲೋಕವು ಕಲಿತಿಲ್ಲ. ಆದಕಾರಣ, ದೈವಿಕ ಬೆಂಬಲವಿಲ್ಲದೆ ಅದು ಹೇಗೆ ಯಶಸ್ವಿಗೊಳ್ಳಬಹುದು?—ಕೀರ್ತನೆ 127:1.
ರಾಜ್ಯದ ಸಾರುವಿಕೆ—ಹುಚ್ಚುತನ ಯಾ ವ್ಯಾವಹಾರಿಕ?
6, 7. (ಎ)ದೇವರ ಜ್ಞಾನದಿಂದ ನಡಿಸಲ್ಪಟ್ಟವರು ಯಾವುದನ್ನು ಸಾರುತ್ತಾರೆ, ಆದರೆ ಲೋಕವು ಅವರನ್ನು ಹೇಗೆ ದೃಷ್ಟಿಸುತ್ತದೆ? (ಬಿ)ಕ್ರಿಸ್ತ ಪ್ರಪಂಚದ ವೈದಿಕರು ಯಾರ ಜ್ಞಾನಕ್ಕನುಸಾರ ಸಾರುತ್ತಾರೆ, ಮತ್ತು ಯಾವ ಫಲಿತಾಂಶದೊಂದಿಗೆ?
6 ಇನ್ನೊಂದು ಪಕ್ಕದಲ್ಲಿ, ದೇವರನ್ನು ತಿಳಿದವರು ದೇವರ ಜ್ಞಾನವನ್ನು ಪ್ರದರ್ಶಿಸುತ್ತಾರೆ ಮತ್ತು ಅದರಿಂದ ಮಾರ್ಗದರ್ಶಿಸಲ್ಪಡುವಂತೆ ಆಯ್ಕೆಮಾಡುತ್ತಾರೆ. ಯೇಸುವು ಮುನ್ನುಡಿದಂತೆ, ಅವರು “ರಾಜ್ಯದ ಸುವಾರ್ತೆಯನ್ನು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ” ಸಾರುತ್ತಾರೆ. (ಮತ್ತಾಯ 24:14; 28:19, 20) ಹೋರಾಟ, ಮಾಲಿನ್ಯ, ದಾರಿದ್ರ್ಯತನ, ಮತ್ತು ಮಾನವ ಸಂಕಷ್ಟಗಳಿಂದ ನಮ್ಮ ಪೃಥ್ವಿಯು ತುಂಬಿರುವಾಗ, ಅಂಥ ಸಾರುವಿಕೆಯು ಈಗ ವ್ಯಾವಹಾರಿಕವೇ? ಲೌಕಿಕವಾದ ಜ್ಞಾನಿಗಳಿಗೆ ದೇವರ ರಾಜ್ಯದ ಅಂಥಾ ಸಾರುವಿಕೆಯು ಶುದ್ಧವ್ಯರ್ಥದ ಹುಚ್ಚುತನವಾಗಿ, ವ್ಯಾವಹಾರ್ಯ ಕೊರತೆಯುಳ್ಳದ್ದಾಗಿ ಭಾಸವಾಗುತ್ತದೆ. ರಾಷ್ಟ್ರದ ಹಡಗಿಗೆ ಭಾರ ಹೆಚ್ಚಿಸುವ ಕಲ್ಲಾಯಿ (ಚಿಪ್ಪುಜಂತು)ಗಳೋಪಾದಿ ಮತ್ತು ಅದರ್ಶಪ್ರಾಯ ರಾಜಕೀಯ ಸರಕಾರದೆಡೆಗೆ ಅದರ ಪ್ರಗತಿಯನ್ನು ವೀಕ್ಷಿಸುತ್ತಾರೆ. ಇದರಲ್ಲಿ ಅವರು ಈ ಲೋಕದ ಜ್ಞಾನದ ಪ್ರಕಾರ ಕಲಿಸುವ ಕ್ರಿಸ್ತಪ್ರಪಂಚದ ವೈದಿಕರಿಂದ ಬೆಂಬಲಿಸಲ್ಪಟ್ಟಿದ್ದಾರೆ ಮತ್ತು ಕ್ರಿಸ್ತನ ಪ್ರಾಮುಖ್ಯ ಬೋಧನೆಯಾಗಿತ್ತಾದರೂ, ದೇವರ ಹೊಸ ಲೋಕ ಮತ್ತು ಅದರ ರಾಜ್ಯ ಸರಕಾರದ ಕುರಿತು ಜನರು ಏನು ತಿಳಿಯುವ ಆವಶ್ಯಕತೆಯಿದೆಯೋ ಅದನ್ನು ಅವರು ಜನರಿಗೆ ಹೇಳುವದಿಲ್ಲ.—ಮತ್ತಾಯ 4:17; ಮಾರ್ಕ 1:14, 15.
7 ಇತಿಹಾಸಗಾರ ವಿಚ್.ಜಿ. ವೆಲ್ಸ್ ಕ್ರಿಸ್ತಪ್ರಪಂಚದ ವೈದಿಕರ ಈ ಸೋಲನ್ನು ಗಮನಕ್ಕೆ ತಂದಿದ್ದಾನೆ. ಅವನು ಬರೆದದ್ದು: “ಪರಲೋಕ ರಾಜ್ಯವೆಂದು ಅವನು ಯಾವುದನ್ನು ಕರೆದನೋ ಅದರ ಕಲಿಸುವಿಕೆಗೆ ಯೇಸುವಿನಿಂದ ಬಹಳ ವ್ಯಾಪಕವಾದ ಪ್ರಾಮುಖ್ಯತೆಯು ಕೊಡಲ್ಪಟ್ಟದ್ದು ಮತ್ತು ಕ್ರಿಸ್ತ ಚರ್ಚುಗಳಲ್ಲಿ ತುಲನಾತ್ಮಕವಾಗಿ ಅದಕ್ಕಿರುವ ಕಡಿಮೆ ಪ್ರಾಮುಖ್ಯತೆಯು ಗಮನಾರ್ಹವಾಗಿದೆ.” ಆದರೂ, ಈ ಸಂತತಿಯ ಜನರು ಜೀವವನ್ನು ಗಳಿಸಬೇಕಾದರೆ, ಅವರು ಮೊದಲು ದೇವರ ಸ್ಥಾಪಿತ ರಾಜ್ಯತ ಕುರಿತಾಗಿ ಆಲಿಸತಕ್ಕದ್ದು ಮತ್ತು ಅದನ್ನು ಪೂರೈಸಬೇಕಾದರೆ, ಯಾರಾದರೂ ಅದರ ಸುವಾರ್ತೆಯ ಕುರಿತು ಸಾರಲೇಬೇಕು.—ರೋಮಾಪುರ 10:14, 15.
8. ದೇವರ ಸುವಾರ್ತೆಯನ್ನು ಸಾರುವುದು ಇಂದು ಮಾಡಬೇಕಾದ ಅತಿ ವ್ಯಾವಹಾರಿಕ ಸಂಗತಿಯಾಗಿರುವದು ಯಾಕ, ಆದರೆ ಯಾವ ವರ್ತನಾಮಾರ್ಗವು ಬಾಳುವ ಪ್ರಯೋಜನಗಳನ್ನು ತರುವದಿಲ್ಲ?
8 ಹಾಗಾದರೆ, ದೇವರ ಸುವಾರ್ತೆಯನ್ನು ಸಾರುವುದು ಇಂದು ಮಾಡಬೇಕಾದ ಅತ್ಯಂತ ವ್ಯಾವಹಾರಿಕ ಸಂಗತಿಯಾಗಿದೆ. ಇದು ಯಾಕೆಂದರೆ ‘ವ್ಯವಹರಿಸಬೇಕಾದ ಕಠಿಣಕಾಲಗಳನ್ನು ಸಂತೋಷದಿಂದ ತುಂಬಿಸುವ ಒಂದು ಸಾಚಾ ನಿರೀಕ್ಷೆಯನ್ನು ರಾಜ್ಯದ ಸಂದೇಶವು ಒದಗಿಸುತ್ತದೆ. (2 ತಿಮೊಥೆಯ 3:1-5; ರೋಮಾಪುರ 12:12; ತೀತ 2:13) ಈ ಲೋಕದಲ್ಲಿ ಜೀವಿತವು ಅನಿಶ್ಚಿತವೂ, ಕೊಂಚಸಮಯದ್ದೂ ಆಗಿರುವಲ್ಲಿ, ದೇವರ ಹೊಸಲೋಕದಲ್ಲಿ ಜೀವತವು, ಇಲ್ಲಿಯೇ ಇದೇ ಭೂಮಿಯ ಮೇಲೆ ಆನಂದ, ಸಮೃದ್ಧತೆ ಮತ್ತು ಶಾಂತಿಯ ನಡುವೆ ನಿತ್ಯವಾದದ್ದೂ ಆಗಿರುವದು. (ಕೀರ್ತನೆ 37:3, 4, 11) ಯೇಸು ಕ್ರಿಸ್ತನು ಅಂದಂತೆ, “ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು?” ದೇವರ ಹೊಸ ಲೋಕದಲ್ಲಿ ಜೀವಿಸುವ ಹಕ್ಕನ್ನು ವ್ಯಕ್ತಿಯೊಬ್ಬನು ಕಳಕೊಳ್ಳುವದಾದರೆ, ಗತಿಸಿಹೋಗಲಿರುವ ಈ ಲೋಕವು ಯಾವ ರೀತಿಯಲ್ಲಿ ಪ್ರಯೋಜನಕ್ಕಾಗಿದೆ? ಅಂಥ ವ್ಯಕ್ತಿಯೊಬ್ಬನ ಭೌತಿಕ ವಸ್ತುಗಳ ಸದ್ಯದ ಆನಂದಿಸುವಿಕೆಯು ವ್ಯರ್ಥವೂ, ನಿಪ್ಷಲವೂ, ಮತ್ತು ಕ್ಷಣಿಕವೂ ಆಗಿದೆ.—ಮತ್ತಾಯ 16:26; ಪ್ರಸಂಗಿ 1:14; ಮಾರ್ಕ 10:29, 30.
9. (ಎ)ಯೇಸುವಿನ ಹಿಂಬಾಲಕನಾಗಲು ಅಮಂತ್ರಿಸಲ್ಪಟ್ಟ ಒಬ್ಬ ಮನುಷ್ಯನು ಕಾಲವಿಳಂಬಮಾಡಲು ಕೇಳಿಕೂಂಡಾಗ, ಏನನ್ನು ಮಾಡಲು ಯೇಸುವು ಅವನಿಗೆ ಸಲಹೆಯಿತ್ತನು? (ಬಿ)ಯೇಸುವಿನ ಉತ್ತರವು ನಮ್ಮ ಮೇಲೆ ಹೇಗೆ ಪರಿಣಾಮಬೀರತಕ್ಕದ್ದು?
9 ತನ್ನನ್ನು ಹಿಂಬಾಲಿಸುವಂತೆ ಯೇಸುವು ಆಮಂತ್ರಿಸಿದ ಒಬ್ಬ ಮನುಷ್ಯನು ಹೇಳಿದ್ದು: “ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿ ಬರುವಂತೆ ನನಗೆ ಅಪ್ಪಣೆಯಾಗಬೇಕು.” ಏನು ಮಾಡುವಂತೆ ಅವನಿಗೆ ಯೇಸುವು ಸಲಹೆಯನ್ನಿತ್ತನು? ಅವನ ಹೆತ್ತವರು ಸಾಯುವ ತನಕ ಕೇವಲ ಕಾದು ನಿಲ್ಲಲು ಒಂದು ಅತ್ಯಾವಶ್ಯಕವಾದ ಕೆಲಸಕ್ಕೆ ಆ ಮನುಷ್ಯನು ಕಾಲವಿಳಂಬಮಾಡುತ್ತಾನೆಂದು ಅರಿತುಕೊಂಡು, ಯೇಸುವು ಉತ್ತರಿಸಿದ್ದು: “ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ, ನೀನಂತೂ ಹೋಗಿ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸು.” (ಲೂಕ 9:59,60) ಕ್ರಿಸ್ತನಿಗೆ ವಿಧೇಯರಾಗುವುದರ ಮೂಲಕ ಜ್ಞಾನವನ್ನು ತೋರಿಸುವವರು, ರಾಜ್ಯದ ಸಂದೇಶವನ್ನು ಸಾರಲು ಇರುವ ಅವರ ನಿಯೋಗವನ್ನು ಪೂರೈಸುವುದರಲ್ಲಿ ಪಕ್ಕಕ್ಕೆ ತೆರಳಲು ಸಾಧ್ಯವಿಲ್ಲ. ಈ ಲೋಕವು ಮತ್ತು ಅದರ ಆಡಳಿತಗಾರರು ನಾಶಕ್ಕೆ ಗುರಿಯಾಗಿದ್ದಾರೆ ಎಂದು ದೈವಿಕ ಜ್ಞಾನವು ಅವರಿಗೆ ಪ್ರಜ್ಞೆಯುಳ್ಳವರನ್ನಾಗಿ ಮಾಡುತ್ತದೆ. (1 ಕೊರಂಥ 2:6; 1 ಯೋಹಾನ 2:17) ದೈವಿಕ ಹಸ್ತಕ್ಷೇಪದಲ್ಲಿ ಮತ್ತು ಆಡಳಿತದಲ್ಲಿ ಮಾನವ ಕುಲಕ್ಕೆ ಕೇವಲ ಒಂದೇ ನಿಜ ನಿರೀಕ್ಷೆ ಇರುತ್ತದೆ ಎಂದು ದೇವರ ಸಾರ್ವಭೌಮತೆಯ ಬೆಂಬಲಿಗರು ತಿಳಿದಿದ್ದಾರೆ. (ಜೆಕರ್ಯ 9:10) ಹೀಗೆ, ಈ ಲೋಕದ ಜ್ಞಾನವಿದ್ದವರು ದೇವರು ರಾಜ್ಯದಲ್ಲಿ ನಂಬಿಕೆ ಇಡುವದಿಲ್ಲ ಮತ್ತು ಆ ಸ್ವರ್ಗೀಯ ಸರಕಾರವನ್ನು ಬಯಸುವದಿಲ್ಲದಿರುವಾಗ, ದೈವಿಕ ಜ್ಞಾನದಿಂದ ನಡೆಸಲ್ಪಟ್ಟವರು ಅವರ ಜತೆಮಾನವರಿಗೆ ಯಾವುದು ನೈಜ ಪ್ರಯೋಜನವನ್ನು ತರುತ್ತದೋ ಅದನ್ನು, ಯೆಹೋವನ ವಾಗ್ದಾನಿತ ಹೊಸ ಲೋಕದಲ್ಲಿ ನಿತ್ಯಜೀವಕ್ಕಾಗಿ ಅವರನ್ನು ಸಿದ್ಧಗೊಳಿಸುವದನ್ನು ಮಾಡುತ್ತದೆ.—ಯೋಹಾನ 3:16; 2 ಪೇತ್ರ 3:13.
“ನಾಶನದ ಮಾರ್ಗದಲ್ಲಿರುವವರಿಗೆ ಹುಚ್ಚು ಮಾತಾಗಿದೆ”
10. (ಎ)ತಾರ್ಸದ ಸೌಲನು ಮತಾಂತರಿಯಾದಾಗ, ಅವನು ಯಾವ ಕೆಲಸವನ್ನು ಕೈಗೆತ್ತಿಕೂಂಡನು, ಮತ್ತು ಅವನದನ್ನು ಹೇಗೆ ವೀಕ್ಷಿಸಿದನು? (ಬಿ)ಪುರಾತನ ಗ್ರೀಕರು ಯಾವುದಕ್ಕೆ ಹೆಸರುವಾಸಿಯಾಗಿದ್ದರು, ಆದರೆ ಅವರ ಜ್ಞಾನವನ್ನು ದೇವರು ಹೇಗೆ ದೃಷ್ಟಿಸಿದನು?
10 ತಾರ್ಸದ ಸೌಲನು ಯೇಸು ಕ್ರಿಸ್ತನ ಅಪೊಸ್ತಲನಾದ ಪೌಲನಾಗಿ, ಈ ಜೀವ ರಕ್ಷಕ ಕಾರ್ಯಯನ್ನು ಕೈಗೆತ್ತಿಕೊಂಡನು. ಯೇಸು ಕ್ರಿಸ್ತನು ಸೌಲನನ್ನು ಮತಾಂತರಿಸಿದಾಗ, ಹುಚ್ಚುತನದ ಚಟುವಟಿಕೆಯೊಂದರಲ್ಲಿ ತೊಡಗುವಂತೆ ಅವನನ್ನು ನೇಮಿಸುತ್ತಾನೆಂದು ಎಣಿಸುವುದು ತಾರ್ಕಿಕವೋ? ಪೌಲನು ಹಾಗೆ ಎಣಿಸಲಿಲ್ಲ. (ಫಿಲಿಪ್ಪಿ 2:16) ಆ ಕಾಲದಲ್ಲಿ ಗ್ರೀಕರು ಲೋಕದ ಅತಿ ಬುದ್ಧಿವಂತ ಜನರೆಂದು ಪರಿಗಣಿಸಲ್ಪಡುತ್ತಿದ್ದರು. ಅವರ ಮಹಾ ತತ್ವಜ್ಞಾನಿಗಳ ಮತ್ತು ಬುದ್ಧಿವಂತರ ಕುರಿತು ಅವರು ಹೆಮ್ಮೆಪಡುತ್ತಿದ್ದರು. ಪೌಲನು ಗ್ರೀಕ್ ಮಾತಾಡಿದರೂ ಕೂಡ, ಅವನು ಗ್ರೀಕರ ತತ್ವಜ್ಞಾನವನ್ನು ಮತ್ತು ಕಲಿಕೆಯನ್ನು ಹಿಂಬಾಲಿಸಲಿಲ್ಲ. ಯಾಕೆ? ಕಾರಣ, ಈ ಲೋಕದ ಅಂಥಾ ಜ್ಞಾನವು ದೇವರೊಂದಿಗೆ ಹುಚ್ಚುತನವಾಗಿದೆ.a ಅವನು ದೈವಿಕ ಜ್ಞಾನವನ್ನು ಅನ್ವೇಷಿಸಿದನು, ಅದು ಅವನನ್ನು ಮನೆಯಿಂದ ಮನೆಗೆ ಸುವಾರ್ತೆಯನ್ನು ಸಾರುವಂತೆ ಪ್ರೇರಿಸಿತು. ಎಲ್ಲಾ ಸಮಯಗಳ ಅತ್ಯಂತ ಮಹಾನ್ ಪ್ರಚಾರಕನಾದ ಯೇಸು ಕ್ರಿಸ್ತನು ಉದಾಹರಣೆಯನ್ನು ಇಟ್ಟಿದ್ದನು ಮತ್ತು ಅದೇ ಕೆಲಸವನ್ನು ಮಾಡುವಂತೆ ಅವನಿಗೆ ಅಪ್ಪಣೆಯನ್ನಿತ್ತನು.—ಲೂಕ 4:43; ಅ. ಕೃತ್ಯಗಳು 20:20, 21; 26:15-20; 1 ಕೊರಿಂಥ 9:16.
11. ಸಾರಾಂಶವಾಗಿ, ತನ್ನ ಸಾರುವಿಕೆಯ ನಿಯೋಗ ಮತ್ತು ಲೋಕದ ಜ್ಞಾನದ ಕುರಿತು ಪೌಲನು ಏನಂದನು?
11 ಸಾರುವ ಅವನ ನಿಯೋಗದ ಕುರಿತು ಪೌಲನು ಇದನ್ನು ಹೇಳುತ್ತಾನೆ: “ಸುವಾರ್ತೆಯನ್ನು ಸಾರುವದಕ್ಕೇ ಕ್ರಿಸ್ತನು ನನ್ನನ್ನು ಕಳುಹಿಸಿದನು. ಆದರೆ ವಾಕ್ಚಾತುರ್ಯದಿಂದ ಸಾರಬೇಕೆಂದು ಕಳುಹಿಸಲಿಲ್ಲ; ಹಾಗೆ ಸಾರಿದರೆ ಕ್ರಿಸ್ತನ ಶಿಲುಬೆಯು ನಿರರ್ಥಕವಾಗುವದು. ಶಿಲುಬೆಯ ವಿಷಯವಾದ [ಯೇಸುವಿನ ವಿಮೋಚನಾ ಯಜ್ಞ] ಮಾತು ನಾಶನದ ಮಾರ್ಗದಲ್ಲಿರುವವರಿಗೆ ಹುಚ್ಚುಮಾತಾಗಿದೆ, ರಕ್ಷಣೆಯ ಮಾರ್ಗದಲ್ಲಿರುವ ನಮಗಾದರೋ ದೇವರ ಶಕ್ತಿಯಾಗಿದೆ. ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು, ವಿವೇಕಿಗಳ ವಿವೇಕವನ್ನು ನಿರಾಕರಿಸುವೆನು ಎಂಬದಾಗಿ ಶಾಸ್ತ್ರೋಕ್ತಿಯುಂಟಲ್ಲಾ. [ತತ್ವಜ್ಞಾನಿಯಂಥ] ಜ್ಞಾನಿಯು ಎಲ್ಲಿ? ಶಾಸ್ತ್ರಿಯೆಲ್ಲಿ? ಇಹಲೋಕದ ತರ್ಕವಾದಿ ಎಲ್ಲಿ? ದೇವರು ಇಹಲೋಕಜ್ಞಾನವನ್ನು ಹುಚ್ಚುತನವಾಗಮಾಡಿದ್ದಾನಲ್ಲವೇ. ಹೇಗಂದರೆ ಲೋಕವು ಜ್ಞಾನವೆನಿಸುವ ಮಾರ್ಗದಿಂದ ದೇವರನ್ನು ತಿಳುಕೊಳ್ಳದೆ ಹೋದದ್ದು ದೇವರ ಜ್ಞಾನದ ಸಂಕಲ್ಪವೇ; ಹೀಗಾದ ಮೇಲೆ ಹುಚ್ಚುಮಾತು ಎಣಿಸಿಕೊಂಡಿರುವ ನಮ್ಮ ಪ್ರಸಂಗದಿಂದಲೇ ನಂಬುವವರನ್ನು ರಕ್ಷಿಸುವದು ದೇವರಿಗೆ ಒಳ್ಳೇದೆಂದು ತೋಚಿತು.”—1 ಕೊರಿಂಥ 1:17-21.
12. “ಯಾವುದು ಸಾರಲ್ಪಟ್ಟಿದೆಯೋ” ಅದರ ಮೂಲಕ ಯೆಹೋವನು ಏನನ್ನು ಪೂರೈಸುತ್ತಾ ಇದ್ದಾನೆ, ಮತ್ತು “ಮೇಲಣದಿಂದ ಬರುವ ಜ್ಞಾನ”ವನ್ನು ಬಯಸುವವರು ಹೇಗೆ ಪ್ರತಿವರ್ತಿಸುವರು?
12 ನಂಬಲಾಗದ್ದಾಗಿ ಅದು ಭಾಸವಾಗಬಹುದಾದರೂ, ಲೋಕವು ಯಾರನ್ನು ಹುಚ್ಚರೆಂದು ಕರೆಯುತ್ತದೋ ಅವರನ್ನೇ ದೇವರು ತನ್ನ ಸಾರುವವರನ್ನಾಗಿ ಬಳಸುತ್ತಾನೆ, ಹೌದು, ಈ ಸಾರುವವರ ಶುಶ್ರೂಷೆಯ ಹುಚ್ಚುತನದ ಮೂಲಕ, ನಂಬುವವರನ್ನು ದೇವರು ರಕ್ಷಿಸುತ್ತಾನೆ. ಈ “ಹುಚ್ಚುತನದ” ಸಾರುವವರು ಸ್ವತಃ ತಮ್ಮನ್ನೇ ಹೆಚ್ಚಿಸಿಕೊಳ್ಳದಂತೆ ಯೆಹೋವನು ವಿಷಯಗಳನ್ನು ಏರ್ಪಡಿಸುತ್ತಾನೆ, ಮತ್ತು ಯಾರ ಮೂಲಕವಾಗಿ ಸುವಾರ್ತೆಯನ್ನು ಅವರು ಕೇಳಿದ್ದಾರೋ ಅಂಥವರನ್ನು ಇತರ ಮಾನವರು ತಕ್ಕದ್ದಾಗಿಯೇ ಮಹಿಮೆಪಡಿಸಲು ಸಾಧ್ಯವಿಲ್ಲ. ಇದು ಹೇಗೆ ಯಾಕೆಂದರೆ, “ದೇವರ ಮುಂದೆ ಹೊಗಳಿಕೂಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ.” (1 ಕೊರಿಂಥ 1:28-31; 3:6, 7) ಸಾರುವವನು ಒಂದು ಪ್ರಾಮುಖ್ಯ ಪಾತ್ರವನ್ನಾಡುತ್ತಾನೆಂಬುದು ಸತ್ಯವೇ, ಆದರೂ ಸಾರಲಿಕ್ಕೆ ಅವನಿಗೆ ನೇಮಕಮಾಡಿದ ಸಂದೇಶವು ತಾನೇ, ವ್ಯಕ್ತಿಯು ನಂಬುವುದಾದರೆ, ಅವನ ರಕ್ಷಣೆಗೆ ಕಾರ್ಯನಡಿಸುತ್ತದೆ. “ಮೇಲಣಿಂದ ಬರುವ ಜ್ಞಾನವನ್ನು” ಬಯಸುವವರು ಸಾರುವವನ ಸಂದೇಶವನ್ನು, ಅವನು ಹುಚ್ಚನಂತೆ ಮತ್ತು ಕನಿಷ್ಠನಂತೆ ತೋರುವದರಿಂದ, ಹಿಂಸಿಸಲ್ಪಡುವದರಿಂದ, ಮತ್ತು ಮನೆಯಿಂದ ಮನೆಗೆ ಹೋಗುವದರಿಂದ ಉಪೇಕ್ಷಿಸುವದಿಲ್ಲ. ಬದಲು, ಸಾರುವವನಾಗಿ ಯೆಹೋವನಿಂದ ನೇಮಕಹೊಂದಿದವನು ಮತ್ತು ದೇವರ ಹೆಸರಿನಿಂದ ಬರುವವನು ಎಂದು ರಾಜ್ಯದ ಘೋಷಕನೊಬ್ಬನನ್ನು ನಮ್ರರು ಗೌರವಿಸುವರು. ಬಾಯಿಮಾತಿನ ಮತ್ತು ಮುದ್ರಿತ ಪುಟಗಳ ಮೂಲಕ ಸಾರುವವನು ತರುವ ಸಂದೇಶಕ್ಕೆ ಅವರು ಮಹಾ ಪ್ರಾಮುಖ್ಯತೆಯನ್ನು ನೀಡುವರು.—ಯಾಕೋಬ 3:17; 1 ದೆಸಲೋನೇಕ 2:13.
13. (ಎ)ಶಿಲುವೆಗೇರಿಸಲ್ವಟ್ಟ ಕ್ರಿಸ್ತನ ಕುರಿತಾದ ಸಾರುವಿಕೆಯನ್ನು ಯೆಹೂದ್ಯರು ಮತ್ತು ಗ್ರೀಕರು ಹೇಗೆ ವೀಕ್ಷಿಸಿದರು? (ಬಿ)ಯೇಸುವಿನ ಹಿಂಬಾಲಕರಾಗಲು ಯಾವ ಗುಂಪುಗಳಿಂದ ಅನೇಕರನ್ನು ಕರೆಯಲಿಲ್ಲ, ಮತ್ತು ಯಾಕೆ?
13 ದೇವರ ಮಾರ್ಗಗಳ ತನ್ನ ಚರ್ಚೆಯನ್ನು ಮುಂದರಿಸುತ್ತಾ ಪೌಲನು ಹೇಳುವದು: “ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ, ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ; ನಾವಾದರೋ ಶಿಲುಬೆಗೆ ಹಾಕಲ್ಪಟ್ಟವನಾದ ಕ್ರಿಸ್ತನನ್ನು ಪ್ರಚುರಪಡಿಸುತ್ತೇವೆ. ಇಂಥ ಕ್ರಿಸ್ತನ ಸಂಗತಿಯು ಯೆಹೂದ್ಯರಿಗೆ ವಿಘ್ನವೂ ಅನ್ಯ ಜನರಿಗೆ ಹುಚ್ಚುಮಾತೂ ಆಗಿದೆ; ಆದರೆ ದೇವರಿಂದ ಕರಿಸಿಕೊಂಡವರು ಯೆಹೂದ್ಯರಾಗಲಿ ಗ್ರೀಕರಾಗಲಿ ಅವರಿಗೆ ಇಂಥವನು ದೇವರ ಶಕ್ತಿಯೂ ದೇವರ ಜ್ಞಾನವೂ ಆಗಿರುವ ಕ್ರಿಸ್ತನೇ. ಲೋಕದವರು ದೇವರಲ್ಲಿ ಯಾವದನ್ನು ಬುದ್ಧಿಹೀನತೆಯೆಂದು ಎಣಿಸುತ್ತಾರೋ ಅದು ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠಜ್ಞಾನವಾಗಿದೆ. ಅವರು ದೇವರಲ್ಲಿ ಯಾವದನ್ನು ಬಲಹೀನತೆಯೆಂದು ಎಣಿಸುತ್ತಾರೋ ಅದು ಮನುಷ್ಯರ ಬಲಕ್ಕಿಂತಲೂ ಬಲವುಳ್ಳದಾಗಿದೆ. ಸಹೋದರರೇ, ದೇವರು ನಿಮ್ಮನ್ನು ಕರೆದಾಗ ಎಂಥವರನ್ನು ಕರೆದನೆಂದು ಆಲೋಚಿಸಿರಿ. ನಿಮ್ಮೊಳಗೆ ಲೌಕಿಕದೃಪ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ. ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಠರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ.”—1 ಕೊರಿಂಥ 1:22-27; ಹೋಲಿಸಿರಿ ಯೆಶಾಯ 55:8, 9.
14. (ಎ)ಅವರ ಅರ್ಹತಾಪ್ರಶಸ್ತಿಗಳ ಕುರಿತು ಕೇಳಿದರೆ, ಯೆಹೊವನ ಸಾಕ್ಷಿಗಳು ಯಾವುದಕ್ಕೆ ನಿರ್ದೇಶಿಸುತ್ತಾರೆ? (ಬಿ)ಲೋಕದ ಜ್ಞಾನದ ಯಾವುದೇ ಪ್ರದರ್ಶನದೊಂದಿಗೆ ಗ್ರೀಕರನ್ನು ಮೆಚ್ಚಿಸಲು ಪೌಲನು ನಿರಾಕರಿಸಿದ್ದು ಯಾಕೆ?
14 ಯೇಸುವು ಭೂಮಿಯ ಮೇಲಿದ್ದಾಗ, ಆಕಾಶದಿಂದ ಒಂದು ಸೂಚಕಕಾರ್ಯವನ್ನು ಯೆಹೂದ್ಯರು ಅಪೇಕ್ಷಿಸಿದರು. (ಮತ್ತಾಯ 12:38, 39; 16:1) ಆದರೆ ಯಾವುದೇ ಸೂಚಕಕಾರ್ಯವನ್ನು ತೋರಿಸಲು ಯೇಸುವು ನಿರಾಕರಿಸಿದನು. ತದ್ರೀತಿಯಲ್ಲಿ, ಯೆಹೋವನ ಸಾಕ್ಷಿಗಳು ಇಂದು ಸೂಚಕಕಾರ್ಯಗಳಂಥಾ ಅರ್ಹತಾಪ್ರಶಸ್ತಿಗಳನ್ನು ಪ್ರದರ್ಶಿಸುವದಿಲ್ಲ. ಬದಲಿಗೆ, ಯೆಶಾಯ 61:1, 2, ಮಾರ್ಕ 13:10 ಮತ್ತು ಪ್ರಕಟನೆ 22:17 ರಂಥ ಬೈಬಲ್ ವಚನಗಳಲ್ಲಿ ದಾಖಲಿಸಲ್ಪಟ್ಟ ಸುವಾರ್ತೆಯನ್ನು ಸಾರಬೇಕೆಂಬ ಅವರ ನೇಮಕದೆಡೆಗೆ ಅವರು ತೋರಿಸುತ್ತಾರೆ. ಪುರಾತನದ ಗ್ರೀಕರು ಜ್ಞಾನಕ್ಕಾಗಿ, ಈ ಲೋಕದ ಸಂಗತಿಗಳಲ್ಲಿ ಉನ್ನತ ಶಿಕ್ಷಣದೆಡೆಗೆ ನೋಡಿದರು. ಈ ಲೋಕದ ಜ್ಞಾನದಲ್ಲಿ ಶಿಕ್ಷಣವನ್ನು ಪೌಲನು ಪಡೆದಿದ್ದರೂ, ಅದರ ಪ್ರದರ್ಶನವನ್ನು ಮಾಡಿ ಗ್ರೀಕರಿಗೆ ಪ್ರಸನ್ನಗೊಳಿಸಲು ಅವನು ನಿರಾಕರಿಸಿದನು. (ಅ. ಕೃತ್ಯಗಳು 22:23) ಅವನು ಆದರ್ಶ ಗ್ರೀಕ್ನಲ್ಲಿ ಅಲ್ಲ, ಬದಲಾಗಿ ಜನಸಾಮಾನ್ಯರ ಆಡುಭಾಷೆಯಲ್ಲಿ ಮಾತಾಡಿದನು ಮತ್ತು ಬರೆದನು. ಪೌಲನು ಕೊರಿಂಥದವರಿಗೆ ಬರೆದದ್ದು: “ಸಹೋದರರೇ, ನಾನಂತೂ ದೇವರು ಕೊಟ್ಟ ಮಾತಗಳನ್ನು ತಿಳಿಸುವವನಾಗಿ ನಿಮ್ಮ ಬಳಿಗೆ ಬಂದಾಗ ವಾಕ್ಚಾತುರ್ಯದಿಂದಾಗಲಿ ಜ್ಞಾನಾಡಂಬರದಿಂದಾಗಲಿ ಬರಲಿಲ್ಲ. . . . . ನಿಮ್ಮ ನಂಬಿಕೆಯು ಮಾನುಷಜ್ಞಾನವನ್ನು ಆಧಾರಮಾಡಿಕೊಳ್ಳದೆ ದೇವರ ಶಕ್ತಿಯನ್ನು ಆಧಾರಮಾಡಿಕೊಂಡಿರಬೇಕೆಂದು ನನ್ನ ಬೋಧನೆಯಲ್ಲಿಯೂ ಪ್ರಸಂಗದಲ್ಲಿಯೂ ಮನವೊಲಿಸುವ ಜ್ಞಾನವಾಕ್ಯಗಳನ್ನು ನಾನು ಪ್ರಯೋಗಿಸದೆ ದೇವರಾತ್ಮನ ಬಲವನ್ನು ತೋರ್ಪಡಿಸುವ ವಾಕ್ಯಗಳನ್ನೇ ಪ್ರಯೋಗಿಸಿದೆನು.”—1 ಕೊರಿಂಥ 2:1-5.
15. ಸುವಾರ್ತೆಯ ಕುಚೋದ್ಯಗಾರರಿಗೆ ಪೇತ್ರನು ಯಾವುದನ್ನು ನೆನಪಿಸುತ್ತಾನೆ, ಮತ್ತು ನೋಹನ ದಿನಗಳಿಂತೆಯೇ ಸದ್ಯದ ಸನ್ನಿವೇಶವು ಇರುವುದು ಹೇಗೆ?
15 ಈ ಕಡೇ ದಿನಸಗಳಲ್ಲಿ, ದೇವರ ಬರಲಿರುವ ಹೊಸ ಲೋಕದ ಸುವಾರ್ತೆಯ ಮತ್ತು ಈ ಲೋಕದ ಸನ್ನಿಹಿತವಾಗಿರುವ ಅಂತ್ಯದ ಕುಚೋದ್ಯಗಾರರಿಗೆ, ಅಪೊಸ್ತಲ ಪೇತ್ರನು ನೋಹನ ದಿವಸಗಳ ಲೋಕವು “ಜಲಪ್ರಲಯದಲ್ಲಿ ನಾಶವಾಯಿತು” ಎಂಬದನ್ನು ನೆನಪಿಸುತ್ತಾನೆ. (2 ಪೇತ್ರ 3:3-7) ಆ ಜಲಪ್ರಲಯದಿಂದ ಅಂತ್ಯವನ್ನು ಎದುರಿಸಿದ್ದ ನೋಹನು ಏನು ಮಾಡಿದ್ದನು? ಅವನು ಕೇವಲ ನಾವೆ ಕಟ್ಟಿದವನು ಎಂದು ಅನೇಕ ಜನರು ಯೋಚಿಸುತ್ತಾರೆ. ಆದರೆ ಪೇತ್ರನು ಹೇಳುವುದೇನಂದರೆ ಪುರಾತನ ಲೋಕದ ಮೇಲೆ ದೇವರು ಜಲಪ್ರಲಯವನ್ನು ತಂದಾಗ, ಅವನು “ಸುನೀತಿಯನ್ನು ಸಾರುವವನಾಗಿದ್ದ ನೋಹನನ್ನೂ ಅವನೊಂದಿಗೆ ಬೇರೆ ಏಳು ಮಂದಿಯನ್ನೂ ಉಳಿಸಿದನು.” (2 ಪೇತ್ರ 2:5) ಜಲಪ್ರಲಯಕ್ಕಿಂತ ಮುಂಚಿನ ದೇವಭಕ್ತಿಹೀನ ಜನರು ತಮ್ಮ ಲೌಕಿಕ ಜ್ಞಾನದಿಂದ ನೋಹನು ಏನನ್ನು ಸಾರಿದನೋ ಅದರೆಡೆಗೆ ಗೇಲಿಮಾಡಿದರು ಮತ್ತು ಅವನನ್ನು ಹುಚ್ಚನೂ, ಭ್ರಾಂತಿಯವನೂ, ಮತ್ತು ಅವ್ಯಾವಹಾರಿಕನೂ ಎಂದು ಕರೆದರು. ಇಂದು, ನಿಜ ಕ್ರಿಸ್ತರು ತದ್ರೇತಿಯ ಸನ್ನಿವೇಶವನ್ನು ಎದುರಿಸುತ್ತಿದ್ದಾರೆ, ಯಾಕಂದರೆ ನಮ್ಮ ಸಂತತಿಯನ್ನು ನೋಹನ ದಿನಗಳದ್ದಕ್ಕೆ ಯೋಸುವು ಹೋಲಿಸಿದ್ದನು. ಆದಾಗ್ಯೂ, ಗೇಲಿಗಾರರ ನಡುವೆಯೂ ರಾಜ್ಯದ ಶುಭವಾರ್ತೆಯ ಸಾರುವಿಕೆಯು ಕೇವಲ ಒಂದು ಮಾತಾಗಿರುವದಕ್ಕಿಂತಲೂ ಹೆಚ್ಚಿನದ್ದಾಗಿದೆ. ನೋಹನಿಂದ ಸಾರುವಿಕೆ ಮಾಡಲ್ಪಟ್ಟಂತೆ, ಅದು ಸಾರುವವನಿಗೆ ಮತ್ತು ಯಾರು ಅವನಿಗೆ ಕೇಳುತ್ತಾರೋ ಅವರಿಗೆ ರಕ್ಷಣೆ ಎಂಬರ್ಥದಲ್ಲಿದೆ!—ಮತ್ತಾಯ 24:37-39; 1 ತಿಮೊಥೆಯ 4:16.
‘ಜ್ಞಾನಿಗಳಾಗುವಂತೆ ಹುಚ್ಚರಾಗುವದು’
16. ಅರ್ಮಗೆದ್ದೋನಿನಲ್ಲಿ ಈ ಲೋಕದ ಜ್ಞಾನಕ್ಕೆ ಏನು ಸಂಭವಿಸಲಿರುವದು, ಮತ್ತು ದೇವರ ಹೊಸ ಲೋಕದೊಳಗೆ ಯಾರು ಪಾರಾಗಲಿರುವರು?
16 ಬಲು ಬೇಗನೇ, ಅರ್ಮಗೆದ್ದೋನಿನಲ್ಲಿ ಯೆಹೋವ ದೇವರು “ಜ್ಞಾನಿಗಳ ಜ್ಞಾನವನ್ನು” ನಾಶವಾಗುವಂತೆ ಕಾರಣನಾಗುವನು. ಮಾನವ ಕುಲಕ್ಕೆ ಅವರ ಹೊಸ ಲೋಕ ಕ್ರಮವು ತರಲಿರುವ ಉತ್ತಮ ಪರಿಸ್ಥಿತಿಗಳ ಭವಿಷದ್ವಾಣಿಗಳನ್ನು ಮಾಡಿದ “ವಿವೇಕಿಗಳ ವಿವೇಕವನ್ನು” ಅವನು ಬದಿಗೆ ತಳ್ಳುವನು. “ಸರ್ವ ಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ” ಈ ಲೋಕದ ಎಲ್ಲಾ ಕೂಟ ವಾದ, ತತ್ವಜ್ಞಾನ, ಮತ್ತು ಜ್ಞಾನವನ್ನು ಭಸ್ಮಮಾಡಲಿರುವದು. (1 ಕೊರಿಂಥ 1:19; ಪ್ರಕಟನೆ 16:14-16) ಈ ಲೋಕವು ಯಾವುದನ್ನು ಹುಚ್ಚುತನವೆಂದು ಕರೆಯುತ್ತದೋ ಅದಕ್ಕೆ—ಹೌದು, ಯೆಹೋವನ ಮಹಿಮಾಭರಿತ ರಾಜ್ಯ ಸುವಾರ್ತೆಗೆ—ವಿಧೇಯರಾಗುವವರು ಮಾತ್ರವೇ ಆ ಯುದ್ಧವನ್ನು ಪಾರಾಗುವರು ಮತ್ತು ದೇವರ ಹೋಸ ಲೋಕದಲ್ಲಿ ಜೀವವನ್ನು ಪಡೆಯುವರು.
17. ಯೆಹೋವನ ಸಾಕ್ಷಿಗಳು ‘ಹುಚ್ಚರು’ ಆಗಿದ್ದಾರೆ ಹೇಗೆ, ಮತ್ತು ದೇವರ ಸುವಾರ್ತೆಯ ಪ್ರಚಾರಕರು ಏನನ್ನು ಮಾಡಲು ದೃಢನಿಶ್ಚಯಮಾಡಿದ್ದಾರೆ?
17 ಅವನಾತ್ಮದಿಂದ ನಡಿಸಲ್ಪಡುವ ಯೆಹೋವನ ಸಾಕ್ಷಿಗಳು, ಲೋಕವು ಯಾವುದನ್ನು ಹುಚ್ಚುತನವೆಂದು ಕರೆಯುತ್ತದೋ ಅದನ್ನು ಸಾರಲು ನಾಚಿಕೆಪಡುವದಿಲ್ಲ. ಲೌಕಿಕವಾಗಿ ಜ್ಞಾನಿಗಳಾಗಲು ಪ್ರಯತ್ನಿಸುವ ಬದಲು, ಅವರು ‘ಹುಚ್ಚರು’ ಆಗಿದ್ದಾರೆ. ಹೇಗೆ? ಪೌಲನು ಬರೆದಂತೆ ಅವರು ಜ್ಞಾನಿಗಳಾಗಲು ರಾಜ್ಯ ಸಾರುವಿಕೆಯನ್ನು ಮಾಡುವುದರ ಮೂಕಲವೇ: “ತಾನು ನಿಮ್ಮಲ್ಲಿ ಲೋಕಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿಕೊಳ್ಳುವವನು ಜ್ಞಾನಿಯಾಗುವಂತೆ ಹುಚ್ಚನಾಗಲಿ.” (1 ಕೊರಿಂಥ 3:18-20) ಯೆಹೋವನ ಸುವಾರ್ತೆಯನ್ನು ಸಾರುವವರು ಅವರ ಸಂದೇಶದ ಜೀವರಕ್ಷಕ ಮೌಲ್ಯವನ್ನು ಬಲ್ಲವರಾಗಿದ್ದಾರೆ ಮತ್ತು ಈ ಲೋಕವು ಮತ್ತು ಅದರ ಜ್ಞಾನವು ಅರ್ಮಗೆದ್ದೋನ್ ಯುದ್ಧದಲ್ಲಿ ಅಂತ್ಯಗೊಳ್ಳುವ ತನಕ ಸಾರುವದನ್ನು ಬಿಡದೆ ಮುಂದುವರಿಸುವರು. ಶೀಘ್ರದಲ್ಲಿಯೇ ಯೆಹೋವ ದೇವರು ತನ್ನ ವಿಶ್ವ ಸಾರ್ವಭೌಮತೆಯನ್ನು ಸಮರ್ಥಿಸಲಿರುವನು ಮತ್ತು “ಯಾವುದು ಸಾರಲಾಗಿದೆಯೋ ಆ ಹುಚ್ಚುತನವನ್ನು” ನಂಬುವ ಮತ್ತು ಅದಕ್ಕನುಸಾರ ವರ್ತಿಸುವವರೆಲ್ಲರಿಗೆ ನಿತ್ಯ ಜೀವವನ್ನು ತರಲಿರುವನು.
[ಅಧ್ಯಯನ ಪ್ರಶ್ನೆಗಳು]
a ಪುರಾತನ ಗ್ರೀಸಿನ ಜ್ಞಾನಿಗಳ ಎಲ್ಲಾ ತಾತ್ವಿಕ ವಾದವಿವಾದಗಳ ಮತ್ತು ಅನ್ವೇಷಣೆಗಳ ಹೊರತಾಗಿಯೂ, ನಿರೀಕ್ಷೆಗಾಗಿ ಒಂದು ಅಪ್ಪಟವಾದ ಆಧಾರವನ್ನು ಅವರು ಕಂಡುಕೊಳ್ಳಲಿಲ್ಲವೆಂದು ಅವರ ಬರವಣಿಗೆಗಳು ತೋರಿಸುತ್ತವೆ. ಫ್ರೊಫೆಸರ್ ಜೆ. ಆರ್. ಎಸ್. ಸ್ಟರ್ಇಟ್ ಮತ್ತು ಸಮುವೇಲ್ ಅಂಜಸ್ ತೋರಿಸುವದು: “ಜೀವನದ ಶೋಕಗಳ, ಗತಿಸುವ ಪ್ರೀತಿಯ, ನಿರೀಕ್ಷೆಯ ವಂಚನೆಯ, ಮತ್ತು ಮರಣದ ನಿಪ್ಷರುಣೆಯ ಕುರಿತು ಅಷ್ಟೊಂದು ಹೆಚ್ಚಿನ ಹೃದಯದ್ರಾವಕ ಗೋಳಾಡುವಿಕೆಯು ಬೇರೆ ಯಾವುದೆ ಸಾಹಿತ್ಯದಲ್ಲಿ ಇಲ್ಲ.”—ಫಂಕ್ ಆ್ಯಂಡ್ ವಾಗ್ನಲ್ಸ್ ನ್ಯೂ “ಸ್ಟ್ಯಾಂಡರ್ಡ್” ಬೈಬಲ್ ಡಿಕಷ್ನೆರಿ, 1936, ಪುಟ 313.
ನಿಮ್ಮ ಉತ್ತರಗಳೇನು?
◻ ಯಾವ ಎರಡು ವಿಧದ ಜ್ಞಾನಗಳು ಇವೆ?
◻ ಲೋಕದ ಜ್ಞಾನದ ಮೂಲಭೂತ ನ್ಯೂನತೆ ಏನು?
◻ ಸುವಾರ್ತೆಯನ್ನು ಸಾರುವುದು ಮಾಡಬೇಕಾದ ಅತಿ ವ್ಯಾವಹಾರಿಕ ಸಂಗತಿಯಾಗಿರುವದು ಯಾಕೆ?
◻ ಶೀಘ್ರದಲ್ಲಿಯೇ ಲೋಕದ ಎಲ್ಲಾ ಜ್ಞಾನಕ್ಕೆ ಏನು ಸಂಭವಿಸಲಿರುವದು?
◻ ಲೋಕವು ಯಾವುದನ್ನು ಹುಚ್ಚುತನವೆಂದು ಕರೆಯುತ್ತದೋ ಅದನ್ನು ಸಾರಲು ಯೆಹೋವನ ಸಾಕ್ಷಿಗಳು ಯಾಕೆ ನಾಚಿಕೆಪಡುವುದಿಲ್ಲ?
[ಪುಟ 10 ರಲ್ಲಿರುವ ಚಿತ್ರ]
Picture is missing in vernacular.