ಅಧ್ಯಾಯ 44
ಪ್ರಕಟನೆ ಮತ್ತು ನೀವು
1. (ಎ) ಪ್ರಕಟನೆಯಲ್ಲಿನ ಎಲ್ಲಾ ಆಶ್ಚರ್ಯಕರ ವಾಗ್ದಾನಗಳ ಸಂಬಂಧದಲ್ಲಿ ದೇವದೂತನು ಯೋಹಾನನಿಗೆ ಯಾವ ಮರುಆಶ್ವಾಸನೆಯನ್ನು ನೀಡುತ್ತಾನೆ? (ಬಿ) “ನಾನು ಬೇಗನೇ ಬರುತ್ತೇನೆ” ಎಂದು ಹೇಳುವವನು ಯಾರು, ಮತ್ತು ಈ ‘ಬರೋಣ’ವು ಯಾವಾಗ?
ಹೊಸ ಯೆರೂಸಲೇಮಿನ ಆಹ್ಲಾದಕರ ವರ್ಣನೆಯನ್ನು ಓದಿದ ಮೇಲೆ, ನೀವು ಹೀಗೆ ಕೇಳಲು ಪ್ರೇರಿಸಲ್ಪಡಬಹುದು: ‘ಅಷ್ಟೊಂದು ಆಶ್ಚರ್ಯಕರವಾದದ್ದು ಎಂದಾದರೂ ನಿಜವಾಗಿಯೂ ಸಂಭವಿಸಬಹುದೇ?’ ದೇವದೂತನ ಅನಂತರದ ಮಾತುಗಳನ್ನು ವರದಿಸುವುದರೊಂದಿಗೆ ಯೋಹಾನನು ಆ ಪ್ರಶ್ನೆಯನ್ನತ್ತರಿಸುತ್ತಾನೆ: “ಮತ್ತು ಅವನು ನನಗೆ ಹೇಳಿದ್ದು: ‘ಈ ಮಾತುಗಳು ನಂಬಿಕೆಗರ್ಹವೂ ಸತ್ಯವೂ ಆಗಿವೆ; ಹೌದು, ಪ್ರವಾದಿಗಳ ಪ್ರೇರಿತ ಅಭಿವ್ಯಕ್ತಿಗಳ ದೇವರಾದ ಯೆಹೋವನು ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸಲು ತನ್ನ ದೂತನನ್ನು ಕಳುಹಿಸಿಕೊಟ್ಟನು. ಮತ್ತು ಇಗೋ! ನಾನು ಬೇಗನೆ ಬರುತ್ತೇನೆ. ಈ ಸುರುಳಿಯಲ್ಲಿ ಬರೆದಿರುವ ಪ್ರವಾದನೆಯ ಮಾತುಗಳನ್ನು ಕೈಕೊಂಡು ನಡೆಯುವ ಯಾವನೂ ಸಂತೋಷಿಯು.’” (ಪ್ರಕಟನೆ 22:6, 7, NW) ಪ್ರಕಟನೆಯ ಎಲ್ಲಾ ಆಶ್ಚರ್ಯಕರ ವಾಗ್ದಾನಗಳು ಖಂಡಿತವಾಗಿಯೂ ನೆರವೇರುವವು! ಯೇಸುವಿನ ಹೆಸರಿನಲ್ಲಿ ಮಾತಾಡುತ್ತಾ, ಯೇಸುವು ಶೀಘ್ರವೇ, “ಬೇಗನೆ” ಬರುತ್ತಾನೆಂದು ದೇವದೂತನು ಘೋಷಿಸುತ್ತಾನೆ. ಇದು “ಕಳ್ಳನೋಪಾದಿ” ಯೆಹೋವನ ಶತ್ರುಗಳನ್ನು ನಾಶಮಾಡಲು ಮತ್ತು ಪ್ರಕಟನೆಯ ಭವ್ಯ ಮತ್ತು ಆನಂದದ ಪರಮಾವಧಿಯನ್ನು ಒಳತರುವ ಯೇಸುವಿನ ಬರೋಣವೇ ಆಗಿರಬೇಕು. (ಪ್ರಕಟನೆ 16:15, 16) ಆದಕಾರಣ ಆ ಸಮಯದಲ್ಲಿ ಧನ್ಯರೆಂದು ಘೋಷಿಸಲ್ಪಡಲು, ನಾವು “ಈ ಸುರುಳಿಯ”—ಪ್ರಕಟನೆಯ—ಮಾತುಗಳಿಗನುಸಾರ ನಮ್ಮ ಜೀವಿತಗಳನ್ನು ಹೊಂದಿಸತಕ್ಕದ್ದು.
2. (ಎ) ಪ್ರಕಟನೆಯ ಸ್ವಾರಸ್ಯಕ್ಕೆ ಯೋಹಾನನು ಹೇಗೆ ಪ್ರತಿವರ್ತಿಸುತ್ತಾನೆ, ಮತ್ತು ದೇವದೂತನು ಅವನಿಗೆ ಏನು ಹೇಳುತ್ತಾನೆ? (ಬಿ) “ಜಾಗ್ರತೆ!” ಮತ್ತು “ದೇವರನ್ನು ಆರಾಧಿಸು” ಎಂಬ ದೇವದೂತನ ಮಾತುಗಳಿಂದ ನಾವೇನು ಕಲಿಯುತ್ತೇವೆ?
2 ಪ್ರಕಟನೆಯ ಅಂತಹ ಸ್ವಾರಸ್ಯದ ಅನಂತರ, ಯೋಹಾನನು ಭಾವ ಪರವಶನಾಗುವುದನ್ನು ಅರ್ಥೈಸಿಕೊಳ್ಳಬಹುದಾಗಿದೆ: “ಒಳ್ಳೇದು, ಈ ಸಂಗತಿಗಳನ್ನು ಕೇಳುತ್ತಿದವ್ದನು ಮತ್ತು ಕಾಣುತ್ತಿದ್ದವನು ಯೋಹಾನನೆಂಬ ನಾನೇ. ಮತ್ತು ನಾನು ಕೇಳಿ ಕಂಡಾಗ, ಈ ಸಂಗತಿಗಳನ್ನು ನನಗೆ ತೋರಿಸುತ್ತಿದ್ದ ದೇವದೂತನ ಪಾದಗಳ ಮುಂದೆ ಆರಾಧಿಸಲಿಕ್ಕಾಗಿ ಅಡಬ್ಡಿದ್ದೆನು. ಆದರೆ ಅವನು ನನಗೆ ಹೇಳುವುದು: ‘ಜಾಗ್ರತೆ! ಅದನ್ನು ಮಾಡಬೇಡ! ನಾನು ನಿನಗೂ ಮತ್ತು ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ ಮತ್ತು ಈ ಸುರುಳಿಯಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವವರಿಗೂ ಜೊತೆಯ ದಾಸನಾಗಿದ್ದೇನೆ, ಅಷ್ಟೇ. ದೇವರನ್ನು ಆರಾಧಿಸು.’” (ಪ್ರಕಟನೆ 22:8, 9, NW; ಹೋಲಿಸಿ ಪ್ರಕಟನೆ 19:10.) ದೇವದೂತರನ್ನು ಆರಾಧಿಸಕೂಡದು ಎಂದು ಎರಡಾವರ್ತಿ ಹೇಳಲ್ಪಟ್ಟ ಈ ಎಚ್ಚರಿಕೆಯು ಯೋಹಾನನ ದಿನಗಳಲ್ಲಿ ಸಮಯೋಚಿತವಾಗಿತ್ತು, ಯಾಕಂದರೆ ಕೆಲವರು ಅಂತಹ ಆರಾಧನೆಯ ಬೆನ್ನು ಹಿಡಿದಿದ್ದರು ಯಾ ದೇವದೂತರಿಂದ ವಿಶೇಷ ಪ್ರಕಟನೆಗಳನ್ನು ಪಡೆದಿದ್ದೇವೆಂದು ವಾದಿಸುತ್ತಿದ್ದರು ಎಂದು ವ್ಯಕ್ತವಾಗುತ್ತದೆ. (1 ಕೊರಿಂಥ 13:1; ಗಲಾತ್ಯ 1:8; ಕೊಲೊಸ್ಸೆ 2:18) ಇಂದು, ದೇವರೊಬ್ಬನನ್ನೇ ನಾವು ಆರಾಧಿಸತಕ್ಕದ್ದು ಎಂಬ ನಿಜಾಂಶವನ್ನು ಅದು ಎತ್ತಿತೋರಿಸುತ್ತದೆ. (ಮತ್ತಾಯ 4:10) ಯಾವನೇ ಒಬ್ಬನ ಯಾ ಇತರ ಒಂದು ವಿಷಯದ ಆರಾಧನೆಯೊಂದಿಗೆ ಶುದ್ಧಾರಾಧನೆಯನ್ನು ನಾವು ಭ್ರಷ್ಟಗೊಳಿಸಕೂಡದು.—ಯೆಶಾಯ 42:5, 8.
3, 4. ದೇವದೂತನು ಯೋಹಾನನಿಗೆ ಏನನ್ನು ಹೇಳುವುದನ್ನು ಮುಂದರಿಸುತ್ತಾನೆ, ಮತ್ತು ಅವನ ಮಾತುಗಳಿಗೆ ಅಭಿಷಿಕ್ತ ಉಳಿಕೆಯವರು ಹೇಗೆ ವಿಧೇಯರಾಗಿದ್ದಾರೆ?
3 ಯೋಹಾನನು ಮುಂದರಿಸುವುದು: “ಅವನು ನನಗೆ ಇನ್ನೂ ಹೇಳುವುದು: ‘ಈ ಸುರುಳಿಯಲ್ಲಿರುವ ಪ್ರವಾದನಾವಾಕ್ಯಗಳಿಗೆ ಮುದ್ರೆ ಹಾಕಬೇಡ, ಯಾಕಂದರೆ ನೇಮಿತ ಸಮಯವು ಸನ್ನಿಹಿತವಾಗಿದೆ. ಅನೀತಿಯನ್ನು ಮಾಡುತ್ತಿರುವವನು, ಅನೀತಿಯನ್ನು ಮಾಡಲಿ; ಮತ್ತು ಕೊಳಕಾಗಿರುವವನು ಇನ್ನೂ ಕೊಳಕಾಗಿಸಲ್ಪಡಲಿ; ಆದರೆ ನೀತಿವಂತನು ಇನ್ನೂ ನೀತಿಯನ್ನು ಆಚರಿಸಲಿ ಮತ್ತು ಪವಿತ್ರನು ಇನ್ನೂ ಪವಿತ್ರಮಾಡಲ್ಪಡಲಿ.”—ಪ್ರಕಟನೆ 22:10, 11, NW.
4 ಅಭಿಷಿಕ್ತ ಉಳಿಕೆಯವರು ಇಂದು ದೇವದೂತನ ಮಾತುಗಳಿಗೆ ವಿಧೇಯರಾಗಿದ್ದಾರೆ. ಅವರು ಪ್ರವಾದನೆಯ ಮಾತುಗಳಿಗೆ ಮುದ್ರೆ ಹಾಕಲಿಲ್ಲ. ಯಾಕೆ, ಸೈಅನ್ಸ್ ವಾಚ್ ಟವರ್ ಆ್ಯಂಡ್ ಹೆರಲ್ಡ್ ಆಫ್ ಕ್ರೈಸ್ಟ್ಸ್ ಪ್ರೆಸೆನ್ಸ್ (ಜುಲೈ 1879)ರ ಮೊತ್ತ ಮೊದಲ ಸಂಚಿಕೆಯು ಪ್ರಕಟನೆಯ ಅನೇಕ ವಚನಗಳ ಮೇಲೆ ಹೇಳಿಕೆಗಳನ್ನು ಕೊಟ್ಟಿದೆ. ನಮ್ಮ ಆರಂಭದ ಅಧ್ಯಾಯದಲ್ಲಿ ನಾವು ಗಮನಿಸಿದಂತೆ, ಕಳೆದ ವರುಷಗಳಲ್ಲಿಲ್ಲಾ ವಾಚ್ ಟವರ್ ಸೊಸೈಟಿಯು ಪ್ರಕಟನೆಯ ಮೇಲೆ ಜ್ಞಾನೋದಯವನ್ನುಂಟುಮಾಡುವ ಇತರ ಪುಸ್ತಕಗಳನ್ನು ಪ್ರಕಾಶಿಸಿದೆ. ಈಗ ಪುನಃ ನಾವು ಇಲ್ಲಿ ಪ್ರಕಟನೆಯ ಪ್ರಬಲ ಪ್ರವಾದನೆಗಳ ಮತ್ತು ಅವುಗಳ ನೆರವೇರಿಕೆಯ ಕಡೆಗೆ ಸತ್ಯ ಪ್ರಿಯರೆಲ್ಲರ ಗಮನವನ್ನು ಸೆಳೆಯುತ್ತೇವೆ.
5. (ಎ) ಪ್ರಕಟನೆಯ ಎಚ್ಚರಿಕೆಗಳನ್ನು ಮತ್ತು ಹಿತೋಕ್ತಿಗಳನ್ನು ಜನರು ಅಲಕ್ಷಿಸಲು ಬಯಸುವಲ್ಲಿ ಆಗ ಏನು? (ಬಿ) ನಮ್ರ ಮತ್ತು ನೀತಿಯ ಜನರ ಪ್ರತಿವರ್ತನೆ ಏನಾಗಿರತಕ್ಕದ್ದು?
5 ಪ್ರಕಟನೆಯಲ್ಲಿರುವ ಎಚ್ಚರಿಕೆಗಳನ್ನು ಮತ್ತು ಹಿತೋಕ್ತಿಗಳನ್ನು ಜನರು ಅಲಕ್ಷಿಸಲು ಬಯಸಿದರೆ, ಒಳ್ಳೇದು, ಅವರದನ್ನು ಮಾಡಲಿ! “ಅನ್ಯಾಯಮಾಡುವವನು ಇನ್ನೂ ಅನ್ಯಾಯಮಾಡಲಿ.” ಅದು ಅವರ ಆಯ್ಕೆಯಾಗಿರುವುದಾದರೆ, ಈ ವಿಷಯಲೋಲುಪತೆಯ ಯುಗದ ಮೈಲಿಗೆಯಲ್ಲಿ ಹೊರಳಾಡುವವರು ಆ ಮೈಲಿಗೆಯಲ್ಲಿಯೇ ಸಾಯಬಲ್ಲರು. ಬಲುಬೇಗನೆ, ಮಹಾ ಬಾಬೆಲಿನ ನಾಶನದೊಂದಿಗೆ ಆರಂಭಿಸಿ, ಯೆಹೋವನ ತೀರ್ಪುಗಳು ಮುಕ್ತಾಯಘಟ್ಟಕ್ಕೆ ಜಾರಿಗೊಳಿಸಲ್ಪಡುವುವು. ನಮ್ರ ಜನರು ಪ್ರವಾದಿಯ ಮಾತುಗಳನ್ನು ಆಲಿಸಲು ಶ್ರದ್ಧೆಯುಳ್ಳವರಾಗಿರಲಿ: “ಯೆಹೋವನನ್ನು ಆಶ್ರಯಿಸಿರಿ. . . . ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ; ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ.” (ಚೆಫೆನ್ಯ 2:3) ಯೆಹೋವನಿಗೆ ಈಗಾಗಲೇ ಸಮರ್ಪಿಸಿಕೊಂಡವರ ಕುರಿತಾದರೋ, “ನೀತಿವಂತನು ಇನ್ನೂ ನೀತಿಯನ್ನು ಆಚರಿಸಲಿ; ಪವಿತ್ರನು ಇನ್ನೂ ಪವಿತ್ರಮಾಡಲ್ಪಡಲಿ.” ನೀತಿ ಮತ್ತು ಪವಿತ್ರತೆಯನ್ನು ಬೆನ್ನಟ್ಟುವವರಿಂದ ಅನುಭವಿಸಲ್ಪಡುವ ಆಶೀರ್ವಾದಗಳೊಂದಿಗೆ ಪಾಪದಿಂದ ಬರುವ ಯಾವುದೇ ತಾತ್ಕಾಲಿಕ ಪ್ರಯೋಜನಗಳು ಸರಿಗಟ್ಟಲಾರವು ಎಂದು ವಿವೇಕಿಗಳು ತಿಳಿದಿರುತ್ತಾರೆ. ಬೈಬಲ್ ಹೇಳುವುದು: “ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ.” (2 ಕೊರಿಂಥ 13:5) ನೀವು ಆರಿಸುವ ಮತ್ತು ನೆಲೆನಿಲ್ಲುವ ನಡೆವಳಿಯ ಮೇಲೆ ಆಧಾರಗೊಂಡು, ನಿಮ್ಮ ಬಹುಮಾನವನ್ನು ನೀವು ಪಡೆಯುವಿರಿ.—ಕೀರ್ತನೆ 19:9-11; 58:10, 11.
6. ಪ್ರವಾದನೆಯಲ್ಲಿ ಕೊನೆಯ ಸಲ ಪ್ರಕಟನೆಯ ವಾಚಕರಿಗೆ ಸಂಬೋಧಿಸುವಾಗ, ಯೆಹೋವನು ಏನು ಹೇಳುತ್ತಾನೆ?
6 ಶಾಶ್ವತ ಅರಸನಾದ ಯೆಹೋವನು ಈಗ ಪ್ರಕಟನೆಯ ವಾಚಕರಿಗೆ ಪ್ರವಾದನೆಯಲ್ಲಿ ಕೊನೆಯ ಸಲ ಸಂಬೋಧಿಸುತ್ತಾ, ಹೀಗನ್ನುತ್ತಾನೆ: “ಇಗೋ! ನಾನು ಬೇಗ ಬರುತ್ತೇನೆ, ಮತ್ತು ನಾನು ಪ್ರತಿಯೊಬ್ಬನಿಗೆ ಅವನವನ ನಡತೆಯ ಪ್ರಕಾರ ಕೊಡತಕ್ಕ ಪ್ರತಿಫಲವು ನನ್ನ ಹತ್ತರವಿದೆ. ನಾನೇ ಆ್ಯಲ್ಫ ಮತ್ತು ಓಮೆಗ, ಮೊದಲನೆಯವನೂ ಕಡೆಯವನೂ ಮತ್ತು ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ. ಜೀವವೃಕ್ಷಗಳ ಬಳಿಗೆ ಹೋಗುವ ಅಧಿಕಾರವು ಅವರದ್ದಾಗುವಂತೆ ಮತ್ತು ಅದರ ಹೆಬ್ಬಾಗಿಲುಗಳಿಂದ ಆ ನಗರಕ್ಕೆ ಅವರು ಪ್ರವೇಶ ಪಡೆಯುವಂತೆ, ತಮ್ಮ ನಿಲುವಂಗಿಗಳನ್ನು ತೊಳೆಯುವವರು ಸಂತೋಷಿಗಳು. ನಾಯಿಗಳೂ ಪ್ರೇತಾರಾಧನೆಯನ್ನು ಆಚರಿಸುವವರೂ ಜಾರರೂ ಕೊಲೆಗಾರರೂ ವಿಗ್ರಹಾರಾಧಕರೂ ಸುಳ್ಳನ್ನು ಪ್ರೀತಿಸಿ ನಡಿಸುವ ಪ್ರತಿಯೊಬ್ಬರೂ ಹೊರಗಿರುತ್ತಾರೆ.”—ಪ್ರಕಟನೆ 22:12-15, NW.
7. (ಎ) ಯೆಹೋವನು ‘ಬೇಗನೇ ಬರುತ್ತಾನೆ’ ಯಾಕಾಗಿ? (ಬಿ) ಹೊಸ ಯೆರೂಸಲೇಮಿನಲ್ಲಿ ಕ್ರೈಸ್ತ ಪ್ರಪಂಚದ ವೈದಿಕರಿಗೆ ಯಾಕೆ ಪಾಲು ಇರಲಾರದು?
7 ಪುನಃ ಒಮ್ಮೆ, ತನ್ನ ಶಾಶ್ವತ ಸಾರ್ವಭೌಮತೆಯನ್ನು ಮತ್ತು ತಾನು ಆರಂಭದಲ್ಲಿ ಏನನ್ನು ಉದ್ದೇಶಿಸುತ್ತಾನೋ ಅದನ್ನು ಕೊನೆಗೆ ನಡಿಸುವನು ಎಂದು ಯೆಹೋವ ದೇವರು ಒತ್ತಿಹೇಳುತ್ತಾನೆ. ತೀರ್ಪನ್ನು ಜಾರಿಗೊಳಿಸಲು ಮತ್ತು ಅವನನ್ನು ಶ್ರದ್ಧೆಯಿಂದ ಹುಡುಕುವವರಿಗೆ ಪ್ರತಿಫಲವನ್ನು ಕೊಡಲು ಅವನು “ಬೇಗನೆ ಬರು” ತ್ತಾನೆ. (ಇಬ್ರಿಯ 11:6) ಯಾರಿಗೆ ಬಹುಮಾನವನ್ನೀಯಬೇಕು ಮತ್ತು ಯಾರನ್ನು ನಿರಾಕರಿಸಬೇಕು ಎಂದು ಅವನ ಮಟ್ಟಗಳು ನಿರ್ಧರಿಸುತ್ತವೆ. ಕ್ರೈಸ್ತ ಪ್ರಪಂಚದ ವೈದಿಕರು, ಇಲ್ಲಿ ಯೆಹೋವನಿಂದ ವರ್ಣಿಸಲ್ಪಟ್ಟ ದುರಾಚಾರಗಳನ್ನು ಕಂಡೂ ಕಾಣದಂತಿರುವ “ಬೊಗಳಲಾರದ ಮೂಗನಾಯಿ” ಗಳಂತೆ ವರ್ತಿಸಿದ್ದಾರೆ. (ಯೆಶಾಯ 56:10-12; ಧರ್ಮೋಪದೇಶಕಾಂಡ 23:18 ಸಹ ನೋಡಿರಿ, ನ್ಯೂ ವಲ್ಡ್ ಟ್ರಾನ್ಸ್ಲೇಶನ್ ರೆಫರೆನ್ಸ್ ಬೈಬಲ್, ಪಾದಟಿಪಣ್ಟಿ.) ಖಂಡಿತವಾಗಿ, ಅವರು ಸುಳ್ಳು ಬೋಧನೆಗಳನ್ನು ಮತ್ತು ಮತ ತತ್ವಗಳನ್ನು ‘ಪ್ರೀತಿಸಿ ನಡಿಸುವವರು’ ಆಗಿದ್ದಾರೆ ಮತ್ತು ಏಳು ಸಭೆಗಳಿಗಾಗಿರುವ ಯೇಸುವಿನ ಬುದ್ಧಿವಾದವನ್ನು ಸಂಪೂರ್ಣವಾಗಿ ಅಲಕ್ಷಿಸಿದ್ದಾರೆ. ಆದಕಾರಣ, ಹೊಸ ಯೆರೂಸಲೇಮಿನಲ್ಲಿ ಅವರಿಗೆ ಯಾವುದೇ ಪಾಲು ಇಲ್ಲ.
8. (ಎ) ಯಾರು ಮಾತ್ರ “ಜೀವ ವೃಕ್ಷಗಳ ಬಳಿಗೆ” ಹೋಗುವರು ಮತ್ತು ಇದರ ಅರ್ಥವೇನು? (ಬಿ) ಮಹಾ ಸಮೂಹದವರು “ತಮ್ಮ ನಿಲುವಂಗಿಗಳನ್ನು ತೊಳೆದು” ಕೊಂಡದ್ದು ಹೇಗೆ, ಮತ್ತು ಅವರು ಒಂದು ಶುದ್ಧ ನಿಲುವನ್ನು ಕಾದುಕೊಳ್ಳುವುದು ಹೇಗೆ?
8 ಯೆಹೋವನ ಸಮ್ಮುಖದಲ್ಲಿ ಶುದ್ಧವಾಗಿರಲಿಕ್ಕೋಸ್ಕರ ನಿಜವಾಗಿಯೂ “ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡು” ಇರುವ ಅಭಿಷಿಕ್ತ ಕ್ರೈಸ್ತರಿಗೆ ಮಾತ್ರ “ಜೀವವೃಕ್ಷಗಳ ಬಳಿಗೆ” ಹೋಗುವ ಸುಯೋಗ ಇದೆ. ಅಂದರೆ ಅವರ ಪರಲೋಕದ ಸ್ಥಾನದಲ್ಲಿ ಅಮರ ಜೀವಕ್ಕೆ ನ್ಯಾಯವಾದ ಅಧಿಕಾರ ಮತ್ತು ಹಕ್ಕನ್ನು ಅವರು ಪಡೆಯುತ್ತಾರೆ. (ಹೋಲಿಸಿ ಆದಿಕಾಂಡ 3:22-24; ಪ್ರಕಟನೆ 2:7; 3:4, 5.) ಮಾನವರೋಪಾದಿ ಅವರ ಮರಣಾನಂತರ, ಪುನರುತ್ಥಾನದ ಮೂಲಕ ಹೊಸ ಯೆರೂಸಲೇಮಿನೊಳಗೆ ಅವರು ಪ್ರವೇಶವನ್ನು ಪಡೆಯುತ್ತಾರೆ. ಹನ್ನೆರಡು ದೇವದೂತರು ಅವರಿಗೆ ಒಳಹೋಗಲು ಅನುಮತಿಸುವುದಾದರೂ ಅದೇ ಸಮಯದಲ್ಲಿ, ಸ್ವರ್ಗೀಯ ನಿರೀಕ್ಷೆ ಇದೆ ಎಂದು ವಾದಿಸುವುದಾದರೂ, ಸುಳ್ಳುಗಳನ್ನು ಯಾ ಅಶುದ್ಧತ್ವವನ್ನು ನಡಿಸುವ ಯಾವನನ್ನಾದರೂ ಹೊರಗಿಡುವರು. ಭೂಮಿಯ ಮೇಲಿರುವ ಮಹಾ ಸಮೂಹದವರು ಸಹ “ಕುರಿಮರಿಯ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡು ಶುಭ್ರಮಾಡಿದ್ದಾರೆ” ಮತ್ತು ಅವರು ತಮ್ಮ ಶುದ್ಧ ನಿಲುವನ್ನು ಕಾಪಾಡಿಕೊಳ್ಳುವ ಜರೂರಿಯಿದೆ. ಯಾವುದರ ವಿರುದ್ಧ ಯೆಹೋವನು ಇಲ್ಲಿ ಎಚ್ಚರಿಸುತ್ತಾನೋ ಆ ದುರಾಚಾರಗಳನ್ನು ತೊರೆಯುವುದರ ಮೂಲಕ ಹಾಗೂ ಸಭೆಗಳಿಗೆ ತನ್ನ ಏಳು ಸಂದೇಶಗಳಲ್ಲಿ ಯೇಸುವು ನೀಡಿದ ಬುದ್ಧಿವಾದಗಳನ್ನು ಹೃದಯಕ್ಕೆ ತೆಗೆದುಕೊಳ್ಳುವುದರ ಮೂಲಕ ಅವರಿದನ್ನು ಮಾಡಬಲ್ಲರು.—ಪ್ರಕಟನೆ 7:14; ಅಧ್ಯಾಯಗಳು 2 ಮತ್ತು 3.
9. ಯೇಸು ಯಾವ ಮಾತುಗಳನ್ನಾಡುತ್ತಾನೆ, ಮತ್ತು ಅವನ ಸಂದೇಶ ಮತ್ತು ಪೂರ್ಣ ಪ್ರಕಟನೆಯು ಮೊದಲಾಗಿ ಯಾರಿಗೆ ನಿರ್ದೇಶಿಸಲ್ಪಡುತ್ತದೆ?
9 ಯೆಹೋವನ ಅನಂತರ, ಯೇಸುವು ಮಾತಾಡುತ್ತಾನೆ. ಪ್ರಕಟನೆಯನ್ನು ಓದುವ ಯೋಗ್ಯಹೃದಯದವರಿಗೆ ಅವನು ಪ್ರೋತ್ಸಾಹನೆಯ ಮಾತುಗಳನ್ನು ಸಂಬೋಧಿಸುತ್ತಾ, ಹೇಳುವುದು: “ನಾನು, ಯೇಸು ಸಭೆಗಳಿಗಾಗಿ ಈ ಸಂಗತಿಗಳ ವಿಷಯದಲ್ಲಿ ನಿಮಗೆ ಸಾಕ್ಷಿಹೇಳುವುದಕ್ಕೋಸ್ಕರ ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು ದಾವೀದನ ಬೇರು ಮತ್ತು ಸಂತತಿ ಆಗಿದ್ದೇನೆ ಮತ್ತು ಪ್ರಕಾಶಮಾನವಾದ ಉದಯ ನಕ್ಷತ್ರ ಆಗಿದ್ದೇನೆ.” (ಪ್ರಕಟನೆ 22:16, NW) ಹೌದು, ಈ ಮಾತುಗಳು ಆದ್ಯತೆಯಲ್ಲಿ “ಸಭೆಗಳಿಗಾಗಿ” ಇರುತ್ತವೆ. ಮೊತ್ತಮೊದಲಾಗಿ, ಈ ಸಂದೇಶವು ಭೂಮಿಯ ಮೇಲಿರುವ ಅಭಿಷಿಕ್ತ ಕ್ರೈಸ್ತರ ಸಭೆಗಾಗಿ ಇದೆ. ಪ್ರಕಟನೆಯಲ್ಲಿ ಸಂಬೋಧಿಸಲ್ಪಟ್ಟ ಎಲ್ಲವೂ, ಮೊದಲಾಗಿ ಹೊಸ ಯೆರೂಸಲೇಮಿನಲ್ಲಿ ನಿವಾಸಿಸುವ ಅಭಿಷಿಕ್ತ ಕ್ರೈಸ್ತರಿಗಾಗಿ ಇದೆ. ಆ ಸಭೆಯ ಮೂಲಕ, ಮಹಾ ಸಮೂಹದವರು ಸಹ ಈ ಅಮೂಲ್ಯ ಪ್ರವಾದನಾ ಸತ್ಯತೆಗಳ ತಿಳಿವಳಿಕೆಯನ್ನು ಪಡೆದುಕೊಳ್ಳುವ ಸುಯೋಗ ಹೊಂದುತ್ತಾರೆ.—ಯೋಹಾನ 17:18-21.
10. ಯೇಸುವು ತನ್ನನ್ನು ಸ್ವತಃ ಹೀಗೆ ಕರೆಯಿಸಿಕೊಂಡದ್ದು ಯಾಕೆ (ಎ) “ದಾವೀದನ ಬೇರು ಮತ್ತು ಸಂತತಿ”? (ಬಿ) “ಪ್ರಕಾಶವುಳ್ಳ ಉದಯನಕ್ಷತ್ರ”?
10 ಪ್ರಕಟನೆಯನ್ನು ಯೋಹಾನನಿಗೆ ಮತ್ತು ಅವನಿಂದ ಸಭೆಗೆ ದಾಟಿಸುವ ಜವಾಬ್ದಾರಿಯನ್ನು ಯೇಸು ಕ್ರಿಸ್ತನಿಗೆ ವಹಿಸಿಕೊಡಲಾಗಿದೆ. ಯೇಸುವು “ದಾವೀದನ ಬೇರು ಮತ್ತು ಸಂತತಿ” ಎರಡೂ ಆಗಿರುತ್ತಾನೆ. ಮಾಂಸಿಕವಾಗಿ ಅವನು ದಾವೀದನಿಂದ ಇಳಿದುಬಂದನು ಮತ್ತು ಹೀಗೆ ಯೆಹೋವನ ರಾಜ್ಯದ ರಾಜನಾಗಲು ಅರ್ಹನಾಗಿದ್ದಾನೆ. ಅವನು ದಾವೀದನ “ನಿತ್ಯನಾದ ತಂದೆ”ಯೂ ಆಗುವನು ಮತ್ತು ಹೀಗೆ ದಾವೀದನ “ಬೇರು” ಸಹ ಆಗುವನು. (ಯೆಶಾಯ 9:6; 11:1, 10) ದಾವೀದನೊಂದಿಗಿನ ಯೆಹೋವನ ಒಡಂಬಡಿಕೆಯನ್ನು ನೆರವೇರಿಸುತ್ತಾ, ಅವನು ದಾವೀದನ ಸಂತಾನದಲ್ಲಿ ಶಾಶ್ವತ, ಅಮರ ರಾಜನೂ, ಮತ್ತು ಮೋಶೆಯ ದಿನಗಳಲ್ಲಿ ಮುಂತಿಳಿಸಿದ “ಪ್ರಕಾಶವುಳ್ಳ ಉದಯ ನಕ್ಷತ್ರವೂ” ಆಗಿದ್ದಾನೆ. (ಅರಣ್ಯಕಾಂಡ 24:17; ಕೀರ್ತನೆ 89:34-37) ಅವನು ಅರುಣೋದಯವಾಗಲು ಕಾರಣವಾಗುವ “ಬೆಳ್ಳಿಯು” ಆಗಿದ್ದಾನೆ. (2 ಪೇತ್ರ 1:19) ಮಹಾ ಶತ್ರುವಾದ ಮಹಾ ಬಾಬೆಲಿನ ಎಲ್ಲಾ ಕುಯುಕ್ತಿಗಳಿಗೆ ಈ ಮಹಿಮೆಯ ಆರೋಹಣವನ್ನು ತಡೆಯಲು ಸಾಧ್ಯವಾಗಿರುವುದಿಲ್ಲ.
ಹೇಳಿರಿ: “ಬಾ!”
11. ಯೋಹಾನನು ಈಗ ಯಾವ ಬಹಿರಂಗ ಆಮಂತ್ರಣವನ್ನು ಸಾದರಪಡಿಸುತ್ತಾನೆ, ಮತ್ತು ಅದಕ್ಕೆ ಯಾರು ಪ್ರತಿವರ್ತಿಸಬಹುದು?
11 ಈಗ ಮಾತಾಡಲು ಸ್ವತಃ ಯೋಹಾನನ ಸರದಿಯಾಗಿದೆ. ಅವನು ಏನೆಲ್ಲಾ ನೋಡಿದನೋ ಮತ್ತು ಕೇಳಿದನೋ ಅದರಿಂದಾದ ಗಣ್ಯತೆಯಿಂದ ಹೃದಯ ತುಂಬಿತುಳುಕಿದವನಾಗಿ, ಅವನು ಉದ್ಗರಿಸುವುದು: “ಮತ್ತು ಆತ್ಮವೂ ವಧುವೂ ಹೇಳುತ್ತಾ ಮುಂದುವರಿಯುವುದು: ‘ಬಾ!’ ಮತ್ತು ಕೇಳುತ್ತಿರುವ ಯಾವನಾದರೂ ಹೇಳಲಿ: ‘ಬಾ!’ ಮತ್ತು ದಾಹಪಡುತ್ತಿರುವ ಯಾವನಾದರೂ ಬರಲಿ; ಇಷ್ಟವುಳ್ಳ ಯಾವನಾದರೂ ಜೀವದ ಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.” (ಪ್ರಕಟನೆ 22:17, NW) ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಪ್ರಯೋಜನಗಳು ಕೇವಲ 1,44,000 ಮಂದಿಗೆ ಸೀಮಿತವಾಗಿಲ್ಲ, ಯಾಕಂದರೆ ಇಲ್ಲಿ ಒಂದು ಬಹಿರಂಗ ಆಮಂತ್ರಣವಿದೆ. ಯೆಹೋವನ ಪ್ರಚೋದಕ ಆತ್ಮವು ವಧು ವರ್ಗದ ಮೂಲಕ ಕಾರ್ಯನಡಿಸುವುದರಿಂದ, ಸಂದೇಶವು ಎಲ್ಲಾ ಸ್ಪಷ್ಟತೆಯೊಂದಿಗೆ ಧ್ವನಿಸಲ್ಪಡುತ್ತಾ ಮುಂದರಿಯುತ್ತದೆ: “ಜೀವದ ಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.” (ಇದನ್ನೂ ನೋಡಿರಿ ಯೆಶಾಯ 55:1; 59:21.) ನೀತಿಗಾಗಿ ದಾಹಗೊಂಡ ಯಾರಾದರೂ “ಬರಲು” ಮತ್ತು ಯೆಹೋವನ ಕೊಡುಗೆಯನ್ನು ಪಡೆಯಲು ಆಮಂತ್ರಿಸಲ್ಪಡುತ್ತಾನೆ. (ಮತ್ತಾಯ 5:3, 6) ಅಭಿಷಿಕ್ತ ಯೋಹಾನ ವರ್ಗದ ಈ ಆಮಂತ್ರಣಕ್ಕೆ ಪ್ರತಿವರ್ತಿಸುವ ಭಾವೀ ಐಹಿಕ ವರ್ಗದವರೆಲ್ಲರೂ ಎಷ್ಟು ಸುಯೋಗವುಳ್ಳವರಾಗಿದ್ದಾರೆ!
12. ಪ್ರಕಟನೆ 22:17ರ ಆಮಂತ್ರಣಕ್ಕೆ ಮಹಾ ಸಮೂಹವು ಹೇಗೆ ಪ್ರತಿವರ್ತಿಸುತ್ತದೆ?
12 ದಶಕ 1930 ಗಳ ಆದಿಭಾಗದಿಂದ ಮಹಾ ಸಮೂಹದ ಬೆಳೆಯುತ್ತಿರುವ ಸಂಖ್ಯೆಯವರು ‘ಕೇಳುತ್ತಾರೆ’—ಆಮಂತ್ರಣಕ್ಕೆ ಗಮನ ಹರಿಸುತ್ತಿದ್ದಾರೆ. ಅವರ ಅಭಿಷಿಕ್ತ ಜೊತೆ ದಾಸರಂತೆ, ಅವರು ಯೆಹೋವನ ಮುಂದೆ ಒಂದು ಶುದ್ಧ ನಿಲುವನ್ನು ಹೊಂದಿದ್ದಾರೆ. ಪರಲೋಕದಿಂದ ಹೊಸ ಯೆರೂಸಲೇಮ್ ಇಳಿದುಬಂದು, ಮಾನವ ಕುಲಕ್ಕೆ ಆಶೀರ್ವಾದಗಳನ್ನು ಹರಿಸುವ ಸಮಯಕ್ಕಾಗಿ ಅವರು ಹಾತೊರೆಯುತ್ತಾರೆ. ಪ್ರಕಟನೆಯ ಹುರಿದಂಬಿಸುವ ಸಂದೇಶವನ್ನು ಕೇಳಿರುವುದರಿಂದ, ಮಹಾ ಸಮೂಹದವರು “ಬಾ!” ಎಂದು ಮಾತ್ರ ಹೇಳುವುದಲ್ಲ, ಯೆಹೋವನ ಸಂಸ್ಥೆಯೊಳಗೆ ಸಕ್ರಿಯವಾಗಿ ಇತರರನ್ನು ಒಟ್ಟುಗೂಡಿಸುತ್ತಲೂ ಇದ್ದಾರೆ, “ದಾಹಪಡುವ ಯಾವನಾದರೂ ಬರಲಿ” ಎಂದು ಘೋಷಿಸುವಂತೆ ಇವರನ್ನು ಸಹ ತರಬೇತುಗೊಳಿಸುತ್ತಿದ್ದಾರೆ. ಹೀಗೆ ಮಹಾ ಸಮೂಹದವರ ಸಂಖ್ಯೆಯು ಬೆಳೆಯುತ್ತಾ ಹೋಗುತ್ತದೆ, “ಇಷ್ಟವುಳ್ಳ ಯಾವನಾದರೂ ಜೀವದ ಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ” ಎಂಬ ಆಮಂತ್ರಣವನ್ನು ಅಭಿಷಿಕ್ತ ಮದಲಗಿತ್ತಿ ವರ್ಗದ 8,700 ಕ್ಕಿಂತಲೂ ಕಡಿಮೆ ಮಂದಿಯವರೊಂದಿಗೆ ಲೋಕವ್ಯಾಪಕವಾಗಿ 230 ಕ್ಕಿಂತಲೂ ಹೆಚ್ಚು ದೇಶಗಳಲ್ಲಿ 44,00,000 ಕ್ಕಿಂತಲೂ ಹೆಚ್ಚಿನವರು ನೀಡುವುದರಲ್ಲಿ ಪಾಲಿಗರಾಗುತ್ತಾರೆ.
13. ಯಾವ ಎಚ್ಚರಿಕೆಯನ್ನು ಯೇಸುವು ನೀಡುತ್ತಾನೆ?
13 ತದನಂತರ, ಪುನಃ ಮಾತಾಡುವವನು ಯೇಸುವಾಗಿದ್ದು, ಆತನು ಹೇಳುವುದು: “ಈ ಸುರುಳಿಯ ಪ್ರವಾದನಾವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಸಾಕ್ಷಿ ಹೇಳುತ್ತಿದ್ದೇನೆ: ಈ ಸಂಗತಿಗಳಿಗೆ ಯಾವನಾದರೂ ಕೂಡಿಸುವುದಾದರೆ ದೇವರು ಅವನಿಗೆ ಈ ಸುರುಳಿಯಲ್ಲಿ ಬರೆದಿರುವ ಉಪದ್ರವಗಳನ್ನು ಕೂಡಿಸುವನು. ಮತ್ತು ಯಾವನಾದರೂ ಈ ಪ್ರವಾದನಾ ಸುರುಳಿಯಲ್ಲಿರುವ ಮಾತುಗಳಿಂದ ಏನನ್ನಾದರೂ ತೆಗೆದುಬಿಡುವುದಾದರೆ ಈ ಸುರುಳಿಯಲ್ಲಿ ಯಾವ ಸಂಗತಿಗಳ ಕುರಿತು ಬರೆದಿದೆಯೋ ಆ ಜೀವವೃಕ್ಷಗಳಿಂದ ಮತ್ತು ಪರಿಶುದ್ಧ ನಗರದಿಂದ ಅವನ ಪಾಲನ್ನು ದೇವರು ತೆಗೆದುಬಿಡುವನು.”—ಪ್ರಕಟನೆ 22:18, 19, NW.
14. ಪ್ರಕಟನೆಯ “ಪ್ರವಾದನೆ” ಯನ್ನು ಯೋಹಾನ ವರ್ಗವು ಹೇಗೆ ವೀಕ್ಷಿಸುತ್ತದೆ?
14 ಪ್ರಕಟನೆಯ “ಪ್ರವಾದನೆ” ಗಳಿಗೆ ಯೋಹಾನ ವರ್ಗದವರು ಗಮನವನ್ನು ಸೆಳೆಯತಕ್ಕದ್ದು. ಅವರು ಅದನ್ನು ಅಡಗಿಸಿಡಬಾರದು ಯಾ ಅದಕ್ಕೆ ಕೂಡಿಸಬಾರದು. ಅದರ ಸಂದೇಶವು ಬಹಿರಂಗವಾಗಿ, “ಮಾಳಿಗೆಗಳ ಮೇಲೆ ನಿಂತು” ಸಾರಲ್ಪಡತಕ್ಕದ್ದು. (ಮತ್ತಾಯ 10:27) ಪ್ರಕಟನೆಯು ದೇವಪ್ರೇರಿತವಾಗಿದೆ. ಸ್ವತಃ ದೇವರು ತಾನೇ ಆಡಿದ ಮತ್ತು ಈಗ ಆಳುವ ಅರಸನಾದ ಯೇಸು ಕ್ರಿಸ್ತನ ಮೂಲಕ ದಾಟಿಸಲ್ಪಟ್ಟ ಮಾತುಗಳಲ್ಲೊಂದನ್ನು ಬದಲಾಯಿಸಲು ಒಬ್ಬನು ಹೇಗೆ ತಾನೇ ಧೈರ್ಯ ತಾಳಿಯಾನು? ಖಂಡಿತವಾಗಿಯೂ, ಅಂತಹ ವ್ಯಕ್ತಿಯು ಜೀವದ ಅನ್ವೇಷಣೆಯಲ್ಲಿ ನಷ್ಟಹೊಂದಲು ಮತ್ತು ಮಹಾ ಬಾಬೆಲಿನ ಮತ್ತು ಇಡೀ ಲೋಕದ ಮೇಲೆ ಬರತಕ್ಕ ವಿಪತ್ತುಗಳಿಂದ ಬಾಧಿಸಲ್ಪಡಲು ಅರ್ಹನಾಗುವನು.
15. ಅವನು “ಈ ವಿಷಯಗಳ ಸಾಕ್ಷಿ ಹೇಳುವವನು” ಮತ್ತು “ನಾನು ಬೇಗ ಬರುತ್ತೇನೆ” ಎಂಬ ಯೇಸುವಿನ ಮಾತುಗಳ ಸೂಚಿತಾರ್ಥವೇನು?
15 ಈಗ ಯೇಸುವು ಉತ್ತೇಜನದ ಕೊನೆಯ ಮಾತನ್ನು ಸೇರಿಸುತ್ತಾನೆ: “ಈ ವಿಷಯಗಳಲ್ಲಿ ಸಾಕ್ಷಿಹೇಳುವವನು ಅನ್ನುವುದು, ‘ಹೌದು; ನಾನು ಬೇಗ ಬರುತ್ತೇನೆ.’” (ಪ್ರಕಟನೆ 22:20ಎ, NW) ಯೇಸುವು “ನಂಬತಕ್ಕ ಸತ್ಯಸಾಕ್ಷಿ” ಆಗಿದ್ದಾನೆ. (ಪ್ರಕಟನೆ 3:14) ಪ್ರಕಟನೆಯ ದರ್ಶನಗಳಿಗೆ ಅವನು ಸಾಕ್ಷಿಯನ್ನು ಕೊಡುವುದಾದರೆ, ಅವು ಸತ್ಯವಾಗಿರಲೇ ಬೇಕು. ಅವನು ಮತ್ತು ಯೆಹೋವ ದೇವರು ತಾನೇ ಹೀಗೆ ಇಬ್ಬರೂ, ತಾವು “ಬೇಗನೆ” ಯಾ ಶೀಘ್ರದಲ್ಲಿ ಬರುತ್ತೇವೆ ಎಂಬ ವಾಸ್ತವಾಂಶವನ್ನು ಪುನಃ ಪುನಃ ಒತ್ತಿಹೇಳುತ್ತಾರೆ, ಇಲ್ಲಿ ಯೇಸುವು ಅದನ್ನು ಐದನೆಯ ಬಾರಿ ಹೇಳುತ್ತಾನೆ. (ಪ್ರಕಟನೆ 2:16; 3:11; 22:7, 12, 20) ಈ ‘ಬರೋಣ’ವು ಮಹಾ ಜಾರಸ್ತ್ರೀಯ, ರಾಜಕೀಯ “ರಾಜರ”, ಮತ್ತು “ನಮ್ಮ ಕರ್ತನ [ಯೆಹೋವನ] ಮತ್ತು ಆತನ ಕ್ರಿಸ್ತನ ರಾಜ್ಯಾಧಿಕಾರ” ವನ್ನು ವಿರೋಧಿಸುವ ಇತರ ಎಲ್ಲರ ಮೇಲೆ ನ್ಯಾಯ ದಂಡನೆಯನ್ನು ಜಾರಿಗೊಳಿಸಲಿಕ್ಕಾಗಿ ಇದೆ.—ಪ್ರಕಟನೆ 11:15, NW; 16:14, 16; 17:1, 12-14.
16. ಯೆಹೋವ ದೇವರು ಮತ್ತು ಯೇಸುವು ಬೇಗನೇ ಬರುತ್ತಾರೆ ಎಂದು ತಿಳಿದಿರುವುದರಿಂದ ಯಾವ ನಿರ್ಧಾರಕ ಕ್ರಿಯೆಯನ್ನು ನೀವು ತೆಗೆದುಕೊಳ್ಳತಕ್ಕದ್ದು?
16 ಯೆಹೋವ ದೇವರು ಮತ್ತು ಯೇಸುವು ಶೀಘ್ರದಲ್ಲಿ ಬರುತ್ತಾರೆಂದು ನಿಮಗೆ ತಿಳಿದಿರುವುದು, “ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ” ಇರುವಂತೆ ನಿಮ್ಮನ್ನು ಪ್ರೋತ್ಸಾಹಿಸತಕ್ಕದ್ದು. (2 ಪೇತ್ರ 3:12) ಸೈತಾನನ ವಿಷಯಗಳ ವ್ಯವಸ್ಥೆಯ ಭೂಮಿಯು ಸ್ಥಿರವಾಗಿದೆಯೆಂಬ ಯಾವುದೇ ಭಾಸವಾಗುವಿಕೆಯು ಒಂದು ಭ್ರಮೆಯಾಗಿದೆ. ಸೈತಾನನ ಕೆಳಗಿನ ಲೋಕದ ಅಧಿಪತಿಗಳ ಆಕಾಶಮಂಡಲವು ಪಡೆಯಬಹುದಾದ ಯಾವುದೇ ತೋರಿಕೆಯ ಯಶಸ್ಸು ಕೇವಲ ದಾಟಿಹೋಗುವಂತಹದ್ದು. ಈ ಸಂಗತಿಗಳು ಗತಿಸಿಹೋಗುವುವು. (ಪ್ರಕಟನೆ 21:1) ಯೆಹೋವನಲ್ಲಿ, ಯೇಸು ಕ್ರಿಸ್ತನ ಕೆಳಗೆ ಅವನ ರಾಜ್ಯದಲ್ಲಿ, ಮತ್ತು ಅವನ ವಾಗ್ದಾನಿತ ಹೊಸ ಲೋಕದಲ್ಲಿ ಮಾತ್ರವೇ ನಿತ್ಯತೆಯನ್ನು ಕಂಡುಕೊಳ್ಳಬಹುದು. ಆ ನೋಟವನ್ನೆಂದೂ ಕಳೆದುಕೊಳ್ಳದಿರ್ರಿ!—1 ಯೋಹಾನ 2:15-17.
17. ಯೆಹೋವನ ಪವಿತ್ರತೆಯ ನಿಮ್ಮ ಗಣ್ಯತೆಯು ನಿಮ್ಮನ್ನು ಹೇಗೆ ಪ್ರಭಾವಿಸತಕ್ಕದ್ದು?
17 ಹಾಗಾದರೆ, ಪ್ರಕಟನೆಯ ಪುಸ್ತಕದ ನಿಮ್ಮ ಅಧ್ಯಯನದಿಂದ ನೀವೇನು ಕಲಿತಿದ್ದೀರೋ, ಅದರಿಂದ ನಿಮ್ಮ ಜೀವಿತವು ಅಗಾಧವಾಗಿ ಪ್ರಭಾವಿಸಲ್ಪಡುವಂತೆ ಬಿಡಿರಿ. ಯೆಹೋವನ ಸ್ವರ್ಗೀಯ ಸಾನ್ನಿಧ್ಯದೊಳಗಿನ ನಿಮ್ಮ ಇಣುಕುನೋಟವು, ನಮ್ಮ ನಿರ್ಮಾಣಿಕನ ಪ್ರಕೃತ್ಯತೀತ ಮಹಿಮೆ ಮತ್ತು ಪವಿತ್ರತೆಯನ್ನು ನಿಮ್ಮ ಮೇಲೆ ಅಚ್ಚೊತ್ತಲಿಲ್ಲವೇ? (ಪ್ರಕಟನೆ 4:1–5:14) ಅಂತಹ ದೇವರೊಬ್ಬನನ್ನು ಆರಾಧಿಸುವುದು ಎಂತಹ ಒಂದು ಸುಯೋಗವು! ಅವನ ಪವಿತ್ರತೆಯ ನಿಮ್ಮ ಗಣ್ಯತೆಯು ಏಳು ಸಭೆಗಳಿಗೆ ಯೇಸುವು ಕೊಟ್ಟ ಬುದ್ಧಿವಾದವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಮತ್ತು ಪ್ರಾಪಂಚಿಕತೆ, ವಿಗ್ರಹಾರಾಧನೆ, ಅನೈತಿಕತೆ, ಉಗುರುಬೆಚ್ಚಗೆರುವಿಕೆ, ಧರ್ಮಭ್ರಷ್ಟತೆಯ ಪಂಥಾಭಿಮಾನಗಳು, ಯಾ ನಿಮ್ಮ ಸೇವೆಯನ್ನು ಯೆಹೋವನು ಸ್ವೀಕರಿಸದಂತೆ ಮಾಡುವ ಇತರ ಯಾವುದೇ ವಿಷಯಗಳಂತಹವುಗಳನ್ನು ಹೋಗಲಾಡಿಸಲು ನಿಮ್ಮನ್ನು ಪ್ರಚೋದಿಸಲಿ. (ಪ್ರಕಟನೆ 2:1–3:22) ಯೋಹಾನ ವರ್ಗದವರಿಗೆ ಹೇಳಿದ ಅಪೊಸ್ತಲ ಪೇತ್ರನ ಮಾತುಗಳು, ತಾತ್ವಿಕವಾಗಿ ಮಹಾ ಸಮೂಹದವರಿಗೂ ಅನ್ವಯಿಸುತ್ತವೆ: “ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಿಗೆ ತಕ್ಕಂತೆ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಿ. ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು.”—1 ಪೇತ್ರ 1:15, 16.
18. ಯಾವುದರಲ್ಲಿ ಸಾಧ್ಯವಿದ್ದಷ್ಟು ಪೂರ್ಣ ಪಾತ್ರವನ್ನು ನೀವು ಆಡತಕ್ಕದ್ದು, ಮತ್ತು ಇಂದು ಈ ಕಾರ್ಯವು ಯಾಕೆ ತುರ್ತಿನದ್ದಾಗಿದೆ?
18 ಇದಕ್ಕೆ ಕೂಡಿಸಿ, ನೀವು “ಯೆಹೋವನು ನೇಮಿಸಿರುವ ಶುಭವರುಷ, ನಮ್ಮ ದೇವರು ಮುಯ್ಯಿತೀರಿಸುವ ದಿನ” ವನ್ನು ಘೋಷಿಸುತ್ತಿರುವಂತೆಯೇ, ನೀವು ಪುನಶ್ಚೈತನ್ಯಗೊಳಿಸಲ್ಪಟ್ಟ ಹುರುಪಿಗೆ ಪ್ರೇರಿಸಲ್ಪಡುವಂತಾಗಲಿ. (ಯೆಶಾಯ 35:4; 61:2) ಚಿಕ್ಕ ಹಿಂಡಿನವರಾಗಿರಲಿ, ಯಾ ಮಹಾ ಸಮೂಹದವರಾಗಿರಲಿ, ಸೈತಾನನ ಲೋಕದ ಮೇಲೆ ದೇವರ ತೀರ್ಪುಗಳನ್ನು ಹೇಳುವುದರಲ್ಲಿ, ಯೆಹೋವನ ರೌದ್ರದ ಏಳು ಪಾತ್ರೆಗಳನ್ನು ಹೊಯ್ಯುವುದನ್ನು ಪ್ರಕಟಿಸುವುದರಲ್ಲಿ ಸಾಧ್ಯವಿದ್ದಷ್ಟು ಸಂಪೂರ್ಣ ಪಾಲು ನಿಮಗಿರಲಿ. ಅದೇ ಸಮಯದಲ್ಲಿ, ಯೆಹೋವನ ಮತ್ತು ಅವನ ಕ್ರಿಸ್ತನ ಸ್ಥಾಪಿತ ರಾಜ್ಯದ ಕುರಿತಾದ ನಿತ್ಯ ಶುಭ ವಾರ್ತೆಯ ಹರ್ಷಭರಿತ ಘೋಷಣೆಗೆ ನಿಮ್ಮ ಸರ್ವವನ್ನು ನೀಡಿರಿ. (ಪ್ರಕಟನೆ 11:15; 14:6, 7) ಈ ಕೆಲಸದಲ್ಲಿ ತುರ್ತಾಗಿ ತತ್ಪರರಾಗಿರಿ. ಮತ್ತು ನಾವು ಕರ್ತನ ದಿನದಲ್ಲಿ ಇದ್ದೇವೆ ಎಂಬ ಮನವರಿಕೆಯು, ಯೆಹೋವನನ್ನು ಇನ್ನೂ ಸೇವಿಸದಿರುವ ಅನೇಕರನ್ನು ಸುವಾರ್ತೆಯನ್ನು ಘೋಷಿಸುವ ಕಾರ್ಯದಲ್ಲಿ ಸೇರಲು ಪ್ರಚೋದಿಸಲಿ. ಅವರು ಕೂಡ ದೀಕ್ಷಾಸ್ನಾನ ಪಡೆಯುವ ನೋಟದೊಂದಿಗೆ ದೇವರಿಗೆ ತಮ್ಮ ಜೀವಿತಗಳನ್ನು ಸಮರ್ಪಿಸುವಂತೆ ಪ್ರಗತಿಯನ್ನು ಮಾಡಲಿ. ನೆನಪಿಡಿರಿ, “ಅವು ನೆರವೇರುವ ಸಮಯವು ಸಮೀಪವಾಗಿದೆ”!—ಪ್ರಕಟನೆ 1:3.
19. ವಯಸ್ಸಾದ ಅಪೊಸ್ತಲ ಯೋಹಾನನ ಮುಕ್ತಾಯದ ಮಾತುಗಳೇನು, ಮತ್ತು ನೀವು ಅದಕ್ಕೆ ಹೇಗೆ ಪ್ರತಿವರ್ತಿಸುತ್ತೀರಿ?
19 ಹೀಗೆ, ಯೋಹಾನನೊಂದಿಗೆ ನಾವು ಅತ್ಯಾಸಕ್ತಿಯಿಂದ ಪ್ರಾರ್ಥಿಸುತ್ತೇವೆ: “ಆಮೆನ್! ಕರ್ತನಾದ ಯೇಸುವೇ, ಬಾ.” ಮತ್ತು ವಯಸ್ಸಾದ ಅಪೊಸ್ತಲ ಯೋಹಾನನು ಕೂಡಿಸುವುದು: “ಕರ್ತನಾದ ಯೇಸು ಕ್ರಿಸ್ತನ ಕೃಪೆಯು ಪವಿತ್ರರೊಂದಿಗೆ ಇರಲಿ.” (ಪ್ರಕಟನೆ 22:20ಬಿ, 21, NW) ಅಂತೆಯೇ ಈ ಪ್ರಕಾಶನವನ್ನು ಓದುವ ನಿಮ್ಮೆಲ್ಲರಿಗೂ ಇರಲಿ. ಪ್ರಕಟನೆಯ ಮಹಾ ಪರಮಾವಧಿಯು ಹತ್ತಿರದಲ್ಲಿದೆ ಎಂಬ ನಂಬಿಕೆಯು ನಿಮ್ಮದಾಗಿರಲಿ, ಹೀಗೆ ನೀವೂ ನಮ್ಮೊಂದಿಗೆ ಹೃತ್ಪೂರ್ವಕವಾಗಿ “ಆಮೆನ್!” ಹೇಳುವುದರಲ್ಲಿ ಸೇರಬಲ್ಲಿರಿ.
[Picture on page 314]
“ನಾಯಿಗಳು . . . ಹೊರಗಿರುವರು”
[Picture on page 315]
“ಹೆಬ್ಬಾಗಿಲುಗಳಿಂದ ಆ ನಗರದೊಳಗೆ ಸೇರುವವರು . . . ಸಂತೋಷಿಗಳು.”