ಭೌಗೋಳಿಕ ಸಹೋದರತ್ವವು ಖಂಡಿತ!
ಪಶ್ಚಿಮ ಆಫ್ರಿಕದ ಒಂದು ಮೂಲೆಕಾಡು ಪ್ರದೇಶದಲ್ಲಿ ಜರುಗಿದ ಧಾರ್ಮಿಕ ಅಧಿವೇಶನವೊಂದರಲ್ಲಿ ಮಿಶನೆರಿಯೊಬ್ಬನು ಹಾಜರಾದಾಗ, ಅಲ್ಲಿ ಅವನು ಹೆಚ್ಚು ಸಮಯವಿರಲಿಲ್ಲ. ಅವನು ಸ್ಥಳೀಯ ಪರಿವಾರವೊಂದನ್ನು ಸಮೀಪಿಸಿದಾಗ, ಯಾವುದೇ ತೋರುವ ಕಾರಣವಿಲ್ಲದೆ, ಎರಡು ವರ್ಷ ಪ್ರಾಯದ ಹುಡುಗನು ಅಳಲಾರಂಭಿಸಿದನು.
ಮಿಶನೆರಿಯು ಮಗುವನ್ನು ಸಂತೈಸಲು ಪ್ರಯತ್ನಿಸಿದನು, ಆದರೆ ಮಗುವಿನ ಅಳುವಿಕೆಯು ಅರಚಾಟಕ್ಕೇರಿತು. “ತಪ್ಪೇನಾಯಿತು?” ಮಿಶನೆರಿಯು ತಾಯಿಯನ್ನು ಕೇಳಿದನು. ಸ್ವಲ್ಪ ಸಂಕೋಚಪಡುತ್ತಾ ತಾಯಿ ಉತ್ತರಿಸಿದ್ದು: “ನೀನೇ ಅದಕ್ಕೆ ಕಾರಣ ಎಂದು ನಾನು ಯೋಚಿಸುತ್ತೇನೆ. ನಿನ್ನ ವರ್ಣದಿಂದ ಅವನಿಗೆ ಭಯವಾಗಿದೆ. ಈ ಮುಂಚೆ ಅವನೆಂದು ಒಬ್ಬ ಬಿಳಿ ಮನುಷ್ಯನನ್ನು ನೋಡಿದ್ದಿಲ್ಲ.”
ಬಾಲ್ಯಾರಂಭದಿಂದಲೇ ಜನರ ನಡುವಣ ಶಾರೀರಿಕ ಭಿನ್ನತೆಗಳ ಗುರಿತು ನಾವು ಅರಿವುಳ್ಳವರಾಗಬಹುದು. ಅವಿಚಾರಾಭಿಪ್ರಾಯಗಳು ನಂತರ ಬೆಳೆಯಲ್ಪಡುತ್ತವೆ. ಮಕ್ಕಳ ದೃಷ್ಟಿಕೋನಗಳು, ಅವರ ಹೆತ್ತವರಂಥಹ ವಯಸ್ಸಾದ ಇತರ ವ್ಯಕ್ತಿಗಳ ಮನೋಭಾವಗಳನ್ನು ಮತ್ತು ನಡತೆಯನ್ನು ಅವರು ಅವಲೋಕಿಸುತ್ತಿರುವಂತೆಯೇ, ರೂಪಿಸಲ್ಪಡುತ್ತವೆ. ಶಾಲೆಯಲ್ಲಿ ಅವರ ಶಿಕ್ಷಕರುಗಳಿಂದ, ಮಿತ್ರರುಗಳಿಂದ, ಮತ್ತು ತರಗತಿಯ ಸಹವಾಸಿಗಳಿಂದ ಇನ್ನಷ್ಟು ಪ್ರಭಾವಿಸಲ್ಪಡುತ್ತವೆ.
ಅಮೆರಿಕದ ಒಂದು ದೀರ್ಘಕಾಲದ ಅಧ್ಯಯನಕ್ಕನುಸಾರ, ಮಕ್ಕಳು 12 ವರ್ಷ ವಯಸ್ಸಿನವರಾಗುವಾಗ, ಅವರ ಸುತ್ತಲಿನ ಕುರಿತಾಗಿ, ಅವರು ಈಗಾಗಲೇ, ಬುಡಕಟ್ಟಿನ, ಕುಲವರ್ಣೀಯ, ಮತ್ತು ಧಾರ್ಮಿಕ ಗುಂಪುಗಳ ಒಂದು ಏಕಪ್ರಕಾರದ ದೃಷ್ಟಿಕೋನವನ್ನು ಬೆಳೆಸಿರುತ್ತಾರೆ. ಪ್ರಾಯಕ್ಕೆ ಬಂದಾಗ, ಈ ದೃಷ್ಟಿಕೋನಗಳು ಆಳವಾಗಿ ಬೇರೂರಿರುತ್ತವೆ.
ಯೆಹೋವನ ಸಾಕ್ಷಿಗಳು ಭಿನ್ನರು
ಪೂರ್ವಾಗ್ರಹ ಪೀಡಿತವಾಗಿರುವದು ತುಂಬಿರುವ ಲೋಕವೊಂದರಲ್ಲಿ, ಯೆಹೋವನ ಸಾಕ್ಷಿಗಳು ಅತಿ ಭಿನ್ನರಾಗಿ ಎದ್ದು ತೋರುತ್ತಾರೆ. ಅವರ ಕುಲವರ್ಣೀಯ ಸಾಮರಸ್ಯಕ್ಕಾಗಿ ಅವರು ಅಂತರ್ರಾಷ್ಟ್ರೀಯವಾಗಿ ಖ್ಯಾತರಾಗಿರುತ್ತಾರೆ. ಅವರ ದೊಡ್ಡ ವಾರ್ಷಿಕ ಅಧಿವೇಶನಗಳಲ್ಲಿ ಅವಲೋಕಿಸುವವರಿಂದ ಇದು ಗಮನಿಸಲ್ಪಟ್ಟಿದೆ.
ಉದಾಹರಣೆಗೆ, ಸ್ಟೇಟ್ಸ್-ಐಟಂ ವಾರ್ತಾಪತ್ರವು ದಕ್ಷಿಣ ಅಮೆರಿಕದಲ್ಲಿ ಜರುಗಿದ ಸಾಕ್ಷಿಗಳ ಒಂದು ದೊಡ್ಡ ಅಧಿವೇಶನದ ಕುರಿತು ಹೀಗೆಂದು ವರದಿ ಮಾಡಿದೆ: “ಎಳೆಯರು ಮತ್ತು ಹಳಬರು, ಕಪ್ಪು ಮತ್ತು ಬಿಳಿ ಯೆಹೋವನ ಸಾಕ್ಷಿಗಳು . . . ಕಲಿಯಲು ಮತ್ತು ಅನುಭವವನ್ನು ಹಂಚಿಕೊಳ್ಳಲು . . . ಲೂಸಿಯಾನ ಸುಪರ್ಡೋಮ್ನಲ್ಲಿ ತುಂಬಿಕೊಂಡಾಗ, ಸಹೋದರತ್ವದ ಒಂದು ಭಾವನೆಯು ಅಲ್ಲಿ ನೆಲಸಿತ್ತು. . . . ಕುಲವರ್ಣೀಯ ಪಕ್ಷಪಾತ . . . ಸಾಕ್ಷಿಗಳಿಗೆ ಒಂದು ಸಮಸ್ಯೆಯಾಗಿರುವದಿಲ್ಲ.”
ದಕ್ಷಿಣ ಆಫ್ರಿಕದ ಸಾಕ್ಷಿಗಳ ಒಂದು ಅಧಿವೇಶನದಲ್ಲಿ, ಕ್ಷೋಸ ಸ್ತ್ರೀಯೊಬ್ಬಳು ಹೇಳಿದ್ದು: “ಎಲ್ಲಾ ಕುಲಗಳ ಜನರು ಅಷ್ಟೊಂದು ಐಕ್ಯತೆಯಲ್ಲಿರಲು ದಕ್ಷಿಣ ಆಫ್ರಿಕದಲ್ಲಿ ಸಾಧ್ಯವಿದೆ ಎಂಬದು ಒಂದು ಅಚ್ಚರಿಯ ಸಂಗತಿಯಾಗಿದೆ. ನಾನು ಚರ್ಚುಗಳಲ್ಲಿದ್ದಾಗ ಇರುವದಕ್ಕಿಂತ ಇದೆಷ್ಟೋ ಭಿನ್ನವಾಗಿದೆ.”
ಪೌರಾತ್ಯ ಮತ್ತು ದಕ್ಷಿಣ ಪೆಸಿಫಿಕ್ನಲ್ಲಿ ಸಾಕ್ಷಿಗಳ ಒಂದು ದೊಡ್ಡ ಅಧಿವೇಶನಗಳಲ್ಲಿ ಉತ್ತರ ಮತ್ತು ದಕ್ಷಿಣ ಅಮೆರಿಕದ ಹಾಗೂ ಯೂರೋಪಿನ ಸಂದರ್ಶಕರು ಹಾಜರಾದಾಗ, ಒಂದು ವರದಿಗನುಸಾರ “ಅಲ್ಲಿ ಅವರ ವತಿಯಿಂದಾಗಲಿ ಇಲ್ಲವೇ ಅವರ ಆತಿಥೇಯರ ವತಿಯಿಂದಾಗಲಿ ಕುಲವರ್ಣದ ಯಾವುದೇ ಕುರುಹು ಇರಲಿಲ್ಲ.”
ಈ ರೀತಿಯಲ್ಲಿ ಭೂವ್ಯಾಪಾಕ ಲಕ್ಷಾಂತರ ಯೆಹೋವನ ಸಾಕ್ಷಿಗಳ ಕುರಿತಾದ ಅಷ್ಟೊಂದು ವ್ಯತ್ಯಾಸವೇನಂದರೆ ಅವರಲ್ಲಿರುವ ಅಪ್ಪಟವಾದ ಐಕ್ಯತೆ ಮತ್ತು ಕುಲಗಳ ಸಾಮರಸ್ಯವೇ ಆಗಿದೆ. ನಿಜ ಕ್ರೈಸ್ತ ಪ್ರೀತಿಯಿಂದ ಅವರು ಕಟ್ಟಲ್ಪಟ್ಟಿರುತ್ತಾರೆ. ಹೀಗೆಯೇ ಇರುವದೆಂದು ಯೇಸುವು ಹೇಳಿದ್ದಾನೆ: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”—ಯೋಹಾನ 13:35.
ಆದುದರಿಂದ, ಯೆಹೋವನ ಸಾಕ್ಷಿಗಳಲ್ಲಿ ಒಂದು ನಿಜವಾದ, ಶಾಶ್ವತ ಅಂತರ್ರಾಷ್ಟ್ರೀಯ ಸಹೋದರತ್ವವೂ ಇರುತ್ತದೆ! ಮತ್ತಾಯ 23:8ರಲ್ಲಿ ಯೇಸುವು ಹೇಳಿದ್ದನ್ನು ಅವರು ಹೃದಯಕ್ಕೆ ತಕ್ಕೊಳ್ಳುತ್ತಾರೆ: “ನೀವೆಲ್ಲರೂ ಸಹೋದರರು.” ಮತ್ತು ಇದು ರಾಷ್ಟ್ರಗಳ ಚೌಕಟ್ಟನ್ನು ಛಿದ್ರಗೊಳಿಸುತ್ತಿರುವ ಕುಲಗಳ ಮತ್ತು ಬುಡಕಟ್ಟುಗಳ ವಿಭಾಗಗಳು ಮತ್ತು ದ್ವೇಷಗಳು ಅಷ್ಟೊಂದು ಇರುವ ಈ ಸಮಯದಲ್ಲಿಯೇ.—ಇದನ್ನು ಕೂಡ ನೋಡಿರಿ 1 ಕೊರಿಂಥ 1:10; 1 ಯೋಹಾನ 3:10-12; 4:20, 21; 5:2, 3.
ಐಕ್ಯತೆಯನ್ನು ಪಡೆದ ವಿಧ
ಅವರ ರಾಜ್ಯ ಸಭಾಗೃಹಗಳಲ್ಲಿ ಯೆಹೋವನ ಸಾಕ್ಷಿಗಳು ಪಡೆಯುವ ಬೈಬಲಾಧರಿತ ಉಪದೇಶ ಮತ್ತು ಬೈಬಲಿನ ಅವರ ವ್ಯಕ್ತಿಗತ ಅಭ್ಯಾಸ ಈ ಐಕ್ಯತೆಯ ಮೂಲಭೂತ ತಳಹದಿಯಾಗಿರುತ್ತದೆ. ಅವರ ಥೆಸಲೊನೀಕದ ಕ್ರೈಸ್ತರಂತೆ ಇದ್ದಾರೆ, ಅವರ ಕುರಿತು ಅಪೊಸ್ತಲ ಪೌಲನು ಬರೆದದ್ದು: “ಹೀಗಿರಲಾಗಿ ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದಣಿಸದೆ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದಕ್ಕಾಗಿ ನಾವಂತೂ ಎಡೆಬಿಡದೆ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ.”—1 ಥೆಸಲೊನೀಕ 2:13.
ಆದಕಾರಣ, ಬೈಬಲು ಏನು ಹೇಳುತ್ತದೋ ಅದನ್ನು ಸಾಕ್ಷಿಗಳು ನಂಬುತ್ತಾರೆ ಮತ್ತು ಅವರು ದೇವರ ಆಲೋಚನಾ ಲಹರಿಯನ್ನು ಅನುಕರಿಸಲು ಶೃದ್ಧೆಯಿಂದ ಪ್ರಯತ್ನಿಸುತ್ತಾರೆ. ದೇವಪ್ರೇರಿತನಾಗಿ ಕ್ರೈಸ್ತ ಅಪೊಸ್ತಲ ಪೇತ್ರನು ಹೇಳಿರುವದನ್ನು ಹೃದಯಕ್ಕೆ ತಕ್ಕೊಳ್ಳುತ್ತಾರೆ: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.”—ಅ. ಕೃತ್ಯಗಳು 10:34, 35.
ಇದರ ಸಹಮತದಲ್ಲಿ, “ಎಲ್ಲಾ ದೇಶಗಳ” ಜನರನ್ನು ಶಿಷ್ಯರನ್ನಾಗಿ ಮಾಡಲು ಯೇಸುವು ತನ್ನ ಅನುಯಾಯಿಗಳಿಗೆ ಆಜ್ಞೆಯನ್ನಿತ್ತಿದ್ದಾನೆ. (ಮತ್ತಾಯ 28:19) ಇದರ ಫಲಿತಾಂಶವಾಗಿ, ಯಾವುದೇ ಆಕ್ಷೇಪವಿಲ್ಲದೇ, ಎಲ್ಲಾ ಕುಲ ಮತ್ತು ಬುಡಕಟ್ಟುಗಳ ಗುಂಪುಗಳಿಂದ ನೀತಿಯನ್ನು ಪ್ರೀತಿಸುವವರನ್ನು ಕಾರ್ಯಶೀಲವಾಗಿ ಹುಡುಕುತ್ತಾ ಇದ್ದಾರೆ. ಮತ್ತು ಈ ಭಿನ್ನ ಹಿನ್ನೆಲೆಗಳ ಮತ್ತು ಕುಲಗಳ ಜನರು ಆರಾಧನೆಯಲ್ಲಿ, ಕೆಲಸದಲ್ಲಿ, ಮತ್ತು ಸಾಮಾಜಿಕ ಸಂಪರ್ಕಗಳಲ್ಲಿ ಐಕ್ಯವಾಗಿ ಬರುವಾಗ, ಏಕಪ್ರಕಾರದ ಆಲೋಚನೆಯು ತೆಗೆಯಲ್ಪಡುತ್ತದೆ. ಅವರು ಒಬ್ಬರು ಇನ್ನೊಬ್ಬರನ್ನು ಗೌರವಿಸಲು, ಒಬ್ಬರು ಇನ್ನೊಬ್ಬರನ್ನು ಪ್ರೀತಿಸಲು ಕಲಿಯುತ್ತಾರೆ.
ದೀರ್ಘಕಾಲದಿಂದ ಕುಲವರ್ಣೀಯ ಪಕ್ಷಪಾತದಿಂದ ಬೆಳೆಸಲ್ಪಟ್ಟ ವ್ಯಕ್ತಿಯೊಬ್ಬನು ತಕ್ಷಣವೇ ಅವನ ನೋಟಗಳನ್ನು ಬದಲಾಯಿಸದಿರಬಹುದು, ನಿಜ. ಆದರೆ ಅವನೊಬ್ಬ ಸಾಕ್ಷಿಯಾಗುವಾಗ, ಅವನು ಒಬ್ಬ ನಿಜ ಕ್ರೈಸ್ತನ “ಹೊಸ ವ್ಯಕ್ತಿತ್ವವನ್ನು ಧರಿಸಲು” ಆರಂಭಿಸುತ್ತಾನೆ, ಮತ್ತು ಅವನಲ್ಲಿ ಮೊದಲಿದ್ದ ದೃಷ್ಟಿಕೋನಗಳನ್ನು ಜಯಿಸಲು ಕಠಿಣವಾಗಿ ಕೆಲಸಮಾಡುವನು. (ಎಫೆಸ 4:22-24) “ಆ ರೀತಿಯಲ್ಲಿ ನಾನು ಬೆಳೆಸಲ್ಪಟ್ಟಿದ್ದೆ” ಎಂದು ಹೇಳುತ್ತಾ, ಅವನ ಪಕ್ಷಪಾತಗಳನ್ನು ಸಮರ್ಥಿಸಲು ಅವನು ಪ್ರಯತ್ನಿಸುವದಿಲ್ಲ. ಇಲ್ಲ, ಅವನ ಮನಸ್ಸನ್ನು ಹೊಸತಾಗಿ ರೂಪಿಸಲು ಮತ್ತು “ಸಹೋದರರ ಸಮಗ್ರ ಬಳಗಕ್ಕಾಗಿ ಪ್ರೀತಿಯಿರಲು” ಅವನು ಶ್ರಮಿಸುವನು.—1 ಪೇತ್ರ 2:17, NW.
ಬೈಬಲ್ ಪ್ರವಾದನೆಗಳು ನೆರವೇರಲ್ಪಡುತ್ತವೆ
ಇಂದು ಯೆಹೋವನ ಜನರಲ್ಲಿ ಏನು ಸಂಭವಿಸುತ್ತದೋ, ಅದು ಮಹಾ ವೈಶಿಷತ್ಟೆಯುಳ್ಳದ್ದಾಗಿದೆ. ನೈಜತೆಯಲ್ಲಿ, ಇದನ್ನು ಬೈಬಲಿನಲ್ಲಿ ಪ್ರವಾದಿಸಲಾಗಿದೆ.
ಯೆಶಾಯ 2:2-4 (NW) ರಲ್ಲಿ, “ದಿವಸಗಳ ಕಡೇ ಭಾಗದಲ್ಲಿ,” ಈ ದುಷ್ಟ ವಿಷಯಗಳ ವ್ಯವಸ್ಥೆಯ ಈ “ಕಡೇ ದಿವಸಗಳಲ್ಲಿ” ಏನು ಸಂಭವಿಸಲಿರುವದು ಎಂದು ಮುಂತಿಳಿಸಲಾಗಿದೆಂದು ಗಮನಿಸಿರಿ. (2 ತಿಮೊಥಿ 3:1-5, 13) ಈ ಸಂತತಿಯಲ್ಲಿ ಯೆಹೋವನ ಸತ್ಯಾರಾಧನೆಯು ಸ್ಥಾಪಿಸಲ್ಪಡುವದು, ಮತ್ತು ‘ಸಕಲದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು. ಹೊರಟುಬಂದ ಬಹುಜನಾಂಗದವರು—ಬನ್ನಿರಿ, ಯೆಹೋವನ ನಿಜಾರಾಧನೆಯ ಪರ್ವತಕ್ಕೆ ಹೋಗೋಣ. ಮತ್ತು ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು”’ ಎಂದು ಯೆಶಾಯನ ಆ ಪ್ರವಾದನೆಯಲ್ಲಿ ತಿಳಿಸಲಾಗಿದೆ.
ಈ ಕೆಳಗಿನ ಒಂದು ಅಸಾಮಾನ್ಯ ಫಲಿತಾಂಶದ ಕುರಿತು ಕೂಡ ಯೆಶಾಯನ ಪ್ರವಾದನೆಯು ತಿಳಿಸಿರುತ್ತದೆ, ಅದು ಯೆಹೋವನ ಸಾಕ್ಷಿಗಳಲ್ಲಿ ಈ ಶತಮಾನದಲ್ಲೆಲ್ಲಾ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗಮನಿಸಬಹುದಾಗಿದೆ: “ಮತ್ತು ಅವರೋ ತಮ್ಮ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು. ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.”
ಅಲ್ಲದೇ, ಬೈಬಲಿನ ಪ್ರಕಟನೆಯ ಪುಸ್ತಕದಲ್ಲಿ, ನಮ್ಮ ಸಮಯಗಳ ಕುರಿತು ಮಾತಾಡುತ್ತಾ “ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲ ಭಾಪೆಗಳನ್ನಾಡುವವರೂ” ಇರುವ ಒಂದು ಮಹಾ ಸಮೂಹದ ಕುರಿತು ಮುಂತಿಳಿಸಿದೆ, ದೇವರನ್ನು ಐಕ್ಯತೆಯಿಂದ ಆರಾಧಿಸಲು ಅವರೆಲ್ಲರೂ ಒಂದು ನೈಜ ಸಹೋದರತ್ವದಲ್ಲಿ ಒಂದಾಗಿ ಸೇರುವರು.—ಪ್ರಕಟನೆ 7:9, 15.
ಇದೊಂದು ಹಾರೈಕೆಯ ಯೋಚನೆಯಲ್ಲ. ಎಲ್ಲಾ ಜನಾಂಗಗಳಿಂದ, ಎಲ್ಲಾ ಕುಲಗಳಿಂದ ಮತ್ತು ಎಲ್ಲಾ ಬುಡಕಟ್ಟುಗಳಿಂದ ಬಂದ ಒಂದು ಮಹಾ ಸಮೂಹವು ಈಗಾಗಲೇ ರೂಪಿತಗೊಂಡಿದೆ. ಈಗಲೇ, ಒಂದು ನಿಜ ಮತ್ತು ಬಾಳುವ ಭೌಗೋಳಿಕ ಸಹೋದರತ್ವವು ಕಟ್ಟಲ್ಪಟ್ಟಿರುತ್ತದೆ! ಬೇಗನೆ ದೇವರಿಂದ ನಾಶವಾಗಲಿರುವ ಪ್ರಚಲಿತ ಭೃಷ್ಟ ಸಮಾಜದ ಸ್ಥಾನದಲ್ಲಿ, ಐಕ್ಯತೆಯ, ಸಂತೋಷದ ಜನರ ಒಂದು ಸಮಗ್ರ ಹೊಸ ಭೌಗೋಳಿಕ ಸಮಾಜದ ಬುನಾದಿಯಾಗಿ ಇದಿರುವದು. ಈ ಐಕ್ಯತೆಯ ಸಮಾಜವು, ಯೇಸುವಂದಂತೆ, “ಭೂಮಿಯನ್ನು ಬಾಧ್ಯವಾಗಿ ಪಡೆಯುವದು,” ಮತ್ತು ದೇವರ ರಾಜ್ಯದ ಆಡಳಿತದ ಕೆಳಗೆ ಅವರು ಸದಾಕಾಲ ಜೀವಿಸುವರು.—ಮತ್ತಾಯ 5:5; 6:9, 10; ಕೀರ್ತನೆ 37:10, 11, 28, 29, 37, 38.
ನೀವಾಗಿಯೇ ಇದನ್ನು ಯಾಕೆ ನೋಡಬಾರದು? ಯೆಹೋವನ ಸಾಕ್ಷಿಗಳ ಯಾವುದೇ ರಾಜ್ಯ ಸಭಾಗೃಹಗಳಿಗೆ ನಿಮಗೆ ಸುಸ್ವಾಗತವಿದೆ ಮತ್ತು ಅವರ ನಡುವಣ ಕುಲ ಸಾಮರಸ್ಯವನ್ನು ಅನುಭವಿಸಿರಿ. ಇಲ್ಲವೇ ಇನ್ನೊಮ್ಮೆ ಯೆಹೋವನ ಸಾಕ್ಷಿಗಳು ನಿಮಗೆ ಭೇಟಿಯನ್ನೀಯುವಾಗ, ಅವರನ್ನು ಒಳಗೆ ಆಮಂತ್ರಿಸಿರಿ ಮತ್ತು ಅವರಲ್ಲಿನ ಕುಲ ಸಾಮರಸ್ಯಕ್ಕೆ ಆಧಾರವನ್ನು ಏನು ಎಂದು ಬೈಬಲಿನಿಂದ ನಿಮಗೆ ತೋರಿಸುವಂತೆ ಕೇಳಿರಿ. ಭೂಮಿಯ ಮೇಲೆಲ್ಲಾ ಒಂದು ನಿಜ ಭಾತೃತ್ವವು ನೆಲಸಿರುವ ನೂತನ ಲೋಕದ ಅವರ ಬೈಬಲಾಧರಿತ ನಿರೀಕ್ಷೆಯನ್ನು ನಿಮಗೆ ತೋರಿಸಲು ಅವರಿಗೆ ಹೇಳಿರಿ.
ಎಲ್ಲಾ ಮಾನವಕುಲದ ಒಂದು ಸಹೋದರತ್ವದ ಸ್ಥಾಪನೆಯ ಅವನ ಉದ್ದೇಶವನ್ನು ನೆರವೇರಿಸಲಾಗುತ್ತದೆ ಎಂದು ಸರ್ವಶಕ್ತ ದೇವರಾದ ಯೆಹೋವನು ಖಾತರಿಯನ್ನೀಯುತ್ತಾನೆ. ಅವನನ್ನುವದು: “ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”—ಯೆಶಾಯ 55:11.
ಬೈಬಲ್ ಪ್ರವಾದನೆಗಳಿಂದ ಮತ್ತು ಆ ಪ್ರವಾದನೆಗಳ ನೆರವೇರಿಕೆಯಿಂದ ರುಜುವಾತುಗಳನ್ನು ಪರೀಕ್ಷಿಸುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ನೀವದನ್ನು ಮಾಡುವದಾದರೆ, ಕುಲಗಳ ಸಾಮರಸ್ಯವು ಕೇವಲ ಸಾಧ್ಯವಿರುವದು ಮಾತ್ರವಲ್ಲ, ಅದು ಅನಿವಾರ್ಯವೂ ಆಗಿರುವದನ್ನು ನೀವು ಕಾಣುವಿರಿ! (g90 12/8)
[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]
ಇಂದು ಯೆಹೋವನ ಸಾಕ್ಷಿಗಳಲ್ಲಿ ಏನು ಸಂಭವಿಸುತ್ತಾ ಇದೆಯೋ, ಅದು ಬೈಬಲಿನಲ್ಲಿ ಪ್ರವಾದಿಸಲಾಗಿದೆ
[ಪುಟ 10 ರಲ್ಲಿರುವಚಿತ್ರ]
ಅವರ ನಡುವೆ ನಿಜವಾದ ಕುಲ ಸಾಮರಸ್ಯವು ಇರುವದರಲ್ಲಿ ಯೆಹೋವನ ಸಾಕ್ಷಿಗಳು ಅಸದೃಶರಾಗಿರುತ್ತಾರೆ