-
ಲೋಕ ಶಕ್ತಿಗಳ ದೀರ್ಘ ಪಥಚಲನೆಯ ಅದರ ಅಂತ್ಯಕ್ಕೆ ಸಮೀಪಿಸಿದೆಕಾವಲಿನಬುರುಜು—1990 | ಫೆಬ್ರವರಿ 1
-
-
ಇದೇ ಆಂಗ್ಲೋ-ಅಮೆರಿಕನ್ ಲೋಕ ಶಕ್ತಿಯು ಪ್ರಕಟನೆ ಪುಸ್ತಕದ ಆರಂಭದಲ್ಲಿ “ಎರಡು ಕೊಂಬುಗಳಿರುವ” ಮೃಗವೆಂದು ವರ್ಣಿಸಲಾಗಿದೆ. ಈ ದ್ವಿ-ಭಾಗದ ಲೋಕಶಕ್ತಿಯು, ಎಲ್ಲಾ ಏಳು ಲೋಕಶಕ್ತಿಗಳನ್ನು ಪ್ರತಿನಿಧಿಸುವ ರಾಜಕೀಯ ಮೃಗಕ್ಕೆ “ಭೂಲೋಕದ ಭೂನಿವಾಸಿಗಳು ನಮಸ್ಕರಿಸುವಂತೆ ಒಂದು ವಿಗ್ರಹವನ್ನು ಮಾಡಿಸಿಕೊಳ್ಳುವಂತೆ ಬೋಧಿಸುತ್ತದೆ.”—ಪ್ರಕಟನೆ 13:11,14.
-
-
ಲೋಕ ಶಕ್ತಿಗಳ ದೀರ್ಘ ಪಥಚಲನೆಯ ಅದರ ಅಂತ್ಯಕ್ಕೆ ಸಮೀಪಿಸಿದೆಕಾವಲಿನಬುರುಜು—1990 | ಫೆಬ್ರವರಿ 1
-
-
ನಾಲ್ಕು ವರ್ಷಗಳ ಮೊದಲನೆಯ ಲೋಕಯುದ್ಧದ ವಿಪತ್ಕಾರಗಳು ಅಂತ್ಯವಾಗುವಷ್ಟರಲ್ಲಿ, ಅಮೇರಿಕದ ಅಧ್ಯಕ್ಷ ವುಡ್ರೋ ವಿಲ್ಸನ್ ಮತ್ತು ಬ್ರಿಟನಿನ ಪ್ರಧಾನ ಮಂತ್ರಿ ಡೇವಿಡ್ ಲಾಯ್ಡ್ ಜೋರ್ಜ್ ಜನಾಂಗ ಸಂಘದ ಪ್ರಸ್ತಾಪ ಮಾಡಿದರು. ಅದರ ಗುರಿಯು “ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಸಾಧಿಸುವದು” ಮತ್ತು ಅಂತಹ ಯುದ್ಧವೊಂದರ ವಿಪತ್ಕಾರಕತೆಗಳನ್ನು ಇನ್ನೊಮ್ಮೆ ಎಂದಿಗೂ ಸಂಭವಿಸದಂತೆ ತಡೆಯುವದೇ.
ಇದನ್ನು ಕುರಿತು ಮೊದಲು ಆಸಕ್ತಿ ತೆಗೆದುಕೊಂಡವರು ಯಾರೆಂದು ಗಮನಿಸುವದು ಆಸಕ್ತಿಕರ. ಬೈಬಲ್ ಇತಿಹಾಸದ ಏಳನೆಯ ಇಂಗ್ಲಿಷ್ ಮಾತಾಡುವ ದ್ವಿ-ಭಾಗದ ಆಂಗ್ಲೋ ಅಮೇರಿಕನ್ ಲೋಕಶಕ್ತಿಯ ಪ್ರಧಾನರೇ ಈ ಇಬ್ಬರು ಮುಂದಾಳುಗಳು. ಇದು ಮತ್ತು ಅಂತರ್ರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಸಂಸ್ಥೆಯ ಕುರಿತಾದ ಇತರ ವಾಸ್ತವಾಂಶಗಳು, ನಮ್ಮ ದಿನಗಳಲ್ಲಿ ಏಳುವ, ಬೀಳುವ ಕೊಂಚ ಕಾಲ ಜೀವಿಸುವ “ಎಂಟನೆಯ ಅರಸನ” ಕುರಿತು ಬೈಬಲ್ ಪುಸ್ತಕವಾದ ಪ್ರಕಟನೆಯಲ್ಲಿ ಹೇಳಿರುವ ಸಂಗತಿಗಳಿಗೆ ಆಶ್ಚರ್ಯಕರ ರೀತಿಯಲ್ಲಿ ಹೊಂದಿಕೊಳ್ಳುತ್ತವೆ. ಕೆಲವೊಂದು ಅಸಕ್ತಿಕರ ಸರಿ ಹೋಲಿಕೆಗಳು ಯಾವುವು?—ಪ್ರಕಟನೆ 17:11.
ಮೊದಲನೆಯ ಮೃಗಕ್ಕಾಗಿ “ಒಂದು ವಿಗ್ರಹವನ್ನು ಮಾಡಿ ಭೂನಿವಾಸಿಗಳೆಲ್ಲರೂ ನಮಸ್ಕರಿಸುವಂತೆ” ಹೇಳುವ “ಕುರಿಮರಿಗಿರುವಂತೆ ಎರಡು ಕೊಂಬುಗಳಿರುವ” “ಕಾಡು ಮೃಗವೊಂದು”. ಬೈಬಲ್ ಇತಿಹಾಸದ ಏಳು ಮಹಾಶಕ್ತಿಗಳಿಂದ ಮುಂದಾಳುತನ ಹೊಂದಿದೆ ಎಂದು ಪ್ರಕಟನೆಯಲ್ಲಿನ ಪ್ರವಾದನೆಯು ತಿಳಿಸುತ್ತದೆ.
ಇದನ್ನು ತಾನೇ ಆಂಗ್ಲೋ-ಅಮೇರಿಕನ್ ಲೋಕಶಕ್ತಿಯು ನಡಿಸಿತು. ಮಹಾ ಸರಕಾರಗಳು ಮಾಡುವಂತಹ ರೀತಿಯಲ್ಲಿ ತೋರುವ ಮತ್ತು ವರ್ತಿಸುವ ಒಂದು ಸಂಘವನ್ನು “ಭೂನಿವಾಸಿಗಳೆಲ್ಲರೂ” ಮಾಡುವಂತೆ ಅದು ಒತ್ತಾಯಿಸಿತು. ಆದರೆ ಅದು ನಿಜವಾಗಿಯೂ “ಕಾಡು ಮೃಗದ ವಿಗೃಹ”ವಾಗಿತ್ತು. ಅದಕ್ಕೆ ಅವರದ್ದೇ ಸ್ವಂತ ಬಲವಿರಲಿಲ್ಲ. ಬದಲು ಸದಸ್ಯ ಜನಾಂಗಗಳು ಏನನ್ನು ನೀಡಿದ್ದವೂ ಅದು ಮಾತ್ರವಿತ್ತು. ಲೋಕಶಕ್ತಿಗಳು ಮಾಡಿದಂತಹ ರೀತಿಯಲ್ಲಿ, ಯಾವುದೇ ಮಹಾ ಸೇನಾ ವಿಜಯದಿಂದ ಇದು ಅಧಿಕಾರಕ್ಕೆ ಬರುತ್ತದೆಂದು ವಿವರಿಸಲ್ಪಟ್ಟಿಲ್ಲ. ಬದಲಿಗೆ ಇದು ಏಳು ಲೋಕಶಕ್ತಿಗಳಿಂದ ಹೊರ ಹೊಮ್ಮುತ್ತದೆ ಯಾ ಬರುತ್ತದೆ. ತನ್ನ ಅಸ್ತಿತ್ವಕ್ಕಾಗಿ ಅವುಗಳಲ್ಲಿನ ಏಳನೆಯದಕ್ಕೆ ಋಣಿಯಾಗಿರುವದು ಮಾತ್ರವಲ್ಲ, ಬದಲು ಅದರ ಮುಂಚಿನ ಆರು ಶಕ್ತಿಗಳು ಉಳಿಕೆಯಾಗಿರುವ ಇನ್ನಿತರ ಸದಸ್ಯ ರಾಷ್ಟ್ರಗಳಿಗೂ ಋಣಿಯಾಗಿದೆ. ಅದರಲ್ಲಿ ಉನ್ನತವಾದ ಆಶೆಯನ್ನಿಟ್ಟುಕೊಂಡು ಸ್ಥಾಪಿಸಿದ ಸ್ಥಾಪಕರ ಉಚ್ಛ ಧ್ಯೇಯಗಳನ್ನು ಈ ರಾಜಕೀಯ ವಿಗ್ರಹವು ಮುಟ್ಟುವದೋ?—ಪ್ರಕಟನೆ 17:11,14.
-