ಅಧ್ಯಾಯ 33
ಕುಖ್ಯಾತ ಜಾರಸ್ತ್ರೀಗೆ ತೀರ್ಪುಮಾಡುವುದು
ದರ್ಶನ 11—ಪ್ರಕಟನೆ 17:1-18
ವಿಷಯ: ಮಹಾ ಬಾಬೆಲ್ ಕಡುಕೆಂಪು ಬಣ್ಣದ ಕಾಡು ಮೃಗದ ಮೇಲೆ ಸವಾರಿಮಾಡುತ್ತಾಳೆ, ಅದು ಕಟ್ಟಕಡೆಗೆ ಅವಳ ವಿರುದ್ಧ ಏಳುತ್ತದೆ ಮತ್ತು ಅವಳನ್ನು ಧ್ವಂಸಗೊಳಿಸುತ್ತದೆ
ನೆರವೇರಿಕೆಯ ಸಮಯ: ಇಸವಿ 1919 ರಿಂದ ಮಹಾ ಸಂಕಟದ ವರೆಗೆ
1. ಏಳು ದೇವದೂತರಲ್ಲಿ ಒಬ್ಬನು ಯೋಹಾನನಿಗೆ ಏನನ್ನು ಪ್ರಕಟಿಸುತ್ತಾನೆ?
ಯೆಹೋವನ ನೀತಿಯ ಕೋಪವು, ಅದರ ಏಳು ಪಾತ್ರೆಗಳಿಂದಲೂ ಸಮಗ್ರವಾಗಿ ಹೊಯ್ಯಲ್ಪಡಬೇಕು! ತನ್ನ ಪಾತ್ರೆಯನ್ನು ಆರನೆಯ ದೇವದೂತನು ಪ್ರಾಚೀನ ಬಾಬೆಲಿನ ನೆಲೆಯಲ್ಲಿ ಖಾಲಿ ಮಾಡಿದಾಗ ಅರ್ಮಗೆದೋನಿನ ಕೊನೆಯ ಯುದ್ಧದೆಡೆಗೆ ಘಟನೆಗಳು ಶೀಘ್ರವಾಗಿ ಚಲಿಸುತ್ತಿದ್ದಂತೆ, ಅದು ಮಹಾ ಬಾಬೆಲಿನ ಬಾಧಿಸುವಿಕೆಯನ್ನು ತಕ್ಕದಾಗಿಯೇ ಸೂಚಿಸಿತು. (ಪ್ರಕಟನೆ 16:1, 12, 16) ಯೆಹೋವನು ಯಾಕೆ ಮತ್ತು ಹೇಗೆ ತನ್ನ ನೀತಿಯ ನ್ಯಾಯತೀರ್ಪುಗಳನ್ನು ಜಾರಿಗೊಳಿಸುತ್ತಾನೆಂಬುದನ್ನು ಪ್ರಾಯಶಃ ಈಗ ಅದೇ ದೇವದೂತನು ಪ್ರಕಟಿಸುತ್ತಾನೆ. ಯೋಹಾನನು ತಾನೇನನ್ನು ಮುಂದೆ ಕೇಳುತ್ತಾನೋ ಮತ್ತು ನೋಡುತ್ತಾನೋ ಅದರಿಂದ ಆಶ್ಚರ್ಯಚಕಿತನಾಗುತ್ತಾನೆ. “ಮತ್ತು ಏಳು ಪಾತ್ರೆಗಳು ಇದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತಾಡಿ, ಅಂದದ್ದು: ‘ಬಾ, ಬಹಳ ನೀರುಗಳ ಮೇಲೆ ಕುಳಿತುಕೊಳ್ಳುವ ಮತ್ತು ಯಾರೊಂದಿಗೆ ಭೂರಾಜರು ಜಾರತ್ವ ಮಾಡಿದರೋ, ಆದರೆ ಭೂಮಿಯಲ್ಲಿ ವಾಸಿಸುವವರು ಆಕೆಯ ಜಾರತ್ವದ ದ್ರಾಕ್ಷಾಮದ್ಯವನ್ನು ಕುಡಿದು ಮತ್ತರಾಗುವಂತೆ ಮಾಡಲ್ಪಟ್ಟರೋ ಆ ಮಹಾ ಜಾರಸ್ತ್ರೀಗೆ ಬರುವ ತೀರ್ಪನ್ನು ನಾನು ನಿನಗೆ ತೋರಿಸುತ್ತೇನೆ.”—ಪ್ರಕಟನೆ 17:1, 2, NW.
2. “ಮಹಾ ಜಾರ ಸ್ತ್ರೀಯು” (ಎ) ಪ್ರಾಚೀನ ರೋಮ್ ಅಲ್ಲ? (ಬಿ) ದೊಡ್ಡ ವ್ಯಾಪಾರ ಅಲ್ಲ? (ಸಿ) ಒಂದು ಧಾರ್ಮಿಕ ಅಸ್ತಿತ್ವವಾಗಿದೆ ಎಂಬುದಕ್ಕೆ ಯಾವ ಪುರಾವೆ ಇದೆ?
2 “ಮಹಾ ಜಾರಸ್ತ್ರೀ”! ಇಷ್ಟೊಂದು ತಲ್ಲಣಗೊಳಿಸುವ ಹೆಸರು ಏಕೆ? ಅವಳು ಯಾರು? ಕೆಲವರು ಈ ಸಾಂಕೇತಿಕ ಜಾರಸ್ತ್ರೀಯನ್ನು ಪ್ರಾಚೀನ ರೋಮಿನೊಂದಿಗೆ ಗುರುತಿಸುತ್ತಾರೆ. ಆದರೆ ರೋಮ್ ಒಂದು ರಾಜಕೀಯ ಶಕ್ತಿಯಾಗಿತ್ತು. ಈ ಜಾರ ಸ್ತ್ರೀಯು ಭೂಮಿಯ ರಾಜರೊಂದಿಗೆ ಜಾರತ್ವವನ್ನು ಮಾಡುತ್ತಾಳೆ. ಮತ್ತು ಇದು ಸುವ್ಯಕ್ತವಾಗಿ ರೋಮಿನ ರಾಜರನ್ನು ಒಳಗೂಡುತ್ತದೆ. ಅಲ್ಲದೆ, ಅವಳ ನಾಶನದ ಅನಂತರ “ಭೂರಾಜರು” ಅವಳ ನಿಧನಕ್ಕಾಗಿ ಗೋಳಾಡುವರೆಂದು ಹೇಳಲಾಗಿದೆ. ಆದುದರಿಂದ, ಅವಳು ಒಂದು ರಾಜಕೀಯ ಶಕ್ತಿಯಾಗಿರಸಾಧ್ಯವಿಲ್ಲ. (ಪ್ರಕಟನೆ 18:9, 10) ಹೆಚ್ಚಿನದ್ದಾಗಿ, ಲೋಕದ ವರ್ತಕರು ಕೂಡ ಅವಳಿಗಾಗಿ ಗೋಳಾಡುವುದರಿಂದ ಅವಳು ಮಹಾ ವ್ಯಾಪಾರವನ್ನು ಚಿತ್ರಿಸಸಾಧ್ಯವಿಲ್ಲ. (ಪ್ರಕಟನೆ 18:15, 16) ಆದಾಗ್ಯೂ, ‘ಅವಳ ಮಾಟದಿಂದ ಎಲ್ಲಾ ಜನಾಂಗಗಳು ತಪ್ಪುದಾರಿಗೆ ನಡಿಸಲ್ಪಟ್ಟರು’ ಎಂದು ನಾವು ಓದುತ್ತೇವೆ. (ಪ್ರಕಟನೆ 18:23) ಮಹಾ ಜಾರ ಸ್ತ್ರೀಯು ಒಂದು ಭೂವ್ಯಾಪಕ ಧಾರ್ಮಿಕ ಅಸ್ತಿತ್ವವಾಗಿರಬೇಕೆಂದು ಇದು ಸ್ಪಷ್ಟಮಾಡುತ್ತದೆ.
3. (ಎ) ಮಹಾ ಜಾರ ಸ್ತ್ರೀಯು ರೋಮನ್ ಕ್ಯಾತೊಲಿಕ್ ಚರ್ಚು ಯಾ ಕ್ರೈಸ್ತಪ್ರಪಂಚವೆಲ್ಲವನ್ನು ಸೂಚಿಸುವುದಕ್ಕಿಂತಲೂ ಹೆಚ್ಚಿನದ್ದು ಆಗಿದೆ ಯಾಕೆ? (ಬಿ) ಹೆಚ್ಚಿನ ಪ್ರಾಚ್ಯ ಧರ್ಮಗಳಲ್ಲಿ ಹಾಗೂ ಕ್ರೈಸ್ತಪ್ರಪಂಚದ ಪಂಗಡಗಳಲ್ಲಿ ಯಾವ ಬಾಬೆಲಿನ ಬೋಧನೆಗಳು ಕಾಣಸಿಗುತ್ತವೆ? (ಸಿ) ಕ್ರೈಸ್ತಪ್ರಪಂಚದ ಬೋಧನೆಗಳು, ಸಂಸ್ಕಾರಗಳು, ಮತ್ತು ಆಚಾರಗಳಲ್ಲಿ ಅನೇಕವುಗಳ ಉಗಮದ ಕುರಿತು ರೋಮನ್ ಕ್ಯಾತೊಲಿಕ್ ಕಾರ್ಡಿನಲ್ ಜಾನ್ ಹೆನ್ರಿ ನ್ಯೂ ಮ್ಯನ್ ಏನನ್ನು ಒಪ್ಪುತ್ತಾರೆ? (ಪಾದಟಿಪ್ಪಣಿಯನ್ನು ನೋಡಿರಿ.)
3 ಯಾವ ಧಾರ್ಮಿಕ ಅಸ್ತಿತ್ವ? ಕೆಲವರು ಅದನ್ನು ಸಮರ್ಥಿಸುವಂತೆ, ಅವಳು ರೋಮನ್ ಕ್ಯಾತೊಲಿಕ್ ಚರ್ಚ್ ಆಗಿದ್ದಾಳೋ? ಅಥವಾ, ಅವಳು ಸಮಸ್ತ ಕ್ರೈಸ್ತಪ್ರಪಂಚವೂ? ಇಲ್ಲ, ಎಲ್ಲಾ ಜನಾಂಗಗಳನ್ನು ಅವಳು ತಪ್ಪುದಾರಿಗೆ ನಡಿಸಿರಬೇಕಾದರೆ, ಇವುಗಳಿಗಿಂತ ಅವಳು ಬಹು ದೊಡ್ಡವಳಾಗಿರಬೇಕು. ನಿಜವಾಗಿಯೂ, ಅವಳು ಸುಳ್ಳು ಧರ್ಮದ ಇಡೀ ಲೋಕ ಸಾಮ್ರಾಜ್ಯವಾಗಿರಬೇಕು. ಬಾಬೆಲಿನ ರಹಸ್ಯಗಳಲ್ಲಿನ ಅವಳ ಆರಂಭ, ಭೂಮಿಯ ಎಲ್ಲಾ ಕಡೆಯ ಧರ್ಮಗಳಲ್ಲಿ ಸಾಮಾನ್ಯವಾಗಿರುವ ಅನೇಕ ಬಾಬೆಲಿನ ಬೋಧನೆಗಳು ಮತ್ತು ಆಚಾರಗಳಲ್ಲಿ ತೋರಿಬರುತ್ತದೆ. ಉದಾಹರಣೆಗೆ, ಮಾನವ ಆತ್ಮದ ಅಂತರ್ಜಾತ ಅಮರತ್ವದಲ್ಲಿ ನಂಬಿಕೆ, ಯಾತನೆಯ ನರಕದಲ್ಲಿ ಮತ್ತು ದೇವರುಗಳ ತ್ರಯೈಕ್ಯದಲ್ಲಿ ನಂಬಿಕೆಯು ಅನೇಕ ಪೌರಸ್ತ್ಯ ಧರ್ಮಗಳಲ್ಲಿ ಮಾತ್ರವಲ್ಲ, ಕ್ರೈಸ್ತಪ್ರಪಂಚದ ಒಳಪಂಗಡಗಳಲ್ಲೂ ಕಾಣಸಿಗುತ್ತದೆ. ಬಾಬೆಲಿನ ಪ್ರಾಚೀನ ನಗರದಲ್ಲಿ 4,000 ವರ್ಷಗಳಿಗಿಂತಲೂ ಹೆಚ್ಚು ಹಿಂದೆ ಚಿಗುರಿದ ಸುಳ್ಳು ಧರ್ಮವು, ಈಗ ಯುಕ್ತವಾಗಿಯೇ ಮಹಾ ಬಾಬೆಲ್ ಎಂದು ಕರೆಯಲ್ಪಡುವ ಆಧುನಿಕ ವಿಕಾರತೆಯೊಳಗೆ ಪೂರ್ಣವಾಗಿ ವಿಕಸಿಸಿದೆ.* ಆದರೂ ಅವಳು “ಮಹಾ ಜಾರಸ್ತ್ರೀ” ಎಂಬ ಅಸಹ್ಯ ಪದದಿಂದ ಯಾಕೆ ವರ್ಣಿಸಲ್ಪಟ್ಟಿದ್ದಾಳೆ?
4. (ಎ) ಪುರಾತನ ಇಸ್ರಾಯೇಲ್ ಯಾವ ರೀತಿಗಳಲ್ಲಿ ಜಾರತ್ವವನ್ನು ನಡಿಸಿದಳು? (ಬಿ) ಮಹಾ ಬಾಬೆಲ್ ಯಾವ ಪ್ರಧಾನ ರೀತಿಯಲ್ಲಿ ಜಾರತ್ವವನ್ನು ನಡಿಸಿದ್ದಾಳೆ?
4 ಬ್ಯಾಬಿಲನ್ (ಅಥವಾ ಬಾಬೆಲ್ ಅರ್ಥ “ಗಲಿಬಿಲಿ”) ನೆಬೂಕದ್ನೆಚ್ಚರನ ಸಮಯದಲ್ಲಿ ಮಹೋನ್ನತಿಯ ಶಿಖರಕ್ಕೆ ಏರಿತು. ಇದ್ದ ಒಂದು ಸಾವಿರಕ್ಕಿಂತಲೂ ಹೆಚ್ಚು ದೇವಾಲಯಗಳು ಮತ್ತು ಮಂದಿರಗಳಿಂದ ಅದು ಒಂದು ಧಾರ್ಮಿಕ-ರಾಜಕೀಯ ರಾಜ್ಯವಾಗಿತ್ತು. ಅದರ ಪೌರೋಹಿತ್ಯ ಮಹಾ ಅಧಿಕಾರವನ್ನು ಚಲಾಯಿಸಿತು. ಬಾಬೆಲು ಲೋಕ ಶಕ್ತಿಯಾಗಿ ದೀರ್ಘಕಾಲದಿಂದ ಅಸ್ತಿತ್ವದಲ್ಲಿಲ್ಲದಿರುವುದಾದರೂ ಕೂಡ, ಧಾರ್ಮಿಕ ಮಹಾ ಬಾಬೆಲ್ ಇನ್ನೂ ಜೀವಿಸುತ್ತಾ ಇದೆ, ಮತ್ತು ಪ್ರಾಚೀನ ನಮೂನೆಯಂತೆಯೇ ಇನ್ನೂ ರಾಜಕೀಯ ಕಾರ್ಯಾದಿಗಳನ್ನು ಪ್ರಭಾವಿಸಲು ಮತ್ತು ಪರಿವರ್ತಿಸಲು ಆಕೆ ಅನ್ವೇಷಿಸುತ್ತಿದ್ದಾಳೆ. ಆದರೆ ರಾಜಕೀಯದಲ್ಲಿ ಧರ್ಮವನ್ನು ದೇವರು ಮೆಚ್ಚುತ್ತಾನೋ? ಹೀಬ್ರು ಶಾಸ್ತ್ರವಚನಗಳಲ್ಲಿ, ಇಸ್ರಾಯೇಲ್ ತನ್ನನ್ನು ಸುಳ್ಳು ಧರ್ಮದೊಂದಿಗೆ ಒಳಗೂಡಿಸಿಗೊಂಡಾಗ, ಮತ್ತು ಯೆಹೋವನಲ್ಲಿ ಭರವಸೆ ಇಡುವುದರ ಬದಲು, ಅವಳು ಜನಾಂಗಗಳೊಂದಿಗೆ ಮೈತ್ರಿಯನ್ನು ಮಾಡಿದಾಗ, ಅವಳು ಸೂಳೆತನವನ್ನು ನಡಿಸಿದಳೆಂದು ಹೇಳಲಾಗಿದೆ. (ಯೆರೆಮೀಯ 3:6, 8, 9; ಯೆಹೆಜ್ಕೇಲ 16:28-30) ಮಹಾ ಬಾಬೆಲ್ ಕೂಡ ಜಾರತ್ವವನ್ನು ನಡಿಸಿದ್ದಾಳೆ. ವಿಶೇಷವಾಗಿ, ಭೂಮಿಯನ್ನು ಆಳುವ ರಾಜರ ಮೇಲೆ ಪ್ರಭಾವ ಮತ್ತು ಶಕ್ತಿಯನ್ನು ಪಡೆಯಲು ಏನು ಉಚಿತವಾಗಿದೆಯೆಂದು ಅವಳು ಎಣಿಸುತ್ತಾಳೋ ಅದನ್ನೆಲ್ಲಾ ಮಾಡಿದ್ದಾಳೆ.—1 ತಿಮೊಥೆಯ 4:1.
5. (ಎ) ಧಾರ್ಮಿಕ ವೈದಿಕರು ಯಾವ ರಂಗಸ್ಥಳದ ಬೆಳಕಿನಲ್ಲಿ ಆನಂದಿಸುತ್ತಾರೆ? (ಬಿ) ಲೌಕಿಕ ಪ್ರಮುಖತೆಯ ಆಕಾಂಕ್ಷೆಯು ಯೇಸು ಕ್ರಿಸ್ತನ ಮಾತುಗಳ ನೇರ ವಿರೋಧೋಕ್ತಿಯಾಗಿದೆ ಯಾಕೆ?
5 ಇಂದು ಧಾರ್ಮಿಕ ಮುಖಂಡರು ಉಚ್ಚ ಸರಕಾರೀ ಹುದ್ದೆಗಾಗಿ ಪದೇ ಪದೇ ಚಳವಳಿ ನಡಿಸುತ್ತಾರೆ, ಮತ್ತು ಕೆಲವು ದೇಶಗಳಲ್ಲಿ ಅವರು ಮಂತ್ರಿಮಂಡಲದಲ್ಲಿ ಸೇರುವುದರ ಮೂಲಕ ಕೂಡ, ಸರಕಾರದಲ್ಲಿ ಭಾಗವಹಿಸುತ್ತಾರೆ. ಎರಡು ಖ್ಯಾತ ಪ್ರಾಟೆಸ್ಟಂಟ್ ವೈದಿಕರು 1988 ರಲ್ಲಿ ಅಮೆರಿಕದ ಅಧ್ಯಕ್ಷ ಹುದ್ದೆಗಾಗಿ ಪ್ರಯತ್ನಿಸಿದರು. ಮಹಾ ಬಾಬೆಲಿನಲ್ಲಿ ಮುಖಂಡರು ರಂಗಸ್ಥಳದ ಬೆಳಕನ್ನು ಪ್ರೀತಿಸುತ್ತಾರೆ; ಪ್ರಮುಖ ರಾಜನೀತಿಜ್ಞರೊಂದಿಗೆ ಅವರು ಜೊತೆ ಸೇರುತ್ತಿರುವಾಗ, ಸಾರ್ವಜನಿಕ ಮಾಧ್ಯಮಗಳಲ್ಲಿ ಅವರ ಭಾವಚಿತ್ರಗಳು ಯಾವಾಗಲೂ ಕಾಣಬರುತ್ತವೆ. ಪ್ರತಿಹೋಲಿಕೆಯಲ್ಲಿ, ಯೇಸುವು ರಾಜಕೀಯ ಒಳಗೂಡುವಿಕೆಯನ್ನು ವರ್ಜಿಸಿದನು ಮತ್ತು ತನ್ನ ಶಿಷ್ಯರ ಕುರಿತು ಹೀಗಂದನು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.”—ಯೋಹಾನ 6:15; 17:16; ಮತ್ತಾಯ 4:8-10; ಯಾಕೋಬ 4:4 ಸಹ ನೋಡಿರಿ.
ಆಧುನಿಕ ದಿನದ ‘ವೇಶ್ಯಾವೃತ್ತಿ’
6, 7. (ಎ) ಹಿಟ್ಲರನ ನಾಜಿ ಪಕ್ಷವು ಜರ್ಮನಿಯಲ್ಲಿ ಅಧಿಕಾರಕ್ಕೆ ಹೇಗೆ ಬಂತು? (ಬಿ) ಲೋಕ ಪ್ರಭುತ್ವಕ್ಕೆ ಹಿಟ್ಲರನ ಏರುವಿಕೆಯಲ್ಲಿ ನಾಜಿ ಜರ್ಮನಿಯೊಂದಿಗೆ ವ್ಯಾಟಿಕನ್ ಮಾಡಿದ ಮೈತ್ರಿ ಸಂಧಾನವು ಹೇಗೆ ಸಹಾಯ ಮಾಡಿತು?
6 ರಾಜಕೀಯದಲ್ಲಿ ಅವಳ ಹಸ್ತಕ್ಷೇಪದ ಮೂಲಕ, ಮಹಾ ಜಾರಸ್ತ್ರೀಯು ಮಾನವ ಕುಲಕ್ಕೆ ಹೇಳಲಾಗದ ವ್ಯಥೆಯನ್ನು ತಂದಿದ್ದಾಳೆ. ಉದಾಹರಣೆಗೆ, ಜರ್ಮನಿಯಲ್ಲಿ ಹಿಟ್ಲರನು ಅಧಿಕಾರಕ್ಕೆ ಬರುವುದರ ಹಿಂದೆ ಇರುವ ನಿಜತ್ವಗಳನ್ನು—ಇತಿಹಾಸದ ಪುಸ್ತಕಗಳಿಂದ ಕೆಲವರು ಅದನ್ನು ಅಳಿಸಿಬಿಡಲು ಬಯಸುವ ಕುರೂಪವಾದ ನಿಜತ್ವಗಳನ್ನು—ಗಮನಿಸಿರಿ. ಮೇ 1924 ರಲ್ಲಿ ನಾಜಿ ಪಕ್ಷವು ರೈಖ್ಸ್ಟಾಗ್ನಲ್ಲಿ 32 ಸೀಟುಗಳನ್ನು ಹೊಂದಿತ್ತು. ಮೇ 1928 ರೊಳಗೆ ಇವು 12 ಸೀಟುಗಳಿಗೆ ಇಳಿದವು. ಆದಾಗ್ಯೂ, ಮಹಾ ಆರ್ಥಿಕ ಕುಸಿತವು 1930 ರಲ್ಲಿ ಲೋಕವನ್ನು ಆವರಿಸಿತು; ಅದರ ಮೇಲೆ ಸವಾರಿಮಾಡುತ್ತಾ, ನಾಜಿಗಳು ಗಮನಾರ್ಹವಾದ ಮೊದಲ ನೆಲೆಯನ್ನು ಪಡೆದು, ಜುಲೈ 1932ರ ಜರ್ಮನ್ ಚುನಾವಣೆಯಲ್ಲಿ 608 ಸೀಟುಗಳಲ್ಲಿ 230ನ್ನು ಗಳಿಸಿದರು. ಅದಾದ ಕೂಡಲೇ, ಪೋಪರ ಅಧಿಕಾರದ ಕೆಳಗೆ ಶ್ರೀಮಂತ ವೀರ (ನೈಟ್) ಬಿರುದನ್ನು ಪಡೆದ ಮಾಜಿ ಚಾನ್ಸಲರ್ ಫ್ರಾನ್ಜ್ ವಾನ್ ಪಾಪನ್, ನಾಜಿಗಳ ಸಹಾಯಕ್ಕೆ ಬಂದನು. ಇತಿಹಾಸಕಾರರ ಪ್ರಕಾರ, ವಾನ್ ಪಾಪನ್ ಒಂದು ಹೊಸ ಪವಿತ್ರ ರೋಮನ್ ಸಾಮ್ರಾಜ್ಯದ ದೃಶ್ಯವನ್ನು ನೋಡಿದನು. ಚಾನ್ಸಲರಾಗಿ ಇದ್ದ ಅಧಿಕಾರದ ಅವನ ಅಲ್ಪ ಅವಧಿಯು ವಿಫಲಗೊಂಡಿತು, ಆದುದರಿಂದ ಈಗ ಅವನು ನಾಜಿಗಳ ಮೂಲಕ ಅಧಿಕಾರವನ್ನು ಪಡೆಯಲು ನಿರೀಕ್ಷಿಸಿದನು. ಜನವರಿ 1933 ರೊಳಗೆ, ಅವನು ಕೈಗಾರಿಕಾ ಜಹಗೀರುದಾರರಿಂದ ಹಿಟ್ಲರನಿಗೆ ಬೆಂಬಲವನ್ನು ಸಂಪಾದಿಸಿದನು, ಮತ್ತು ಕುಯುಕ್ತಿಯ ಒಳಸಂಚಿನ ಮೂಲಕ ಜನವರಿ 30, 1933 ರಂದು ಹಿಟ್ಲರನು ಜರ್ಮನಿಯ ಚಾನ್ಸಲರನಾಗುವಂತೆ ಅವನು ನಿಶ್ಚಯ ಮಾಡಿದನು. ಅವನು ಸ್ವತಃ ಉಪ ಚಾನ್ಸಲರನಾಗಿ ಮಾಡಲ್ಪಟ್ಟನು ಮತ್ತು ಜರ್ಮನಿಯ ಕ್ಯಾತೊಲಿಕ್ ಪಂಗಡಗಳ ಬೆಂಬಲವನ್ನು ಗಳಿಸಲು ಹಿಟ್ಲರನಿಂದ ಉಪಯೋಗಿಸಲ್ಪಟ್ಟನು. ಅಧಿಕಾರ ಪಡೆದ ಎರಡು ತಿಂಗಳುಗಳೊಳಗೆ, ಹಿಟ್ಲರನು ಸಂಸ್ತತನ್ನು ರದ್ದು ಮಾಡಿದನು, ಸಾವಿರಾರು ವಿರೋಧಿ ಧುರೀಣರನ್ನು ಕೂಟಶಿಬಿರಗಳಿಗೆ ರವಾನಿಸಿದನು, ಮತ್ತು ಯೆಹೂದ್ಯರನ್ನು ಹಿಂಸಿಸುವ ಬಹಿರಂಗವಾದ ಸುಸಂಘಟಿತ ಚಳವಳಿಯನ್ನು ಪ್ರಾರಂಭಿಸಿದನು.
7 ಜುಲೈ 20, 1933 ರಂದು ನಾಜಿವಾದದ ಬೆಳೆಯುತ್ತಿರುವ ಅಧಿಕಾರದಲ್ಲಿ ವ್ಯಾಟಿಕನ್ನ ಅಭಿರುಚಿಯು ಕಾರ್ಡಿನಲ್ ಪೆಚೆಲಿ (ಇವರು ಅನಂತರ ಪೋಪ್ ಪೈಅಸ್ XII ಆದರು) ರೋಮಿನಲ್ಲಿ ವ್ಯಾಟಿಕನ್ ಮತ್ತು ನಾಜಿ ಜರ್ಮನಿಯ ನಡುವೆ ಮೈತ್ರಿ ಸಂಧಾನಕ್ಕೆ ಸಹಿಹಾಕಿದಾಗ ತೋರಿಸಲ್ಪಟ್ಟಿತ್ತು. ವಾನ್ ಪಾಪನ್ ಹಿಟ್ಲರನ ಪ್ರತಿನಿಧಿಯೋಪಾದಿ ಈ ಕರಾರಿಗೆ ಸಹಿ ಹಾಕಿದನು, ಮತ್ತು ವಾನ್ ಪಾಪನ್ನನ್ನು “ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಪೈಅಸ್” ಎಂಬ ಪೋಪನ ಉಚ್ಚ ಬಿರುದಿನ ಪದಕದಿಂದ ಪೆಚೆಲಿ ಬಹುಮಾನಿಸಿದರು.a ತನ್ನ ಪುಸ್ತಕವಾದ ಸೇಟನ್ ಇನ್ ಟಾಪ್ ಹ್ಯಾಟ್ ನಲ್ಲಿ ಟಿಬೊರ್ ಕೂವೆಸ್ ಇದರ ಕುರಿತು ಹೀಗೆ ತಿಳಿಸುತ್ತಾ ಬರೆಯುತ್ತಾರೆ: “ಮೈತ್ರಿ ಸಂಧಾನವು ಹಿಟ್ಲರನಿಗೆ ಒಂದು ಮಹಾ ವಿಜಯವಾಗಿತ್ತು. ಅದು ಅವನಿಗೆ ಹೊರಗಣ ಲೋಕದಿಂದ ಮೊತ್ತ ಮೊದಲಿನ ನೈತಿಕ ಬೆಂಬಲವನ್ನು ಕೊಟ್ಟಿತು, ಅದೂ ಅತ್ಯಂತ ಘನತೆಯ ಮೂಲದಿಂದ.” ವ್ಯಾಟಿಕನ್ ತನ್ನ ಬೆಂಬಲವನ್ನು ಜರ್ಮನಿಯ ಕ್ಯಾತೊಲಿಕ್ ಕೇಂದ್ರೀಯ ಪಕ್ಷದಿಂದ ಹಿಂದೆ ತೆಗೆದುಕೊಳ್ಳಬೇಕೆಂದು ಮೈತ್ರಿ ಸಂಧಾನವು ಅವಶ್ಯಪಡಿಸಿತು, ಹೀಗೆ, ಹಿಟ್ಲರನ ಏಕೀಕೃತ ಪಕ್ಷವು “ಪೂರ್ಣ ರಾಜ್ಯ” ವಾಗಿ ಮಂಜೂರಾಯಿತು.b ಇದಲ್ಲದೆ ಅದರ 14ನೇ ಲೇಖನವು ತಿಳಿಸಿದ್ದು: “ಆರ್ಚ್ ಬಿಷಪರ, ಬಿಷಪರ, ಮತ್ತು ಇದಕ್ಕೆ ಸಮಾನವಾದ ಇನ್ನಿತರ ಹುದ್ದೆಗೆ ನೇಮಕಗಳು, ರೈಖ್ನಿಂದ ಸ್ಥಾಪಿಸಲ್ಪಟ್ಟ ರಾಜ್ಯಪಾಲರು ಸಾಮಾನ್ಯ ರಾಜಕೀಯ ಪರಿಶೀಲನೆಯಲ್ಲಿ ಯಾವುದೇ ಸಂದೇಹಗಳು ಇಲ್ಲವೆಂದು ಖಚಿತಮಾಡಿದ ಅನಂತರ ಮಾತ್ರವೇ, ಮಾಡಲ್ಪಡುವುವು.” ಇಸವಿ 1933ರ (ಪೋಪ್ ಪೈಅಸ್ X1 ರಿಂದ “ಪವಿತ್ರ ವರ್ಷ” ವೆಂದು ಪ್ರಕಟಿಸಲ್ಪಟ್ಟಿತು) ಕೊನೆಯೊಳಗೆ, ವ್ಯಾಟಿಕನಿನ ಬೆಂಬಲವು ಹಿಟ್ಲರನನ್ನು ಲೋಕಪ್ರಭುತ್ವಕ್ಕೆ ಏರಿಸುವುದರಲ್ಲಿ ಪ್ರಮುಖ ಅಂಶವಾಯಿತು.
8, 9. (ಎ) ವ್ಯಾಟಿಕನ್ ಹಾಗೂ ಕ್ಯಾತೊಲಿಕ್ ಚರ್ಚು ಮತ್ತು ಅದರ ವೈದಿಕ ವರ್ಗವು ನಾಜಿ ಕ್ರೂರ ಶಾಸನಕ್ಕೆ ಹೇಗೆ ಪ್ರತಿಕ್ರಿಯಿಸಿತು? (ಬಿ) ಎರಡನೆಯ ಲೋಕಯುದ್ಧದ ಪ್ರಾರಂಭದಲ್ಲಿ ಜರ್ಮನ್ ಕ್ಯಾತೊಲಿಕ್ ಬಿಷಪರು ಯಾವ ಹೇಳಿಕೆಯನ್ನು ಹೊರಡಿಸಿದರು? (ಸಿ) ಧರ್ಮ ರಾಜಕೀಯ ಸಂಬಂಧಗಳು ಯಾವುದರಲ್ಲಿ ಫಲಿಸಿವೆ?
8 ಬೆರಳೆಣಿಕೆಯಷ್ಟು ಪಾದ್ರಿಗಳು ಮತ್ತು ಸಂನ್ಯಾಸಿನಿಯರು ಹಿಟ್ಲರನ ಘೋರ ಕೃತ್ಯಗಳನ್ನು ವಿರೋಧಿಸಿದರೂ—ಮತ್ತು ಅದಕ್ಕೋಸ್ಕರ ಕಷ್ಟಾನುಭವವನ್ನು ಸಹಿಸಿದರೂ—ವ್ಯಾಟಿಕನ್ ಹಾಗೂ ಕ್ಯಾತೊಲಿಕ್ ಚರ್ಚು ಮತ್ತು ಅದರ ವೈದಿಕ ತಂಡವು ಒಂದೇ ಕ್ರಿಯಾಶೀಲ, ಯಾ ಮೌನಸಮ್ಮತಿಯ ಬೆಂಬಲವನ್ನು—ಯಾವುದನ್ನು ಅವರು ಲೋಕ ಕಮ್ಯೂನಿಸ್ಟರ ಪ್ರಗತಿಯ ವಿರುದ್ಧ ಬುರುಜಾಗಿ ಪರಿಗಣಿಸಿದರೋ—ಆ ನಾಜಿ ಕ್ರೂರ ಶಾಸನಕ್ಕೆ ಕೊಟ್ಟರು. ವ್ಯಾಟಿಕನ್ನಲ್ಲಿ ಸೊಗಸಾಗಿ ಕೂತುಕೊಳ್ಳುತ್ತಾ ಪೋಪ್ ಪೈಅಸ್ XII ಯೆಹೂದ್ಯರ ಮೇಲೆ ಪೂರ್ಣ ನಾಶನವನ್ನು ಮತ್ತು ಯೆಹೋವನ ಸಾಕ್ಷಿಗಳ ಮತ್ತು ಇನ್ನಿತರರ ಮೇಲೆ ಕ್ರೂರ ಹಿಂಸೆಗಳು ಯಾವ ಟೀಕೆಯೂ ಇಲ್ಲದೆ ಮುಂದುವರಿಯುವಂತೆ ಬಿಟ್ಟರು. ಪೋಪ್ ಜಾನ್ ಪೌಲ್ II, ಮೇ 1987 ರಂದು ಜರ್ಮನಿಗೆ ಭೇಟಿನೀಡಿದಾಗ, ಒಬ್ಬ ಪ್ರಾಮಾಣಿಕ ಪಾದ್ರಿಯ ನಾಜಿ ವಿರೋಧಿ ನಿಲುವನ್ನು ಗೌರವಿಸಿದ್ದು ಹಾಸ್ಯವ್ಯಂಗ್ಯವಾಗಿತ್ತು. ಹಿಟ್ಲರನ ಅತಿಶಯ ಭಯದ ಆಳಿಕ್ವೆಯ ವೇಳೆಯಲ್ಲಿ ಇನ್ನಿತರ ಸಾವಿರಾರು ಜರ್ಮನ್ ವೈದಿಕರು ಏನು ಮಾಡುತ್ತಿದ್ದರು? ಎರಡನೆಯ ಲೋಕ ಯುದ್ಧವು ತಲೆದೋರಿದ ಸಪ್ಟಂಬರ 1939 ರಲ್ಲಿ ಜರ್ಮನ್ ಕ್ಯಾತೊಲಿಕ್ ಬಿಷಪರಿಂದ ಪ್ರಕಟಿಸಲ್ಪಟ್ಟ ಪೌರೋಹಿತ್ಯ ಪತ್ರವು ಈ ವಿಷಯದ ಮೇಲೆ ಜ್ಞಾನೋದಯವನ್ನು ಒದಗಿಸುತ್ತದೆ. ಭಾಗಶಃ ಅದು ಓದುವುದು: “ಈ ನಿರ್ಣಾಯಕ ಗಳಿಗೆಯಲ್ಲಿ ನಮ್ಮ ಕ್ಯಾತೊಲಿಕ್ ಸೈನಿಕರು ಉಚ್ಚ ಅಧಿಕಾರಿಗೆ ವಿಧೇಯತೆಯಲ್ಲಿ ತಮ್ಮ ಕರ್ತವ್ಯವನ್ನು ಮಾಡಲು ಮತ್ತು ಇಡೀ ವ್ಯಕ್ತಿತ್ವವನ್ನು ಅರ್ಪಿಸಲು ಸಿದ್ಧರಾಗಿರಬೇಕೆಂಬ ಎಚ್ಚರಿಕೆಯನ್ನು ನಾವು ನೀಡುತ್ತೇವೆ. ಈ ಯುದ್ಧವು ದೈವಾನುಗ್ರಹದಿಂದ ಆಶೀರ್ವದಿತ ಯಶಸ್ವಿಗೆ ನಡಿಸಬಹುದೆಂಬ ಹುರುಪಿನ ಪ್ರಾರ್ಥನೆಗಳಲ್ಲಿ ನಂಬಿಗಸ್ತರು ಸೇರಲು ನಾವು ಅಪ್ಪೀಲು ಮಾಡುತ್ತೇವೆ.”
9 ಅಧಿಕಾರ ಮತ್ತು ಲಾಭವನ್ನು ಪಡೆಯಲಿಕ್ಕೋಸ್ಕರ ರಾಜಕೀಯ ರಾಜ್ಯವನ್ನು ಮೋಹಿಸಿ, 4,000 ಕ್ಕಿಂತಲೂ ಹೆಚ್ಚು ವರ್ಷಗಳಿಂದ ಧರ್ಮವು ಯಾವ ರೀತಿಯ ವೇಶ್ಯಾವೃತ್ತಿಯನ್ನು ನಡಿಸಿದೆಯೆಂದು ಇಂಥ ಕ್ಯಾತೊಲಿಕ್ ರಾಜತಂತ್ರವು ಚಿತ್ರಿಸುತ್ತದೆ. ಇಂಥ ಧರ್ಮ ರಾಜಕೀಯ ಸಂಬಂಧಗಳು, ಸಂಗ್ರಾಮಗಳನ್ನು, ಹಿಂಸೆಗಳನ್ನು, ಮತ್ತು ಮಾನವ ದುರವಸ್ಥೆಯನ್ನು ವ್ಯಾಪಕ ಪ್ರಮಾಣದಲ್ಲಿ ಬೆಳೆಸಿವೆ. ಮಹಾ ಜಾರ ಸ್ತ್ರೀಯ ಮೇಲೆ ಯೆಹೋವನ ನ್ಯಾಯತೀರ್ಪು ಹತ್ತಿರವಿದೆಯೆಂಬುದಕ್ಕೆ ಮಾನವ ಕುಲವು ಎಷ್ಟು ಸಂತೋಷಿತವಾಗಿರಸಾಧ್ಯವಿದೆ. ಅದು ಬೇಗನೇ ಜಾರಿಗೆ ಬರುವಂತಾಗಲಿ!
ಬಹು ನೀರುಗಳ ಮೇಲೆ ಕುಳಿತುಕೊಳ್ಳುವುದು
10. ಮಹಾ ಬಾಬೆಲ್ ಸುರಕ್ಷೆಗಾಗಿ ನೋಡುವ “ಬಹು ನೀರುಗಳು” ಏನಾಗಿವೆ ಮತ್ತು ಅವರಿಗೆ ಏನಾಗುತ್ತಿದೆ?
10 ಪ್ರಾಚೀನ ಬಾಬೆಲ್ ಬಹು ನೀರುಗಳ—ಯೂಫ್ರೇಟೀಸ್ ನದಿ ಮತ್ತು ಅಸಂಖ್ಯ ನೀರಿನ ಕಾಲುವೆಗಳ—ಮೇಲೆ ಕುಳಿತಳು. ಇವು ಅವಳಿಗೆ ಸುರಕ್ಷೆಯಾಗಿದ್ದವು, ಮಾತ್ರವಲ್ಲ ಒಂದು ರಾತ್ರಿಯಲ್ಲಿ ಅವು ಒಣಗುವ ವರೆಗೆ, ಸಂಪತ್ತನ್ನು ಉತ್ಪಾದಿಸುವ ವಾಣಿಜ್ಯ ಮೂಲವೂ ಆಗಿದ್ದವು. (ಯೆರೆಮೀಯ 50:38; 51:9, 12, 13) ಮಹಾ ಬಾಬೆಲ್ ಕೂಡ ಅವಳನ್ನು ರಕ್ಷಿಸಲು ಮತ್ತು ಐಶ್ವರ್ಯವಂತಳನ್ನಾಗಿ ಮಾಡಲು “ಬಹು ನೀರುಗಳ” ಕಡೆಗೆ ನೋಡುತ್ತಾಳೆ. ಈ ಸಾಂಕೇತಿಕ ನೀರುಗಳು “ಪ್ರಜೆ ಸಮೂಹ ಜನ ಭಾಷೆಗಳು” ಆಗಿವೆ, ಅಂದರೆ ಯಾರ ಮೇಲೆ ಅವಳು ಪ್ರಭುತ್ವ ನಡಿಸಿದ್ದಳೋ, ಮತ್ತು ಯಾರಿಂದ ಅವಳು ಪ್ರಾಪಂಚಿಕ ಬೆಂಬಲವನ್ನು ಸೆಳೆದಿದ್ದಳೋ, ಆ ನೂರಾರು ಕೋಟಿ ಮಾನವರೇ ಆಗಿದ್ದಾರೆ. ಆದರೆ ಈ ನೀರುಗಳು ಕೂಡ ಒಣಗಿಹೋಗುತ್ತಿವೆ, ಯಾ ಬೆಂಬಲವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿವೆ.—ಪ್ರಕಟನೆ 17:15; ಹೋಲಿಸಿರಿ ಕೀರ್ತನೆ 18:4; ಯೆಶಾಯ 8:7.
11. (ಎ) ‘ಇಡೀ ಭೂಮಿಯು ಕುಡಿದು ಮತ್ತವಾಗುವಂತೆ’ ಪುರಾತನ ಬಾಬೆಲು ಮಾಡಿದ್ದು ಹೇಗೆ? (ಬಿ) ಮಹಾ ಬಾಬೆಲ್ ‘ಇಡೀ ಭೂಮಿಯು ಕುಡಿದು ಮತ್ತವಾಗುವಂತೆ’ ಮಾಡಿದೆ ಹೇಗೆ?
11 ಇನ್ನೂ ಹೆಚ್ಚಾಗಿ, ಪ್ರಾಚೀನ ಬಾಬೆಲನ್ನು “ಯೆಹೋವನ ಕೈಯಲ್ಲಿನ ಹೊನ್ನಿನ ಪಾತ್ರೆ; ಲೋಕದವರೆಲ್ಲರೂ ಅದರಲ್ಲಿ ಕುಡಿದು ಮತ್ತರಾದರು” ಎಂದು ವರ್ಣಿಸಲಾಗಿದೆ. (ಯೆರೆಮೀಯ 51:7) ಪ್ರಾಚೀನ ಬಾಬೆಲು ನೆರೆಯ ಜನಾಂಗಗಳನ್ನು ಸೇನೆಯ ಮೂಲಕ ಜಯಿಸಿದಾಗ, ಯೆಹೋವನ ಕೋಪದ ಅಭಿವ್ಯಕ್ತಿಗಳನ್ನು ಅವರು ನುಂಗುವಂತೆ ಬಲಾತ್ಕರಿಸಿದಳು, ತನ್ಮೂಲಕ ಅವರನ್ನು ಕುಡುಕ ಮನುಷ್ಯರಷ್ಟು ನಿರ್ಬಲರನ್ನಾಗಿ ಮಾಡಿದಳು. ಆ ಸಂಬಂಧದಲ್ಲಿ ಅವಳು ಯೆಹೋವನ ಸಾಧನವಾಗಿದ್ದಳು. ಮಹಾ ಬಾಬೆಲ್ ಕೂಡ ಒಂದು ಲೋಕ ವ್ಯಾಪಕ ಸಾಮ್ರಾಜ್ಯವಾಗುವಷ್ಟರ ಮಟ್ಟಿಗೆ ವಿಜಯಗಳನ್ನು ಗಳಿಸಿದ್ದಾಳೆ. ಆದರೆ ಅವಳು ಖಂಡಿತವಾಗಿಯೂ ದೇವರ ಸಾಧನವಾಗಿಲ್ಲ. ಅದರ ಬದಲಾಗಿ, ಯಾರೊಂದಿಗೆ ಅವಳು ಧಾರ್ಮಿಕ ವ್ಯಭಿಚಾರವನ್ನು ನಡಿಸುತ್ತಾಳೋ, ಆ “ಭೂರಾಜರನ್ನು” ಅವಳು ಸೇವಿಸಿದ್ದಾಳೆ. ಕುಡಿದವರೋಪಾದಿ ಜನ ಸಮೂಹಗಳನ್ನು, “ಭೂನಿವಾಸಿಗಳನ್ನು” ನಿರ್ಬಲರನ್ನಾಗಿ ಇಟ್ಟು, ಅವರ ಅಧಿಪತಿಗಳಿಗೆ ಪ್ರತಿಭಟಿಸದೆ ಉಪಯುಕ್ತವಾಗಿರುವಂತೆ ಮಾಡಲು, ಅವಳು ತನ್ನ ಸುಳ್ಳು ಬೋಧನೆಗಳನ್ನು ಬಳಸುವ ಮತ್ತು ದಾಸ್ವತಕ್ಕೆ ನಡಿಸುವ ಆಚಾರಗಳ ಮೂಲಕ ಈ ರಾಜರನ್ನು ಸಂತೋಷಗೊಳಿಸಿದ್ದಾಳೆ.
12. (ಎ) ಜಪಾನಿನಲ್ಲಿ ಮಹಾ ಬಾಬೆಲಿನ ಒಂದು ಭಾಗವು II ನೇ ಲೋಕ ಯುದ್ಧದ ವೇಳೆಯಲ್ಲಿ ಹೆಚ್ಚಿನ ರಕ್ತಾಪರಾಧಕ್ಕೆ ಹೇಗೆ ಜವಾಬ್ದಾರವಾಗಿತ್ತು? (ಬಿ) ಮಹಾ ಬಾಬೆಲಿನ ಬೆಂಬಲದಲ್ಲಿ ಜಪಾನಿನ “ನೀರುಗಳು” ಹೇಗೆ ಹಿಂದಕ್ಕೆ ಸರಿದವು ಮತ್ತು ಯಾವ ಪರಿಣಾಮದೊಂದಿಗೆ?
12 ಶಿಂಟೋ ಧರ್ಮದ ಜಪಾನ್ ಇದಕ್ಕೆ ಒಂದು ಗಮನಾರ್ಹವಾದ ಉದಾಹರಣೆಯನ್ನು ಒದಗಿಸುತ್ತದೆ. ತತ್ವಕ್ಕನುಸಾರ ತರಬೇತಿಗೊಳಿಸಲ್ಪಟ್ಟ ಜಪಾನಿನ ಸೈನಿಕನು ತನ್ನ ಜೀವವನ್ನು ಚಕ್ರವರ್ತಿಗೆ—ಉತ್ಕೃಷ್ಟ ಶಿಂಟೋ ದೇವರಿಗೆ—ಕೊಡುವುದನ್ನು ಅತ್ಯುನ್ನತ ಗೌರವವಾಗಿ ಪರಿಗಣಿಸಿದನು. ಎರಡನೇ ಲೋಕ ಯುದ್ಧದ ವೇಳೆಯಲ್ಲಿ ಕೆಲವು 15,00,000 ಜಪಾನಿನ ಸೈನಿಕರು ಯುದ್ಧದಲ್ಲಿ ಮಡಿದರು; ಸುಮಾರಾಗಿ ಪ್ರತಿಯೊಬ್ಬನು ಶರಣಾಗತನಾಗುವುದನ್ನು ಒಂದು ಅಗೌರವವಾಗಿ ವೀಕ್ಷಿಸಿದನು. ಆದರೆ ಜಪಾನಿನ ಸೋಲಿನ ಪರಿಣಾಮವಾಗಿ, ಚಕ್ರವರ್ತಿ ಹಿರೋಹಿಟೋ ತನ್ನ ದೈವತ್ವದ ಹಕ್ಕನ್ನು ಪರಿತ್ಯಜಿಸುವಂತೆ ಒತ್ತಾಯಿಸಲ್ಪಟ್ಟನು. ಇದು ಮಹಾ ಬಾಬೆಲಿನ ಶಿಂಟೋ ಭಾಗದ “ನೀರುಗಳ” ಗಮನಾರ್ಹ ಬೆಂಬಲವನ್ನು ಹಿಂದೆ ತೆಗೆದುಕೊಳ್ಳುವುದಕ್ಕೆ ನಡಿಸಿತು—ಅಯ್ಯೋ, ಪೆಸಿಫಿಕ್ ಯುದ್ಧರಂಗದಲ್ಲಿ ರಕ್ತದ ತೊಟ್ಟಿಗಳ ಸುರಿಸುವಿಕೆಗೆ ಶಿಂಟೋ ಧರ್ಮವು ಮಂಜೂರು ಮಾಡಿದ ಅನಂತರ! ಶಿಂಟೋ ಧರ್ಮದ ಪ್ರಭಾವದ ಈ ಬಲಹೀನತೆಯು ಇತ್ತೀಚೆಗಿನ ವರ್ಷಗಳು 1,77,000 ಕ್ಕಿಂತಲೂ ಅಧಿಕ ಜಪಾನೀಯರಿಗೆ—ಇವರಲ್ಲಿ ಬಹುಸಂಖ್ಯಾತರು ಈ ಮುಂಚೆ ಶಿಂಟೋ ಧರ್ಮದವರು ಮತ್ತು ಬೌದ್ಧರು—ಸಾರ್ವಭೌಮ ಕರ್ತನಾದ ಯೆಹೋವನ ಸಮರ್ಪಿತ, ಸ್ನಾನಿತ ಶುಶ್ರೂಷಕರಾಗಲು ದಾರಿಯನ್ನು ಕೂಡ ತೆರೆಯಿತು.
ಜಾರಸ್ತ್ರೀಯು ಒಂದು ಮೃಗದ ಮೇಲೆ ಸವಾರಿ ಮಾಡುತ್ತಾಳೆ
13. ಆತ್ಮ ಬಲದಿಂದ ಅವನನ್ನು ದೇವದೂತನು ಎತ್ತಿಕೊಂಡು ಅಡವಿಗೆ ಕರೆದ್ದೊಯಾಗ, ಯೋಹಾನನು ಯಾವ ಆಶ್ಚರ್ಯಗೊಳಿಸುವ ನೋಟವನ್ನು ನೋಡುತ್ತಾನೆ?
13 ಪ್ರವಾದನೆಯು ಮಹಾ ಜಾರಸ್ತ್ರೀಯ ಮತ್ತು ಅವಳ ಅಂತ್ಯಾವಸ್ಥೆಯ ಕುರಿತು ಇನ್ನು ಯಾವ ಹೆಚ್ಚಿನ ವಿಷಯವನ್ನು ಬಹಿರಂಗಪಡಿಸುತ್ತದೆ? ಯೋಹಾನನು ಈಗ ತಿಳಿಯಪಡಿಸುವಂತೆ, ಹೆಚ್ಚಿನ ಸಜೀವ ದೃಶ್ಯ ನಮ್ಮ ನೋಟಕ್ಕೆ ಬರುತ್ತದೆ: “ಮತ್ತು ಅವನು [ದೇವದೂತನು] ಆತ್ಮ ಬಲದಲ್ಲಿ ನನ್ನನ್ನು ಎತ್ತಿಕೊಡು ಒಂದು ಅಡವಿಗೆ ಹೋದನು. ಮತ್ತು ಮೈಮೇಲೆಲ್ಲಾ ದೇವದೂಷಣೆಯ ಹೆಸರುಗಳು ತುಂಬಿದ್ದ ಮತ್ತು ಏಳು ತಲೆಗಳು ಮತ್ತು ಹತ್ತು ಕೊಂಬುಗಳು ಇದ್ದ ಕಡುಗೆಂಪು ಬಣ್ಣದ ಮೃಗದ ಮೇಲೆ ಕೂತಿದ್ದ ಒಬ್ಬ ಸ್ತ್ರೀಯನ್ನು ನಾನು ಕಂಡೆನು.”—ಪ್ರಕಟನೆ 17:3, NW.
14. ಯೋಹಾನನನ್ನು ಅಡವಿಯೊಳಗೆ ಕರೆದೊಯ್ದದ್ದು ಅದೇಕೆ ತಕ್ಕದಾಗಿದೆ?
14 ಯೋಹಾನನು ಯಾಕೆ ಅಡವಿಗೆ ಕೊಂಡೊಯ್ಯಲ್ಪಟ್ಟನು? ಪ್ರಾಚೀನ ಬಾಬೆಲಿನ ವಿರುದ್ಧ ನಾಶನದ ಮುಂಚಿನ ಪ್ರಕಟನೆಯು “ಕಡಲಡವಿಯ” ವಿರುದ್ಧವಾಗಿ ಎಂದು ಅದನ್ನು ವರ್ಣಿಸಿತು. (ಯೆಶಾಯ 21:1, 9) ಅದರ ಎಲ್ಲಾ ಜಲಮಯವಾದ ರಕ್ಷಣಾರ್ಥಕ ವ್ಯವಸ್ಥೆಗಳ ಮಧ್ಯೆಯೂ, ಪ್ರಾಚೀನ ಬಾಬೆಲ್ ಒಂದು ನಿರ್ಜೀವ ಪಾಳುಸ್ಥಳವಾಗಿರುವದೆನ್ನುವುದಕ್ಕೆ ಇದು ತಕ್ಕ ಎಚ್ಚರಿಕೆಯನ್ನು ಕೊಟ್ಟಿತು. ಹಾಗಾದರೆ ಮಹಾ ಬಾಬೆಲಿನ ಅಂತ್ಯಾವಸ್ಥೆಯನ್ನು ನೋಡಲು ಯೋಹಾನನು ತನ್ನ ದರ್ಶನದಲ್ಲಿ ಅಡವಿಗೆ ಕೊಂಡೊಯ್ಯಲ್ಪಡುವುದು ಯುಕ್ತವಾಗಿದೆ. ಇವಳು ಕೂಡ ಧ್ವಂಸವಾಗಿ ಮತ್ತು ಹಾಳಾಗಿ ಹೋಗಲೇಬೇಕು. (ಪ್ರಕಟನೆ 18:19, 22, 23) ಆದರೂ, ಅಲ್ಲಿ ಅವನೇನನ್ನು ನೋಡುತ್ತಾನೋ, ಅದರಿಂದ ಯೋಹಾನನು ಅತ್ಯಾಶ್ಚರ್ಯ ಪಡುತ್ತಾನೆ. ಮಹಾ ಜಾರಸ್ತ್ರೀಯು ಒಬ್ಬಳೇ ಇಲ್ಲ! ಅವಳು ಘೋರವಾದ ಕಾಡು ಮೃಗವೊಂದರ ಮೇಲೆ ಕೂತಿದ್ದಾಳೆ!
15. ಪ್ರಕಟನೆ 13:1ರ ಕಾಡು ಮೃಗಕ್ಕೂ ಮತ್ತು ಪ್ರಕಟನೆ 17:3 ರದ್ದಕ್ಕೂ ನಡುವೆ ಯಾವ ವ್ಯತ್ಯಾಸವಿದೆ?
15 ಈ ಮೃಗಕ್ಕೆ ಏಳು ತಲೆಗಳೂ, ಹತ್ತು ಕೊಂಬುಗಳೂ ಇವೆ. ಏಳು ತಲೆಗಳೂ, ಹತ್ತು ಕೊಂಬುಗಳೂ ಇದ್ದ ಮೃಗವೊಂದನ್ನು ಯೋಹಾನನು ಈ ಮುಂಚೆ ನೋಡಿದ್ದನು, ಹಾಗಾದರೆ ಇದು ಅದೆಯೋ? (ಪ್ರಕಟನೆ 13:1) ಅಲ್ಲ. ವ್ಯತ್ಯಾಸಗಳು ಇವೆ. ಈ ಮೃಗವು ಕಡುಗೆಂಪು ಬಣ್ಣದ್ದಾಗಿದೆ ಮತ್ತು, ಮುಂಚಿನ ಕಾಡುಮೃಗಕ್ಕೆ ಅಸದೃಶವಾಗಿ, ಇದಕ್ಕೆ ಮುಕುಟಗಳಿರುವುದಾಗಿ ಹೇಳಲ್ಪಡುವುದಿಲ್ಲ. ಅದರ ಏಳು ತಲೆಗಳ ಮೇಲೆ ಮಾತ್ರವೇ ದೇವದೂಷಣ ನಾಮಗಳು ಇರುವುದರ ಬದಲು, ಇಲ್ಲಿ ಇದಕ್ಕೆ “ಮೈಮೇಲೆಲ್ಲಾ ದೇವದೂಷಣ ನಾಮಗಳ” ಇವೆ. ಹಾಗಿದ್ದರೂ, ಈ ಹೊಸ ಕಾಡು ಮೃಗ ಮತ್ತು ಹಿಂದಿನದರ ಮಧ್ಯೆ ಸಂಬಂಧವಿರಲೇಬೇಕು; ಇವುಗಳ ಮಧ್ಯೆಯಿರುವ ಸಮಾನ ರೂಪಗಳು ಕಾಕತಾಳೀಯವಾಗಿರಲು ತೀರ ಬಲವುಳ್ಳದ್ದಾಗಿವೆ.
16. ಕಡುಗೆಂಪು ಬಣ್ಣದ ಕಾಡು ಮೃಗದ ಗುರುತು ಏನಾಗಿದೆ, ಮತ್ತು ಅದರ ಉದ್ದೇಶದ ಕುರಿತು ಏನು ತಿಳಿಸಲ್ಪಟ್ಟಿದೆ?
16 ಹಾಗಾದರೆ, ಈ ಹೊಸ ಕಡುಗೆಂಪು ಬಣ್ಣದ ಕಾಡು ಮೃಗವು ಏನು? ಕುರಿಮರಿಗಿರುವಂತೆ ಎರಡು ಕೊಂಬುಗಳಿದ್ದ ಆಂಗ್ಲೋ-ಅಮೆರಿಕನ್ ಕಾಡು ಮೃಗದ ಪ್ರೇರಣೆಯ ಕೆಳಗೆ ಮುಂದೆ ಬಂದ ಮೃಗದ ವಿಗ್ರಹ ಇದಾಗಿರಲೇಬೇಕು. ವಿಗ್ರಹವು ಮಾಡಲ್ಪಟ್ಟ ಅನಂತರ ಆ ಎರಡು ಕೊಂಬಿನ ಕಾಡು ಮೃಗವು, ಕಾಡು ಮೃಗದ ವಿಗ್ರಹಕ್ಕೆ ಜೀವ ಕೊಡುವಂತೆ ಅನುಮತಿಸಲ್ಪಟ್ಟಿತು. (ಪ್ರಕಟನೆ 13:14, 15) ಯೋಹಾನನು ಈಗ ಜೀವಿಸುವ, ಉಸಿರಾಡುವ ವಿಗ್ರಹವನ್ನು ನೋಡುತ್ತಾನೆ. ಎರಡು ಕೊಂಬಿನ ಮೃಗವು 1920 ರಲ್ಲಿ ಜೀವಕ್ಕೆ ತಂದ ಜನಾಂಗ ಸಂಘ ಸಂಸ್ಥೆಯನ್ನು ಚಿತ್ರಿಸುತ್ತದೆ. ಅಮೆರಿಕದ ಅಧ್ಯಕ್ಷ ವಿಲ್ಸನರು ಜನಾಂಗ ಸಂಘವು “ಎಲ್ಲಾ ಮನುಷ್ಯರಿಗೆ ನ್ಯಾಯದ ಹಂಚಿಕೆಗಾಗಿ ನ್ಯಾಯಸ್ಥಾನ ಮತ್ತು ಯುದ್ಧದ ಭೀತಿಯನ್ನು ಸದಾಕಾಲಕ್ಕೂ ಅಳಿಸಿಬಿಡುವುದನ್ನು” ಮುನ್ನೋಡಿದರು. ಎರಡನೇ ಲೋಕ ಯುದ್ಧದ ಅನಂತರ ಸಂಯುಕ್ತ ರಾಷ್ಟ್ರವಾಗಿ ಅದು ಪುನರುತಿತ್ಥವಾದಾಗ ಅದರ ಹಕ್ಕುಬಾಧ್ಯತೆಯ ಉದ್ದೇಶವು “ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು” ಆಗಿತ್ತು.
17. (ಎ) ಸಾಂಕೇತಿಕ ಕಡುಗೆಂಪು ಬಣ್ಣದ ಕಾಡು ಮೃಗದ ಮೈಮೇಲೆಲ್ಲಾ ದೇವ ದೂಷಣೆಯ ಹೆಸರುಗಳು ಯಾವ ರೀತಿಯಲ್ಲಿ ಇವೆ? (ಬಿ) ಕಡುಗೆಂಪು ಬಣ್ಣದ ಕಾಡು ಮೃಗವನ್ನು ಯಾರು ಸವಾರಿ ಮಾಡುತ್ತಾರೆ? (ಸಿ) ಬಾಬೆಲಿನ ಧರ್ಮವು ತನ್ನನ್ನು ಆರಂಭದಿಂದಲೇ ಜನಾಂಗ ಸಂಘ ಮತ್ತು ಅದರ ಉತ್ತರಾಧಿಕಾರಿಯೊಂದಿಗೆ ಹೇಗೆ ಜೋಡಿಸಿಕೊಂಡಿತು?
17 ಈ ಸಾಂಕೇತಿಕ ಕಾಡು ಮೃಗದ ಮೈಮೇಲೆಲ್ಲಾ ದೇವದೂಷಣೆಯ ಹೆಸರುಗಳು ತುಂಬಿರುವುದು ಯಾವ ರೀತಿಯಲ್ಲಿ? ಜನರು ಈ ಬಹುರಾಷ್ಟ್ರೀಯ ವಿಗ್ರಹವನ್ನು—ತನ್ನ ರಾಜ್ಯವು ಮಾತ್ರವೇ ಯಾವುದನ್ನು ಪೂರೈಸಲು ಶಕ್ಯವಾಗಿದೆಯೆಂದು ದೇವರು ಹೇಳುತ್ತಾನೋ, ಅದನ್ನು ಪೂರೈಸಲು—ದೇವರ ರಾಜ್ಯಕ್ಕೆ ಬದಲಿಯಾಗಿ ಸ್ಥಾಪಿಸಿರುವುದರಲ್ಲಿಯೇ. (ದಾನಿಯೇಲ 2:44; ಮತ್ತಾಯ 12:18, 21) ಆದಾಗ್ಯೂ, ಮಹಾ ಬಾಬೆಲ್ ಕಡುಗೆಂಪು ಬಣ್ಣದ ಕಾಡು ಮೃಗವನ್ನು ಹತ್ತಿ ಸವಾರಿ ಮಾಡುತ್ತಿರುವುದೇ, ಯೋಹಾನನ ದರ್ಶನದ ಗಮನಾರ್ಹ ವಿಷಯವಾಗಿದೆ. ಪ್ರವಾದನೆಗೆ ಅನುಸಾರವಾಗಿ, ಬಾಬೆಲಿನ ಧರ್ಮವು, ವಿಶೇಷವಾಗಿ ಕ್ರೈಸ್ತಪ್ರಪಂಚದಲ್ಲಿ, ತನ್ನನ್ನು ಜನಾಂಗ ಸಂಘ ಮತ್ತು ಅದರ ಉತ್ತರಾಧಿಕಾರಿಯೊಂದಿಗೆ ಜೋಡಿಸಿಕೊಂಡಿದೆ. ದಶಂಬರ 18, 1918 ರಷ್ಟು ಹಿಂದೆ ಅಮೆರಿಕದಲ್ಲಿ ನ್ಯಾಶನಲ್ ಕೌನ್ಸಿಲ್ ಅಫ್ ದ ಚರ್ಚಸ್ ಆಫ್ ಕ್ರೈಸ್ಟ್ ಎಂದು ಈಗ ಕರೆಯಲ್ಪಡುವ ಸಂಸ್ಥೆಯು ಭಾಗಶಃ ಹೀಗೆ ಘೋಷಿಸಿತು: “ಇಂಥ ಒಂದು ಸಂಘ ಕೇವಲ ಒಂದು ರಾಜಕೀಯ ಸಾಧನವಾಗಿರುವುದಿಲ್ಲ; ಬದಲಾಗಿ, ಅದು ಭೂಮಿಯ ಮೇಲೆ ದೇವರ ರಾಜ್ಯದ ರಾಜಕೀಯ ಅಭಿವ್ಯಕ್ತಿಯಾಗಿದೆ. . . . ಚರ್ಚು ಸುಚಿತ್ತದ ಆತ್ಮವನ್ನು ಕೊಡಸಾಧ್ಯವಿದೆ, ಇದು ಇಲ್ಲದೆ ಯಾವುದೇ ಜನಾಂಗ ಸಂಘ ಬಾಳಸಾಧ್ಯವಿಲ್ಲ. . . . ಜನಾಂಗ ಸಂಘವು ಸುವಾರ್ತೆಗಳಲ್ಲಿ ನೆಲೆಗೊಂಡಿದೆ. ಸುವಾರ್ತೆಯಂತೆ ಅದರ ಧ್ಯೇಯವು ‘ಭೂಮಿಯ ಮೇಲೆ ಸಮಾಧಾನ, ಮನುಷ್ಯರೆಡೆಗೆ ಸುಚಿತ್ತ’ ಆಗಿದೆ.”
18. ಕ್ರೈಸ್ತಪ್ರಪಂಚದ ವೈದಿಕರು ಜನಾಂಗ ಸಂಘಕ್ಕೆ ತಮ್ಮ ಬೆಂಬಲವನ್ನು ಹೇಗೆ ತೋರಿಸಿದರು?
18 ಜನವರಿ 2, 1919 ರಂದು ದ ಸಾನ್ ಫ್ರಾನ್ಸಿಸ್ಕೊ ಕ್ರಾನಿಕಲ್ ಮುಖಪುಟದ ಈ ಶಿರೋಲೇಖವನ್ನು ಛಾಪಿಸಿತು: “ವಿಲ್ಸನರ ಜನಾಂಗ ಸಂಘದ ದತ್ತು ಸ್ವೀಕಾರವನ್ನು ಪೋಪ್ ಪ್ರತಿಪಾದಿಸುತ್ತಾರೆ.” ಅಕ್ಟೋಬರ್ 16, 1919 ರಂದು ಪ್ರಮುಖ ಪಂಗಡಗಳ 14,450 ವೈದಿಕರು ಸಹಿಹಾಕಿದ ಮನವಿಯನ್ನು ಅಮೆರಿಕದ ಶಾಸನ ಸಭೆಗೆ ಒಪ್ಪಿಸಿದರು. ಆ ಸಂಸ್ಥೆಯು “ಜನಾಂಗ ಸಂಘದ ಕರಾರನ್ನು ಒಳಪಡಿಸುವ ಪ್ಯಾರಿಸಿನ ಶಾಂತಿ ಒಪ್ಪಂದವನ್ನು ಪ್ರಮಾಣಿಸಲು” ಇದು ಪ್ರೋತ್ಸಾಹಿಸಿತು. ಅಮೆರಿಕದ ಶಾಸನ ಸಭೆ ಒಪ್ಪಂದವನ್ನು ಮಂಜೂರು ಮಾಡಲು ತಪ್ಪಿದರೂ ಕೂಡ, ಕ್ರೈಸ್ತಪ್ರಪಂಚದ ವೈದಿಕರು ಜನಾಂಗ ಸಂಘಕ್ಕಾಗಿ ಸುಸಂಘಟಿತ ಕಾರ್ಯಾಚರಣೆಯನ್ನು ಮುಂದುವರಿಸಿದರು. ಮತ್ತು ಜನಾಂಗ ಸಂಘವು ಹೇಗೆ ಉದ್ಘಾಟಿಸಲ್ಪಟ್ಟಿತ್ತು? ಸ್ವಿಟ್ಸರ್ಲೆಂಡಿನ ನವಂಬರ 15, 1920 ತಾರೀಖಿನ ಒಂದು ವಾರ್ತಾ ವರದಿ ಓದುವುದು: “ಜನಾಂಗ ಸಂಘದ ಮೊದಲ ಸಭೆಯ ಉದ್ಘಾಟನೆಯು ಈ ಬೆಳಿಗ್ಗೆ ಹನ್ನೊಂದು ಘಂಟೆಗೆ ಜಿನೀವಾದಲ್ಲಿ ಎಲ್ಲಾ ಚರ್ಚುಗಳ ಗಂಟೆಗಳು ಬಾರಿಸುವುದರೊಂದಿಗೆ ಪ್ರಕಟಿಸಲ್ಪಟ್ಟಿತು.”
19. ಕಡುಗೆಂಪು ಬಣ್ಣದ ಕಾಡು ಮೃಗವು ಗೋಚರವಾದಾಗ, ಯೋಹಾನ ವರ್ಗವು ಯಾವ ಮಾರ್ಗ ಕ್ರಮವನ್ನು ತೆಗೆದುಕೊಂಡಿತು?
19 ಬರಲಿರುವ ಮೆಸ್ಸೀಯ ಸಂಬಂಧಿತ ರಾಜ್ಯವನ್ನು ಉತ್ಸಾಹದಿಂದ ಸ್ವೀಕರಿಸಿದ ಭೂಮಿಯ ಮೇಲೆ ಇರುವ ಒಂದೇ ಗುಂಪು, ಯೋಹಾನ ವರ್ಗವು ಕಡುಗೆಂಪು ಬಣ್ಣದ ಕಾಡು ಮೃಗಕ್ಕೆ ಗೌರವ ಕೊಡುವುದರಲ್ಲಿ ಕ್ರೈಸ್ತಪ್ರಪಂಚದೊಂದಿಗೆ ಪಾಲು ತೆಗೆದುಕೊಂಡಿತೋ? ಇಲ್ಲವೇ ಇಲ್ಲ! ಭಾನುವಾರ ಸಪ್ಟಂಬರ 7, 1919 ರಂದು ಒಹೈಯೋದ ಸೀಡರ್ ಪಾಯಿಂಟ್ನಲ್ಲಿ ಯೆಹೋವನ ಜನರ ಅಧಿವೇಶನದಂದು “ಸಂಕಟಕ್ಕೀಡಾದ ಮಾನವ ಕುಲಕ್ಕೆ ನಿರೀಕ್ಷೆ” ಎನ್ನುವ ಸಾರ್ವಜನಿಕ ಭಾಷಣವು ಒಂದು ಮುಖ್ಯಭಾಷಣವಾಗಿತ್ತು. ಮರುದಿನ ಸ್ಯಾಂಡಸ್ಕಿಯದ ಸ್ಟಾರ್ ಜರ್ನಲ್ ವರದಿಸಿತೇನಂದರೆ ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾದ ಜೆ. ಎಫ್. ರಥರ್ಫರ್ಡ್ ಸುಮಾರು 7,000 ವ್ಯಕ್ತಿಗಳನ್ನು ಸಂಬೋಧಿಸಿ ಮಾತಾಡಿದಾಗ, “ಜನಾಂಗ ಸಂಘದ ಮೇಲೆ ಬರಲಿರುವ ಕರ್ತನ ಸಿಟ್ಟು ನಿಶ್ಚಿತವೆಂದು ಪ್ರತಿಪಾದಿಸಿದರು. . . . ಯಾಕಂದರೆ ವೈದಿಕರು—ಕ್ಯಾತೊಲಿಕ್ ಮತ್ತು ಪ್ರಾಟೆಸ್ಟಂಟ್—ದೇವರ ಪ್ರತಿನಿಧಿಗಳೆಂದು ಹೇಳಿಕೊಳ್ಳುತ್ತಾ ಆತನ ಯೋಜನೆಯನ್ನು ತೊರೆದಿದ್ದಾರೆ ಮತ್ತು ಭೂಮಿಯ ಮೇಲೆ ಕ್ರಿಸ್ತನ ರಾಜ್ಯದ ರಾಜಕೀಯ ಅಭಿವ್ಯಕ್ತಿಯಾಗಿ ಜನಾಂಗ ಸಂಘಕ್ಕೆ ಜಯಜಯಕಾರ ಮಾಡುತ್ತಾ, ಅದನ್ನು ಅನುಮೋದಿಸಿದ್ದಾರೆ.”
20. ಜನಾಂಗ ಸಂಘವನ್ನು “ಭೂಮಿಯ ಮೇಲೆ ದೇವರ ರಾಜ್ಯದ ರಾಜಕೀಯ ಅಭಿವ್ಯಕ್ತಿಯಾಗಿ” ವೈದಿಕರು ಜಯಕಾರವೆತ್ತಿದ್ದು ದೇವದೂಷಣೆಯಾಗಿತ್ತೇಕೆ?
20 ಜನಾಂಗ ಸಂಘದ ಭೀಕರ ಸೋಲು ಇಂತಹ ಮಾನವ ನಿರ್ಮಿತ ಮಾಧ್ಯಮಗಳು ಭೂಮಿಯ ಮೇಲೆ ದೇವರ ರಾಜ್ಯದ ಯಾವುದೇ ಭಾಗವಾಗಿರುವುದಿಲ್ಲವೆಂಬ ಸಂಕೇತವನ್ನು ವೈದಿಕರಿಗೆ ಕೊಡಬೇಕಿತ್ತು. ಇಂತಹದೊಂದು ಹೇಳಿಕೆಯನ್ನು ಮಾಡುವುದು ಎಂತಹ ದೇವದೂಷಣೆ! ಜನಾಂಗ ಸಂಘ ಭಾರಿ ಒರಟು ತೇಪೆಯಾಗಿ ಪರಿಣಮಿಸಿದಾಗ, ದೇವರು ಸಹಭಾಗಿ ಆಗಿದ್ದನೆಂದು ತೋರುವಂತೆ ಅದು ಮಾಡುತ್ತದೆ. ದೇವರ ವಿಷಯದಲ್ಲಾದರೋ “ಆತನ ಕಾರ್ಯದಲ್ಲಿ ಯಾವ ಕುಂದೂ ಇಲ್ಲ.” ಕ್ರಿಸ್ತನ ಕೆಳಗಿರುವ ಯೆಹೋವನ ಸ್ವರ್ಗೀಯ ರಾಜ್ಯವು—ಇವರಲ್ಲಿ ಅನೇಕರು ನಾಸ್ತಿಕರಾಗಿರುವ, ಕ್ಷುಲ್ಲಕ ವಿಷಯಗಳಿಗೆ ಜಗಳಾಡುವ ರಾಜಕಾರಣಿಗಳ ಏಕೀಕೃತ ಸಂಘ ಅಲ್ಲ—ಶಾಂತಿಯನ್ನು ತರುವ ಮತ್ತು ಪರಲೋಕದಲ್ಲಿ ಹೇಗೋ ಹಾಗೆಯೇ ಭೂಮಿಯ ಮೇಲೆ ಆತನ ಚಿತ್ತವನ್ನು ನೇರವೇರಿಸುವ ಮಾಧ್ಯಮವಾಗಿದೆ.—ಧರ್ಮೋಪದೇಶಕಾಂಡ 32:4; ಮತ್ತಾಯ 6:10.
21. ಜನಾಂಗ ಸಂಘದ ಉತ್ತರಾಧಿಕಾರಿಯಾದ ಸಂಯುಕ್ತ ಸಂಘವನ್ನು ಮಹಾ ಜಾರಸ್ತ್ರೀಯು ಬೆಂಬಲಿಸುತ್ತದೆ ಮತ್ತು ಶ್ಲಾಘಿಸುತ್ತದೆ ಎಂದು ಯಾವುದು ತೋರಿಸುತ್ತದೆ?
21 ಜನಾಂಗ ಸಂಘದ ಉತ್ತರಾಧಿಕಾರಿಯಾದ ಸಂಯುಕ್ತ ರಾಷ್ಟ್ರ ಸಂಘದ ಕುರಿತೇನು? ಅದರ ಆರಂಭದಿಂದಲೇ, ಮಹಾ ಜಾರಸ್ತ್ರೀಯು ಅದರ ಬೆನ್ನ ಮೇಲೆ ಸವಾರಿ ಮಾಡಲು, ಅದರೊಂದಿಗೆ ದೃಶ್ಯವಾಗಿ ಜೊತೆಸೇರಲು ಮತ್ತು ಅದರ ಗತಿವಿಧಿಯನ್ನು ಮಾರ್ಗದರ್ಶಿಸಲು ಪ್ರಯತ್ನಿಸುವಂತೆ ಈ ಸಂಘವು ಕೂಡ ಬಿಟ್ಟಿದೆ. ಉದಾಹರಣೆಗೆ, ಜೂನ್ 1965 ರಲ್ಲಿ, ಅದರ 20 ನೆಯ ವಾರ್ಷಿಕೋತ್ಸವದಂದು, ರೋಮನ್ ಕ್ಯಾತೊಲಿಕ್ ಚರ್ಚು ಮತ್ತು ಈಸರ್ನ್ಟ್ ಅರ್ತೊಡಾಕ್ಸ್ ಚರ್ಚಿನ ಪ್ರತಿನಿಧಿಗಳು, ಪ್ರಾಟೆಸ್ಟಂಟ್ರು, ಯೆಹೂದ್ಯರು, ಹಿಂದುಗಳು, ಬೌದ್ಧರು ಮತ್ತು ಮುಸ್ಲಿಮರೊಂದಿಗೆ—ಒಟ್ಟಿಗೆ ಭೂಮಿಯ ಜನಸಂಖ್ಯೆಯ ಇನ್ನೂರು ಕೋಟಿಯನ್ನು ಪ್ರತಿನಿಧಿಸುವರೆಂದು ಇವರ ಕುರಿತು ಹೇಳಲಾಗಿದೆ—ಜತೆಗೂಡಿ ಸಂಯುಕ್ತ ರಾಷ್ಟ್ರ ಸಂಘಕ್ಕೆ ತಮ್ಮ ಬೆಂಬಲ ಮತ್ತು ಶ್ಲಾಘನೆಯನ್ನು ಆಚರಿಸಲು ಸಾನ್ ಫ್ರಾನ್ಸಿಸ್ಕೋದಲ್ಲಿ ಕೂಡಿಬಂದರು. ಸಂಯುಕ್ತ ರಾಷ್ಟ್ರ ಸಂಘಕ್ಕೆ ಅಕ್ಟೋಬರ 1965 ರಲ್ಲಿ ಭೇಟಿಕೊಟ್ಟಾಗ ಪೋಪ್ ಪೌಲ್ VI ಅದನ್ನು “ಎಲ್ಲಾ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಅತ್ಯಂತ ದೊಡ್ಡ ಸಂಸ್ಥೆ” ಎಂದು ವರ್ಣಿಸಿದರು ಮತ್ತು ಕೂಡಿಸಿದ್ದು: “ಭೂಮಿಯ ಜನರು ಮೈತ್ರಿ ಮತ್ತು ಸಮಾಧಾನಕ್ಕಾಗಿರುವ ಕೊನೆಯ ನಿರೀಕ್ಷೆಯಾಗಿ ಸಂಯುಕ್ತ ರಾಷ್ಟ್ರ ಸಂಘದ ಕಡೆಗೆ ತಿರುಗುತ್ತಾರೆ.” ಇನ್ನೊಬ್ಬ ಪೋಪ್ ಹುದ್ದೆಯ ಭೇಟಿಗಾರ, ಪೋಪ್ ಜಾನ್ ಪೌಲ್ II, ಅಕ್ಟೋಬರ 1979 ರಲ್ಲಿ ಸಂಯುಕ್ತ ರಾಷ್ಟ್ರ ಸಂಘವನ್ನು ಸಂಬೋಧಿಸುತ್ತಾ ಹೇಳಿದ್ದು: “ಸಂಯುಕ್ತ ರಾಷ್ಟ್ರ ಸಂಘ ಶಾಂತಿ ಮತ್ತು ನ್ಯಾಯಕ್ಕೆ ಪರಮ ಶ್ರೇಷ್ಠ ನ್ಯಾಯಸ್ಥಾನವಾಗಿ ಸದಾ ಉಳಿಯುವುದೆಂದು ನಾನು ನಿರೀಕ್ಷಿಸುತ್ತೇನೆ.” ಗಮನಾರ್ಹವಾಗಿ ಪೋಪರು ತಮ್ಮ ಭಾಷಣದಲ್ಲಿ, ಯೇಸು ಕ್ರಿಸ್ತನು ಅಥವಾ ದೇವರ ರಾಜ್ಯದ ಕುರಿತು ಒಮ್ಮೆಯಾದರೂ ಪ್ರಸ್ತಾಪಿಸಲ್ಲಿಲ. ಸಪ್ಟಂಬರ 1987 ರಲ್ಲಿ ಅಮೆರಿಕದ ತಮ್ಮ ಭೇಟಿಯ ವೇಳೆಯಲ್ಲಿ, ನ್ಯೂ ಯಾರ್ಕ್ ಟೈಮ್ಸ್ ನಿಂದ ವರದಿಸಿದಂತೆ “ಜಾನ್ ಪೌಲರು ‘ಹೊಸ ಲೋಕ ವ್ಯಾಪಕ ಐಕಮತ್ಯವನ್ನು’ . . . ಪ್ರವರ್ಧಿಸುವುದರಲ್ಲಿ ಸಂಯುಕ್ತ ರಾಷ್ಟ್ರ ಸಂಘದ ನಿಶ್ಚಿತ ಪಾತ್ರದ ಕುರಿತು ಬಹಳ ಹೊತ್ತು ಮಾತಾಡಿದರು.”
ಒಂದು ಹೆಸರು, ಒಂದು ರಹಸ್ಯ
22. (ಎ) ಮಹಾ ವೇಶ್ಯೆಯು ಯಾವ ರೀತಿಯ ಕಾಡು ಮೃಗದ ಮೇಲೆ ಸವಾರಿ ಮಾಡಲು ಆರಿಸಿದ್ದಾಳೆ? (ಬಿ) ಸಾಂಕೇತಿಕ ವೇಶ್ಯೆಯಾದ ಮಹಾ ಬಾಬೆಲನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ?
22 ಮಹಾ ವೇಶ್ಯಾ ಸ್ತ್ರೀಯು ಸವಾರಿಮಾಡಲು ಅಪಾಯಕರ ಮೃಗವನ್ನು ಆರಿಸಿದ್ದಾಳೆಂದು ಅಪೊಸ್ತಲ ಯೋಹಾನನು ಬೇಗನೇ ತಿಳಿದುಕೊಳ್ಳುತ್ತಾನೆ. ಆದರೂ ಮೊದಲು, ಅವನ ಗಮನವು ಮಹಾ ಬಾಬೆಲಿಗೆ ತಿರುಗುತ್ತದೆ. ಅವಳು ವೈಭವದಿಂದ ಅಲಂಕರಿಸಲ್ಪಟ್ಟಿದ್ದಾಳೆ, ಆದರೆ ಓ, ಅವಳೆಷ್ಟು ವಿಕರ್ಷಕಳಾಗಿದ್ದಾಳೆ! “ಮತ್ತು ಆ ಸ್ತ್ರೀಯು ಕೆನ್ನೀಲಿ ಮತ್ತು ಕಡುಗೆಂಪಿನ ವಸ್ತ್ರಾಲಂಕೃತಳಾಗಿ ಚಿನ್ನ, ರತ್ನ ಮತ್ತು ಮುತ್ತುಗಳಿಂದ ಭೂಷಿತಳಾಗಿದ್ದಳು ಮತ್ತು ಆಕೆಯ ಕೈಯಲ್ಲಿ ಅಸಹ್ಯ ವಸ್ತುಗಳಿಂದ ಮತ್ತು ಆಕೆಯ ಜಾರತ್ವದ ಅಶುದ್ಧ ವಸ್ತುಗಳಿಂದ ತುಂಬಿದ್ದ ಒಂದು ಚಿನ್ನದ ಪಾತ್ರೆಯಿತ್ತು. ಮತ್ತು ಅವಳ ಹಣೆಯ ಮೇಲೆ ಒಂದು ಹೆಸರು, ಒಂದು ರಹಸ್ಯ ಬರೆಯಲ್ಪಟ್ಟಿತ್ತು: ‘ಮಹಾ ಬಾಬೆಲ್, ಭೂಮಿಯಲ್ಲಿರುವ ಜಾರಸ್ತ್ರೀಯರ ಮತ್ತು ಅಸಹ್ಯವಾದ ವಸ್ತುಗಳ ತಾಯಿ.’ ಮತ್ತು ಆ ಸ್ತ್ರೀಯು ಪವಿತ್ರಜನರ ರಕ್ತದಿಂದ ಮತ್ತು ಯೇಸುವಿನ ಸಾಕ್ಷಿಗಳ ರಕ್ತದಿಂದ ಮತ್ತಳಾಗಿರುವದನ್ನು ನಾನು ಕಂಡೆನು.”—ಪ್ರಕಟನೆ 17:4-6ಎ, NW.
23. ಮಹಾ ಬಾಬೆಲಿನ ಪೂರ್ಣ ಹೆಸರು ಏನು, ಮತ್ತು ಅದರ ವೈಶಿಷ್ಟ್ಯವೇನು?
23 ಪ್ರಾಚೀನ ರೋಮಿನಲ್ಲಿ ರೂಢಿಯಲ್ಲಿದ್ದಂತೆ, ಈ ಸೂಳೆಯು ತನ್ನ ಹಣೆಯ ಮೇಲಿದ್ದ ಹೆಸರಿನಿಂದ ಗುರುತಿಸಲ್ಪಡುತ್ತಾಳೆ.c ಅದು ಒಂದು ಉದ್ದ ಹೆಸರು. “ಮಹಾ ಬಾಬೆಲ್, ಭೂಮಿಯಲ್ಲಿರುವ ಜಾರಸ್ತ್ರೀಯರ ಮತ್ತು ಅಸಹ್ಯವಾದ ವಸ್ತುಗಳ ತಾಯಿ.” ಆ ಹೆಸರು “ರಹಸ್ಯ” ವಾಗಿದ್ದು, ಅಡಗಿಸಿಟ್ಟ ಅರ್ಥವಿರುವ ಒಂದು ಸಂಗತಿಯಾಗಿದೆ. ಆದರೆ ದೇವರ ಕ್ಲುಪ್ತ ಸಮಯದಲ್ಲಿ ರಹಸ್ಯವು ವಿವರಿಸಲ್ಪಡಲಿದೆ. ವಾಸ್ತವದಲ್ಲಿ, ಈ ವರ್ಣನಾತ್ಮಕ ಹೆಸರಿನ ಪೂರ್ಣ ಮಹತ್ವವನ್ನು ಇಂದಿನ ಯೆಹೋವನ ಸೇವಕರು ಗ್ರಹಿಸುವಂತೆ ಯೋಹಾನನಿಗೆ ಸಾಕಷ್ಟು ಸಮಾಚಾರವನ್ನು ದೇವದೂತನು ಕೊಟ್ಟಿದ್ದಾನೆ. ನಾವು ಮಹಾ ಬಾಬೆಲನ್ನು ಎಲ್ಲಾ ಸುಳ್ಳು ಧರ್ಮವೆಂದು ತಿಳಿದಿದ್ದೇವೆ. ಅವಳು “ಜಾರಸ್ತ್ರೀಯರ ತಾಯಿ” ಯಾಕಂದರೆ ಕ್ರೈಸ್ತಪ್ರಪಂಚದಲ್ಲಿನ ಅನೇಕ ಪಂಗಡಗಳನ್ನು ಸೇರಿಸಿ ಲೋಕದಲ್ಲಿನ ಪ್ರತಿಯೊಂದು ಸುಳ್ಳು ಧರ್ಮಗಳು ಅವಳ ಪುತ್ರಿಯರಂತೆ ಇದ್ದು, ಆತ್ಮಿಕ ವೇಶ್ಯಾವೃತ್ತಿಯನ್ನು ನಡಿಸುವುದರಲ್ಲಿ ಅವಳನ್ನು ಅನುಸರಿಸುತ್ತಿದ್ದಾರೆ. ಅವಳು “ಅಸಹ್ಯವಾದ ಕಾರ್ಯಗಳಿಗೂ” ತಾಯಿಯಾಗಿದ್ದಾಳೆ, ಏಕೆಂದರೆ ಅವಳು ವಿಗ್ರಹಾರಾಧನೆ, ಭೂತಾರಾಧನೆ, ಕಣಿಹೇಳುವುದು, ನಕ್ಷತ್ರ ವಿದ್ಯೆ, ಹಸ್ತ ಸಾಮುದ್ರಿಕ ವಿದ್ಯೆ, ಮಾನವ ಬಲಿಗಳು, ದೇವಾಲಯ ಸೂಳೆತನ, ಸುಳ್ಳು ದೇವರ ಘನತೆಯಲ್ಲಿ ಕುಡಿಕತನ ಮತ್ತು ಇತರ ಅಶ್ಲೀಲ ಆಚಾರಗಳೆಂಬ ಜಿಗುಪ್ಸೆಯನ್ನುಂಟುಮಾಡುವ ಸಂತತಿಗೆ ಜನ್ಮಕೊಟ್ಟಿದ್ದಾಳೆ.
24. ಮಹಾ ಬಾಬೆಲ್ “ಕೆನ್ನೀಲಿ ಮತ್ತು ಕಡುಗೆಂಪಿನ” ವಸ್ತ್ರಾಲಂಕೃತಳು ಮತ್ತು “ಚಿನ್ನ, ರತ್ನ ಮತ್ತು ಮುತ್ತುಗಳಿಂದ ಭೂಷಿತಳಾಗಿ” ಕಾಣಲ್ಪಟ್ಟದ್ದು ಯಾಕೆ ಯುಕ್ತವಾಗಿದೆ?
24 ಮಹಾ ಬಾಬೆಲ್, ರಾಜಪದವಿಯ ಬಣ್ಣಗಳಾದ “ಕೆನ್ನೀಲಿ ಮತ್ತು ಕಡುಗೆಂಪಿನ ವಸ್ತ್ರಾಲಂಕೃತಳು” ಆಗಿದ್ದಳು, ಮತ್ತು “ಚಿನ್ನ ಮತ್ತು ರತ್ನ ಮತ್ತು ಮುತ್ತುಗಳಿಂದ ಭೂಷಿತಳಾಗಿದ್ದಳು.” ಎಷ್ಟೊಂದು ತಕ್ಕದಾಗಿದೆ! ಈ ಲೋಕದ ಧರ್ಮಗಳು ಸಂಗ್ರಹಿಸಿದ ಎಲ್ಲಾ ಭವ್ಯ ಕಟ್ಟಡಗಳ, ಅಪೂರ್ವ ಮೂರ್ತಿಗಳ ಮತ್ತು ವರ್ಣಚಿತ್ರಗಳ, ಅಮೂಲ್ಯವಾದ ಪ್ರತಿಮೆಗಳ ಮತ್ತು ಇತರ ಧಾರ್ಮಿಕ ಸಾಧನ ಸಾಮಗ್ರಿಗಳ ಹಾಗೂ ಆಸ್ತಿ ಮತ್ತು ನಗದು ಹಣದ ಬೃಹತ್ ಮೊತ್ತಗಳ ಕುರಿತು ಪ್ರತಿಬಿಂಬಿಸಿರಿ. ವ್ಯಾಟಿಕನ್ನಲ್ಲಿ ಆಗಿರಲಿ, ಅಮೆರಿಕದಲ್ಲಿ ಕೇಂದ್ರಿತವಾಗಿರುವ ಸೌವಾರ್ತಿಕ ಟೀವೀ ಸಾಮ್ರಾಜ್ಯದಲ್ಲಿ ಅಥವಾ ಪೌರಸ್ತ್ಯದ ಸುಂದರವಾದ ಗುಡಿಗಳಲ್ಲಿ ಮತ್ತು ದೇವಾಲಯಗಳಲ್ಲಿ ಆಗಿರಲಿ, ಮಹಾ ಬಾಬೆಲ್ ನಂಬಲಾಗದಷ್ಟು ಸಂಪತ್ತನ್ನು ಜಮಾಯಿಸಿದೆ ಮತ್ತು ಕೆಲವು ಸಲ ಕಳೆದುಕೊಂಡಿದೆ.
25. (ಎ) “ಅಸಹ್ಯ ವಸ್ತುಗಳಿಂದ ತುಂಬಿದ್ದ ಒಂದು ಚಿನ್ನದ ಪಾತ್ರೆ” ಏನನ್ನು ಸೂಚಿಸುತ್ತದೆ? (ಬಿ) ಸಾಂಕೇತಿಕ ಜಾರಸ್ತ್ರೀಯು ಯಾವ ಅರ್ಥದಲ್ಲಿ ಕುಡಿದು ಮತ್ತಳಾಗುತ್ತಾಳೆ?
25 ವೇಶ್ಯೆಯ ಕೈಯಲ್ಲಿರುವುದನ್ನು ಈಗ ನೋಡಿರಿ. ಅದರ ನೋಟಕ್ಕೆ ಯೋಹಾನನು ಮೇಲುಸಿರು ಎಳೆದಿರಬೇಕು—“ಅಸಹ್ಯ ವಸ್ತುಗಳಿಂದ ಮತ್ತು ಅವಳ ಜಾರತ್ವದ ಅಶುದ್ಧ ವಸ್ತುಗಳಿಂದ ತುಂಬಿದ್ದ” ಒಂದು ಚಿನ್ನದ ಪಾತ್ರೆ! ಇದು “ಅವಳ ಜಾರತ್ವದ ರೋಷದ ದ್ರಾಕ್ಷಾಮದ್ಯವನ್ನು” ತುಂಬಿರುವ ಪಾತ್ರೆಯಾಗಿದ್ದು, ಅದರಿಂದ ಅವಳು ಎಲ್ಲಾ ಜನಾಂಗದವರನ್ನು ಕುಡಿಸಿ, ಮತ್ತೇರುವಂತೆ ಮಾಡಿದ್ದಾಳೆ. (ಪ್ರಕಟನೆ 14:8; 17:2) ಅದು ಹೊರಭಾಗದಲ್ಲಿ ಸಂಪದ್ಭರಿತವಾಗಿ ತೋರುತ್ತದೆ, ಆದರೆ ಅದರೊಳಗೆ ಇರುವುದು ಅಸಹ್ಯವೂ, ಅಶುದ್ಧವೂ ಆಗಿದೆ. (ಮತ್ತಾಯ 23:25, 26 ಹೋಲಿಸಿರಿ.) ಜನಾಂಗಗಳನ್ನು ಮರುಳುಗೊಳಿಸಿ ಭ್ರಷ್ಟಮಾಡಲು ಮತ್ತು ಅವರನ್ನು ಅವಳ ಪ್ರಭಾವದ ಕೆಳಗೆ ತರಲು ಮಹಾ ಜಾರಸ್ತ್ರೀಯು ಉಪಯೋಗಿಸಿದ ಎಲ್ಲಾ ಕೊಳಕಾದ ಆಚಾರಗಳನ್ನು ಮತ್ತು ಸುಳ್ಳುಗಳನ್ನು ಅದು ಒಳಗೊಂಡಿದೆ. ಯೋಹಾನನು ನೋಡುವ ಇನ್ನೂ ಹೆಚ್ಚು ಜುಗುಪ್ಸೆ ಉಂಟುಮಾಡುವಂಥದ್ದೇನಂದರೆ, ದೇವರ ಸೇವಕರ ರಕ್ತವನ್ನು ಕುಡಿದು ವೇಶ್ಯೆಯು ತಾನೇ ಅಮಲೇರಿದ್ದಾಳೆ! ವಾಸ್ತವದಲ್ಲಿ, “ಪ್ರವಾದಿಗಳ ರಕ್ತವೂ ಪವಿತ್ರ ಜನರ ರಕ್ತವೂ ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವೂ” ಅವಳಲ್ಲಿ ಸಿಕ್ಕಿತು ಎಂದು ನಾವು ಅನಂತರ ಓದುತ್ತೇವೆ. (ಪ್ರಕಟನೆ 18:24) ಎಂತಹ ಅಪಾರ ರಕ್ತಾಪರಾಧ!
26. ಮಹಾ ಬಾಬೆಲಿನ ಮೇಲೆ ಇರುವ ರಕ್ತಾಪರಾಧ ದೋಷಕ್ಕೆ ಯಾವ ಪುರಾವೆ ಇದೆ?
26 ಶತಮಾನಗಳಿಂದಲೂ, ಮಿಥ್ಯಾ ಧರ್ಮದ ಲೋಕ ಸಾಮ್ರಾಜ್ಯವು ರಕ್ತದ ಮಹಾ ಸಾಗರಗಳನ್ನು ಹರಿಸಿದೆ. ಉದಾಹರಣೆಗೆ, ಮಧ್ಯಕಾಲೀನ ಜಪಾನಿನಲ್ಲಿ ಕ್ಯೊಟೋದಲ್ಲಿನ ದೇವಾಲಯಗಳು ಯುದ್ಧಕೋಟೆಗಳಾಗಿ ಬದಲಾಯಿಸಲ್ಪಟ್ಟವು, ಮತ್ತು ರಸ್ತೆಗಳು ರಕ್ತದೊಂದಿಗೆ ಕೆಂಪಾಗಿ ಹರಿಯುವ ವರೆಗೆ “ಬುದ್ಧನ ಪವಿತ್ರ ನಾಮವನ್ನು” ಹೇಳುತ್ತಾ ಯೋಧ ಸಂನ್ಯಾಸಿಗಳು ಒಬ್ಬರೊಡನೊಬ್ಬರು ಹೋರಾಡಿದರು. ಈ 20 ನೆಯ ಶತಮಾನದಲ್ಲಿ ಕ್ರೈಸ್ತಪ್ರಪಂಚದ ವೈದಿಕರು ಅವರವರ ದೇಶಗಳ ಸೈನ್ಯದೊಂದಿಗೆ ನಡೆದಿದ್ದಾರೆ, ಮತ್ತು ಕಡಿಮೆ ಪಕ್ಷ ಹತ್ತು ಕೋಟಿ ಜೀವ ನಷ್ಟದೊಂದಿಗೆ ಒಬ್ಬರನ್ನೊಬ್ಬರು ಇವರು ಸಂಹರಿಸಿದ್ದಾರೆ. ಅಕ್ಟೋಬರ 1987 ರಲ್ಲಿ, ಅಮೆರಿಕದ ಮಾಜಿ ಅಧ್ಯಕ್ಷ ನಿಕ್ಸನ್ ಹೇಳಿದ್ದು: “ಇಪ್ಪತ್ತನೆಯ ಶತಮಾನವು ಇತಿಹಾಸದಲ್ಲೇ ಅತ್ಯಂತ ರಕ್ತಮಯದ್ದಾಗಿದೆ. ಶತಮಾನವು ಪ್ರಾರಂಭಿಸುವ ಮೊದಲು ಹೋರಾಡಲ್ಪಟ್ಟ ಎಲ್ಲಾ ಯುದ್ಧಗಳಿಗಿಂತಲೂ ಹೆಚ್ಚು ಜನರು ಈ ಶತಮಾನದ ಯುದ್ಧಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ.” ಇದೆಲ್ಲಾದರ ಅವರ ಭಾಗಕ್ಕಾಗಿ, ಲೋಕದ ಧರ್ಮಗಳನ್ನು ದೇವರು ಪ್ರತಿಕೂಲವಾಗಿ ನ್ಯಾಯ ತೀರಿಸುವನು. ಯೆಹೋವನು “ನಿರ್ದೋಷ ರಕ್ತವನ್ನು ಸುರಿಸುವ ಕೈ” ಯನ್ನು ಅಸಹ್ಯಿಸುತ್ತಾನೆ. (ಜ್ಞಾನೋಕ್ತಿ 6:16, 17) ಈ ಮುಂಚೆ, ಯೋಹಾನನು ಯಜ್ಞವೇದಿಯಿಂದ ಒಂದು ಕೂಗನ್ನು ಕೇಳಿದನು: “ಒಡೆಯನೇ, ಪರಿಶುದ್ಧನೂ ಸತ್ಯವಂತನೂ ಆಗಿರುವಾತನೇ, ಭೂನಿವಾಸಿಗಳು ನಮ್ಮನ್ನು ಕೊಂದದ್ದಕ್ಕಾಗಿ ನೀನು ಎಷ್ಟು ಕಾಲದ ವರೆಗೂ ನ್ಯಾಯವಿಚಾರಿಸದೆಯೂ ಪ್ರತಿದಂಡನೆ ಮಾಡದೆಯೂ ಇರುವಿ?” (ಪ್ರಕಟನೆ 6:10) ಆ ಪ್ರಶ್ನೆಗೆ ಉತ್ತರವನ್ನೀಯುವ ಸಮಯ ಬಂದಾಗ, ಭೂಮಿಯಲ್ಲಿರುವ ಜಾರಸ್ತ್ರೀಯರಿಗೂ, ಅಸಹ್ಯವಾದ ಕಾರ್ಯಗಳಿಗೂ ತಾಯಿ ಆಗಿರುವ ಮಹಾ ಬಾಬೆಲ್ ಅದರಲ್ಲಿ ಆಳವಾಗಿ ಒಳಗೂಡಿರುವಳು.
[ಅಧ್ಯಯನ ಪ್ರಶ್ನೆಗಳು]
a ಧರ್ಮಭ್ರಷ್ಟ ಕ್ರೈಸ್ತಪ್ರಪಂಚದ ಅನೇಕ ಬೋಧನೆಗಳ, ವೃತಾಚರಣೆಗಳ, ಮತ್ತು ಆಚಾರಗಳ ಅಕ್ರೈಸ್ತ ಮೂಲವನ್ನು ಸೂಚಿಸುತ್ತಾ 19 ನೆಯ ಶತಮಾನದ ರೋಮನ್ ಕ್ಯಾತೊಲಿಕ್ ಕಾರ್ಡಿನಲ್ ಜಾನ್ ಹೆನ್ರಿ ನ್ಯೂ ಮ್ಯನ್, ಎಸ್ಸೇ ಆನ್ ದ ಡೆವಲಪ್ಮೆಂಟ್ ಆಫ್ ಕ್ರಿಶ್ಚಿಯನ್ ಡಾಕ್ಟ್ರಿನ್ ಎಂಬ ತನ್ನ ಪುಸ್ತಕದಲ್ಲಿ ಬರೆದದ್ದು: “ದೇವಾಲಯಗಳ ಉಪಯೋಗ ಮತ್ತು ನಿರ್ದಿಷ್ಟ ಸಂತರಿಗೆ ಅವುಗಳು ಸಮರ್ಪಿಸಲ್ಪಟ್ಟಿರುವುದು, ಮತ್ತು ಮರಗಳ ಕೊಂಬೆಗಳಿಂದ ಕೆಲವು ಸಂದರ್ಭಗಳಲ್ಲಿ ಅಲಂಕರಿಸುವುದು; ಧೂಪ, ದೀಪಗಳು ಮತ್ತು ಮೊಂಬತ್ತಿಗಳು; ಅಸೌಖ್ಯದಿಂದ ಗುಣಮುಖರಾಗಲು ಸಮರ್ಪಿಸಲ್ಪಡುವ ಹರಕೆಗಳು; ಪವಿತ್ರೋದಕ; ಅನಾಥಾಲಯಗಳು; ಪವಿತ್ರ ದಿನಗಳು ಮತ್ತು ಋತುಕಾಲಗಳು, ಕ್ಯಾಲೆಂಡರುಗಳ ಉಪಯೋಗ, ಮೆರವಣಿಗೆಗಳು, ಗದ್ದೆಗಳ ಆಶೀರ್ವಾದಗಳು; ಪೌರೋಹಿತ್ಯದ ಉಡುಪುಗಳು, ಧರ್ಮದೀಕ್ಷೆ, ಮದುವೆಯಲ್ಲಿ ಉಂಗುರ; ಪೂರ್ವಕ್ಕೆ ಮುಖಮಾಡುವುದು, ಅನಂತರದ ದಿನಗಳಲ್ಲಿ ಮೂರ್ತಿಗಳು, ಪ್ರಾಯಶಃ ಪುರೋಹಿತ ಮಂತ್ರಪಠಣ; ಮತ್ತು ಕಿರೀಏ ಎಲೀಸಾನ್ [“ಕರ್ತನೇ ಕರುಣೆದೋರು” ಹಾಡು], ಇವೆಲ್ಲವೂ ವಿಧರ್ಮಿ ಮೂಲದ್ದಾಗಿವೆ, ಮತ್ತು ಚರ್ಚುಗಳೊಳಗೆ ಅವುಗಳ ದತ್ತುಸ್ವೀಕಾರದಿಂದ ಪವಿತ್ರೀಕರಿಸಲ್ಪಟ್ಟಿವೆ.”
b ಇಂಥ ವಿಗ್ರಹಾರಾಧನೆಯನ್ನು ಪವಿತ್ರೀಕರಿಸುವ ಬದಲು, “ಸರ್ವಶಕ್ತ ಯೆಹೋವನು” ಕ್ರೈಸ್ತರನ್ನು ಎಚ್ಚರಿಸುವುದು: “ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ, . . . ಅಶುದ್ಧವಾದ ಯಾವದನ್ನೂ ಮುಟ್ಟದಿರಿ.”—2 ಕೊರಿಂಥ 6:14-18.
c ವಿಲ್ಯಂ ಎಲ್ ಶೈರರ್ರ ಐತಿಹಾಸಿಕ ಕೃತಿ ದ ರೈಸ್ ಆ್ಯಂಡ್ ಫಾಲ್ ಆಫ್ ದ ಥರ್ಡ್ ರೈಖ್ ತಿಳಿಸುತ್ತದೇನಂದರೆ ವಾನ್ ಪಾಪನ್ “ಜರ್ಮನಿಯಲ್ಲಿ ಹಿಟ್ಲರನ ಅಧಿಕಾರಕ್ಕೆ ಬರುವಿಕೆಗೆ ಬೇರೆ ಯಾವ ವ್ಯಕ್ತಿಗಿಂತಲೂ ಹೆಚ್ಚು ಜವಾಬ್ದಾರನಾಗಿದ್ದಾನೆ.” ಮಾಜಿ ಜರ್ಮನ್ ಚಾನ್ಸಲರ್ ವಾನ್ ಶ್ಲೈಕರ್ 1933ರ ಜನವರಿಯಲ್ಲಿ ವಾನ್ ಪಾಪನ್ನ ಕುರಿತು ಹೇಳಿದ್ದು: “ಯಾರ ಎದುರಲ್ಲಿ ಇಸ್ಕರಿಯೋತ ಯೂದನು ಸಂತನಾಗಿ ಕಾಣುವನೋ ಅಂತಹ ಮಹಾ ಸ್ವಾಮಿದ್ರೋಹಿಯಾಗಿ ಅವನು ಪರಿಣಮಿಸಿದನು.”
ಮೇ 14, 1929 ರಂದು ಮೊಂಡ್ರಗೋನ್ನ ಕಾಲೇಜನ್ನು ಸಂಬೋಧಿಸುವಾಗ, ಆತ್ಮಗಳ ಒಳಿತಿಗಾಗಿ ಅದು ಆವಶ್ಯಕವಾಗಿದ್ದರೆ, ತಾನು ಸ್ವತಃ ಪಿಶಾಚನೊಂದಿಗೆ ಸಂಧಾನ ಮಾಡುವೆನು ಎಂದು ಪೋಪ್ ಪೈಅಸ್ XI ಹೇಳಿದನು.
ರೋಮನ್ ಗ್ರಂಥಕರ್ತ ಸೆನಿಕನು ಅಪಮಾರ್ಗಿಯಾಗಿದ್ದ ಒಬ್ಬ ಪುರೋಹಿತೆಗೆ ಹೇಳಿದ ಮಾತುಗಳನ್ನು (ಸ್ವೀಟ್ನಿಂದ ಉಲ್ಲೇಖಿಸಲ್ಪಟ್ಟಂತೆ) ಹೋಲಿಸಿರಿ: “ಹುಡುಗಿಯಾದ ನೀನು, ಅಪಖ್ಯಾತಿಯ ಮನೆಯಲ್ಲಿ ನಿಂತಿ . . . ನಿನ್ನ ಹೆಸರು ನಿನ್ನ ಹಣೆಯಿಂದ ನೇತಾಡಿತು; ನಿನ್ನ ಮಾನಭಂಗಕ್ಕೆ ಹಣವನ್ನು ನೀನು ಸ್ವೀಕರಿಸಿದಿ.”—ಕಾನ್ಟ್ರೊವ್. i, 2.
[ಪುಟ 348 ರಲ್ಲಿರುವ ಚೌಕ]
ಚರ್ಚಿಲ್ ‘ವೇಶ್ಯಾವೃತ್ತಿ’ ಯನ್ನು ಬಯಲುಗೊಳಿಸುತ್ತಾರೆ
ತಮ್ಮ ಪುಸ್ತಕವಾದ ದ ಗ್ಯಾದರಿಂಗ್ ಸ್ಟಾರ್ಮ್ (1948) ನಲ್ಲಿ ವಿನ್ಸ್ಟನ್ ಚರ್ಚಿಲ್ ವರದಿಸುತ್ತಾರೇನಂದರೆ ಹಿಟ್ಲರನು ಫ್ರಾನ್ಜ್ ವಾನ್ ಪಾಪನ್ರನ್ನು ವಿಯೆನ್ನಾಗೆ ಜರ್ಮನ್ ಚಾನ್ಸಲರರನ್ನಾಗಿ ನೇಮಿಸಿದ್ದು ಯಾಕಂದರೆ “ಆಸ್ಟ್ರಿಯನ್ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿತ್ವಗಳ ಮೇಲೆ ಜಯಹೊಂದಲು ಯಾ ಒಳಸಂಚಿನಿಂದ ಹಸ್ತಗತ ಮಾಡಲಿಕ್ಕಾಗಿಯೂ.” ವಾನ್ ಪಾಪನ್ರ ಕುರಿತು ವಿಯೆನ್ನಾದಲ್ಲಿ ಅಮೆರಿಕದ ಮಂತ್ರಿಯವರು ಹೇಳಿದ ಮಾತನ್ನು ಚರ್ಚಿಲರು ಉದ್ಗರಿಸುತ್ತಾರೆ: “ದಿಟ್ಟ ಮತ್ತು ಅತಿ ಸಿಡುಕಿನ ವಿಧಾನದಲ್ಲಿ . . . ಪಾಪನ್ ನನಗೆ ಹೀಗೆ ಹೇಳುವುದನ್ನು ಮುಂದುವರಿಸಿದನು . . . . ಕ್ಯಾತೊಲಿಕ್ ಸಜ್ಜನನೋಪಾದಿ ಕಾರ್ಡಿನಲ್ ಇನಿಟ್ಸ್ರ್ನಂತಹ ಆಸ್ಟ್ರಿಯರೊಂದಿಗೆ ಪ್ರಭಾವವನ್ನು ಗಳಿಸಲಿಕ್ಕಾಗಿ ತನ್ನ ಕೀರ್ತಿಯನ್ನು ಉಪಯೋಗಿಸಲು ತಾನು ಉದ್ದೇಶಿಸುತ್ತೇನೆ.”
ಆಸ್ಟ್ರಿಯವು ಶರಣಾಗತಿಯ ಷರತ್ತುಗಳನ್ನು ಒಪ್ಪಿದ ಮತ್ತು ಹಿಟ್ಲರನ ಲಗ್ಗೆ ದಳದವರು ವಿಯೆನ್ನಾಗೆ ವಿಶೇಷ ಕವಾಯತಿನಿಂದ ಒಳನಡೆದ ಅನಂತರ, ಎಲ್ಲಾ ಆಸ್ಟ್ರಿಯನ್ ಚರ್ಚುಗಳು ಸ್ವಸ್ತಿಕ ಧ್ವಜವನ್ನು ಹಾರಿಸುವಂತೆ, ತಮ್ಮ ಘಂಟೆಗಳನ್ನು ಬಾರಿಸುವಂತೆ, ಮತ್ತು ಅವನ ಜನ್ಮದಿನದ ಗೌರವದಲ್ಲಿ ಆಡಲ್ಫ್ ಹಿಟ್ಲರ್ನಿಗಾಗಿ ಬೇಡುವಂತೆ ಕ್ಯಾತೊಲಿಕ್ ಕಾರ್ಡಿನಲ್ ಇನಿಟ್ಸ್ರ್ ಅಪ್ಪಣೆ ಮಾಡಿದನು.
[ಪುಟ 349 ರಲ್ಲಿರುವ ಚೌಕ]
ರೈಖ್ಗಾಗಿ ‘ಯುದ್ಧ ಪ್ರಾರ್ಥನೆ’
ಈ ಶಿರೋನಾಮದ ಕೆಳಗೆ 1941 ದಶಂಬರ, 7ರ ನ್ಯೂ ಯಾರ್ಕ್ ಟೈಮ್ಸ್ನ ಮೊದಲ ಮುದ್ರಣದಲ್ಲಿ ಈ ಕೆಳಗಿನ ಲೇಖನವು ಕಾಣಿಸಿಕೊಂಡಿತು:
“ಫುಲ್ಡದ ಕ್ಯಾತೊಲಿಕ್ ಬಿಷಪರು ಆಶೀರ್ವಾದ ಮತ್ತು ವಿಜಯವನ್ನು ಕೋರುತ್ತಾರೆ . . . ಫುಲ್ಡದಲ್ಲಿ ಕೂಡಿಬಂದ ಜರ್ಮನ್ ಕ್ಯಾತೊಲಿಕ್ ಬಿಷಪರ ಪರಿಷತ್ತು, ಎಲ್ಲಾ ದಿವ್ಯ ಸೇವೆಗಳ ಆರಂಭದಲ್ಲಿ ಮತ್ತು ಅಂತ್ಯದಲ್ಲಿ ಓದಬೇಕಾದ ಒಂದು ವಿಶೇಷ ‘ಯುದ್ಧ ಪ್ರಾರ್ಥನೆ’ಯ ಪ್ರಸ್ತಾಪವನ್ನು ಶಿಫಾರಸ್ಸು ಮಾಡಿದೆ. ಜರ್ಮನ್ ಶಸ್ತ್ರಗಳನ್ನು ವಿಜಯದೊಂದಿಗೆ ಆಶೀರ್ವದಿಸುವಂತೆ ಮತ್ತು ಎಲ್ಲಾ ಸೈನಿಕರ ಜೀವಗಳಿಗೆ ಮತ್ತು ಆರೋಗ್ಯಕ್ಕೆ ಸುರಕ್ಷೆಯನ್ನು ಒದಗಿಸುವಂತೆ ದೈವಾನುಗ್ರಹಕ್ಕಾಗಿ ಪ್ರಾರ್ಥನೆಯು ವಿಜ್ಞಾಪಿಸುತ್ತದೆ. ಕಡಿಮೆ ಪಕ್ಷ ತಿಂಗಳಿಗೊಮ್ಮೆಯಾದರೂ ‘ನೆಲದ ಮೇಲಿರುವ, ಸಮುದ್ರದಲ್ಲಿರುವ ಮತ್ತು ಆಕಾಶದಲ್ಲಿರುವ’ ಜರ್ಮನ್ ಸೈನಿಕರಿಗೆ ಒಂದು ವಿಶೇಷ ಭಾನುವಾರದ ಪ್ರಸಂಗವನ್ನು ಮಾಡುವಂತೆ ಮತ್ತು ಅವರನ್ನು ನೆನಪಿಸುವಂತೆ ಕ್ಯಾತೊಲಿಕ್ ವೈದಿಕರಿಗೆ ಬಿಷಪರು ಹೆಚ್ಚಿನ ಅಪ್ಪಣೆಯನ್ನು ನೀಡಿದರು.”
ಈ ಲೇಖನವು ವಾರ್ತಾಪತ್ರದ ಅನಂತರದ ಮುದ್ರಣಗಳಲ್ಲಿ ಹಿಂದೆಗೆದುಕೊಳ್ಳಲಾಯಿತು. ಇಸವಿ 1941ರ ದಶಂಬರ 7, ನಾಜಿ ಜರ್ಮನಿಯ ಮಿತ್ರರಾಷ್ಟ್ರವಾದ ಜಪಾನ್ ಪರ್ಲ್ ಬಂದರಿನಲ್ಲಿ ಅಮೆರಿಕದ ನೌಕಾಸೇನೆಯನ್ನು ಧಾಳಿಮಾಡಿದ ದಿನವಾಗಿತ್ತು.
[ಪುಟ 355 ರಲ್ಲಿರುವ ಚೌಕ]
“ದೇವದೂಷಣೆಯ ಹೆಸರುಗಳು”
ಮೊದಲನೆಯ ಲೋಕ ಯುದ್ಧದ ಅನಂತರ ಎರಡು ಕೊಂಬುಗಳ ಕಾಡು ಮೃಗವು ಜನಾಂಗ ಸಂಘವನ್ನು ಪ್ರವರ್ಧಿಸಿದಾಗ, ಅದರ ಅನೇಕ ಧಾರ್ಮಿಕ ಪ್ರಿಯಕರರು ಕೂಡಲೇ ಈ ಚಳುವಳಿಗೆ ಒಂದು ಧಾರ್ಮಿಕ ಮನ್ನಣೆಯನ್ನು ನೀಡಲು ಅನ್ವೇಷಿಸಿದರು. ಇದರ ಫಲಿತಾಂಶವಾಗಿ, ಹೊಸ ಶಾಂತಿ ಸಂಘವು “ದೇವದೂಷಣೆಯ ಹೆಸರುಗಳಿಂದ ತುಂಬಿತು.”
“[ಜನಾಂಗ] ಸಂಘದ ಹಿಂದೆ ಕ್ರೈಸ್ತತ್ವವು ಸುಚಿತ್ತವನ್ನು, ಪ್ರೇರಕ ಶಕ್ತಿಯನ್ನು ಒದಗಿಸಬಲ್ಲದು, ಮತ್ತು ರದ್ದಿನ ಕಾಗದವಾಗುವುದರ ಬದಲು ಒಪ್ಪಂದವನ್ನು ದೇವರ ರಾಜ್ಯದ ಒಂದು ಸಾಧನವಾಗಿ ಪರಿವರ್ತಿಸಬಹುದು.”—ದ ಕ್ರಿಶ್ಚಿಯನ್ ಸೆಂಟ್ಯುರಿ, ಯು. ಎಸ್. ಎ., ಜೂನ್ 19, 1919, ಪುಟ 15.
ಜನಾಂಗ ಸಂಘದ ಕಲ್ಪನೆಯು, ಸುಚಿತ್ತದ ಲೋಕ ಕ್ರಮದೋಪಾದಿ ದೇವರ ರಾಜ್ಯದ ಕಲ್ಪನೆಯ ಅಂತಾರಾಷ್ಟ್ರೀಯ ಸಂಬಂಧಗಳ ವಿಸ್ತಾರವಾಗಿದೆ. . . . ‘ನಿನ್ನ ರಾಜ್ಯವು ಬರಲಿ’ ಎಂದವರು ಹೇಳುವಾಗ, ಅದಕ್ಕಾಗಿಯೇ ಎಲ್ಲಾ ಕ್ರೈಸ್ತರು ಪಾರ್ಥಿಸುತ್ತಾರೆ.”—ದ ಕ್ರಿಶ್ಚಿಯನ್ ಸೆಂಟ್ಯುರಿ, ಯು. ಎಸ್. ಎ., ಸಪ್ಟಂಬರ 25, 1919, ಪುಟ 7.
“ಜನಾಂಗ ಸಂಘದ ಬಂಧಕವು ಕ್ರಿಸ್ತನ ರಕ್ತವಾಗಿದೆ.”—ಡಾ. ಫ್ರ್ಯಾಂಕ್ ಕ್ರೇನ್, ಪ್ರಾಟೆಸ್ಟಂಟ್ ಮಿನಿಸ್ಟರ್, ಯು. ಎಸ್. ಎ.,
“[ಕಾಂಗ್ರಿಗೇಶನಲ್ ಚರ್ಚ್ಸ್ನ] [ನ್ಯಾಶನಲ್] ಕೌನ್ಸಿಲ್ [ಜನಾಂಗ ಸಂಘದ] ಕರಾರನ್ನು—ಇದರ ಮೂಲಕ ಯೇಸು ಕ್ರಿಸ್ತನ ಆತ್ಮವು ಜನಾಂಗಗಳ ವ್ಯವಹಾರದಲ್ಲಿ ವ್ಯಾವಹಾರಿಕ ಅನ್ವಯವನ್ನು ವಿಸ್ತಾರವಾಗಿ ಕಂಡುಕೊಳ್ಳಬಹುದಾದ—ಈಗ ದೊರೆಯುವ ಏಕೈಕ ರಾಜಕೀಯ ಸಾಧನವಾಗಿ, ಅದನ್ನು ಬೆಂಬಲಿಸುತ್ತದೆ.”—ದ ಕಾಂಗ್ರಿಗೇಶನಲಿಸ್ಟ್ ಆ್ಯಂಡ್ ಆಡ್ವಾನ್ಸ್, ಯು. ಎಸ್. ಎ., ನವಂಬರ 6, 1919, ಪುಟ 642.
“ಎಲ್ಲಾ ಮೆತೊಡಿಸ್ಟರು ತಂದೆಯಾದ ದೇವರು ಮತ್ತು ದೇವರ ಐಹಿಕ ಮಕ್ಕಳ ಕಲ್ಪನೆಯಲ್ಲಿ ವ್ಯಕ್ತಪಡಿಸಿರುವಂತೆ, [ಜನಾಂಗ ಸಂಘದ] ಆದರ್ಶ ಧ್ಯೇಯಗಳನ್ನು ಎತ್ತಿಹಿಡಿಯಲು ಮತ್ತು ಅಭಿವೃದ್ಧಿಪಡಿಸಲು ಕಾನ್ಫರೆನ್ಸ್ ಕರೆಗೊಡುತ್ತದೆ.”—ದ ವೆಸಿಯ್ಲನ್ ಮೆತೊಡಿಸ್ಟ್ ಚರ್ಚ್, ಬ್ರಿಟನ್.
“ಈ ಸಂಧಾನದ ಹಾರೈಕೆಗಳನ್ನು, ಸಾಧ್ಯತೆಗಳನ್ನು ಮತ್ತು ನಿರ್ಧಾರಗಳನ್ನು ನಾವು ಪರಿಗಣಿಸುವಾಗ, ಯೇಸು ಕ್ರಿಸ್ತನ ಬೋಧನೆಗಳ ತಿರುಳು ಅದರಲ್ಲಿ ಸೇರಿರುವುದನ್ನು ನಾವು ಕಾಣುತ್ತೇವೆ: ದೇವರ ರಾಜ್ಯ ಮತ್ತು ಅವನ ನೀತಿ . . . ಅದಕ್ಕಿಂತ ಇದೇನೂ ಕಡಿಮೆಯಿಲ್ಲ.”—ದಶಂಬರ 3, 1922 ರಲ್ಲಿ ಜಿನೀವಾದಲ್ಲಿ ಜನಾಂಗ ಸಂಘದ ಎಸೆಂಬ್ಲಿಯ ಉದ್ಘಾಟನೆಯಲ್ಲಿ ಕಾಂಟರ್ಬರಿಯ ಆರ್ಚ್ಬಿಷಪ್ರಿಂದ ಪ್ರಸಂಗ.
“ಈ ದೇಶದಲ್ಲಿ ಜನಾಂಗಗಳ ಸಂಘದ ಒಕ್ಕೂಟಕ್ಕೆ ಬೇರೆ ಯಾವುದೇ ಮಾನವ ಹಿತಸಾಧನೆಯ ಮಿಷನೆರಿ ಸಂಸ್ಥೆಗಿರುವಷ್ಟೇ ಹಕ್ಕು ಇರುತ್ತದೆ, ಯಾಕಂದರೆ ಜನಾಂಗಗಳ ನಡುವೆ ಶಾಂತಿಯ ಪ್ರಭುವಾಗಿ ಕ್ರಿಸ್ತನ ಆಳಿಕ್ವೆಯ ಅತ್ಯುತ್ತಮ ಪರಿಣಾಮಕಾರಿ ಕಾರ್ಯನಿಯೋಗಿಯಾಗಿ ಸದ್ಯದಲ್ಲಿ ಅದಿರುತ್ತದೆ.”—ಡಾ. ಗಾರ್ವೀ, ಕಾಂಗ್ರಿಗೇಶನಲಿಸ್ಟ್ ಮಿನಿಸ್ಟರ್, ಬ್ರಿಟನ್.
[Map on page 236]
(For fully formatted text, see publication)
ಲೋಕದಾದ್ಯಂತ ನಂಬಲ್ಪಡುವ ಸುಳ್ಳು ಬೋಧನೆಗಳ ಮೂಲವು ಬಾಬೆಲಿನಲ್ಲಿದೆ
ಬಾಬೆಲ್
ತ್ರಯೈಕ್ಯಗಳು ಯಾ ದೇವರುಗಳ ತ್ರಿತ್ವಗಳು
ಮರಣಾನಂತರ ಮಾನವಾತ್ಮವು ಉಳಿಯುತ್ತದೆ
ಪ್ರೇತವಾದ—“ಮೃತ” ರೊಂದಿಗೆ ಮಾತಾಡುವುದು
ಆರಾಧನೆಯಲ್ಲಿ ವಿಗ್ರಹಗಳ ಉಪಯೋಗ
ದೆವ್ವಗಳನ್ನು ಪ್ರಸನ್ನಗೊಳಿಸಲು ವಶೀಕರಣದ ಬಳಕೆ
ಶಕ್ತಿಶಾಲಿ ಪೌರೋಹಿತ್ಯದಿಂದ ಆಳಿಕೆ
[ಪುಟ 340 ರಲ್ಲಿರುವ ಚಿತ್ರಗಳು]
ಪ್ರಾಚೀನ ಬಾಬೆಲ್ ಬಹು ನೀರುಗಳ ಮೇಲೆ ಕುಳಿತಿತ್ತು
ಇಂದು ಮಹಾ ಜಾರಸ್ತ್ರೀಯು ಕೂಡ “ಬಹು ನೀರುಗಳ” ಮೇಲೆ ಕುಳಿತುಕೊಂಡಿದ್ದಾಳೆ
[Picture on page 241]
ಮಹಾ ಬಾಬೆಲ್ ಒಂದು ಅಪಾಯಕರ ಕಾಡು ಮೃಗದ ಮೇಲೆ ಕುಳಿತುಕೊಂಡಿದ್ದಾಳೆ
[Picture on page 242]
ಧಾರ್ಮಿಕ ಜಾರ ಸ್ತ್ರೀಯು ಭೂ ರಾಜರೊಂದಿಗೆ ಜಾರತ್ವವನ್ನು ಗೈದಿದ್ದಾಳೆ
[ಪುಟ 356 ರಲ್ಲಿರುವ ಚಿತ್ರಗಳು]
ಆ ಸ್ತ್ರೀಯು “ಪವಿತ್ರ ಜನರ ರಕ್ತದಿಂದ ಮತ್ತಳು”