ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ: ಕೋರಹನ ಗಂಡುಮಕ್ಕಳ+ ಮಧುರ ಗೀತೆ.
3 ನೀನು ನಿನ್ನ ರೋಷವನ್ನ ತಡೆಹಿಡಿದೆ,
ನೀನು ನಿನ್ನ ಕಡುಕೋಪವನ್ನ ಬಿಟ್ಟುಬಿಟ್ಟೆ.+
5 ನೀನು ನಮ್ಮ ಮೇಲೆ ಶಾಶ್ವತವಾಗಿ ಕೋಪ ಮಾಡ್ಕೊಳ್ತೀಯಾ?+
ತಲೆಮಾರು ತಲೆಮಾರುಗಳ ತನಕ ನಿನ್ನ ಕಡುಕೋಪವನ್ನ ಹಾಗೆ ಇಟ್ಕೊತ್ತೀಯಾ?
6 ನಿನ್ನ ಜನ ನಿನ್ನಲ್ಲಿ ಖುಷಿಪಡೋ ಹಾಗೆ
ನೀನು ನಮ್ಮಲ್ಲಿ ಮತ್ತೆ ಜೀವ ತುಂಬಲ್ವಾ?+
7 ಯೆಹೋವನೇ, ನಿನ್ನ ಶಾಶ್ವತ ಪ್ರೀತಿಯನ್ನ ನಮಗೆ ತೋರಿಸು,+
ನಮ್ಮನ್ನು ರಕ್ಷಿಸು.
8 ಸತ್ಯ ದೇವರಾದ ಯೆಹೋವ ಹೇಳೋದನ್ನ ನಾನು ಕೇಳಿಸ್ಕೊಳ್ತೀನಿ,
ಯಾಕಂದ್ರೆ ಆತನು ತನ್ನ ಜನ್ರ ಜೊತೆ, ತನ್ನ ನಿಷ್ಠಾವಂತರ ಜೊತೆ ಶಾಂತಿಯಿಂದ ಮಾತಾಡ್ತಾನೆ,+
ಆದ್ರೆ ಅವರು ಮತ್ತೆ ತಮ್ಮ ಮೇಲೆನೇ ಅತಿಯಾದ ಆತ್ಮವಿಶ್ವಾಸ ತೋರಿಸಬಾರದು.+
9 ತನಗೆ ಭಯಪಡುವವರನ್ನ ರಕ್ಷಿಸೋಕೆ ಆತನು ಸಿದ್ಧನಾಗಿ ಇರ್ತಾನೆ.+
ಅದ್ರಿಂದಾಗಿ ನಮ್ಮ ದೇಶದಲ್ಲಿ ದೇವರ ಮಹಿಮೆ ತುಂಬಿರುತ್ತೆ.
10 ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆ ಒಂದನ್ನೊಂದು ಭೇಟಿ ಮಾಡುತ್ತೆ,
ನೀತಿ ಮತ್ತು ಶಾಂತಿ ಒಂದಕ್ಕೊಂದು ಮುತ್ತು ಕೊಡುತ್ತೆ.+
11 ನಂಬಿಗಸ್ತಿಕೆ ಭೂಮಿಯಿಂದ ಮೊಳಕೆ ಒಡೆಯುತ್ತೆ,
ದೇವರ ನೀತಿ ಆಕಾಶದಿಂದ ಹೊಳೆಯುತ್ತೆ.+
13 ನೀತಿ ಆತನ ಮುಂದೆ ನಡೆದು,+
ಆತನ ಹೆಜ್ಜೆಗಳಿಗೆ ದಾರಿ ಮಾಡಿಕೊಡುತ್ತೆ.