ಒಂದನೇ ಪೂರ್ವಕಾಲವೃತ್ತಾಂತ
24 ಆರೋನನ ವಂಶದವರ ದಳಗಳು: ಆರೋನನ ಗಂಡು ಮಕ್ಕಳು ನಾದಾಬ್, ಅಬೀಹೂ,+ ಎಲ್ಲಾಜಾರ್, ಈತಾಮಾರ್.+ 2 ನಾದಾಬ್, ಅಬೀಹೂ ತಮ್ಮ ತಂದೆಗಿಂತ ಮೊದ್ಲೇ ಸತ್ತುಹೋದ್ರು.+ ಅವರಿಗೆ ಗಂಡು ಮಕ್ಕಳು ಇರಲಿಲ್ಲ. ಆದ್ರೆ ಎಲ್ಲಾಜಾರ್,+ ಈತಾಮಾರ್ ಪುರೋಹಿತರಾಗಿ ಸೇವೆ ಮಾಡೋದನ್ನ ಶುರು ಮಾಡಿದ್ರು. 3 ಎಲ್ಲಾಜಾರನ ಮಗ ಚಾದೋಕ+ ಮತ್ತು ಈತಾಮಾರನ ಮಗ ಅಹೀಮೆಲೆಕನ ಜೊತೆ ಸೇರಿ ದಾವೀದ ಆರೋನನ ವಂಶದವ್ರನ್ನ ಸೇವೆಗಾಗಿ ಬೇರೆಬೇರೆ ದಳಗಳಾಗಿ ಮಾಡಿದ. 4 ಈತಾಮಾರನ ಗಂಡು ಮಕ್ಕಳಿಗಿಂತ ಎಲ್ಲಾಜಾರನ ಗಂಡು ಮಕ್ಕಳಲ್ಲಿ ಹೆಚ್ಚು ಮುಖ್ಯಸ್ಥರಿದ್ರು. ಹಾಗಾಗಿ ಅವ್ರನ್ನ ಹೀಗೆ ವಿಂಗಡಿಸಿದ್ರು. ಎಲ್ಲಾಜಾರನ ಗಂಡು ಮಕ್ಕಳಲ್ಲಿ 16 ಜನ್ರು ತಮ್ಮ ಕುಲಕ್ಕೆ ಮುಖ್ಯಸ್ಥರಾಗಿದ್ರು. ಈತಾಮಾರನ ಗಂಡು ಮಕ್ಕಳಲ್ಲಿ 8 ಜನ್ರು ತಮ್ಮ ಕುಲಕ್ಕೆ ಮುಖ್ಯಸ್ಥರಾಗಿದ್ರು.
5 ಇದರ ಜೊತೆ ಅವರು ಚೀಟುಹಾಕಿ+ ಎರಡೂ ಗುಂಪುಗಳನ್ನ ಬೇರೆಬೇರೆ ದಳಗಳಾಗಿ ಮಾಡಿದ್ರು. ಯಾಕಂದ್ರೆ ಆರಾಧನಾ ಸ್ಥಳದ ಮುಖ್ಯಸ್ಥರು, ಸತ್ಯ ದೇವರ ಸೇವೆಮಾಡ್ತಿದ್ದ ಮುಖ್ಯಸ್ಥರು ಈತಾಮಾರನ ಗಂಡು ಮಕ್ಕಳಲ್ಲೂ ಇದ್ರು, ಎಲ್ಲಾಜಾರನ ಗಂಡು ಮಕ್ಕಳಲ್ಲೂ ಇದ್ರು. 6 ನೆತನೇಲನ ಮಗ ಶೆಮಾಯ ಲೇವಿಯರ ಕಾರ್ಯದರ್ಶಿ ಆಗಿದ್ದ. ಅವನು ರಾಜ, ಅಧಿಕಾರಿಗಳು, ಪುರೋಹಿತನಾದ ಚಾದೋಕ,+ ಎಬ್ಯಾತಾರನ+ ಮಗ ಅಹೀಮೆಲೆಕ,+ ಪುರೋಹಿತರು, ಕುಲದ ಮುಖ್ಯಸ್ಥರು ಇವರೆಲ್ರ ಮುಂದೆ ಅವ್ರ ಹೆಸ್ರುಗಳನ್ನ ದಾಖಲಿಸಿದ. ಚೀಟಿ ಹಾಕಿ ಎಲ್ಲಾಜಾರನ ಗಂಡು ಮಕ್ಕಳಿಂದ ಒಂದು ಮನೆತನವನ್ನ, ಈತಾಮಾರನ ಗಂಡು ಮಕ್ಕಳಿಂದ ಒಂದು ಮನೆತನವನ್ನ ಆರಿಸ್ಕೊಂಡ್ರು.
7 ಮೊದಲ ಚೀಟು ಯೆಹೋಯಾರೀಬನಿಗೆ, ಎರಡನೆದು ಯೆದಾಯನಿಗೆ, 8 ಮೂರನೆದು ಹಾರಿಮನಿಗೆ, ನಾಲ್ಕನೆದು ಸೆಯೋರೀಮನಿಗೆ, 9 ಐದನೆದು ಮಲ್ಕೀಯನಿಗೆ, ಆರನೆದು ಮಿಯ್ಯಾಮೀನನಿಗೆ, 10 ಏಳನೆದು ಹಕ್ಕೋಚನಿಗೆ, ಎಂಟನೆದು ಅಬೀಯನಿಗೆ,+ 11 ಒಂಬತ್ತನೆದು ಯೆಷೂವನಿಗೆ, ಹತ್ತನೆದು ಶೆಕನ್ಯನಿಗೆ, 12 ಹನ್ನೊಂದನೆದು ಎಲ್ಯಾಷೀಬನಿಗೆ, ಹನ್ನೆರಡನೆದು ಯಾಕೀಮನಿಗೆ, 13 ಹದಿಮೂರನೆದು ಹುಪ್ಪನಿಗೆ, ಹದಿನಾಲ್ಕನೆದು ಎಫೆಬಾಬನಿಗೆ, 14 ಹದಿನೈದನೆದು ಬಿಲ್ಗನಿಗೆ, ಹದಿನಾರನೆದು ಇಮ್ಮೇರನಿಗೆ, 15 ಹದಿನೇಳನೆದು ಹೇಜೀರನಿಗೆ, ಹದಿನೆಂಟನೆದು ಹಪ್ಪಿಚ್ಚೇಚನಿಗೆ, 16 ಹತ್ತೊಂಬತ್ತನೆದು ಪೆತಹ್ಯನಿಗೆ, ಇಪ್ಪತ್ತನೆದು ಯೆಹೆಜ್ಕೇಲನಿಗೆ, 17 ಇಪ್ಪತ್ತೊಂದನೆದು ಯಾಕೀನನಿಗೆ, ಇಪ್ಪತ್ತೆರಡನೆದು ಗಾಮೂಲನಿಗೆ, 18 ಇಪ್ಪತ್ತಮೂರನೆದು ದೆಲಾಯನಿಗೆ, ಇಪ್ಪತ್ತನಾಲ್ಕನೆದು ಮಾಜ್ಯನಿಗೆ ಬಿತ್ತು.
19 ಈ ಲೇವಿಯರು ತಮಗೆ ಕೊಟ್ಟ ಕ್ರಮದಲ್ಲೇ ಬಂದು ಯೆಹೋವನ ಆಲಯದಲ್ಲಿ ಸೇವೆ ಮಾಡ್ತಿದ್ರು.+ ಅವರ ಪೂರ್ವಜನಾದ ಆರೋನ ಮಾಡಿದ್ದ ಏರ್ಪಾಡಿನ ಪ್ರಕಾರ ಅಂದ್ರೆ ಇಸ್ರಾಯೇಲ್ ದೇವರಾದ ಯೆಹೋವ ಆರೋನನಿಗೆ ಹೇಳಿದ ಹಾಗೇ ಅವರು ಸೇವೆ ಮಾಡಿದ್ರು.
20 ಉಳಿದ ಲೇವಿಯರು: ಅಮ್ರಾಮನ+ ಗಂಡು ಮಕ್ಕಳಲ್ಲಿ ಶೂಬಾಯೇಲ,+ ಶೂಬಾಯೇಲನ ಗಂಡು ಮಕ್ಕಳಲ್ಲಿ ಯೆಹ್ದೆಯಾಹ, 21 ರೆಹಬ್ಯನ+ ಗಂಡು ಮಕ್ಕಳಲ್ಲಿ ಮುಖ್ಯಸ್ಥನಾಗಿದ್ದ ಇಷ್ಷೀಯ,22 ಇಚ್ಹಾರ್ಯರಲ್ಲಿ ಶೆಲೋಮೋತ,+ ಶೆಲೋಮೋತನ ಗಂಡು ಮಕ್ಕಳಲ್ಲಿ ಯಹತ್, 23 ಹೆಬ್ರೋನಿನ ಗಂಡು ಮಕ್ಕಳಲ್ಲಿ ಮುಖ್ಯಸ್ಥನಾಗಿದ್ದ ಯೆರೀಯ,+ ಎರಡನೆಯವ ಅಮರ್ಯ, ಮೂರನೆಯವ ಯಹಜೀಯೇಲ, ನಾಲ್ಕನೆಯವ ಯೆಕಮ್ಮಾಮ್, 24 ಉಜ್ಜೀಯೇಲನ ಗಂಡು ಮಕ್ಕಳಲ್ಲಿ ಮೀಕ, ಮೀಕನ ಗಂಡು ಮಕ್ಕಳಲ್ಲಿ ಶಾಮೀರ್. 25 ಮೀಕನ ಸಹೋದರನಾದ ಇಷ್ಷೀಯ, ಇಷ್ಷೀಯನ ಗಂಡು ಮಕ್ಕಳಲ್ಲಿ ಜೆಕರ್ಯ.
26 ಮೆರಾರೀಯ+ ಗಂಡು ಮಕ್ಕಳು ಮಹ್ಲಿ, ಮೂಷಿ. ಯಾಜ್ಯನ ಗಂಡು ಮಕ್ಕಳಲ್ಲಿ ಬೆನೊ. 27 ಮೆರಾರೀಯ ಗಂಡು ಮಕ್ಕಳು ಯಾಜ್ಯ, ಬೆನೊ, ಶೋಹಮ್, ಜಕ್ಕೂರ್, ಇಬ್ರಿ. 28 ಮಹ್ಲಿಯ ಗಂಡು ಮಕ್ಕಳಲ್ಲಿ ಎಲ್ಲಾಜಾರ್, ಎಲ್ಲಾಜಾರನಿಗೆ ಗಂಡು ಮಕ್ಕಳು ಇರಲಿಲ್ಲ.+ 29 ಕೀಷನ ಗಂಡು ಮಕ್ಕಳಲ್ಲಿ ಯೆರಹ್ಮೇಲ್, 30 ಮೂಷಿಯ ಗಂಡು ಮಕ್ಕಳು ಮಹ್ಲಿ, ಏದೆರ್, ಯೆರೀಮೋತ್.
ಇವರು ತಮ್ಮತಮ್ಮ ತಂದೆ ಮನೆತನದ ಪ್ರಕಾರ ಲೇವಿಯ ವಂಶದವರಾಗಿದ್ರು. 31 ಅವರು ಸಹ ತಮ್ಮ ಸಹೋದರರಾದ ಆರೋನನ ಗಂಡು ಮಕ್ಕಳಂತೆ ರಾಜ ದಾವೀದ ಮುಂದೆ, ಚಾದೋಕ ಮುಂದೆ, ಅಹೀಮೆಲೆಕ ಮುಂದೆ, ಪುರೋಹಿತರ ಹಾಗೂ ಲೇವಿಯರ ಕುಲಗಳ ಮುಖ್ಯಸ್ಥರ ಮುಂದೆ ಚೀಟುಹಾಕಿದ್ರು.+ ಅವ್ರವ್ರ ತಂದೆಗಳ ಮನೆತನಗಳು ದೊಡ್ಡದಾಗಿರಲಿ ಚಿಕ್ಕದಾಗಿರಲಿ ಎಲ್ಲ ಮನೆತನಗಳನ್ನ ಸಮವಾಗಿ ನೋಡಿದ್ರು.