ಯೆಶಾಯ
ಆತನು ಸಂರಕ್ಷಣೆಯನ್ನ ಅದ್ರ ಗೋಡೆಗಳನ್ನಾಗಿ ಮಣ್ಣುದಿಬ್ಬಗಳಾಗಿ ಮಾಡಿದ್ದಾನೆ.+
3 ನಿನ್ನ ಮೇಲೆ ಸಂಪೂರ್ಣವಾಗಿ ಆತುಕೊಳ್ಳುವವರನ್ನ* ನೀನು ಸಂರಕ್ಷಿಸ್ತೀಯ.
5 ಗರ್ವಿಷ್ಠರನ್ನ, ಹೆಮ್ಮೆಯ ಪಟ್ಟಣವನ್ನ ಆತನು ಕೆಳಗಿಳಿಸಿದನು.
ಅದನ್ನ ಕೆಳಕ್ಕೆ ಬೀಳಿಸಿದನು,
ಅದನ್ನ ನೆಲಕ್ಕೆ ಉರುಳಿಸಿದನು,
ಅದನ್ನ ಮಣ್ಣುಪಾಲು ಮಾಡಿದನು.
6 ಅದು ಕಾಲ್ತುಳಿತಕ್ಕೆ ಒಳಗಾಗುತ್ತೆ,
ನೊಂದವರ ಪಾದಗಳು, ದೀನರ ಹೆಜ್ಜೆಗಳು ಅದನ್ನ ತುಳಿಯುತ್ತೆ.”
7 ನೀತಿವಂತರ ದಾರಿ ಪ್ರಾಮಾಣಿಕವಾಗಿರುತ್ತೆ.*
ನೀನು ಪ್ರಾಮಾಣಿಕ ಆಗಿರೋದ್ರಿಂದ,
ನೀತಿವಂತನ ದಾರಿಯನ್ನ ಸಮತಟ್ಟಾಗಿ* ಮಾಡ್ತೀಯ.
8 ಯೆಹೋವನೇ, ನಿನ್ನ ತೀರ್ಪಿನ ದಾರಿಯನ್ನ ನಾವು ಅನುಸರಿಸುವಾಗ
ನಾವು ನಿನ್ನಲ್ಲೇ ನಿರೀಕ್ಷೆ ಇಟ್ಟಿದ್ದೀವಿ.
ನಮ್ಮ ಪ್ರಾಣ ನಿನಗಾಗಿ ಮತ್ತು ನಿನ್ನ ಹೆಸ್ರಿಗಾಗಿ ಹಂಬಲಿಸುತ್ತೆ.
ನೀನು ಭೂಮಿಗಾಗಿ ತೀರ್ಪನ್ನ ಮಾಡುವಾಗ,
ದೇಶದ ನಿವಾಸಿಗಳು ನೀತಿ ಬಗ್ಗೆ ಕಲಿತಾರೆ.+
11 ಯೆಹೋವನೇ, ನೀನು ನಿನ್ನ ಕೈ ಎತ್ತಿದ್ರೂ ಅದನ್ನ ಅವರು ನೋಡಲ್ಲ.+
ನಿನ್ನ ಜನ್ರ ಕಡೆ ನಿನಗಿರೋ ಆಸಕ್ತಿಯನ್ನ ನೋಡಿ ಅವ್ರಿಗೆ ಅವಮಾನವಾಗುತ್ತೆ.
ಹೌದು, ಈ ನಿನ್ನ ಬೆಂಕಿಯೇ ನಿನ್ನ ವಿರೋಧಿಗಳನ್ನ ನುಂಗಿಬಿಡುತ್ತೆ.
13 ಯೆಹೋವನೇ, ನಮ್ಮ ದೇವರೇ, ನೀನಲ್ಲದೆ ನಮ್ಮ ಮೇಲೆ ಬೇರೆ ಅಧಿಕಾರಿಗಳೂ ಆಳ್ವಿಕೆಮಾಡಿದ್ರು,+
ಆದ್ರೆ ನಾವು ನಿನ್ನ ಹೆಸ್ರನ್ನ ಮಾತ್ರ ಹೊಗಳ್ತೀವಿ.+
14 ಅವರು ತೀರಿಹೋಗಿದ್ದಾರೆ, ಅವ್ರಿಗೆ ಮತ್ತೆ ಜೀವ ಬರಲ್ಲ.
ಅವ್ರಿಗೆ ಏನೂ ಮಾಡೋಕೆ ಶಕ್ತಿಯಿಲ್ಲ, ಅವರು ಎದ್ದೇಳಲ್ಲ.+
ಯಾಕಂದ್ರೆ ಅವರನ್ನ ನಿರ್ನಾಮ ಮಾಡೋಕೆ, ಅವ್ರ ಹೆಸ್ರನ್ನ ಪೂರ್ತಿಯಾಗಿ ಅಳಿಸಿಹಾಕೋಕೆ
ನೀನು ನಿನ್ನ ದೃಷ್ಟಿಯನ್ನ ಅವ್ರ ಕಡೆಗೆ ತಿರುಗಿಸಿದೆ.
15 ಯೆಹೋವನೇ, ನೀನು ದೇಶವನ್ನ ವಿಶಾಲಗೊಳಿಸಿದೆ,
ಹೌದು, ದೇಶವನ್ನ ವಿಸ್ತರಿಸಿದೆ.
ನೀನು ನಿನ್ನನ್ನೇ ಮಹಿಮೆಪಡಿಸ್ಕೊಂಡೆ.+
ದೇಶದ ಎಲ್ಲ ಮೇರೆಗಳನ್ನ ವಿಸ್ತರಿಸಿದೆ.+
16 ಯೆಹೋವನೇ, ಕಷ್ಟಸಂಕಟದಲ್ಲಿ ಅವರು ನಿನ್ನ ಕಡೆ ತಿರುಗಿಕೊಂಡ್ರು,
ನೀನು ಶಿಸ್ತುಕೊಟ್ಟಾಗ ಅವರು ಪಿಸುಗುಟ್ಟೋ ಧ್ವನಿಯಲ್ಲಿ ನಿನಗೆ ಪ್ರಾರ್ಥಿಸ್ತಾ ತಮ್ಮ ನೋವನ್ನ ತೋಡ್ಕೊಂಡ್ರು.+
17 ಯೆಹೋವನೇ, ನಿನ್ನಿಂದಾಗಿ ನಮ್ಮ ಪರಿಸ್ಥಿತಿ ಹೇಗಿದೆ ಅಂದ್ರೆ
ಮಗುವನ್ನ ಹೆರೋ ಗರ್ಭಿಣಿ,
ಹೆರಿಗೆ ನೋವು ಬಂದಾಗ ವೇದನೆಯಿಂದ ಕೂಗಿಕೊಳ್ಳೋ ತರ ಇದೆ.
18 ನಾವು ಗರ್ಭಧರಿಸಿದ್ದೀವಿ, ನಮಗೆ ಹೆರಿಗೆ ನೋವು ಬಂತು,
ಆದ್ರೆ ನಾವು ಗಾಳಿಯನ್ನ ಹೆತ್ವಿ.
ನಮಗೆ ದೇಶವನ್ನ ರಕ್ಷಿಸೋಕಾಗಲಿಲ್ಲ,
ದೇಶದಲ್ಲಿ ವಾಸಿಸೋಕೆ ಯಾರೂ ಹುಟ್ಟಲಿಲ್ಲ.
19 ದೇವರು ಹೀಗೆ ಹೇಳ್ತಿದ್ದಾನೆ “ಸತ್ತವರು ಬದುಕಿ ಬರ್ತಾರೆ,
ನನ್ನ ಜನ್ರ ಶವಗಳಿಗೆ ಜೀವ ಬರುತ್ತೆ,+
ಮಣ್ಣಲ್ಲಿ ನೆಲೆಸಿರುವವರೇ,+
ಎದ್ದೇಳಿ, ಸಂತೋಷದಿಂದ ಜೈಕಾರ ಹಾಕಿ!
ಯಾಕಂದ್ರೆ ನಿಮ್ಮ ಇಬ್ಬನಿ ಬೆಳಿಗ್ಗೆಯ ಇಬ್ಬನಿ ತರ ಇದೆ,*
ತನ್ನಲ್ಲಿರೋ ತೀರಿಹೋದ ಜನ ಮತ್ತೆ ಜೀವ ಪಡೆಯೋ ಹಾಗೆ ಭೂಮಿ ಅವ್ರನ್ನ ವಾಪಸ್ ಕೊಡುತ್ತೆ.*
ನನ್ನ ಕೋಪ ತೀರೋ ತನಕ ಅಲ್ಲೇ ಇರಿ.+
21 ಯಾಕಂದ್ರೆ, ದೇಶದ ನಿವಾಸಿಗಳು ಮಾಡಿರೋ ಅಪರಾಧಗಳ ಬಗ್ಗೆ ಅವ್ರಿಂದ ಲೆಕ್ಕ ಕೇಳೋಕೆ
ಯೆಹೋವನಾದ ನಾನು ನನ್ನ ಸ್ಥಳದಿಂದ ಬರ್ತಿದ್ದೀನಿ!
ಹತರಾಗಿರುವವರನ್ನ ದೇಶ ಬಚ್ಚಿಡದೆ
ತನ್ನಲ್ಲಿ ನಡೆದಿರೋ ರಕ್ತಾಪರಾಧವನ್ನ ಬಯಲುಪಡಿಸುತ್ತೆ.”