ಯೆಶಾಯ
13 ಬಾಬೆಲಿನ ವಿರುದ್ಧ ಬಂದ ಘೋಷಣೆಯನ್ನ+ ಆಮೋಚನ ಮಗ ಯೆಶಾಯ+ ದರ್ಶನದಲ್ಲಿ ಕಂಡ. ಅದು ಹೀಗಿತ್ತು
2 “ಬೋಳು ಬೆಟ್ಟದ ಮೇಲೆ ಧ್ವಜ* ನಿಲ್ಲಿಸಿ.+
ಕೈಬೀಸಿ ಅವ್ರನ್ನ ಕರಿರಿ,
ಪ್ರಮುಖರ ಪ್ರವೇಶ ಬಾಗಿಲಿಂದ ಅವ್ರು ಒಳಗೆ ಬರಲಿ.
3 ನಾನು ಯಾರನ್ನ ನೇಮಿಸಿದ್ದೆನೋ ಅವ್ರಿಗೆ ಆಜ್ಞೆ ಕೊಟ್ಟಿದ್ದೀನಿ.+
ನನ್ನ ಕೋಪವನ್ನ ವ್ಯಕ್ತಪಡಿಸೋಕೆ ನನ್ನ ವೀರ ಸೈನಿಕರನ್ನ ಒಟ್ಟುಗೂಡಿಸಿದ್ದೀನಿ,
ಅವರು ಹೆಮ್ಮೆಯಿಂದ ಉಲ್ಲಾಸಿಸ್ತಾರೆ.
4 ಕೇಳಿ! ಬೆಟ್ಟಗಳಿಂದ ಜನಜಂಗುಳಿಯ ಶಬ್ದ ಕೇಳಿಸ್ತಿದೆ,
ಲೆಕ್ಕ ಇಲ್ಲದಷ್ಟು ಜನ ಕೂಡಿಬಂದ ಹಾಗಿದೆ!
ರಾಜ್ಯಗಳ ಒಟ್ಟುಗೂಡುವಿಕೆಯ ಕೋಲಾಹಲ ಕೇಳಿಸ್ತಿದೆ,
ಹೌದು, ಜನಾಂಗಗಳು ಸೇರಿ ಬಂದಿರೋದ್ರಿಂದ ಗದ್ದಲ ಕೇಳಿಸ್ತಿದೆ!+
ಸೈನ್ಯಗಳ ದೇವರಾದ ಯೆಹೋವ ಯುದ್ಧಕ್ಕಾಗಿ ಸೈನ್ಯವನ್ನ ಒಟ್ಟುಗೂಡಿಸ್ತಿದ್ದಾನೆ.+
5 ಯೆಹೋವನ ಜೊತೆ ಆತನ ಕ್ರೋಧದ ಆಯುಧಗಳೂ ಬರ್ತಿವೆ.
6 ಗೋಳಾಡಿ! ಯಾಕಂದ್ರೆ ಯೆಹೋವನ ದಿನ ಹತ್ರ ಇದೆ!
ಆ ದಿನ ಸರ್ವಶಕ್ತ ನಿಮ್ಮ ದೇಶದಲ್ಲಿರೋ ಎಲ್ಲವನ್ನೂ ನಾಶಮಾಡ್ತಾನೆ.+
ಹೆರಿಗೆ ನೋವು ಬಂದಿರೋ ಸ್ತ್ರೀ ತರ,
ಸ್ನಾಯುಸೆಳೆತ ಮತ್ತು ನೋವಿಂದ ಅವರು ಒದ್ದಾಡ್ತಿದ್ದಾರೆ.
ಗಾಬರಿಯಿಂದ ಮುಖಮುಖ ನೋಡ್ಕೊಳ್ತಿದ್ದಾರೆ,
ಅವ್ರ ಮುಖದಲ್ಲಿ ಭಯ ಚಿಂತೆ ಎದ್ದುಕಾಣ್ತಿದೆ.
9 ನೋಡಿ! ಯೆಹೋವನ ದಿನ ಬರ್ತಿದೆ.
ಆ ದಿನ ಕ್ರೋಧದ ಜೊತೆ ಮತ್ತು ಉರಿಯೋ ಕೋಪದ ಜೊತೆ ಬರುತ್ತೆ.
ಆ ದಿನ ಯಾರಿಗೂ ದಯೆದಾಕ್ಷಿಣ್ಯ ತೋರಿಸಲ್ಲ.
ದೇಶಕ್ಕೆ ಎಂಥ ಪರಿಸ್ಥಿತಿ ತರುತ್ತಂದ್ರೆ ಅದನ್ನ ನೋಡುವವರು ಹೆದರಿಹೋಗ್ತಾರೆ.+
ಅದು ದೇಶದಿಂದ ಪಾಪಿಗಳನ್ನ ನಿರ್ನಾಮ ಮಾಡುತ್ತೆ.
10 ಆಕಾಶದ ನಕ್ಷತ್ರಗಳು, ತಾರಾಪುಂಜಗಳು*+
ತಮ್ಮ ಬೆಳಕನ್ನ ಕೊಡಲ್ಲ,
ಸೂರ್ಯ ಉದಯಿಸುವಾಗ ತನ್ನ ಪ್ರಕಾಶ ಬೀರಲ್ಲ,
ಚಂದ್ರ ತನ್ನ ಬೆಳದಿಂಗಳನ್ನ ಸೂಸಲ್ಲ.
11 ಭೂನಿವಾಸಿಗಳು ಮಾಡಿದ ಕೆಟ್ಟ ಕೆಲಸಗಳಿಗೆ ನಾನು ಅವ್ರಿಂದ ಲೆಕ್ಕ ಕೇಳ್ತೀನಿ,+
ಕೆಟ್ಟವರು ಮಾಡಿದ ತಪ್ಪುಗಳಿಗಾಗಿ ಅವ್ರಿಂದ ಲೆಕ್ಕಕೇಳ್ತೀನಿ.
ದುರಹಂಕಾರಿಗಳ ಸೊಕ್ಕನ್ನ ಮುರಿತೀನಿ,
ಕ್ರೂರ ಅಧಿಕಾರಿಗಳ ಅಹಂಕಾರ ಅಡಗಿಸ್ತೀನಿ.+
13 ಹಾಗಾಗಿ ನಾನು, ಸೈನ್ಯಗಳ ದೇವರಾದ ಯೆಹೋವ,
ನನ್ನ ಕ್ರೋಧದ ದಿನದಂದು ಉರಿತಿರೋ ನನ್ನ ಕೋಪದಿಂದ
ಆಕಾಶವನ್ನ ನಡುಗಿಸ್ತೀನಿ,
ಭೂಮಿಯನ್ನ ಅದರ ಸ್ಥಳದಿಂದ ಕದಲಿಸಿಬಿಡ್ತೀನಿ.+
14 ಬೇಟೆಗೆ ಗುರಿಯಾಗಿರೋ ಜಿಂಕೆ ಓಡೋ ತರ, ಕುರುಬನಿಲ್ಲದ ಕುರಿಗಳ ತರ
ಪ್ರತಿಯೊಬ್ರೂ ತಮ್ಮ ಸ್ವಂತ ಜನ್ರ ಹತ್ರ ವಾಪಸ್ ಹೋಗ್ತಾರೆ,
ತಮ್ಮ ಸ್ವಂತ ದೇಶಕ್ಕೆ ಓಡಿಹೋಗ್ತಾರೆ.+
15 ಕೈಗೆ ಯಾರೇ ಸಿಕ್ಕಿದ್ರೂ ಅವ್ರನ್ನ ಇರಿಯಲಾಗುತ್ತೆ,
ಸಿಕ್ಕಿಬೀಳುವವರನ್ನೆಲ್ಲ ಕತ್ತಿಯಿಂದ ಸಂಹರಿಸಲಾಗುತ್ತೆ.+
16 ಅವ್ರ ಕಣ್ಮುಂದೆನೇ ಅವ್ರ ಮಕ್ಕಳನ್ನ ಕ್ರೂರವಾಗಿ ಕೊಲ್ಲಲಾಗುತ್ತೆ.+
ಅವ್ರ ಮನೆಗಳನ್ನ ಕೊಳ್ಳೆ ಹೊಡೆಯಲಾಗುತ್ತೆ,
ಅವ್ರ ಹೆಂಡತಿಯರನ್ನ ಅತ್ಯಾಚಾರ ಮಾಡಲಾಗುತ್ತೆ.
18 ಅವ್ರ ಬಿಲ್ಲುಗಳು ಯುವಕರನ್ನ ನಾಶ ಮಾಡ್ತವೆ,+
ಅವ್ರಿಗೆ ಚಿಕ್ಕ ಮಕ್ಕಳ ಮೇಲೆ ದಯೆಯಾಗಲಿ,
ಗರ್ಭಫಲದ ಮೇಲೆ ಕನಿಕರವಾಗಲಿ ಹುಟ್ಟಲ್ಲ.
19 ಕಸ್ದೀಯರ ಶೋಭೆಗೆ* ಮತ್ತು ಹೆಮ್ಮೆಗೆ ಕಾರಣವಾಗಿರೋ,+
ಅತ್ಯಂತ ಮಹಿಮಾನ್ವಿತ ಸಾಮ್ರಾಜ್ಯವಾಗಿರೋ ಬಾಬೆಲ್ ನಗರ+
ದೇವರು ತಳ್ಳಿಬಿಟ್ಟ ಸೊದೋಮ್, ಗೊಮೋರದ ತರ ಆಗುತ್ತೆ.+
ಯಾವ ಅರಬಿಯನೂ ಅಲ್ಲಿ ತನ್ನ ಡೇರೆ ಹಾಕಲ್ಲ,
ಯಾವ ಕುರುಬನೂ ಅಲ್ಲಿ ತನ್ನ ಮಂದೆಯನ್ನ ಮಲಗೋಕೆ ಬಿಡಲ್ಲ.
21 ಅಲ್ಲಿ ಮರುಭೂಮಿಯ ಪ್ರಾಣಿಗಳು ಮಲಗ್ತವೆ,
ಅಲ್ಲಿನ ಮನೆಗಳು ಗೂಬೆಗಳಿಂದ ತುಂಬಿರ್ತವೆ,
ಅಲ್ಲಿ ಉಷ್ಟ್ರಪಕ್ಷಿಗಳು ನೆಲೆಸ್ತವೆ,+
ಅಲ್ಲಿ ಕಾಡಿನ ಆಡುಗಳು* ಕುಣಿದು ಕುಪ್ಪಳಿಸ್ತವೆ.
22 ಊಳಿಡೋ ಪ್ರಾಣಿಗಳು ಅಲ್ಲಿನ ಕೋಟೆಗಳಲ್ಲಿ ಕೂಗ್ತವೆ,
ಗುಳ್ಳೆನರಿಗಳು ಅಲ್ಲಿನ ವೈಭವಯುತ ಅರಮನೆಗಳಲ್ಲಿ ಕೂಗ್ತವೆ.
ಆ ನಗರಕ್ಕೆ ನಾಶನದ ಸಮಯ ಹತ್ರ ಆಗಿದೆ, ಅದಕ್ಕೆ ಹೆಚ್ಚು ಸಮಯ ಇಲ್ಲ.”+