ಯೆಶಾಯ
36 ರಾಜ ಹಿಜ್ಕೀಯನ ಆಳ್ವಿಕೆಯ 14ನೇ ವರ್ಷದಲ್ಲಿ ಅಶ್ಶೂರ್ಯರ+ ರಾಜ ಸನ್ಹೇರೀಬ ಭದ್ರ ಕೋಟೆಗಳಿದ್ದ ಯೆಹೂದದ ಎಲ್ಲ ಪಟ್ಟಣಗಳ ಮೇಲೆ ದಾಳಿ ಮಾಡಿ ಅವುಗಳನ್ನ ವಶ ಮಾಡ್ಕೊಂಡ.+ 2 ಆಗ ಅಶ್ಶೂರ್ಯರ ರಾಜ ಯೆರೂಸಲೇಮಲ್ಲಿದ್ದ ರಾಜ ಹಿಜ್ಕೀಯನ ಹತ್ರ ಲಾಕೀಷಿಂದ+ ರಬ್ಷಾಕೆಯನ್ನ* ಒಂದು ದೊಡ್ಡ ಸೈನ್ಯದ ಜೊತೆ ಕಳಿಸಿದ.+ ಅವರು ಅಗಸರ ಮೈದಾನದ ಕಡೆ ಹೋಗೋ ಹೆದ್ದಾರಿಯಲ್ಲಿ+ ಎತ್ರದಲ್ಲಿದ್ದ ಕೆರೆಯ ಕಾಲುವೆ ಪಕ್ಕದಲ್ಲಿ ನಿಂತ್ಕೊಂಡ್ರು.+ 3 ಆಗ ಅರಮನೆಯನ್ನ ನೋಡ್ಕೊಳ್ತಿದ್ದ ಹಿಲ್ಕೀಯನ+ ಮಗ ಎಲ್ಯಕೀಮ, ಕಾರ್ಯದರ್ಶಿ ಶೆಬ್ನ+ ಮತ್ತು ವರದಿಗಾರ ಆಸಾಫನ ಮಗ ಯೋವ ಅವನನ್ನ ಭೇಟಿಮಾಡೋಕೆ ಹೊರಗೆ ಬಂದ್ರು.
4 ರಬ್ಷಾಕೆ ಅವ್ರಿಗೆ “ನೀವು ಹೋಗಿ ಹಿಜ್ಕೀಯನಿಗೆ ‘ಮಹಾ ಸಾಮ್ರಾಟ ಅಶ್ಶೂರ್ಯರ ರಾಜ ಹೀಗೆ ಹೇಳ್ತಿದ್ದಾನೆ ಅಂತ ತಿಳಿಸಿ “ನೀನು ಇನ್ನೂ ಏನನ್ನ ನಂಬಿ ಕೂತಿದ್ದೀಯಾ?+ 5 ‘ನನಗೆ ಯುದ್ಧಕಲೆ ಗೊತ್ತು, ಯುದ್ಧ ಮಾಡೋಕೆ ಬೇಕಾಗಿರೋ ಬಲ ಇದೆ’ ಅಂತ ನೀನು ಹೇಳೋದೆಲ್ಲ ಬರೀ ಸುಳ್ಳು. ನೀನು ಯಾರನ್ನ ನಂಬಿ ನನ್ನ ವಿರುದ್ಧ ದಂಗೆ ಏಳೋ ಧೈರ್ಯ ಮಾಡಿದ್ದೀಯ?+ 6 ಆ ಈಜಿಪ್ಟನ್ನ ನಂಬಿದ್ದೀಯಾ? ಅದೊಂದು ಜಜ್ಜಿದ ದಂಟು. ಆಸರೆಗಾಗಿ ಯಾರಾದ್ರೂ ಅದ್ರ ಮೇಲೆ ಕೈಯಿಟ್ರೆ ಅದು ಅವ್ರ ಅಂಗೈಗೆ ಚುಚ್ಕೊಳ್ಳುತ್ತೆ. ಈಜಿಪ್ಟಿನ ರಾಜ ಫರೋಹನ ಮೇಲೆ ಭರವಸೆ ಇಡುವವರಿಗೆ ಅದೇ ಗತಿಯಾಗುತ್ತೆ.+ 7 ‘ನಾವು ನಮ್ಮ ದೇವರಾದ ಯೆಹೋವನ ಮೇಲೆ ಭರವಸೆ ಇಟ್ಟಿದ್ದೀವಿ’ ಅಂತ ನೀವು ನಮಗೆ ಹೇಳಬೇಡಿ. ಯಾಕಂದ್ರೆ ನಿಮ್ಮ ರಾಜ ಹಿಜ್ಕೀಯ ಆತನ ಎತ್ತರ ಸ್ಥಳಗಳನ್ನ ಮತ್ತು ಯಜ್ಞವೇದಿಗಳನ್ನ ಕೆಡವಿಹಾಕಿದ್ದಾನೆ.+ ಅದೇ ಸಮ್ಯದಲ್ಲಿ, ಹಿಜ್ಕೀಯ ಯೆಹೂದ್ಯರಿಗೂ ಯೆರೂಸಲೇಮಿನವರಿಗೂ ‘ನೀವು ಈ ಯಜ್ಞವೇದಿಯ ಮುಂದೆ ಬಾಗಿ ನಮಸ್ಕರಿಸಬೇಕು’ ಅಂತಾನೂ ಹೇಳ್ತಿದ್ದಾನೆ.”’+ 8 ಹಾಗಾಗಿ ಹಿಜ್ಕೀಯನೇ, ನನ್ನ ಒಡೆಯ ಅಶ್ಶೂರ್ಯರ ರಾಜನ ಈ ಸವಾಲಿಗೆ ನೀನು ಒಪ್ತೀಯಾ?+ ನಾನು ನಿನಗೆ 2,000 ಕುದುರೆಗಳನ್ನ ಕೊಡ್ತೀನಿ. ಅದ್ರ ಮೇಲೆ ಕೂರಕ್ಕೆ ಕುದುರೆಸವಾರರನ್ನ ಕರ್ಕೊಂಡು ಬರೋಕೆ ನಿನ್ನಿಂದ ಆಗುತ್ತಾ? 9 ಅದನ್ನೇ ಮಾಡೋಕೆ ಆಗದಿರುವಾಗ ನಮ್ಮ ಸೈನ್ಯದ ಜೊತೆ ಹೇಗೆ ಹೋರಾಡ್ತೀಯಾ? ನೀನು ಈಜಿಪ್ಟಿನ ಎಲ್ಲ ರಥಗಳನ್ನ, ಕುದುರೆಗಳನ್ನ ತಗೊಂಡು ಬಂದ್ರೂ ನನ್ನ ಒಡೆಯನ ಅಲ್ಪ ಸೇವಕರಲ್ಲಿ ಒಬ್ಬನಾಗಿರೋ ರಾಜ್ಯಪಾಲನನ್ನ ಸಹ ನಿನ್ನಿಂದ ಸೋಲಿಸೋಕಾಗಲ್ಲ. 10 ಯೆಹೋವನ ಅನುಮತಿಯಿಲ್ಲದೆ ನಾನು ಈ ದೇಶವನ್ನ ನಾಶಮಾಡೋಕೆ ಬಂದಿದ್ದೀನಿ ಅಂತ ಅಂದ್ಕೊಂಡಿದ್ದೀಯಾ? ಸ್ವತಃ ಯೆಹೋವನೇ ನನಗೆ ‘ಈ ದೇಶದ ಮೇಲೆ ಆಕ್ರಮಣ ಮಾಡಿ ಅದನ್ನ ನಾಶಮಾಡಿಬಿಡು’ ಅಂತ ಹೇಳಿಕಳಿಸಿದನು.”
11 ಅದಕ್ಕೆ ಎಲ್ಯಕೀಮ, ಶೆಬ್ನ+ ಮತ್ತು ಯೋವ ರಬ್ಷಾಕೆಗೆ+ “ದಯವಿಟ್ಟು ನಿನ್ನ ಸೇವಕರಾದ ನಮ್ಮ ಜೊತೆ ಅರಾಮ್ಯರ* ಭಾಷೆಯಲ್ಲಿ+ ಮಾತಾಡು. ನಮಗೆ ಆ ಭಾಷೆ ಅರ್ಥವಾಗುತ್ತೆ. ಗೋಡೆ ಮೇಲಿರೋ ಜನ ಕೇಳಿಸ್ಕೊಳ್ಳೋ ತರ ಯೆಹೂದ್ಯರ ಭಾಷೆಯಲ್ಲಿ ಮಾತಾಡಬೇಡ” ಅಂದ್ರು.+ 12 ಆದ್ರೆ ರಬ್ಷಾಕೆ “ನನ್ನ ಒಡೆಯ ನನ್ನನ್ನ ಕೇವಲ ನಿಮ್ಮ ಜೊತೆ ಮತ್ತು ನಿಮ್ಮ ಒಡೆಯನ ಜೊತೆ ಮಾತಾಡೋಕೆ ಕಳಿಸಿಲ್ಲ. ಗೋಡೆ ಮೇಲೆ ಕೂತಿರೋ ಜನ್ರ ಜೊತೆನೂ ಮಾತಾಡೋಕೆ ಕಳಿಸಿದ್ದಾನೆ. ಅವ್ರಿಗೂ ನಿಮಗೂ ಎಂಥ ಗತಿ ಬರುತ್ತಂದ್ರೆ ನೀವು ನಿಮ್ಮ ಸ್ವಂತ ಮಲ ತಿಂದು, ಸ್ವಂತ ಮೂತ್ರ ಕುಡಿತೀರ” ಅಂದ.
13 ಆಮೇಲೆ ರಬ್ಷಾಕೆ ಯೆಹೂದ್ಯರ ಭಾಷೆಯಲ್ಲಿ ಗಟ್ಟಿಯಾಗಿ ಕೂಗ್ತಾ+ “ಮಹಾ ಸಾಮ್ರಾಟನಾದ ಅಶ್ಶೂರ್ಯರ ರಾಜ ಹೇಳೋ ಈ ಸಂದೇಶ ಕೇಳಿ+ 14 ‘ರಾಜ ಹಿಜ್ಕೀಯನಿಂದ ಮೋಸ ಹೋಗಬೇಡಿ. ನಿಮ್ಮನ್ನ ರಕ್ಷಿಸೋಕೆ ಅವನಿಂದ ಆಗಲ್ಲ.+ 15 ಹಿಜ್ಕೀಯ ನಿಮಗೆ “ಯೆಹೋವ ಖಂಡಿತ ನಮ್ಮನ್ನ ರಕ್ಷಿಸ್ತಾನೆ. ಈ ಪಟ್ಟಣವನ್ನ ಅಶ್ಶೂರ್ಯರ ರಾಜನ ಕೈಗೆ ಒಪ್ಪಿಸಲ್ಲ” ಅಂತ ಹೇಳ್ತಾ ಯೆಹೋವನಲ್ಲಿ ಭರವಸೆಯಿಡೋ ತರ ಮಾಡ್ತಿದ್ದಾನೆ. ಆದ್ರೆ ಅವನನ್ನ ನೀವು ನಂಬಬೇಡಿ.+ 16 ಹಿಜ್ಕೀಯನ ಮಾತುಗಳನ್ನ ಕೇಳಬೇಡಿ. ಯಾಕಂದ್ರೆ ಅಶ್ಶೂರ್ಯರ ರಾಜ ಹೀಗಂತಿದ್ದಾನೆ “ನನ್ನ ಜೊತೆ ಶಾಂತಿಸಮಾಧಾನ ಮಾಡ್ಕೊಂಡು, ನನಗೆ ಶರಣಾಗಿ. ಆಗ ನಿಮ್ಮಲ್ಲಿ ಪ್ರತಿಯೊಬ್ಬರು ತಮ್ಮತಮ್ಮ ದ್ರಾಕ್ಷಿತೋಟದ ಮತ್ತು ತಮ್ಮತಮ್ಮ ಅಂಜೂರ ಮರದ ಫಲವನ್ನ ತಿಂತೀರ. ಅಷ್ಟೇ ಅಲ್ಲ ನಿಮ್ಮ ಸ್ವಂತ ಬಾವಿ ನೀರನ್ನ ಕುಡಿತೀರ. 17 ಆಮೇಲೆ ನಾನು ಬಂದು ನಿಮ್ಮನ್ನ ಒಂದು ದೇಶಕ್ಕೆ ಕರ್ಕೊಂಡು ಹೋಗ್ತೀನಿ. ಆ ದೇಶ ನಿಮ್ಮ ದೇಶದ ತರಾನೇ ಇರುತ್ತೆ.+ ಅಲ್ಲಿ ಧಾನ್ಯ, ಹೊಸ ದ್ರಾಕ್ಷಾಮದ್ಯ, ರೊಟ್ಟಿ, ದ್ರಾಕ್ಷಿತೋಟಗಳು ಸಮೃದ್ಧಿಯಾಗಿರುತ್ತೆ. 18 ಹಿಜ್ಕೀಯ ನಿಮಗೆ ‘ಯೆಹೋವ ನಮ್ಮನ್ನ ರಕ್ಷಿಸ್ತಾನೆ’ ಅಂತ ಹೇಳಿ ಮೋಸಮಾಡದ ಹಾಗೆ ನೋಡ್ಕೊಳ್ಳಿ. ಯಾವುದೇ ದೇವರುಗಳಿಗೆ ಅಶ್ಶೂರ್ಯರ ರಾಜನ ಕೈಯಿಂದ ತಮ್ಮ ದೇಶನ ಸಂರಕ್ಷಿಸೋಕೆ ಆಗಿದ್ಯಾ?+ 19 ಹಾಮಾತಿನ ಮತ್ತು ಅರ್ಪಾದಿನ ದೇವರುಗಳು ಎಲ್ಲಿ?+ ಸೆಫರ್ವಯಿಮ್ ಅನ್ನೋ ಪಟ್ಟಣದ ದೇವರುಗಳು ಎಲ್ಲಿ?+ ಸಮಾರ್ಯವನ್ನ ನನ್ನ ಕೈಯಿಂದ ಆ ದೇವರುಗಳು ರಕ್ಷಿಸಿದ್ವಾ?+ 20 ಈ ದೇಶಗಳ ದೇವರುಗಳಲ್ಲಿ ಒಬ್ಬ ದೇವರಿಗಾದ್ರೂ ತನ್ನ ದೇಶವನ್ನ ನನ್ನ ಕೈಯಿಂದ ರಕ್ಷಿಸೋಕಾಯ್ತಾ? ಹಾಗಂದಮೇಲೆ ಯೆಹೋವ ಯೆರೂಸಲೇಮನ್ನ ನನ್ನ ಕೈಯಿಂದ ರಕ್ಷಿಸ್ತಾನಾ?”’” ಅಂದ.+
21 ಇಷ್ಟೆಲ್ಲ ಹೇಳಿದ್ರೂ ಅವರು ಏನೂ ಮಾತಾಡದೆ ಸುಮ್ಮನಿದ್ರು. ಯಾಕಂದ್ರೆ ರಾಜ “ನೀವು ಅವರಿಗೆ ಯಾವ ಉತ್ರ ಕೊಡಬೇಡಿ” ಅಂತ ಹೇಳಿದ್ದ.+ 22 ಇದಾದ ಮೇಲೆ ಅರಮನೆಯನ್ನ ನೋಡ್ಕೊಳ್ತಿದ್ದ ಹಿಲ್ಕೀಯನ ಮಗ ಎಲ್ಯಕೀಮ, ಕಾರ್ಯದರ್ಶಿ ಶೆಬ್ನ+ ಮತ್ತು ವರದಿಗಾರ ಆಸಾಫನ ಮಗ ಯೋವ ತಮ್ಮ ಬಟ್ಟೆಗಳನ್ನ ಹರ್ಕೊಂಡು ಹಿಜ್ಕೀಯನ ಹತ್ರ ಬಂದು ರಬ್ಷಾಕೆಯ ಮಾತುಗಳನ್ನ ಅವನಿಗೆ ತಿಳಿಸಿದ್ರು.