ಜೆಕರ್ಯ
9 ಇದು ದೇವರ ಸಂದೇಶ:
“ಯೆಹೋವ ಹದ್ರಾಕ್ ದೇಶಕ್ಕೆ ಶಿಕ್ಷೆ ವಿಧಿಸಿದ್ದಾನೆ,
ಆ ಸಂದೇಶದ ಮುಖ್ಯ ಗುರಿ ದಮಸ್ಕವಾಗಿತ್ತು.+
ಯಾಕಂದ್ರೆ ಯೆಹೋವನ ಕಣ್ಣುಗಳು ಎಲ್ಲ ಮಾನವರ ಮೇಲೆ,+
ಇಸ್ರಾಯೇಲಿನ ಎಲ್ಲ ಕುಲಗಳ ಮೇಲೆ ಇವೆ.
2 ಅದ್ರ ಹತ್ರ ಇರೋ ಹಾಮಾತಿನ+ ಮೇಲೂ ಶಿಕ್ಷೆ ವಿಧಿಸಲಾಗಿದೆ.
ತೂರ್+ ಮತ್ತು ಸೀದೋನಿನ+ ಮೇಲೂ ಶಿಕ್ಷೆ ವಿಧಿಸಲಾಗಿದೆ. ಯಾಕಂದ್ರೆ ಅವು ತಮಗೆ ತುಂಬ ಬುದ್ಧಿ ಇದೆ ಅಂದ್ಕೊಂಡಿವೆ.+
3 ತೂರ್ ತನಗಾಗೇ ರಕ್ಷಣೆಯ ಮಣ್ಣುದಿಬ್ಬವನ್ನ* ಕಟ್ಕೊಂಡಿದೆ.
ಅದು ಬೆಳ್ಳಿಯನ್ನ ಧೂಳಿನ ತರ ಶೇಖರಿಸಿದೆ
ಬಂಗಾರವನ್ನ ಬೀದಿಯ ಕಸದ ತರ ಗುಡ್ಡೆಹಾಕಿದೆ.+
4 ನೋಡು! ಯೆಹೋವ ಅದ್ರ ಆಸ್ತಿಯನ್ನ ಕಿತ್ಕೊಳ್ತಾನೆ.
5 ಅಷ್ಕೆಲೋನ್ ಅದನ್ನ ನೋಡಿ ಹೆದರಿಹೋಗುತ್ತೆ,
ಗಾಜಾ ಸಂಕಟಪಡುತ್ತೆ,
ಎಕ್ರೋನಿನ ನಿರೀಕ್ಷೆ ನುಚ್ಚುನೂರಾಗೋದ್ರಿಂದ ಅದಕ್ಕೂ ಇದೇ ಸ್ಥಿತಿ ಬರುತ್ತೆ.
ಗಾಜಾದ ರಾಜ ಹೇಳಹೆಸ್ರಿಲ್ಲದ ಹಾಗೆ ನಾಶ ಆಗ್ತಾನೆ,
ಅಷ್ಕೆಲೋನ್ ನಿರ್ಜನವಾಗುತ್ತೆ.+
7 ರಕ್ತಮಯ ವಸ್ತುಗಳನ್ನ ಅವ್ರ ಬಾಯಿಂದ ನಾನು ತೆಗೆದುಹಾಕ್ತೀನಿ,
ಅಸಹ್ಯ ವಸ್ತುಗಳನ್ನ ಅವ್ರ ಹಲ್ಲಿನ ಮಧ್ಯದಿಂದ ತೆಗೆದುಹಾಕ್ತೀನಿ,
ಅವ್ರಲ್ಲಿ ಉಳಿದವರು ನಮ್ಮ ದೇವರಿಗೆ ಸೇರಿದವರಾಗ್ತಾರೆ,
ಅವರು ಯೆಹೂದದಲ್ಲಿ ಶೇಕ್ಗಳ ತರ ಆಗ್ತಾರೆ,+
ಎಕ್ರೋನಿನ ಜನ ಯೆಬೂಸಿಯರ ತರ ಆಗ್ತಾರೆ.+
8 ನಾನು ನನ್ನ ಮನೆ ಹೊರಗೆ ಡೇರೆ ಹಾಕಿ ಅದ್ರ ಕಾವಲು ಕಾಯ್ತೀನಿ,+
ಆಗ ಯಾರೂ ನನ್ನ ಮನೆಗೆ ಬರೋಕಾಗಲಿ, ಅಲ್ಲಿಂದ ಹೋಗೋಕಾಗಲಿ ಆಗಲ್ಲ.
ಆಗ ದಬ್ಬಾಳಿಕೆ ಮಾಡುವವರು ಯಾವತ್ತೂ ಅದ್ರ ಮುಂದೆ ದಾಟಿ ಹೋಗಲ್ಲ.+
ಯಾಕಂದ್ರೆ ಅವ್ರಿಗೆ ಏನಾಯ್ತು ಅಂತ ನಾನು ಕಣ್ಣಾರೆ* ನೋಡಿದ್ದೀನಿ.
9 ಚೀಯೋನಿನ ಮಗಳೇ, ಸಂಭ್ರಮಿಸು.
ಯೆರೂಸಲೇಮಿನ ಮಗಳೇ ಉತ್ಸಾಹದಿಂದ ಜೈಕಾರ ಹಾಕು.
ನೋಡು! ನಿನ್ನ ರಾಜ ನಿನ್ನ ಹತ್ರ ಬರ್ತಿದ್ದಾನೆ.+
10 ನಾನು ಎಫ್ರಾಯೀಮಿಂದ ಯುದ್ಧರಥವನ್ನ,
ಯೆರೂಸಲೇಮಿಂದ ಕುದುರೆಯನ್ನ ತಗೊಳ್ತೀನಿ.
ಯುದ್ಧದ ಬಿಲ್ಲನ್ನ ಕಿತ್ಕೊಳ್ಳಲಾಗುತ್ತೆ.
ಎಲ್ಲ ರಾಷ್ಟ್ರಗಳಿಗೆ ಅವನು ಶಾಂತಿಯನ್ನ ಪ್ರಕಟಿಸ್ತಾನೆ.+
12 ಆಸೆಯಿಂದ ಕಾಯ್ತಿರೋ ಕೈದಿಗಳೇ, ಭದ್ರಕೋಟೆಗೆ ವಾಪಸ್ ಬನ್ನಿ.+
ಇವತ್ತು ನಾನು ನಿನಗೆ ಹೇಳ್ತಿದ್ದೀನಿ,
‘ಸ್ತ್ರೀಯೇ, ನಾನು ನಿನ್ನನ್ನ ಎರಡು ಪಟ್ಟು ಆಶೀರ್ವದಿಸ್ತೀನಿ.+
13 ನಾನು ಯೆಹೂದವನ್ನ ನನ್ನ ಬಿಲ್ಲಿನ ತರ ಬಗ್ಗಿಸ್ತೀನಿ.*
ಆ ಬಿಲ್ಲಿಗೆ ಎಫ್ರಾಯೀಮನ್ನ ಒಂದು ಬಾಣವಾಗಿ ಇಡ್ತೀನಿ,
ಚೀಯೋನೇ, ನಾನು ನಿನ್ನ ಗಂಡು ಮಕ್ಕಳನ್ನ
ಗ್ರೀಸಿನ ಗಂಡು ಮಕ್ಕಳ ವಿರುದ್ಧ ಎಬ್ಬಿಸ್ತೀನಿ,
ನಾನು ನಿನ್ನನ್ನ ವೀರ ಸೈನಿಕನ ಕತ್ತಿ ತರ ಮಾಡ್ತೀನಿ.’
14 ತನ್ನ ಜನ್ರ ಜೊತೆ ಇದ್ದೀನಂತ ಯೆಹೋವ ತೋರಿಸ್ಕೊಡ್ತಾನೆ,
ಆತನ ಬಾಣ ಮಿಂಚಿನ ತರ ತೂರ್ಕೊಂಡು ಹೋಗುತ್ತೆ.
ವಿಶ್ವದ ರಾಜನಾದ ಯೆಹೋವ ಕೊಂಬು ಊದುತ್ತಾನೆ,+
ದಕ್ಷಿಣದ ಬಿರುಗಾಳಿ ತರ ಶತ್ರುಗಳ ಮೇಲೆ ದಾಳಿ ಮಾಡ್ತಾನೆ.
15 ಸೈನ್ಯಗಳ ದೇವರಾದ ಯೆಹೋವ ತನ್ನ ಜನ್ರನ್ನ ರಕ್ಷಿಸ್ತಾನೆ,
ಶತ್ರುಗಳು ಕವಣೆ ಕಲ್ಲುಗಳಿಂದ ದಾಳಿ ಮಾಡಿದ್ರೂ ಅವರು ಶತ್ರುಗಳನ್ನ ಸೋಲಿಸ್ತಾರೆ.+
ಅವರು ದ್ರಾಕ್ಷಾಮದ್ಯದ ಅಮಲಲ್ಲಿ ಇರುವವ್ರ ಹಾಗೆ ಖುಷಿಯಿಂದ ಕೂಗಾಡ್ತಾರೆ,
ಅವರು ಬಟ್ಟಲಿನ ಹಾಗೆ ತುಂಬಿ ಹೋಗ್ತಾರೆ,
ಯಜ್ಞವೇದಿಯ ಮೂಲೆಗಳ ತರ ನೆನೆದು ಹೋಗ್ತಾರೆ.+
16 ಕುರುಬ ತನ್ನ ಮಂದೆಯನ್ನ ಕಾಪಾಡೋ ಹಾಗೆ,
ಆ ದಿನ ಅವ್ರ ದೇವರಾದ ಯೆಹೋವ ಅವ್ರನ್ನ ಕಾಪಾಡ್ತಾನೆ,+
ಯಾಕಂದ್ರೆ ಅವರು ಕಿರೀಟದಲ್ಲಿರೋ ರತ್ನಗಳ ತರ ಆತನ ದೇಶದಲ್ಲಿ ಮಿಂಚ್ತಾರೆ.+
17 ಆಹಾ! ಆತನ ಒಳ್ಳೇತನ ತುಂಬ ದೊಡ್ಡದು,+
ಆತನ ಧಾರಾಳತನ ಸರಿಸಾಟಿ ಇಲ್ಲದ್ದು!
ಧಾನ್ಯ ಯುವಕರಿಗೆ ಬಲ ಕೊಡುತ್ತೆ
ಹೊಸ ದ್ರಾಕ್ಷಾಮದ್ಯ ಕನ್ಯೆಯರಿಗೆ ಚೈತನ್ಯ ನೀಡುತ್ತೆ.”+