ಜ್ಞಾನೋಕ್ತಿ
28 ಯಾರೂ ಓಡಿಸ್ಕೊಂಡು ಹೋಗದಿದ್ರೂ ಕೆಟ್ಟವನು ಓಡಿ ಹೋಗ್ತಾನೆ,
ಆದ್ರೆ ನೀತಿವಂತ ಸಿಂಹದ ಹಾಗೆ ಧೈರ್ಯವಾಗಿ ಇರ್ತಾನೆ.+
2 ಪ್ರಜೆಗಳು ನಿಯಮ ಮೀರಿದ್ರೆ* ಅಧಿಕಾರಿಗಳು ಬದಲಾಗ್ತಾ ಇರ್ತಾರೆ,+
ಆದ್ರೆ ವಿವೇಚನಾ ಶಕ್ತಿ, ಜ್ಞಾನ ಇರೋ ವ್ಯಕ್ತಿ ಸಹಾಯ ಮಾಡಿದ್ರೆ ಅಧಿಕಾರಿ ಜಾಸ್ತಿ ಸಮಯ ಆಳ್ತಾನೆ.+
3 ದೀನನಿಗೆ ಮೋಸ ಮಾಡೋ ಬಡವ+
ಬೆಳೆಯನ್ನೆಲ್ಲ ಕೊಚ್ಕೊಂಡು ಹೋಗೋ ಮಳೆ ತರ.
4 ನಿಯಮ* ಮೀರುವವನು ಕೆಟ್ಟವ್ರನ್ನ ಹೊಗಳಿ ಅಟ್ಟಕ್ಕೇರಿಸ್ತಾನೆ,
ಆದ್ರೆ ನಿಯಮ ಪಾಲಿಸುವವನಿಗೆ ಅವ್ರನ್ನ ಕಂಡ್ರೆ ಕೋಪ ಬರುತ್ತೆ.+
6 ಕೆಟ್ಟ ದಾರಿಯಲ್ಲಿ ನಡಿಯೋ ಶ್ರೀಮಂತನಿಗಿಂತ
ಸರಿ ದಾರಿಯಲ್ಲಿ ನಡಿಯೋ ಬಡವನೇ ಮೇಲು.+
7 ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ ಇರೋ ಮಗ ನಿಯಮ* ಪಾಲಿಸ್ತಾನೆ,
ಆದ್ರೆ ಹೊಟ್ಟೆಬಾಕರ ಸಹವಾಸ ಮಾಡುವವನು ಅಪ್ಪನಿಗೆ ಅವಮಾನ ಮಾಡ್ತಾನೆ.+
8 ಬಡ್ಡಿಯಿಂದ,+ ಅನ್ಯಾಯದಿಂದ ತನ್ನ ಸಂಪತ್ತು ಹೆಚ್ಚಿಸ್ಕೊಳ್ತಾನೆ
ಆದ್ರೆ ಅದನ್ನ ಬಡವ್ರಿಗೆ ದಯೆ ತೋರಿಸುವವನಿಗಾಗಿ ಕೂಡಿಡ್ತಾನೆ.+
10 ಪ್ರಾಮಾಣಿಕನನ್ನ ಕೆಟ್ಟ ದಾರಿಗೆ ಎಳಿಯುವವನು ತಾನು ತೋಡಿದ ಗುಂಡಿಗೆ ತಾನೇ ಬೀಳ್ತಾನೆ,+
ಆದ್ರೆ ತಪ್ಪು ಮಾಡದವನು ಒಳ್ಳೇ ಪ್ರತಿಫಲ ಪಡ್ಕೊಳ್ತಾನೆ.+
11 ಶ್ರೀಮಂತ ತಾನೇ ದೊಡ್ಡ ವಿವೇಕಿ ಅಂದ್ಕೊಳ್ತಾನೆ,+
ಆದ್ರೆ ವಿವೇಚನಾ ಶಕ್ತಿ ಇರೋ ಬಡವ ಶ್ರೀಮಂತನ ಬಂಡವಾಳ ಏನಂತ ಕಂಡುಹಿಡಿತಾನೆ.+
12 ನೀತಿವಂತರಿಗೆ ಜಯ ಸಿಕ್ಕಿದಾಗ ಜನ ಕುಣಿದು ಕುಪ್ಪಳಿಸ್ತಾರೆ.
ಆದ್ರೆ ಕೆಟ್ಟವರು ಅಧಿಕಾರಕ್ಕೆ ಬಂದಾಗ ಅಡಗಿಕೊಳ್ತಾರೆ.+
13 ತನ್ನ ಅಪರಾಧಗಳನ್ನ ಮುಚ್ಚಿಡುವವನಿಗೆ ಒಳ್ಳೇದಾಗಲ್ಲ,+
ಅದನ್ನ ಒಪ್ಕೊಂಡು ಮತ್ತೆ ಮಾಡದೆ ಇರುವವನಿಗೆ ಕರುಣೆ ಸಿಗುತ್ತೆ.+
14 ತನ್ನ ಕೆಲಸಗಳ ಬಗ್ಗೆ ಎಚ್ಚರವಾಗಿ ಇರುವವನು* ಯಾವಾಗ್ಲೂ ಸಂತೋಷವಾಗಿ ಇರ್ತಾನೆ,
ಆದ್ರೆ ತನ್ನ ಹೃದಯ ಕಲ್ಲು ಮಾಡ್ಕೊಳ್ಳುವವನು ಕಷ್ಟಕ್ಕೆ ಸಿಕ್ಕಿಹಾಕೊಳ್ತಾನೆ.+
15 ಅಮಾಯಕರ ಮೇಲೆ ಆಳೋ ಕೆಟ್ಟವನು,
ಗರ್ಜಿಸೋ ಸಿಂಹದ ಹಾಗೆ, ಮೈಮೇಲೆ ಎರಗೋ ಕರಡಿ ಹಾಗೆ.+
16 ವಿವೇಚನಾ ಶಕ್ತಿ ಇಲ್ಲದ ನಾಯಕ ತನ್ನ ಅಧಿಕಾರವನ್ನ ದುರುಪಯೋಗ ಮಾಡ್ತಾನೆ,+
ಆದ್ರೆ ಅಪ್ರಾಮಾಣಿಕ ಲಾಭವನ್ನ ದ್ವೇಷಿಸುವವನು ಆಯಸ್ಸು ಹೆಚ್ಚಿಸ್ಕೊಳ್ತಾನೆ.+
17 ಬೇರೆಯವ್ರ ಜೀವ ತೆಗೆದು ಅದರ ರಕ್ತಾಪರಾಧ ಹೊತ್ಕೊಂಡಿರೋನು ಸ್ಮಶಾನ* ಸೇರೋ ತನಕ ಓಡ್ತಾ ಇರ್ತಾನೆ.+
ಅವನನ್ನ ಯಾರೂ ತಡಿಬೇಡಿ.
19 ತನ್ನ ಹೊಲದಲ್ಲಿ ಉಳುಮೆ ಮಾಡುವವನಿಗೆ ಸಾಕಷ್ಟು ಊಟ ಸಿಗುತ್ತೆ,
ಆದ್ರೆ ಕೆಲಸಕ್ಕೆ ಬಾರದ ವಿಷ್ಯಗಳ ಹಿಂದೆ ಹೋಗುವವನು ಕಡುಬಡತನಕ್ಕೆ ಬಲಿ ಆಗ್ತಾನೆ.+
20 ನಂಬಿಗಸ್ತ ವ್ಯಕ್ತಿಗೆ ತುಂಬ ಆಶೀರ್ವಾದ ಸಿಗುತ್ತೆ,+
ಆದ್ರೆ ಶ್ರೀಮಂತ ಆಗೋಕೆ ಆತುರ ಪಡುವವನು ತಪ್ಪು ಮಾಡದೇ ಇರೋಕೆ ಆಗಲ್ಲ.+
21 ಭೇದಭಾವ ಮಾಡೋದು ಒಳ್ಳೇದಲ್ಲ,+
ಆದ್ರೆ ಮನುಷ್ಯ ಒಂದು ತುಂಡು ರೊಟ್ಟಿಗಾಗಿ ತಪ್ಪು ಮಾಡಿಬಿಡಬಹುದು.
22 ಹೊಟ್ಟೆಕಿಚ್ಚುಪಡೋ ಮನುಷ್ಯ ಹಣ ಆಸ್ತಿಗಾಗಿ ಆಸೆಪಡ್ತಾನೆ.
ಆದ್ರೆ ತನಗೆ ಬಡತನ ಬರುತ್ತೆ ಅಂತ ಅವನಿಗೆ ಗೊತ್ತಿರಲ್ಲ.
25 ದುರಾಸೆ ಇರುವವನು ಒಡಕು ತರ್ತಾನೆ,
ಆದ್ರೆ ಯೆಹೋವನನ್ನ ಆತ್ಕೊಳ್ಳುವವನು ಏಳಿಗೆ ಆಗ್ತಾನೆ.+
27 ಬಡವರಿಗೆ ದಾನ ಮಾಡುವವನಿಗೆ ಏನೂ ಕೊರತೆ ಆಗಲ್ಲ,+
ಆದ್ರೆ ಅವ್ರ ಅಗತ್ಯ ನೋಡಿನೂ ನೋಡದ ಹಾಗೆ ಇರುವವನಿಗೆ ತುಂಬ ಶಾಪ ಬರುತ್ತೆ.
28 ಕೆಟ್ಟವರು ಅಧಿಕಾರಕ್ಕೆ ಬಂದಾಗ ಮನುಷ್ಯರು ಅಡಗಿಕೊಳ್ತಾರೆ,
ಆದ್ರೆ ಕೆಟ್ಟವ್ರ ಅಂತ್ಯ ಆದಾಗ ನೀತಿವಂತರು ಜಾಸ್ತಿ ಆಗ್ತಾರೆ.+