ಯೆಶಾಯ
58 ಆತನು ನನಗೆ ಹೀಗೆ ಹೇಳಿದನು: “ಸುಮ್ಮನಿರಬೇಡ, ಗಂಟಲೆತ್ತಿ ಜೋರಾಗಿ ಕೂಗು!
ಕೊಂಬಿನ ತರ ಗಟ್ಟಿ ಸ್ವರದಲ್ಲಿ ಕೂಗು.
ನನ್ನ ಜನ್ರಿಗೆ ಅವ್ರ ಪ್ರತಿಭಟನೆ ಬಗ್ಗೆ,+
ಯಾಕೋಬನ ಮನೆತನದವ್ರಿಗೆ ಅವ್ರ ಪಾಪಗಳ ಬಗ್ಗೆ ಹೇಳು.
2 ನೀತಿಯನ್ನ ಪಾಲಿಸೋ ಜನಾಂಗದ ತರ,
ತಮ್ಮ ದೇವರ ನ್ಯಾಯವನ್ನ ತೊರೆಯದೆ ಇರೋ ಜನಾಂಗದ ಜನ್ರ ತರ,
ಅವರು ಪ್ರತಿದಿನ ನನ್ನ ಮಾರ್ಗದರ್ಶನಕ್ಕಾಗಿ ಹುಡುಕ್ತಾರೆ,
ನನ್ನ ಮಾರ್ಗಗಳನ್ನ ತಿಳ್ಕೊಳ್ಳೋ ಆಸೆಯನ್ನ ವ್ಯಕ್ತಪಡಿಸ್ತಾರೆ.+
ದೇವರಿಗೆ ಹತ್ತಿರವಾಗೋದು ತಮಗೆ ಇಷ್ಟವೇನೋ ಅನ್ನೋ ತರ
ಅವರು ನನ್ನ ಹತ್ರ ನ್ಯಾಯವಾಗಿ ತೀರ್ಪು ಮಾಡೋಕೆ ಕೇಳ್ಕೊತಾರೆ.+
3 ಅವರು ನನ್ನನ್ನ ‘ನಾವು ಉಪವಾಸ ಮಾಡುವಾಗ ನೀನ್ಯಾಕೆ ನೋಡಲ್ಲ?+
ನಾವು ನಮ್ಮನ್ನೇ ತಗ್ಗಿಸ್ಕೊಳ್ಳುವಾಗ ನೀನ್ಯಾಕೆ ನಮ್ಮನ್ನ ಗಮನಿಸಲ್ಲ?’+ ಅಂತ ಪ್ರಶ್ನಿಸ್ತಾರೆ.
ಅದಕ್ಕೆ ನಾನು ‘ಯಾಕಂದ್ರೆ, ಉಪವಾಸ ಮಾಡೋ ದಿನ ನೀವು ನಿಮ್ಮ ಸಂತೋಷವನ್ನೇ* ನೋಡ್ಕೊತೀರ,
ನಿಮ್ಮ ಆಳುಗಳ ಮೇಲೆ ದಬ್ಬಾಳಿಕೆ ಮಾಡ್ತೀರ’+ ಅಂತ ಉತ್ರ ಕೊಡ್ತೀನಿ.
4 ನಿಮ್ಮ ಉಪವಾಸ ಜಗಳಗಳಲ್ಲಿ, ಹೊಡೆದಾಟಗಳಲ್ಲಿ ಕೊನೆಗೊಳ್ಳುತ್ತೆ,
ಕೆಟ್ಟತನ ಅನ್ನೋ ಮುಷ್ಠಿಯಿಂದ ಒಬ್ಬರಿಗೊಬ್ರು ಗುದ್ದಾಡ್ತೀರ.
ನಿಮ್ಮ ಈ ರೀತಿಯ ಉಪವಾಸಗಳು ಸ್ವರ್ಗದಲ್ಲಿರೋ ನಾನು ನಿಮ್ಮ ಸ್ವರವನ್ನ ಕೇಳಿಸ್ಕೊಳ್ಳೋ ತರ ಮಾಡಲ್ಲ.
5 ಈ ರೀತಿ ಉಪವಾಸ ಮಾಡೋಕೆ ನಾನು ನಿಮಗೆ ಹೇಳಿದ್ನಾ?
ಉದ್ದವಾದ ಹುಲ್ಲು ಬಾಗೋ ತರ ಒಬ್ಬ ವ್ಯಕ್ತಿ ತನ್ನ ತಲೆ ಬಗ್ಗಿಸಿ,
ಗೋಣಿಯನ್ನ, ಬೂದಿನ ತನ್ನ ಹಾಸಿಗೆಯಾಗಿ ಮಾಡ್ಕೊಂಡು
ಉಪವಾಸದ ದಿನ ತನಗೇ ತಾನು ಹಾನಿ ಮಾಡ್ಕೊಬೇಕಾ?
ನಿಮ್ಮ ಪ್ರಕಾರ ಉಪವಾಸ ಅಂದ್ರೆ ಇದೇನಾ? ಈ ದಿನವನ್ನ ನೀವು ಯೆಹೋವನನ್ನ ಸಂತೋಷಪಡಿಸೋ ದಿನ ಅಂತ ಕರಿತೀರಾ?
6 ಖಂಡಿತ ಇಲ್ಲ! ನಾನು ನಿಮಗೆ ಮಾಡೋಕೆ ಹೇಳಿದ ಉಪವಾಸ ಹೇಗಿರಬೇಕಂದ್ರೆ
ಕೆಟ್ಟತನ ಅನ್ನೋ ಬೇಡಿಯನ್ನ ಕಿತ್ತು ಬಿಸಾಡಬೇಕು,
ನೊಗದ ಕಟ್ಟನ್ನ ಬಿಚ್ಚಬೇಕು,+
ದಬ್ಬಾಳಿಕೆಗೆ ಒಳಗಾಗಿರುವವ್ರನ್ನ ಬಿಡಿಸಬೇಕು,+
ಪ್ರತಿಯೊಂದು ನೇಗಿಲನ್ನ ಎರಡು ತುಂಡು ಮಾಡಬೇಕು,
7 ಹಸಿದವರ ಜೊತೆ ಆಹಾರವನ್ನ ಹಂಚ್ಕೊಳ್ಳಬೇಕು,+
ಬಡವ್ರನ್ನ, ನಿರಾಶ್ರಿತ್ರನ್ನ ಮನೆಗೆ ಬರ ಮಾಡ್ಕೊಳ್ಳಬೇಕು,
ಬೆತ್ತಲೆ ಇರುವವ್ರನ್ನ ನೋಡಿದಾಗ ಅವ್ರಿಗೆ ಬಟ್ಟೆ ತೊಡಿಸಬೇಕು,+
ಸ್ವಂತದವರನ್ನ ನೋಡಿದಾಗ ಮುಖ ತಿರುಗಿಸ್ಕೊಂಡು ಹೋಗಬಾರದು.
ನಿಮ್ಮ ನೀತಿ ನಿಮ್ಮ ಮುಂದೆ ನಡೆಯುತ್ತೆ,
ಯೆಹೋವನ ಮಹಿಮೆ ನಿಮ್ಮ ಹಿಂದೆ ಕಾವಲಾಗಿ ಬರುತ್ತೆ.+
9 ಆಗ ನೀವು ಮೊರೆಯಿಡ್ತೀರ, ಯೆಹೋವ ನಿಮಗೆ ಉತ್ರ ಕೊಡ್ತಾನೆ,
ಸಹಾಯಕ್ಕಾಗಿ ಕೂಗ್ತೀರ, ಆತನು ‘ನಾನಿದ್ದೀನಿ!’ ಅಂತ ಹೇಳ್ತಾನೆ.
ನೀವು ನಿಮ್ಮ ಮಧ್ಯದಿಂದ ನೊಗವನ್ನ ತೆಗೆದುಹಾಕಿದ್ರೆ,
ಬೆರಳು ತೋರಿಸೋದನ್ನ, ಬೇರೆಯವ್ರ ಹೆಸ್ರನ್ನ ಹಾಳುಮಾಡೋಕೆ ಸುಳ್ಳು ಹೇಳೋದನ್ನ ಬಿಟ್ಟುಬಿಟ್ರೆ,+
10 ನಿಮಗೆ ಇಷ್ಟ ಆಗಿರೋದನ್ನ ಹಸಿದವ್ರಿಗೆ ಕೊಟ್ರೆ,+
ಕಷ್ಟದಲ್ಲಿರುವವ್ರ ಅಗತ್ಯಗಳನ್ನ ಪೂರೈಸಿದ್ರೆ,
ನಿಮ್ಮ ಬೆಳಕು ಕತ್ತಲಲ್ಲೂ ಹೊಳೆಯುತ್ತೆ,
ನಿಮ್ಮ ಅಂಧಕಾರವೂ ಮಟಮಟ ಮಧ್ಯಾಹ್ನದ ತರ ಇರುತ್ತೆ.+
11 ಯೆಹೋವ ಯಾವಾಗ್ಲೂ ನಿಮ್ಮನ್ನ ಮುನ್ನಡೆಸ್ತಾನೆ,
ಬತ್ತಿ ಹೋಗಿರೋ ದೇಶದಲ್ಲೂ ಆತನು ನಿಮ್ಮನ್ನ ತೃಪ್ತಿಪಡಿಸ್ತಾನೆ,+
ಆತನು ನಿಮ್ಮ ಮೂಳೆಗಳಿಗೆ ಬಲ ತುಂಬ್ತಾನೆ,
ಚೆನ್ನಾಗಿ ನೀರು ಹಾಯಿಸಿರೋ ತೋಟದ ತರ,+
ಯಾವತ್ತೂ ಒಣಗಿಹೋಗದ ಬುಗ್ಗೆ ತರ ನೀವಾಗ್ತೀರ.
12 ಹಿಂದಿನ ಕಾಲದಲ್ಲಿ ಹಾಳುಬಿದ್ದಿದ್ದನ್ನ ನಿಮಗಾಗಿ ಮತ್ತೆ ಕಟ್ಟಲಾಗುತ್ತೆ,+
ತಲೆಮಾರುಗಳಿಂದ ನಾಶವಾಗಿ ಬಿದ್ದಿರೋ ಅಡಿಪಾಯಗಳನ್ನ ನೀವು ಮತ್ತೆ ಸ್ಥಾಪಿಸ್ತೀರ.+
ಮುರಿದ ಗೋಡೆಗಳನ್ನ* ದುರಸ್ತಿ ಮಾಡುವವರು ಅಂತ ನಿಮ್ಮನ್ನ ಕರೆಯಲಾಗುತ್ತೆ,+
ಮಾರ್ಗಗಳನ್ನ ಒಳ್ಳೇ ಸ್ಥಿತಿಗೆ ತರುವವರು ಅನ್ನೋ ಹೆಸ್ರನ್ನ ನೀವು ಪಡ್ಕೊಳ್ತೀರ. ಆ ಮಾರ್ಗಗಳ ಬದಿಗಳಲ್ಲಿ ಜನ ಮತ್ತೆ ವಾಸಿಸ್ತಾರೆ.
13 ನೀವು ನನ್ನ ಪವಿತ್ರ ದಿನವಾದ ಸಬ್ಬತ್ ದಿನದ ಸಲುವಾಗಿ ನಿಮ್ಮ ಸ್ವಂತ ಆಸೆಯನ್ನ ಬದಿಗೊತ್ತಿದ್ರೆ,+
ಸಬ್ಬತ್ ದಿನವನ್ನ ಅಪಾರ ಆನಂದದ ದಿನ, ಯೆಹೋವನ ಪವಿತ್ರ ದಿನ, ಮಹಿಮೆಪಡಿಸಬೇಕಾದ ದಿನ ಅಂತ ಕರೆದ್ರೆ,+
ನಿಮ್ಮ ಸ್ವಂತ ಸಂತೋಷವನ್ನ ಬದಿಗೊತ್ತಿ, ಕೆಲಸಕ್ಕೆ ಬಾರದ ಹರಟೆ ಮಾತನ್ನ ಆಡದೆ ಸಬ್ಬತ್ ದಿನವನ್ನ ಘನಪಡಿಸಿದ್ರೆ,
14 ನೀವು ಅಪಾರ ಆನಂದ ಕಂಡ್ಕೊಳ್ಳೋ ತರ ಯೆಹೋವನಾದ ನಾನು ಮಾಡ್ತೀನಿ,
ಭೂಮಿಯ ಎತ್ತರ ಸ್ಥಳಗಳನ್ನ ನೀವು ಆಳೋ ತರ ಮಾಡ್ತೀನಿ.+