ಯೆಶಾಯ
61 ವಿಶ್ವದ ರಾಜನಾದ ಯೆಹೋವ ನನಗೆ ತನ್ನ ಪವಿತ್ರ ಶಕ್ತಿಯನ್ನ ಕೊಟ್ಟಿದ್ದಾನೆ,+
ಸೌಮ್ಯ ಸ್ವಭಾವದವರಿಗೆ ಸಿಹಿ ಸುದ್ದಿಯನ್ನ ಪ್ರಕಟಿಸೋಕೆ ಯೆಹೋವ ನನ್ನನ್ನ ಅಭಿಷೇಕಿಸಿದ್ದಾನೆ.+
ಮುರಿದ ಹೃದಯಗಳನ್ನ ಕಟ್ಟೋಕೆ,
ಬಂದಿವಾಸದಲ್ಲಿ ಇರುವವರಿಗೆ ಬಿಡುಗಡೆಯನ್ನ ಘೋಷಿಸೋಕೆ,
ಕೈದಿಗಳ ಕಣ್ಣುಗಳನ್ನ ತೆರೆಯಲಾಗುತ್ತೆ ಅಂತ ಹೇಳೋಕೆ ಆತನು ನನ್ನನ್ನ ಕಳಿಸಿದ್ದಾನೆ.+
2 ಯೆಹೋವ ತನ್ನ ಪ್ರಸನ್ನತೆಯನ್ನ* ತೋರಿಸೋ ವರ್ಷದ ಬಗ್ಗೆ,
ನಮ್ಮ ದೇವರು ಸೇಡುತೀರಿಸೋ ದಿನದ ಬಗ್ಗೆ ಹೇಳೋಕೆ,+
ಗೋಳಾಡುವವ್ರನ್ನೆಲ್ಲ ಸಮಾಧಾನ ಮಾಡೋಕೆ ಆತನು ನನ್ನನ್ನ ಕಳಿಸಿದ್ದಾನೆ.+
3 ಚೀಯೋನಿನ ವಿಷ್ಯದಲ್ಲಿ ದುಃಖ ಪಡ್ತಿರುವವ್ರಿಗೆ
ಬೂದಿಯ ಬದಲಾಗಿ ಅಲಂಕರಿಸಿದ ತಲೆಯುಡುಪನ್ನ,
ಗೋಳಾಟದ ಬದಲಾಗಿ ಅತ್ಯಾನಂದದ ತೈಲವನ್ನ,
ಕುಂದಿಹೋಗಿರೋ ಮನದ ಬದಲಾಗಿ ಸ್ತುತಿಯ ವಸ್ತ್ರವನ್ನ ಕೊಡೋಕೆ ಆತನು ನನ್ನನ್ನ ಕಳಿಸಿದ್ದಾನೆ.
ಅವ್ರನ್ನ ನೀತಿಯ ಮರಗಳು ಅಂತ,
ತನ್ನ ಮಹಿಮೆಗಾಗಿ ಯೆಹೋವ ನೆಟ್ಟಿರೋ ಸಸಿಗಳು ಅಂತ ಕರೆಯಲಾಗುತ್ತೆ.+
4 ಅವರು ಪುರಾತನ ಕಾಲದಲ್ಲಿ ಹಾಳುಬಿದ್ದದ್ದನ್ನ ಮತ್ತೆ ಕಟ್ತಾರೆ,
ತುಂಬ ಸಮ್ಯದಿಂದ ನಿರ್ಜನವಾಗಿರೋ ಸ್ಥಳಗಳನ್ನ ಮತ್ತೆ ನಿರ್ಮಿಸ್ತಾರೆ,+
ನಾಶವಾಗಿದ್ದ ಪಟ್ಟಣಗಳನ್ನ,+
ತಲತಲಾಂತರಗಳಿಂದ ನಿರ್ಜನವಾಗಿದ್ದ ಸ್ಥಳಗಳನ್ನ ದುರಸ್ತಿ ಮಾಡ್ತಾರೆ.+
5 “ಅಪರಿಚಿತರು ಬಂದು ನಿಮ್ಮ ಹಿಂಡುಗಳನ್ನ ಕಾಯ್ತಾರೆ,
ವಿದೇಶಿಯರು+ ನಿಮ್ಮ ರೈತರಾಗ್ತಾರೆ, ಅವರು ನಿಮ್ಮ ದ್ರಾಕ್ಷಿತೋಟದ ಕೆಲಸಗಾರರು ಆಗ್ತಾರೆ.+
6 ನಿಮ್ಮ ವಿಷ್ಯಕ್ಕೆ ಬರೋದಾದ್ರೆ, ನಿಮ್ಮನ್ನ ಯೆಹೋವನ ಪುರೋಹಿತರು ಅಂತ ಕರೆಯಲಾಗುತ್ತೆ,+
ಜನ ನಿಮ್ಮನ್ನ ನಮ್ಮ ದೇವರ ಸೇವಕರು ಅಂತ ಕರಿತಾರೆ.
ನೀವು ಜನಾಂಗಗಳ ಸಿರಿಸಂಪತ್ತನ್ನ ಬಳಸ್ಕೊಳ್ತೀರ,+
ಅವ್ರಿಂದ ಸಿಕ್ಕಿದ ಸಂಪತ್ತಿನ ಬಗ್ಗೆ ನೀವು ಕೊಚ್ಕೊಳ್ತೀರ.
7 ಅವಮಾನಕ್ಕೆ ಬದಲಾಗಿ ನನ್ನ ಜನ್ರಿಗೆ ಮೊದಲಿಗಿಂತ ಎರಡು ಪಟ್ಟು ಹೆಚ್ಚು ಆಶೀರ್ವಾದ ಸಿಗುತ್ತೆ,
ಅಪಮಾನಕ್ಕೆ ಬದಲಾಗಿ ಅವರು ತಮ್ಮ ಪಾಲನ್ನ ಪಡ್ಕೊಂಡು ಹರ್ಷಧ್ವನಿಗೈತಾರೆ.
ಹೌದು, ಅವರು ತಮ್ಮ ದೇಶದಲ್ಲಿ ಎರಡು ಪಟ್ಟು ಹೆಚ್ಚು ಆಸ್ತಿ ಪಡಿತಾರೆ.+
ಶಾಶ್ವತ ಸಂಭ್ರಮ ಅವರದ್ದಾಗುತ್ತೆ.+
ನಾನು ನಂಬಿಗಸ್ತಿಕೆಯಿಂದ ಅವ್ರ ಸಂಬಳವನ್ನ ಅವ್ರಿಗೆ ಕೊಡ್ತೀನಿ,
ನಾನು ಅವ್ರ ಜೊತೆ ಶಾಶ್ವತವಾದ ಒಂದು ಒಪ್ಪಂದ ಮಾಡ್ಕೊಳ್ತೀನಿ.+
ಇವರು ಯೆಹೋವನ ಆಶೀರ್ವಾದ ಪಡೆದ ಸಂತತಿಯವರು+ ಅಂತ
ಅವ್ರನ್ನ ನೋಡುವವ್ರೆಲ್ಲ ಗುರುತು ಹಿಡಿತಾರೆ.”
10 ನಾನು ಯೆಹೋವನಿಂದಾಗಿ ಅತ್ಯಾನಂದಪಡ್ತೀನಿ.
ನನ್ನ ತನುಮನವೆಲ್ಲ ನನ್ನ ದೇವರಿಂದಾಗಿ ಉಲ್ಲಾಸಿಸುತ್ತೆ.+