ಕೀರ್ತನೆ
71 ಯೆಹೋವನೇ, ನಾನು ನಿನ್ನಲ್ಲೇ ಆಶ್ರಯ ಪಡ್ಕೊಂಡಿದ್ದೀನಿ.
ಅವಮಾನ ಆಗೋ ಪರಿಸ್ಥಿತಿ ಯಾವತ್ತೂ ನನಗೆ ಬರಬಾರದು.+
2 ನೀನು ನೀತಿವಂತನಾಗಿ ಇರೋದ್ರಿಂದ ನನ್ನನ್ನ ರಕ್ಷಿಸು, ನನ್ನನ್ನ ಕಾಪಾಡು.
ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊಂಡು ನನ್ನನ್ನ ಪಾರುಮಾಡು.+
3 ಯಾವಾಗ ಬೇಕಾದ್ರೂ ನಾನು ಆಶ್ರಯ ಹುಡುಕಿ ಬರೋ ಹಾಗೆ
ನೀನು ಬಂಡೆ ತರ ಗಟ್ಟಿಯಾಗಿರೋ ಕೋಟೆ ಆಗು.
ನನ್ನನ್ನ ರಕ್ಷಿಸೋಕೆ ಯಾರನ್ನಾದ್ರೂ ಕಳಿಸು,
ಯಾಕಂದ್ರೆ ನೀನು ನನ್ನ ಬಂಡೆ, ನನ್ನ ಭದ್ರಕೋಟೆ.+
4 ನನ್ನ ದೇವರೇ, ದುಷ್ಟನ ಕೈಯಿಂದ ನನ್ನನ್ನ ಕಾಪಾಡು,+
ಅನ್ಯಾಯವಾಗಿ ದೌರ್ಜನ್ಯ ಮಾಡೋರ ವಶದಿಂದ ನನ್ನನ್ನ ಬಿಡಿಸು.
6 ಹುಟ್ಟಿದಾಗಿಂದ ನೀನೇ ನನ್ನ ಆಧಾರ,
ಅಮ್ಮನ ಹೊಟ್ಟೆಯಿಂದ ನನ್ನನ್ನ ಹೊರಗೆ ತಂದವನು ನೀನೇ.+
ನಾನು ನಿನ್ನನ್ನ ಯಾವಾಗ್ಲೂ ಹೊಗಳ್ತೀನಿ.
7 ನನಗೆ ಆಗಿದ್ದನ್ನ ನೋಡಿ ತುಂಬ ಜನ ಅದ್ಭುತ ಅಂದ್ರು,
ಆದ್ರೆ ನೀನೇ ನನ್ನ ಬಲವಾದ ಆಶ್ರಯ.
8 ನಿನ್ನ ಹೊಗಳಿಕೆ ಬಿಟ್ಟು ಬೇರೆ ಏನೂ ನನ್ನ ಬಾಯಲ್ಲಿಲ್ಲ,+
ಇಡೀ ದಿನ ನಿನ್ನ ಘನತೆ ಬಗ್ಗೆ ನಾನು ಹೇಳ್ತಾ ಇರ್ತಿನಿ.
10 ನನ್ನ ಶತ್ರುಗಳು ನನ್ನ ವಿರುದ್ಧ ಮಾತಾಡ್ತಾರೆ,
ನನ್ನ ಜೀವ ತೆಗಿಬೇಕು ಅಂತಿರೋರು ಒಟ್ಟಾಗಿ ಹೊಂಚು ಹಾಕ್ತಾರೆ,+
11 “ದೇವರು ಅವನ ಕೈಬಿಟ್ಟಿದ್ದಾನೆ.
ಅಟ್ಟಿಸ್ಕೊಂಡು ಹೋಗಿ ಅವನನ್ನ ಹಿಡೀರಿ. ಅವನನ್ನ ಕಾಪಾಡೋರು ಯಾರೂ ಇಲ್ಲ” ಅಂತಾರೆ.+
12 ದೇವರೇ, ನನ್ನಿಂದ ದೂರ ಇರಬೇಡ.
ನನ್ನ ದೇವರೇ, ನನಗೆ ಸಹಾಯ ಮಾಡೋಕೆ ಬೇಗ ಬಾ.+
13 ನನ್ನ ವಿರೋಧಿಗಳು
ನಾಚಿಕೆ ಪಡಲಿ, ನಾಶವಾಗಿ ಹೋಗಲಿ.+
ನನ್ನ ವಿಪತ್ತಿಗಾಗಿ ಕಾಯ್ತಾ ಇರೋರು
ಅವಮಾನಕ್ಕೆ, ತಮಾಷೆಗೆ ಗುರಿಯಾಗಲಿ.+
14 ಆದ್ರೆ ನಾನು ನಿನಗಾಗಿ ಕಾಯ್ತಾ ಇರ್ತಿನಿ,
ನಿನ್ನನ್ನ ಇನ್ನೂ ಜಾಸ್ತಿ ಹೊಗಳ್ತೀನಿ.
15 ನಿನ್ನ ಒಳ್ಳೇ ಕೆಲಸಗಳಿಗೆ, ನಿನ್ನ ರಕ್ಷಣೆಯ ಕೆಲಸಗಳಿಗೆ ಲೆಕ್ಕಾನೇ ಇಲ್ಲ.
ಅವನ್ನ ಅರ್ಥ ಮಾಡ್ಕೊಳ್ಳೋಕೆ ನನ್ನಿಂದ ಅಸಾಧ್ಯ.+
ಆದ್ರೂ ನನ್ನ ಬಾಯಿ ಇಡೀ ದಿನ ಅದ್ರ ಬಗ್ಗೆನೇ ವರ್ಣಿಸ್ತಾ ಇರುತ್ತೆ.+
16 ವಿಶ್ವದ ರಾಜನಾದ ಯೆಹೋವನೇ,
ನಾನು ಬಂದು ನಿನ್ನ ಅದ್ಭುತಗಳ ಬಗ್ಗೆ ಹೇಳ್ತೀನಿ,
ನಿನ್ನ ನೀತಿ ಬಗ್ಗೆ, ಹೌದು ಬರೀ ನಿನ್ನ ನೀತಿಯ ಬಗ್ಗೆನೇ ಮಾತಾಡ್ತೀನಿ.
17 ದೇವರೇ, ನಾನು ಚಿಕ್ಕವನಾಗಿ ಇದ್ದಾಗಿಂದ ನೀನು ನನಗೆ ಕಲಿಸಿದ್ದೀಯ,+
ಇಲ್ಲಿ ತನಕ ನಾನು ನಿನ್ನ ಅದ್ಭುತಗಳ ಬಗ್ಗೆ ಹೇಳ್ತಾನೇ ಬಂದಿದ್ದೀನಿ.+
18 ದೇವರೇ, ನನಗೆ ವಯಸ್ಸಾದಾಗ್ಲೂ ಬಿಳಿ ಕೂದಲು ಬಂದಾಗ್ಲೂ ನನ್ನ ಕೈಬಿಡಬೇಡ.+
ನಿನ್ನ ಶಕ್ತಿ ಬಗ್ಗೆ ಮತ್ತು ನಿನ್ನ ಬಲದ ಬಗ್ಗೆ
ಮುಂದಿನ ಪೀಳಿಗೆಗೆ, ಮುಂದೆ ಬರೋರಿಗೆ ನಾನು ಹೇಳೋ ತರ ಆಗಲಿ.+
19 ದೇವರೇ, ನಿನ್ನ ನೀತಿಯ ಕೆಲಸಗಳು ಎಷ್ಟೋ ಶ್ರೇಷ್ಠ,+
ನೀನು ಅದ್ಭುತ ಕೆಲಸಗಳನ್ನ ಮಾಡಿದ್ದೀಯ,
ದೇವರೇ, ನಿನ್ನ ತರ ಯಾರಿದ್ದಾರೆ?+
20 ನಾನು ತುಂಬ ಕಷ್ಟ, ವಿಪತ್ತು ಅನುಭವಿಸೋಕೆ ನೀನು ಬಿಟ್ಟಿದ್ರೂ,+
ನೀನೇ ನನ್ನಲ್ಲಿ ಮತ್ತೆ ಹೊಸ ಜೀವ ತುಂಬು,
21 ನನ್ನ ಗೌರವವನ್ನ ಹೆಚ್ಚಿಸು,
ನನ್ನ ಸುತ್ತಲೂ ಇದ್ದು ನನ್ನನ್ನ ಸಂತೈಸು.
22 ಆಗ ನನ್ನ ದೇವರೇ, ನಿನ್ನ ನಂಬಿಗಸ್ತಿಕೆಗಾಗಿ
ತಂತಿವಾದ್ಯ ನುಡಿಸ್ತಾ ನಾನು ನಿನ್ನನ್ನ ಹೊಗಳ್ತೀನಿ.+
ಇಸ್ರಾಯೇಲ್ಯರ ಪವಿತ್ರ ದೇವರೇ,
ಸಂಗೀತವಾದ್ಯವನ್ನ ನುಡಿಸಿ ನಿನಗೆ ಹಾಡುಗಳನ್ನ ಹಾಡಿ ಹೊಗಳ್ತೀನಿ.*