ಯೋಹಾನನಿಗೆ ಕೊಟ್ಟ ಪ್ರಕಟನೆ
4 ಆಮೇಲೆ ನಾನು ನೋಡಿದಾಗ ಸ್ವರ್ಗದಲ್ಲಿ ತೆರೆದಿರೋ ಒಂದು ಬಾಗಿಲು ಕಾಣಿಸ್ತು. ನಾನು ಮೊದ್ಲು ಕೇಳಿಸ್ಕೊಂಡ ಆ ಸ್ವರ ತುತ್ತೂರಿ ಶಬ್ದದ ತರ ಇತ್ತು. ಅದು ನನಗೆ “ಇಲ್ಲಿಗೆ ಹತ್ತಿ ಬಾ, ಮುಂದೆ ನಡಿಬೇಕಾಗಿರೋ ವಿಷ್ಯಗಳನ್ನ ನಾನು ನಿನಗೆ ತೋರಿಸ್ತೀನಿ” ಅಂತ ಹೇಳ್ತು. 2 ತಕ್ಷಣ ದೇವರ ಪವಿತ್ರಶಕ್ತಿ ನನ್ನ ಮೇಲೆ ಬಂತು. ಆಗ ಸ್ವರ್ಗದಲ್ಲಿ ಒಂದು ಸಿಂಹಾಸನ ಕಾಣಿಸ್ತು. ಅದ್ರ ಮೇಲೆ ಯಾರೋ ಕೂತ್ಕೊಂಡಿದ್ರು.+ 3 ಆ ಸಿಂಹಾಸನದ ಮೇಲೆ ಕೂತಿರುವವನ ರೂಪ ಸೂರ್ಯಕಾಂತ ರತ್ನದ ತರ,+ ಕೆಂಪು ಮಾಣಿಕ್ಯದ ತರ ಹೊಳೀತಾ ಇತ್ತು. ಸಿಂಹಾಸನದ ಸುತ್ತ ಹಸಿರು ಬಣ್ಣದ ರತ್ನದ ತರ ಕಾಣ್ತಿದ್ದ ಮುಗಿಲುಬಿಲ್ಲಿತ್ತು.+
4 ಆ ಸಿಂಹಾಸನದ ಸುತ್ತ 24 ಸಿಂಹಾಸನ ಇದ್ವು. ಅದ್ರ ಮೇಲೆ 24 ಹಿರಿಯರು+ ಕೂತಿರೋದನ್ನ ನಾನು ನೋಡ್ದೆ. ಅವರು ಬಿಳಿ ಬಟ್ಟೆ ಹಾಕೊಂಡಿದ್ರು. ಅವ್ರ ತಲೆ ಮೇಲೆ ಚಿನ್ನದ ಕಿರೀಟ ಇತ್ತು. 5 ಆ ಸಿಂಹಾಸನದಿಂದ ಗುಡುಗು,+ ಮಿಂಚು,+ ಶಬ್ದಗಳು ಬರ್ತಿತ್ತು. ಸಿಂಹಾಸನದ ಮುಂದೆ ಉರಿತಿದ್ದ ಏಳು ದೊಡ್ಡ ದೀಪಗಳಿದ್ವು. ಅವು ದೇವರ ಏಳು ಪವಿತ್ರ ಶಕ್ತಿಗಳನ್ನ ಸೂಚಿಸ್ತಿದ್ವು.+ 6 ಸಿಂಹಾಸನದ ಮುಂದೆ ಗಾಜಿನ ತರ, ಸ್ಪಟಿಕದ ತರ ಸಮುದ್ರ ಇತ್ತು.+
ಸಿಂಹಾಸನದ ಮಧ್ಯ ಅದ್ರ ಸುತ್ತ ನಾಲ್ಕು ಜೀವಿಗಳು ಇದ್ವು.+ ಆ ಜೀವಿಗಳಿಗೆ ಹಿಂದೆ ಮುಂದೆ ಎಲ್ಲ ಕಡೆ ಕಣ್ಣುಗಳೇ ಇದ್ವು. 7 ಒಂದನೇ ಜೀವಿಯ ಮುಖ ಸಿಂಹದ+ ತರ, ಎರಡನೇದು ಹೋರಿ+ ತರ, ಮೂರನೇದು+ ಮನುಷ್ಯನ ತರ, ನಾಲ್ಕನೇದು+ ಹಾರಾಡೋ ಹದ್ದಿನ+ ತರ ಇತ್ತು. 8 ಆ ನಾಲ್ಕೂ ಜೀವಿಗಳಿಗೂ ಆರಾರು ರೆಕ್ಕೆಗಳಿದ್ವು. ಆ ರೆಕ್ಕೆಗಳ ತುಂಬ ಕಣ್ಣುಗಳಿದ್ವು.+ ಆ ಜೀವಿಗಳು ಹಗಲೂ ರಾತ್ರಿ ಹೀಗೆ ಹೇಳ್ತಾನೆ ಇದ್ವು: “ಸರ್ವಶಕ್ತ ಯೆಹೋವ*+ ದೇವರು ಪವಿತ್ರನು, ಪವಿತ್ರನು, ಪವಿತ್ರನು. ಆತನು ಈಗ್ಲೂ ಇದ್ದಾನೆ. ಮುಂಚೆನೂ ಇದ್ದನು. ಮುಂದೇನೂ ಬರ್ತಾನೆ.”+
9 ಸಿಂಹಾಸನದ ಮೇಲೆ ಕೂತಿದ್ದ ಶಾಶ್ವತವಾಗಿ ಜೀವಿಸೋ ದೇವರಿಗೆ+ ಆ ಜೀವಿಗಳು ಗೌರವ, ಘನತೆ ಕೊಟ್ಟು ಧನ್ಯವಾದ ಹೇಳಿದಾಗೆಲ್ಲ, 10 ಆ 24 ಹಿರಿಯರು+ ಸಿಂಹಾಸನದ ಮೇಲೆ ಕೂತಿರೋ ದೇವರ ಮುಂದೆ ಅಡ್ಡಬಿದ್ದು ಸದಾಕಾಲಕ್ಕೂ ಜೀವಿಸೋ ಆತನನ್ನ ಆರಾಧಿಸ್ತಾರೆ. ಅವರು ತಮ್ಮ ಕಿರೀಟಗಳನ್ನ ಸಿಂಹಾಸನದ ಮುಂದೆ ಇಟ್ಟು ಹೀಗೆ ಹೇಳ್ತಾರೆ 11 “ಯೆಹೋವನೇ,* ನಮ್ಮ ದೇವರೇ, ಗೌರವ,+ ಘನತೆ,+ ಶಕ್ತಿಯನ್ನ+ ಪಡ್ಕೊಳ್ಳೋಕೆ ನೀನೇ ಯೋಗ್ಯ. ಯಾಕಂದ್ರೆ ನೀನೇ ಎಲ್ಲವನ್ನೂ ಸೃಷ್ಟಿ ಮಾಡಿದ್ದೀಯ.+ ನಿನ್ನ ಇಷ್ಟದ ಹಾಗೇ ಅವೆಲ್ಲ ಸೃಷ್ಟಿ ಆದ್ವು ಮತ್ತು ಇವತ್ತು ಇಲ್ಲಿವೆ.”