ಯೆಶಾಯ
ಹಾಗಿರುವಾಗ ನೀವು ನನಗಾಗಿ ಎಲ್ಲಿ ಮನೆ ಕಟ್ತೀರ?+
ನನಗಾಗಿ ಎಲ್ಲಿ ವಿಶ್ರಾಂತಿ ಸ್ಥಳ ಮಾಡ್ತೀರ?”+
2 ಯೆಹೋವ ಹೀಗೆ ಹೇಳ್ತಿದ್ದಾನೆ
“ಸ್ವತಃ ನನ್ನ ಕೈಗಳೇ ಇವುಗಳನ್ನೆಲ್ಲ ಮಾಡಿದವು.
ಹೀಗೆ ಅವೆಲ್ಲ ಅಸ್ತಿತ್ವಕ್ಕೆ ಬಂದವು.+
ಹಾಗಿದ್ರೂ ನನ್ನ ಮಾತಿಗೆ ಭಯದಿಂದ ನಡುಗೋ, ಮುರಿದ ಮನಸ್ಸಿನ ದೀನವ್ಯಕ್ತಿ ಕಡೆ ನಾನು ನೋಡ್ತೀನಿ.+
3 ಹೋರಿ ಕಡಿಯುವವನು ಒಬ್ಬ ಮನುಷ್ಯನನ್ನ ಸಾಯಿಸುವವನಿಗೆ ಸಮಾನ ಆಗಿದ್ದಾನೆ.+
ಒಂದು ಕುರಿಯನ್ನ ಬಲಿಯಾಗಿ ಅರ್ಪಿಸುವವನು ನಾಯಿಯ ಕುತ್ತಿಗೆ ಮುರಿಯುವವನಿಗೆ ಸಮಾನ ಆಗಿದ್ದಾನೆ.+
ಒಂದು ಉಡುಗೊರೆ ಅರ್ಪಿಸುವವನು ಹಂದಿಯ ರಕ್ತ ಅರ್ಪಿಸುವವನಿಗೆ ಸಮಾನ ಆಗಿದ್ದಾನೆ!+
ಸಾಂಬ್ರಾಣಿ ಅರ್ಪಿಸುವವನು+ ಮಂತ್ರಗಳನ್ನ ಬಳಸಿ ಆಶೀರ್ವದಿಸುವವನಿಗೆ* ಸಮಾನ ಆಗಿದ್ದಾನೆ.+
ಅವರು ತಮ್ಮ ಸ್ವಂತ ದಾರಿಯನ್ನ ತಾವೇ ಆರಿಸ್ಕೊಂಡಿದ್ದಾರೆ,
ಅಸಹ್ಯವಾದ ವಿಷ್ಯಗಳಲ್ಲಿ ಅವರು ಸಂತೋಷ ಕಂಡ್ಕೊಳ್ತಾರೆ.
4 ಹಾಗಾಗಿ ಅವ್ರನ್ನ ಶಿಕ್ಷಿಸೋಕೆ ನಾನು ಮಾರ್ಗಗಳನ್ನ ಆರಿಸ್ಕೊಳ್ತಿನಿ,+
ಅವರು ಯಾವುದಕ್ಕೆ ಹೆದರುತ್ತಾರೋ ಅದನ್ನೇ ಅವ್ರ ಮೇಲೆ ಬರೋ ತರ ಮಾಡ್ತೀನಿ.
ಯಾಕಂದ್ರೆ ನಾನು ಕರೆದಾಗ ಯಾರೂ ಉತ್ರ ಕೊಡಲಿಲ್ಲ,
ನಾನು ಮಾತಾಡಿದಾಗ ಯಾರೂ ಕಿವಿಗೊಡಲಿಲ್ಲ.+
ನನ್ನ ದೃಷ್ಟಿಯಲ್ಲಿ ತಪ್ಪಾಗಿದ್ದನ್ನೇ ಅವರು ಮಾಡ್ತಾ ಇದ್ರು,
ನನಗೆ ಸಂತೋಷ ತರದ ವಿಷ್ಯಗಳನ್ನ ಮಾಡೋಕೆ ಅವರು ಆರಿಸ್ಕೊಂಡ್ರು.”+
5 ಯೆಹೋವನ ಮಾತಿಗೆ ಭಯದಿಂದ ನಡುಗುವವರೇ ಆತನ ಮಾತನ್ನ ಕೇಳಿ
“ನನ್ನ ಹೆಸ್ರಿಂದಾಗಿ ನಿಮ್ಮನ್ನ ದ್ವೇಷಿಸೋ ಮತ್ತು ದೂರವಿಡೋ ನಿಮ್ಮ ಸಹೋದರರು ‘ಯೆಹೋವನಿಗೆ ಮಹಿಮೆ ಆಗಲಿ!’ ಅಂತ ಗೇಲಿಮಾಡ್ತಾರೆ.+
ಆದ್ರೆ ಆತನು ಪ್ರತ್ಯಕ್ಷನಾಗಿ ನಿಮಗೆ ಸಂತೋಷ ತರ್ತಾನೆ,
ಅವರು ಅವಮಾನಕ್ಕೆ ಗುರಿಯಾಗ್ತಾರೆ.”+
6 ಪಟ್ಟಣದಿಂದ, ದೇವಾಲಯದಿಂದ ಕೋಲಾಹಲ ಕೇಳಿಬರುತ್ತೆ!
ಅದು ಯೆಹೋವ ತನ್ನ ಶತ್ರುಗಳಿಗೆ ತೀರಿಸೋ ತಕ್ಕ ಶಾಸ್ತಿಯ ಶಬ್ದವಾಗಿರುತ್ತೆ.
7 ಹೆರಿಗೆ ನೋವು ಕಾಣಿಸ್ಕೊಳ್ಳೋದಕ್ಕಿಂತ ಮುಂಚೆನೇ ಚೀಯೋನ್ ಅನ್ನೋ ಸ್ತ್ರೀ ಮಗುವನ್ನ ಹಡೆದಳು.+
ಪ್ರಸವವೇದನೆಯನ್ನ ಅನುಭವಿಸೋದಕ್ಕಿಂತ ಮುಂಚೆನೇ, ಗಂಡುಮಗುವನ್ನ ಹೆತ್ತಳು.
8 ಇಂಥ ಸುದ್ದಿಯನ್ನ ಯಾರು ಕೇಳಿಸ್ಕೊಂಡಿದ್ದಾರೆ?
ಇಂಥ ವಿಷ್ಯಗಳು ನಡಿಯೋದನ್ನ ಯಾರು ನೋಡಿದ್ದಾರೆ?
ಒಂದೇ ದಿನದಲ್ಲಿ ಒಂದು ದೇಶವನ್ನ ಹೆರೋಕೆ ಸಾಧ್ಯನಾ?
ಕ್ಷಣ ಮಾತ್ರದಲ್ಲಿ ಒಂದು ಜನಾಂಗ ಹುಟ್ಟೋಕೆ ಸಾಧ್ಯನಾ?
ಆದ್ರೆ ಚೀಯೋನ್ ಎಂಬಾಕೆ ಹೆರಿಗೆ ನೋವು ಕಾಣಿಸ್ಕೊಂಡ ತಕ್ಷಣ ಗಂಡು ಮಕ್ಕಳನ್ನ ಹಡೆದಳು.
9 ಯೆಹೋವ ಹೀಗೆ ಕೇಳ್ತಿದ್ದಾನೆ “ನಾನು ಹೆರಿಗೆ ನೋವನ್ನ ತಂದು ಹೆರಿಗೆ ಆಗದ ಹಾಗೆ ಮಾಡ್ತೀನಾ?”
ದೇವರು ಹೀಗೆ ಕೇಳ್ತಿದ್ದಾನೆ “ನಾನು ಒಂದು ಮಗುವನ್ನ ಗರ್ಭದಲ್ಲಿ ಇಟ್ಟು, ಅದು ಗರ್ಭದಿಂದ ಹೊರಗೆ ಬರದ ಹಾಗೆ ಮಾಡ್ತೀನಾ?”
10 ಯೆರೂಸಲೇಮನ್ನ ಪ್ರೀತಿಸುವವರೇ,+ ನೀವೆಲ್ಲ ಅದ್ರ ಜೊತೆ ಸಂಭ್ರಮಿಸಿ, ಉಲ್ಲಾಸಿಸಿ.+
ಅದ್ರಿಂದ ದುಃಖಿಸ್ತಿರುವವರೇ, ನೀವೆಲ್ಲ ಅದ್ರ ಜೊತೆ ಸೇರಿ ಅತ್ಯಾನಂದಪಡಿ.
11 ತಾಯಿ ತನ್ನ ಮಗುವಿಗೆ ಹೊಟ್ಟೆ ತುಂಬೋ ತನಕ ಹಾಲುಣಿಸೋ ಹಾಗೆ,
ಯೆರೂಸಲೇಮ್ ನಿಮ್ಮ ಕಾಳಜಿ ವಹಿಸುತ್ತೆ.
ಹೌದು ನೀವು ತೃಪ್ತರಾಗ್ತೀರ. ಅದ್ರ ವೈಭವ ಕಂಡು ಸಂಭ್ರಮಿಸ್ತೀರ.
12 ಯಾಕಂದ್ರೆ ಯೆಹೋವ ಹೀಗೆ ಹೇಳ್ತಿದ್ದಾನೆ
“ನದಿ ಹರಿಯೋ ತರ ನಾನು ಅದ್ರ ಮೇಲೆ ಶಾಂತಿ ಹರಿಸ್ತೀನಿ,+
ಜನಾಂಗಗಳ ಸಂಪತ್ತಿಂದ ಅದ್ರ ವೈಭವ ಪ್ರವಾಹದ ಹಾಗೆ ಉಕ್ಕಿ ಹರಿಯುತ್ತೆ.+
ಅವರು ನಿಮಗೆ ಹಾಲು ಕುಡಿಸ್ತಾರೆ, ನಿಮ್ಮನ್ನ ಕಂಕುಳಲ್ಲಿ ಎತ್ಕೊಳ್ತಾರೆ.
ನಿಮ್ಮನ್ನ ತೊಡೆ ಮೇಲೆ ಕೂರಿಸ್ಕೊಂಡು ಆಡಿಸ್ತಾರೆ.
ಯೆರೂಸಲೇಮಿನ ವಿಷ್ಯದಲ್ಲಿ ನೀವು ಸಾಂತ್ವನ ಪಡಿತೀರ.+
14 ನೀವು ಇದನ್ನ ನೋಡ್ತೀರ, ನಿಮ್ಮ ಹೃದಯ ಸಂಭ್ರಮಿಸುತ್ತೆ,
ಹಸಿರು ಹುಲ್ಲಿನ ತರ ನಿಮ್ಮ ಮೂಳೆಗಳಲ್ಲಿ ಜೀವ ಇರುತ್ತೆ.
15 “ಉಗ್ರಕೋಪದಿಂದ ಸೇಡು ತೀರಿಸೋಕೆ,
ಅಗ್ನಿಜ್ವಾಲೆಯಿಂದ ಗದರಿಸೋಕೆ+
ಯೆಹೋವ ಬೆಂಕಿ ತರ ಬರ್ತಾನೆ,+
ಆತನ ರಥಗಳು ಸುಂಟರಗಾಳಿ ತರ ಇರುತ್ತೆ.+
16 ಯೆಹೋವ ಅಗ್ನಿಯಿಂದ, ತನ್ನ ಕತ್ತಿಯಿಂದ
ಎಲ್ಲ ಜನ್ರಿಗೆ ನ್ಯಾಯತೀರಿಸ್ತಾನೆ.
ಅನೇಕರನ್ನ ಯೆಹೋವ ಸಾಯಿಸ್ತಾನೆ.
17 ಉದ್ಯಾನವನಗಳ* ಮಧ್ಯದಲ್ಲಿ ನಿಂತಿರೋ ಮೂರ್ತಿಗಳನ್ನ ಪೂಜಿಸೋಕೆ+ ತಮ್ಮನ್ನೇ ಪವಿತ್ರೀಕರಿಸ್ಕೊಳ್ಳುವವರು, ಶುದ್ಧೀಕರಿಸ್ಕೊಳ್ಳುವವರು ಮತ್ತು ಹಂದಿ ಮಾಂಸವನ್ನ,+ ಅಸಹ್ಯವಾದ ಪದಾರ್ಥಗಳನ್ನ, ಇಲಿಗಳನ್ನ ತಿನ್ನುವವರು+ ಇವ್ರೆಲ್ಲ ಒಟ್ಟಿಗೆ ನಾಶವಾಗ್ತಾರೆ” ಅಂತ ಯೆಹೋವ ಘೋಷಿಸ್ತಿದ್ದಾನೆ. 18 “ನನಗೆ ಅವ್ರ ಕೆಲಸಗಳ ಬಗ್ಗೆ, ಅವ್ರ ಆಲೋಚನೆಗಳ ಬಗ್ಗೆ ತಿಳಿದಿರೋದ್ರಿಂದ ನಾನು ಎಲ್ಲ ಜನಾಂಗಗಳ, ಎಲ್ಲ ಭಾಷೆಗಳ ಜನ್ರನ್ನ ಒಟ್ಟುಗೂಡಿಸೋಕೆ ಬರ್ತಿನಿ. ಅವರು ಬರ್ತಾರೆ, ಬಂದು ನನ್ನ ಮಹಿಮೆಯನ್ನ ನೋಡ್ತಾರೆ.”
19 “ನಾನು ಅವ್ರ ಮಧ್ಯ ಒಂದು ಗುರುತನ್ನ ಸ್ಥಾಪಿಸಿದ್ದೀನಿ. ನನ್ನ ಜನ್ರಲ್ಲಿ ಉಳಿದ ಕೆಲವ್ರನ್ನ ನನ್ನ ಬಗ್ಗೆ ಏನೂ ಗೊತ್ತಿರದ ಮತ್ತು ನನ್ನ ಮಹಿಮೆಯನ್ನ ಕಂಡಿರದ ದೇಶಗಳಿಗೆ ಕಳಿಸ್ತೀನಿ. ನಾನು ಅವ್ರನ್ನ ಬಿಲ್ಲುಗಾರರಿರೋ ತಾರ್ಷೀಷ್,+ ಪೂಲ್ ಮತ್ತು ಲೂದ್+ ಅನ್ನೋ ದೇಶಗಳಿಗೆ ಕಳಿಸ್ತೀನಿ. ತೂಬಲ್ ಮತ್ತು ಯಾವಾನ್+ ದೇಶಕ್ಕೆ ಕಳಿಸ್ತೀನಿ. ದೂರದ ದ್ವೀಪಗಳಿಗೆ ಕಳಿಸ್ತೀನಿ. ಅವರು ನನ್ನ ಮಹಿಮೆ ಬಗ್ಗೆ ಜನಾಂಗಗಳ ಮಧ್ಯ ಘೋಷಿಸ್ತಾರೆ.+ 20 ಎಲ್ಲ ಜನಾಂಗಗಳಿಂದ ಅವರು ನಿಮ್ಮ ಸಹೋದರರನ್ನ ಯೆಹೋವನಿಗೆ ಉಡುಗೊರೆಯಾಗಿ ಆತನ ಪವಿತ್ರ ಪರ್ವತದ ತನಕ ಕುದುರೆಗಳ ಮೇಲೆ, ರಥಗಳ ಮೇಲೆ, ಕಮಾನುಬಂಡಿಗಳ ಮೇಲೆ, ಹೇಸರಗತ್ತೆಗಳ ಮೇಲೆ, ವೇಗವಾಗಿ ಓಡೋ ಒಂಟೆಗಳ ಮೇಲೆ ಕರ್ಕೊಂಡು ಬರ್ತಾರೆ.+ ಇಸ್ರಾಯೇಲ್ಯರು ತಮ್ಮ ಉಡುಗೊರೆಯನ್ನ ಶುದ್ಧವಾದ ಪಾತ್ರೆಯಲ್ಲಿ ತರೋ ಹಾಗೆ ಅವರು ಆ ಉಡುಗೊರೆಯನ್ನ ಯೆಹೋವನ ಆಲಯಕ್ಕೆ ತಗೊಂಡು ಬರ್ತಾರೆ” ಅಂತ ಯೆಹೋವ ಹೇಳ್ತಿದ್ದಾನೆ.
21 ಯೆಹೋವ ಹೀಗೆ ಹೇಳ್ತಿದ್ದಾನೆ “ಅಷ್ಟೇ ಅಲ್ಲ ನಾನು ಅವ್ರಲ್ಲಿ ಕೆಲವ್ರನ್ನ ಪುರೋಹಿತರನ್ನಾಗಿ, ಕೆಲವ್ರನ್ನ ಲೇವಿಯರನ್ನಾಗಿ ತಗೊಳ್ತೀನಿ.”
22 ಯೆಹೋವ ಹೀಗೆ ಘೋಷಿಸ್ತಿದ್ದಾನೆ “ನಾನು ಮಾಡ್ತಿರೋ ಹೊಸ ಆಕಾಶ, ಹೊಸ ಭೂಮಿ+ ಹೇಗೆ ನನ್ನ ಮುಂದೆ ಯಾವಾಗ್ಲೂ ಅಸ್ತಿತ್ವದಲ್ಲಿರುತ್ತೋ ಹಾಗೇ ನಿನ್ನ ಸಂತತಿ ಮತ್ತು ನಿನ್ನ ಹೆಸ್ರು ಅಸ್ತಿತ್ವದಲ್ಲಿರುತ್ತೆ.”+
23 ಯೆಹೋವ ಹೀಗೆ ಹೇಳ್ತಿದ್ದಾನೆ “ಅಮಾವಾಸ್ಯೆಯಿಂದ ಅಮಾವಾಸ್ಯೆಗೆ, ಸಬ್ಬತ್ತಿಂದ ಸಬ್ಬತ್ತಿಗೆ