ಕೀರ್ತನೆ
ಆಸಾಫನ+ ಮಧುರ ಗೀತೆ.
50 ಎಲ್ಲ ದೇವರುಗಳಿಗಿಂತ ಮಹಾ ದೇವರಾದ* ಯೆಹೋವ*+ ಹೇಳಿದ್ದಾನೆ,
ಆತನು ಪೂರ್ವದಿಂದ ಪಶ್ಚಿಮದ ತನಕ ಇರೋ
ಜನ್ರನ್ನೆಲ್ಲ ಒಟ್ಟುಸೇರಿಸ್ತಾನೆ.
2 ಸರಿಸಾಟಿಯಿಲ್ಲದ* ಸೌಂದರ್ಯ ಇರೋ ಚೀಯೋನಿಂದ+ ದೇವರು ಪ್ರಕಾಶಿಸ್ತಾನೆ.
3 ನಮ್ಮ ದೇವರು ಖಂಡಿತ ಬರ್ತಾನೆ, ಆತನು ಸುಮ್ಮನೆ ಇರಲ್ಲ.+
6 ಆಕಾಶ ದೇವರ ನೀತಿಯನ್ನ ಜೋರಾಗಿ ಹೇಳುತ್ತೆ,
ಯಾಕಂದ್ರೆ ದೇವರೇ ನ್ಯಾಯಾಧೀಶ ಆಗಿದ್ದಾನೆ.+ (ಸೆಲಾ)
7 “ನನ್ನ ಜನ್ರೇ, ನಾನು ಹೇಳ್ತೀನಿ ಕೇಳಿ,
ಇಸ್ರಾಯೇಲೇ, ನಾನು ನಿನ್ನ ವಿರುದ್ಧ ಸಾಕ್ಷಿ ಹೇಳ್ತೀನಿ.+
ನಾನು ದೇವರು, ನಿನ್ನ ದೇವರು.+
8 ನೀನು ಕೊಟ್ಟ ಬಲಿಯಿಂದಾಗಲಿ
ನೀನು ನನ್ನ ಮುಂದೆ ತಪ್ಪದೇ ಅರ್ಪಿಸೋ ಸರ್ವಾಂಗಹೋಮ ಬಲಿಗಳಿಂದಾಗಲಿ ನಾನು ನಿನ್ನನ್ನ ಖಂಡಿಸಲ್ಲ.+
10 ಯಾಕಂದ್ರೆ ಕಾಡಲ್ಲಿರೋ ಎಲ್ಲ ಪ್ರಾಣಿಗಳು ನಂದೇ,+
ಸಾವಿರಾರು ಬೆಟ್ಟಗಳ ಮೇಲಿರೋ ಮೃಗಗಳೂ ನಂದೇ.
11 ಬೆಟ್ಟದಲ್ಲಿರೋ ಎಲ್ಲ ಪಕ್ಷಿಗಳ ಬಗ್ಗೆ ನಂಗೊತ್ತು,+
ಬೈಲಲ್ಲಿರೋ ಅಷ್ಟೂ ಪ್ರಾಣಿಗಳೂ ನಂದೇ.
13 ನಾನು ಹೋರಿಗಳ ಮಾಂಸವನ್ನ ತಿಂತೀನಾ?
ಆಡುಗಳ ರಕ್ತನ ಕುಡಿತೀನಾ?+
15 ಕಷ್ಟಕಾಲದಲ್ಲಿ ನನ್ನನ್ನ ಕೂಗು.+
ನಾನು ನಿನ್ನನ್ನ ಕಾಪಾಡ್ತೀನಿ, ನೀನು ನನಗೆ ಗೌರವ ಕೊಡ್ತೀಯ.”+
16 ಆದ್ರೆ ದೇವರು ಕೆಟ್ಟವನಿಗೆ ಹೀಗೆ ಹೇಳ್ತಾನೆ
“ನನ್ನ ನಿಯಮಗಳ ಬಗ್ಗೆ ಹೇಳೋಕೆ
19 ಕೆಟ್ಟದ್ದನ್ನ ಹಬ್ಬಿಸೋಕೆ ನಿನ್ನ ಬಾಯನ್ನ ಬಳಸ್ತೀಯ,
ವಂಚನೆ ನಿನ್ನ ನಾಲಿಗೆಗೆ ಅಂಟ್ಕೊಂಡಿದೆ.+
21 ನೀನು ಇದನ್ನೆಲ್ಲಾ ಮಾಡ್ತಿದ್ದಾಗ ನಾನು ಸುಮ್ನೆ ಇದ್ದೆ,
ಹಾಗಾಗಿ ನಾನೂ ನಿನ್ನ ತರಾನೇ ಅಂತ ನೀನು ಅಂದ್ಕೊಂಡೆ.
ಆದ್ರೆ ಈಗ ನಾನು ನಿನ್ನನ್ನ ಖಂಡಿಸ್ತೀನಿ,
ನಿನ್ನ ವಿರುದ್ಧ ಮೊಕದ್ದಮೆ ಹಾಕ್ತೀನಿ.+
22 ದೇವರನ್ನ ಮರೆತಿರೋರೇ, ದಯವಿಟ್ಟು ಈ ವಿಷ್ಯವನ್ನ ಗಮನದಲ್ಲಿ ಇಟ್ಕೊಳ್ಳಿ,+
ಇಲ್ಲ ಅಂದ್ರೆ ನಾನು ನಿಮ್ಮನ್ನ ತುಂಡುತುಂಡು ಮಾಡಿಬಿಡ್ತೀನಿ, ಆಗ ನಿಮ್ಮನ್ನ ಕಾಪಾಡೋಕೆ ಯಾರೂ ಇರಲ್ಲ.