ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ, ದಾವೀದ ಬತ್ಷೆಬೆ+ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡ ಮೇಲೆ ಪ್ರವಾದಿ ನಾತಾನ ದಾವೀದನ ಹತ್ರ ಬಂದಿದ್ದ. ಆಗ ದಾವೀದ ಈ ಮಧುರ ಗೀತೆಯನ್ನ ರಚಿಸಿದ.
51 ದೇವರೇ, ನಿನ್ನ ಶಾಶ್ವತ ಪ್ರೀತಿಗೆ ತಕ್ಕ ಹಾಗೆ ನನಗೆ ದಯೆ ತೋರಿಸು.+
ನಿನ್ನ ಮಹಾ ಕರುಣೆಗೆ ತಕ್ಕ ಹಾಗೆ ನನ್ನ ಅಪರಾಧಗಳನ್ನ ಅಳಿಸಿಹಾಕು.+
4 ನಿನ್ನ ವಿರುದ್ಧ, ಹೌದು, ಮುಖ್ಯವಾಗಿ* ನಿನ್ನ ವಿರುದ್ಧ ಪಾಪ ಮಾಡಿದ್ದೀನಿ,+
ನಿನಗೆ ಇಷ್ಟ ಆಗದೇ ಇರೋದನ್ನೇ ಮಾಡಿದ್ದೀನಿ.+
ಹಾಗಾಗಿ ನೀನು ಹೇಳೋದೆಲ್ಲ ಸರಿಯಾಗೇ ಇರುತ್ತೆ.
ನಿನ್ನ ತೀರ್ಪು ನ್ಯಾಯವಾಗೇ ಇರುತ್ತೆ.+
6 ಮನಸ್ಸಲ್ಲಿರೋ ಸತ್ಯನ ನೋಡಿ ನೀನು ಖುಷಿಪಡ್ತೀಯ,+
ಹಾಗಾಗಿ ನನ್ನ ಹೃದಯಕ್ಕೆ ನಿಜವಾದ ವಿವೇಕವನ್ನ ಕಲಿಸು.
7 ನಾನು ಶುದ್ಧನಾಗೋ ಹಾಗೆ ಹಿಸ್ಸೋಪ್* ಗಿಡದಿಂದ ನನ್ನ ಪಾಪವನ್ನ ತೊಳೆದು ನನ್ನನ್ನ ಶುದ್ಧಮಾಡು,+
ನನ್ನನ್ನ ತೊಳಿ, ಆಗ ನಾನು ಹಿಮಕ್ಕಿಂತ ಬೆಳ್ಳಗಾಗ್ತೀನಿ.+
8 ಸಂತೋಷ, ಸಂಭ್ರಮದ ಶಬ್ದವನ್ನ ನಾನು ಕೇಳಿಸ್ಕೊಳ್ಳೋ ತರ ಮಾಡು,
ಆಗ ನೀನು ಜಜ್ಜಿದ ಎಲುಬುಗಳು ಖುಷಿಪಡುತ್ತೆ.+
11 ನಿನ್ನ ಸನ್ನಿಧಿಯಿಂದ ನನ್ನನ್ನ ತಳ್ಳಿಬಿಡಬೇಡ,
ನನ್ನಿಂದ ನಿನ್ನ ಪವಿತ್ರಶಕ್ತಿಯನ್ನ ತೆಗೀಬೇಡ.
12 ನನ್ನನ್ನ ರಕ್ಷಿಸಿ ಕೊಟ್ಟ ಸಂತೋಷವನ್ನ ಮತ್ತೆ ಕೊಡು,+
ನಿನ್ನ ಮಾತನ್ನ ಪಾಲಿಸಬೇಕು ಅನ್ನೋ ಆಸೆಯನ್ನ ನನ್ನಲ್ಲಿ ಎಬ್ಬಿಸು.
13 ಅಪರಾಧಿಗಳಿಗೆ ನಾನು ನಿನ್ನ ದಾರಿಯನ್ನ ಕಲಿಸ್ತೀನಿ,+
ಆಗ ಆ ಪಾಪಿಗಳು ನಿನ್ನ ಹತ್ರ ವಾಪಸ್ ಬರ್ತಾರೆ.
14 ದೇವರೇ, ನನ್ನ ರಕ್ಷಣೆಯ ದೇವರೇ,+ ರಕ್ತಾಪರಾಧದಿಂದ ನನ್ನನ್ನ ಕಾಪಾಡು,+
ಆಗ ನನ್ನ ನಾಲಿಗೆ ಸಂತೋಷದಿಂದ ನಿನ್ನ ನೀತಿಯನ್ನ ಜೋರಾಗಿ ಹೇಳುತ್ತೆ.+
15 ಯೆಹೋವನೇ, ನನ್ನ ಬಾಯಿ ನಿನ್ನನ್ನ ಹೊಗಳೋಕೆ ಆಗೋ ತರ,
ನನ್ನ ತುಟಿಗಳನ್ನ ಬಿಚ್ಚು.+
16 ಯಾಕಂದ್ರೆ ನಿನಗೆ ಬಲಿ ಬೇಕಾಗಿಲ್ಲ. ಬೇಕಾಗಿದ್ರೆ ನಾನು ಅದನ್ನ ನಿನಗೆ ಕೊಡ್ತಿದ್ದೆ,+
ನಿನಗೆ ಸರ್ವಾಂಗಹೋಮ ಬಲಿಯಲ್ಲಿ ಸಂತೋಷ ಸಿಗಲ್ಲ.+
19 ಆಗ ನೀನು ನೀತಿಯ ಬಲಿಗಳಲ್ಲಿ,
ಸರ್ವಾಂಗಹೋಮ ಬಲಿಗಳಲ್ಲಿ, ಸಂಪೂರ್ಣವಾಗಿ ಕೊಡೋ ಹೋಮಗಳಲ್ಲಿ ಖುಷಿಪಡ್ತೀಯ,
ಆಗ ನಿನ್ನ ಯಜ್ಞವೇದಿ ಮೇಲೆ ಹೋರಿಗಳನ್ನ ಕೊಡೋಕೆ ಆಗುತ್ತೆ.+