ಥೆಸಲೊನೀಕದವರಿಗೆ ಬರೆದ ಎರಡನೇ ಪತ್ರ
2 ಆದ್ರೆ ಸಹೋದರರೇ, ನಮ್ಮ ಪ್ರಭು ಯೇಸು ಕ್ರಿಸ್ತ ಮತ್ತೆ ಬರೋದ್ರ ಬಗ್ಗೆ+ ಮತ್ತು ನಾವು ಆತನ ಜೊತೆ ಒಂದಾಗೋದ್ರ ಬಗ್ಗೆ+ ನಿಮ್ಮ ಹತ್ರ ಒಂದು ವಿಷ್ಯ ಕೇಳ್ಕೊಳ್ತೀವಿ. ಅದೇನಂದ್ರೆ 2 ‘ಯೆಹೋವನ* ದಿನ+ ಬಂದಿದೆ’ ಅಂತ ಯಾರಾದ್ರೂ ಹೇಳಿದ್ರೆ ನೀವು ಗಾಬರಿ ಆಗಬೇಡಿ.+ ದೇವರೇ ಈ ಸುದ್ದಿ ಹೇಳಿದ್ದಾನೆ ಅಂತ ಅವರು ಹೇಳಿದ್ರೂ ಅಥವಾ ನಮ್ಮಿಂದ ಪತ್ರ ಬಂದಿದೆ ಅಂತ ಹೇಳಿ ಅವ್ರೇ ಒಂದು ಪತ್ರದಿಂದ ಓದಿ ಹೇಳಿದ್ರೂ ಚಿಂತೆ ಮಾಡಬೇಡಿ.
3 ಯಾರಿಂದಾನೂ ಯಾವ ವಿಧದಲ್ಲೂ ಮೋಸ ಹೋಗಬೇಡಿ.* ಯಾಕಂದ್ರೆ ಮೊದ್ಲು ದೇವರ ವಿರುದ್ಧ ದಂಗೆ* ಆಗುತ್ತೆ.+ ನಾಶವಾಗಿ ಹೋಗೋ ಪಾಪಿ+ ಬಯಲಿಗೆ ಬರ್ತಾನೆ.+ ಇದೆಲ್ಲ ಆದ್ಮೇಲೆನೇ ಆ ದಿನ ಬರುತ್ತೆ. 4 ಅವನೊಬ್ಬ ವಿರೋಧಿ, ತಾನೇ ದೇವರು ಅಂತ ಹೇಳ್ಕೊಳ್ತಾನೆ. ಜನ್ರು ಆರಾಧನೆ ಮಾಡೋ ಎಲ್ಲದಕ್ಕಿಂತ ನಾನೇ ಶ್ರೇಷ್ಠ ಅಂತ ಮೇಲೆ ಏರಿಸ್ಕೊಳ್ತಾನೆ. ಅವನು ದೇವರ ಆಲಯದಲ್ಲಿ ಕೂತ್ಕೊಂಡು ಎಲ್ರ ಮುಂದೆ ತಾನೇ ದೇವರು ಅಂತ ತೋರಿಸ್ಕೊಳ್ತಾನೆ. 5 ನಾನು ನಿಮ್ಮ ಜೊತೆ ಇದ್ದಾಗ್ಲೂ ಇದನ್ನೆಲ್ಲ ಹೇಳ್ತಿದ್ದೆ, ನಿಮಗೆ ನೆನಪಿದೆ ಅಲ್ವಾ?
6 ಆ ಪಾಪಿ ಸರಿಯಾದ ಸಮಯಕ್ಕೆ ಬಯಲಿಗೆ ಬರೋ ಹಾಗೆ ಅವನಿಗೆ ಅಡ್ಡಿಯಾಗಿ ಕೆಲಸ ಮಾಡ್ತಿರೋದು ಯಾರು ಅಂತ ನಿಮಗೆ ಗೊತ್ತು. 7 ಈಗಾಗ್ಲೇ ಶುರು ಆಗಿರೋ ಆ ಪಾಪಿಯ ಕೆಟ್ಟತನ ರಹಸ್ಯವಾಗಿದೆ+ ಅನ್ನೋದು ನಿಜ. ಈಗ ಅವನಿಗೆ ಅಡ್ಡಿಯಾದವನು ಇಲ್ಲದೆ ಹೋಗೋ ತನಕ ಆ ಕೆಟ್ಟತನ ರಹಸ್ಯವಾಗೇ ಇರುತ್ತೆ. 8 ಆಮೇಲೆ ಆ ಪಾಪಿ ಬಯಲಿಗೆ ಬರ್ತಾನೆ. ಪ್ರಭು ಯೇಸು ಮತ್ತೆ ಬಂದಿದ್ದೀನಿ ಅಂತ ತೋರಿಸ್ಕೊಡೋ ಸಮಯದಲ್ಲಿ ತನ್ನ ಬಾಯಿಯ ಉಸಿರಿಂದ ಆ ಪಾಪಿಯನ್ನ ಅಳಿಸಿ,+ ಸರ್ವನಾಶ ಮಾಡ್ತಾನೆ.+ 9 ಆದ್ರೆ ಸೈತಾನನ ಪ್ರಭಾವದಿಂದಾನೇ ಆ ಪಾಪಿ ಕಾಣಿಸ್ಕೊಳ್ತಾನೆ.+ ಸೈತಾನ ಶಕ್ತಿ ಕೊಡೋದ್ರಿಂದ ಆ ಪಾಪಿ ದೊಡ್ಡದೊಡ್ಡ ಕೆಲಸವನ್ನ, ಸುಳ್ಳು ಗುರುತುಗಳನ್ನ, ಅದ್ಭುತಗಳನ್ನ,+ 10 ವಂಚಿಸೋ ಎಲ್ಲ ಕುತಂತ್ರಗಳನ್ನ ಮಾಡ್ತಾನೆ.+ ನಾಶದ ದಾರೀಲಿ ಇರುವವರು ಆ ಎಲ್ಲ ವಿಷ್ಯಗಳಿಂದ ಮೋಸಹೋಗ್ತಾರೆ. ನಾಶನೇ ಅವ್ರಿಗೆ ಸಿಗೋ ಶಿಕ್ಷೆ. ಯಾಕಂದ್ರೆ ರಕ್ಷಣೆ ಪಡಿಯೋಕೆ ಅವರು ಸತ್ಯವನ್ನ ಒಪ್ಕೊಂಡು ಪ್ರೀತಿಸಲಿಲ್ಲ. 11 ಹಾಗಾಗಿ ಅವರು ಸುಳ್ಳು ಬೋಧನೆಯಿಂದ ಮೋಸಹೋಗಿ ಸುಳ್ಳನ್ನೇ ನಂಬೋ ಹಾಗೆ+ ದೇವರು ಬಿಟ್ಟುಬಿಡ್ತಾನೆ. 12 ಸತ್ಯವನ್ನ ನಂಬದೆ ಕೆಟ್ಟದ್ದನ್ನ ಮಾಡೋದ್ರಲ್ಲಿ ಖುಷಿ ಪಡೋದ್ರಿಂದ ಅವ್ರಿಗೆ ಶಿಕ್ಷೆ ಕೊಡೋಕೆ ದೇವರು ಹಾಗೆ ಬಿಟ್ಟುಬಿಡ್ತಾನೆ.
13 ಆದ್ರೆ ಯೆಹೋವನಿಗೆ* ಪ್ರಿಯರಾದ ಸಹೋದರರೇ, ನಿಮಗೋಸ್ಕರ ಯಾವಾಗ್ಲೂ ನಾವು ಆತನಿಗೆ ಧನ್ಯವಾದ ಹೇಳ್ತೀವಿ. ಇದು ನಮ್ಮ ಕರ್ತವ್ಯ. ನೀವು ಸತ್ಯದಲ್ಲಿ ನಂಬಿಕೆ ಇಟ್ಟಿದ್ರಿಂದ ಆತನು ಪವಿತ್ರಶಕ್ತಿಯಿಂದ ನಿಮ್ಮನ್ನ ಪವಿತ್ರ ಮಾಡಿ+ ರಕ್ಷಿಸೋಕೆ ನಿಮ್ಮನ್ನ ಆರಂಭದಲ್ಲೇ ಆರಿಸ್ಕೊಂಡನು.+ 14 ನಾವು ಸಾರೋ ಸಿಹಿಸುದ್ದಿ ಮೂಲಕನೇ ದೇವರು ನಿಮ್ಮನ್ನ ಆರಿಸ್ಕೊಂಡು ನಮ್ಮ ಪ್ರಭು ಯೇಸು ಕ್ರಿಸ್ತನ ಮಹಿಮೆಯನ್ನ ಪಡಿಯೋಕೆ ಆಗೋ ತರ ಮಾಡಿದನು.+ 15 ಹಾಗಾಗಿ ಸಹೋದರರೇ, ದೃಢವಾಗಿ ನಿಲ್ಲಿ.+ ನಮ್ಮ ಮಾತಿಂದ ನಮ್ಮ ಪತ್ರದಿಂದ ನಿಮಗೆ ಕಲಿಸಿದ ವಿಷ್ಯಗಳನ್ನ ಪಾಲಿಸ್ತಾ ಇರಿ.+ 16 ನಮ್ಮ ತಂದೆಯಾದ ದೇವರು ನಮ್ಮನ್ನ ಪ್ರೀತಿಸ್ತಾನೆ.+ ಆತನು ನಮಗೆ ಅಪಾರ ಕೃಪೆ ತೋರಿಸಿ ಕೊನೆ ಇಲ್ಲದ ಸಾಂತ್ವನ ಮತ್ತು ಒಳ್ಳೇ ನಿರೀಕ್ಷೆ ಕೊಟ್ಟಿದ್ದಾನೆ.+ ಆತನು ಮತ್ತು ನಮ್ಮ ಪ್ರಭು ಯೇಸು ಕ್ರಿಸ್ತ 17 ನಿಮ್ಮ ಮನಸ್ಸಿಗೆ ನೆಮ್ಮದಿ ಕೊಡ್ಲಿ, ಒಳ್ಳೇದನ್ನೇ ಮಾತಾಡೋಕೆ ಮಾಡೋಕೆ ಬಲ ಕೊಡ್ಲಿ.