ಕೀರ್ತನೆ
ಐದನೇ ಪುಸ್ತಕ
(ಕೀರ್ತನೆ 107-150)
107 ಯೆಹೋವನಿಗೆ ಧನ್ಯವಾದ ಹೇಳಿ. ಯಾಕಂದ್ರೆ ಆತನು ಒಳ್ಳೆಯವನು.+
ಆತನ ಪ್ರೀತಿ ಶಾಶ್ವತ.+
4 ಅವರು ಕಾಡಲ್ಲಿ, ಬಂಜರು ಭೂಮಿಯಲ್ಲಿ ಆಕಡೆ ಈಕಡೆ ಅಲೆದಾಡಿದ್ರು,
ಅವರು ವಾಸಿಸೋಕೆ ಒಂದು ಪಟ್ಟಣದ ದಾರಿಯನ್ನೂ ಹುಡುಕೊಳ್ಳೋಕೆ ಅವ್ರಿಂದ ಆಗಲಿಲ್ಲ.
5 ಅವರು ಹಸಿದಿದ್ರು, ಬಾಯಾರಿದ್ರು.
ಆಯಾಸದಿಂದ ಸೊರಗಿಹೋಗಿದ್ರು.
9 ಯಾಕಂದ್ರೆ ಆತನು ಬಾಯಾರಿದವರಿಗೆ ನೀರು ಕೊಟ್ಟು ತೃಪ್ತಿಪಡಿಸಿದ,
ಹಸಿದವರಿಗೆ ಒಳ್ಳೊಳ್ಳೇ ಊಟ ಕೊಟ್ಟು ಖುಷಿಪಡಿಸಿದ.+
10 ಕೆಲವರು ಕತ್ತಲಲ್ಲಿ ವಾಸಿಸ್ತಿದ್ರು,
ಬೇಡಿ ಹಾಕೊಂಡು ಕೈದಿಗಳಾಗಿ ದುಃಖ ಅನುಭವಿಸ್ತಿದ್ರು.
11 ಯಾಕಂದ್ರೆ ಅವರು ದೇವರ ಮಾತಿಗೆ ವಿರುದ್ಧವಾಗಿ ದಂಗೆ ಎದ್ದಿದ್ರು,
ಸರ್ವೋನ್ನತನ ಸಲಹೆಯನ್ನ ಕೀಳಾಗಿ ನೋಡಿದ್ರು.+
12 ಹಾಗಾಗಿ ಅವರು ಕಷ್ಟಗಳನ್ನ ಅನುಭವಿಸೋಕೆ ಆತನು ಬಿಟ್ಟು ಅವ್ರ ಹೃದಯನ ತಗ್ಗಿಸಿದ,+
ಅವರು ಎಡವಿದ್ರು, ಅವ್ರಿಗೆ ಸಹಾಯ ಮಾಡೋರು ಯಾರೂ ಇರಲಿಲ್ಲ.
13 ಕಷ್ಟಕಾಲದಲ್ಲಿ ಅವರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ರು,
ಅವ್ರ ಹೀನಾಯ ಸ್ಥಿತಿಯಿಂದ ಆತನು ಅವ್ರನ್ನ ಕಾಪಾಡಿದ.
14 ಆತನು ಅವ್ರನ್ನ ಕತ್ತಲೆಯಿಂದ ಹೊರಗೆ ತಂದ,
ಅವ್ರ ಸರಪಳಿಗಳನ್ನ ಕಿತ್ತೆಸೆದ.+
16 ಯಾಕಂದ್ರೆ ಆತನು ತಾಮ್ರದ ಬಾಗಿಲುಗಳನ್ನ ಮುರಿದುಹಾಕಿದ.
ಕಬ್ಬಿಣದ ಕಂಬಿಗಳನ್ನ ತುಂಡುತುಂಡು ಮಾಡಿದ.+
18 ಅವ್ರ ಹಸಿವು ಸತ್ತುಹೋಯ್ತು,
ಅವರು ಸಾವಿನ ಬಾಗಿಲನ್ನ ತಟ್ಟಿದ್ರು.
19 ಕಷ್ಟಕಾಲದಲ್ಲಿ ಅವರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡ್ತಾರೆ,
ಅವ್ರ ಹೀನಾಯ ಸ್ಥಿತಿಯಿಂದ ಆತನು ಅವ್ರನ್ನ ಕಾಪಾಡ್ತಾನೆ.
20 ಆತನು ತನ್ನ ಆಜ್ಞೆಯಿಂದ ಅವ್ರನ್ನ ವಾಸಿಮಾಡಿದ,+
ಅವರು ಸಿಕ್ಕಿಹಾಕೊಂಡಿರೋ ಗುಂಡಿಯಿಂದ ಅವ್ರನ್ನ ರಕ್ಷಿಸಿದ.
21 ಯೆಹೋವನ ಶಾಶ್ವತ ಪ್ರೀತಿಗಾಗಿ,
ಮನುಷ್ಯರಿಗೋಸ್ಕರ ಆತನು ಮಾಡಿದ ಅದ್ಭುತಗಳಿಗಾಗಿ,
ಜನ್ರು ಆತನಿಗೆ ಧನ್ಯವಾದ ಹೇಳಲಿ.
22 ಅವರು ಕೃತಜ್ಞತಾ ಬಲಿಗಳನ್ನ ಕೊಡಲಿ,+
ಸಂತೋಷದಿಂದ ಜೈಕಾರ ಹಾಕ್ತಾ ಆತನ ಕೆಲಸಗಳ ಬಗ್ಗೆ ಹೇಳಲಿ.
23 ಸಮುದ್ರದ ಮೇಲೆ ಹಡಗಲ್ಲಿ ಪ್ರಯಾಣಿಸೋರು,
ವಿಶಾಲವಾದ ಸಾಗರವನ್ನ ದಾಟಿ ವ್ಯಾಪಾರ ಮಾಡೋರು,+
24 ಯೆಹೋವನ ಕೆಲಸಗಳನ್ನ ನೋಡಿದ್ದಾರೆ,
ಆಳವಾದ ಸಮುದ್ರದಲ್ಲಿ ಆತನ ಅದ್ಭುತಗಳನ್ನ ಕಂಡಿದ್ದಾರೆ.+
25 ಆತನು ಕೊಡೋ ಅಪ್ಪಣೆಗೆ ಬಿರುಗಾಳಿ ಹೇಗೆ ಏಳುತ್ತೆ+ ಅಂತ,
ಸಮುದ್ರ ತನ್ನ ಅಲೆಗಳನ್ನ ಹೇಗೆ ಎಬ್ಬಿಸುತ್ತೆ ಅಂತ ಅವರು ನೋಡಿದ್ದಾರೆ.
26 ಆ ಅಲೆಗಳು ಅವ್ರನ್ನ ಬಾನೆತ್ತರಕ್ಕೆ ಏರಿಸ್ತವೆ,
ಸಮುದ್ರದ ಆಳಕ್ಕೆ ತಳ್ಳಿ ಮುಳುಗಿಸ್ತವೆ,
ಬರ್ತಿರೋ ವಿಪತ್ತನ್ನ ನೋಡಿ ಅವ್ರ ಧೈರ್ಯ ಕರಗಿಹೋಗುತ್ತೆ.
28 ಕಷ್ಟದಲ್ಲಿರೋ ಅವರು ಆಗ ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡ್ತಾರೆ,+
ಅವ್ರ ಹೀನಾಯ ಸ್ಥಿತಿಯಿಂದ ಆತನು ಅವ್ರನ್ನ ಕಾಪಾಡ್ತಾನೆ.
29 ಬಿರುಗಾಳಿಯನ್ನ ಆತನು ನಿಲ್ಲಿಸ್ತಾನೆ,
ಸಮುದ್ರದ ಅಲೆಗಳು ಪ್ರಶಾಂತವಾಗ್ತವೆ.+
30 ಅದನ್ನ ನೋಡಿ ಅವರು ಖುಷಿಪಡ್ತಾರೆ,
ಅವರು ಹೋಗಬೇಕು ಅಂತಿರೋ ಬಂದರಿಗೆ ಆತನು ಅವ್ರನ್ನ ಸೇರಿಸ್ತಾನೆ.
32 ಅವರು ಜನ್ರ ಮಧ್ಯ ಆತನನ್ನ ಘನತೆಗೇರಿಸಲಿ,+
ಹಿರಿಯರ ಸಭೆಯಲ್ಲಿ ಆತನನ್ನ ಹೊಗಳಲಿ.
33 ಆತನು ನದಿಗಳನ್ನ ಮರುಭೂಮಿಯಾಗಿ
ನೀರಿನ ಬುಗ್ಗೆಗಳನ್ನ ಬತ್ತಿದ ನೆಲವಾಗಿ ಮಾಡ್ತಾನೆ.+
34 ಫಲವತ್ತಾದ ನೆಲವನ್ನ ಬಂಜರು ಭೂಮಿಯಾಗಿ ಮಾಡ್ತಾನೆ,+
ಅದ್ರಲ್ಲಿ ವಾಸಿಸೋ ಕೆಟ್ಟವರಿಂದ ಆತನು ಹೀಗೆ ಮಾಡ್ತಾನೆ.
35 ಆತನು ಮರುಭೂಮಿಯನ್ನ ನೀರಿನ ಕೆರೆಯಾಗಿ,
ಬಂಜರು ಭೂಮಿಯನ್ನ ನೀರಿನ ಬುಗ್ಗೆಗಳಾಗಿ ಮಾಡ್ತಾನೆ.+
37 ಅವರು ಹೊಲಗಳಲ್ಲಿ ಬೀಜ ಬಿತ್ತುತ್ತಾರೆ, ದ್ರಾಕ್ಷಿತೋಟಗಳನ್ನ ನೆಡ್ತಾರೆ.+
ಅವು ಒಳ್ಳೇ ಹಣ್ಣು ಕೊಡುತ್ತೆ.+
38 ಆತನು ಅವ್ರನ್ನ ಆಶೀರ್ವದಿಸ್ತಾನೆ ಮತ್ತು ಅವ್ರ ಸಂಖ್ಯೆ ಇನ್ನೂ ಜಾಸ್ತಿ ಆಗುತ್ತೆ,
ಅವ್ರ ಪ್ರಾಣಿಗಳ ಸಂಖ್ಯೆ ಕಡಿಮೆಯಾಗೋಕೆ ಆತನು ಬಿಡಲ್ಲ.+
39 ಆದ್ರೆ ದೌರ್ಜನ್ಯ, ವಿಪತ್ತು ಮತ್ತು ದುಃಖದಿಂದಾಗಿ
ಅವ್ರ ಸಂಖ್ಯೆ ಮತ್ತೆ ಕಮ್ಮಿಯಾಗುತ್ತೆ, ಅವ್ರಿಗೆ ಅವಮಾನ ಆಗುತ್ತೆ.
40 ಪ್ರಧಾನರು ತಲೆತಗ್ಗಿಸೋ ತರ ಮಾಡ್ತಾನೆ,
ದಾರಿನೇ ಇಲ್ಲದ ಕಾಡಲ್ಲಿ ಅವರು ಅಲೆದಾಡೋ ತರ ಮಾಡ್ತಾನೆ.+
41 ಆದ್ರೆ ಆತನು ಬಡವರನ್ನ ದಬ್ಬಾಳಿಕೆಯಿಂದ ಕಾಪಾಡ್ತಾನೆ.*+
ಅವ್ರ ಕುಟುಂಬಗಳ ಸಂಖ್ಯೆ ಕುರಿಗಳ ತರ ಜಾಸ್ತಿಯಾಗುತ್ತೆ.